ಸಭಾಪರ್ವ: ಸಭಾಕ್ರಿಯಾ ಪರ್ವ
೪
ಸಭಾಪ್ರವೇಶ
ಸಭಾಪ್ರವೇಶ (೧-೩೪).
02004001a ತತಃ ಪ್ರವೇಶನಂ ಚಕ್ರೇ ತಸ್ಯಾಂ ರಾಜಾ ಯುಧಿಷ್ಠಿರಃ|
02004001c ಅಯುತಂ ಭೋಜಯಾಮಾಸ ಬ್ರಾಹ್ಮಣಾನಾಂ ನರಾಧಿಪಃ||
02004002a ಘೃತಪಾಯಸೇನ ಮಧುನಾ ಭಕ್ಷ್ಯೈರ್ಮೂಲಫಲೈಸ್ತಥಾ|
02004002c ಅಹತೈಶ್ಚೈವ ವಾಸೋಭಿರ್ಮಾಲ್ಯೈರುಚ್ಚಾವಚೈರಪಿ||
ವೈಶಂಪಾಯನನು ಹೇಳಿದನು: “ಅನಂತರ ರಾಜ ಯುಧಿಷ್ಠಿರನು ಅದನ್ನು ಪ್ರವೇಶಿಸಿದನು. ಆ ಸಮಯದಲ್ಲಿ ನರಾಧಿಪನು ಹತ್ತು ಸಾವಿರ ಬ್ರಾಹ್ಮಣರಿಗೆ ಘೃತಪಾಯಸ, ಮಧು, ಮತ್ತು ಮೂಲಫಲಗಳ ಭಕ್ಷಗಳ ಭೋಜನವನ್ನಿತ್ತನು ಮತ್ತು ಅವರಿಗೆ ವಸ್ತ್ರ ಭೂಷಣ-ನಾನಾರೀತಿಯ ಮಾಲೆಗಳನ್ನು ಕೊಟ್ಟನು.
02004003a ದದೌ ತೇಭ್ಯಃ ಸಹಸ್ರಾಣಿ ಗವಾಂ ಪ್ರತ್ಯೇಕಶಃ ಪ್ರಭುಃ|
02004003c ಪುಣ್ಯಾಹಘೋಷಸ್ತತ್ರಾಸೀದ್ದಿವಸ್ಪೃಗಿವ ಭಾರತ||
ಪ್ರಭುವು ಪ್ರತಿಯೊಬ್ಬನಿಗೆ ಸಹಸ್ರ ಗೋವುಗಳನ್ನಿತ್ತನು. ಭಾರತ! ಅಲ್ಲಿಯ ಪುಣ್ಯಾಹಘೋಷವು ಸ್ವರ್ಗದವರೆಗೂ ಕೇಳಿಬರುತ್ತಿತ್ತು.
02004004a ವಾದಿತ್ರೈರ್ವಿವಿಧೈರ್ಗೀತೈರ್ಗಂಧೈರುಚ್ಚಾವಚೈರಪಿ|
02004004c ಪೂಜಯಿತ್ವಾ ಕುರುಶ್ರೇಷ್ಠೋ ದೈವತಾನಿ ನಿವೇಶ್ಯ ಚ||
02004005a ತತ್ರ ಮಲ್ಲಾ ನಟಾ ಝಲ್ಲಾಃ ಸೂತಾ ವೈತಾಲಿಕಾಸ್ತಥಾ|
02004005c ಉಪತಸ್ಥುರ್ಮಹಾತ್ಮಾನಂ ಸಪ್ತರಾತ್ರಂ ಯುಧಿಷ್ಠಿರಂ||
ಆ ಕುರುಶ್ರೇಷ್ಠನು ವಾದ್ಯಗಳು, ವಿವಿಧ ಗೀತಗಳು ಮತ್ತು ನಾನಾವಿಧದ ಸುಗಂಧಗಳಿಂದ ದೇವತೆಗಳನ್ನು ಪೂಜಿಸುತ್ತಿರಲು ಅಲ್ಲಿ ಮಲ್ಲರು, ನಟರು, ಝಲ್ಲರು, ಸೂತರು, ವೈತಾಲಿಕರು ಮಹಾತ್ಮ ಯುಧಿಷ್ಠಿರನನ್ನು ಏಳು ರಾತ್ರಿಗಳವರೆಗೆ ಸೇವಿಸಿದರು.
02004006a ತಥಾ ಸ ಕೃತ್ವಾ ಪೂಜಾಂ ತಾಂ ಭ್ರಾತೃಭಿಃ ಸಹ ಪಾಂಡವಃ|
02004006c ತಸ್ಯಾಂ ಸಭಾಯಾಂ ರಮ್ಯಾಯಾಂ ರೇಮೇ ಶಕ್ರೋ ಯಥಾ ದಿವಿ||
ಭ್ರಾತೃಗಳ ಸಹಿತ ಆ ರಮ್ಯ ಸಭೆಯನ್ನು ಪೂಜಿಸಿದ ಪಾಂಡವನು ದಿವಿಯಲ್ಲಿಯ ಶಕ್ರನ ಹಾಗೆ ರಮಿಸಿದನು.
02004007a ಸಭಾಯಾಮೃಷಯಸ್ತಸ್ಯಾಂ ಪಾಂಡವೈಃ ಸಹ ಆಸತೇ|
02004007c ಆಸಾಂ ಚಕ್ರುರ್ನರೇಂದ್ರಾಶ್ಚ ನಾನಾದೇಶಸಮಾಗತಾಃ||
ಆ ಸಭೆಯಲ್ಲಿ ಪಾಂಡವರ ಸಹಿತ ಋಷಿಗಳು ಕುಳಿತಿದ್ದರು. ಮತ್ತು ನಾನಾ ದೇಶಗಳಿಂದ ಸಮಾಗತ ನರೇಂದ್ರರೂ ಕುಳಿತಿದ್ದರು.
02004008a ಅಸಿತೋ ದೇವಲಃ ಸತ್ಯಃ ಸರ್ಪಮಾಲೀ ಮಹಾಶಿರಾಃ|
02004008c ಅರ್ವಾವಸುಃ ಸುಮಿತ್ರಶ್ಚ ಮೈತ್ರೇಯಃ ಶುನಕೋ ಬಲಿಃ||
02004009a ಬಕೋ ದಾಲ್ಭ್ಯಃ ಸ್ಥೂಲಶಿರಾಃ ಕೃಷ್ಣದ್ವೈಪಾಯನಃ ಶುಕಃ|
02004009c ಸುಮಂತುರ್ಜೈಮಿನಿಃ ಪೈಲೋ ವ್ಯಾಸಶಿಷ್ಯಾಸ್ತಥಾ ವಯಂ||
02004010a ತಿತ್ತಿರಿರ್ಯಾಜ್ಞವಲ್ಕ್ಯಶ್ಚ ಸಸುತೋ ಲೋಮಹರ್ಷಣಃ|
02004010c ಅಪ್ಸುಹೋಮ್ಯಶ್ಚ ಧೌಮ್ಯಶ್ಚ ಆಣೀಮಾಂಡವ್ಯಕೌಶಿಕೌ||
02004011a ದಾಮೋಷ್ಣೀಷಸ್ತ್ರೈವಣಿಶ್ಚ ಪರ್ಣಾದೋ ಘಟಜಾನುಕಃ|
02004011c ಮೌಂಜಾಯನೋ ವಾಯುಭಕ್ಷಃ ಪಾರಾಶರ್ಯಶ್ಚ ಸಾರಿಕೌ||
02004012a ಬಲವಾಕಃ ಶಿನೀವಾಕಃ ಸುತ್ಯಪಾಲಃ ಕೃತಶ್ರಮಃ|
02004012c ಜಾತೂಕರ್ಣಃ ಶಿಖಾವಾಂಶ್ಚ ಸುಬಲಃ ಪಾರಿಜಾತಕಃ||
02004013a ಪರ್ವತಶ್ಚ ಮಹಾಭಾಗೋ ಮಾರ್ಕಂಡೇಯಸ್ತಥಾ ಮುನಿಃ|
02004013c ಪವಿತ್ರಪಾಣಿಃ ಸಾವರ್ಣಿರ್ಭಾಲುಕಿರ್ಗಾಲವಸ್ತಥಾ||
02004014a ಜಂಘಾಬಂಧುಶ್ಚ ರೈಭ್ಯಶ್ಚ ಕೋಪವೇಗಶ್ರವಾ ಭೃಗುಃ|
02004014c ಹರಿಬಭ್ರುಶ್ಚ ಕೌಂಡಿನ್ಯೋ ಬಭ್ರುಮಾಲೀ ಸನಾತನಃ||
02004015a ಕಕ್ಷೀವಾನೌಶಿಜಶ್ಚೈವ ನಾಚಿಕೇತೋಽಥ ಗೌತಮಃ|
02004015c ಪೈಂಗೋ ವರಾಹಃ ಶುನಕಃ ಶಾಂಡಿಲ್ಯಶ್ಚ ಮಹಾತಪಾಃ|
02004015e ಕರ್ಕರೋ ವೇಣುಜಂಘಶ್ಚ ಕಲಾಪಃ ಕಠ ಏವ ಚ||
02004016a ಮುನಯೋ ಧರ್ಮಸಹಿತಾ ಧೃತಾತ್ಮಾನೋ ಜಿತೇಂದ್ರಿಯಾಃ|
02004016c ಏತೇ ಚಾನ್ಯೇ ಚ ಬಹವೋ ವೇದವೇದಾಂಗಪಾರಗಾಃ||
02004017a ಉಪಾಸತೇ ಮಹಾತ್ಮಾನಂ ಸಭಾಯಾಮೃಷಿಸತ್ತಮಾಃ|
02004017c ಕಥಯಂತಃ ಕಥಾಃ ಪುಣ್ಯಾ ಧರ್ಮಜ್ಞಾಃ ಶುಚಯೋಽಮಲಾಃ||
ಅಸಿತ ದೇವಲ, ಸತ್ಯ, ಸರ್ಪಮಾಲೀ, ಮಹಾಶಿರ, ಅರ್ವಾವಸು, ಸುಮಿತ್ರ, ಮೈತ್ರೇಯ, ಶುಲಕ, ಬಲಿ, ವಕ, ದಾಲ್ಭ್ಯ, ಸ್ಥೂಲಶಿರ, ಕೃಷ್ಣದ್ವೈಪಾಯನ, ವ್ಯಾಸಶಿಷ್ಯರಾದ ನಾನು, ಶುಕ, ಸುಮಂತು, ಜೈಮಿನಿ, ಮತ್ತು ಪೈಲ[2], ತಿತ್ತಿರಿ, ಯಾಜ್ಞವಲ್ಕ್ಯ, ಮಗನೊಂದಿಗೆ ಲೋಮಹರ್ಷಣ, ಅಪ್ಸುಹೋಮ, ಧೌಮ್ಯ, ಅಣೀಮಂಡವ್ಯ[3], ಕೌಶಿಕ, ದಾಮೋಷ್ಣೀಷ, ತ್ರೈವಣಿ, ಪರ್ಣಾದ, ಘಟಜಾನುಕ, ಮೌಂಜಾಯನ, ವಾಯುಭಕ್ಷ, ಪಾರಾಶರ್ಯ, ಸಾರಿಕ, ಬಲವಾಕ, ಶಿನೀವಾಕ, ಸುತ್ಯಪಾಲ, ಕೃತಶ್ರಮ, ಜಾತೂಕರ್ಣ, ಶಿಖಾವಾ, ಸುಬಲ, ಪಾರಿಜಾತಕ, ಪರ್ವತ, ಮಹಾಭಾಗ ಮಿನಿ ಮಾರ್ಕಾಂಡೇಯ, ಜಂಘಾಬಂಧು, ರೈಭ್ಯ, ಕೋಪವೇಗಸ್ರಬ, ಭೃಗು, ಹರಿಬಭ್ರು, ಕೌಂಡಿನ್ಯ, ಬಭೃಮಾಲೀ, ಸನಾತನ, ಕಕ್ಷೀವಾನ, ಔಷಿಷ, ನಾಚಿಕೇತ, ಗೌತಮ, ಮಹಾತಪರಾದ ಪೈಂಗ, ವರಾಹ, ಶುನಕ, ಶಾಂಡಿಲ್ಯ, ಕರ್ಕರ, ವೇಣುಜಂಘ, ಕಲಾಪ, ಕಠ, ಮೊದಲಾದ ಧರಸಂಹಿತ, ಧೃತಾತ್ಮ, ಜಿತೇಂದ್ರಿಯ ಮುನಿಗಳು ಮತ್ತು ಅನ್ಯ ಬಹಳಷ್ಟು ವೇದಪಾರಂಗತರು ಆ ಮಹಾತ್ಮನ ಸಭೆಯಲ್ಲಿ ಉಪಸ್ಥಿತರಿದ್ದರು. ಆ ಪುಣ್ಯ, ಧರ್ಮಜ್ಞ, ಶುಚಿ ಮತ್ತು ಅಮಲ ಋಷಿಸತ್ತಮರು ಕಥೆಗಳನ್ನು ಹೇಳುತ್ತಿದ್ದರು.
02004018a ತಥೈವ ಕ್ಷತ್ರಿಯಶ್ರೇಷ್ಠಾ ಧರ್ಮರಾಜಮುಪಾಸತೇ|
02004018c ಶ್ರೀಮಾನ್ಮಹಾತ್ಮಾ ಧರ್ಮಾತ್ಮಾ ಮುಂಜಕೇತುರ್ವಿವರ್ಧನಃ||
02004019a ಸಂಗ್ರಾಮಜಿದ್ದುರ್ಮುಖಶ್ಚ ಉಗ್ರಸೇನಶ್ಚ ವೀರ್ಯವಾನ್|
02004019c ಕಕ್ಷಸೇನಃ ಕ್ಷಿತಿಪತಿಃ ಕ್ಷೇಮಕಶ್ಚಾಪರಾಜಿತಃ|
02004019e ಕಾಂಬೋಜರಾಜಃ ಕಮಲಃ ಕಂಪನಶ್ಚ ಮಹಾಬಲಃ||
02004020a ಸತತಂ ಕಂಪಯಾಮಾಸ ಯವನಾನೇಕ ಏವ ಯಃ|
02004020c ಯಥಾಸುರಾನ್ಕಾಲಕೇಯಾನ್ದೇವೋ ವಜ್ರಧರಸ್ತಥಾ||
ಹಾಗೆಯೇ, ಶ್ರೀಮಂತ ಮಹಾತ್ಮ ಧರ್ಮಾತ್ಮ ಕ್ಷತ್ರಿಯಶ್ರೇಷ್ಠರು ಧರ್ಮರಾಜನ ಉಪಸ್ಥಿತಿಯಲ್ಲಿದ್ದರು: ಮುಂಜಕೇತು, ವಿವರ್ಧನ, ಸಂಗ್ರಾಮಜಿತ್, ದುರ್ಮುಖ, ವೀರ್ಯವಾನ ಉಗ್ರಸೇನ, ಕಕ್ಷಸೇನ, ಕ್ಷಿತಿಪತಿ ಕ್ಷೇಮಕಕ್ಷ, ಅಪರಾಜಿತ ಕಾಂಬೋಜರಾಜ ಕಮಲ, ದೇವ ವಜ್ರಧರನು ಕಾಲಕೇಯ ಅಸುರರನ್ನು ಹೇಗೋ ಹಾಗೆ ಯವನರನ್ನು ಒಬ್ಬನೇ ಸತತವೂ ನಡುಗಿಸುತ್ತಿದ್ದ ಮಹಾಬಲ ಕಂಪನ.
02004021a ಜಟಾಸುರೋ ಮದ್ರಕಾಂತಶ್ಚ ರಾಜಾ|
ಕುಂತಿಃ ಕುಣಿಂದಶ್ಚ ಕಿರಾತರಾಜಃ|
02004021c ತಥಾಂಗವಂಗೌ ಸಹ ಪುಂಡ್ರಕೇಣ|
ಪಾಂಡ್ಯೋಡ್ರರಾಜೌ ಸಹ ಚಾಂಧ್ರಕೇಣ||
ಮದ್ರಕಾಂತ ಜಟಾಸುರ, ಕುಂತಿ, ಕಿರಾತರಾಜ ಕುಣಿಂದ, ಹಾಗೆಯೇ ಅಂಗ-ವಂಗರ ಸಹಿತ ಪುಂಡ್ರಕ, ಪಾಂಡ್ಯ, ಉದ್ರಜ ಮತ್ತು ಅಂಧಕ.
02004022a ಕಿರಾತರಾಜಃ ಸುಮನಾ ಯವನಾಧಿಪತಿಸ್ತಥಾ|
02004022c ಚಾಣೂರೋ ದೇವರಾತಶ್ಚ ಭೋಜೋ ಭೀಮರಥಶ್ಚ ಯಃ||
02004023a ಶ್ರುತಾಯುಧಶ್ಚ ಕಾಲಿಂಗೋ ಜಯತ್ಸೇನಶ್ಚ ಮಾಗಧಃ|
02004023c ಸುಶರ್ಮಾ ಚೇಕಿತಾನಶ್ಚ ಸುರಥೋಽಮಿತ್ರಕರ್ಷಣಃ||
02004024a ಕೇತುಮಾನ್ವಸುದಾನಶ್ಚ ವೈದೇಹೋಽಥ ಕೃತಕ್ಷಣಃ|
02004024c ಸುಧರ್ಮಾ ಚಾನಿರುದ್ಧಶ್ಚ ಶ್ರುತಾಯುಶ್ಚ ಮಹಾಬಲಃ||
02004025a ಅನೂಪರಾಜೋ ದುರ್ಧರ್ಷಃ ಕ್ಷೇಮಜಿಚ್ಚ ಸುದಕ್ಷಿಣಃ|
02004025c ಶಿಶುಪಾಲಃ ಸಹಸುತಃ ಕರೂಷಾಧಿಪತಿಸ್ತಥಾ||
02004026a ವೃಷ್ಣೀನಾಂ ಚೈವ ದುರ್ಧರ್ಷಾಃ ಕುಮಾರಾ ದೇವರೂಪಿಣಃ|
02004026c ಆಹುಕೋ ವಿಪೃಥುಶ್ಚೈವ ಗದಃ ಸಾರಣ ಏವ ಚ||
02004027a ಅಕ್ರೂರಃ ಕೃತವರ್ಮಾ ಚ ಸಾತ್ಯಕಿಶ್ಚ ಶಿನೇಃ ಸುತಃ|
02004027c ಭೀಷ್ಮಕೋಽಥಾಹೃತಿಶ್ಚೈವ ದ್ಯುಮತ್ಸೇನಶ್ಚ ವೀರ್ಯವಾನ್|
02004027e ಕೇಕಯಾಶ್ಚ ಮಹೇಷ್ವಾಸಾ ಯಜ್ಞಸೇನಶ್ಚ ಸೌಮಕಿಃ||
02004028a ಅರ್ಜುನಂ ಚಾಪಿ ಸಂಶ್ರಿತ್ಯ ರಾಜಪುತ್ರಾ ಮಹಾಬಲಾಃ|
02004028c ಅಶಿಕ್ಷಂತ ಧನುರ್ವೇದಂ ರೌರವಾಜಿನವಾಸಸಃ||
02004029a ತತ್ರೈವ ಶಿಕ್ಷಿತಾ ರಾಜನ್ಕುಮಾರಾ ವೃಷ್ಣಿನಂದನಾಃ|
02004029c ರೌಕ್ಮಿಣೇಯಶ್ಚ ಸಾಂಬಶ್ಚ ಯುಯುಧಾನಶ್ಚ ಸಾತ್ಯಕಿಃ||
ರಾಜನ್! ಕಿರಾತರಾಜ ಸುಮನ, ಯವನಾಧಿಪತಿ ಜಾಣೂರ, ದೇವರಾತ ಭೋಜ, ಭೀಮರಥ, ಶ್ರುತಾಯುಧ, ಕಲಿಂಗ ಜಯತ್ಸೇನ, ಮಗಧ, ಸುಶರ್ಮ, ಚೇಕಿತಾನ, ಅಮಿತ್ರಕರ್ಷಣ ಸುರಥ, ಕೇತುಮಾನ್, ವಸುದಾನ, ವೈದೇಹಿ ಕೃತಕ್ಷಣ, ಸುಧರ್ಮಾ, ಅನಿರುದ್ಧ, ಮಹಾಬಲ ಶ್ರುತಾಯು, ಅನೂಪರಾಜ, ದುರ್ಧರ್ಷ, ಕ್ಷೇಮಜಿ, ಸುದಕ್ಷಿಣ, ಮಗನೊಂದಿಗೆ ಶಿಶುಪಾಲ, ಕರೂಷಾಧಿಪತಿ, ವೃಷ್ಣಿಗಳಲ್ಲಿ ದುರ್ಧರ್ಷ, ದೇವರೂಪಿಣಿ ಕುಮಾರ ಆಹುಕ, ವಿಪೃಥು, ಗದ, ಸಾರಣ, ಅಕ್ರೂರ, ಕೃತವರ್ಮ, ಶಿನಿಯ ಸುತ ಸಾತ್ಯಕಿ, ಭೀಷ್ಮಕ, ಅಥಾಹೃತಿ, ವೀರ್ಯವಾನ ದ್ಯುಮತ್ಸೇನ, ಕೇಕಯ, ಮಹೇಷ್ವಾಸ ಸೌಮಕಿ ಯಜ್ಞಸೇನ, ಮತ್ತು ಅರ್ಜುನನು ಸ್ವೀಕರಿಸಿದ್ದ ರೌರವಜಿನಗಳನ್ನು ಧರಿಸಿ ಧನುರ್ವೇದವನ್ನು ಕಲಿಯುತ್ತಿದ್ದ ಮಹಾಬಲಶಾಲಿ ರಾಜಪುತ್ರರು, ಅಲ್ಲಿಯೇ ಕಲಿಯುತ್ತಿದ್ದ ವೃಷ್ಣಿನಂದನ ಕುಮಾರ ರೌಕ್ಮಿಣೇಯ, ಸಾಂಬ, ಯುಯುಧಾನ ಮತ್ತು ಸಾತ್ಯಕಿ.
02004030a ಏತೇ ಚಾನ್ಯೇ ಚ ಬಹವೋ ರಾಜಾನಃ ಪೃಥಿವೀಪತೇ|
02004030c ಧನಂಜಯಸಖಾ ಚಾತ್ರ ನಿತ್ಯಮಾಸ್ತೇ ಸ್ಮ ತುಂಬುರುಃ||
02004031a ಚಿತ್ರಸೇನಃ ಸಹಾಮಾತ್ಯೋ ಗಂಧರ್ವಾಪ್ಸರಸಸ್ತಥಾ|
02004031c ಗೀತವಾದಿತ್ರಕುಶಲಾಃ ಶಮ್ಯಾತಾಲವಿಶಾರದಾಃ||
02004032a ಪ್ರಮಾಣೇಽಥ ಲಯಸ್ಥಾನೇ ಕಿನ್ನರಾಃ ಕೃತನಿಶ್ರಮಾಃ|
02004032c ಸಂಚೋದಿತಾಸ್ತುಂಬುರುಣಾ ಗಂಧರ್ವಾಃ ಸಹಿತಾ ಜಗುಃ||
ಪೃಥಿವೀಪತೇ! ಇವರು ಮತ್ತು ಇನ್ನೂ ಅನ್ಯ ಬಹಳಷ್ಟು ರಾಜರು, ಧನಂಜಯನ ನಿತ್ಯ ಸಖ ತುಂಬುರು, ಗೀತವಾದ್ಯ ಕುಶಲ, ಶಮ್ಯತಾಲವಿಶಾರದ ಗಂಧರ್ವ, ಅಪ್ಸರೆಯರು, ತಾಲ ಲಯಗಳ ವಿಶಾರದ ಕಿನ್ನರರು, ಮತ್ತು ಅಮಾತ್ಯನ ಸಹಿತ ಚಿತ್ರಸೇನ, ಇವರೆಲ್ಲ ಗಂಧರ್ವರೂ ತುಂಬುರುವಿನ ನಿರ್ದೇಶನದಲ್ಲಿ ಒಟ್ಟಿಗೇ ಸಂಗೀತ ಹಾಡಿದರು.
02004033a ಗಾಯಂತಿ ದಿವ್ಯತಾನೈಸ್ತೇ ಯಥಾನ್ಯಾಯಂ ಮನಸ್ವಿನಃ|
02004033c ಪಾಂಡುಪುತ್ರಾನೃಷೀಂಶ್ಚೈವ ರಮಯಂತ ಉಪಾಸತೇ||
02004034a ತಸ್ಯಾಂ ಸಭಾಯಾಮಾಸೀನಾಃ ಸುವ್ರತಾಃ ಸತ್ಯಸಂಗರಾಃ|
02004034c ದಿವೀವ ದೇವಾ ಬ್ರಹ್ಮಾಣಂ ಯುಧಿಷ್ಠಿರಮುಪಾಸತೇ||
ದಿವ್ಯತಾನಗಳಿಂದ ಕ್ರಮಬದ್ಧವಾಗಿ ಹಾಡುತ್ತಾ ಆ ಮನೋರಂಜಕರು ಪಾಂಡುಪುತ್ರರನ್ನು ಮತ್ತು ಋಷಿಗಳನ್ನು ರಮಿಸುತ್ತಾ ಉಪಾಸಿಸುತ್ತಿದ್ದರು. ಆ ಸಭೆಯಲ್ಲಿ ಆಸೀನರಾಗಿದ್ದ ಸುವ್ರತ ಸತ್ಯಸಂಗರವು ದಿವಿಯಲ್ಲಿ ಬ್ರಹ್ಮನನ್ನು ದೇವತೆಗಳು ಹೇಗೋ ಹಾಗೆ ಯುಧಿಷ್ಠಿರನನ್ನು ಉಪಾಸಿಸುತ್ತಿತ್ತು.”
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಸಭಾಕ್ರಿಯಾಪರ್ವಣಿ ಸಭಾಪ್ರವೇಶೋ ನಾಮ ಚತುರ್ಥೋಽಧ್ಯಾಯಃ||
ಇದು ಶ್ರೀ ಮಹಾಭಾರತದ ಸಭಾಪರ್ವದಲ್ಲಿ ಸಭಾಕ್ರಿಯಾಪರ್ವದಲ್ಲಿ ಸಭಾಪ್ರವೇಶವೆನ್ನುವ ನಾಲ್ಕನೆಯ ಅಧ್ಯಾಯವು.
[1]ಗೋರಖಪುರ ಸಂಪುಟದಲ್ಲಿ ಈ ಶ್ಲೋಕದ ಮೊದಲು ಮಯನು ಅರ್ಜುನನಿಗಿತ್ತ ಧ್ವಜದ ಕುರಿತ ಈ ಶ್ಲೋಕಗಳಿವೆ: ತಾಂ ತು ಕೃತ್ವಾ ಸಭಾಂ ಶ್ರೇಷ್ಠಾಂ ಮಯಶ್ಚಾರ್ಜುನಮಬ್ರವೀತ್| ಏಷಾ ಸಭಾ ಸವ್ಯಸಾಚಿನ್ ಧ್ವಜೋ ಹ್ಯಾತ್ರ ಭವಿಷ್ಯತಿ|| ಭೂತಾನಾಂ ಚ ಮಹಾವೀರ್ಯೋ ಧ್ವಜಾಗ್ರೇ ಕಿಂಕರೋ ಗಣಃ| ತವ ವಿಸ್ಫಾರಘೋಷೇಣ ಮೇಘವನ್ನಿನದಿಷ್ಯತಿ|| ಅಯಂ ಹಿ ಸೂರ್ಯಸಂಕಾಶೋ ಜ್ವಲನಸ್ಯ ರಥೋತ್ತಮಾಃ|| iiಯಾಮಯಃ ಕೃತೋ ಹ್ಯೇಷ ಧ್ವಜೋ ವಾನರಲಕ್ಷಣಃ| ಅಸಜ್ಜಮಾನೋ ವೃಕ್ಷೇಷು ಧೂಮಕೇತುರಿವೋಚ್ಛ್ರಿತಃ|| ಬಹುವರ್ಣಂ ಹಿ ಲಕ್ಷ್ಯೇತ ಧ್ವಜಂ ವಾನರಲಕ್ಷಣಂ| ಧ್ವಜೋತ್ಕಟಂ ಹ್ಯನವಮಂ ಯುದ್ಧೇ ದ್ರಕ್ಷ್ಯಸಿ ವಿಷ್ಠಿತಂ|| ಇತ್ಯುಕ್ತ್ವಾಽಽಲಿಂಗ್ಯ ಬೀಭತ್ಸುಂ ವಿಸೃಷ್ಟಃ ಪ್ರಯಯೌ ಮಯಃ||
[2]ವ್ಯಾಸರ ಐವರು ಪ್ರಮುಖ ಶಿಷ್ಯರು.
[3]ಈ ಮುನಿಯಿಂದ ಧರ್ಮನಿಗೆ ಶೂದ್ರಯೋನಿಯಲ್ಲಿ (ವಿದುರನಾಗಿ) ಜನ್ಮ ತಳೆಯುವಂತೆ ಶಾಪ ದೊರಕಿತ್ತು.