Sabha Parva: Chapter 49

ಸಭಾ ಪರ್ವ: ದ್ಯೂತ ಪರ್ವ

೪೯

“ಕಿರಿಯ ವಂಶವು ವರ್ಧಿಸುತ್ತಿರಲು ಜ್ರೇಷ್ಠ ವಂಶವು ನಶಿಸುತ್ತಿದೆ” ಎಂದು ಪಾಂಡವರ ಯಾಗದ ವೈಭವವನ್ನು ದುರ್ಯೋಧನನು ವರ್ಣಿಸಿ ಅಸೂಯೆ ಪಡುವುದು (೧-೨೫).

02049001 ದುರ್ಯೋಧನ ಉವಾಚ|

02049001a ಆರ್ಯಾಸ್ತು ಯೇ ವೈ ರಾಜಾನಃ ಸತ್ಯಸಂಧಾ ಮಹಾವ್ರತಾಃ|

02049001c ಪರ್ಯಾಪ್ತವಿದ್ಯಾ ವಕ್ತಾರೋ ವೇದಾಂತಾವಭೃಥಾಪ್ಲುತಾಃ||

02049002a ಧೃತಿಮಂತೋ ಹ್ರೀನಿಷೇಧಾ ಧರ್ಮಾತ್ಮಾನೋ ಯಶಸ್ವಿನಃ|

02049002c ಮೂರ್ಧಾಭಿಷಿಕ್ತಾಸ್ತೇ ಚೈನಂ ರಾಜಾನಃ ಪರ್ಯುಪಾಸತೇ||

ದುರ್ಯೋಧನನು ಹೇಳಿದನು: “ಮೂರ್ಧಾಭಿಷಿಕ್ತ ರಾಜನನ್ನು ಅವಭೃತಸ್ನಾನದಿಂದ ಶುಚಿರ್ಭೂತರಾದ ಆರ್ಯ ಸತ್ಯಸಂಧ ಮಹಾವ್ರತ ವೇದಾಂತ ವಿದ್ಯಪರ್ಯಾಪ್ತ ವಕ್ತಾರ ಧೃತಿಮಂತ ವಿನಯವಂತ ಧರ್ಮಾತ್ಮ ಯಶಸ್ವಿ ರಾಜರು ಉಪಾಸಿಸಿದರು.

02049003a ದಕ್ಷಿಣಾರ್ಥಂ ಸಮಾನೀತಾ ರಾಜಭಿಃ ಕಾಂಸ್ಯದೋಹನಾಃ|

02049003c ಆರಣ್ಯಾ ಬಹುಸಾಹಸ್ರಾ ಅಪಶ್ಯಂ ತತ್ರ ತತ್ರ ಗಾಃ||

ಸೇರಿದ್ದ ರಾಜರು ಆರಣ್ಯರಿಗೆ ದಕ್ಷಿಣಾರ್ಥವಾಗಿ ತಂದಿದ್ದ ಹಾಲುಕರೆಯುವ ಪಾತ್ರೆಗಳೊಂದಿಗೆ ಗೋವುಗಳ ಸಾವಿರಾರು ಗುಂಪುಗಳು ಅಲ್ಲಲ್ಲಿ ಕಂಡುಬರುತ್ತಿದ್ದವು.

02049004a ಆಜಹ್ರುಸ್ತತ್ರ ಸತ್ಕೃತ್ಯ ಸ್ವಯಮುದ್ಯಮ್ಯ ಭಾರತ|

02049004c ಅಭಿಷೇಕಾರ್ಥಮವ್ಯಗ್ರಾ ಭಾಂಡಮುಚ್ಚಾವಚಂ ನೃಪಾಃ||

ಭಾರತ! ಅಭಿಷೇಕಾರ್ಥವಾಗಿ ಎಲ್ಲಾತರಹದ ಸಾಮಗ್ರಿಗಳನ್ನು ನೃಪರು ಸ್ವ‌ಇಚ್ಛೆಯಿಂದ ಸತ್ಕರಿಸಿ ತಂದಿದ್ದರು.

02049005a ಬಾಹ್ಲೀಕೋ ರಥಮಾಹಾರ್ಷೀಜ್ಜಾಂಬೂನದಪರಿಷ್ಕೃತಂ|

02049005c ಸುದಕ್ಷಿಣಸ್ತಂ ಯುಯುಜೇ ಶ್ವೇತೈಃ ಕಾಂಬೋಜಜೈರ್ಹಯೈಃ||

ಬಾಹ್ಲೀಕನು ಬಂಗಾರದಿಂದ ಪರಿಷ್ಕೃತ ರಥವನ್ನು ತಂದನು ಮತ್ತು ಕಟ್ಟಲು ಸುದಕ್ಷಿಣನು ಕಾಂಬೋಜದಲ್ಲಿ ಹುಟ್ಟಿದ್ದ ಶ್ವೇತಾಶ್ವಗಳನ್ನು ತಂದನು.

02049006a ಸುನೀಥೋಽಪ್ರತಿಮಂ ತಸ್ಯ ಅನುಕರ್ಷಂ ಮಹಾಯಶಾಃ|

02049006c ಧ್ವಜಂ ಚೇದಿಪತಿಃ ಕ್ಷಿಪ್ರಮಹಾರ್ಷೀತ್ ಸ್ವಯಮುದ್ಯತಂ||

ಚೇದಿಪತಿ ಸುನೀಥನು ಅವನಿಗೆ ಮಹಾಯಶಸ್ಸನ್ನು ನೀಡುವ ಅಪ್ರತಿಮ ಧ್ವಜವನ್ನು ತಾನೇ ಕ್ಷಿಪ್ರವಾಗಿ ತಯಾರಿಸಿ ತಂದನು.

02049007a ದಾಕ್ಷಿಣಾತ್ಯಃ ಸಂನಹನಂ ಸ್ರಗುಷ್ಣೀಷೇ ಚ ಮಾಗಧಃ|

02049007c ವಸುದಾನೋ ಮಹೇಷ್ವಾಸೋ ಗಜೇಂದ್ರಂ ಷಷ್ಟಿಹಾಯನಂ||

ದಕ್ಷಿಣಾತ್ಯನು ಕವಚವನ್ನು, ಮಾಗಧನು ಹಾರ ಮತ್ತು ಶಿರವಸ್ತ್ರಗಳನ್ನು, ಮತ್ತು ಮಹೇಷ್ವಾಸ ವಸುದಾನನು ಅರವತ್ತು ವರ್ಷದ ಅರಸಾನೆಯನ್ನು ತಂದರು.

02049008a ಮತ್ಸ್ಯಸ್ತ್ವಕ್ಷಾನವಾಬಧ್ನಾದೇಕಲವ್ಯ ಉಪಾನಹೌ|

02049008c ಆವಂತ್ಯಸ್ತ್ವಭಿಷೇಕಾರ್ಥಮಾಪೋ ಬಹುವಿಧಾಸ್ತಥಾ||

02049009a ಚೇಕಿತಾನ ಉಪಾಸಂಗಂ ಧನುಃ ಕಾಶ್ಯ ಉಪಾಹರತ್|

02049009c ಅಸಿಂ ರುಕ್ಮತ್ಸರುಂ ಶಲ್ಯಃ ಶೈಕ್ಯಂ ಕಾಂಚನಭೂಷಣಂ||

ಮತ್ಯ್ಸನು ಗಾಳವನ್ನು ಕಟ್ಟಿದನು. ಏಕಲವ್ಯನು ಕಾಲ್ಮಣೆಗಳನ್ನು ತಂದನು. ಆವಂತಿ ಮತ್ತು ಬಹುವಿಧಾನರು ಅಭಿಷೇಕಕ್ಕಾಗಿ ನೀರನ್ನೂ ತಂದರು. ಚೇಕಿತಾನನು ಭತ್ತಳಿಕೆಯನ್ನು ಬಿಗಿದನು ಮತ್ತು ಕಾಶ್ಯನು ಬಿಲ್ಲನ್ನು ನೀಡಿದನು. ಚಿನ್ನದ ಹಿಡಿಯಿದ್ದ ಖಡ್ಗ ಮತ್ತು ಕಾಂಚನಭೂಷಿತ ಗುರಾಣಿಯನ್ನು ಶಲ್ಯನು ನೀಡಿದನು.

02049010a ಅಭ್ಯಷಿಂಚತ್ತತೋ ಧೌಮ್ಯೋ ವ್ಯಾಸಶ್ಚ ಸುಮಹಾತಪಾಃ|

02049010c ನಾರದಂ ವೈ ಪುರಸ್ಕೃತ್ಯ ದೇವಲಂ ಚಾಸಿತಂ ಮುನಿಂ||

ನಾರದ ಮತ್ತು ಮುನಿ ಅಸಿತ ದೇವಲರನ್ನು ಮುಂದಿರಿಸಿಕೊಂಡು ಸುಮಹಾತಪ ಧೌಮ್ಯ ಮತ್ತು ವ್ಯಾಸರು ಅಭಿಷೇಕ ಮಾಡಿದರು.

02049011a ಪ್ರೀತಿಮಂತ ಉಪಾತಿಷ್ಠನ್ನಭಿಷೇಕಂ ಮಹರ್ಷಯಃ|

02049011c ಜಾಮದಗ್ನ್ಯೇನ ಸಹಿತಾಸ್ತಥಾನ್ಯೇ ವೇದಪಾರಗಾಃ||

02049012a ಅಭಿಜಗ್ಮುರ್ಮಹಾತ್ಮಾನಂ ಮಂತ್ರವದ್ಭೂರಿದಕ್ಷಿಣಂ|

02049012c ಮಹೇಂದ್ರಮಿವ ದೇವೇಂದ್ರಂ ದಿವಿ ಸಪ್ತರ್ಷಯೋ ಯಥಾ||

ಮಹರ್ಷಿಗಳು ಸಂತೋಷದಿಂದ ಅಭಿಷೇಕದಲ್ಲಿದ್ದರು. ವೇದಪಾರಗ ಅನ್ಯರು ಜಾಮದಗ್ನಿಯ ಸಹಿತ ಬಂದು ದಿವಿಯಲ್ಲಿ ದೇವೇಂದ್ರನಿಗೆ ಸಪ್ತರ್ಷಿಗಳು ಹೇಗೋ ಹಾಗೆ ಭೂರಿದಕ್ಷಿಣ ಮಹೇಂದ್ರನಿಗೆ ಮಂತ್ರೋಚ್ಛಾರಣೆ ಮಾಡಿದರು.

02049013a ಅಧಾರಯಚ್ಚತ್ರಮಸ್ಯ ಸಾತ್ಯಕಿಃ ಸತ್ಯವಿಕ್ರಮಃ|

02049013c ಧನಂಜಯಶ್ಚ ವ್ಯಜನೇ ಭೀಮಸೇನಶ್ಚ ಪಾಂಡವಃ||

ಸತ್ಯವಿಕ್ರಮಿ ಸಾತ್ಯಕಿಯು ಛತ್ರವನ್ನು, ಪಾಂಡವ ಧನಂಜಯ ಮತ್ತು ಭೀಮಸೇನರು ಚಾಮರಗಳನ್ನು ಹಿಡಿದಿದ್ದರು.

02049014a ಉಪಾಗೃಹ್ಣಾದ್ಯಮಿಂದ್ರಾಯ ಪುರಾಕಲ್ಪೇ ಪ್ರಜಾಪತಿಃ|

02049014c ತಮಸ್ಮೈ ಶಂಖಮಾಹಾರ್ಷೀದ್ವಾರುಣಂ ಕಲಶೋದಧಿಃ||

ಹಿಂದಿನ ಕಲ್ಪದಲ್ಲಿ ಪ್ರಜಾಪತಿಯು ಇಂದ್ರನಿಗೆ ನೀಡಿದ್ದ ಶಂಖವನ್ನು ಕಲಶೋದಧಿ ವರುಣನು ಅವನಿಗಾಗಿ ತಂದಿದ್ದನು.

02049015a ಸಿಕ್ತಂ ನಿಷ್ಕಸಹಸ್ರೇಣ ಸುಕೃತಂ ವಿಶ್ವಕರ್ಮಣಾ|

02049015c ತೇನಾಭಿಷಿಕ್ತಃ ಕೃಷ್ಣೇನ ತತ್ರ ಮೇ ಕಶ್ಮಲೋಽಭವತ್||

ವಿಶ್ವಕರ್ಮನಿಂದ ಸಾವಿರಾರು ಚಿನ್ನಗಳನ್ನು ಕೂಡಿಸಿ ಚೆನ್ನಾಗಿ ಮಾಡಲ್ಪಟ್ಟಿದ್ದ ತೂಗುಮಣೆಯ ಮೇಲೆ ಕೃಷ್ಣನಿಂದ ಅವನು ಅಭಿಷಿಕ್ತನಾದನು.

02049016a ಗಚ್ಛಂತಿ ಪೂರ್ವಾದಪರಂ ಸಮುದ್ರಂ ಚಾಪಿ ದಕ್ಷಿಣಂ|

02049016c ಉತ್ತರಂ ತು ನ ಗಚ್ಛಂತಿ ವಿನಾ ತಾತ ಪತತ್ರಿಭಿಃ||

ಪೂರ್ವಕ್ಕೆ ಹೋಗುತ್ತಾರೆ. ಹಾಗೆಯೇ ಪಶ್ಚಿಮ ಮತ್ತು ದಕ್ಷಿಣದ ಸಾಗರದವರೆಗೆ ಹೋಗುತ್ತಾರೆ. ಆದರೆ ತಾತ! ಪಕ್ಷಿಗಳ ಹೊರತು ಯಾರೂ ಉತ್ತರದ ಕಡೆ ಹೋಗುವುದಿಲ್ಲ.

02049017a ತತ್ರ ಸ್ಮ ದಧ್ಮುಃ ಶತಶಃ ಶಂಖಾನ್ಮಂಗಲ್ಯಕಾರಣಾತ್|

02049017c ಪ್ರಾಣದಂಸ್ತೇ ಸಮಾಧ್ಮಾತಾಸ್ತತ್ರ ರೋಮಾಣಿ ಮೇಽಹೃಷನ್||

ಮಂಗಲವನ್ನುಂಟುಮಾಡಲು ಅವರು ನೂರಾರು ಶಂಖಗಳನ್ನು ಊದಿದರು. ಅವುಗಳು ಊದಿ ಮೊಳಗಲು ನನ್ನ ರೋಮಗಳು ಎದ್ದು ನಿಂತವು.

02049018a ಪ್ರಣತಾ ಭೂಮಿಪಾಶ್ಚಾಪಿ ಪೇತುರ್ಹೀನಾಃ ಸ್ವತೇಜಸಾ|

02049018c ಧೃಷ್ಟದ್ಯುಮ್ನಃ ಪಾಂಡವಾಶ್ಚ ಸಾತ್ಯಕಿಃ ಕೇಶವೋಽಷ್ಟಮಃ||

02049019a ಸತ್ತ್ವಸ್ಥಾಃ ಶೌರ್ಯಸಂಪನ್ನಾ ಅನ್ಯೋನ್ಯಪ್ರಿಯಕಾರಿಣಃ|

02049019c ವಿಸಂಜ್ಞಾನ್ಭೂಮಿಪಾನ್ದೃಷ್ಟ್ವಾ ಮಾಂ ಚ ತೇ ಪ್ರಾಹಸಂಸ್ತದಾ||

ತಮ್ಮ ತೇಜಸ್ಸನ್ನು ಕಳೆದುಕೊಂಡ ಭೂಮಿಪರು ಸಾಷ್ಟಾಂಗ ಬಿದ್ದರು. ಅನ್ಯೋನ್ಯ ಮಿತ್ರರಾದ ಸತ್ವಸ್ತ ಶೌರ್ಯಸಂಪನ್ನ ಧೃಷ್ಟದ್ಯುಮ್ನ, ಪಾಂಡವರು, ಸಾತ್ಯಕಿ ಮತ್ತು ಎಂಟನೆಯವನಾಗಿ ಕೇಶವ ಇವರು ಮೂರ್ಛೆತಪ್ಪಿ ಬಿದ್ದಿದ್ದ ಭೂಮಿಪರನ್ನು ಮತ್ತು ನನ್ನನ್ನು ನೋಡಿ ಜೋರಾಗಿ ನಕ್ಕರು.  

02049020a ತತಃ ಪ್ರಹೃಷ್ಟೋ ಬೀಭತ್ಸುಃ ಪ್ರಾದಾದ್ಧೇಮವಿಷಾಣಿನಾಂ|

02049020c ಶತಾನ್ಯನಡುಹಾಂ ಪಂಚ ದ್ವಿಜಮುಖ್ಯೇಷು ಭಾರತ||

ಭಾರತ! ನಂತರ ಪ್ರಹೃಷ್ಟ ಬೀಭತ್ಸುವು ದ್ವಿಜಪ್ರಮುಖರಿಗೆ ಕೊಂಬುಗಳಿಗೆ ಚಿನ್ನದ ತಗಡುಗಳಿಂದ ಅಲಂಕೃತಗೊಂಡ ಐದುನೂರು ಎತ್ತುಗಳನ್ನು ನೀಡಿದನು.

02049021a ನೈವಂ ಶಂಬರಹಂತಾಭೂದ್ಯೌವನಾಶ್ವೋ ಮನುರ್ನ ಚ|

02049021c ನ ಚ ರಾಜಾ ಪೃಥುರ್ವೈನ್ಯೋ ನ ಚಾಪ್ಯಾಸೀದ್ಭಗೀರಥಃ||

02049022a ಯಥಾತಿಮಾತ್ರಂ ಕೌಂತೇಯಃ ಶ್ರಿಯಾ ಪರಮಯಾ ಯುತಃ|

02049022c ರಾಜಸೂಯಮವಾಪ್ಯೈವಂ ಹರಿಶ್ಚಂದ್ರ ಇವ ಪ್ರಭುಃ||

ಪ್ರಭು ಹರಿಶ್ಚಂದ್ರನಂತೆ ರಾಜಸೂಯವನ್ನು ಪೂರೈಸಿದ ಕೌಂತೇಯನಲ್ಲಿದ್ದಷ್ಟು ಪರಮ ಸಂಪತ್ತನ್ನು ಶಂಬರಹಂತಕ (ದಶರಥ) ನಾಗಲೀ, ಮನು ಯೌವನಾಶ್ವನಾಗಲೀ, ರಾಜ ಪೃಥು ವೈನ್ಯನಾಗಲೀ, ಭಗೀರಥನಾಗಲೀ ಹೊಂದಿರಲಿಲ್ಲ.

02049023a ಏತಾಂ ದೃಷ್ಟ್ವಾ ಶ್ರಿಯಂ ಪಾರ್ಥೇ ಹರಿಶ್ಚಂದ್ರೇ ಯಥಾ ವಿಭೋ|

02049023c ಕಥಂ ನು ಜೀವಿತಂ ಶ್ರೇಯೋ ಮಮ ಪಶ್ಯಸಿ ಭಾರತ||

ವಿಭೋ! ಭಾರತ! ಹರಿಶ್ಚಂದ್ರನಲ್ಲಿದ್ದಂಥಹ ಶ್ರೀಯು ಪಾರ್ಥನಲ್ಲಿರುವುದನ್ನು ನೋಡಿದ ನಾನು ಜೀವಂತವಿರುವುದು ಶ್ರೇಯ ಎಂದು ನಿನಗೆ ಹೇಗೆ ಅನ್ನಿಸುತ್ತಿದೆ?

02049024a ಅಂಧೇನೇವ ಯುಗಂ ನದ್ಧಂ ವಿಪರ್ಯಸ್ತಂ ನರಾಧಿಪ|

02049024c ಕನೀಯಾಂಸೋ ವಿವರ್ಧಂತೇ ಜ್ಯೇಷ್ಠಾ ಹೀಯಂತಿ ಭಾರತ||

ನರಾಧಿಪ! ಅಂಧನಿಗೆ ಕಟ್ಟಿದ ರಥದಂತೆ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ. ಭಾರತ! ಕಿರಿಯ ವಂಶವು ವರ್ಧಿಸುತ್ತಿರಲು ಜ್ರೇಷ್ಠ ವಂಶವು ನಶಿಸುತ್ತಿದೆ.

02049025a ಏವಂ ದೃಷ್ಟ್ವಾ ನಾಭಿವಿಂದಾಮಿ ಶರ್ಮ

         ಪರೀಕ್ಷಮಾಣೋಽಪಿ ಕುರುಪ್ರವೀರ|

02049025c ತೇನಾಹಮೇವಂ ಕೃಶತಾಂ ಗತಶ್ಚ

         ವಿವರ್ಣತಾಂ ಚೈವ ಸಶೋಕತಾಂ ಚ||

ಇದನ್ನು ನೋಡಿದ ನನಗೆ ಎಲ್ಲೆಡೆಯೂ ಕುರುಪ್ರವೀರರೇ ಕಾಣುತ್ತಿದ್ದಾರೆ. ತಾಣವೇ ಇಲ್ಲದಂಥಾಗಿದೆ. ಇದರಿಂದಾಗಿಯೇ ನಾನು ಕೃಶನಾಗಿದ್ದೇನೆ, ವಿವರ್ಣನಾಗಿದ್ದೇನೆ ಮತ್ತು ಶೋಕಿತನಾಗಿದ್ದೇನೆ.”

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ದುರ್ಯೋಧನಸಂತಾಪೇ ಏಕೋನಪಂಚಶತ್ತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ದುರ್ಯೋಧನಸಂತಾಪ ಎನ್ನುವ ನಲವತ್ತೊಂಭತ್ತನೆಯ ಅಧ್ಯಾಯವು.

Image result for indian motifs

Comments are closed.