ಸಭಾ ಪರ್ವ: ದ್ಯೂತ ಪರ್ವ
೫೫
ವಿದುರನ ಹಿತವಚನ
ವಿದುರನು ದ್ಯೂತವನ್ನು ನಿಲ್ಲಿಸುವಂತೆ ಧೃತರಾಷ್ಟ್ರನಲ್ಲಿ ಕೇಳಿಕೊಂಡಿದುದು (೧-೧೭).
02055001 ವಿದುರ ಉವಾಚ|
02055001a ಮಹಾರಾಜ ವಿಜಾನೀಹಿ ಯತ್ತ್ವಾಂ ವಕ್ಷ್ಯಾಮಿ ತಚ್ಶೃಣು|
02055001c ಮುಮೂರ್ಷೋರೌಷಧಮಿವ ನ ರೋಚೇತಾಪಿ ತೇ ಶ್ರುತಂ||
ವಿದುರನು ಹೇಳಿದನು: “ಮಹಾರಾಜ! ಸಾಯುತ್ತಿರುವವನಿಗೆ ಔಷಧಿಯು ಹೇಗೆ ಹಿಡಿಸುವುದಿಲ್ಲವೋ ಹಾಗೆ ನಿನಗೆ ಇದನ್ನು ಕೇಳಲು ಇಷ್ಟವಿಲ್ಲದಿದ್ದರೂ ನಾನು ಈಗ ಏನು ಹೇಳುವೆನೋ ಅದನ್ನು ಕೇಳು.
02055002a ಯದ್ವೈ ಪುರಾ ಜಾತಮಾತ್ರೋ ರುರಾವ
ಗೋಮಾಯುವದ್ವಿಸ್ವರಂ ಪಾಪಚೇತಾಃ|
02055002c ದುರ್ಯೋಧನೋ ಭಾರತಾನಾಂ ಕುಲಘ್ನಃ
ಸೋಽಯಂ ಯುಕ್ತೋ ಭವಿತಾ ಕಾಲಹೇತುಃ||
ಹುಟ್ಟಿದಾಕ್ಷಣವೇ ಯಾರು ನರಿಯ ಹಾಗೆ ವಿಸ್ವರವಾಗಿ ಕೂಗಿದನೋ ಆ ಪಾಪಚೇತಸ ದುರ್ಯೋಧನನೇ ಭಾರತರ ಕುಲಘ್ನ! ಅವನೇ ನಮ್ಮ ಸಾವಿಗೆ ಕಾರಣನಾಗುತ್ತಾನೆ.
02055003a ಗೃಹೇ ವಸಂತಂ ಗೋಮಾಯುಂ ತ್ವಂ ವೈ ಮತ್ವಾ ನ ಬುಧ್ಯಸೇ|
02055003c ದುರ್ಯೋಧನಸ್ಯ ರೂಪೇಣ ಶೃಣು ಕಾವ್ಯಾಂ ಗಿರಂ ಮಮ||
ದುರ್ಯೋಧನನ ರೂಪದಲ್ಲಿ ಮನೆಯಲ್ಲಿಯೇ ನರಿಯೊಂದು ವಾಸಿಸುತ್ತಿದೆ ಎಂದು ತಿಳಿದೂ ನೀನು ಜಾಗರೂಕತೆಯನ್ನು ವಹಿಸಲಿಲ್ಲ. ಕಾವ್ಯನ ಮಾತನ್ನು ನನ್ನಿಂದ ಕೇಳು.
02055004a ಮಧು ವೈ ಮಾಧ್ವಿಕೋ ಲಬ್ಧ್ವಾ ಪ್ರಪಾತಂ ನಾವಬುಧ್ಯತೇ|
02055004c ಆರುಹ್ಯ ತಂ ಮಜ್ಜತಿ ವಾ ಪತನಂ ವಾಧಿಗಚ್ಛತಿ||
ಸರಾಯಿಯನ್ನು ಕುಡಿಯುವವನು ಕೆಳಗೆ ಬೀಳುತ್ತಾನೆ ಎನ್ನುವುದನ್ನು ತಿಳಿದಿರುವುದಿಲ್ಲ. ಮೇಲೇರಿದ ಅವನಿಗೆ ಕೆಳಗೆ ಬೀಳುತ್ತೇನೆ ಎನ್ನುವುದರ ಅರಿವು ಇರುವುದಿಲ್ಲ.
02055005a ಸೋಽಯಂ ಮತ್ತೋಽಕ್ಷದೇವೇನ ಮಧುವನ್ನ ಪರೀಕ್ಷತೇ|
02055005c ಪ್ರಪಾತಂ ಬುಧ್ಯತೇ ನೈವ ವೈರಂ ಕೃತ್ವಾ ಮಹಾರಥೈಃ||
ಇವನು, ಜೂಜಾಟದ ಸರಾಯಿಯಿಂದ ಮತ್ತನಾಗಿ ಸುತ್ತ ಮುತ್ತ ಏನನ್ನೂ ನೋಡುತ್ತಿಲ್ಲ. ಈ ಮಹಾರಥಿಗಳೊಂದಿಗೆ ವೈರವನ್ನು ಸಾಧಿಸಿ ಪ್ರಪಾತವನ್ನು ಕಾಣುತ್ತಾನೆ ಎನ್ನುವ ತಿಳುವಳಿಕೆ ಅವನಿಗಿಲ್ಲ.
02055006a ವಿದಿತಂ ತೇ ಮಹಾರಾಜ ರಾಜಸ್ವೇವಾಸಮಂಜಸಂ|
02055006c ಅಂಧಕಾ ಯಾದವಾ ಭೋಜಾಃ ಸಮೇತಾಃ ಕಂಸಮತ್ಯಜನ್||
02055007a ನಿಯೋಗಾಚ್ಚ ಹತೇ ತಸ್ಮಿನ್ ಕೃಷ್ಣೇನಾಮಿತ್ರಘಾತಿನಾ|
02055007c ಏವಂ ತೇ ಜ್ಞಾತಯಃ ಸರ್ವೇ ಮೋದಮಾನಾಃ ಶತಂ ಸಮಾಃ||
ಮಹಾರಾಜ! ರಾಜರಿಗೆ ಯಾವುದು ಅಸಮಂಜಸ ಎನ್ನುವುದು ನಿನಗೆ ತಿಳಿದೇ ಇದೆ. ಅಂಧಕರು, ಯಾದವರು ಮತ್ತು ಭೋಜರು ಸಮೇತರಾಗಿ ಕಂಸನನ್ನು ತಿರಸ್ಕರಿಸಿದರು. ಅವರ ಇಚ್ಛೆಯಂತೆ ಅಮಿತ್ರಘಾತಿ ಕೃಷ್ಣನು ಅವನನ್ನು ಸಂಹರಿಸಿದಾಗ, ಅವನ ಕುಲದವರು ಎಲ್ಲರೂ ನೂರು ವರ್ಷಗಳ ಪರ್ಯಂತ ಸಂತೋಷವನ್ನಾಚರಿಸಿದರು.
02055008a ತ್ವನ್ನಿಯುಕ್ತಃ ಸವ್ಯಸಾಚೀ ನಿಗೃಹ್ಣಾತು ಸುಯೋಧನಂ|
02055008c ನಿಗ್ರಹಾದಸ್ಯ ಪಾಪಸ್ಯ ಮೋದಂತಾಂ ಕುರವಃ ಸುಖಂ||
ನಿನ್ನ ನಿಯುಕ್ತಿಯಂತೆ ಸವ್ಯಸಾಚಿಯು ಸುಯೋಧನನನ್ನು ನಿಗ್ರಹಿಸಲಿ ಮತ್ತು ಈ ಪಾಪಿಯ ನಿಗ್ರಹದಿಂದಾಗಿ ಕುರುಗಳು ಸುಖ ಸಂತೋಷವನ್ನು ಹೊಂದಲಿ.
02055009a ಕಾಕೇನೇಮಾಂಶ್ಚಿತ್ರಬರ್ಹಾಂ ಶಾರ್ದೂಲಾನ್ಕ್ರೋಷ್ಟುಕೇನ ಚ|
02055009c ಕ್ರೀಣೀಷ್ವ ಪಾಂಡವಾನ್ರಾಜನ್ಮಾ ಮಜ್ಜೀಃ ಶೋಕಸಾಗರೇ||
ಈ ಕಾಗೆಯಿಂದ ನವಿಲುಗಳನ್ನು ಪಡೆ. ಈ ನರಿಯಿಂದ ಹುಲಿಗಳನ್ನು ಹೊಂದು. ಪಾಂಡವರನ್ನು ಕೊಂಡುಕೋ. ರಾಜನ್! ಶೋಕಸಾಗರದಲ್ಲಿ ಮುಳುಗಬೇಡ.
02055010a ತ್ಯಜೇತ್ಕುಲಾರ್ಥೇ ಪುರುಷಂ ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್|
02055010c ಗ್ರಾಮಂ ಜನಪದಸ್ಯಾರ್ಥೇ ಆತ್ಮಾರ್ಥೇ ಪೃಥಿವೀಂ ತ್ಯಜೇತ್||
ಕುಲವನ್ನುಳಿಸಲು ಪುರುಷನನ್ನು ತ್ಯಜಿಸು. ಗ್ರಾಮವನ್ನುಳಿಸಲು ಕುಲವನ್ನು ತ್ಯಜಿಸು. ರಾಷ್ಟವನ್ನುಳಿಸಲು ಗ್ರಾಮವನ್ನು ತ್ಯಜಿಸು. ಮತ್ತು ಆತ್ಮವನ್ನು ಉಳಿಸಿಕೊಳ್ಳಲು ಪೃಥ್ವಿಯನ್ನೇ ತ್ಯಜಿಸು.
02055011a ಸರ್ವಜ್ಞಃ ಸರ್ವಭಾವಜ್ಞಃ ಸರ್ವಶತ್ರುಭಯಂಕರಃ|
02055011c ಇತಿ ಸ್ಮ ಭಾಷತೇ ಕಾವ್ಯೋ ಜಂಭತ್ಯಾಗೇ ಮಹಾಸುರಾನ್||
ಹೀಗೆ ಸರ್ವಜ್ಞ ಸರ್ವಭಾವಜ್ಞ ಸರ್ವಶತ್ರುಭಯಂಕರ ಕಾವ್ಯನು ಜಂಭನನ್ನು ತ್ಯಜಿಸುವಂತೆ ಮಹಾ ಅಸುರರಿಗೆ ಹೇಳಿದ್ದನು.
02055012a ಹಿರಣ್ಯಷ್ಠೀವಿನಃ ಕಶ್ಚಿತ್ಪಕ್ಷಿಣೋ ವನಗೋಚರಾನ್|
02055012c ಗೃಹೇ ಕಿಲ ಕೃತಾವಾಸಾಽಲ್ಲೋಭಾದ್ರಾಜನ್ನಪೀಡಯತ್||
ರಾಜನ್! ವನದಲ್ಲಿ ಸಂಚರಿಸುತ್ತಿದ್ದ ಬಂಗಾರದ ಮೊಟ್ಟೆಗಳನ್ನು ಇಡುತ್ತಿದ್ದ ಯಾವುದೋ ಪಕ್ಷಿಯನ್ನು ಓರ್ವನು ಮನೆಗೆ ತೆಗೆದುಕೊಂಡು ಹೋಗಿ ಲೋಭದಿಂದ ಅದನ್ನು ಕೊಂದ ಎನ್ನುವುದನ್ನು ಕೇಳಿದ್ದೇವೆ.
02055013a ಸದೋಪಭೋಜ್ಯಾಽಲ್ಲೋಭಾಂಧೋ ಹಿರಣ್ಯಾರ್ಥೇ ಪರಂತಪ|
02055013c ಆಯತಿಂ ಚ ತದಾತ್ವಂ ಚ ಉಭೇ ಸದ್ಯೋ ವ್ಯನಾಶಯತ್||
ಪರಂತಪ! ಈ ಮನುಷ್ಯನು ಹಿರಣ್ಯದ ಆಸೆಯಿಂದ ಕುರುಡನಾಗಿ ಯಾವುದನ್ನು ಅವಲಂಬಿಸಿ ಸದಾ ವಾಸಿಸಬಹುದಾದೋ ಆ ಪಕ್ಷಿಯನ್ನೇ ಕೊಂದು ಒಂದೇ ಏಟಿನಲ್ಲಿ ಏನೆಲ್ಲ ಹೊಂದಿದ್ದನೋ ಮತ್ತು ಮುಂದೆ ಹೊಂದಬಹುದಾಗಿತ್ತೋ ಅವೆಲ್ಲವನ್ನೂ ನಾಶಪಡಿಸಿದನು.
02055014a ತದಾತ್ವಕಾಮಃ ಪಾಂಡೂಂಸ್ತ್ವಂ ಮಾ ದ್ರುಹೋ ಭರತರ್ಷಭ|
02055014c ಮೋಹಾತ್ಮಾ ತಪ್ಯಸೇ ಪಶ್ಚಾತ್ಪಕ್ಷಿಹಾ ಪುರುಷೋ ಯಥಾ||
ಭರತರ್ಷಭ! ತಕ್ಷಣ ದೊರೆಯುವ ಲಾಭಕ್ಕಾಗಿ ಪಾಂಡವರನ್ನು ದ್ವೇಷಿಸಬೇಡ. ಪಕ್ಷಿಯನ್ನು ಕೊಂದವನಂತೆ ನೀನೂ ಕೂಡ ನಂತರ ನೊಂದುತ್ತೀಯೆ.
02055015a ಜಾತಂ ಜಾತಂ ಪಾಂಡವೇಭ್ಯಃ ಪುಷ್ಪಮಾದತ್ಸ್ವ ಭಾರತ|
02055015c ಮಾಲಾಕಾರ ಇವಾರಾಮೇ ಸ್ನೇಹಂ ಕುರ್ವನ್ಪುನಃ ಪುನಃ||
ಭಾರತ! ಮಾಲಾಕಾರನಂತೆ ಪಾಂಡವರೆನ್ನುವ ಹೂವಿನ ತೋಟದಲ್ಲಿ ಪುನಃ ಪುನಃ ಅವರೊಂದಿಗೆ ಸ್ನೇಹದಿಂದಿದ್ದು, ಪುಷ್ಪಗಳು ಹುಟ್ಟುತ್ತಿದ್ದ ಹಾಗೆ ಒಂದೊಂದಾಗಿ ಅವನ್ನು ತೆಗೆದುಕೋ.
02055016a ವೃಕ್ಷಾನಂಗಾರಕಾರೀವ ಮೈನಾನ್ಧಾಕ್ಷೀಃ ಸಮೂಲಕಾನ್|
02055016c ಮಾ ಗಮಃ ಸಸುತಾಮಾತ್ಯಃ ಸಬಲಶ್ಚ ಪರಾಭವಂ||
ಇದ್ದಿಲು ಸುಡುವವನು ಮರವನ್ನು ಬೇರಿನ ಸಹಿತ ಸುಡುವಹಾಗೆ ಇವರನ್ನು ಸುಡಬೇಡ. ಮಕ್ಕಳು, ಅಮಾತ್ಯರು ಮತ್ತು ಸೇನೆಯೊಂದಿಗೆ ಪರಾಭವದೆಡೆಗೆ ಹೋಗಬೇಡ.
02055017a ಸಮವೇತಾನ್ ಹಿ ಕಃ ಪಾರ್ಥಾನ್ಪ್ರತಿಯುಧ್ಯೇತ ಭಾರತ|
02055017c ಮರುದ್ಭಿಃ ಸಹಿತೋ ರಾಜನ್ನಪಿ ಸಾಕ್ಷಾನ್ಮರುತ್ಪತಿಃ||
ರಾಜನ್! ಭಾರತ! ಒಂದಾಗಿರುವ ಪಾರ್ಥರನ್ನು ಯಾರುತಾನೆ ಯುದ್ಧದಲ್ಲಿ ಜಯಿಸಬಲ್ಲರು? ಸಾಕ್ಷಾತ್ ಮರುತ್ಪತಿಯು ಮರುತ್ತುಗಳ ಸಮೇತ ಬಂದರೂ ಸಾಧ್ಯವಿಲ್ಲ.”
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ವಿದುರಹಿತವಾಕ್ಯೇ ಪಂಚಪಂಚಶತ್ತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ವಿದುರಹಿತವಾಕ್ಯ ಎನ್ನುವ ಐವತೈದನೆಯ ಅಧ್ಯಾಯವು.