Sabha Parva: Chapter 59

ಸಭಾ ಪರ್ವ: ದ್ಯೂತ ಪರ್ವ

೫೯

ದ್ರೌಪದಿಯನ್ನು ಕರೆದುಕೊಂಡು ಬಾ ಎಂದು ದುರ್ಯೋಧನನು ವಿದುರನಿಗೆ ಹೇಳಲು ವಿದುರನು ಅವನಿಗೆ ಎಚ್ಚರಿಸುವ ಮಾತುಗಳನ್ನಾಡುವುದು (೧-೧೨).

02059001 ದುರ್ಯೋಧನ ಉವಾಚ|

02059001a ಏಹಿ ಕ್ಷತ್ತರ್ದ್ರೌಪದೀಮಾನಯಸ್ವ

         ಪ್ರಿಯಾಂ ಭಾರ್ಯಾಂ ಸಮ್ಮತಾಂ ಪಾಂಡವಾನಾಂ|

02059001c ಸಮ್ಮಾರ್ಜತಾಂ ವೇಶ್ಮ ಪರೈತು ಶೀಘ್ರಂ

         ಆನಂದೋ ನಃ ಸಹ ದಾಸೀಭಿರಸ್ತು||

ದುರ್ಯೋಧನನು ಹೇಳಿದನು: “ಕ್ಷತ್ತ! ಇಲ್ಲಿ ಬಾ! ಪಾಂಡವರು ಗೌರವಿಸುವ ಪ್ರಿಯ ಭಾರ್ಯೆ ದ್ರೌಪದಿಯನ್ನು ಕರೆದುಕೊಂಡು ಬಾ! ತಕ್ಷಣವೇ ಅವಳು ನಮ್ಮ ಇತರ ದಾಸಿಯರೊಂದಿಗೆ ಮನೆಯನ್ನು ಗುಡಿಸಲಿ ಮತ್ತು ಇತರ ಕೆಲಸಗಳನ್ನು ಮಾಡಲಿ. ಅದನ್ನು ನೋಡಲು ಏನು ಸಂತೋಷ!”

02059002 ವಿದುರ ಉವಾಚ|

02059002a ದುರ್ವಿಭಾವ್ಯಂ ಭವತಿ ತ್ವಾದೃಶೇನ

         ನ ಮಂದ ಸಂಬುಧ್ಯಸಿ ಪಾಶಬದ್ಧಃ|

02059002c ಪ್ರಪಾತೇ ತ್ವಂ ಲಂಬಮಾನೋ ನ ವೇತ್ಸಿ

         ವ್ಯಾಘ್ರಾನ್ಮೃಗಃ ಕೋಪಯಸೇಽತಿಬಾಲ್ಯಾತ್||

ವಿದುರನು ಹೇಳಿದನು: “ನಿನ್ನಂಥವರಿಂದ ನಡೆಯಬಾರದ್ದುದು ನಡೆದುಹೋಗುತ್ತದೆ. ಮೂಢ! ಪಾಶವನ್ನು ಸುತ್ತಿಹಾಕಿಕೊಳ್ಳುತ್ತಿದ್ದೀಯೆ ಎನ್ನುವುದು ನಿನಗೆ ತಿಳಿಯುತ್ತಿಲ್ಲ. ಸಿಟ್ಟಾದ ಹುಲಿಯ ಮೇಲೆ ಬೀಳುವ ಜಿಂಕೆಯಂತೆ ನೀನು ತಿಳಿಯದೇ ಪ್ರಪಾತದಲ್ಲಿ ನೇತಾಡುತ್ತಿದ್ದೀಯೆ.

02059003a ಆಶೀವಿಷಾಃ ಶಿರಸಿ ತೇ ಪೂರ್ಣಕೋಶಾ ಮಹಾವಿಷಾಃ|

02059003c ಮಾ ಕೋಪಿಷ್ಠಾಃ ಸುಮಂದಾತ್ಮನ್ಮಾ ಗಮಸ್ತ್ವಂ ಯಮಕ್ಷಯಂ||

ಮಹಾವಿಷದಿಂದ ತುಂಬಿದ ವಿಷಸರ್ಪಗಳನ್ನು ತಲೆಯಮೇಲೆ ಹೊತ್ತಿದ್ದೀಯೆ. ಮಂದಾತ್ಮ! ಅವರನ್ನು ಇನ್ನೂ ಸಿಟ್ಟಿಗೆಬ್ಬಿಸಬೇಡ. ನೀನು ಯಮಕ್ಷಯಕ್ಕೆ ಹೋಗುತ್ತೀಯೆ.

02059004a ನ ಹಿ ದಾಸೀತ್ವಮಾಪನ್ನಾ ಕೃಷ್ಣಾ ಭವತಿ ಭಾರತ|

02059004c ಅನೀಶೇನ ಹಿ ರಾಜ್ಞೈಷಾ ಪಣೇ ನ್ಯಸ್ತೇತಿ ಮೇ ಮತಿಃ||

ಭಾರತ! ತನ್ನ ಮೇಲಿನ ಒಡೆತನವನ್ನು ಕಳೆದುಕೊಂಡ ನಂತರವೇ ರಾಜನು ಅವಳನ್ನು ಪಡವಾಗಿಟ್ಟಿದುದರಿಂದ ಕೃಷ್ಣೆಯು ಇನ್ನೂ ದಾಸಿಯಾಗಿಲ್ಲ ಎನ್ನುವುದು ನನ್ನ ಅಭಿಪ್ರಾಯ.

02059005a ಅಯಂ ಧತ್ತೇ ವೇಣುರಿವಾತ್ಮಘಾತೀ

         ಫಲಂ ರಾಜಾ ಧೃತರಾಷ್ಟ್ರಸ್ಯ ಪುತ್ರಃ|

02059005c ದ್ಯೂತಂ ಹಿ ವೈರಾಯ ಮಹಾಭಯಾಯ

         ಪಕ್ವೋ ನ ಬುಧ್ಯತ್ಯಯಮಂತಕಾಲೇ||

ತನ್ನನ್ನೇ ನಾಶಪಡಿಸುವ ಬಿದಿರು ಹೇಗೆ ಹೂವನ್ನು ನೀಡುತ್ತದೆಯೋ ಹಾಗೆ ರಾಜ ಧೃತರಾಷ್ಟ್ರ ಪುತ್ರನು ಫಲವನ್ನು ನೀಡುತ್ತಿದ್ದಾನೆ. ಯಮಾಂತಕಾಲವನ್ನು ಪ್ರಾಪ್ತಿ ಹೊಂದಿದ ಇವನಿಗೆ ದ್ಯೂತವು ಮಹಾಭಯಂಕರ ವೈರಕ್ಕೆ ದಾರಿಮಾಡಿಕೊಡುತ್ತದೆ ಎನ್ನುವುದನ್ನು ತಿಳಿದಿಲ್ಲ.

02059006a ನಾರುಂತುದಃ ಸ್ಯಾನ್ನ ನೃಶಂಸವಾದೀ

         ನ ಹೀನತಃ ಪರಮಭ್ಯಾದದೀತ|

02059006c ಯಯಾಸ್ಯ ವಾಚಾ ಪರ ಉದ್ವಿಜೇತ

         ನ ತಾಂ ವದೇದ್ರುಶತೀಂ ಪಾಪಲೋಕ್ಯಾಂ||

ಕೆಟ್ಟದ್ದನ್ನು ಮಾಡಬೇಡ, ಕೆಟ್ಟದ್ದನ್ನು ಮಾತನಾಡಬೇಡ. ಏನೂ ಇಲ್ಲದವನಿಂದ ಎಲ್ಲವನ್ನೂ ಕಸಿಯಬೇಡ. ಘಾಯಗೊಂಡಿರುವವನಿಗೆ ಏನನ್ನು ಹೇಳಿದರೆ ಇನ್ನೊಬ್ಬರಿಗೆ ದುಃಖವನ್ನುಂಟುಮಾಡುತ್ತದೆಯೋ ಅಂಥಹ ಮಾತುಗಳನ್ನಾಡಬೇಡ.

02059007a ಸಮುಚ್ಚರಂತ್ಯತಿವಾದಾ ಹಿ ವಕ್ತ್ರಾದ್

         ಯೈರಾಹತಃ ಶೋಚತಿ ರಾತ್ರ್ಯಹಾನಿ|

02059007c ಪರಸ್ಯ ನಾಮರ್ಮಸು ತೇ ಪತಂತಿ

         ತಾನ್ಪಂಡಿತೋ ನಾವಸೃಜೇತ್ಪರೇಷು||

ಬಾಯಿಂದ ಹೊರಬರುವ ಮಾತುಗಳು ಯಾರನ್ನು ತಲುಪುತ್ತದೆಯೋ ಅವನು ಹಗಲು ರಾತ್ರಿ ಶೋಕಿಸುತ್ತಾನೆ. ಇನ್ನೊಬ್ಬರಿಗೆ ನೋವನ್ನುಂಟುಮಾಡುವ ಮಾತುಗಳನ್ನು ಪಂಡಿತರು ಆಡುವುದೇ ಇಲ್ಲ.

02059008a ಅಜೋ ಹಿ ಶಸ್ತ್ರಮಖನತ್ಕಿಲೈಕಃ

         ಶಸ್ತ್ರೇ ವಿಪನ್ನೇ ಪದ್ಭಿರಪಾಸ್ಯ ಭೂಮಿಂ|

02059008c ನಿಕೃಂತನಂ ಸ್ವಸ್ಯ ಕಂಠಸ್ಯ ಘೋರಂ

         ತದ್ವದ್ವೈರಂ ಮಾ ಖನೀಃ ಪಾಂಡುಪುತ್ರೈಃ||

ಕಳೆದು ಹೋದ ಖಡ್ಗವನ್ನು ಒಂದು ಆಡು ಭೂಮಿಯನ್ನು ಪರಚಿ ಅಗೆದು ತೆಗೆಯಿತಂತೆ. ಆದರೆ ಮುಂದೆ ಅದೇ ಖಡ್ಗವು ಅದರ ಕುತ್ತಿಗೆಯನ್ನು ಕಡಿಯುವ ಘೋರ ಸಾಧನವಾಯಿತಂತೆ. ಆದುದರಿಂದ ಪಾಂಡುಪುತ್ರರೊಂದಿಗೆ ವೈರವನ್ನು ಬಗೆಯಬೇಡ.

02059009a ನ ಕಿಂ ಚಿದೀಡ್ಯಂ ಪ್ರವದಂತಿ ಪಾಪಂ

         ವನೇಚರಂ ವಾ ಗೃಹಮೇಧಿನಂ ವಾ|

02059009c ತಪಸ್ವಿನಂ ಸಂಪರಿಪೂರ್ಣವಿದ್ಯಂ

         ಭಷಂತಿ ಹೈವಂ ಶ್ವನರಾಃ ಸದೈವ||

ಅಂಥವರು ವನೇಚರರ ಮೇಲೆ ಅಥವಾ ಗೃಹಸ್ಥರಮೇಲೆ ಅಥವಾ ಪರಿಪೂರ್ಣ ವಿಧ್ಯಾವಂತರಾದ ತಪಸ್ವಿಗಳ ಮೇಲೆ ಒಳ್ಳೆಯದನ್ನಾಗಲೀ ಕೆಟ್ಟದ್ದನ್ನಾಗಲೀ ಮಾತನಾಡುವುದಿಲ್ಲ. ಆದರೆ ಅವರು ನಾಯಿಗಳಂತೆ ಸದಾ ಬೊಗಳುತ್ತಿರುತ್ತಾರೆ.

02059010a ದ್ವಾರಂ ಸುಘೋರಂ ನರಕಸ್ಯ ಜಿಹ್ಮಂ

         ನ ಬುಧ್ಯಸೇ ಧೃತರಾಷ್ಟ್ರಸ್ಯ ಪುತ್ರ|

02059010c ತ್ವಾಮನ್ವೇತಾರೋ ಬಹವಃ ಕುರೂಣಾಂ

         ದ್ಯೂತೋದಯೇ ಸಹ ದುಃಶಾಸನೇನ||

ಧೃತರಾಷ್ಟ್ರ ಪುತ್ರ! ಇದೊಂದು ಘೋರ ನರಕದ ಕಡೆ ತೆರೆಯುವ ದ್ವಾರ ಎಂದು ನಿನಗೆ ತಿಳಿದಿಲ್ಲ. ಈ ದ್ಯೂತದೊಂದಿಗೆ ಅಲ್ಲಿಗೆ ನಿನ್ನನ್ನು ದುಃಶಾಸನನ ಸಹಿತ ಅಲ್ಲಿ ಇನ್ನೂ ಬಹಳಷ್ಟು ಕುರುಗಳು ಹಿಂಬಾಲಿಸುವರು.

02059011a ಮಜ್ಜಂತ್ಯಲಾಬೂನಿ ಶಿಲಾಃ ಪ್ಲವಂತೇ

         ಮುಹ್ಯಂತಿ ನಾವೋಽಂಭಸಿ ಶಶ್ವದೇವ|

02059011c ಮೂಢೋ ರಾಜಾ ಧೃತರಾಷ್ಟ್ರಸ್ಯ ಪುತ್ರೋ

         ನ ಮೇ ವಾಚಃ ಪಥ್ಯರೂಪಾಃ ಶೃಣೋತಿ||

ಮೂಢ ರಾಜ ಧೃತರಾಷ್ಟ್ರನ ಪುತ್ರನು ಪದ್ಯರೂಪದ ನನ್ನ ಈ ಮಾತುಗಳನ್ನು ಕೇಳದಿದ್ದರೆ ಹಲಗೆಗಳು ಮುಳುಗುತ್ತವೆ ಮತ್ತು ಕಲ್ಲುಗಳು ತೇಲುತ್ತವೆ. ಹಡಗುಗಳು ಸಮುದ್ರದಲ್ಲಿ ಶಾಶ್ವತವಾಗಿ ದಾರಿತಪ್ಪುತ್ತವೆ.

02059012a ಅಂತೋ ನೂನಂ ಭವಿತಾಯಂ ಕುರೂಣಾಂ

         ಸುದಾರುಣಃ ಸರ್ವಹರೋ ವಿನಾಶಃ|

02059012c ವಾಚಃ ಕಾವ್ಯಾಃ ಸುಹೃದಾಂ ಪಥ್ಯರೂಪಾ

         ನ ಶ್ರೂಯಂತೇ ವರ್ಧತೇ ಲೋಭ ಏವ||

ತಿಳಿದಿರುವವರ ಮತ್ತು ಸುಹೃದಯರ ಪದ್ಯರೂಪದ ಮಾತುಗಳನ್ನು ಕೇಳದ ಮತ್ತು ಲೋಭವನ್ನು ವೃದ್ಧಿಸುತ್ತಿರುವ ಇದು ಕುರುಗಳ ಸುದಾರುಣ, ಸರ್ವಹರ ವಿನಾಶವನ್ನು ತರುತ್ತದೆ.””

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ವಿದುರವಾಕ್ಯೇ ಏಕೋನಷಷ್ಟಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ವಿದುರವಾಕ್ಯ ಎನ್ನುವ ಐವತ್ತೊಂಭತ್ತನೆಯ ಅಧ್ಯಾಯವು.

Related image

Comments are closed.