Sabha Parva: Chapter 29

ಸಭಾ ಪರ್ವ: ದಿಗ್ವಿಜಯ ಪರ್ವ

೨೯

ನಕುಲನ ಪಶ್ಚಿಮ ದಿಗ್ವಿಜಯ

ನಕುಲನ ಪಶ್ಚಿಮ ದಿಗ್ವಿಜಯ (೧-೧೯).

02029001 ವೈಶಂಪಾಯನ ಉವಾಚ|

02029001a ನಕುಲಸ್ಯ ತು ವಕ್ಷ್ಯಾಮಿ ಕರ್ಮಾಣಿ ವಿಜಯಂ ತಥಾ|

02029001c ವಾಸುದೇವಜಿತಾಮಾಶಾಂ ಯಥಾಸೌ ವ್ಯಜಯತ್ಪ್ರಭುಃ||

ವೈಶಂಪಾಯನನು ಹೇಳಿದನು: “ನಕುಲನ ವಿಜಯ ಕರ್ಮಗಳ ಕುರಿತು ಮತ್ತು ಆ ಪ್ರಭುವು ವಾಸುದೇವನು ಗೆದ್ದಿದ್ದ[1] ಪ್ರದೇಶಗಳನ್ನು ಹೇಗೆ ಗೆದ್ದನೆನ್ನುವುದನ್ನು ಹೇಳುತ್ತೇನೆ.

02029002a ನಿರ್ಯಾಯ ಖಾಂಡವಪ್ರಸ್ಥಾತ್ಪ್ರತೀಚೀಮಭಿತೋ ದಿಶಂ|

02029002c ಉದ್ದಿಶ್ಯ ಮತಿಮಾನ್ಪ್ರಾಯಾನ್ಮಹತ್ಯಾ ಸೇನಯಾ ಸಹ||

02029003a ಸಿಂಹನಾದೇನ ಮಹತಾ ಯೋಧಾನಾಂ ಗರ್ಜಿತೇನ ಚ|

02029003c ರಥನೇಮಿನಿನಾದೈಶ್ಚ ಕಂಪಯನ್ವಸುಧಾಮಿಮಾಂ||

ಖಾಂಡವಪ್ರಸದಿಂದ ಹೊರಟು ಪಶ್ಚಿಮ ದಿಶಾಭಿಮುಖವಾಗಿ ಮಹಾ ಸೇನೆಯೊಂದಿಗೆ ಯೋಧರ ಮಹಾ ಸಿಂಹನಾದ ಗರ್ಜನೆಗಳು ಮತ್ತು ರಥವೇಗದ ನಿನಾದದಿಂದ ವಸುಧೆಯನ್ನೇ ಕಂಪಿಸುತ್ತಾ ಆ ಮತಿವಂತನು ಹೊರಟನು. 

02029004a ತತೋ ಬಹುಧನಂ ರಮ್ಯಂ ಗವಾಶ್ವಧನಧಾನ್ಯವತ್|

02029004c ಕಾರ್ತ್ತಿಕೇಯಸ್ಯ ದಯಿತಂ ರೋಹೀತಕಮುಪಾದ್ರವತ್||

ಮೊದಲು ಬಹುಧನಯುಕ್ತ ಗೋ, ಅಶ್ವ ಧನ ಧಾನ್ಯಯುಕ್ತ, ಕಾರ್ತಿಕೇಯನ ಅಚ್ಚುಮೆಚ್ಚಿನ ರೋಹೀತಕವನ್ನು ತಲುಪಿದನು.

02029005a ತತ್ರ ಯುದ್ಧಂ ಮಹದ್ವೃತ್ತಂ ಶೂರೈರ್ಮತ್ತಮಯೂರಕೈಃ|

02029005c ಮರುಭೂಮಿಂ ಚ ಕಾರ್ತ್ಸ್ನ್ಯೆನ ತಥೈವ ಬಹುಧಾನ್ಯಕಂ||

02029006a ಶೈರೀಷಕಂ ಮಹೇಚ್ಛಂ ಚ ವಶೇ ಚಕ್ರೇ ಮಹಾದ್ಯುತಿಃ|

02029006c ಶಿಬೀಂಸ್ತ್ರಿಗರ್ತಾನಂಬಷ್ಠಾನ್ಮಾಲವಾನ್ಪಂಚಕರ್ಪಟಾನ್||

02029007a ತಥಾ ಮಧ್ಯಮಿಕಾಯಾಂಶ್ಚ ವಾಟಧಾನಾನ್ದ್ವಿಜಾನಥ|

ಅಲ್ಲಿ ಶೂರ ಮತ್ತಮಯೂರಕರೊಂದಿಗೆ ನಡೆದ ಮಹಾ ಯುದ್ಧದಲ್ಲಿ ಮಹಾದ್ಯುತಿಯು ಮರುಭೂಮಿ ರಾಜ್ಯ ಮತ್ತು ಧನ್ಯಸಮೃದ್ಧ ಶೈರೀಷಕ - ಮಹೇಚ್ಛಗಳನ್ನು, ಶಿಬಿಗಳನ್ನು, ತ್ರಿಗರ್ತರನ್ನು, ಅಂಬಷ್ಠರನ್ನು, ಮಾಲವಾನರನ್ನು, ಪಂಚಕರ್ಪಟರನ್ನು, ಮಧ್ಯಮಿಕರನ್ನು ಮತ್ತು ವಾಟಧಾನ ಬ್ರಾಹ್ಮಣರನ್ನು ವಶಪಡೆಸಿಕೊಂಡನು.

02029007c ಪುನಶ್ಚ ಪರಿವೃತ್ಯಾಥ ಪುಷ್ಕರಾರಣ್ಯವಾಸಿನಃ||

02029008a ಗಣಾನುತ್ಸವಸಂಕೇತಾನ್ವ್ಯಜಯತ್ಪುರುಷರ್ಷಭಃ|

02029008c ಸಿಂಧುಕೂಲಾಶ್ರಿತಾ ಯೇ ಚ ಗ್ರಾಮಣೇಯಾ ಮಹಾಬಲಾಃ||

02029009a ಶೂದ್ರಾಭೀರಗಣಾಶ್ಚೈವ ಯೇ ಚಾಶ್ರಿತ್ಯ ಸರಸ್ವತೀಂ|

02029009c ವರ್ತಯಂತಿ ಚ ಯೇ ಮತ್ಸ್ಯೈರ್ಯೇ ಚ ಪರ್ವತವಾಸಿನಃ||

02029010a ಕೃತ್ಸ್ನಂ ಪಂಚನದಂ ಚೈವ ತಥೈವಾಪರಪರ್ಯಟಂ|

02029010c ಉತ್ತರಜ್ಯೋತಿಕಂ ಚೈವ ತಥಾ ವೃಂದಾಟಕಂ ಪುರಂ||

02029010e ದ್ವಾರಪಾಲಂ ಚ ತರಸಾ ವಶೇ ಚಕ್ರೇ ಮಹಾದ್ಯುತಿಃ||

02029011a ರಮಠಾನ್ ಹಾರಹೂಣಾಂಶ್ಚ ಪ್ರತೀಚ್ಯಾಶ್ಚೈವ ಯೇ ನೃಪಾಃ|

02029011c ತಾನ್ಸರ್ವಾನ್ಸ ವಶೇ ಚಕ್ರೇ ಶಾಸನಾದೇವ ಪಾಂಡವಃ||

ಅಲ್ಲಿಯೇ ಸುತ್ತುವರೆದು ಪುಷ್ಕರಾರಣ್ಯದಲ್ಲಿ ವಾಸಿಸುತ್ತಿದ್ದ ಉತ್ಸವಸಂಕೇತಕ ಗಣಗಳನ್ನು, ಸಿಂಧುನದೀತೀರದಲ್ಲಿ ವಾಸಿಸುತ್ತಿದ್ದ ವುಹಾಬಲಶಾಲಿ ಗ್ರಾಮಣೇಯರನ್ನು, ಸರಸ್ವತೀ ತೀರದಲ್ಲಿ ವಾಸಿಸುತ್ತಿದ್ದ, ಮೀನಿಂದಲೇ ಜೀವಿಸುತಿದ್ದ್ದ ಮತ್ತು ಪರ್ವತವಾಸಿ ಶೂದ್ರ ಮತ್ತು ಅಭೀರ ಗಣಗಳನ್ನೂ, ಐದು ನದಿ ಪ್ರದೇಶ[2]ವೆಲ್ಲವನ್ನೂ, ಪಶ್ಚಿಮ ಪರ್ಯಟವನ್ನು, ಉತ್ತರ ಜ್ಯೋತಿಕವನ್ನು, ವೃಂದಾಟಕ ಪುರವನ್ನು, ಮತ್ತು ದ್ವಾರಪಾಲ, ಪಶ್ಚಿಮದ ರಾಜರಾದ ರಮಟರು, ಹಾರಣರು ಮತ್ತು ಎಲ್ಲರನ್ನೂ ಮಹಾದ್ಯುತಿ ಪುರುಷರ್ಷಭ ಪಾಂಡವನು ಸೋಲಿಸಿ, ವಶಪಡಿಸಿಕೊಂಡು ಶಾಸನವನ್ನು ಸ್ಥಾಸಿದನು.

02029012a ತತ್ರಸ್ಥಃ ಪ್ರೇಷಯಾಮಾಸ ವಾಸುದೇವಾಯ ಚಾಭಿಭುಃ|

02029012c ಸ ಚಾಸ್ಯ ದಶಭೀ ರಾಜ್ಯೈಃ ಪ್ರತಿಜಗ್ರಾಹ ಶಾಸನಂ||

ಅಲ್ಲಿ ಇರುವಾಗ ವಿಜಯಿಯು ವಾಸುದೇವನಿಗೆ[3] ಸಂದೇಶವನ್ನು ಕಳುಹಿಸಲು ಅವನು ಅಲ್ಲಿಯ ಹತ್ತು ರಾಜ್ಯಗಳೊಡನೆ[4] ಶಾಸನವನ್ನು ಸ್ವೀಕರಿಸಿದನು.

02029013a ತತಃ ಶಾಕಲಮಭ್ಯೇತ್ಯ ಮದ್ರಾಣಾಂ ಪುಟಭೇದನಂ|

02029013c ಮಾತುಲಂ ಪ್ರೀತಿಪೂರ್ವೇಣ ಶಲ್ಯಂ ಚಕ್ರೇ ವಶೇ ಬಲೀ||

ಅನಂತರ ಮದ್ರದೇಶದ ರಾಜಧಾನಿ ಶಾಕಲವನ್ನು ಸೇರಿ ಅಲ್ಲಿ ಆ ಬಲಿಯು ಸೋದರಮಾವ ಶಲ್ಯನನ್ನು ಪ್ರೀತಿಪೂರ್ವಕವಾಗಿ ವಶಪಡಿಸಿಕೊಂಡನು.

02029014a ಸ ತಸ್ಮಿನ್ಸತ್ಕೃತೋ ರಾಜ್ಞಾ ಸತ್ಕಾರಾರ್ಹೋ ವಿಶಾಂ ಪತೇ|

02029014c ರತ್ನಾನಿ ಭೂರೀಣ್ಯಾದಾಯ ಸಂಪ್ರತಸ್ಥೇ ಯುಧಾಂ ಪತಿಃ||

ವಿಶಾಂಪತೇ! ಆ ಸತ್ಕಾರಾರ್ಹ ಯುಧಾಂಪತಿಯು ರಾಜನಿಂದ ಸತ್ಕೃತನಾಗಿ ಬಹಳಷ್ಟು ರತ್ನಗಳನ್ನು ಪಡೆದು ಹೊರಟನು.

02029015a ತತಃ ಸಾಗರಕುಕ್ಷಿಸ್ಥಾನ್ಮ್ಲೇಚ್ಛಾನ್ಪರಮದಾರುಣಾನ್|

02029015c ಪಹ್ಲವಾನ್ಬರ್ಬರಾಂಶ್ಚೈವ ತಾನ್ಸರ್ವಾನನಯದ್ವಶಂ||

ಅನಂತರ ಅವನು ಸಾಗರದ ದಂಡೆಯಲ್ಲಿದ್ದ ಪರಮದಾರುಣ ಮ್ಲೇಚ್ಛರನ್ನು, ಪಹ್ಲವರನ್ನು ಮತ್ತು ಬರ್ಬರರನ್ನು ಎಲ್ಲರನ್ನೂ ವಶಪಡಿಸಿಕೊಂಡನು.

02029016a ತತೋ ರತ್ನಾನ್ಯುಪಾದಾಯ ವಶೇ ಕೃತ್ವಾ ಚ ಪಾರ್ಥಿವಾನ್|

02029016c ನ್ಯವರ್ತತ ನರಶ್ರೇಷ್ಠೋ ನಕುಲಶ್ಚಿತ್ರಮಾರ್ಗವಿತ್||

ಪಾರ್ಥಿವರನ್ನು ವಶಪಡಿಸಿಕೊಂಡು ರತ್ನಗಳನ್ನು ಗಳಿಸಿದ ನಂತರ ಚಿತ್ರಮಾರ್ಗವಿದು ನರಶ್ರೇಷ್ಠ ನಕುಲನು ಹಿಂದಿರುಗಿದನು.

02029017a ಕರಭಾಣಾಂ ಸಹಸ್ರಾಣಿ ಕೋಶಂ ತಸ್ಯ ಮಹಾತ್ಮನಃ|

02029017c ಊಹುರ್ದಶ ಮಹಾರಾಜ ಕೃಚ್ಛ್ರಾದಿವ ಮಹಾಧನಂ||

ಮಹಾರಾಜ! ಆ ಮಹಾತ್ಮನು ಸಂಗ್ರಹಿಸಿದ್ದ ಮಹಾಧನವನ್ನು ಹತ್ತುಸಾವಿರ ಒಂಟೆಗಳು ಬಹಳ ಕಷ್ಟಪಟ್ಟು ಹೊತ್ತು ತಂದವು.

02029018a ಇಂದ್ರಪ್ರಸ್ಥಗತಂ ವೀರಮಭ್ಯೇತ್ಯ ಸ ಯುಧಿಷ್ಠಿರಂ|

02029018c ತತೋ ಮಾದ್ರೀಸುತಃ ಶ್ರೀಮಾನ್ಧನಂ ತಸ್ಮೈ ನ್ಯವೇದಯತ್||

ಅನಂತರ ಶ್ರೀಮಾನ್ ಮಾದ್ರೀಸುತನು ಇಂದ್ರಪ್ರಸ್ಥಕ್ಕೆ ಹೋಗಿ ವೀರ ಯುಧಿಷ್ಠಿರನನ್ನು ಭೇಟಿಯಾಗಿ ಅವನಿಗೆ ಧನವನ್ನು ಅರ್ಪಿಸಿದನು.

02029019a ಏವಂ ಪ್ರತೀಚೀಂ ನಕುಲೋ ದಿಶಂ ವರುಣಪಾಲಿತಾಂ|

02029019c ವಿಜಿಗ್ಯೇ ವಾಸುದೇವೇನ ನಿರ್ಜಿತಾಂ ಭರತರ್ಷಭಃ||

ಹೀಗೆ ಭರತರ್ಷಭ ನಕುಲನು ವಾಸುದೇವನಿಂದ ಗೆಲ್ಲಲ್ಪಟ್ಟಿದ್ದ ವರುಣನಿಂದ ಪಾಲಿತ ಪಶ್ಚಿಮ ದಿಕ್ಕನ್ನು ಗೆದ್ದನು.”

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದಿಗ್ವಿಜಯಪರ್ವಣಿ ನಕುಲಪ್ರಾತೀಚೀವಿಜಯೇ ಏಕೋನತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದಿಗ್ವಿಜಯಪರ್ವದಲ್ಲಿ ನಕುಲಪ್ರಾತೀಚೀವಿಜಯ ಎನ್ನುವ ಇಪ್ಪತ್ತೊಂಭತ್ತನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದಿಗ್ವಿಜಯಪರ್ವಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದಿಗ್ವಿಜಯಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೧/೧೮, ಉಪಪರ್ವಗಳು-೨೩/೧೦೦, ಅಧ್ಯಾಯಗಳು-೨೫೪/೧೯೯೫, ಶ್ಲೋಕಗಳು-೮೨೨೭/೮೩೮೪೦

Image result for indian birds drawing

[1]ಪಶ್ಚಿಮ ದಿಕ್ಕಿನ ಪ್ರದೇಶಗಳೆಂದೇ? ಶ್ರೀಕೃಷ್ಣನು ಈ ಪ್ರದೇಶಗಳನ್ನು ಈ ಮೊದಲೇ ಗೆದ್ದಿದ್ದನೇ?

[2] ಈಗಿನ ಪಂಜಾಬೇ?

[3]ಶ್ರೀಕೃಷ್ಣನಲ್ಲಿಯೂ ನಕುಲನು ಹೋದನೆಂದರೆ ಇದೊಂದು ರಾಜಸೂಯ ಯಾಗದ ಮುನ್ನ ಸಾಂಪ್ರದಾಯಿಕವಾಗಿ ಮಾಡಬೇಕಾದ ದಿಗ್ವಿಜಯ ಎಂದು ಹೇಳಬಹುದು.

[4]ಹತ್ತು ವಾರ್ಷ್ಣೇಯ ಕುಲಗಳ ರಾಜ್ಯಗಳು ಯಾವುವು?

Comments are closed.