ಸಭಾ ಪರ್ವ: ದ್ಯೂತ ಪರ್ವ
೫೪
ಯುಧಿಷ್ಠಿರನು ಪಣಗಳನ್ನು ಸೋತುದು
ಮುಂದಿನ ಆರು ಪಣಗಳನ್ನೂ ಯುಧಿಷ್ಠಿರನು ಸೋತುದು (೧-೨೯).
02054001 ಯುಧಿಷ್ಠಿರ ಉವಾಚ|
02054001a ಮತ್ತಃ ಕೈತವಕೇನೈವ ಯಜ್ಜಿತೋಽಸ್ಮಿ ದುರೋದರಂ|
02054001c ಶಕುನೇ ಹಂತ ದೀವ್ಯಾಮೋ ಗ್ಲಹಮಾನಾಃ ಸಹಸ್ರಶಃ||
ಯುಧಿಷ್ಠಿರನು ಹೇಳಿದನು: “ನಿನ್ನ ಚಾಕಚಕ್ಯತೆಯಿಂದ ನನ್ನನ್ನು ಮೋಹಗೊಳಿಸಿ ನೀನು ಈ ಆಟವನ್ನು ಗೆದ್ದಿದ್ದೀಯೆ ಶಕುನಿ! ಆಗಲಿ. ಈಗ ಜೂಜಾಡೋಣ. ಸಾವಿರಾರು ಬಾರಿ ದಾಳಗಳನ್ನು ಹಿಡಿಯೋಣ.
02054002a ಇಮೇ ನಿಷ್ಕಸಹಸ್ರಸ್ಯ ಕುಂಡಿನೋ ಭರಿತಾಃ ಶತಂ|
02054002c ಕೋಶೋ ಹಿರಣ್ಯಮಕ್ಷಯ್ಯಂ ಜಾತರೂಪಮನೇಕಶಃ|
02054002e ಏತದ್ರಾಜನ್ಧನಂ ಮಹ್ಯಂ ತೇನ ದೀವ್ಯಾಮ್ಯಹಂ ತ್ವಯಾ||
ಪ್ರತಿಯೊಂದರಲ್ಲಿಯೂ ಒಂದೊಂದು ಸಾವಿರ ಚಿನ್ನದ ನಾಣ್ಯಗಳಿಂದ ತುಂಬಿರುವ ನೂರು ಕುಂಡಿಗಳಿವೆ. ನನ್ನ ಕೋಶವು ಅಕ್ಷಯ ಹಿರಣ್ಯವನ್ನೂ ಅನೇಕ ಚಿನ್ನವನ್ನೂ ಹೊಂದಿದೆ. ರಾಜನ್! ನನ್ನ ಈ ಧನವನ್ನು ನಿನಗಾಗಿ ಪಣವನ್ನಿಟ್ಟು ಆಡುತ್ತೇನೆ.””
02054003 ವೈಶಂಪಾಯನ ಉವಾಚ|
02054003a ಇತ್ಯುಕ್ತಃ ಶಕುನಿಃ ಪ್ರಾಹ ಜಿತಮಿತ್ಯೇವ ತಂ ನೃಪಂ|
ವೈಶಂಪಾಯನನು ಹೇಳಿದನು: “ಅವನು ಹೀಗೆ ಹೇಳಲು ಶಕುನಿಯು ನೃಪನಿಗೆ “ಇದನ್ನೂ ಗೆದ್ದೆ!” ಎಂದು ಕೂಗಿ ಹೇಳಿದನು.
02054004 ಯುಧಿಷ್ಠಿರ ಉವಾಚ|
02054004a ಅಯಂ ಸಹಸ್ರಸಮಿತೋ ವೈಯಾಘ್ರಃ ಸುಪ್ರವರ್ತಿತಃ|
02054004c ಸುಚಕ್ರೋಪಸ್ಕರಃ ಶ್ರೀಮಾನ್ಕಿಂಕಿಣೀಜಾಲಮಂಡಿತಃ||
02054005a ಸಂಹ್ರಾದನೋ ರಾಜರಥೋ ಯ ಇಹಾಸ್ಮಾನುಪಾವಹತ್|
02054005c ಜೈತ್ರೋ ರಥವರಃ ಪುಣ್ಯೋ ಮೇಘಸಾಗರನಿಃಸ್ವನಃ||
02054006a ಅಷ್ಟೌ ಯಂ ಕುರರಚ್ಛಾಯಾಃ ಸದಶ್ವಾ ರಾಷ್ಟ್ರಸಮ್ಮತಾಃ|
02054006c ವಹಂತಿ ನೈಷಾಮುಚ್ಯೇತ ಪದಾ ಭೂಮಿಮುಪಸ್ಪೃಶನ್|
02054006e ಏತದ್ರಾಜನ್ಧನಂ ಮಹ್ಯಂ ತೇನ ದೀವ್ಯಾಮ್ಯಹಂ ತ್ವಯಾ||
ಯುಧಿಷ್ಠಿರನು ಹೇಳಿದನು: “ಇದೋ ನನ್ನ ಸಹಸ್ರ ಸಮಿತ, ವೈಯಾಗ್ರ, ಸುಪ್ರವರ್ತಿತ, ಸುಂದರ ಚಕ್ರಗಳಿಂದ ನಡೆಯುವ, ಪ್ರಸಿದ್ಧ, ಗಂಟೆಗಳ ಮಾಲೆಗಳಿಂದ ಅಲಂಕೃತ, ನಮ್ಮನ್ನು ಇಲ್ಲಿಗೆ ಕರೆದುತಂದ ಗುಡುಗಿನ ಧ್ವನಿಯ ವಿಜಯಶಾಲಿ, ಪುಣ್ಯ, ಮೇಘಸಾಗರಗಳಂತೆ ಘರ್ಜಿಸುವ, ಬೂದುಬಣ್ಣದ ರಾಷ್ಟ್ರದಲ್ಲಿಯೇ ಪ್ರಶಂಸೆಗೊಂಡ, ಭೂಮಿಯ ಮೇಲೆ ನಡೆಯುವ ಯಾರೂ ಇವರಿಂದ ತಪ್ಪಿಸಿಕೊಳ್ಳದ, ಒಳ್ಳೆಯ ಎಂಟು ಅಶ್ವಗಳಿಂದ ಎಳೆಯಲ್ಪಡುವ, ರಾಜರಥ. ರಾಜನ್! ನನ್ನ ಈ ಧನವನ್ನು ನಾನು ನಿನಗೆ ಕೊಡುತ್ತಿದ್ದೇನೆ.””
02054007 ವೈಶಂಪಾಯನ ಉವಾಚ|
02054007a ಏತಚ್ಛೃತ್ವಾ ವ್ಯವಸಿತೋ ನಿಕೃತಿಂ ಸಮುಪಾಶ್ರಿತಃ|
02054007c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ||
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು.
02054008 ಯುಧಿಷ್ಠಿರ ಉವಾಚ|
02054008a ಸಹಸ್ರಸಂಖ್ಯಾ ನಾಗಾ ಮೇ ಮತ್ತಾಸ್ತಿಷ್ಠಂತಿ ಸೌಬಲ|
02054008c ಹೇಮಕಕ್ಷಾಃ ಕೃತಾಪೀಡಾಃ ಪದ್ಮಿನೋ ಹೇಮಮಾಲಿನಃ||
ಯುಧಿಷ್ಠಿರನು ಹೇಳಿದನು: “ಸೌಬಲ! ನನ್ನಲ್ಲಿ ಮದಿಸಿದ ಆನೆಗಳು ಸಹಸ್ರಸಂಖ್ಯೆಯಲ್ಲಿವೆ. ಇವುಗಳು ಬಂಗಾರದ ಫಲಕಗಳನ್ನು ಬಂಗಾರದ ಮಾಲೆಗಳನ್ನು ಮತ್ತು ಅಲ್ಲಲ್ಲಿ ಕಮಲಗಳನ್ನು ಧರಿಸಿವೆ.
02054009a ಸುದಾಂತಾ ರಾಜವಹನಾಃ ಸರ್ವಶಬ್ದಕ್ಷಮಾ ಯುಧಿ|
02054009c ಈಷಾದಂತಾ ಮಹಾಕಾಯಾಃ ಸರ್ವೇ ಚಾಷ್ಟಕರೇಣವಃ||
ರಾಜವಾಹನಗಳಾದ ಅವು ಚೆನ್ನಾಗಿ ಪಳಗಿಸಲ್ಪಟ್ಟಿವೆ ಮತ್ತು ರಣರಂಗದಲ್ಲಿ ಸರ್ವ ಶಬ್ಧಗಳನ್ನೂ ಸಹಿಸಬಲ್ಲವು. ಆ ಮಹಾಕಾಯಗಳ ದಂತಗಳು ಕಬ್ಬಿನಷ್ಟು ಉದ್ದಗಿವೆ, ಮತ್ತು ಪ್ರತಿಯೊಂದಕ್ಕೂ ಎಂಟು ಹೆಣ್ಣಾನೆಗಳ ಹಿಂಡಿವೆ.
02054010a ಸರ್ವೇ ಚ ಪುರಭೇತ್ತಾರೋ ನಗಮೇಘನಿಭಾ ಗಜಾಃ|
02054010c ಏತದ್ರಾಜನ್ಧನಂ ಮಹ್ಯಂ ತೇನ ದೀವ್ಯಾಮ್ಯಹಂ ತ್ವಯಾ||
ಅವೆಲ್ಲವೂ ಮುಂದಿರುವುದನ್ನು ಉರುಳಿಸಬಲ್ಲ ಪರ್ವತ ಮತ್ತು ಮೋಡಗಳಿಂತಿರುವ ಆನೆಗಳು. ರಾಜನ್! ನನ್ನ ಈ ಧನವನ್ನು ನಾನು ನಿನಗೆ ಕೊಡುತ್ತಿದ್ದೇನೆ.””
02054011 ವೈಶಂಪಾಯನ ಉವಾಚ|
02054011a ತಮೇವಂವಾದಿನಂ ಪಾರ್ಥಂ ಪ್ರಹಸನ್ನಿವ ಸೌಬಲಃ|
02054011c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ||
ವೈಶಂಪಾಯನನು ಹೇಳಿದನು: “ಪಾರ್ಥನ ಈ ಮಾತಿಗೆ ಶಕುನಿ ಸೌಬಲನು ನಕ್ಕು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು.
02054012 ಯುಧಿಷ್ಠಿರ ಉವಾಚ|
02054012a ಶತಂ ದಾಸೀಸಹಸ್ರಾಣಿ ತರುಣ್ಯೋ ಮೇ ಪ್ರಭದ್ರಿಕಾಃ|
02054012c ಕಂಬುಕೇಯೂರಧಾರಿಣ್ಯೋ ನಿಷ್ಕಕಂಠ್ಯಃ ಸ್ವಲಂಕೃತಾಃ||
ಯುಧಿಷ್ಠಿರನು ಹೇಳಿದನು: “ನನ್ನಲ್ಲಿ ನೂರು ಸಾವಿರ ಬಳೆ ಮತ್ತು ತೋಳುಬಂದಿಗಳನ್ನು ಧರಿಸಿದ, ಬಂಗಾರದ ಹಾರಗಳಿಂದ ಅಲಂಕೃತಗೊಂಡ ಅತಿಸುಂದರ ತರುಣಿ ದಾಸಿಯರಿದ್ದಾರೆ.
02054013a ಮಹಾರ್ಹಮಾಲ್ಯಾಭರಣಾಃ ಸುವಸ್ತ್ರಾಶ್ಚಂದನೋಕ್ಷಿತಾಃ|
02054013c ಮಣೀನ್ ಹೇಮ ಚ ಬಿಭ್ರತ್ಯಃ ಸರ್ವಾ ವೈ ಸೂಕ್ಷ್ಮವಾಸಸಃ||
ಅವರೆಲ್ಲರೂ ಬೆಲೆಬಾಳುವ ಮಾಲ್ಯಾಭರಣಗಳನ್ನೂ, ಸುಂದರ ವಸ್ತ್ರಗಳನ್ನೂ, ಚಂದನಲೇಪನಗಳನ್ನೂ, ಹೇಮ ಮಣಿಗಳನ್ನೂ, ಮತ್ತು ಸೂಕ್ಷ್ಮ ವಸ್ತ್ರಗಳನ್ನೂ ಧರಿಸಿದ್ದಾರೆ.
02054014a ಅನುಸೇವಾಂ ಚರಂತೀಮಾಃ ಕುಶಲಾ ನೃತ್ಯಸಾಮಸು|
02054014c ಸ್ನಾತಕಾನಾಮಮಾತ್ಯಾನಾಂ ರಾಜ್ಞಾಂ ಚ ಮಮ ಶಾಸನಾತ್|
02054014e ಏತದ್ರಾಜನ್ಧನಂ ಮಹ್ಯಂ ತೇನ ದೀವ್ಯಾಮ್ಯಹಂ ತ್ವಯಾ||
ನೃತ್ಯಗಾನದಲ್ಲಿ ಕುಶಲರಾದ ಇವರು ನನ್ನ ಶಾಸನದಂತೆ ಸ್ನಾತಕರು, ಅಮಾತ್ಯರು ಮತ್ತು ರಾಜರುಗಳ ಸೇವೆಯಲ್ಲಿ ನಿರತರಾಗಿರುತ್ತಾರೆ. ರಾಜನ್! ನನ್ನ ಈ ಧನವನ್ನು ನಾನು ನಿನಗೆ ಕೊಡುತ್ತಿದ್ದೇನೆ.””
02054015 ವೈಶಂಪಾಯನ ಉವಾಚ|
02054015a ಏತಚ್ಛೃತ್ವಾ ವ್ಯವಸಿತೋ ನಿಕೃತಿಂ ಸಮುಪಾಶ್ರಿತಃ|
02054015c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ||
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು.
02054016 ಯುಧಿಷ್ಠಿರ ಉವಾಚ|
02054016a ಏತಾವಂತ್ಯೇವ ದಾಸಾನಾಂ ಸಹಸ್ರಾಣ್ಯುತ ಸಂತಿ ಮೇ|
02054016c ಪ್ರದಕ್ಷಿಣಾನುಲೋಮಾಶ್ಚ ಪ್ರಾವಾರವಸನಾಃ ಸದಾ||
02054017a ಪ್ರಾಜ್ಞಾ ಮೇಧಾವಿನೋ ದಕ್ಷಾ ಯುವಾನೋ ಮೃಷ್ಟಕುಂಡಲಾಃ|
02054017c ಪಾತ್ರೀಹಸ್ತಾ ದಿವಾರಾತ್ರಮತಿಥೀನ್ಭೋಜಯಂತ್ಯುತ|
02054017e ಏತದ್ರಾಜನ್ಧನಂ ಮಹ್ಯಂ ತೇನ ದೀವ್ಯಾಮ್ಯಹಂ ತ್ವಯಾ||
ಯುಧಿಷ್ಠಿರನು ಹೇಳಿದನು: “ನನ್ನಲ್ಲಿ ಅಷ್ಟೇ ಸಹಸ್ರ ಸಂಖ್ಯೆಯಲ್ಲಿ ದಾಸರಿದ್ದಾರೆ. ಇವರು ಕುಶಲರು ಮತ್ತು ಹೇಳಿದ ಹಾಗೆ ನಡೆದುಕೊಳ್ಳುವವರು. ಸದಾ ಸುಂದರ ವಸ್ತ್ರಗಳನ್ನು ಧರಿಸಿರುತ್ತಾರೆ. ಪ್ರಜ್ಞಾವಂತರು, ಮೇಧಾವಿಗಳು, ದಕ್ಷರೂ ಆದ ಈ ಯುವಕರು ನುಣುಪಾದ ಕುಂಡಲಗಳನ್ನು ಧರಿಸಿರುತ್ತಾರೆ. ಇವರು ಪಾತ್ರೆಗಳನ್ನು ಹಿಡಿದು ದಿನರಾತ್ರಿಯೂ ಅತಿಥಿಗಳಿಗೆ ಭೋಜನವನ್ನು ನೀಡುತ್ತಾರೆ. ರಾಜನ್! ಈ ನನ್ನ ಧನವನ್ನು ನಿನಗೆ ನಾನು ಕೊಡುತ್ತಿದ್ದೇನೆ.””
02054018 ವೈಶಂಪಾಯನ ಉವಾಚ|
02054018a ಏತಚ್ಛೃತ್ವಾ ವ್ಯವಸಿತೋ ನಿಕೃತಿಂ ಸಮುಪಾಶ್ರಿತಃ|
02054018c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ||
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು.
02054019 ಯುಧಿಷ್ಠಿರ ಉವಾಚ|
02054019a ರಥಾಸ್ತಾವಂತ ಏವೇಮೇ ಹೇಮಭಾಂಡಾಃ ಪತಾಕಿನಃ|
02054019c ಹಯೈರ್ವಿನೀತೈಃ ಸಂಪನ್ನಾ ರಥಿಭಿಶ್ಚಿತ್ರಯೋಧಿಭಿಃ||
02054020a ಏಕೈಕೋ ಯತ್ರ ಲಭತೇ ಸಹಸ್ರಪರಮಾಂ ಭೃತಿಂ|
02054020c ಯುಧ್ಯತೋಽಯುಧ್ಯತೋ ವಾಪಿ ವೇತನಂ ಮಾಸಕಾಲಿಕಂ|
02054020e ಏತದ್ರಾಜನ್ಧನಂ ಮಹ್ಯಂ ತೇನ ದೀವ್ಯಾಮ್ಯಹಂ ತ್ವಯಾ||
ಯುಧಿಷ್ಠಿರನು ಹೇಳಿದನು: “ಅಷ್ಟೇ ಸಂಖ್ಯೆಯ ಬಂಗಾರದಿಂದ ಮಾಡಲ್ಪಟ್ಟ, ಧ್ವಜಗಳನ್ನು ಹೊಂದಿದ, ವಿನೀತ ಹಯ, ಸಾರಥಿ ಮತ್ತು ಯೋಧರಿಂದ ಸಂಪನ್ನ ರಥಗಳು ನನ್ನಲ್ಲಿವೆ. ಒಬ್ಬೊಬ್ಬ ಯೋಧನಿಗೂ ಯುದ್ಧವಿರಲಿ ಯುದ್ಧವಿಲ್ಲದಿರಲಿ ಒಂದು ತಿಂಗಳಿಗೆ ಸಾವಿರಕ್ಕೂ ಹೆಚ್ಚು ಸಂಬಳವು ದೊರೆಯುತ್ತದೆ. ರಾಜನ್! ಈ ನನ್ನ ಧನವನ್ನು ನಾನು ನಿನಗೆ ಪಣವಾಗಿ ಇಡುತ್ತಿದ್ದೇನೆ.””
02054021 ವೈಶಂಪಾಯನ ಉವಾಚ|
02054021a ಇತ್ಯೇವಮುಕ್ತೇ ಪಾರ್ಥೇನ ಕೃತವೈರೋ ದುರಾತ್ಮವಾನ್|
02054021c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ||
ವೈಶಂಪಾಯನನು ಹೇಳಿದನು: “ಪಾರ್ಥನ ಈ ಮಾತುಗಳಿಗೆ ಕೃತವೈರಿ ದುರಾತ್ಮ ಶಕುನಿಯು ಯುಧಿಷ್ಠಿರನಿಗೆ “ಇದನ್ನೂ ಗೆದ್ದೆ!” ಎಂದು ಹೇಳಿದನು.
02054022 ಯುಧಿಷ್ಠಿರ ಉವಾಚ|
02054022a ಅಶ್ವಾಂಸ್ತಿತ್ತಿರಿಕಲ್ಮಾಷಾನ್ಗಾಂಧರ್ವಾನ್ ಹೇಮಮಾಲಿನಃ|
02054022c ದದೌ ಚಿತ್ರರಥಸ್ತುಷ್ಟೋ ಯಾಂಸ್ತಾನ್ಗಾಂಡೀವಧನ್ವನೇ|
02054022e ಏತದ್ರಾಜನ್ಧನಂ ಮಹ್ಯಂ ತೇನ ದೀವ್ಯಾಮ್ಯಹಂ ತ್ವಯಾ||
ಯುಧಿಷ್ಠಿರನು ಹೇಳಿದನು: “ಗಾಂಡೀವಧನ್ವನಿಗೆ ಸಂತುಷ್ಟನಾದ ಚಿತ್ರರಥನು ನೀಡಿದ ತ್ತಿತ್ತಿರಿ ಬಣ್ಣದ ಹೇಮಮಾಲಿನಿ ಗಂಧರ್ವ ಅಶ್ವಗಳಿವೆ. ರಾಜನ್! ನನ್ನ ಈ ಧನವನ್ನು ನಾನು ನಿನಗೆ ಪಣವಾಗಿ ನೀಡುತ್ತಿದ್ದೇನೆ.””
02054023 ವೈಶಂಪಾಯನ ಉವಾಚ|
02054023a ಏತಚ್ಛೃತ್ವಾ ವ್ಯವಸಿತೋ ನಿಕೃತಿಂ ಸಮುಪಾಶ್ರಿತಃ|
02054023c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ||
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು.
02054024 ಯುಧಿಷ್ಠಿರ ಉವಾಚ|
02054024a ರಥಾನಾಂ ಶಕಟಾನಾಂ ಚ ಹಯಾನಾಂ ಚಾಯುತಾನಿ ಮೇ|
02054024c ಯುಕ್ತಾನಾಮೇವ ತಿಷ್ಠಂತಿ ವಾಹೈರುಚ್ಚಾವಚೈರ್ವೃತಾಃ||
02054025a ಏವಂ ವರ್ಣಸ್ಯ ವರ್ಣಸ್ಯ ಸಮುಚ್ಚೀಯ ಸಹಸ್ರಶಃ|
02054025c ಕ್ಷೀರಂ ಪಿಬಂತಸ್ತಿಷ್ಠಂತಿ ಭುಂಜಾನಾಃ ಶಾಲಿತಂಡುಲಾನ್||
02054026a ಷಷ್ಟಿಸ್ತಾನಿ ಸಹಸ್ರಾಣಿ ಸರ್ವೇ ಪೃಥುಲವಕ್ಷಸಃ|
02054026c ಏತದ್ರಾಜನ್ಧನಂ ಮಹ್ಯಂ ತೇನ ದೀವ್ಯಾಮ್ಯಹಂ ತ್ವಯಾ||
ಯುಧಿಷ್ಠಿರನು ಹೇಳಿದನು: “ನನ್ನಲ್ಲಿ ಲೆಖ್ಕವಿಲ್ಲದಷ್ಟು ರಥಗಳು, ಬಂಡಿಗಳು ಮತ್ತು ನನಗಾಗಿ ಕಟ್ಟಿದ ಕುದುರೆಗಳಿವೆ. ಇವುಗಳ ಸುತ್ತಲೂ ಬೇರೆ ಬೇರೆ ರೀತಿಯ ಪಶುಪ್ರಾಣಿಗಳಿವೆ. ಇವುಗಳೊಂದಿಗೆ ನನ್ನಲ್ಲಿ ಹಾಲುಕುಡಿದು ಪಾಯಸವನ್ನು ತಿಂದು ವಿಶಾಲ ವಕ್ಷಸ್ಥರಾದ ಬೇರೆ ಬೇರೆ ವರ್ಣಗಳಿಂದ ಸಾವಿರ ಸಾವಿರ ಆರಿಸಿದ ಅರವತ್ತು ಸಾವಿರ ಪುರುಷರಿದ್ದಾರೆ. ರಾಜನ್! ನನ್ನ ಈ ಧನವನ್ನು ನಿನಗೆ ನಾನು ಕೊಡುತ್ತಿದ್ದೇನೆ.””
02054027 ವೈಶಂಪಾಯನ ಉವಾಚ|
02054027a ಏತಚ್ಛೃತ್ವಾ ವ್ಯವಸಿತೋ ನಿಕೃತಿಂ ಸಮುಪಾಶ್ರಿತಃ|
02054027c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ||
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು.
02054028 ಯುಧಿಷ್ಠಿರ ಉವಾಚ|
02054028a ತಾಮ್ರಲೋಹೈಃ ಪರಿವೃತಾ ನಿಧಯೋ ಮೇ ಚತುಹ್ಶತಾಃ|
02054028c ಪಂಚದ್ರೌಣಿಕ ಏಕೈಕಃ ಸುವರ್ಣಸ್ಯಾಹತಸ್ಯ ವೈ|
02054028e ಏತದ್ರಾಜನ್ಧನಂ ಮಹ್ಯಂ ತೇನ ದೀವ್ಯಾಮ್ಯಹಂ ತ್ವಯಾ||
ಯುಧಿಷ್ಠಿರನು ಹೇಳಿದನು: “ನನ್ನಲ್ಲಿ ತಾಮ್ರ ಮತ್ತು ಕಬ್ಬಿಣಗಳಿಂದ ಮಾಡಿದ ನಾಲ್ಕು ನೂರು ನಿಧಿಗಳಿವೆ. ಇವುಗಳೊಂದೊಂದರಲ್ಲಿಯೂ ಐದು ದ್ರೌಣಿ ಗಟ್ಟಿ ಬಂಗಾರವಿದೆ. ರಾಜನ್! ನನ್ನ ಈ ಧನವನ್ನು ನಾನು ನಿನಗೆ ಪಣವಾಗಿ ಇಡುತ್ತಿದ್ದೇನೆ.””
02054029 ವೈಶಂಪಾಯನ ಉವಾಚ|
02054029a ಏತಚ್ಛೃತ್ವಾ ವ್ಯವಸಿತೋ ನಿಕೃತಿಂ ಸಮುಪಾಶ್ರಿತಃ|
02054029c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ||
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು.
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ದೇವನೇ ಚತುಃಪಂಚಶತ್ತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ದೇವನೆ ಎನ್ನುವ ಐವತ್ನಾಲ್ಕನೆಯ ಅಧ್ಯಾಯವು.