Udyoga Parva: Chapter 31

ಉದ್ಯೋಗ ಪರ್ವ: ಸಂಜಯಯಾನ ಪರ್ವ

೩೧

ಧೃತರಾಷ್ಟ್ರ-ದುರ್ಯೋಧನರಿಗೆ ಯುಧಿಷ್ಠಿರನ ಸಂದೇಶ

“ಇದ್ದುದೆಲ್ಲವನ್ನೂ ತನಗೊಬ್ಬನಿಗಾಗಿ ಮಾತ್ರ ಇಟ್ಟುಕೊಳ್ಳಲು ಯಾರೂ ಅರ್ಹನಿಲ್ಲ...ಐದು ಸಹೋದರರಿಗೆ ಐದು ಗ್ರಾಮಗಳನ್ನು ಕೊಡು....ನಾನು ಶಾಂತಿಗೆ ಹೇಗೋ ಹಾಗೆ ಯುದ್ಧಕ್ಕೂ ತಯಾರಿದ್ದೇನೆ. ಧರ್ಮ-ಅರ್ಥಗಳೆರಡನ್ನೂ ಬಯಸುತ್ತೇನೆ. ನಾನು ಮೃದುವಾಗಿರಬಲ್ಲೆ, ದಾರುಣವಾಗಬಲ್ಲೆ ಕೂಡ.” ಎಂಬ ಸಂದೇಶವನ್ನು ಯುಧಿಷ್ಠಿರನು ಸಂಜಯನ ಮೂಲಕ ಕಳುಹಿಸುವುದು (೧-೨೩).

05031001 ಯುಧಿಷ್ಠಿರ ಉವಾಚ|

05031001a ಉತ ಸಂತಮಸಂತಂ ಚ ಬಾಲಂ ವೃದ್ಧಂ ಚ ಸಂಜಯ|

05031001c ಉತಾಬಲಂ ಬಲೀಯಾಂಸಂ ಧಾತಾ ಪ್ರಕುರುತೇ ವಶೇ||

05031002a ಉತ ಬಾಲಾಯ ಪಾಂಡಿತ್ಯಂ ಪಂಡಿತಾಯೋತ ಬಾಲತಾಂ|

05031002c ದದಾತಿ ಸರ್ವಮೀಶಾನಃ ಪುರಸ್ತಾಚ್ಚುಕ್ರಮುಚ್ಚರನ್||

ಯುಧಿಷ್ಠಿರನು ಹೇಳಿದನು: “ಸಂಜಯ! ಸಂತರೂ ಅಸಂತರೂ, ಬಾಲರೂ ವೃದ್ಧರೂ, ಅಬಲರೂ ಬಲಶಾಲಿಗಳೂ ಎಲ್ಲರನ್ನೂ ಧಾತನು ವಶದಲ್ಲಿಟ್ಟುಕೊಂಡಿರುತ್ತಾನೆ. ಆ ಸರ್ವಗಳ ಒಡೆಯನೇ, ತನಗಿಷ್ಟವಾದ ಹಾಗೆ, ಬಾಲರಲ್ಲಿ ಪಾಂಡಿತ್ಯವನ್ನೂ ಪಂಡಿತರಲ್ಲಿ ಬಾಲಕತ್ವವನ್ನೂ ನೀಡುತ್ತಾನೆ. ಅವನು ಮೊದಲೇ ಬೀಜವನ್ನು ಬಿತ್ತುವಾಗಲೇ ಎಲ್ಲವನ್ನೂ ಕೊಟ್ಟುಬಿಟ್ಟಿರುತ್ತಾನೆ.

05031003a ಅಲಂ ವಿಜ್ಞಾಪನಾಯ ಸ್ಯಾದಾಚಕ್ಷೀಥಾ ಯಥಾತಥಂ|

05031003c ಅಥೋ ಮಂತ್ರಂ ಮಂತ್ರಯಿತ್ವಾ ಅನ್ಯೋನ್ಯೇನಾತಿಹೃಷ್ಟವತ್||

ಉಪದೇಶವನ್ನು ಸಾಕುಮಾಡೋಣ. ಇದ್ದದ್ದನ್ನು ಇದ್ದಹಾಗೆ ನೀನು ಹೇಳುತ್ತೀಯೆ. ಈಗ ನಾವು ಅನ್ಯೋನ್ಯರಲ್ಲಿ ವಿಷಯವನ್ನು ಚರ್ಚಿಸಿ ತೃಪ್ತರಾಗಿದ್ದೇವೆ.

05031004a ಗಾವಲ್ಗಣೇ ಕುರೂನ್ಗತ್ವಾ ಧೃತರಾಷ್ಟ್ರಂ ಮಹಾಬಲಂ|

05031004c ಅಭಿವಾದ್ಯೋಪಸಂಗೃಹ್ಯ ತತಃ ಪೃಚ್ಚೇರನಾಮಯಂ||

ಗಾವಲ್ಗಣೇ! ಕುರುಗಳ ಮಹಾಬಲ ಧೃತರಾಷ್ಟ್ರನಲ್ಲಿಗೆ ಹೋಗಿ, ಪಾದಗಳಿಗೆ ನಮಸ್ಕರಿಸಿ ನಂತರ ಅವನ ಆರೋಗ್ಯವನ್ನು ವಿಚಾರಿಸು.

05031005a ಬ್ರೂಯಾಶ್ಚೈನಂ ತ್ವಮಾಸೀನಂ ಕುರುಭಿಃ ಪರಿವಾರಿತಂ|

05031005c ತವೈವ ರಾಜನ್ವೀರ್ಯೇಣ ಸುಖಂ ಜೀವಂತಿ ಪಾಂಡವಾಃ||

ಅವನು ಕುರುಗಳ ಮಧ್ಯದಲ್ಲಿ ಕುಳಿತಿರುವಾಗ ಅವನಿಗೆ ಹೇಳು: “ರಾಜನ್! ಪಾಂಡವರು ವೀರ್ಯದಿಂದ ಸುಖವಾಗಿ ಜೀವಿಸಿದ್ದಾರೆ.

05031006a ತವ ಪ್ರಸಾದಾದ್ಬಾಲಾಸ್ತೇ ಪ್ರಾಪ್ತಾ ರಾಜ್ಯಮರಿಂದಮ|

05031006c ರಾಜ್ಯೇ ತಾನ್ಸ್ಥಾಪಯಿತ್ವಾಗ್ರೇ ನೋಪೇಕ್ಷೀರ್ವಿನಶಿಷ್ಯತಃ||

ಅರಿಂದಮ! ನಿನ್ನ ಪ್ರಸಾದಿಂದ ಅವರು ಬಾಲಕರಿದ್ದಾಗಲೇ ರಾಜ್ಯವನ್ನು ಪಡೆದರು. ಮೊದಲು ಅವರನ್ನು ರಾಜ್ಯದಲ್ಲಿ ಸ್ಥಾಪಿಸಿ ಈಗ ಅವರನ್ನು ನಿರ್ಲಕ್ಷಿಸಿ ನಾಶಗೊಳಿಸಬೇಡ.”

05031007a ಸರ್ವಮಪ್ಯೇತದೇಕಸ್ಯ ನಾಲಂ ಸಂಜಯ ಕಸ್ಯ ಚಿತ್|

05031007c ತಾತ ಸಂಹತ್ಯ ಜೀವಾಮೋ ಮಾ ದ್ವಿಷದ್ಭ್ಯೋ ವಶಂ ಗಮಃ||

ಸಂಜಯ! “ಇದ್ದುದೆಲ್ಲವನ್ನೂ ತನಗೊಬ್ಬನಿಗಾಗಿ ಮಾತ್ರ ಇಟ್ಟುಕೊಳ್ಳಲು ಯಾರೂ ಅರ್ಹನಿಲ್ಲ. ಅಪ್ಪಾ! ನಾವು ಒಟ್ಟಾಗಿ ಜೀವಿಸೋಣ. ದ್ವೇಷಿಗಳ ವಶದಲ್ಲಿ ಹೋಗಬೇಡ!”

05031008a ತಥಾ ಭೀಷ್ಮಂ ಶಾಂತನವಂ ಭಾರತಾನಾಂ ಪಿತಾಮಹಂ|

05031008c ಶಿರಸಾಭಿವದೇಥಾಸ್ತ್ವಂ ಮಮ ನಾಮ ಪ್ರಕೀರ್ತಯನ್||

ಅನಂತರ ಭಾರತರ ಪಿತಾಮಹ ಶಾಂತನವ ಭೀಷ್ಮನಿಗೆ ನನ್ನ ಹೆಸರನ್ನು ಹೇಳಿ ತಲೆಬಾಗಿ ನಮಸ್ಕರಿಸಬೇಕು.

05031009a ಅಭಿವಾದ್ಯ ಚ ವಕ್ತವ್ಯಸ್ತತೋಽಸ್ಮಾಕಂ ಪಿತಾಮಹಃ|

05031009c ಭವತಾ ಶಂತನೋರ್ವಂಶೋ ನಿಮಗ್ನಃ ಪುನರುದ್ಧೃತಃ||

ನಮ್ಮ ಪಿತಾಮಹನಿಗೆ ನಮಸ್ಕರಿಸಿ ಹೇಳಬೇಕು: “ಹಿಂದೆ ನೀನು ಶಂತನುವಿನ ವಂಶವು ಮುಳುಗುತ್ತಿರುವಾಗ ಅದನ್ನು ಪುನಃ ಉದ್ಧರಿಸಿದೆ.

05031010a ಸ ತ್ವಂ ಕುರು ತಥಾ ತಾತ ಸ್ವಮತೇನ ಪಿತಾಮಹ|

05031010c ಯಥಾ ಜೀವಂತಿ ತೇ ಪೌತ್ರಾಃ ಪ್ರೀತಿಮಂತಃ ಪರಸ್ಪರಂ||

ತಾತ! ಪಿತಾಮಹ! ಈಗ ನಿನ್ನದೇ ವಿಚಾರದಂತೆ ನಿನ್ನ ಮೊಮ್ಮಕ್ಕಳು ಪರಸ್ಪರ ಪ್ರೀತಿಯಿಂದ ಬದುಕಿರುವಂತೆ ಮಾಡು.”

05031011a ತಥೈವ ವಿದುರಂ ಬ್ರೂಯಾಃ ಕುರೂಣಾಂ ಮಂತ್ರಧಾರಿಣಂ|

05031011c ಅಯುದ್ಧಂ ಸೌಮ್ಯ ಭಾಷಸ್ವ ಹಿತಕಾಮೋ ಯುಧಿಷ್ಠಿರಃ||

ಅನಂತರ ಕುರುಗಳ ಮಂತ್ರಧಾರಿಣಿ ವಿದುರನಿಗೆ ಹೇಳಬೇಕು: “ಸೌಮ್ಯ! ಯುಧಿಷ್ಠಿರನ ಹಿತವನ್ನು ಬಯಸಿ ಅಯುದ್ಧದ ಮಾತನಾಡು!”

05031012a ಅಥೋ ಸುಯೋಧನಂ ಬ್ರೂಯಾ ರಾಜಪುತ್ರಮಮರ್ಷಣಂ|

05031012c ಮಧ್ಯೇ ಕುರೂಣಾಮಾಸೀನಮನುನೀಯ ಪುನಃ ಪುನಃ||

ಅನಂತರ ಕುರುಗಳ ಮಧ್ಯೆ ಕುಳಿತಿರುವ ರಾಜಪುತ್ರ, ಅಮರ್ಷಣ, ಸುಯೋಧನನನ್ನು ಪುನಃ ಪುನಃ ಪುಸಲಾಯಿಸುತ್ತಾ ಹೇಳಬೇಕು:

05031013a ಅಪಶ್ಯನ್ಮಾಮುಪೇಕ್ಷಂತಂ ಕೃಷ್ಣಾಮೇಕಾಂ ಸಭಾಗತಾಂ|

05031013c ತದ್ದುಃಖಮತಿತಿಕ್ಷಾಮ ಮಾ ವಧೀಷ್ಮ ಕುರೂನಿತಿ||

“ಕುರುಗಳನ್ನು ವಧಿಸಬಾರದು ಎಂದು ಏಕಾಂಗಿಯಾಗಿ ಸಭಾಗತಳಾಗಿದ್ದ ಕೃಷ್ಣೆಯನ್ನು ನಾನು ಉಪೇಕ್ಷಿಸಿ ನೋಡುತ್ತಿದ್ದ ಆ ದುಃಖವನ್ನೂ ನಾನು ಸಹಿಸಿಕೊಳ್ಳುತ್ತೇನೆ.

05031014a ಏವಂ ಪೂರ್ವಾಪರಾನ್ಕ್ಲೇಶಾನತಿತಿಕ್ಷಂತ ಪಾಂಡವಾಃ|

05031014c ಯಥಾ ಬಲೀಯಸಃ ಸಂತಸ್ತತ್ಸರ್ವಂ ಕುರವೋ ವಿದುಃ||

ಈ ರೀತಿಯಲ್ಲಿ ಅದರ ಮೊದಲು ಮತ್ತು ನಂತರ ತಂದೊಡ್ಡಿದ ಕ್ಲೇಶಗಳನ್ನೂ ಪಾಂಡವರು, ಬಲಶಾಲಿಗಳಾಗಿದ್ದರೂ, ಸಹಿಸಿಕೊಂಡಿದ್ದಾರೆ ಎನ್ನುವುದೆಲ್ಲವನ್ನೂ ಕುರುಗಳು ತಿಳಿದಿದ್ದಾರೆ.

05031015a ಯನ್ನಃ ಪ್ರಾವ್ರಾಜಯಃ ಸೌಮ್ಯ ಅಜಿನೈಃ ಪ್ರತಿವಾಸಿತಾನ್|

05031015c ತದ್ದುಃಖಮತಿತಿಕ್ಷಾಮ ಮಾ ವಧೀಷ್ಮ ಕುರೂನಿತಿ||

ಸೌಮ್ಯ! ನೀನು ನಮ್ಮನ್ನು ಜಿಂಕೆಯ ಚರ್ಮಗಳನ್ನು ತೊಡಿಸಿ ಹೊರಗಟ್ಟಿದೆ. ಆ ದುಃಖವನ್ನು ಕೂಡ ಕುರುಗಳನ್ನು ಕೊಲ್ಲಬಾರದೆಂದು ಸಹಿಸಿಕೊಳ್ಳುತ್ತೇವೆ.

05031016a ಯತ್ತತ್ಸಭಾಯಾಮಾಕ್ರಮ್ಯ ಕೃಷ್ಣಾಂ ಕೇಶೇಷ್ವಧರ್ಷಯತ್|

05031016c ದುಃಶಾಸನಸ್ತೇಽನುಮತೇ ತಚ್ಚಾಸ್ಮಾಭಿರುಪೇಕ್ಷಿತಂ||

ನಿನ್ನ ಅನುಮತಿಯಂತೆ ದುಃಶಾಸನನು ಸಭೆಯನ್ನು ಅತಿಕ್ರಮಿಸಿ ಕೃಷ್ಣೆಯ ಕೂದಲನ್ನು ಹಿಡಿದು ಎಳೆದುತಂದ. ಅದನ್ನೂ ನಾವು ಕ್ಷಮಿಸುತ್ತೇವೆ.

05031017a ಯಥೋಚಿತಂ ಸ್ವಕಂ ಭಾಗಂ ಲಭೇಮಹಿ ಪರಂತಪ|

05031017c ನಿವರ್ತಯ ಪರದ್ರವ್ಯೇ ಬುದ್ಧಿಂ ಗೃದ್ಧಾಂ ನರರ್ಷಭ||

ಆದರೆ ಪರಂತಪ! ಯಥೋಚಿತವಾದ ನಮ್ಮ ಭಾಗವು ನಮಗೆ ದೊರೆಯಬೇಕು. ನರರ್ಷಭ! ಪರರ ಸ್ವತ್ತಿನ ಮೇಲಿರುವ ನಿನ್ನ ಆಸೆಬುರುಕ ಬುದ್ಧಿಯನ್ನು ಹಿಂದೆ ತೆಗೆದುಕೋ!

05031018a ಶಾಂತಿರೇವಂ ಭವೇದ್ರಾಜನ್ಪ್ರೀತಿಶ್ಚೈವ ಪರಸ್ಪರಂ|

05031018c ರಾಜ್ಯೈಕದೇಶಮಪಿ ನಃ ಪ್ರಯಚ್ಚ ಶಮಮಿಚ್ಚತಾಂ||

ರಾಜನ್! ಹಾಗಿದ್ದರೆ ಮಾತ್ರ ಶಾಂತಿಯಾಗಿರುತ್ತದೆ ಮತ್ತು ಪರಸ್ಪರರಲ್ಲಿ ಪ್ರೀತಿಯಿರುತ್ತದೆ. ಶಾಂತಿಯನ್ನು ಬಯಸುವ ನಮಗೆ ರಾಜ್ಯದ ಒಂದು ಮೂಲೆಯನ್ನಾದರೂ ಕೊಡು.

05031019a ಕುಶಸ್ಥಲಂ ವೃಕಸ್ಥಲಮಾಸಂದೀ ವಾರಣಾವತಂ|

05031019c ಅವಸಾನಂ ಭವೇದತ್ರ ಕಿಂ ಚಿದೇವ ತು ಪಂಚಮಂ||

ಕುಶಸ್ಥಲ, ವೃಕಸ್ಥಲ, ಆಸಂದೀ, ವಾರಣಾವತ ಮತ್ತು ಐದನೆಯದಾಗಿ ನೀನು ಬಯಸಿದ ಯಾವುದಾದರೂ ಒಂದು ತುಂಡನ್ನು ಕೊಡು.

05031020a ಭ್ರಾತೄಣಾಂ ದೇಹಿ ಪಂಚಾನಾಂ ಗ್ರಾಮಾನ್ಪಂಚ ಸುಯೋಧನ|

05031020c ಶಾಂತಿರ್ನೋಽಸ್ತು ಮಹಾಪ್ರಾಜ್ಞಾ ಜ್ಞಾತಿಭಿಃ ಸಹ ಸಂಜಯ||

ಸುಯೋಧನ! ಹೀಗೆ ಐದು ಸಹೋದರರಿಗೆ ಐದು ಗ್ರಾಮಗಳನ್ನು ಕೊಡು.” ಮಹಾಪ್ರಾಜ್ಞ ಸಂಜಯ! “ಇದರಿಂದ ನಮ್ಮ ಮತ್ತು ನಮ್ಮ ದಾಯಾದಿಗಳ ನಡುವೆ ಶಾಂತಿಯು ನೆಲೆಸುತ್ತದೆ.

05031021a ಭ್ರಾತಾ ಭ್ರಾತರಮನ್ವೇತು ಪಿತಾ ಪುತ್ರೇಣ ಯುಜ್ಯತಾಂ|

05031021c ಸ್ಮಯಮಾನಾಃ ಸಮಾಯಾಂತು ಪಾಂಚಾಲಾಃ ಕುರುಭಿಃ ಸಹ||

ಸಹೋದರರು ಸಹೋದರರನ್ನು ಸೇರಲಿ, ತಂದೆಯಂದಿರು ಮಕ್ಕಳನ್ನು ಕೂಡಲಿ. ಪಾಂಚಾಲರು ಕುರುಗಳೊಂದಿಗೆ ಸೇರಿ ನಲಿದಾಡಲಿ.

05031022a ಅಕ್ಷತಾನ್ಕುರುಪಾಂಚಾಲಾನ್ಪಶ್ಯೇಮ ಇತಿ ಕಾಮಯೇ|

05031022c ಸರ್ವೇ ಸುಮನಸಸ್ತಾತ ಶಾಮ್ಯಾಮ ಭರತರ್ಷಭ||

ಕುರು-ಪಾಂಚಾಲರು ನಾಶವಾಗದೇ ಇರುವುದನ್ನು ನೋಡಬೇಕು ಎನ್ನುವುದೇ ನನ್ನ ಆಸೆ. ಭರತರ್ಷಭ! ಅಯ್ಯಾ! ಎಲ್ಲರು ಸುಮನಸ್ಕರಾಗಿ ಶಾಂತಿಯಿಂದ ಇರೋಣ!”

05031023a ಅಲಮೇವ ಶಮಾಯಾಸ್ಮಿ ತಥಾ ಯುದ್ಧಾಯ ಸಂಜಯ|

05031023c ಧರ್ಮಾರ್ಥಯೋರಲಂ ಚಾಹಂ ಮೃದವೇ ದಾರುಣಾಯ ಚ||

ಸಂಜಯ! ನಾನು ಶಾಂತಿಗೆ ಹೇಗೋ ಹಾಗೆ ಯುದ್ಧಕ್ಕೂ ತಯಾರಿದ್ದೇನೆ. ಧರ್ಮ-ಅರ್ಥಗಳೆರಡನ್ನೂ ಬಯಸುತ್ತೇನೆ. ನಾನು ಮೃದುವಾಗಿರಬಲ್ಲೆ, ದಾರುಣವಾಗಬಲ್ಲೆ ಕೂಡ.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸಂಜಯಯಾನ ಪರ್ವಣಿ ಯುಧಿಷ್ಠಿರಸಂದೇಶೇ ಏಕತ್ರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸಂಜಯಯಾನ ಪರ್ವದಲ್ಲಿ ಯುಧಿಷ್ಠಿರಸಂದೇಶದಲ್ಲಿ ಮೂವತ್ತೊಂದನೆಯ ಅಧ್ಯಾಯವು.

Related image

Comments are closed.