Sabha Parva: Chapter 7

ಸಭಾಪರ್ವ: ಸಭಾಕ್ರಿಯಾ ಪರ್ವ

ಇಂದ್ರಸಭೆಯ ವರ್ಣನೆ (೧-೨೬).

Image result for indra sabha02007001 ನಾರದ ಉವಾಚ|

02007001a ಶಕ್ರಸ್ಯ ತು ಸಭಾ ದಿವ್ಯಾ ಭಾಸ್ವರಾ ಕರ್ಮಭಿರ್ಜಿತಾ|

02007001c ಸ್ವಯಂ ಶಕ್ರೇಣ ಕೌರವ್ಯ ನಿರ್ಮಿತಾರ್ಕಸಮಪ್ರಭಾ||

ನಾರದನು ಹೇಳಿದನು: “ಕೌರವ್ಯ! ತನ್ನ ಕರ್ಮಗಳಿಂದ ಪಡೆದ ಶಕ್ರನ ದಿವ್ಯ ಸಭೆಯು ಸೂರ್ಯಪ್ರಭೆಯ ಸರಿಸಮ ಕಾಂತಿಯುಕ್ತವಾಗಿದ್ದು ಸ್ವಯಂ ಶಕ್ರನಿಂದ ನಿರ್ಮಿತಗೊಂಡಿತು.

02007002a ವಿಸ್ತೀರ್ಣಾ ಯೋಜನಶತಂ ಶತಮಧ್ಯರ್ಧಮಾಯತಾ|

02007002c ವೈಹಾಯಸೀ ಕಾಮಗಮಾ ಪಂಚಯೋಜನಮುಚ್ಛ್ರಿತಾ||

ಇಷ್ಟವಿದ್ದಲ್ಲಿಗೆ ಹೋಗಬಹುದಾದ ಆ ಸಭೆಯು ಒಂದು ನೂರು ಯೋಜನೆ ಅಗಲವಾಗಿಯೂ, ನೂರಾ ಐವತ್ತು ಯೋಜನೆ ಉದ್ದವಾಗಿಯೂ, ಐದು ಯೋಜನೆ ಎತ್ತರವಾಗಿಯೂ ಇದೆ.

02007003a ಜರಾಶೋಕಕ್ಲಮಾಪೇತಾ ನಿರಾತಂಕಾ ಶಿವಾ ಶುಭಾ|

02007003c ವೇಶ್ಮಾಸನವತೀ ರಮ್ಯಾ ದಿವ್ಯಪಾದಪಶೋಭಿತಾ||

02007004a ತಸ್ಯಾಂ ದೇವೇಶ್ವರಃ ಪಾರ್ಥ ಸಭಾಯಾಂ ಪರಮಾಸನೇ|

02007004c ಆಸ್ತೇ ಶಚ್ಯಾ ಮಹೇಂದ್ರಾಣ್ಯಾ ಶ್ರಿಯಾ ಲಕ್ಷ್ಮ್ಯಾ ಚ ಭಾರತ||

02007005a ಬಿಭ್ರದ್ವಪುರನಿರ್ದೇಶ್ಯಂ ಕಿರೀಟೀ ಲೋಹಿತಾಂಗದಃ|

02007005c ವಿರಜೋಂಬರಶ್ಚಿತ್ರಮಾಲ್ಯೋ ಹ್ರೀಕೀರ್ತಿದ್ಯುತಿಭಿಃ ಸಹ||

02007006a ತಸ್ಯಾಮುಪಾಸತೇ ನಿತ್ಯಂ ಮಹಾತ್ಮಾನಂ ಶತಕ್ರತುಂ|

02007006c ಮರುತಃ ಸರ್ವತೋ ರಾಜನ್ಸರ್ವೇ ಚ ಗೃಹಮೇಧಿನಃ|

02007006e ಸಿದ್ಧಾ ದೇವರ್ಷಯಶ್ಚೈವ ಸಾಧ್ಯಾ ದೇವಗಣಾಸ್ತಥಾ||

ಭಾರತ! ವೃದ್ಧಾಪ್ಯ, ಶೋಕ ಮತ್ತು ರೋಗರಹಿತ, ನಿರಾತಂಕ, ಮಂಗಳಕರ, ಶುಭ, ಕೊಠಡಿ ಮತ್ತು ಆಸನಗಳಿಂದ ತುಂಬಿದ, ರಮ್ಯ, ದಿವ್ಯ ವೃಕ್ಷಗಳಿಂದ ಶೋಭಿತ, ಸಬೆಯ ಪರಮಾಸನದಲ್ಲಿ ಕಿರೀಟಿ ಲೋಹಿತಾಂಗ ದೇವೇಶ್ವರನು ಮಹೇಂದ್ರಾಣಿ ಶಚಿ ಮತ್ತು ಶ್ರೀ ಲಕ್ಷ್ಮಿಯರೊಡನೆ ಮತ್ತು ಹ್ರೀ, ಕೀರ್ತಿ ಮತ್ತು ದ್ಯುತಿಗಳ ಸಹಿತ ಹೊಳೆಯುವ ಆಕಾರವನ್ನು ಪಡೆದು, ಶುದ್ಧ ವಸ್ತ್ರ, ಬಣ್ಣದ ಮಾಲೆಗಳನ್ನು ಧರಿಸಿ ಕುಳಿತಿರಲು ರಾಜನ್! ಮರುತರು, ಗೃಹಮೇಧಿ ದೇವತೆಗಳು, ಸಿದ್ಧರು, ದೇವರ್ಷಿಗಳು, ಸಾಧ್ಯರು ಮತ್ತು ದೇವಗಣಗಳು ಆ ಮಹಾತ್ಮ ಶತಕ್ರತುವನ್ನು ನಿತ್ಯವೂ ಉಪಾಸಿಸುತ್ತಾರೆ.

02007007a ಏತೇ ಸಾನುಚರಾಃ ಸರ್ವೇ ದಿವ್ಯರೂಪಾಃ ಸ್ವಲಂಕೃತಾಃ|

02007007c ಉಪಾಸತೇ ಮಹಾತ್ಮಾನಂ ದೇವರಾಜಮರಿಂದಮಂ||

ಇವರ ದಿವ್ಯರೂಪ ಸ್ವಲಂಕೃತ ಅನುಚರರು ಎಲ್ಲರೂ ಮಹಾತ್ಮ ಅರಿಂದಮ ದೇವರಾಜನನ್ನು ಉಪಾಸಿಸುತ್ತಾರೆ.

02007008a ತಥಾ ದೇವರ್ಷಯಃ ಸರ್ವೇ ಪಾರ್ಥ ಶಕ್ರಮುಪಾಸತೇ|

02007008c ಅಮಲಾ ಧೂತಪಾಪ್ಮಾನೋ ದೀಪ್ಯಮಾನಾ ಇವಾಗ್ನಯಃ|

02007008e ತೇಜಸ್ವಿನಃ ಸೋಮಯುಜೋ ವಿಪಾಪಾ ವಿಗತಕ್ಲಮಾಃ||

02007009a ಪರಾಶರಃ ಪರ್ವತಶ್ಚ ತಥಾ ಸಾವರ್ಣಿಗಾಲವೌ|

02007009c ಶಂಖಶ್ಚ ಲಿಖಿತಶ್ಚೈವ ತಥಾ ಗೌರಶಿರಾ ಮುನಿಃ||

02007010a ದುರ್ವಾಸಾಶ್ಚ ದೀರ್ಘತಪಾ ಯಾಜ್ಞವಲ್ಕ್ಯೋಽಥ ಭಾಲುಕಿಃ|

02007010c ಉದ್ದಾಲಕಃ ಶ್ವೇತಕೇತುಸ್ತಥಾ ಶಾಟ್ಯಾಯನಃ ಪ್ರಭುಃ||

02007011a ಹವಿಷ್ಮಾಂಶ್ಚ ಗವಿಷ್ಠಶ್ಚ ಹರಿಶ್ಚಂದ್ರಶ್ಚ ಪಾರ್ಥಿವಃ|

02007011c ಹೃದ್ಯಶ್ಚೋದರಶಾಂಡಿಲ್ಯಃ ಪಾರಾಶರ್ಯಃ ಕೃಷೀವಲಃ||

02007012a ವಾತಸ್ಕಂಧೋ ವಿಶಾಖಶ್ಚ ವಿಧಾತಾ ಕಾಲ ಏವ ಚ|

02007012c ಅನಂತದಂತಸ್ತ್ವಷ್ಟಾ ಚ ವಿಶ್ವಕರ್ಮಾ ಚ ತುಂಬುರುಃ||

02007013a ಅಯೋನಿಜಾ ಯೋನಿಜಾಶ್ಚ ವಾಯುಭಕ್ಷಾ ಹುತಾಶಿನಃ|

02007013c ಈಶಾನಂ ಸರ್ವಲೋಕಸ್ಯ ವಜ್ರಿಣಂ ಸಮುಪಾಸತೇ||

ಪಾರ್ಥ! ಹಾಗೆಯೇ ಅಮಲರೂ, ನಿಷ್ಪಾಪರೂ, ಅಗ್ನಿಯಂತೆ ಬೆಳಗುವವರೂ, ತೇಜಸ್ವಿಗಳು, ಸೋಮಯಾಜಿಗಳೂ, ವಿಪಾಪಿಗಳೂ, ವಿಗತಕ್ಲಮರೂ ಆದ ಸರ್ವ ದೇವರ್ಷಿಗಳೂ ಶಕ್ರನ ಉಪಾಸನೆ ಮಾಡುತ್ತಾರೆ: ಪರಾಶರ, ಪರ್ವತ, ಸಾವರ್ಣಿ, ಗಾಲವ, ಶಂಖ, ಲಿಖಿತ, ಮುನಿ ಗೌರಶಿರ, ದುರ್ವಾಸ, ದೀರ್ಘತಪಸ್, ಯಾಜ್ಞವಲ್ಕ್ಯ, ಭಾಲುಕಿ, ಉದ್ದಾಲಕ, ಶ್ವೇತಕೇತು, ಪ್ರಭು ಶಾತ್ಯಾಯನ, ಹವಿಷ್ಮತ್, ಗವಿಷ್ಠ, ಪಾರ್ಥಿವ ಹರಿಶ್ಚಂದ್ರ, ಹೃದ್ಯ, ಉದರಶಾಂಡಿಲ್ಯ, ಪಾರಶರ್ಯ, ಮತ್ತು ಕೃಷೀವಲ, ವಾತಸ್ಕಂಧ, ವಿಶಾಖ, ವಿಧಾತ, ಕಾಲ, ಅನಂತದಂತ, ತ್ವಷ್ಟ, ವಿಶ್ವಕರ್ಮ, ತುಂಬುರು, ಮೊದಲಾದ ಯೋನಿಜರೂ, ಅಯೋನಿಜರೂ, ವಾಯುಭಕ್ಷರೂ, ಹುತಾಶಿನರು ಎಲ್ಲರೂ ಸರ್ವಲೋಕಗಳ ಒಡೆಯ ವಜ್ರಿಯನ್ನು ಉಪಾಸಿಸುತ್ತಾರೆ.

02007014a ಸಹದೇವಃ ಸುನೀಥಶ್ಚ ವಾಲ್ಮೀಕಿಶ್ಚ ಮಹಾತಪಾಃ|

02007014c ಸಮೀಕಃ ಸತ್ಯವಾಂಶ್ಚೈವ ಪ್ರಚೇತಾಃ ಸತ್ಯಸಂಗರಃ||

02007015a ಮೇಧಾತಿಥಿರ್ವಾಮದೇವಃ ಪುಲಸ್ತ್ಯಃ ಪುಲಹಃ ಕ್ರತುಃ|

02007015c ಮರುತ್ತಶ್ಚ ಮರೀಚಿಶ್ಚ ಸ್ಥಾಣುಶ್ಚಾತ್ರಿರ್ಮಹಾತಪಾಃ||

02007016a ಕಕ್ಷೀವಾನ್ಗೌತಮಸ್ತಾರ್ಕ್ಷ್ಯಸ್ತಥಾ ವೈಶ್ವಾನರೋ ಮುನಿಃ|

02007016c ಮುನಿಃ ಕಾಲಕವೃಕ್ಷೀಯ ಆಶ್ರಾವ್ಯೋಽಥ ಹಿರಣ್ಯದಃ|

02007016e ಸಂವರ್ತೋ ದೇವಹವ್ಯಶ್ಚ ವಿಷ್ವಕ್ಸೇನಶ್ಚ ವೀರ್ಯವಾನ್||

ಹಾಗೆಯೇ ಮಹಾತಪಸ್ವಿಗಳಾದ ಸಹದೇವ, ಸುನೀಥ, ವಾಲ್ಮೀಕಿ, ಸತ್ಯವಂತ ಸಮೀಕ, ಸತ್ಯಸಂಗರ ಪ್ರಚೇತ, ಮೇಧಾತಿಥಿ, ವಾಮದೇವ, ಪುಸಸ್ತ್ಯ, ಪುಲಹ, ಕ್ರತು, ಮರುತ್ತ, ಮರೀಚಿ, ಸ್ಥಾಣು, ಮಹಾತಪಸ್ವಿಗಳಾದ ಅತ್ರಿ, ಕಕ್ಷಿವಾನ್, ಗೌತಮ, ಆರ್ಕ್ಷ್ಯ, ಮುನಿ ವೈಶ್ವಾನರ, ಮುನಿ ಕಾಲಕವೃಕ್ಷೀಯ, ಆಶ್ರವ್ಯ, ಹಿರಣ್ಯದ, ಸಂವರ್ತ, ದೇವಹವ್ಯ, ಮತ್ತು ವೀರ್ಯವಾನ್ ವಿಷ್ವಕ್ಸೇನ.

02007017a ದಿವ್ಯಾ ಆಪಸ್ತಥೌಷಧ್ಯಃ ಶ್ರದ್ಧಾ ಮೇಧಾ ಸರಸ್ವತೀ|

02007017c ಅರ್ಥೋ ಧರ್ಮಶ್ಚ ಕಾಮಶ್ಚ ವಿದ್ಯುತಶ್ಚಾಪಿ ಪಾಂಡವ||

02007018a ಜಲವಾಹಾಸ್ತಥಾ ಮೇಘಾ ವಾಯವಃ ಸ್ತನಯಿತ್ನವಃ|

02007018c ಪ್ರಾಚೀ ದಿಗ್ಯಜ್ಞವಾಹಾಶ್ಚ ಪಾವಕಾಃ ಸಪ್ತವಿಂಶತಿಃ||

02007019a ಅಗ್ನೀಷೋಮೌ ತಥೇಂದ್ರಾಗ್ನೀ ಮಿತ್ರೋಽಥ ಸವಿತಾರ್ಯಮಾ|

02007019c ಭಗೋ ವಿಶ್ವೇ ಚ ಸಾಧ್ಯಾಶ್ಚ ಶುಕ್ರೋ ಮಂಥೀ ಚ ಭಾರತ||

02007020a ಯಜ್ಞಾಶ್ಚ ದಕ್ಷಿಣಾಶ್ಚೈವ ಗ್ರಹಾಃ ಸ್ತೋಭಾಶ್ಚ ಸರ್ವಶಃ|

02007020c ಯಜ್ಞವಾಹಾಶ್ಚ ಯೇ ಮಂತ್ರಾಃ ಸರ್ವೇ ತತ್ರ ಸಮಾಸತೇ||

ಪಾಂಡವ! ಭಾರತ! ದಿವ್ಯ ನದಿಗಳು, ಔಷಧಗಳು, ಶ್ರದ್ಧಾ, ಮೇಧಾ, ಸರಸ್ವತೀ, ಧರ್ಮ, ಅರ್ಥ, ಕಾಮ, ಮಿಂಚು, ಮಳೆಯ ಮೋಡಗಳು, ವಾಯು, ಗುಡುಗು, ಪೂರ್ವ ದಿಕ್ಕು, ಇಪ್ಪತ್ತೇಳು ಯಜ್ಞವಾಹಕ ಅಗ್ನಿಗಳು - ಅಗ್ನಿಶೋಮ, ಇಂದ್ರಾಗ್ನೀ, ಮಿತ್ರ, ಸವಿತ್ರು, ಯಮ, ಭಗ, ವಿಶ್ವ, ಸಾಧ್ಯ, ಶುಕ್ರ, ಮಂಥೀ, ಯಜ್ಞ, ದಕ್ಷಿಣ, ಗ್ರಹಗಳು, ಸರ್ವ ಸ್ತೋಭಗಳು, ಮತ್ತು ಯಜ್ಞವನ್ನು ಕೊಂಡೊಯ್ಯುವ ಎಲ್ಲ ಮಂತ್ರಗಳು ಅಲ್ಲಿ ಸೇರಿರುತ್ತಾರೆ.

02007021a ತಥೈವಾಪ್ಸರಸೋ ರಾಜನ್ಗಂಧರ್ವಾಶ್ಚ ಮನೋರಮಾಃ|

02007021c ನೃತ್ಯವಾದಿತ್ರಗೀತೈಶ್ಚ ಹಾಸ್ಯೈಶ್ಚ ವಿವಿಧೈರಪಿ|

02007021e ರಮಯಂತಿ ಸ್ಮ ನೃಪತೇ ದೇವರಾಜಂ ಶತಕ್ರತುಂ||

02007022a ಸ್ತುತಿಭಿರ್ಮಂಗಲೈಶ್ಚೈವ ಸ್ತುವಂತಃ ಕರ್ಮಭಿಸ್ತಥಾ|

02007022c ವಿಕ್ರಮೈಶ್ಚ ಮಹಾತ್ಮಾನಂ ಬಲವೃತ್ರನಿಷೂದನಂ||

ರಾಜನ್! ನೃಪತೇ! ಹಾಗೆಯೇ ಅಪ್ಸರೆಯರು, ಮನೋರಮ ಗಂಧರ್ವರು ವಿವಿಧ ನೃತ್ಯ, ವಾದ್ಯ, ಗೀತ, ಹಾಸ್ಯಗಳಿಂದ, ಸ್ತುತಿ, ಮಂಗಲ ಸ್ತುತಿಗಳಿಂದ ಕರ್ಮಗಳಿಂದ ಮಹಾತ್ಮ ವಿಕ್ರಮ ನೃಪತಿ ದೇವರಾಜ ಶತಕ್ರತು ಬಲವೃತ್ರನಿಷೂದನನನ್ನು ರಮಿಸುತ್ತಿರುತ್ತಾರೆ.

02007023a ಬ್ರಹ್ಮರಾಜರ್ಷಯಃ ಸರ್ವೇ ಸರ್ವೇ ದೇವರ್ಷಯಸ್ತಥಾ|

02007023c ವಿಮಾನೈರ್ವಿವಿಧೈರ್ದಿವ್ಯೈರ್ಭ್ರಾಜಮಾನೈರಿವಾಗ್ನಿಭಿಃ||

02007024a ಸ್ರಗ್ವಿಣೋ ಭೂಷಿತಾಶ್ಚಾನ್ಯೇ ಯಾಂತಿ ಚಾಯಾಂತಿ ಚಾಪರೇ|

02007024c ಬೃಹಸ್ಪತಿಶ್ಚ ಶುಕ್ರಶ್ಚ ತಸ್ಯಾಮಾಯಯತುಃ ಸಹ||

02007025a ಏತೇ ಚಾನ್ಯೇ ಚ ಬಹವೋ ಯತಾತ್ಮಾನೋ ಯತವ್ರತಾಃ|

02007025c ವಿಮಾನೈಶ್ಚಂದ್ರಸಂಕಾಶೈಃ ಸೋಮವತ್ಪ್ರಿಯದರ್ಶನಾಃ|

02007025e ಬ್ರಹ್ಮಣೋ ವಚನಾದ್ರಾಜನ್ಭೃಗುಃ ಸಪ್ತರ್ಷಯಸ್ತಥಾ||

ಸರ್ವ ಬ್ರಹ್ಮ ರಾಜರ್ಷಿಗಳು, ಸರ್ವ ದೇವರ್ಷಿಗಳು ಭೂಷಿತರಾಗಿ ಅಗ್ನಿಯಂತೆ ಬೆಳಗುತ್ತಿರುವ ವಿವಿಧ ದಿವ್ಯ ವಿಮಾನಗಳಲ್ಲಿ ಒಳಗೆ ಮತ್ತು ಹೊರಗೆ ಹೋಗುತ್ತಿರುತ್ತಾರೆ. ಬೃಹಸ್ಪತಿ ಶುಕ್ರರು ಒಟ್ಟಿಗೇ ಅವನಲ್ಲಿಗೆ ಹೋಗುತ್ತಿರುತ್ತಾರೆ. ಇವರು ಮತ್ತು ಇನ್ನೂ ಇತರ ಬಹಳಷ್ಟು ಯತಾತ್ಮ ಯತವ್ರತರು ಚಂದ್ರಸಂಕಾಶರು ಸೋಮನಂತೆ ಪ್ರಿಯದರ್ಶನರು ಬ್ರಹ್ಮನ ವಚನದಂತೆ ಬರುವ ಭೃಗು ಮುಂತಾದ ಸಪರ್ಷಿಗಳು ಬಂದು ಹೋಗುತ್ತಿರುತ್ತಾರೆ.

02007026a ಏಷಾ ಸಭಾ ಮಯಾ ರಾಜನ್ದೃಷ್ಟಾ ಪುಷ್ಕರಮಾಲಿನೀ|

02007026c ಶತಕ್ರತೋರ್ಮಹಾರಾಜ ಯಾಮ್ಯಾಂ ಶೃಣು ಮಮಾನಘ||

ರಾಜನ್! ಮಹಾರಾಜ! ಅನಘ! ಶತಕ್ರತುವಿನ ಈ ಪುಷ್ಕರಮಾಲಿನೀ ಸಭೆಯನ್ನು ನಾನು ನೋಡಿದಹಾಗೆ ಹೇಳಿದ್ದೇನೆ.”

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಸಭಾಕ್ರಿಯಾಪರ್ವಣಿ ಇಂದ್ರಸಭಾವರ್ಣನಂ ನಾಮ ಸಪ್ತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸಭಾಪರ್ವದಲ್ಲಿ ಸಭಾಕ್ರಿಯಾ ಪರ್ವದಲ್ಲಿ ಇಂದ್ರಸಭಾವರ್ಣನೆ ಎನ್ನುವ ಏಳನೆಯ ಅಧ್ಯಾಯವು.

Related image

Comments are closed.