ಶಲ್ಯಪರ್ವ: ಸಾರಸ್ವತಪರ್ವ
೫೧
ವೃದ್ಧಕನ್ಯೆಯ ಚರಿತ್ರೆ (೧-೨೬).
09051001 ಜನಮೇಜಯ ಉವಾಚ
09051001a ಕಥಂ ಕುಮಾರೀ ಭಗವಂಸ್ತಪೋಯುಕ್ತಾ ಹ್ಯಭೂತ್ಪುರಾ|
09051001c ಕಿಮರ್ಥಂ ಚ ತಪಸ್ತೇಪೇ ಕೋ ವಾಸ್ಯಾ ನಿಯಮೋಽಭವತ್||
ಜನಮೇಜಯನು ಹೇಳಿದನು: “ಭಗವನ್! ಹಿಂದೆ ಕುಮಾರಿಯಾದವಳು ಏಕೆ ತಪಸ್ಸನ್ನಾಚರಿಸುತ್ತಿದ್ದಳು? ಯಾವ ಉದ್ದೇಶದಿಂದ ಅವಳು ತಪಸ್ಸನ್ನಾಚರಿಸುತ್ತಿದ್ದಳು ಮತ್ತು ಅವಳ ನಿಯಮಗಳೇನಿದ್ದವು?
09051002a ಸುದುಷ್ಕರಮಿದಂ ಬ್ರಹ್ಮಂಸ್ತ್ವತ್ತಃ ಶ್ರುತಮನುತ್ತಮಂ|
09051002c ಆಖ್ಯಾಹಿ ತತ್ತ್ವಮಖಿಲಂ ಯಥಾ ತಪಸಿ ಸಾ ಸ್ಥಿತಾ||
ಬ್ರಹ್ಮನ್! ಸುದುಷ್ಕರವಾದ ಮತ್ತು ಅನುತ್ತಮವಾದ ಇದರ ಕುರಿತು ನಾನು ನಿನ್ನಲ್ಲಿ ಕೇಳಿದ್ದೇನೆ. ಅವಳು ಹೇಗೆ ತಪಸ್ಸಿನಲ್ಲಿ ನಿರತಳಾಗಿದ್ದಳು ಎನ್ನುವುದರ ಸಂಪೂರ್ಣ ತತ್ತ್ವವನ್ನು ಹೇಳಬೇಕು.”
09051003 ವೈಶಂಪಾಯನ ಉವಾಚ
09051003a ಋಷಿರಾಸೀನ್ಮಹಾವೀರ್ಯಃ ಕುಣಿರ್ಗಾರ್ಗ್ಯೋ ಮಹಾಯಶಾಃ|
09051003c ಸ ತಪ್ತ್ವಾ ವಿಪುಲಂ ರಾಜಂಸ್ತಪೋ ವೈ ತಪತಾಂ ವರಃ||
09051003e ಮಾನಸೀಂ ಸ ಸುತಾಂ ಸುಭ್ರೂಂ ಸಮುತ್ಪಾದಿತವಾನ್ವಿಭುಃ||
ವೈಶಂಪಾಯನು ಹೇಳಿದನು: “ರಾಜನ್! ಮಹಾವೀರ್ಯನಾದ ಮಹಾಯಶಸ್ವಿಯಾದ ಕುಣಿರ್ಗಾಗ್ಯ ಎಂಬ ಋಷಿಯಿದ್ದನು. ತಪಸ್ವಿಗಳಲ್ಲಿ ಶ್ರೇಷ್ಠನಾದ ಆ ವಿಭುವು ವಿಪುಲ ತಪಸ್ಸನ್ನು ತಪಿಸಿ ಸುಂದರ ಹುಬ್ಬಿನ ಮಗಳೋರ್ವಳನ್ನು ಮನಸ್ಸಿನಿಂದಲೇ ಸೃಷ್ಟಿಸಿದನು.
09051004a ತಾಂ ಚ ದೃಷ್ಟ್ವಾ ಭೃಶಂ ಪ್ರೀತಃ ಕುಣಿರ್ಗಾರ್ಗ್ಯೋ ಮಹಾಯಶಾಃ|
09051004c ಜಗಾಮ ತ್ರಿದಿವಂ ರಾಜನ್ಸಂತ್ಯಜ್ಯೇಹ ಕಲೇವರಂ||
ಅವಳನ್ನು ನೋಡಿ ಮಹಾಯಶಸ್ವಿ ಕುಣಿರ್ಗಾಗ್ಯನು ಪರಮ ಪ್ರೀತನಾದನು. ದೇಹವನ್ನು ತ್ಯಜಿಸಿ ಅವನು ಸ್ವರ್ಗಕ್ಕೆ ತೆರಳಿದನು.
09051005a ಸುಭ್ರೂಃ ಸಾ ಹ್ಯಥ ಕಲ್ಯಾಣೀ ಪುಂಡರೀಕನಿಭೇಕ್ಷಣಾ|
09051005c ಮಹತಾ ತಪಸೋಗ್ರೇಣ ಕೃತ್ವಾಶ್ರಮಮನಿಂದಿತಾ||
ಸುಂದರ ಹುಬ್ಬಿನ, ಕಮಲದ ಎಸಳುಗಳಂತಹ ಕಣ್ಣುಗಳಿದ್ದ ಆ ಕಲ್ಯಾಣೀ ಅನಿಂದಿತೆಯು ಒಂದು ಆಶ್ರಮವನ್ನು ಮಾಡಿಕೊಂಡು ಉಗ್ರ ತಪಸ್ಸಿನಲ್ಲಿ ತೊಡಗಿದಳು.
09051006a ಉಪವಾಸೈಃ ಪೂಜಯಂತೀ ಪಿತೄನ್ದೇವಾಂಶ್ಚ ಸಾ ಪುರಾ|
09051006c ತಸ್ಯಾಸ್ತು ತಪಸೋಗ್ರೇಣ ಮಹಾನ್ಕಾಲೋಽತ್ಯಗಾನ್ನೃಪ||
ಮೊದಲು ಅವಳು ಉಪವಾಸಾದಿಗಳಿಂದ ಪಿತೃಗಳನ್ನೂ ದೇವತೆಗಳನ್ನೂ ಪೂಜಿಸಿದಳು. ನೃಪ! ಅವಳ ಉಗ್ರ ತಪಸ್ಸು ದೀರ್ಘ ಕಾಲದವರೆಗೆ ನಡೆಯಿತು.
09051007a ಸಾ ಪಿತ್ರಾ ದೀಯಮಾನಾಪಿ ಭರ್ತ್ರೇ ನೈಚ್ಚದನಿಂದಿತಾ|
09051007c ಆತ್ಮನಃ ಸದೃಶಂ ಸಾ ತು ಭರ್ತಾರಂ ನಾನ್ವಪಶ್ಯತ||
ಅವಳ ತಂದೆಯು ಕೊಡಲು ಬಯಸಿದ್ದರೂ ಆ ಅನಿಂದಿತೆಯು ಯಾರನ್ನೂ ಗಂಡನನ್ನಾಗಿ ಇಚ್ಛಿಸಿರಲಿಲ್ಲ. ತನ್ನ ಸದೃಶ ಪತಿಯನ್ನು ಅವಳು ಕಂಡಿರಲಿಲ್ಲ.
09051008a ತತಃ ಸಾ ತಪಸೋಗ್ರೇಣ ಪೀಡಯಿತ್ವಾತ್ಮನಸ್ತನುಂ|
09051008c ಪಿತೃದೇವಾರ್ಚನರತಾ ಬಭೂವ ವಿಜನೇ ವನೇ||
ಹೀಗೆ ನಿರ್ಜನ ವನದಲ್ಲಿ ಪಿತೃ-ದೇವತೆಗಳ ಅರ್ಚನೆಯಲ್ಲಿ ನಿರತಳಾಗಿ ಆ ಉಗ್ರ ತಪಸ್ಸಿನಿಂದ ತನ್ನ ದೇಹವನ್ನು ಪೀಡಿಸಿಕೊಂಡಿರುತ್ತಿದ್ದಳು.
09051009a ಸಾತ್ಮಾನಂ ಮನ್ಯಮಾನಾಪಿ ಕೃತಕೃತ್ಯಂ ಶ್ರಮಾನ್ವಿತಾ|
09051009c ವಾರ್ದ್ಧಕೇನ ಚ ರಾಜೇಂದ್ರ ತಪಸಾ ಚೈವ ಕರ್ಶಿತಾ||
ರಾಜೇಂದ್ರ! ತನ್ನನ್ನು ಕೃತಕೃತ್ಯಳೆಂದು ಭಾವಿಸಿದ್ದರೂ ಶ್ರಮಾನ್ವಿತಳಾದ ಅವಳು ತಪಸ್ಸಿನಿಂದ ಮತ್ತು ವೃದ್ಧಾಪ್ಯದಿಂದ ಕೃಶಳಾದಳು.
09051010a ಸಾ ನಾಶಕದ್ಯದಾ ಗಂತುಂ ಪದಾತ್ಪದಮಪಿ ಸ್ವಯಂ|
09051010c ಚಕಾರ ಗಮನೇ ಬುದ್ಧಿಂ ಪರಲೋಕಾಯ ವೈ ತದಾ||
ಅವಳಿಗೆ ತಾನಾಗಿಯೇ ಹೆಜ್ಜೆ-ಹೆಜ್ಜೆ ಮುಂದೆಹೋಗಲೂ ಸಾಧ್ಯವಾಗುತ್ತಿರಲಿಲ್ಲ. ಆಗ ಅವಳು ಪರಲೋಕಕ್ಕೆ ಹೋಗಲು ಮನಸ್ಸುಮಾಡಿದಳು.
09051011a ಮೋಕ್ತುಕಾಮಾಂ ತು ತಾಂ ದೃಷ್ಟ್ವಾ ಶರೀರಂ ನಾರದೋಽಬ್ರವೀತ್|
09051011c ಅಸಂಸ್ಕೃತಾಯಾಃ ಕನ್ಯಾಯಾಃ ಕುತೋ ಲೋಕಾಸ್ತವಾನಘೇ||
ದೇಹತ್ಯಾಗಮಾಡಲು ಬಯಸಿದ ಅವಳನ್ನು ನೋಡಿ ನಾರದನು ಹೇಳಿದನು: “ಅನಘೇ! ಅಸಂಸ್ಕೃತೆಯಾದ[1] ಕನ್ಯೆಯು ಹೇಗೆ ತಾನೇ ಪುಣ್ಯಲೋಕಗಳನ್ನು ಪಡೆಯುವಳು?
09051012a ಏವಂ ಹಿ ಶ್ರುತಮಸ್ಮಾಭಿರ್ದೇವಲೋಕೇ ಮಹಾವ್ರತೇ|
09051012c ತಪಃ ಪರಮಕಂ ಪ್ರಾಪ್ತಂ ನ ತು ಲೋಕಾಸ್ತ್ವಯಾ ಜಿತಾಃ||
ಮಹಾವ್ರತೇ! ನೀನು ಪರಮ ತಪಸ್ಸನ್ನು ಸಾಧಿಸಿದ್ದೀಯೆ ಎಂದು ನಾವು ದೇವಲೋಕದಲ್ಲಿ ಕೇಳಿದ್ದೇವೆ. ಆದರೆ ನಿನಗೆ ಪುಣ್ಯಲೋಕಗಳು ದೊರೆಯಲಾರವು!”
09051013a ತನ್ನಾರದವಚಃ ಶ್ರುತ್ವಾ ಸಾಬ್ರವೀದೃಷಿಸಂಸದಿ|
09051013c ತಪಸೋಽರ್ಧಂ ಪ್ರಯಚ್ಚಾಮಿ ಪಾಣಿಗ್ರಾಹಸ್ಯ ಸತ್ತಮಾಃ||
ನಾರದನ ಆ ಮಾತನ್ನು ಕೇಳಿ ಅವಳು ಋಷಿಸಂಸದಿಯಲ್ಲಿ “ಸತ್ತಮರೇ! ನನ್ನ ಪಾಣಿಗ್ರಹಣಮಾಡಿಕೊಳ್ಳುವವನಿಗೆ ತಪಸ್ಸಿನ ಅರ್ಧಭಾಗವನ್ನು ಕೊಡುತ್ತೇನೆ” ಎಂದಳು.
09051014a ಇತ್ಯುಕ್ತೇ ಚಾಸ್ಯಾ ಜಗ್ರಾಹ ಪಾಣಿಂ ಗಾಲವಸಂಭವಃ|
09051014c ಋಷಿಃ ಪ್ರಾಕ್ ಶೃಂಗವಾನ್ನಾಮ ಸಮಯಂ ಚೇದಮಬ್ರವೀತ್||
ಅವಳು ಹೀಗೆ ಹೇಳಲು ಗಾಲವನಲ್ಲಿ ಹುಟ್ಟಿದ್ದ ಶೃಂಗವಾನ್ ಎಂಬ ಹೆಸರಿನ ಋಷಿಯು ಅವಳ ಪಾಣಿಗ್ರಹಣ ಮಾಡಿ ಕರಾರಾಗಿ ಈ ಮಾತನ್ನಾಡಿದನು:
09051015a ಸಮಯೇನ ತವಾದ್ಯಾಹಂ ಪಾಣಿಂ ಸ್ಪ್ರಕ್ಷ್ಯಾಮಿ ಶೋಭನೇ|
09051015c ಯದ್ಯೇಕರಾತ್ರಂ ವಸ್ತವ್ಯಂ ತ್ವಯಾ ಸಹ ಮಯೇತಿ ಹ||
“ಶೋಭನೇ! ಒಂದು ಒಪ್ಪಂದದ ಮೇರೆಗೆ ನಾನು ನಿನ್ನ ಪಾಣಿಗ್ರಹಣ ಮಾಡಿಕೊಳ್ಳುತ್ತೇನೆ. ನೀನು ನನ್ನೊಡನೆ ಒಂದೇ ಒಂದು ರಾತ್ರಿಯನ್ನು ಕಳೆಯಬೇಕು.”
09051016a ತಥೇತಿ ಸಾ ಪ್ರತಿಶ್ರುತ್ಯ ತಸ್ಮೈ ಪಾಣಿಂ ದದೌ ತದಾ|
09051016c ಚಕ್ರೇ ಚ ಪಾಣಿಗ್ರಹಣಂ ತಸ್ಯೋದ್ವಾಹಂ ಚ ಗಾಲವಿಃ||
ಹಾಗೆಯೇ ಆಗಲೆಂದು ಹೇಳಲು ಅವಳು ಅವನಿಗೆ ತನ್ನ ಕೈಯನ್ನಿತ್ತಳು. ಗಾಲವಿಯೂ ಕೂಡ ಅವಳ ಕೈಯನ್ನು ಹಿಡಿದುಕೊಂಡನು.
09051017a ಸಾ ರಾತ್ರಾವಭವದ್ರಾಜಂಸ್ತರುಣೀ ದೇವವರ್ಣಿನೀ|
09051017c ದಿವ್ಯಾಭರಣವಸ್ತ್ರಾ ಚ ದಿವ್ಯಸ್ರಗನುಲೇಪನಾ||
ರಾಜನ್! ರಾತ್ರಿಯಲ್ಲಿ ಅವಳು ದಿವ್ಯಾಭರಣ ವಸ್ತ್ರಗಳನ್ನು ಧರಿಸಿ, ದಿವ್ಯ ಗಂಧಗಳನ್ನು ಲೇಪಿಸಿಕೊಂಡು ತರುಣಿಯೂ, ದೇವವರ್ಣಿನಿಯೂ ಆದಳು.
09051018a ತಾಂ ದೃಷ್ಟ್ವಾ ಗಾಲವಿಃ ಪ್ರೀತೋ ದೀಪಯಂತೀಮಿವಾತ್ಮನಾ|
09051018c ಉವಾಸ ಚ ಕ್ಷಪಾಮೇಕಾಂ ಪ್ರಭಾತೇ ಸಾಬ್ರವೀಚ್ಚ ತಂ||
ತನ್ನನ್ನೇ ಬೆಳಗಿಸುವಂತಿದ್ದ ಅವಳನ್ನು ನೋಡಿ ಗಾಲವಿಯು ಪ್ರೀತನಾಗಿ ಅವಳೊಂದಿಗೆ ಏಕಾಂತ ವಾಸವನ್ನು ಮಾಡಿದನು. ಬೆಳಗಾಗುತ್ತಲೇ ಅವಳು ಅವನಿಗೆ ಹೇಳಿದಳು:
09051019a ಯಸ್ತ್ವಯಾ ಸಮಯೋ ವಿಪ್ರ ಕೃತೋ ಮೇ ತಪತಾಂ ವರ|
09051019c ತೇನೋಷಿತಾಸ್ಮಿ ಭದ್ರಂ ತೇ ಸ್ವಸ್ತಿ ತೇಽಸ್ತು ವ್ರಜಾಮ್ಯಹಂ||
“ವಿಪ್ರ! ತಪಸ್ವಿಗಳಲ್ಲಿ ಶ್ರೇಷ್ಠ! ನೀನೇ ಮಾಡಿಕೊಂಡ ಒಪ್ಪಂದದಂತೆ ನಾನು ನಿನ್ನೊಡನೆ ವಾಸಿಸಿದ್ದೇನೆ. ನಿನಗೆ ಮಂಗಳವಾಗಲಿ. ನಾನಿನ್ನು ಹೊರಡುತ್ತೇನೆ.”
09051020a ಸಾನುಜ್ಞಾತಾಬ್ರವೀದ್ಭೂಯೋ ಯೋಽಸ್ಮಿಂಸ್ತೀರ್ಥೇ ಸಮಾಹಿತಃ|
09051020c ವತ್ಸ್ಯತೇ ರಜನೀಮೇಕಾಂ ತರ್ಪಯಿತ್ವಾ ದಿವೌಕಸಃ||
09051021a ಚತ್ವಾರಿಂಶತಮಷ್ಟೌ ಚ ದ್ವೇ ಚಾಷ್ಟೌ ಸಮ್ಯಗಾಚರೇತ್|
09051021c ಯೋ ಬ್ರಹ್ಮಚರ್ಯಂ ವರ್ಷಾಣಿ ಫಲಂ ತಸ್ಯ ಲಭೇತ ಸಃ|
09051021e ಏವಮುಕ್ತ್ವಾ ತತಃ ಸಾಧ್ವೀ ದೇಹಂ ತ್ಯಕ್ತ್ವಾ ದಿವಂ ಗತಾ||
ಬೀಳ್ಕೊಂಡ ಅವಳು ಪುನಃ ಹೇಳಿದಳು: “ಈ ತೀರ್ಥದಲ್ಲಿ ಸಮಾಹಿತರಾಗಿ ದಿವೌಕಸರಿಗೆ ತರ್ಪಣಗಳನ್ನಿತ್ತು ಒಂದು ರಾತ್ರಿ ವಾಸಿಸುವವರಿಗೆ ಐವತ್ತೆಂಟು ವರ್ಷಗಳವರೆಗೆ ಬ್ರಹ್ಮಚರ್ಯವನ್ನು ಪಾಲಿಸಿದ ಫಲವು ದೊರೆಯುತ್ತದೆ.” ಹೀಗೆ ಹೇಳಿ ಆ ಸಾಧ್ವಿಯು ದೇಹವನ್ನು ತ್ಯಜಿಸಿ ಸ್ವರ್ಗಕ್ಕೆ ಹೋದಳು.
09051022a ಋಷಿರಪ್ಯಭವದ್ದೀನಸ್ತಸ್ಯಾ ರೂಪಂ ವಿಚಿಂತಯನ್|
09051022c ಸಮಯೇನ ತಪೋಽರ್ಧಂ ಚ ಕೃಚ್ಚ್ರಾತ್ಪ್ರತಿಗೃಹೀತವಾನ್||
ಋಷಿಯಾದರೋ ಅವಳ ರೂಪವನ್ನೇ ಸ್ಮರಿಸಿಕೊಳ್ಳುತ್ತಾ ದೀನನಾದನು. ಒಪ್ಪಂದದಂತೆ ಬಹಳ ಕಷ್ಟದಿಂದ ಅವಳ ತಪಸ್ಸಿನ ಅರ್ಧಫಲವನ್ನು ಸ್ವೀಕರಿಸಿದನು.
09051023a ಸಾಧಯಿತ್ವಾ ತದಾತ್ಮಾನಂ ತಸ್ಯಾಃ ಸ ಗತಿಮನ್ವಯಾತ್|
09051023c ದುಃಖಿತೋ ಭರತಶ್ರೇಷ್ಠ ತಸ್ಯಾ ರೂಪಬಲಾತ್ಕೃತಃ|
09051023e ಏತತ್ತೇ ವೃದ್ಧಕನ್ಯಾಯಾ ವ್ಯಾಖ್ಯಾತಂ ಚರಿತಂ ಮಹತ್||
ಭರತಶ್ರೇಷ್ಠ! ಅವಳ ರೂಪಬಲ ಮತ್ತು ಆಕರ್ಷಣೆಯ ದುಃಖದಿಂದ ಅವನು ತನ್ನನ್ನು ಕೂಡ ಸಾಧನೆಗೆ ತೊಡಗಿಸಿಕೊಂಡು ಅವಳ ದಾರಿಯಲ್ಲಿಯೇ ಹೋದನು. ಆ ವೃದ್ಧಕನ್ಯೆಯ ಈ ಮಹಾಚರಿತ್ರೆಯನ್ನು ನಾನು ಹೇಳಿದ್ದೇನೆ.
09051024a ತತ್ರಸ್ಥಶ್ಚಾಪಿ ಶುಶ್ರಾವ ಹತಂ ಶಲ್ಯಂ ಹಲಾಯುಧಃ|
09051024c ತತ್ರಾಪಿ ದತ್ತ್ವಾ ದಾನಾನಿ ದ್ವಿಜಾತಿಭ್ಯಃ ಪರಂತಪ||
09051024e ಶುಶೋಚ ಶಲ್ಯಂ ಸಂಗ್ರಾಮೇ ನಿಹತಂ ಪಾಂಡವೈಸ್ತದಾ||
ಅಲ್ಲಿರುವಾಗಲೇ ಹಲಾಯುಧನು ಶಲ್ಯನು ಹತನಾದುದನ್ನು ಕೇಳಿದ್ದನು. ಅಲ್ಲಿ ಕೂಡ ಪರಂತಪನು ದ್ವಿಜಾತಿಗಳಿಗೆ ದಾನಗಳನ್ನಿತ್ತನು. ಪಾಂಡವರಿಂದ ಸಂಗ್ರಾಮದಲ್ಲಿ ಹತನಾದ ಶಲ್ಯನ ಕುರಿತು ಶೋಕಿಸಿದನು.
09051025a ಸಮಂತಪಂಚಕದ್ವಾರಾತ್ತತೋ ನಿಷ್ಕ್ರಮ್ಯ ಮಾಧವಃ|
09051025c ಪಪ್ರಚ್ಚರ್ಷಿಗಣಾನ್ರಾಮಃ ಕುರುಕ್ಷೇತ್ರಸ್ಯ ಯತ್ಫಲಂ||
ಅನಂತರ ಸಮಂತಪಂಚಕ ದ್ವಾರದಿಂದ ಹೊರಟು ಮಾಧವ ರಾಮನು ಕುರುಕ್ಷೇತ್ರದ ಫಲಗಳ ಕುರಿತು ಋಷಿಗಣಗಳನ್ನು ಪ್ರಶ್ನಿಸಿದನು.
09051026a ತೇ ಪೃಷ್ಟಾ ಯದುಸಿಂಹೇನ ಕುರುಕ್ಷೇತ್ರಫಲಂ ವಿಭೋ|
09051026c ಸಮಾಚಖ್ಯುರ್ಮಹಾತ್ಮಾನಸ್ತಸ್ಮೈ ಸರ್ವಂ ಯಥಾತಥಂ||
ವಿಭೋ! ಯದುಸಿಂಹನು ಕುರುಕ್ಷೇತ್ರಫಲದ ಕುರಿತು ಕೇಳಲು ಆ ಮಹಾತ್ಮರು ಅವನಿಗೆ ಯಥಾವತ್ತಾಗಿ ಎಲ್ಲವನ್ನೂ ತಿಳಿಸಿಹೇಳಿದರು.
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತೀರ್ಥಯಾತ್ರಾಯಾಂ ಏಕಪಂಚಾಶತ್ತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರಾ ಎನ್ನುವ ಐವತ್ತೊಂದನೇ ಅಧ್ಯಾಯವು.
[1] ಅವಿವಾಹಿತೆಯಾದ
ಸಾರಸ್ವತ ಪರ್ವದ ಇತರ ಅಧ್ಯಾಯಗಳು:
- ಪಾಂಡವಾನಾಂ ಸರೋವರಾಗಮನ
- ಸುಯೋಧನಯುಧಿಷ್ಠಿರಸಂವಾದ
- ಸುಯೋಧನಯುಧಿಷ್ಠಿರಸಂವಾದ
- ಭೀಮಸೇನದುರ್ಯೋಧನಸಂವಾದ
- ಬಲದೇವಾಗಮನ
- ಬಲದೇವತೀರ್ಥಯಾತ್ರಾಯಾಂ ಪ್ರಭಾಸೋತ್ಪತ್ತಿಕಥನ
- ಬಲದೇವತೀರ್ಥಯಾತ್ರಾಯಾಂ ತ್ರಿತಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಕುಮಾರಾಭಿಷೇಕಕ್ರಮ
- ಬಲದೇವತೀರ್ಥಯಾತ್ರಾಯಾಂ ಸ್ಕಂದಾಭಿಷೇಕ
- ಬಲದೇವತೀರ್ಥಯಾತ್ರಾಯಾಂ ತಾರಕವಧ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾಯಾಂ ಬದರಪಾಚನತೀರ್ಥಕಥನ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾಯಾಂ ಕುರುಕ್ಷೇತ್ರಕಥನ
- ಬಲದೇವತೀರ್ಥಯಾತ್ರಾ