Sabha Parva: Chapter 9

ಸಭಾಪರ್ವ: ಸಭಾಕ್ರಿಯಾ ಪರ್ವ

ವರುಣಸಭೆಯ ವರ್ಣನೆ (೧-೨೫)

Image result for varuna sabha02009001 ನಾರದ ಉವಾಚ|

02009001a ಯುಧಿಷ್ಠಿರ ಸಭಾ ದಿವ್ಯಾ ವರುಣಸ್ಯ ಸಿತಪ್ರಭಾ|

02009001c ಪ್ರಮಾಣೇನ ಯಥಾ ಯಾಮ್ಯಾ ಶುಭಪ್ರಾಕಾರತೋರಣಾ||

ನಾರದನು ಹೇಳಿದನು: “ಯುಧಿಷ್ಠಿರ! ವರುಣನ ದಿವ್ಯ ಸಿತಪ್ರಭಾ ಸಭೆಯು ಶುಭಪ್ರಾಕಾರತೋರಣಗಳಿಂದ ಕೂಡಿದ್ದು ಪ್ರಮಾಣದಲ್ಲಿ ಯಮನ ಸಭೆಯಂತೆಯೇ ಇದೆ.

02009002a ಅಂತಃಸಲಿಲಮಾಸ್ಥಾಯ ವಿಹಿತಾ ವಿಶ್ವಕರ್ಮಣಾ|

02009002c ದಿವ್ಯರತ್ನಮಯೈರ್ವೃಕ್ಷೈಃ ಫಲಪುಷ್ಪಪ್ರದೈರ್ಯುತಾ||

02009003a ನೀಲಪೀತಾಸಿತಶ್ಯಾಮೈಃ ಸಿತೈರ್ಲೋಹಿತಕೈರಪಿ|

02009003c ಅವತಾನೈಸ್ತಥಾ ಗುಲ್ಮೈಃ ಪುಷ್ಪಮಂಜರಿಧಾರಿಭಿಃ||

ನೀರಿನಲ್ಲಿ ವಿಶ್ವಕರ್ಮನು ಅದನ್ನು ನಿರ್ಮಿಸಿದ್ದನು. ಅದು ದಿವ್ಯ ರತ್ನಮಯ ಫಲಪುಷ್ಪಗಳನ್ನು ನೀಡುವ ವೃಕ್ಷಗಳಿಂದ ಆವೃತಗೊಂಡಿದೆ. ಬೇರೆ ಬೇರೆ ಬಣ್ಣಗಳ - ನೀಲಿ, ಹಳದಿ, ಕಪ್ಪು, ಬಿಳಿ, ಕೆಂಪು - ಹೂವಿನ ಹಾಸಿಗೆ ಇದೆ. ಮತ್ತು ಅಲ್ಲಿ ಪುಷ್ಪಗುಚ್ಛಗಳಿಂದ ತುಂಬಿದ ಬಳ್ಳಿಗಳೂ ಇವೆ.

02009004a ತಥಾ ಶಕುನಯಸ್ತಸ್ಯಾಂ ನಾನಾರೂಪಾ ಮೃದುಸ್ವರಾಃ|

02009004c ಅನಿರ್ದೇಶ್ಯಾ ವಪುಷ್ಮಂತಃ ಶತಶೋಽಥ ಸಹಸ್ರಶಃ||

ಅಲ್ಲಿ ನಾನಾ ರೂಪದ ವರ್ಣಿಸಲಾಧ್ಯ ಸುಂದರ ನೂರಾರು ಸಹಸ್ರಾರು ಮೃದುಸ್ವರಗಳ ಪಕ್ಷಿಗಳು ಅಲ್ಲಲ್ಲಿ ಹಾರಾಡುತ್ತಿರುತ್ತವೆ.

02009005a ಸಾ ಸಭಾ ಸುಖಸಂಸ್ಪರ್ಶಾ ನ ಶೀತಾ ನ ಚ ಘರ್ಮದಾ|

02009005c ವೇಶ್ಮಾಸನವತೀ ರಮ್ಯಾ ಸಿತಾ ವರುಣಪಾಲಿತಾ||

ಆ ಸಭೆಯಲ್ಲಿ ಏನನ್ನು ಮುಟ್ಟಿದರೂ ಸುಖವಾಗಿರುತ್ತದೆ. ಶೀತವೂ ಇಲ್ಲ ಉಷ್ಣವೂ ಇಲ್ಲ. ವರುಣನು ಪಾಲಿಸುತ್ತಿರುವ ಆ ರಮ್ಯ ಶ್ವೇತ ಸಭೆಯಲ್ಲಿ ಹಲವಾರು ಕೊಠಡಿಗಳು ಆಸನಗಳು ಇವೆ.

02009006a ಯಸ್ಯಾಮಾಸ್ತೇ ಸ ವರುಣೋ ವಾರುಣ್ಯಾ ಸಹ ಭಾರತ|

02009006c ದಿವ್ಯರತ್ನಾಂಬರಧರೋ ಭೂಷಣೈರುಪಶೋಭಿತಃ||

ಭಾರತ! ಅಲ್ಲಿ ವರುಣನು ವರುಣಿಯೊಡನೆ ದಿವ್ಯರತ್ನಾಂಬರಗಳನ್ನು ಧರಿಸಿ ಭೂಷಣಗಳಿಂದ ಶೋಭಿತನಾಗಿ ಕುಳಿತಿರುತ್ತಾನೆ.

02009007a ಸ್ರಗ್ವಿಣೋ ಭೂಷಿತಾಶ್ಚಾಪಿ ದಿವ್ಯಮಾಲ್ಯಾನುಕರ್ಷಿಣಃ|

02009007c ಆದಿತ್ಯಾಸ್ತತ್ರ ವರುಣಂ ಜಲೇಶ್ವರಮುಪಾಸತೇ||

02009008a ವಾಸುಕಿಸ್ತಕ್ಷಕಶ್ಚೈವ ನಾಗಶ್ಚೈರಾವತಸ್ತಥಾ|

02009008c ಕೃಷ್ಣಶ್ಚ ಲೋಹಿತಶ್ಚೈವ ಪದ್ಮಶ್ಚಿತ್ರಶ್ಚ ವೀರ್ಯವಾನ್||

02009009a ಕಂಬಲಾಶ್ವತರೌ ನಾಗೌ ಧೃತರಾಷ್ಟ್ರಬಲಾಹಕೌ|

02009009c ಮಣಿಮಾನ್ಕುಂಡಲಧರಃ ಕರ್ಕೋಟಕಧನಂಜಯೌ||

02009010a ಪ್ರಹ್ಲಾದೋ ಮೂಷಿಕಾದಶ್ಚ ತಥೈವ ಜನಮೇಜಯ|

02009010c ಪತಾಕಿನೋ ಮಂಡಲಿನಃ ಫಣವಂತಶ್ಚ ಸರ್ವಶಃ||

02009011a ಏತೇ ಚಾನ್ಯೇ ಚ ಬಹವಃ ಸರ್ಪಾಸ್ತಸ್ಯಾಂ ಯುಧಿಷ್ಠಿರ|

02009011c ಉಪಾಸತೇ ಮಹಾತ್ಮಾನಂ ವರುಣಂ ವಿಗತಕ್ಲಮಾಃ||

ಯುಧಿಷ್ಠಿರ! ಹಾರ-ಆಭರಣಗಳನ್ನು ಧರಿಸಿ, ದಿವ್ಯಮಾಲೆಗಳನ್ನು ಕೆಳಗೆ ಹಾಸಿರುವ ಆದಿತ್ಯರು ಅಲ್ಲಿ ಜಲೇಶ್ವರ ವರುಣನನ್ನು ಉಪಾಸಿಸುತ್ತಾರೆ. ಅದೇ ರೀತಿ, ನಾಗ ವಾಸುಕಿ, ತಕ್ಷಕ, ಐರಾವತ ಕೃಷ್ಣ, ಲೋಹಿತ, ಪದ್ಮ, ಚಿತ್ರ, ವೀರ್ಯವಂತ ಕಂಬಲ, ಅಶ್ವತರ, ನಾಗ ಧೃತರಾಷ್ಟ್ರ, ಬಲಾಹಕ, ಮಣಿಮಾನ್, ಕುಂಡಲಧರ, ಕರ್ಕೋಟಕ, ಧನಂಜಯ, ಪ್ರಹ್ಲಾದ, ಮೂಷಿಕಾದ, ಮತ್ತು ಜನಮೇಯ ಎಲ್ಲರೂ ಪತಾಕ ಮಂಡಲಗಳಿಂದ ಶೋಭಿತರಾಗಿ ಹೆಡೆಯನ್ನು ಎತ್ತಿ, ಇವರು ಮತ್ತು ಇನ್ನೂ ಇತರ ಬಹಳಷ್ಟು ಸರ್ಪಗಳು ಮಹಾತ್ಮ ವರುಣನನ್ನು ಉಪಾಸನೆಮಾಡಿ ರೋಗಗಳಿಂದ ಹೊರತಾಗಿರುತ್ತಾರೆ.

02009012a ಬಲಿರ್ವೈರೋಚನೋ ರಾಜಾ ನರಕಃ ಪೃಥಿವೀಂಜಯಃ|

02009012c ಪ್ರಹ್ಲಾದೋ ವಿಪ್ರಚಿತ್ತಿಶ್ಚ ಕಾಲಖಂಜಾಶ್ಚ ಸರ್ವಶಃ||

02009013a ಸುಹನುರ್ದುರ್ಮುಖಃ ಶಂಖಃ ಸುಮನಾಃ ಸುಮತಿಃ ಸ್ವನಃ|

02009013c ಘಟೋದರೋ ಮಹಾಪಾರ್ಶ್ವಃ ಕ್ರಥನಃ ಪಿಠರಸ್ತಥಾ||

02009014a ವಿಶ್ವರೂಪಃ ಸುರೂಪಶ್ಚ ವಿರೂಪೋಽಥ ಮಹಾಶಿರಾಃ|

02009014c ದಶಗ್ರೀವಶ್ಚ ವಾಲೀ ಚ ಮೇಘವಾಸಾ ದಶಾವರಃ||

02009015a ಕೈಟಭೋ ವಿಟಟೂತಶ್ಚ ಸಂಹ್ರಾದಶ್ಚೇಂದ್ರತಾಪನಃ|

02009015c ದೈತ್ಯದಾನವಸಂಘಾಶ್ಚ ಸರ್ವೇ ರುಚಿರಕುಂಡಲಾಃ||

02009016a ಸ್ರಗ್ವಿಣೋ ಮೌಲಿನಃ ಸರ್ವೇ ತಥಾ ದಿವ್ಯಪರಿಚ್ಛದಾಃ|

02009016c ಸರ್ವೇ ಲಬ್ಧವರಾಃ ಶೂರಾಃ ಸರ್ವೇ ವಿಗತಮೃತ್ಯವಃ||

02009017a ತೇ ತಸ್ಯಾಂ ವರುಣಂ ದೇವಂ ಧರ್ಮಪಾಶಸ್ಥಿತಾಃ ಸದಾ|

02009017c ಉಪಾಸತೇ ಮಹಾತ್ಮಾನಂ ಸರ್ವೇ ಸುಚರಿತವ್ರತಾಃ||

ರಾಜಾ ಬಲಿ, ವಿರೋಚನ, ಪೃಥ್ವಿಯನ್ನು ಜಯಿಸಿದ ನರಕ, ಪ್ರಹ್ಲಾದ, ವಿಪ್ರಚಿತ್ತಿ, ಸರ್ವ ಕಾಲಕಂಜರು, ಸುಹನು, ದುರ್ಮುಖ, ಶಂಖ, ಸುಮನ, ಸುಮತಿ, ಸ್ವನ, ಘಟೋದರ, ಮಹಾಪಾರ್ಶ್ವ, ಕಥನ, ಪಿಠರ, ವಿಶ್ವರೂಪ, ಸುರೂಪ, ವಿರೂಪ, ಮಹಾಶಿರ, ದಶಗ್ರೀವ, ವಾಲಿ, ಮೇಘವಾಸ, ದಶಾವರ, ಕೈಟಭ, ವಿಟ್ಟಥ, ಸಂಹ್ಲಾದ, ಇಂದ್ರತಾಪನ, ದೈತ್ಯ ದಾನವ ಪಂಗಡಗಳು - ತಮ್ಮ ಹೊಳೆಯುವ ಕುಂಡಲಗಳು, ಎಲ್ಲರೂ ಮಾಲೆಗಳನ್ನು ಕಿರೀಟಗಳನ್ನು ಧರಿಸಿ, ದಿವ್ಯ ವಸ್ತ್ರಗಳನ್ನು ಧರಿಸಿ, ಎಲ್ಲರೂ ಶೂರರೂ, ವರಗಳನ್ನು ಪಡೆದವರೂ, ಮೃತ್ಯುವನ್ನು ಜಯಿಸಿದವರೂ, ಸದಾ ಧರ್ಮಪಾಶದಲ್ಲಿರುವ, ಸರ್ವ ಸುಚರಿತವ್ರತರೂ ಆ ಮಹಾತ್ಮ ವರುಣದೇವನನ್ನು ಉಪಾಸಿಸುತ್ತಾರೆ.

02009018a ತಥಾ ಸಮುದ್ರಾಶ್ಚತ್ವಾರೋ ನದೀ ಭಾಗೀರಥೀ ಚ ಯಾ|

02009018c ಕಾಲಿಂದೀ ವಿದಿಶಾ ವೇಣ್ಣಾ ನರ್ಮದಾ ವೇಗವಾಹಿನೀ||

02009019a ವಿಪಾಶಾ ಚ ಶತದ್ರುಶ್ಚ ಚಂದ್ರಭಾಗಾ ಸರಸ್ವತೀ|

02009019c ಇರಾವತೀ ವಿತಸ್ತಾ ಚ ಸಿಂಧುರ್ದೇವನದಸ್ತಥಾ||

02009020a ಗೋದಾವರೀ ಕೃಷ್ಣವೇಣ್ಣಾ ಕಾವೇರೀ ಚ ಸರಿದ್ವರಾ|

02009020c ಏತಾಶ್ಚಾನ್ಯಾಶ್ಚ ಸರಿತಸ್ತೀರ್ಥಾನಿ ಚ ಸರಾಂಸಿ ಚ||

02009021a ಕೂಪಾಶ್ಚ ಸಪ್ರಸ್ರವಣಾ ದೇಹವಂತೋ ಯುಧಿಷ್ಠಿರ|

02009021c ಪಲ್ವಲಾನಿ ತಡಾಗಾನಿ ದೇಹವಂತ್ಯಥ ಭಾರತ||

02009022a ದಿಶಸ್ತಥಾ ಮಹೀ ಚೈವ ತಥಾ ಸರ್ವೇ ಮಹೀಧರಾಃ|

02009022c ಉಪಾಸತೇ ಮಹಾತ್ಮಾನಂ ಸರ್ವೇ ಜಲಚರಾಸ್ತಥಾ||

ಯುಧಿಷ್ಠಿರ! ಹಾಗೆಯೇ ನಾಲ್ಕು ಸಮುದ್ರಗಳು, ನದೀ ಭಾಗೀರಥಿ, ಕಾಲಿಂದೀ, ವಿದಿಶಾ, ವೇಣ್ಣ, ವೇಗವಾಹಿನೀ ನರ್ಮದಾ, ವಿಪಾಶಾ, ಶತದ್ರು, ಚಂದ್ರಭಾಗ, ಸರಸ್ವತೀ, ಇರಾವತೀ, ವಿತ, ಸಿಂಧು, ದೇವನದಿ, ಗೋದಾವರೀ, ಕೃಷ್ಣವೇಣಿ, ಕಾವೇರಿ, ಸರಿದ್ವರಾ, ಇವು ಮತ್ತು ಇತರ ನದಿಗಳು, ತೀರ್ಥಗಳು, ಸರೋವರಗಳು, ಬಾವಿಗಳು, ಕಾರಂಜಿಗಳು ದೇಹವಂತರಾಗಿ, ಹೊಂಡ-ಕೆರೆಗಳು ದೇಹವಂತರಾಗಿ, ದಿಕ್ಕುಗಳು, ಭೂಮಿ, ಸರ್ವ ಪರ್ವತಗಳು, ಸರ್ವ ಜಲಚರಗಳು ಮಹಾತ್ಮನನ್ನು ಉಪಾಸಿಸುತ್ತವೆ.

02009023a ಗೀತವಾದಿತ್ರವಂತಶ್ಚ ಗಂಧರ್ವಾಪ್ಸರಸಾಂ ಗಣಾಃ|

02009023c ಸ್ತುವಂತೋ ವರುಣಂ ತಸ್ಯಾಂ ಸರ್ವ ಏವ ಸಮಾಸತೇ||

ಗೀತ, ವಾದ್ಯಗಳಿಂದ ಅಲ್ಲಿ ಎಲ್ಲ ಗಂಧರ್ವ ಅಪ್ಸರ ಗಣಗಳು ಒಟ್ಟಿಗೇ ವರುಣನನ್ನು ಸ್ತುತಿಸುತ್ತಿರುತ್ತಾರೆ.

02009024a ಮಹೀಧರಾ ರತ್ನವಂತೋ ರಸಾ ಯೇಷು ಪ್ರತಿಷ್ಠಿತಾಃ|

02009024c ಸರ್ವೇ ವಿಗ್ರಹವಂತಸ್ತೇ ತಮೀಶ್ವರಮುಪಾಸತೇ||

ರತ್ನವಂತ ಪರ್ವತಗಳು ಮತ್ತು ಅಲ್ಲಿ ಕಂಡುಬರುವ ಔಷಧ ರಸಗಳು ಎಲ್ಲವೂ ರೂಪತಾಳಿ ಆ ಈಶ್ವರನನ್ನು ಉಪಾಸಿಸುತ್ತವೆ.

02009025a ಏಷಾ ಮಯಾ ಸಂಪತತಾ ವಾರುಣೀ ಭರತರ್ಷಭ|

02009025c ದೃಷ್ಟಪೂರ್ವಾ ಸಭಾ ರಮ್ಯಾ ಕುಬೇರಸ್ಯ ಸಭಾಂ ಶೃಣು||

ಭರತರ್ಷಭ! ಸ್ವಯಂ ನಾನೇ ಹಿಂದೆ ವರುಣನ ಸಭೆಗೆ ಹಾರಿ ಹೋಗಿ ನೋಡಿದ್ದೇನೆ. ಈಗ ಕುಬೇರನ ರಮ್ಯ ಸಭೆಯ ಕುರಿತು ಕೇಳು.”

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಸಭಾಕ್ರಿಯಾಪರ್ವಣಿ ವರುಣಸಭಾವರ್ಣನಂ ನಾಮ ನವಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸಭಾಪರ್ವದಲ್ಲಿ ಸಭಾಕ್ರಿಯಾ ಪರ್ವದಲ್ಲಿ ವರುಣಸಭಾವರ್ಣನೆ ಎನ್ನುವ ಒಂಭತ್ತನೆಯ ಅಧ್ಯಾಯವು.

Related image

Comments are closed.