Udyoga Parva: Chapter 159

ಉದ್ಯೋಗ ಪರ್ವ: ಉಲೂಕದೂತಾಗಮನ ಪರ್ವ

೧೫೯

ಕೃಷ್ಣ ವಾಕ್ಯ

ಕೃಷ್ಣನು ಉಲೂಕನಿಗೆ “ಯುಧಿಷ್ಠಿರನಾಗಲೀ, ಪಾರ್ಥನಾಗಲೀ, ಭೀಮಸೇನನಾಗಲೀ, ಯಮಳರಾಗಲೀ ನಿನ್ನ ಪ್ರತಿಕೂಲದ ಮಾತುಗಳಿಗೆ ಗಮನ ಕೊಡುವುದಿಲ್ಲ” ಎಂದು ಹೇಳಿದುದು (೧-೧೩).

05159001 ಸಂಜಯ ಉವಾಚ|

05159001a ಉಲೂಕಸ್ತ್ವರ್ಜುನಂ ಭೂಯೋ ಯಥೋಕ್ತಂ ವಾಕ್ಯಮಬ್ರವೀತ್|

05159001c ಆಶೀವಿಷಮಿವ ಕ್ರುದ್ಧಂ ತುದನ್ವಾಕ್ಯಶಲಾಕಯಾ||

ಸಂಜಯನು ಹೇಳಿದನು: “ತನ್ನ ವಾಕ್ಯ ಶಲಾಕೆಯಿಂದ ವಿಷಸರ್ಪದಂತಿದ್ದ ಅರ್ಜುನನನ್ನು ಪುನಃ ಪುನಃ ತಿವಿಯುತ್ತಾ ಉಲೂಕನು ಹೇಳಿದುದನ್ನೇ ಇನ್ನೊಮ್ಮೆ ಹೇಳಿದನು.

05159002a ತಸ್ಯ ತದ್ವಚನಂ ಶ್ರುತ್ವಾ ರುಷಿತಾಃ ಪಾಂಡವಾ ಭೃಶಂ|

05159002c ಪ್ರಾಗೇವ ಭೃಶಸಂಕ್ರುದ್ಧಾಃ ಕೈತವ್ಯೇನ ಪ್ರಧರ್ಷಿತಾಃ||

ಅವನು ಮೊದಲು ಹೇಳಿದುದನ್ನು ಕೇಳಿಯೇ ಪಾಂಡವರು ತುಂಬಾ ರೋಷಿತರಾಗಿದ್ದರು. ಪುನಃ ಅದನ್ನೇ ಹೇಳಿದ ಕೈತವ್ಯನ ಮೇಲೆ ಇನ್ನೂ ತುಂಬಾ ಕುಪಿತರಾದರು.

05159003a ನಾಸನೇಷ್ವವತಿಷ್ಠಂತ ಬಾಹೂಂಶ್ಚೈವ ವಿಚಿಕ್ಷಿಪುಃ|

05159003c ಆಶೀವಿಷಾ ಇವ ಕ್ರುದ್ಧಾ ವೀಕ್ಷಾಂ ಚಕ್ರುಃ ಪರಸ್ಪರಂ||

ಎಲ್ಲರೂ ಎದ್ದು ನಿಂತು ತಮ್ಮ ತೋಳುಗಳನ್ನು ಬೀಸಿದರು. ವಿಷಪೂರಿತ ಸರ್ಪಗಳಂತೆ ಕೃದ್ಧರಾಗಿ ಪರಸ್ಪರರನ್ನು ವೀಕ್ಷಿಸತೊಡಗಿದರು.

05159004a ಅವಾಕ್ಶಿರಾ ಭೀಮಸೇನಃ ಸಮುದೈಕ್ಷತ ಕೇಶವಂ|

05159004c ನೇತ್ರಾಭ್ಯಾಂ ಲೋಹಿತಾಂತಾಭ್ಯಾಮಾಶೀವಿಷ ಇವ ಶ್ವಸನ್||

ಭೀಮಸೇನನು ತಲೆಯನ್ನು ಕೆಳಗೆ ಮಾಡಿಕೊಂಡು ಕೆಂಪಾಗಿದ್ದ ಕಡೆಗಣ್ಣಿನ ಓರೆನೋಟದಿಂದ ಕೇಶವನ್ನು ನೋಡಿ ವಿಷಕಾರುವ ಸರ್ಪದಂತೆ ನಿಟ್ಟುಸಿರು ಬಿಟ್ಟನು.

05159005a ಆರ್ತಂ ವಾತಾತ್ಮಜಂ ದೃಷ್ಟ್ವಾ ಕ್ರೋಧೇನಾಭಿಹತಂ ಭೃಶಂ|

05159005c ಉತ್ಸ್ಮಯನ್ನಿವ ದಾಶಾರ್ಹಃ ಕೈತವ್ಯಂ ಪ್ರತ್ಯಭಾಷತ||

ಕ್ರೋಧದಿಂದ ಅತಿ ಹೊಡೆತಕ್ಕೆ ಸಿಕ್ಕಿ ಆರ್ತನಾದ ವಾತಾತ್ಮಜನನ್ನು ನೋಡಿ ಕೈತವ್ಯನ ಉತ್ಸಾಹವನ್ನು ಹೆಚ್ಚಿಸಲೋ ಎನ್ನುವಂತೆ ದಾಶಾರ್ಹನು ಅವನಿಗೆ ತಿರುಗಿ ಮಾತನಾಡಿದನು.

05159006a ಪ್ರಯಾಹಿ ಶೀಘ್ರಂ ಕೈತವ್ಯ ಬ್ರೂಯಾಶ್ಚೈವ ಸುಯೋಧನಂ|

05159006c ಶ್ರುತಂ ವಾಕ್ಯಂ ಗೃಹೀತೋಽರ್ಥೋ ಮತಂ ಯತ್ತೇ ತಥಾಸ್ತು ತತ್||

“ಕೈತವ್ಯ! ಶೀಘ್ರವೇ ಇಲ್ಲಿಂದ ಹೊರಟು ಸುಯೋಧನನಿಗೆ ಇದೆಲ್ಲವನ್ನೂ ಹೇಳು! ನಿನ್ನ ಮಾತನ್ನು ಕೇಳಿದ್ದಾರೆ ಮತ್ತು ಸ್ವೀಕರಿಸಿದ್ದಾರೆ. ನಿನ್ನ ಮತವೇನಿದೆಯೋ ಹಾಗೆಯೇ ಆಗಲಿ!

05159007a ಮದ್ವಚಶ್ಚಾಪಿ ಭೂಯಸ್ತೇ ವಕ್ತವ್ಯಃ ಸ ಸುಯೋಧನಃ|

05159007c ಶ್ವ ಇದಾನೀಂ ಪ್ರದೃಶ್ಯೇಥಾಃ ಪುರುಷೋ ಭವ ದುರ್ಮತೇ||

ನನ್ನ ಈ ಮಾತುಗಳನ್ನು ಕೂಡ ಪುನಃ ಪುನಃ ಸುಯೋಧನನಿಗೆ ಹೇಳು. “ದುರ್ಮತೇ! ಪುರುಷನಾಗು! ಇವೆಲ್ಲವೂ ನಾಳೆ ನಿನಗೆ ಕಾಣಿಸಿಕೊಳ್ಳುತ್ತವೆ.

05159008a ಮನ್ಯಸೇ ಯಚ್ಚ ಮೂಢ ತ್ವಂ ನ ಯೋತ್ಸ್ಯತಿ ಜನಾರ್ದನಃ|

05159008c ಸಾರಥ್ಯೇನ ವೃತಃ ಪಾರ್ಥೈರಿತಿ ತ್ವಂ ನ ಬಿಭೇಷಿ ಚ||

ಮೂಢ! ಈ ಜನಾರ್ದನನು ಯುದ್ಧಮಾಡುವುದಿಲ್ಲವೆಂದು ನೀನು ಯೋಚಿಸುತ್ತಿರುವೆ. ಪಾರ್ಥರಿಗೆ ಕೇವಲ ಸಾರಥಿ ಎಂದು ನಿನಗೆ ಭಯವಿಲ್ಲ.

05159009a ಜಘನ್ಯಕಾಲಮಪ್ಯೇತದ್ಭವೇದ್ಯತ್ಸರ್ವಪಾರ್ಥಿವಾನ್|

05159009c ನಿರ್ದಹೇಯಮಹಂ ಕ್ರೋಧಾತ್ತೃಣಾನೀವ ಹುತಾಶನಃ||

ಆದರೆ ಅದು ಒಂದು ಕ್ಷಣವೂ ಹಾಗಿರುವುದಿಲ್ಲ. ಕ್ರೋಧದಿಂದ ಅಗ್ನಿಯು ಹುಲ್ಲಿನ ರಾಶಿಯನ್ನು ಸುಡುವ ಹಾಗೆ ನಾನು ಈ ಎಲ್ಲ ಪಾರ್ಥಿವರನ್ನೂ ಸುಟ್ಟು ಹಾಕಬಲ್ಲೆ.

05159010a ಯುಧಿಷ್ಠಿರನಿಯೋಗಾತ್ತು ಫಲ್ಗುನಸ್ಯ ಮಹಾತ್ಮನಃ|

05159010c ಕರಿಷ್ಯೇ ಯುಧ್ಯಮಾನಸ್ಯ ಸಾರಥ್ಯಂ ವಿದಿತಾತ್ಮನಃ||

ಯುಧಿಷ್ಠಿರನ ನಿಯೋಗದಂತೆ ನಾನು ಯುದ್ಧಮಾಡುವಾಗ ತನ್ನನ್ನು ಚೆನ್ನಾಗಿ ತಿಳಿದುಕೊಂಡಿರುವ ಮಹಾತ್ಮ ಫಲ್ಗುನನ ಸಾರಥ್ಯವನ್ನು ಮಾಡುತ್ತೇನೆ.

05159011a ಯದ್ಯುತ್ಪತಸಿ ಲೋಕಾಂಸ್ತ್ರೀನ್ಯದ್ಯಾವಿಶಸಿ ಭೂತಲಂ|

05159011c ತತ್ರ ತತ್ರಾರ್ಜುನರಥಂ ಪ್ರಭಾತೇ ದ್ರಕ್ಷ್ಯಸೇಽಗ್ರತಃ||

ನಾಳೆ ನೀನು ಮೂರು ಲೋಕಗಳಿಗೆ ಹಾರಿ ಹೋದರೂ ಭೂತಲವನ್ನು ಹೊಕ್ಕರೂ ಅಲ್ಲಿ ಎದುರಿಗೆ ಅರ್ಜುನನ ರಥವು ಕಂಡುಬರುತ್ತದೆ.

05159012a ಯಚ್ಚಾಪಿ ಭೀಮಸೇನಸ್ಯ ಮನ್ಯಸೇ ಮೋಘಗರ್ಜಿತಂ|

05159012c ದುಃಶಾಸನಸ್ಯ ರುಧಿರಂ ಪೀತಮಿತ್ಯವಧಾರ್ಯತಾಂ||

ಭೀಮಸೇನನ ಗರ್ಜನೆಯು ವ್ಯರ್ಥವೆಂದು ನಿನಗನ್ನಿಸಿದರೆ ದುಃಶಾಸನನ ರಕ್ತವನ್ನು ಕುಡಿದಾಯಿತೆಂದು ತಿಳಿದುಕೋ!

05159013a ನ ತ್ವಾಂ ಸಮೀಕ್ಷತೇ ಪಾರ್ಥೋ ನಾಪಿ ರಾಜಾ ಯುಧಿಷ್ಠಿರಃ|

05159013c ನ ಭೀಮಸೇನೋ ನ ಯಮೌ ಪ್ರತಿಕೂಲಪ್ರಭಾಷಿಣಂ||

ರಾಜಾ ಯುಧಿಷ್ಠಿರನಾಗಲೀ, ಪಾರ್ಥನಾಗಲೀ, ಭೀಮಸೇನನಾಗಲೀ, ಯಮಳರಾಗಲೀ ನಿನ್ನ ಪ್ರತಿಕೂಲದ ಮಾತುಗಳಿಗೆ ಗಮನ ಕೊಡುವುದಿಲ್ಲ.”””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಉಲೂಕದೂತಾಗಮನ ಪರ್ವಣಿ ಕೃಷ್ಣಾದಿವಾಕ್ಯೇ ಏಕೋನಷಷ್ಟ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಉಲೂಕದೂತಾಗಮನ ಪರ್ವದಲ್ಲಿ ಕೃಷ್ಣಾದಿವಾಕ್ಯದಲ್ಲಿ ನೂರಾಐವತ್ತೊಂಭತ್ತನೆಯ ಅಧ್ಯಾಯವು.

Image result for indian motifs"

Comments are closed.