Sabha Parva: Chapter 8

ಸಭಾಪರ್ವ: ಸಭಾಕ್ರಿಯಾ ಪರ್ವ

ಯಮಸಭೆಯ ವರ್ಣನೆ (೧-೩೮).

Image result for yama sabha02008001 ನಾರದ ಉವಾಚ|

02008001a ಕಥಯಿಷ್ಯೇ ಸಭಾಂ ದಿವ್ಯಾಂ ಯುಧಿಷ್ಠಿರ ನಿಬೋಧ ತಾಂ|

02008001c ವೈವಸ್ವತಸ್ಯ ಯಾಮರ್ಥೇ ವಿಶ್ವಕರ್ಮಾ ಚಕಾರ ಹ||

ನಾರದನು ಹೇಳಿದನು: “ಯುಧಿಷ್ಠಿರ! ವಿಶ್ವಕರ್ಮನು ವೈವಸ್ವತ ಯಮನಿಗೋಸ್ಕರ ನಿರ್ಮಿಸಿದ ದಿವ್ಯ ಸಭೆಯ ಕುರಿತು ಹೇಳುತ್ತೇನೆ ಕೇಳು.

02008002a ತೈಜಸೀ ಸಾ ಸಭಾ ರಾಜನ್ಬಭೂವ ಶತಯೋಜನಾ|

02008002c ವಿಸ್ತಾರಾಯಾಮಸಂಪನ್ನಾ ಭೂಯಸೀ ಚಾಪಿ ಪಾಂಡವ||

ರಾಜನ್! ಆ ತೇಜಸ್ವೀ, ಸೂರ್ಯನ ಪ್ರಕಾಶದಂತೆ ಬೆಳಗುತ್ತಿರುವ ಸಭೆಯು ನೂರು ಯೋಜನ ವಿಸ್ತಾರವಾಗಿದ್ದು ಎಲ್ಲೆಲ್ಲಿ ಹೋಗಲೂ ಸಾದ್ಯವಾಗಿರುವಂಥದಾಗಿದೆ.

02008003a ಅರ್ಕಪ್ರಕಾಶಾ ಭ್ರಾಜಿಷ್ಣುಃ ಸರ್ವತಃ ಕಾಮಚಾರಿಣೀ|

02008003c ನೈವಾತಿಶೀತಾ ನಾತ್ಯುಷ್ಣಾ ಮನಸಶ್ಚ ಪ್ರಹರ್ಷಿಣೀ||

02008004a ನ ಶೋಕೋ ನ ಜರಾ ತಸ್ಯಾಂ ಕ್ಷುತ್ಪಿಪಾಸೇ ನ ಚಾಪ್ರಿಯಂ|

02008004c ನ ಚ ದೈನ್ಯಂ ಕ್ಲಮೋ ವಾಪಿ ಪ್ರತಿಕೂಲಂ ನ ಚಾಪ್ಯುತ||

ಒಳಗೆ ಅತಿ ಉಷ್ಣವೂ ಇಲ್ಲ ಅತಿ ಶೀತವೂ ಇಲ್ಲ. ಮನಸ್ಸನ್ನು ಸಂತೋಷಗೊಳಿಸುತ್ತದೆ. ಶೋಕವಿಲ್ಲ. ವೃದ್ಧಾಪ್ಯವಿಲ್ಲ. ಹಸಿವು ಬಾಯಾರಿಕೆಗಳಿಲ್ಲ. ಅಪ್ರಿಯವಾದುದೇನೂ ಇಲ್ಲ. ದೀನತೆಯಿಲ್ಲ. ಶೋಕವಿಲ್ಲ ಮತ್ತು ಅನಾನುಕೂಲವಾದದ್ದು ಏನೂ ಇಲ್ಲ.

02008005a ಸರ್ವೇ ಕಾಮಾಃ ಸ್ಥಿತಾಸ್ತಸ್ಯಾಂ ಯೇ ದಿವ್ಯಾ ಯೇ ಚ ಮಾನುಷಾಃ|

02008005c ರಸವಚ್ಚ ಪ್ರಭೂತಂ ಚ ಭಕ್ಷ್ಯಭೋಜ್ಯಮರಿಂದಮ||

ಅಲ್ಲಿ ಮನುಷ್ಯರ ಮತ್ತು ದೇವತೆಗಳ ಸರ್ವ ಕಾಮಗಳೂ ತೃಪ್ತಿಗೊಳ್ಳುತ್ತವೆ. ಅರಿಂದಮ! ಅಲ್ಲಿ ಭಕ್ಷ್ಯ ಭೋಜ್ಯಗಳ ಮತ್ತು ಅವುಗಳ ರುಚಿಯಲ್ಲಿ ಕೊರತೆಯಿಲ್ಲ.

02008006a ಪುಣ್ಯಗಂಧಾಃ ಸ್ರಜಸ್ತತ್ರ ನಿತ್ಯಪುಷ್ಪಫಲದ್ರುಮಾಃ|

02008006c ರಸವಂತಿ ಚ ತೋಯಾನಿ ಶೀತಾನ್ಯುಷ್ಣಾನಿ ಚೈವ ಹ||

ಅಲ್ಲಿ ಪುಣ್ಯಸುಗಂಧಿತ ಮಾಲೆಗಳಿವೆ, ಮತ್ತು ವೃಕ್ಷಗಳು ಸದಾ ಹೂ ಹಣ್ಣುಗಳಿಂದ ತುಂಬಿರುತ್ತವೆ. ಅಲ್ಲಿ ರುಚಿಕರ ತಣ್ಣೀರು ಮತ್ತು ಬಿಸಿ ನೀರು ಎರಡೂ ದೊರೆಯುತ್ತವೆ.

02008007a ತಸ್ಯಾಂ ರಾಜರ್ಷಯಃ ಪುಣ್ಯಾಸ್ತಥಾ ಬ್ರಹ್ಮರ್ಷಯೋಽಮಲಾಃ|

02008007c ಯಮಂ ವೈವಸ್ವತಂ ತಾತ ಪ್ರಹೃಷ್ಟಾಃ ಪರ್ಯುಪಾಸತೇ||

02008008a ಯಯಾತಿರ್ನಹುಷಃ ಪೂರುರ್ಮಾಂಧಾತಾ ಸೋಮಕೋ ನೃಗಃ|

02008008c ತ್ರಸದಸ್ಯುಶ್ಚ ತುರಯಃ ಕೃತವೀರ್ಯಃ ಶ್ರುತಶ್ರವಾಃ||

02008009a ಅರಿಪ್ರಣುತ್ಸುಸಿಂಹಶ್ಚ ಕೃತವೇಗಃ ಕೃತಿರ್ನಿಮಿಃ|

02008009c ಪ್ರತರ್ದನಃ ಶಿಬಿರ್ಮತ್ಸ್ಯಃ ಪೃಥ್ವಕ್ಷೋಽಥ ಬೃಹದ್ರಥಃ||

02008010a ಐಡೋ ಮರುತ್ತಃ ಕುಶಿಕಃ ಸಾಂಕಾಶ್ಯಃ ಸಾಂಕೃತಿರ್ಭವಃ|

02008010c ಚತುರಶ್ವಃ ಸದಶ್ವೋರ್ಮಿಃ ಕಾರ್ತವೀರ್ಯಶ್ಚ ಪಾರ್ಥಿವಃ||

02008011a ಭರತಸ್ತಥಾ ಸುರಥಃ ಸುನೀಥೋ ನೈಷಧೋ ನಲಃ|

02008011c ದಿವೋದಾಸೋಽಥ ಸುಮನಾ ಅಂಬರೀಷೋ ಭಗೀರಥಃ||

02008012a ವ್ಯಶ್ವಃ ಸದಶ್ವೋ ವಧ್ರ್ಯಶ್ವಃ ಪಂಚಹಸ್ತಃ ಪೃಥುಶ್ರವಾಃ|

02008012c ರುಷದ್ಗುರ್ವೃಷಸೇನಶ್ಚ ಕ್ಷುಪಶ್ಚ ಸುಮಹಾಬಲಃ||

02008013a ರುಷದಶ್ವೋ ವಸುಮನಾಃ ಪುರುಕುತ್ಸೋ ಧ್ವಜೀ ರಥೀ|

02008013c ಆರ್ಷ್ಟಿಷೇಣೋ ದಿಲೀಪಶ್ಚ ಮಹಾತ್ಮಾ ಚಾಪ್ಯುಶೀನರ||

02008014a ಔಶೀನರಃ ಪುಂಡರೀಕಃ ಶರ್ಯಾತಿಃ ಶರಭಃ ಶುಚಿಃ|

02008014c ಅಂಗೋಽರಿಷ್ಟಶ್ಚ ವೇನಶ್ಚ ದುಃಷಂತಃ ಸಂಜಯೋ ಜಯಃ||

02008015a ಭಾಂಗಾಸ್ವರಿಃ ಸುನೀಥಶ್ಚ ನಿಷಧೋಽಥ ತ್ವಿಷೀರಥಃ|

02008015c ಕರಂಧಮೋ ಬಾಹ್ಲಿಕಶ್ಚ ಸುದ್ಯುಮ್ನೋ ಬಲವಾನ್ ಮಧುಃ||

02008016a ಕಪೋತರೋಮಾ ತೃಣಕಃ ಸಹದೇವಾರ್ಜುನೌ ತಥಾ|

02008016c ರಾಮೋ ದಾಶರಥಿಶ್ಚೈವ ಲಕ್ಷ್ಮಣೋಽಥ ಪ್ರತರ್ದನಃ||

02008017a ಅಲರ್ಕಃ ಕಕ್ಷಸೇನಶ್ಚ ಗಯೋ ಗೌರಾಶ್ವ ಏವ ಚ|

02008017c ಜಾಮದಗ್ನ್ಯೋಽಥ ರಾಮೋಽತ್ರ ನಾಭಾಗಸಗರೌ ತಥಾ||

02008018a ಭೂರಿದ್ಯುಮ್ನೋ ಮಹಾಶ್ವಶ್ಚ ಪೃಥ್ವಶ್ವೋ ಜನಕಸ್ತಥಾ|

02008018c ವೈನ್ಯೋ ರಾಜಾ ವಾರಿಷೇಣಃ ಪುರುಜೋ ಜನಮೇಜಯ||

02008019a ಬ್ರಹ್ಮದತ್ತಸ್ತ್ರಿಗರ್ತಶ್ಚ ರಾಜೋಪರಿಚರಸ್ತಥಾ|

02008019c ಇಂದ್ರದ್ಯುಮ್ನೋ ಭೀಮಜಾನುರ್ಗಯಃ ಪೃಷ್ಠೋ ನಯೋಽನಘಃ||

02008020a ಪದ್ಮೋಽಥ ಮುಚುಕುಂದಶ್ಚ ಭೂರಿದ್ಯುಮ್ನಃ ಪ್ರಸೇನಜಿತ್|

02008020c ಅರಿಷ್ಟನೇಮಿಃ ಪ್ರದ್ಯುಮ್ನಃ ಪೃಥಗಶ್ವೋಽಜಕಸ್ತಥಾ||

02008021a ಶತಂ ಮತ್ಸ್ಯಾ ನೃಪತಯಃ ಶತಂ ನೀಪಾಃ ಶತಂ ಹಯಾಃ|

02008021c ಧೃತರಾಷ್ಟ್ರಾಶ್ಚೈಕಶತಮಶೀತಿರ್ಜನಮೇಜಯಾಃ||

02008022a ಶತಂ ಚ ಬ್ರಹ್ಮದತ್ತಾನಾಮೀರಿಣಾಂ ವೈರಿಣಾಂ ಶತಂ|

02008022c ಶಂತನುಶ್ಚೈವ ರಾಜರ್ಷಿಃ ಪಾಂಡುಶ್ಚೈವ ಪಿತಾ ತವ||

02008023a ಉಶದ್ಗವಃ ಶತರಥೋ ದೇವರಾಜೋ ಜಯದ್ರಥಃ|

02008023c ವೃಷಾದರ್ಭಿಶ್ಚ ರಾಜರ್ಷಿರ್ಧಾಮ್ನಾ ಸಹ ಸಮಂತ್ರಿಣಾ||

02008024a ಅಥಾಪರೇ ಸಹಸ್ರಾಣಿ ಯೇ ಗತಾಃ ಶಶಬಿಂದವಃ|

02008024c ಇಷ್ಟ್ವಾಶ್ವಮೇಧೈರ್ಬಹುಭಿರ್ಮಹದ್ಭಿರ್ಭೂರಿದಕ್ಷಿಣೈಃ||

02008025a ಏತೇ ರಾಜರ್ಷಯಃ ಪುಣ್ಯಾಃ ಕೀರ್ತಿಮಂತೋ ಬಹುಶ್ರುತಾಃ|

02008025c ತಸ್ಯಾಂ ಸಭಾಯಾಂ ರಾಜರ್ಷೇ ವೈವಸ್ವತಮುಪಾಸತೇ||

ಮಗೂ! ಅಲ್ಲಿ ಪುಣ್ಯ ರಾಜರ್ಷಿಗಳೂ, ಅಮಲ ದೇವರ್ಷಿಗಳೂ ಸಂತೋಷದಿಂದ ವೈವಸ್ವತ ಯಮನನ್ನು ಉಪಾಸಿಸುತ್ತಾರೆ - ಯಯಾತಿ, ನಹುಷ, ಪುರು, ಮಾಂಧಾತ, ಸೋಮಕ, ನೃಗ, ತ್ರದಸ್ಯು, ತುರಯ, ಕೃತವೀರ್ಯ, ಶೃತಶ್ರವ, ಅರಿಪ್ರಣುತ್, ಸುಸಿಂಹ, ಕೃತವೇಗ, ಕೃತಿ, ನಿಮಿ, ಪ್ರತರ್ದನ, ಶಿಬಿ, ಮತ್ಸ್ಯ, ಪೃಥ್ವಕ್ಷ, ಬೃಹದ್ರಥ, ಐಡ, ಮರುತ, ಕುಶಿಕ, ಸಾಂಕಸ್ಯ, ಸಂಕೃತಿ, ಭಾವ, ಚತುರಶ್ವ, ಸದಶ್ವೋರ್ಮಿ. ಪಾರ್ಥಿವ ಕಾರ್ತಿವೀರ್ಯ, ಭರತ, ಸುರಥ, ಸುನೀಥ, ನೈಷಧ ನಲ, ದಿವೋದಾಸ, ಸುಮನ, ಅಂಬರೀಷ, ಭಗೀರಥ, ವ್ಯಶ್ವ, ಸ್ವದಶ್ವ, ವಧ್ರಶ್ವ, ಪಂಚಹಸ್ತ, ಪೃಥುಶ್ರವ, ಋಷದ್ಗು, ವೃಷಸೇನ, ಕ್ಷುಪ, ಸುಮಹಾಬಲ, ಋಷದಶ್ವ, ವಸುಮನ, ಧ್ವಜೀ ರಥೀ ಪುರುಕುತ್ಸ, ಅರಿಷ್ಠಿಶೇಣ, ದಿಲೀಪ, ಮಹಾತ್ಮ ಉಶೀನರ, ಔಶೀನರ, ಪುಂಡರೀಕ, ಶರ್ಯಾತಿ, ಶರಭ, ಶುಚಿ, ಅಂಗ, ಅರಿಷ್ಟ, ವೇನ, ದುಃಷಂತ, ಸಂಜಯ, ಜಯ, ಭಾಮಸ್ವರಿ, ಸುನೀಥ, ನಿಷಧ, ತ್ವಿಶೀರಥ, ಕರಂಧಮ, ಬಾಹ್ಲೀಕ, ಸುದ್ಯುಮ್ನ, ಬಲವಾನ್ ಮಧು, ಕಪೋತರೋಮ, ತೃಣಕ, ಸಹದೇವ, ಅರ್ಜುನ, ರಾಮ ದಾಶರಥಿ, ಲಕ್ಷ್ಮಣ, ಪ್ರತರ್ದನ, ಅಲರ್ಕ, ಕಕ್ಷಸೇನ, ಗಯ, ಗೌರ, ಜಾಮದಗ್ನಿ ರಾಮ, ನಾಭಾಗ, ಸಗರ, ಭೂರಿದ್ಯುಮ್ನ, ಮಹಾಶ್ವ, ಪೃಥ್ವಶ್ವ, ಜನಕ, ವೈನ್ಯ, ರಾಜ ವಾರಿಷೇಣ, ಪುರುಜ, ಜನಮೇಜಯ, ಬ್ರಹ್ಮದತ್ತ, ತ್ರಿಗರ್ತ, ರಾಜ ಉಪರಿಚರ, ಇಂದ್ರದ್ಯುಮ್ನ, ಭೀಮಜ, ಗಯ, ಪೃಷ್ಠ, ಅನಘ ನಯ, ಪದ್ಮ, ಮುಚುಕುಂದ, ಭೂರಿದ್ಯುಮ್ನ, ಪ್ರಸೇನಜಿತ್, ಅರಿಷ್ಟನೇಮಿ, ಪ್ರದ್ಯುಮ್ನ, ಪೃಥಗಾಶ್ವ, ಅಜಕ, ನೂರು ಮತ್ಸ್ಯ ನೃಪತಿಯರು, ನೂರು ನೀಪರು, ನೂರು ಹಯರು, ನೂರು ಧೃತರಾಷ್ಟ್ರರು, ಎಂಭತ್ತು ಜನಮೇಜಯರು, ನೂರು ಬ್ರಹ್ಮದತ್ತರು, ನೂರು ವೈರಿ ಈರಿಗಳು, ರಾಜರ್ಷಿ ಶಂತನು, ನಿನ್ನ ತಂದೆ ಪಾಂಡು, ಉಶದ್ಗವ, ಶತರಥ, ದೇವರಾಜ, ಜಯದ್ರಥ, ರಾಜರ್ಷಿ ವೃಷಾದರ್ಭಿ, ಮಂತ್ರಿಗಳ ಸಹಿತ ಧಾಮ್ನಾ, ಬಹಳಷ್ಟು ಭೂರಿ ದಕ್ಷಿಣೆಗಳನ್ನಿತ್ತು ಅಶ್ವಮೇಧೇಷ್ಠಿಗಳನ್ನು ನಡೆಸಿದ ಸಹಸ್ರಾರು ಶತಬಿಂದುಗಳು. ಈ ಎಲ್ಲ ಕೀರ್ತಿಮಂತ, ಬಹುಶ್ರುತ, ಪುಣ್ಯ ರಾಜರ್ಷಿಗಳು ಆ ಸಭೆಯಲ್ಲಿ ವೈವಸ್ವತನನ್ನು ಆರಾಧಿಸುತ್ತಾರೆ.

02008026a ಅಗಸ್ತ್ಯೋಽಥ ಮತಂಗಶ್ಚ ಕಾಲೋ ಮೃತ್ಯುಸ್ತಥೈವ ಚ|

02008026c ಯಜ್ವಾನಶ್ಚೈವ ಸಿದ್ಧಾಶ್ಚ ಯೇ ಚ ಯೋಗಶರೀರಿಣಃ||

02008027a ಅಗ್ನಿಷ್ವಾತ್ತಾಶ್ಚ ಪಿತರಃ ಫೇನಪಾಶ್ಚೋಷ್ಮಪಾಶ್ಚ ಯೇ|

02008027c ಸ್ವಧಾವಂತೋ ಬರ್ಹಿಷದೋ ಮೂರ್ತಿಮಂತಸ್ತಥಾಪರೇ||

02008028a ಕಾಲಚಕ್ರಂ ಚ ಸಾಕ್ಷಾಚ್ಚ ಭಗವಾನ್ ಹವ್ಯವಾಹನಃ|

02008028c ನರಾ ದುಷ್ಕೃತಕರ್ಮಾಣೋ ದಕ್ಷಿಣಾಯನಮೃತ್ಯವಃ||

02008029a ಕಾಲಸ್ಯ ನಯನೇ ಯುಕ್ತಾ ಯಮಸ್ಯ ಪುರುಷಾಶ್ಚ ಯೇ|

02008029c ತಸ್ಯಾಂ ಶಿಂಶಪಪಾಲಾಶಾಸ್ತಥಾ ಕಾಶಕುಶಾದಯಃ|

02008029e ಉಪಾಸತೇ ಧರ್ಮರಾಜಂ ಮೂರ್ತಿಮಂತೋ ನಿರಾಮಯಾಃ||

ಅಗಸ್ತ್ಯ, ಮತಂಗ, ಕಾಲ, ಮೃತ್ಯು, ಯಜ್ವಾನ, ಸಿದ್ಧರು, ಯೋಗಶರೀರಿಗಳು, ಅಗ್ನಿಷ್ವಾತ್ತರು, ಪಿತರರು, ಫೇನಪರು, ಚೋಶ್ಮಪರು, ಸ್ವಧಾವಂತರು, ಬರ್ಹಿಷದರು, ಮೂರ್ತಿಮಂತರು, ಕಾಲಚಕ್ರ, ಸಾಕ್ಷಾತ್ ಭಗವಾನ್ ಹವ್ಯವಾಹನ, ದುಷ್ಕೃತಕರ್ಮಿ ನರರು, ದಕ್ಷಿಣಾಯನದಲ್ಲಿ ಮೃತಹೊಂದಿದವರು, ಕಾಲವನ್ನು ನಡೆಸುವ ಯಮನನ್ನು ಅರಿತ ಮನುಷ್ಯರು, ಶಿಂಶಪ ಮತ್ತು ಪಾಲಾಶ ವೃಕ್ಷಗಳು, ಕಶ ಮತ್ತು ಕುಶಗಳು, ಧರ್ಮರಾಜ ಮೂರ್ತಿಮಂತ ನಿರಾಮಯನನ್ನು ಉಪಾಸಿಸುತ್ತಾರೆ.

02008030a ಏತೇ ಚಾನ್ಯೇ ಚ ಬಹವಃ ಪಿತೃರಾಜಸಭಾಸದಃ|

02008030c ಅಶಕ್ಯಾಃ ಪರಿಸಂಖ್ಯಾತುಂ ನಾಮಭಿಃ ಕರ್ಮಭಿಸ್ತಥಾ||

02008031a ಅಸಂಬಾಧಾ ಹಿ ಸಾ ಪಾರ್ಥ ರಮ್ಯಾ ಕಾಮಗಮಾ ಸಭಾ|

02008031c ದೀರ್ಘಕಾಲಂ ತಪಸ್ತಪ್ತ್ವಾ ನಿರ್ಮಿತಾ ವಿಶ್ವಕರ್ಮಣಾ||

02008032a ಪ್ರಭಾಸಂತೀ ಜ್ವಲಂತೀವ ತೇಜಸಾ ಸ್ವೇನ ಭಾರತ|

ಭಾರತ! ಇವರು ಮತ್ತು ಇನ್ನೂ ಬಹಳಷ್ಟು ಇತರ ಪಿತೃರಾಜನ ಸಭಾಸದರಾಗಿದ್ದಾರೆ ಮತ್ತು ಇವರೆನ್ನೆಲ್ಲರನ್ನೂ ನಾಮ ಕರ್ಮಗಳಿಂದ ಎಣಿಸುವುದು ಅಶಕ್ಯ. ಆದರೂ ಪಾರ್ಥ! ಬೇಕೆಂದಲ್ಲಿಗೆ ಹೋಗಬಲ್ಲ ಈ ರಮ್ಯ ಸಭೆಯಲ್ಲಿ ಎಂದೂ ಇಕ್ಕಟ್ಟು ಎನ್ನಿಸುವುದಿಲ್ಲ. ದೀರ್ಘಕಾಲದವರೆಗೆ ತಪಸ್ಸನ್ನು ತಪಿಸಿ ವಿಶ್ವಕರ್ಮನು ಇದನ್ನು ನಿರ್ಮಿಸಿದನು ಮತ್ತು ತನ್ನದೇ ತೇಜಸ್ಸಿನಿಂದ ಅದು ಉರಿಯುತ್ತಿದೆಯೋ ಎನ್ನುವಂತೆ ಬೆಳಗುತ್ತದೆ.

02008032c ತಾಮುಗ್ರತಪಸೋ ಯಾಂತಿ ಸುವ್ರತಾಃ ಸತ್ಯವಾದಿನಃ||

02008033a ಶಾಂತಾಃ ಸಂನ್ಯಾಸಿನಃ ಸಿದ್ಧಾಃ ಪೂತಾಃ ಪುಣ್ಯೇನ ಕರ್ಮಣಾ|

02008033c ಸರ್ವೇ ಭಾಸ್ವರದೇಹಾಶ್ಚ ಸರ್ವೇ ಚ ವಿರಜೋಂಬರಾಃ||

02008034a ಚಿತ್ರಾಂಗದಾಶ್ಚಿತ್ರಮಾಲ್ಯಾಃ ಸರ್ವೇ ಜ್ವಲಿತಕುಂಡಲಾಃ|

02008034c ಸುಕೃತೈಃ ಕರ್ಮಭಿಃ ಪುಣ್ಯೈಃ ಪರಿಬರ್ಹೈರ್ವಿಭೂಷಿತಾಃ||

02008035a ಗಂಧರ್ವಾಶ್ಚ ಮಹಾತ್ಮಾನಃ ಶತಶಶ್ಚಾಪ್ಸರೋಗಣಾಃ|

02008035c ವಾದಿತ್ರಂ ನೃತ್ತಗೀತಂ ಚ ಹಾಸ್ಯಂ ಲಾಸ್ಯಂ ಚ ಸರ್ವಶಃ||

02008036a ಪುಣ್ಯಾಶ್ಚ ಗಂಧಾಃ ಶಬ್ದಾಶ್ಚ ತಸ್ಯಾಂ ಪಾರ್ಥ ಸಮಂತತಃ|

02008036c ದಿವ್ಯಾನಿ ಮಾಲ್ಯಾನಿ ಚ ತಾಮುಪತಿಷ್ಠಂತಿ ಸರ್ವಶಃ||

ಅಲ್ಲಿಗೆ ಉಗ್ರತಪಸ್ವಿಗಳು, ಸುವ್ರತರು, ಸತ್ಯವಾದಿಗಳು, ಶಾಂತರು, ಸನ್ಯಾಸಿಗಳು, ಸಿದ್ಧರು, ಪುಣ್ಯಕರ್ಮಗಳಿಂದ ಪೂತರಾದವರು ಎಲ್ಲರೂ ಹೊಳೆಯುತ್ತಿರುವ ದೇಹಗಳನ್ನು ಧರಿಸಿ, ಶುಭ್ರವಸ್ತ್ರಗಳನ್ನು ಧರಿಸಿ, ಬಣ್ಣಬಣ್ಣದ ಅಂಗದ ಮತ್ತು ಮಾಲೆಗಳನ್ನು ಧರಿಸಿ, ಜ್ವಲಿಸುತ್ತಿರುವ ಕುಂಡಲಗಳನ್ನು ಧರಿಸಿ ಹೋಗುತ್ತಾರೆ. ಇಂಥಹ ಪುಣ್ಯಕರ್ಮ ಸುಕೃತರು ಅನುಸರಿಸುತ್ತಿರಲು ಭೂಷಿತ ಮಹಾತ್ಮ ಗಂಧರ್ವರು ಮತ್ತು ನೂರಾರು ಅಪ್ಸರಗಣಗಳು ವಾದ್ಯ, ನೃತ್ಯ, ಗೀತ, ಹಾಸ್ಯ, ಲಾಸ್ಯ ಮತ್ತು ಎಲ್ಲವುಗಳಿಂದ ಪುಣ್ಯ ಗಂಧ, ಶಬ್ಧಗಳಿಂದ ದಿವ್ಯ ಮಾಲೆಗಳಿಂದ ಎಲ್ಲರೂ ಅವನನ್ನು ಸುತ್ತುವರೆದಿರುತ್ತಾರೆ ಪಾರ್ಥ!

02008037a ಶತಂ ಶತಸಹಸ್ರಾಣಿ ಧರ್ಮಿಣಾಂ ತಂ ಪ್ರಜೇಶ್ವರಂ|

02008037c ಉಪಾಸತೇ ಮಹಾತ್ಮಾನಂ ರೂಪಯುಕ್ತಾ ಮನಸ್ವಿನಃ||

ನೂರು ನೂರು ಸಾವಿರದಷ್ಟು ಧರ್ಮಿಗಳು ಮಹಾತ್ಮ ರೂಪಯುಕ್ತ ಮನಸ್ವಿನಿ ಪ್ರಜೇಶ್ವರನನ್ನು ಉಪಾಸನೆ ಮಾಡುತ್ತಾರೆ.

02008038a ಈದೃಶೀ ಸಾ ಸಭಾ ರಾಜನ್ಪಿತೃರಾಜ್ಞೋ ಮಹಾತ್ಮನಃ|

02008038c ವರುಣಸ್ಯಾಪಿ ವಕ್ಷ್ಯಾಮಿ ಸಭಾಂ ಪುಷ್ಕರಮಾಲಿನೀಂ||

ರಾಜನ್! ಮಹಾತ್ಮ ಪಿತೃರಾಜನ ಸಭೆಯು ಈ ರೀತಿ ಇದೆ. ಈಗ ಪುಷ್ಕರಮಾಲಿನೀ ಎಂಬ ವರುಣನ ಸಭೆಯ ಕುರಿತು ಹೇಳುತ್ತೇನೆ.”

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಸಭಾಕ್ರಿಯಾಪರ್ವಣಿ ಯಮಸಭಾವರ್ಣನಂ ನಾಮ ಅಷ್ಟಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸಭಾಪರ್ವದಲ್ಲಿ ಸಭಾಕ್ರಿಯಾ ಪರ್ವದಲ್ಲಿ ಯಮಸಭಾವರ್ಣನೆ ಎನ್ನುವ ಎಂಟನೆಯ ಅಧ್ಯಾಯವು.

Related image

Comments are closed.