Sabha Parva: Chapter 31

ಸಭಾ ಪರ್ವ: ರಾಜಸೂಯ ಪರ್ವ

೩೧

ನಿಮಂತ್ರಿತ ರಾಜರ ಆಗಮನ

ಯಾಗಕ್ಕೆ ರಾಜರ ಆಗಮನ, ಸ್ವಾಗತ (೧-೨೫).

02031001 ವೈಶಂಪಾಯನ ಉವಾಚ|

02031001a ಸ ಗತ್ವಾ ಹಾಸ್ತಿನಪುರಂ ನಕುಲಃ ಸಮಿತಿಂಜಯಃ|

02031001c ಭೀಷ್ಮಮಾಮಂತ್ರಯಾಮಾಸ ಧೃತರಾಷ್ಟ್ರಂ ಚ ಪಾಂಡವಃ||

ವೈಶಂಪಾಯನನು ಹೇಳಿದನು: “ಸಮಿತಿಂಜಯ ಪಾಂಡವ ನಕುಲನು ಹಸ್ತಿನಾಪುರಕ್ಕೆ ಹೋಗಿ ಭೀಷ್ಮ ಮತ್ತು ಧೃತರಾಷ್ಟ್ರರನ್ನು ಆಮಂತ್ರಿಸಿದನು.

02031002a ಪ್ರಯಯುಃ ಪ್ರೀತಮನಸೋ ಯಜ್ಞಂ ಬ್ರಹ್ಮಪುರಃಸರಾಃ|

02031002c ಸಂಶ್ರುತ್ಯ ಧರ್ಮರಾಜಸ್ಯ ಯಜ್ಞಂ ಯಜ್ಞವಿದಸ್ತದಾ||

ಧರ್ಮರಾಜನ ಯಜ್ಞದ ಕುರಿತು ಕೇಳಿ ಆ ಯಜ್ಞವಿದರು ಬ್ರಾಹ್ಮಣರನ್ನು ಮುಂದಿರಿಸಿಕೊಂಡು ಪ್ರೀತಿಮನಸ್ಕರಾಗಿ ಯಜ್ಞಕ್ಕೆಂದು ಹೊರಟರು.

02031003a ಅನ್ಯೇ ಚ ಶತಶಸ್ತುಷ್ಟೈರ್ಮನೋಭಿರ್ಮನುಜರ್ಷಭ|

02031003c ದ್ರಷ್ಟುಕಾಮಾಃ ಸಭಾಂ ಚೈವ ಧರ್ಮರಾಜಂ ಚ ಪಾಂಡವಂ||

ಇನ್ನೂ ಇತರ ನೂರಾರು ಸಂತುಷ್ಟ ಮನಸ್ಕ ರಾಜರು ಧರ್ಮರಾಜನ ಸಭೆಯನ್ನು ಮತ್ತು ಆ ಪಾಂಡವನನ್ನು ನೋಡುವ ಆಸೆಯಿಂದ ಬಂದರು.

02031004a ದಿಗ್ಭ್ಯಃ ಸರ್ವೇ ಸಮಾಪೇತುಃ ಪಾರ್ಥಿವಾಸ್ತತ್ರ ಭಾರತ|

02031004c ಸಮುಪಾದಾಯ ರತ್ನಾನಿ ವಿವಿಧಾನಿ ಮಹಾಂತಿ ಚ||

ಭಾರತ! ಹೆಚ್ಚಿನ ಮತ್ತು ವಿವಿಧ ರತ್ನಗಳನ್ನು ತೆಗೆದುಕೊಂಡು ಎಲ್ಲ ದಿಕ್ಕುಗಳಿಂದಲೂ ಪಾರ್ಥಿವರು ಅಲ್ಲಿ ಸೇರಿದ್ದರು.

02031005a ಧೃತರಾಷ್ಟ್ರಶ್ಚ ಭೀಷ್ಮಶ್ಚ ವಿದುರಶ್ಚ ಮಹಾಮತಿಃ|

02031005c ದುರ್ಯೋಧನಪುರೋಗಾಶ್ಚ ಭ್ರಾತರಃ ಸರ್ವ ಏವ ತೇ||

02031006a ಸತ್ಕೃತ್ಯಾಮಂತ್ರಿತಾಃ ಸರ್ವೇ ಆಚಾರ್ಯಪ್ರಮುಖಾ ನೃಪಾಃ|

02031006c ಗಾಂಧಾರರಾಜಃ ಸುಬಲಃ ಶಕುನಿಶ್ಚ ಮಹಾಬಲಃ||

02031007a ಅಚಲೋ ವೃಷಕಶ್ಚೈವ ಕರ್ಣಶ್ಚ ರಥಿನಾಂ ವರಃ|

02031007c ಋತಃ ಶಲ್ಯೋ ಮದ್ರರಾಜೋ ಬಾಹ್ಲಿಕಶ್ಚ ಮಹಾರಥಃ||

02031008a ಸೋಮದತ್ತೋಽಥ ಕೌರವ್ಯೋ ಭೂರಿರ್ಭೂರಿಶ್ರವಾಃ ಶಲಃ|

02031008c ಅಶ್ವತ್ಥಾಮಾ ಕೃಪೋ ದ್ರೋಣಃ ಸೈಂಧವಶ್ಚ ಜಯದ್ರಥಃ||

ಧೃತರಾಷ್ಟ್ರ, ಭೀಷ್ಮ, ಮಹಾಮತಿ ವಿದುರ, ದುರ್ಯೊಧನನ ನಾಯಕತ್ವದಲ್ಲಿ ಎಲ್ಲ ಸಹೋದರರು, ಆಚಾರ್ಯನೇ ಮೊದಲಾದ ನೃಪರು - ಗಾಂಧಾರರಾಜ ಸುಬಲ, ಮಹಾಬಲಿ ಶಕುನಿ, ಅಚಲ ವೃಷಕ, ರಥಿಗಳಲ್ಲಿ ಶ್ರೇಷ್ಠ ಕರ್ಣ, ಋತ, ಮದ್ರರಾಜ ಶಲ್ಯ, ಮಹಾರಥಿ ಬಾಹ್ಲೀಕ, ಕೌರವ್ಯ ಸೋಮದತ್ತ, ಭೂರಿ ಭೂರಿಶ್ರವ, ಶಲ, ಅಶ್ವತ್ಥಾಮ, ಕೃಪ, ದ್ರೋಣ, ಸೈಂಧವ ಜಯದ್ರಥ - ಎಲ್ಲರನ್ನೂ ಸತ್ಕರಿಸಿ ಬರಮಾಡಿಕೊಳ್ಳಲಾಯಿತು.

02031009a ಯಜ್ಞಸೇನಃ ಸಪುತ್ರಶ್ಚ ಶಾಲ್ವಶ್ಚ ವಸುಧಾಧಿಪಃ|

02031009c ಪ್ರಾಗ್ಜ್ಯೋತಿಷಶ್ಚ ನೃಪತಿರ್ಭಗದತ್ತೋ ಮಹಾಯಶಾಃ||

02031010a ಸಹ ಸರ್ವೈಸ್ತಥಾ ಮ್ಲೇಚ್ಛೈಃ ಸಾಗರಾನೂಪವಾಸಿಭಿಃ|

02031010c ಪಾರ್ವತೀಯಾಶ್ಚ ರಾಜಾನೋ ರಾಜಾ ಚೈವ ಬೃಹದ್ಬಲಃ||

02031011a ಪೌಂಡ್ರಕೋ ವಾಸುದೇವಶ್ಚ ವಂಗಃ ಕಾಲಿಂಗಕಸ್ತಥಾ|

02031011c ಆಕರ್ಷಃ ಕುಂತಲಶ್ಚೈವ ವಾನವಾಸ್ಯಾಂಧ್ರಕಾಸ್ತಥಾ||

02031012a ದ್ರವಿಡಾಃ ಸಿಂಹಲಾಶ್ಚೈವ ರಾಜಾ ಕಾಶ್ಮೀರಕಸ್ತಥಾ|

02031012c ಕುಂತಿಭೋಜೋ ಮಹಾತೇಜಾಃ ಸುಃಮಶ್ಚ ಸುಮಹಾಬಲಃ||

02031013a ಬಾಹ್ಲಿಕಾಶ್ಚಾಪರೇ ಶೂರಾ ರಾಜಾನಃ ಸರ್ವ ಏವ ತೇ|

02031013c ವಿರಾಟಃ ಸಹ ಪುತ್ರೈಶ್ಚ ಮಾಚೇಲ್ಲಶ್ಚ ಮಹಾರಥಃ|

02031013e ರಾಜಾನೋ ರಾಜಪುತ್ರಾಶ್ಚ ನಾನಾಜನಪದೇಶ್ವರಾಃ||

02031014a ಶಿಶುಪಾಲೋ ಮಹಾವೀರ್ಯಃ ಸಹ ಪುತ್ರೇಣ ಭಾರತ|

02031014c ಆಗಚ್ಛತ್ಪಾಂಡವೇಯಸ್ಯ ಯಜ್ಞಂ ಸಂಗ್ರಾಮದುರ್ಮದಃ||

ಭಾರತ! ಪುತ್ರನೊಂದಿಗೆ ಯಜ್ಞಸೇನ, ವಸುಧಾಧಿಪ ಶಾಲ್ವ, ಪ್ರಾಗ್ಜ್ಯೋತಿಷದ ನೃಪತಿ ಮಹಾಯಶ ಭಗದತ್ತ, ಇವರೆಲ್ಲರ ಜೊತೆ ಸಾಗರದಾಚೆ ವಾಸಿಸುತ್ತಿದ್ದ ಮ್ಲೇಚ್ಛರು, ಪರ್ವತ ದೇಶಗಳ ರಾಜರು, ರಾಜ ಬೃಹದ್ಬಲ, ವಾಸುದೇವ ಪೌಂಡ್ರಕ, ವಂಗ, ಕಲಿಂಗ, ಆಕರ್ಷ, ಕುಂತಲ, ವಾನವಾಸ್ಯರು, ಆಂಧ್ರಕರು, ದ್ರವಿಡರು, ಸಿಂಹಲರು, ಕಾಶ್ಮೀರ ರಾಜ, ಮಹಾತೇಜ ಕುಂತಿಭೋಜ, ಸುಮಹಾಬಲ ಸುಹ್ಮ, ಇತರ ಎಲ್ಲ ಶೂರ ಬಾಹ್ಲೀಕ ರಾಜರು, ಪುತ್ರರೊಂದಿಗೆ ವಿರಾಟ, ಮಹಾರಥಿ ಮಾಚೇಲ್ಲ, ಪುತ್ರನೊಂದಿಗೆ ಮಹಾವೀರ್ಯ ಸಂಗ್ರಾಮದುರ್ಮದ ಶಿಶುಪಾಲ ಹೀಗೆ ರಾಜರು, ರಾಜಪುತ್ರರು ಮತ್ತು ನಾನಾ ಜನಪದೇಶ್ವರರು ಪಾಂಡವನ ಯಜ್ಞಕ್ಕೆ ಬಂದರು.

02031015a ರಾಮಶ್ಚೈವಾನಿರುದ್ಧಶ್ಚ ಬಭ್ರುಶ್ಚ ಸಹಸಾರಣಃ|

02031015c ಗದಪ್ರದ್ಯುಮ್ನಸಾಂಬಾಶ್ಚ ಚಾರುದೇಷ್ಣಶ್ಚ ವೀರ್ಯವಾನ್||

02031016a ಉಲ್ಮುಕೋ ನಿಶಠಶ್ಚೈವ ವೀರಃ ಪ್ರಾದ್ಯುಮ್ನಿರೇವ ಚ|

02031016c ವೃಷ್ಣಯೋ ನಿಖಿಲೇನಾನ್ಯೇ ಸಮಾಜಗ್ಮುರ್ಮಹಾರಥಾಃ||

ರಾಮ, ಅನಿರುದ್ಧ, ಬಭ್ರು, ಸಾರಣ, ಗದ, ಪ್ರದ್ಯುಮ್ನ, ಸಾಂಬ, ವೀರ್ಯವಾನ್ ಚಾರುದೇಷ್ಣ, ಉಲ್ಮುಕ, ನಿಷಠ, ವೀರ ಪ್ರಾದ್ಯುಮ್ನ[1], ಮತ್ತು ಇತರ ಸರ್ವ ಮಹಾರಥಿ ವೃಷ್ಣಿಗಳು ಬಂದು ಸೇರಿದರು.

02031017a ಏತೇ ಚಾನ್ಯೇ ಚ ಬಹವೋ ರಾಜಾನೋ ಮಧ್ಯದೇಶಜಾಃ|

02031017c ಆಜಗ್ಮುಃ ಪಾಂಡುಪುತ್ರಸ್ಯ ರಾಜಸೂಯಂ ಮಹಾಕ್ರತುಂ||

ಇವರು ಮತ್ತು ಇನ್ನೂ ಇತರ ಬಹಳಷ್ಟು ಮಧ್ಯದೇಶದ ರಾಜರು ಪಾಂಡುಪುತ್ರನ ರಾಜಸೂಯ ಮಹಾಕ್ರತುವಿಗೆ ಬಂದರು.

02031018a ದದುಸ್ತೇಷಾಮಾವಸಥಾನ್ಧರ್ಮರಾಜಸ್ಯ ಶಾಸನಾತ್|

02031018c ಬಹುಕಕ್ಷ್ಯಾನ್ವಿತಾನ್ರಾಜನ್ದೀರ್ಘಿಕಾವೃಕ್ಷಶೋಭಿತಾನ್||

ರಾಜನ್! ಧರ್ಮರಾಜನ ಶಾಸನದಂತೆ ಅವರಿಗೆ ಬಹಳ ಕೋಣೆಗಳಿರುವ, ಕೊಳ ಮತ್ತು ವೃಕ್ಷಗಳಿಂದೊಡಗೂಡಿದ ಸುಂದರ ವಸತಿಗೃಹಗಳನ್ನು ನೀಡಲಾಯಿತು.

02031019a ತಥಾ ಧರ್ಮಾತ್ಮಜಸ್ತೇಷಾಂ ಚಕ್ರೇ ಪೂಜಾಮನುತ್ತಮಾಂ|

02031019c ಸತ್ಕೃತಾಶ್ಚ ಯಥೋದ್ದಿಷ್ಟಾಂ ಜಗ್ಮುರಾವಸಥಾನ್ನೃಪಾಃ||

02031020a ಕೈಲಾಸಶಿಖರಪ್ರಖ್ಯಾನ್ಮನೋಜ್ಞಾನ್ದ್ರವ್ಯಭೂಷಿತಾನ್|

02031020c ಸರ್ವತಃ ಸಂವೃತಾನುಚ್ಚೈಃ ಪ್ರಾಕಾರೈಃ ಸುಕೃತೈಃ ಸಿತೈಃ||

ಧರ್ಮರಾಜನು ಅವರಿಗೆ ಅನುತ್ತಮ ಪೂಜೆಯನ್ನಿತ್ತು ಸತ್ಕರಿಸಿದ ನಂತರ ಆ ನೃಪರು ಕೈಲಾಸಶಿಖರದಷ್ಟು ಎತ್ತರವಾದ, ಮನೋಜ್ಞ, ದ್ರವ್ಯಭೂಷಿತ, ಎಲ್ಲಕಡೆಯಿಂದಲೂ ಎತ್ತರ ಪ್ರಾಕಾರಗಳಿಂದ ಸುತ್ತುವರೆಯಲ್ಪಟ್ಟ ಬಲಿಷ್ಟ ಮತ್ತು ಸುಂದರ ಆವಾಸಗಳಿಗೆ ತೆರಳಿದರು.

02031021a ಸುವರ್ಣಜಾಲಸಂವೀತಾನ್ಮಣಿಕುಟ್ಟಿಮಶೋಭಿತಾನ್|

02031021c ಸುಖಾರೋಹಣಸೋಪಾನಾನ್ಮಹಾಸನಪರಿಚ್ಛದಾನ್||

ಜಾಲಿಗಳನ್ನು ಚಿನ್ನದಲ್ಲಿ ಮಾಡಲಾಗಿತ್ತು, ನೆಲವನ್ನು ಮಣಿಗಳಿಂದ ಸಿಂಗರಿಸಲಾಗಿತ್ತು, ಮೆಟ್ಟಿಲುಗಳು ಸುಖಕರವಾಗಿದ್ದವು ಮತ್ತು ಆಸನಗಳು ಎತ್ತರದಲ್ಲಿದ್ದವು.

02031022a ಸ್ರಗ್ದಾಮಸಮವಚ್ಛನ್ನಾನುತ್ತಮಾಗುರುಗಂಧಿನಃ|

02031022c ಹಂಸಾಂಶುವರ್ಣಸದೃಶಾನಾಯೋಜನಸುದರ್ಶನಾನ್||

ನಿವಾಸಗಳನ್ನು ಹೂಗುಚ್ಛ ಮತ್ತು ಮಾಲೆಗಳಿಂದ ಸುಹಾಸಿತ ಗಂಧಗಳಿಂದ ಸಿಂಗರಿಸಲಾಗಿತ್ತು, ಹಂಸದ ಗರಿಗಳಿಂದ ಮಾಡಿದ ಮೆತ್ತನೆಯ ಹಾಸಿಗೆಗಳಿಂದ ಕೂಡಿದ್ದವು, ಮತ್ತು ನೋಡಲು ವಿಶಾಲವಾಗಿಯೂ ಸುಂದರವಾಗಿಯೂ ಇದ್ದವು.

02031023a ಅಸಂಬಾಧಾನ್ಸಮದ್ವಾರಾನ್ಯುತಾನುಚ್ಚಾವಚೈರ್ಗುಣೈಃ|

02031023c ಬಹುಧಾತುಪಿನದ್ಧಾಂಗಾನ್ ಹಿಮವಚ್ಛಿಖರಾನಿವ||

ಅವುಗಳು ಇಕ್ಕಟ್ಟಾಗಿರಲಿಲ್ಲ ಮತ್ತು ದ್ವಾರಗಳು ಸಾಕಷ್ಟು ವಿಶಾಲವಾಗಿದ್ದು ಸಿಂಗರಿಸಲ್ಪಟ್ಟಿದ್ದವು. ಅವುಗಳ ಕೋಳುಗಳನ್ನು ಬಹುಧಾತುಗಳಿಂದ ಮಾಡಿದ್ದರು ಮತ್ತು ಹಿಮಾಲಯದ ಶಿಖರಗಳಂತೆ ತೋರುತ್ತಿದ್ದವು.

02031024a ವಿಶ್ರಾಂತಾಸ್ತೇ ತತೋಽಪಶ್ಯನ್ಭೂಮಿಪಾ ಭೂರಿದಕ್ಷಿಣಂ|

02031024c ವೃತಂ ಸದಸ್ಯೈರ್ಬಹುಭಿರ್ಧರ್ಮರಾಜಂ ಯುಧಿಷ್ಠಿರಂ||

ವಿಶ್ರಾಂತಿಯನ್ನು ಪಡೆದ ಭೂಮಿಪರು ಭೂರಿದಕ್ಷಿಣೆಗಳನ್ನು ಪಡೆದ ಸದಸ್ಯರಿಂದ ಆವೃತ ಧರ್ಮರಾಜ ಯುಧಿಷ್ಠಿರನನ್ನು ನೋಡಿದರು.

02031025a ತತ್ಸದಃ ಪಾರ್ಥಿವೈಃ ಕೀರ್ಣಂ ಬ್ರಾಹ್ಮಣೈಶ್ಚ ಮಹಾತ್ಮಭಿಃ|

02031025c ಭ್ರಾಜತೇ ಸ್ಮ ತದಾ ರಾಜನ್ನಾಕಪೃಷ್ಠಮಿವಾಮರೈಃ||

ರಾಜನ್! ಪಾರ್ಥಿವರು ಮತ್ತು ಮಹಾತ್ಮ ಬ್ರಾಹ್ಮಣರಿಂದ ಕೂಡಿದ್ದ ಆ ಸಭೆಯು ಅಮರರಿಂದ ಕೂಡಿದ ದೇವಸಭೆಯಂತೆ ಹೊಳೆಯುತ್ತಿತ್ತು.”

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ರಾಜಸೂಯಪರ್ವಣಿ ನಿಮಂತ್ರಿತರಾಜಾಗಮನೇ ಏಕತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ರಾಜಸೂಯಪರ್ವದಲ್ಲಿ ನಿಮಂತ್ರಿತರಾಜಾಗಮನ ಎನ್ನುವ ಮೂವತ್ತೊಂದನೆಯ ಅಧ್ಯಾಯವು.

Related image

[1] ಪ್ರದ್ಯುಮ್ನನ ಮಗ ಅನಿರುದ್ಧ?

Comments are closed.