ಸಭಾಪರ್ವ: ಸಭಾಕ್ರಿಯಾ ಪರ್ವ
೧೦
ಕುಬೇರಸಭೆಯ ವರ್ಣನೆ (೧-೨೩)
02010001 ನಾರದ ಉವಾಚ|
02010001a ಸಭಾ ವೈಶ್ರವಣೀ ರಾಜನ್ ಶತಯೋಜನಮಾಯತಾ|
02010001c ವಿಸ್ತೀರ್ಣಾ ಸಪ್ತತಿಶ್ಚೈವ ಯೋಜನಾನಿ ಸಿತಪ್ರಭಾ||
ನಾರದನು ಹೇಳಿದನು: “ರಾಜನ್! ವೈಶ್ರವಣಿಯ ಬಿಳಿಯ ಕಾಂತಿಯುಕ್ತ ಸಭೆಯು ಒಂದು ನೂರು ಯೋಜನ ಉದ್ದ ಮತ್ತು ಎಪ್ಪತ್ತು ಯೋಜನ ವಿಸ್ತೀರ್ಣವಾದದ್ದು.
02010002a ತಪಸಾ ನಿರ್ಮಿತಾ ರಾಜನ್ಸ್ವಯಂ ವೈಶ್ರವಣೇನ ಸಾ|
02010002c ಶಶಿಪ್ರಭಾ ಖೇಚರೀಣಾಂ ಕೈಲಾಸಶಿಖರೋಪಮಾ||
ರಾಜನ್! ಸ್ವಯಂ ವೈಶ್ರವಣನು ತನ್ನ ತಪಸ್ಸಿನಿಂದ ಚಂದ್ರನ ಪ್ರಭೆಯನ್ನು ಹೊಂದಿದ, ಆಕಾಶದಲ್ಲಿ ತೇಲುತ್ತಿರುವ, ಕೈಲಾಸಶಿಖರದಂತಿದ್ದ ಆ ಸಭೆಯನ್ನು ನಿರ್ಮಿಸಿದನು.
02010003a ಗುಹ್ಯಕೈರುಹ್ಯಮಾನಾ ಸಾ ಖೇ ವಿಷಕ್ತೇವ ದೃಶ್ಯತೇ|
02010003c ದಿವ್ಯಾ ಹೇಮಮಯೈರುಚ್ಚೈಃ ಪಾದಪೈರುಪಶೋಭಿತಾ||
ಗುಹ್ಯಕರು ಕೊಂಡೊಯ್ಯುವ ಆ ಸಭೆಯು ಆಕಾಶಕ್ಕೆ ಅಂಟಿಕೊಂಡಿರುವಂತೆ ತೋರುತ್ತದೆ. ಅದು ದಿವ್ಯ ಹೇಮಮಯ ಎತ್ತರ ಮರಗಳಿಂದ ಶೋಭಿತವಾಗಿದೆ.
02010004a ರಶ್ಮಿವತೀ ಭಾಸ್ವರಾ ಚ ದಿವ್ಯಗಂಧಾ ಮನೋರಮಾ|
02010004c ಸಿತಾಭ್ರಶಿಖರಾಕಾರಾ ಪ್ಲವಮಾನೇವ ದೃಶ್ಯತೇ||
ಕಿರಣಗಳನ್ನು ಹೊರಸೂಸುವ, ಹೊಳೆಯುತ್ತಿರುವ, ದಿವ್ಯಗಂಧಾ ಮನೋರಮಾ ಬಿಳಿಯ ಮೋಡ ಅಥವಾ ಶಿಖರದಂತಿರುವ ಆ ಸಭೆಯು ತೇಲುತ್ತಿರುವಂತೆ ತೋರುತ್ತದೆ.
02010005a ತಸ್ಯಾಂ ವೈಶ್ರವಣೋ ರಾಜಾ ವಿಚಿತ್ರಾಭರಣಾಂಬರಃ|
02010005c ಸ್ತ್ರೀಸಹಸ್ರಾವೃತಃ ಶ್ರೀಮಾನಾಸ್ತೇ ಜ್ವಲಿತಕುಂಡಲಃ||
02010006a ದಿವಾಕರನಿಭೇ ಪುಣ್ಯೇ ದಿವ್ಯಾಸ್ತರಣಸಂವೃತೇ|
02010006c ದಿವ್ಯಪಾದೋಪಧಾನೇ ಚ ನಿಷಣ್ಣಃ ಪರಮಾಸನೇ||
ಅಲ್ಲಿ ರಾಜಾ ವೈಶ್ರವಣನು ವಿಚಿತ್ರ ಆಭರಣ ವಸ್ತ್ರಗಳನ್ನು ಧರಿಸಿ, ಹೊಳೆಯುತ್ತಿರುವ ಕುಂಡಲಗಳನ್ನು ಧರಿಸಿ, ಸಹಸ್ರಾರು ಸ್ತ್ರೀಯರಿಂದ ಸುತ್ತುವರೆಯಲ್ಪಟ್ಟು, ದಿವಾಕರನಂತೆ ಹೊಳೆಯುತ್ತಿರುವ, ದಿವ್ಯ ದಿಂಬುಗಳಿಂದ ಅಲಂಕೃತ, ದಿವ್ಯ ಪಾದಪೀಠವನ್ನು ಹೊಂದಿದ, ಸುಂದರ ಶ್ರೇಷ್ಠ ಆಸನದಲ್ಲಿ ಕುಳಿತಿರುತ್ತಾನೆ.
02010007a ಮಂದಾರಾಣಾಮುದಾರಾಣಾಂ ವನಾನಿ ಸುರಭೀಣಿ ಚ|
02010007c ಸೌಗಂಧಿಕಾನಾಂ ಚಾದಾಯ ಗಂಧಾನ್ಗಂಧವಹಃ ಶುಚಿಃ||
02010008a ನಲಿನ್ಯಾಶ್ಚಾಲಕಾಖ್ಯಾಯಾಶ್ಚಂದನಾನಾಂ ವನಸ್ಯ ಚ|
02010008c ಮನೋಹೃದಯಸಂಹ್ಲಾದೀ ವಾಯುಸ್ತಮುಪಸೇವತೇ||
ಸುವಾಸಿತ ಶುದ್ಧ ಗಾಳಿಯು ಮಂದಾರ ವನಗಳ ಉದಾರತೆಯನ್ನು ಎತ್ತಿಕೊಂಡು, ಸೌಂಗಂಧಿಕಗಳ ಸುವಾಸನೆಯನ್ನು ಎತ್ತಿ ತರುತ್ತದೆ.
02010009a ತತ್ರ ದೇವಾಃ ಸಗಂಧರ್ವಾ ಗಣೈರಪ್ಸರಸಾಂ ವೃತಾಃ|
02010009c ದಿವ್ಯತಾನೇನ ಗೀತಾನಿ ಗಾಂತಿ ದಿವ್ಯಾನಿ ಭಾರತ||
02010010a ಮಿಶ್ರಕೇಶೀ ಚ ರಂಭಾ ಚ ಚಿತ್ರಸೇನಾ ಶುಚಿಸ್ಮಿತಾ|
02010010c ಚಾರುನೇತ್ರಾ ಘೃತಾಚೀ ಚ ಮೇನಕಾ ಪುಂಜಿಕಸ್ಥಲಾ||
02010011a ವಿಶ್ವಾಚೀ ಸಹಜನ್ಯಾ ಚ ಪ್ರಂಲೋಚಾ ಉರ್ವಶೀ ಇರಾ|
02010011c ವರ್ಗಾ ಚ ಸೌರಭೇಯೀ ಚ ಸಮೀಚೀ ಬುದ್ಬುದಾ ಲತಾ||
02010012a ಏತಾಃ ಸಹಸ್ರಶಶ್ಚಾನ್ಯಾ ನೃತ್ತಗೀತವಿಶಾರದಾಃ|
02010012c ಉಪತಿಷ್ಠಂತಿ ಧನದಂ ಪಾಂಡವಾಪ್ಸರಸಾಂ ಗಣಾಃ||
ಪಾಂಡವ! ಮಿಶ್ರಕೇಶಿ, ರಂಭಾ, ಶುಚಿಸ್ಮಿತೆ ಚಿತ್ರಸೇನಾ, ಚಾರುನೇತ್ರೆ, ಘೃತಾಚೀ, ಮೇನಕಾ, ಪುಂಜಿಕಸ್ಥಲಾ, ವಿಶ್ವಾಚೀ, ಸಹಜನ್ಯಾ, ಪ್ರಮ್ಲೋಚಾ, ಉರ್ವಶೀ, ಇರಾ, ವರ್ಗಾ, ಸೌರಭೇಯೀ, ಸಮೀಚೀ, ಬುದ್ಬುದಾ, ಲತಾ - ಇವರು ಮತ್ತು ಇನ್ನೂ ಸಹಸ್ರಾರು ಇತರ ನೃತ್ತಗೀತವಿಶಾರದ ಅಪ್ಸರೆಯರ ಗುಂಪು ಧನದನ ಸೇವೆಮಾಡುತ್ತದೆ.
02010013a ಅನಿಶಂ ದಿವ್ಯವಾದಿತ್ರೈರ್ನೃತ್ತೈರ್ಗೀತೈಶ್ಚ ಸಾ ಸಭಾ|
02010013c ಅಶೂನ್ಯಾ ರುಚಿರಾ ಭಾತಿ ಗಂಧರ್ವಾಪ್ಸರಸಾಂ ಗಣೈಃ||
ಅನಿಶವೂ ದಿವ್ಯ ವಾದ್ಯ, ನೃತ್ಯ, ಗೀತಗಳಿಂದ ತುಂಬಿದ ಆ ಸಭೆಯು ಗಂಧರ್ವಾಪ್ಸರ ಗಣಗಳಿಂದ ಹೊಳೆಯುತ್ತಿರುತ್ತದೆ.
02010014a ಕಿನ್ನರಾ ನಾಮ ಗಂಧರ್ವಾ ನರಾ ನಾಮ ತಥಾಪರೇ|
02010014c ಮಣಿಭದ್ರೋಽಥ ಧನದಃ ಶ್ವೇತಭದ್ರಶ್ಚ ಗುಃಯಕಃ||
02010015a ಕಶೇರಕೋ ಗಂಡಕಂಡುಃ ಪ್ರದ್ಯೋತಶ್ಚ ಮಹಾಬಲಃ|
02010015c ಕುಸ್ತುಂಬುರುಃ ಪಿಶಾಚಶ್ಚ ಗಜಕರ್ಣೋ ವಿಶಾಲಕಃ||
02010016a ವರಾಹಕರ್ಣಃ ಸಾಂದ್ರೋಷ್ಠಃ ಫಲಭಕ್ಷಃ ಫಲೋದಕಃ|
02010016c ಅಂಗಚೂಡಃ ಶಿಖಾವರ್ತೋ ಹೇಮನೇತ್ರೋ ವಿಭೀಷಣಃ||
02010017a ಪುಷ್ಪಾನನಃ ಪಿಂಗಲಕಃ ಶೋಣಿತೋದಃ ಪ್ರವಾಲಕಃ|
02010017c ವೃಕ್ಷವಾಸ್ಯನಿಕೇತಶ್ಚ ಚೀರವಾಸಾಶ್ಚ ಭಾರತ||
02010018a ಏತೇ ಚಾನ್ಯೇ ಚ ಬಹವೋ ಯಕ್ಷಾಃ ಶತಸಹಸ್ರಶಃ|
02010018c ಸದಾ ಭಗವತೀ ಚ ಶ್ರೀಸ್ತಥೈವ ನಲಕೂಬರಃ||
ಭಾರತ! ಅಲ್ಲಿ ಕಿನ್ನರ ಎಂಬ ಹೆಸರಿನ ಗಂಧರ್ವರು, ಮತ್ತು ನರ ಎಂಬ ಹೆಸರಿನ ಇತರರು, ಮಣಿಭದ್ರ, ಧನದ, ಶ್ವೇತಭದ್ರ, ಗುಹ್ಯಕ, ಕಶೇರಕ, ಗಂಡಕಂಡು, ಮಹಾಬಲ ಪ್ರದ್ಯೋತ, ಕುಸ್ತುಂಬುರು, ಪಿಶಾಚ, ಗಜಕರ್ಣ, ವಿಶಾಲಕ, ವರಾಹಕರ್ಣ, ಸಾಂದ್ರೋಷ್ಠ, ಫಲಭಕ್ಷ, ಫಲೋದಕ, ಅಂಗಚೂಡ, ಶಿಖಾವರ್ತ, ಹೇಮನೇತ್ರ, ವಿಭೀಷಣ, ಪುಷ್ಪಾನನ, ಪಿಂಗಲಕ, ಶೋಣಿತೋದ, ಪ್ರವಾಲಕ, ವೃಕ್ಷವಾಸ್ಯ, ನಿಕೇತ, ಚೀರವಾಸ, ಇವರು ಮತ್ತು ಅನ್ಯ ಬಹಳಷ್ಟು ನೂರಾರು ಸಹಸ್ರಾರು ಯಕ್ಷರು ನಲಕೂಬರರು, ಭಗವತೀ ಮತ್ತು ಶ್ರೀ ಸದಾ ಅವನ ಉಪಸ್ಥಿತಿಯಲ್ಲಿರುತ್ತಾರೆ.
02010019a ಅಹಂ ಚ ಬಹುಶಸ್ತಸ್ಯಾಂ ಭವಂತ್ಯನ್ಯೇ ಚ ಮದ್ವಿಧಾಃ|
02010019c ಆಚಾರ್ಯಾಶ್ಚಾಭವಂಸ್ತತ್ರ ತಥಾ ದೇವರ್ಷಯೋಽಪರೇ||
ನಾನು ಮತ್ತು ನನ್ನಂಥಹ ಇತರರು, ಆಚಾರ್ಯರು, ಇತರ ದೇವರ್ಷಿಗಳು ಹಲವಾರು ಬಾರಿ ಅಲ್ಲಿ ಬಂದಿರುತ್ತಾರೆ.
02010020a ಭಗವಾನ್ಭೂತಸಂಘೈಶ್ಚ ವೃತಃ ಶತಸಹಸ್ರಶಃ|
02010020c ಉಮಾಪತಿಃ ಪಶುಪತಿಃ ಶೂಲಧೃಗ್ಭಗನೇತ್ರಹಾ||
02010021a ತ್ರ್ಯಂಬಕೋ ರಾಜಶಾರ್ದೂಲ ದೇವೀ ಚ ವಿಗತಕ್ಲಮಾ|
ನೂರಾರು ಸಹಸ್ರಾರು ಭೂತಗಣಗಳಿಂದ ಆವೃತ ಉಮಾಪತಿ, ಪಶುಪತಿ, ಶೂಲಧಾರಿ, ಭಗನೇತ್ರಹ, ಭಗವಾನ್ ತ್ರ್ಯಂಬಕ ಮತ್ತು ಅಯಾಸವೇ ತೋರದ ದೇವಿ ಅಲ್ಲಿದ್ದಾರೆ.
02010021c ವಾಮನೈರ್ವಿಕಟೈಃ ಕುಬ್ಜೈಃ ಕ್ಷತಜಾಕ್ಷೈರ್ಮನೋಜವೈಃ||
02010022a ಮಾಂಸಮೇದೋವಸಾಹಾರೈರುಗ್ರಶ್ರವಣದರ್ಶನೈಃ|
02010022c ನಾನಾಪ್ರಹರಣೈರ್ಘೋರೈರ್ವಾತೈರಿವ ಮಹಾಜವೈಃ|
02010022e ವೃತಃ ಸಖಾಯಮನ್ವಾಸ್ತೇ ಸದೈವ ಧನದಂ ನೃಪ||
ನೃಪ! ಮಾಂಸ, ಕೊಬ್ಬು ಮತ್ತು ಎಲಬುಗಳನ್ನು ಸೇವಿಸುವ, ನೋಡಲು ಅಥವಾ ಕೇಳಲು ಉಗ್ರರಾಗಿರುವ, ನಾನಾ ಆಯುಧಗಳನ್ನು ಘೋರ ಭಿರುಗಾಳಿಯಿಂದ ನಡುಗುತ್ತಿದೆಯೋ ಎನ್ನುವಂತೆ ಬೀಸುತ್ತಿರುವ, ವಿಕಟ, ಮಹಾಜವ, ಕೆಂಪುಕಣ್ಣಿನ, ಮನೋವೇಗದ ಕುಬ್ಜ ಸಖರಿಂದ ಧನದನು ಸದಾ ಆವೃತನಾಗಿರುತ್ತಾನೆ.
02010023a ಸಾ ಸಭಾ ತಾದೃಶೀ ರಾಜನ್ಮಯಾ ದೃಷ್ಟಾಂತರಿಕ್ಷಗಾ|
02010023c ಪಿತಾಮಹಸಭಾಂ ರಾಜನ್ಕಥಯಿಷ್ಯೇ ಗತಕ್ಲಮಾಂ||
ರಾಜನ್! ಅಂತರಿಕ್ಷದಲ್ಲಿ ಪ್ರಯಾಣಿಸುತ್ತಿರುವಾಗ ಅವನ ಈ ಸಭೆಯನ್ನು ನಾನು ನೋಡಿದೆ. ರಾಜನ್! ಈಗ ನಾನು ಎಲ್ಲ ಆಯಾಸಗಳನ್ನೂ ಹೋಗಲಾಡಿಸುವ ಪಿತಾಮಹನ ಸಭೆಯ ಕುರಿತು ಹೇಳುತ್ತೇನೆ.”
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಸಭಾಕ್ರಿಯಾಪರ್ವಣಿ ಧನದಸಭಾವರ್ಣನಂ ನಾಮ ದಶಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಸಭಾಪರ್ವದಲ್ಲಿ ಸಭಾಕ್ರಿಯಾ ಪರ್ವದಲ್ಲಿ ಧನದಸಭಾವರ್ಣನೆ ಎನ್ನುವ ಹತ್ತನೆಯ ಅಧ್ಯಾಯವು.