ಹರಿವಂಶ: ಹರಿವಂಶ ಪರ್ವ
೧೪
ಸಗರೋತ್ಪತ್ತಿಃ
19014001 ಜನಮೇಜಯ ಉವಾಚ|
19014001a ಕಥಂ ಸ ಸಗರೋ ಜಾತೋ ಗರೇಣೈವ ಸಹಾಚ್ಯುತಃ |
19014001c ಕಿಮರ್ಥಂ ಚ ಶಕಾದೀನಾಂ ಕ್ಷತ್ರಿಯಾಣಾಂ ಮಹೌಜಸಾಮ್||
19014002a ಧರ್ಮಂ ಕುಲೋಚಿತಂ ಕ್ರುದ್ಧೋ ರಾಜಾ ನಿರಸದಚ್ಯುತಃ |
19014002c ಏತನ್ಮೇ ಸರ್ವಮಾಚಕ್ಷ್ವ ವಿಸ್ತರೇಣ ತಪೋಧನ ||
ಜನಮೇಜಯನು ಹೇಳಿದನು: “ತಪೋಧನ! ಅಚ್ಯುತ ಸಗರನು ವಿಷದೊಂದಿಗೆ ಹೇಗೆ ಹುಟ್ಟಿದನು? ಮತ್ತು ಯಾವ ಕಾರಣಕ್ಕಾಗಿ ಅಚ್ಯುತ ರಾಜ ಸಗರನು ಕ್ರುದ್ಧನಾಗಿ ಶಕರೇ ಮೊದಲಾದ ಮಹೌಜಸ ಕ್ಷತ್ರಿಯರನ್ನು ಅವರ ಕುಲೋಚಿತ ಧರ್ಮದಿಂದ ನಿರಸನಗೊಳಿಸಿದನು? ಇವೆಲ್ಲವನ್ನೂ ವಿಸ್ತಾರವಾಗಿ ನನಗೆ ಹೇಳಬೇಕು.”
19014003 ವೈಶಂಪಾಯನ ಉವಾಚ|
19014003a ಬಾಹೋರ್ವ್ಯಸನಿನಸ್ತಾತ ಹೃತಂ ರಾಜ್ಯಮಭೂತ್ಕಿಲ |
19014003c ಹೈಹಯೈಸ್ತಾಲಜಂಘೈಶ್ಚ ಶಕೈಃ ಸಾರ್ಧಂ ವಿಶಾಂಪತೇ ||
ವೈಶಂಪಾಯನನು ಹೇಳಿದನು: “ತಾತ! ವಿಶಾಂಪತೇ! ವ್ಯಸನಿಯಾಗಿದ್ದ ಬಾಹುವಿನ ರಾಜ್ಯವನ್ನು ಹೈಹಯ, ತಾಲಜಂಘ ಮತ್ತು ಶಕರು ಒಟ್ಟಾಗಿ ಅಪಹರಿಸಿದರು.
19014004a ಯವನಾಃ ಪಾರದಾಶ್ಚೈವ ಕಾಂಬೋಜಾಃ ಪಹ್ಲವಾಃ ಖಸಾಃ |
19014004c ಏತೇ ಹ್ಯಪಿ ಗಣಾಃ ಪಂಚ ಹೈಹಯಾರ್ಥೇ ಪರಾಕ್ರಮಮ್ ||
ಯವನರು, ಪಾರದರು, ಕಾಂಬೋಜರು, ಪಹ್ಲವರು ಮತ್ತು ಖಸರು ಈ ಐದು ಗಣಗಳೂ ಹೈಹಯರ ಕಡೆಯ ಪರಾಕ್ರಮಿಗಳಾಗಿದ್ದರು.
19014005a ಹೃತರಾಜ್ಯಸ್ತದಾ ರಾಜಾ ಸ ವೈ ಬಾಹುರ್ವನಂ ಯಯೌ |
19014005c ಪತ್ನ್ಯಾ ಚಾನುಗತೋ ದುಃಖೀ ವನೇ ಪ್ರಾಣಾನವಾಸೃಜತ್ ||
ರಾಜ್ಯವನ್ನು ಕಳೆದುಕೊಂಡ ನಂತರ ರಾಜಾ ಬಾಹುವು ಪತ್ನಿಯೊಂದಿಗೆ ವನಕ್ಕೆ ತೆರಳಿದನು. ದುಃಖಿಯಾಗಿದ್ದ ಅವನು ವನದಲ್ಲಿಯೇ ಪ್ರಾಣಗಳನ್ನು ತ್ಯಜಿಸಿದನು.
19014006a ಪತ್ನೀ ತು ಯಾದವೀ ತಸ್ಯ ಸಗರ್ಭಾ ಪೃಷ್ಠತೋಽನ್ವಗಾತ್ |
19014006c ಸಪತ್ನ್ಯಾ ಚ ಗರಸ್ತಸ್ಯೈ ದತ್ತಃ ಪೂರ್ವಮಭೂತ್ಕಿಲ ||
ಗರ್ಭವತಿಯಾಗಿದ್ದ ಅವನ ಪತ್ನಿ ಯಾದವಿಯು ಅವನ ಹಿಂದೆಯೇ ಹೋಗಿದ್ದಳು. ಅದಕ್ಕೆ ಮೊದಲೇ ಅವಳ ಸವತಿಯು ಅವಳಿಗೆ ವಿಷವನ್ನು ನೀಡಿದ್ದಳು.
19014007a ಸಾ ತು ಭರ್ತುಶ್ಚಿತಾಂ ಕೃತ್ವಾ ವನೇ ತಾಮಧ್ಯರೋಹತ |
19014007c ಔರ್ವಸ್ತಾಂ ಭಾರ್ಗವಸ್ತಾತ ಕಾರುಣ್ಯಾತ್ಸಮವಾರಯತ್ ||
ತಾತ! ವನದಲ್ಲಿ ಅವಳು ಪತಿಯ ಚಿತೆಯನ್ನು ನಿರ್ಮಿಸಿ ಅದನ್ನು ಏರಲು ತೊಡಗಿದಾಗ ಭಾರ್ಗವ ಔರ್ವನು ಕಾರುಣ್ಯದಿಂದ ಅವಳನ್ನು ತಡೆದನು.
19014008a ತಸ್ಯಾಶ್ರಮೇ ಚ ತಂ ಗರ್ಭಂ ಗರೇಣೈವ ಸಹಾಚ್ಯುತಮ್ |
19014008c ವ್ಯಜಾಯತ ಮಹಾಬಾಹುಂ ಸಗರಂ ನಾಮ ಪಾರ್ಥಿವಮ್ ||
ಅವನ ಆಶ್ರಮದಲ್ಲಿಯೇ ಅವಳು ವಿಷದಿಂದಲೂ ಬೀಳದೇ ಇದ್ದ ಗರ್ಭವನ್ನು ಧರಿಸಿದ್ದಳು. ಅನಂತರ ಅವಳು ಸಗರ ಎಂಬ ಮಹಾಬಾಹು ಪಾರ್ಥಿವನಿಗೆ ಜನ್ಮವಿತ್ತಳು.
19014009a ಔರ್ವಸ್ತು ಜಾತಕರ್ಮಾದಿ ತಸ್ಯ ಕೃತ್ವಾ ಮಹಾತ್ಮನಃ |
19014009c ಅಧ್ಯಾಪ್ಯ ವೇದಶಾಸ್ತ್ರಾಣಿ ತತೋಽಸ್ತ್ರಂ ಪ್ರತ್ಯಪಾದಯತ್ ||
ಮಹಾತ್ಮ ಔರ್ವನಾದರೋ ಅವನ ಜಾತಕರ್ಮಾದಿಗಳನ್ನು ಮಾಡಿ, ಅವನಿಗೆ ವೇದಶಾಸ್ತ್ರಗಳ ಅಧ್ಯಾಪನೆಗಳನ್ನು ಮಾಡಿಸಿ, ಅಸ್ತ್ರವನ್ನು ನೀಡಿದನು.
19014010a ಆಗ್ನೇಯಂ ತು ಮಹಾಘೋರಮಮರೈರಪಿ ದುಃಸಹಮ್ |
19014010c ಸ ತೇನಾಸ್ತ್ರಬಲೇನಾಜೌ ಬಲೇನ ಚ ಸಮನ್ವಿತಃ ||
ಅಮರರಿಗೂ ದುಃಸ್ಸಹವಾದ ಮಹಾಘೋರ ಆಗ್ನೇಯಾಸ್ತ್ರವನ್ನು ಪಡೆದು, ಆ ಅಸ್ತ್ರಬಲದಿಂದ ಸಗರನು ಬಲಾನ್ವಿತನಾದನು.
19014011a ಹೈಹಯಾನ್ನಿಜಘಾನಾಶು ಕ್ರುದ್ಧೋ ರುದ್ರಃ ಪಶೂನಿವ |
19014011c ಆಜಹಾರ ಚ ಲೋಕೇಷು ಕೀರ್ತಿಂ ಕೀರ್ತಿಮತಾಂ ವರಃ ||
ಕೀರ್ತಿವಂತರಲ್ಲಿ ಶ್ರೇಷ್ಠನಾದ ಅವನು ಕ್ರುದ್ಧ ರುದ್ರನು ಯಜ್ಞಪಶುವನ್ನು ಹೇಗೋ ಹಾಗೆ ಹೈಹಯರನ್ನು ಸಂಹರಿಸಿ ಲೋಕಗಳಲ್ಲಿ ಕೀರ್ತಿಯನ್ನು ಗಳಿಸಿದನು.
19014012a ತತಃ ಶಕಾನ್ಸಯವನಾನ್ಕಾಂಬೋಜಾನ್ಪಾರದಾಂಸ್ತದಾ |
19014012c ಪಹ್ಲವಾಂಶ್ಚೈವ ನಿಃಶೇಷಾನ್ಕರ್ತುಂ ವ್ಯವಸಿತಸ್ತದಾ ||
ಅನಂತರ ಅವನು ಶಕರು, ಯವನರು, ಕಾಂಬೋಜರು, ಪಾರದರು ಮತ್ತು ಪಹ್ಲವರನ್ನು ನಿಃಶೇಷರನ್ನಾಗಿ ಮಾಡತೊಡಗಿದನು.
19014013a ತೇ ವಧ್ಯಮಾನಾ ವೀರೇಣ ಸಗರೇಣ ಮಹಾತ್ಮನಾ |
19014013c ವಸಿಷ್ಠಂ ಶರಣಂ ಗತ್ವಾ ಪ್ರಣಿಪೇತುರ್ಮನೀಷಿಣಮ್ ||
ಹಾಗೆ ಮಹಾತ್ಮ ವೀರ ಸಗರನಿಂದ ವಧಿಸಲ್ಪಡುತ್ತಿದ್ದ ಅವರು ಮನೀಷಿಣಿ ವಸಿಷ್ಠನ ಶರಣು ಹೋಗಿ ಅಡ್ಡಬಿದ್ದರು.
19014014a ವಸಿಷ್ಠಸ್ತ್ವಥ ತಾಂದೃಷ್ಟ್ವಾ ಸಮಯೇನ ಮಹಾದ್ಯುತಿಃ |
19014014c ಸಗರಂ ವಾರಯಾಮಾಸ ತೇಷಾಂ ದತ್ತ್ವಾಭಯಂ ತದಾ ||
ಅವರನ್ನು ನೋಡಿ ಮಹಾದ್ಯುತಿ ವಸಿಷ್ಠನು ಒಪ್ಪಂದದೊಂದಿಗೆ ಅವರಿಗೆ ಅಭಯವನ್ನಿತ್ತು ಸಗರನನ್ನು ತಡೆದನು.
19014015a ಸಗರಃ ಸ್ವಾಂ ಪ್ರತಿಜ್ಞಾಂ ಚ ಗುರೋರ್ವಾಕ್ಯಂ ನಿಶಮ್ಯ ಚ |
19014015c ಧರ್ಮಂ ಜಘಾನ ತೇಷಾಂ ವೈ ವೇಷಾನ್ಯತ್ವಂ ಚಕಾರ ಹ ||
ತನ್ನ ಪ್ರತಿಜ್ಞೆಯನ್ನೂ ಮತ್ತು ಗುರುವಿನ ವಾಕ್ಯವನ್ನೂ ಆಲೋಚಿಸಿ ಸಗರನು ಅವರ ಧರ್ಮವನ್ನು ನಾಶಗೊಳಿಸಿದನು ಮತ್ತು ಅವರ ವೇಷವನ್ನೇ ಬದಲಿಸಿದನು.
19014016a ಅರ್ದ್ಧಂ ಶಕಾನಾಂ ಶಿರಸೋ ಮುಂಡಂ ಕೃತ್ವಾ ವ್ಯಸರ್ಜಯತ್ |
19014016c ಯವನಾನಾಂ ಶಿರಃ ಸರ್ವಂ ಕಾಂಬೋಜಾನಾಂ ತಥೈವ ಚ ||
ಅವನು ಶಕರ ಶಿರಸ್ಸನ್ನು ಅರ್ಧಮುಂಡನ ಮಾಡಿದನು. ಯವನರ ಮತ್ತು ಕಾಂಬೋಜರ ಇಡೀ ತಲೆಯನ್ನು ಬೋಳಿಸಿದನು.
19014017a ಪಾರದಾ ಮುಕ್ತಕೇಶಾಶ್ಚ ಪಹ್ಲವಾಃ ಶ್ಮಶ್ರುಧಾರಿಣಃ |
19014017c ನಿಃಸ್ವಾಧ್ಯಾಯವಷಟ್ಕಾರಾಃ ಕೃತಾಸ್ತೇನ ಮಹಾತ್ಮನಾ ||
ಆ ಮಹಾತ್ಮನು ಪಾರದರನ್ನು ಮುಕ್ತಕೇಶರನ್ನಾಗಿಯೂ (ತಲೆಗೂದಲನ್ನು ಕಟ್ಟದವರನ್ನಾಗಿ), ಪಹ್ಲವರನ್ನು ಕೇವಲ ಗಡ್ಡ-ಧಾರಿಗಳನ್ನಾಗಿಯೂ ಮಾಡಿದನು. ಅವರಿಗೆ ಸ್ವಾಧ್ಯಾಯ ಮತ್ತು ವಷಟ್ಕಾರಗಳನ್ನು ನಿಷೇದಿಸಿದನು.
19014018a ಶಕಾ ಯವನಕಾಂಬೋಜಾಃ ಪಾರದಾಶ್ಚ ವಿಶಾಂಪತೇ |
19014018c ಕೋಲಿಸರ್ಪಾಃ ಸಮಹಿಷಾ ದಾರ್ದ್ಯಾಶ್ಚೋಲಾಃ ಸಕೇರಲಾಃ ||
19014019a ಸರ್ವೇ ತೇ ಕ್ಷತ್ರಿಯಾಸ್ತಾತ ಧರ್ಮಸ್ತೇಷಾಂ ನಿರಾಕೃತಃ |
19014019c ವಸಿಷ್ಠವಚನಾದ್ರಾಜನ್ಸಗರೇಣ ಮಹಾತ್ಮನಾ ||
ವಿಶಾಂಪತೇ! ಶಕರು, ಯವನರು, ಕಾಂಬೋಜರು, ಪಾರದರು, ಕೋಲಿಸರ್ಪರು, ಮಹಿಷರು, ದಾರ್ದ್ಯರು, ಚೋಲರು ಮತ್ತು ಕೇರಲರು – ಇವರೆಲ್ಲರೂ ಕ್ಷತ್ರಿಯರೇ ಆಗಿದ್ದರು. ತಾತ! ವಸಿಷ್ಠನ ಮಾತಿನಂತೆ ಮಹಾತ್ಮ ಸಗರನು ಅವರ ಧರ್ಮವನ್ನು ನಿರಾಕಾರಗೊಳಿಸಿದನು.
19014020a ಖಸಾಂಸ್ತು ಪಾರಾಂಶ್ಚೋಲಾಂಶ್ಚ ಮದ್ರಾನ್ಕಿಷ್ಕಿಂಧಕಾಂಸ್ತಥಾ|
19014020c ಕೌಂತಲಾಂಶ್ಚ ತಥಾ ವಂಗಾನ್ಸಾಲ್ವಾನ್ಕೌಂಕಣಕಾಂಸ್ತಥಾ ||
19014021a ಸ ಧರ್ಮವಿಜಯೀ ರಾಜಾ ವಿಜಿತ್ಯೇಮಾಂ ವಸುಂಧರಾಮ್ |
19014021c ಅಶ್ವಂ ವೈ ಪ್ರೇರಯಾಮಾಸ ವಾಜಿಮೇಧಾಯ ದೀಕ್ಷಿತಃ ||
ಖಸರು, ಪಾರರು, ಚೋಲರು, ಮದ್ರರು, ಕಿಷ್ಕಿಂಧರು, ಕುಂತಲರು, ವಂಗರು, ಸಾಲ್ವರು ಮತ್ತು ಕೊಂಕಣಕರನ್ನೂ ಸೋಲಿಸಿ ಆ ಧರ್ಮವಿಜಯಿ ರಾಜನು ಇಡೀ ವಸುಂಧರೆಯನ್ನು ಗೆದ್ದನು. ಅಶ್ವಮೇಧದ ದೀಕ್ಷೆಯನ್ನು ಪಡೆದು ಅವನು ಅಶ್ವವನ್ನು ಬಿಟ್ಟನು.
19014022a ತಸ್ಯ ಚಾರಯತಃ ಸೋಽಶ್ವಃ ಸಮುದ್ರೇ ಪೂರ್ವದಕ್ಷಿಣೇ |
19014022c ವೇಲಾಸಮೀಪೇಽಪಹೃತೋ ಭೂಮಿಂ ಚೈವ ಪ್ರವೇಶಿತಃ ||
ಆ ಅಶ್ವವು ಪೂರ್ವ-ದಕ್ಷಿಣ ಸಮುತ್ರತೀರದಲ್ಲಿ ಸಂಚರಿಸುತ್ತಿದ್ದಾಗ ಅದನ್ನು ಅಪಹರಿಸಿ ಭೂಮಿಯೊಳಗೆ ಅದನ್ನು ಕೊಂಡೊಯ್ಯಲಾಯಿತು.
19014023a ಸ ತಂ ದೇಶಂ ತದಾ ಪುತ್ರೈಃ ಖಾನಯಾಮಾಸ ಪಾರ್ಥಿವಃ |
19014023c ಆಸೇದುಸ್ತೇ ತತಸ್ತತ್ರ ಖನ್ಯಮಾನೇ ಮಹಾರ್ಣವೇ ||
19014024a ತಮಾದಿಪುರುಷಂ ದೇವಂ ಹರಿಂ ಕೃಷ್ಣಂ ಪ್ರಜಾಪತಿಮ್ |
19014024c ವಿಷ್ಣುಂ ಕಪಿಲರೂಪೇಣ ಸ್ವಪಂತಂ ಪುರುಷೋತ್ತಮಮ್ ||
ಪಾರ್ಥಿವ ಸಗರನು ಆ ಪ್ರದೇಶವನ್ನು ತನ್ನ ಪುತ್ರರಿಂದ ಅಗೆಯಿಸಿದನು. ಸಮುದ್ರವನ್ನು ಅಗೆದಾಗ ಸಗರ ಪುತ್ರರು ಅಲ್ಲಿ ಕಪಿಲನ ರೂಪದಲ್ಲಿ ತಪಸ್ಸನ್ನಾಚರಿಸುತ್ತಿದ್ದ ಆದಿಪುರುಷ ದೇವ ಹರಿ ಕೃಷ್ಣ ಪ್ರಜಾಪತಿ ವಿಷ್ಣು ಪುರುಷೋತ್ತಮನನ್ನು ಕಂಡರು.
19014025a ತಸ್ಯ ಚಕ್ಷುಃಸಮುತ್ಥೇನ ತೇಜಸಾ ಪ್ರತಿಬುಧ್ಯತಃ |
19014025c ದಗ್ಧಾಸ್ತೇ ವೈ ಮಹಾರಾಜ ಚತ್ವಾರಸ್ತ್ವವಶೇಷಿತಾಃ ||
19014026a ಬರ್ಹಕೇತುಃ ಸುಕೇತುಶ್ಚ ತಥಾ ಧರ್ಮರಥೋ ನೃಪಃ |
19014026c ಶೂರಃ ಪಂಚಜನಶ್ಚೈವ ತಸ್ಯ ವಂಶಕರೋ ನೃಪಃ ||
ಮಹಾರಾಜ! ನೃಪ! ಅವನ ಕಣ್ಣುಗಳು ತೆರೆದುದರಿಂದ ಉಂಟಾದ ತೇಜಸ್ಸಿನಿಂದ ಅವರೆಲ್ಲರೂ ಭಸ್ಮವಾದರು. ಕೇವಲ ನಾಲ್ವರು ಉಳಿದುಕೊಂಡರು: ಬರ್ಹಕೇತು, ಸುಕೇತು, ಧರ್ಮರಥ, ಮತ್ತು ವಂಶಕರ ಪಂಚಜನ.
19014027a ಪ್ರಾದಾಚ್ಚ ತಸ್ಮೈ ಭಗವಾನ್ಹರಿರ್ನಾರಾಯಣೋ ವರಾನ್ |
19014027c ಅಕ್ಷಯಂ ವಂಶಮಿಕ್ಷ್ವಾಕೋಃ ಕೀರ್ತಿಂ ಚಾಪ್ಯನಿವರ್ತನೀಮ್ ||
19014028a ಪುತ್ರಂ ಸಮುದ್ರಂ ಚ ವಿಭುಃ ಸ್ವರ್ಗವಾಸಂ ತಥಾಕ್ಷಯಮ್ |
19014028c ಪುತ್ರಾಣಾಂ ಚಾಕ್ಷಯಾಽಲ್ಲೋಕಾಽಸ್ತಸ್ಯ ಯೇ ಚಕ್ಷುಷಾ ಹತಾಃ||
ಭಗವಾನ್ ಹರಿ ನಾರಾಯಣನು ಅವನಿಗೆ ಇಕ್ಷ್ವಾಕುಗಳ ಅಕ್ಷಯ ವಂಶವನ್ನೂ, ಅಳಿಯದ ಕೀರ್ತಿಯನ್ನೂ, ಸಮುದ್ರನನ್ನು ಮಗನನ್ನಾಗಿಯೂ, ಅಕ್ಷಯ ಸ್ವರ್ಗವಾಸವನ್ನೂ, ಮತ್ತು ತನ್ನ ದೃಷ್ಟಿಯಿಂದ ಹತರಾದ ಅವನ ಪುತ್ರರಿಗೆ ಅಕ್ಷಯ ಲೋಕಗಳನ್ನೂ ವರವನ್ನಾಗಿತ್ತನು.
19014029a ಸಮುದ್ರಶ್ಚಾರ್ಘ್ಯಮಾದಾಯ ವವಂದೇ ತಂ ಮಹೀಪತಿಮ್ |
19014029c ಸಾಗರತ್ವಂ ಚ ಲೇಭೇ ಸ ಕರ್ಮಣಾ ತೇನ ತಸ್ಯ ವೈ ||
ಸಮುದ್ರನು ಅರ್ಘ್ಯವನ್ನು ನೀಡಿ ಮಹೀಪತಿಯನ್ನು ವಂದಿಸಿದನು. ಅವನ ಈ ಕರ್ಮದಿಂದಾಗಿ ಅವನಿಗೆ ಸಾಗರತ್ವವು ದೊರಕಿತು.
19014030a ತಂ ಚಾಶ್ವಮೇಧಿಕಂ ಸೋಽಶ್ವಂ ಸಮುದ್ರಾದುಪಲಬ್ಧವಾನ್ |
19014030c ಆಜಹಾರಾಶ್ವಮೇಧಾನಾಂ ಶತಂ ಸ ಸುಮಹಾಯಶಾಃ |
19014030e ಪುತ್ರಾಣಾಂ ಚ ಸಹಸ್ರಾಣಿ ಷಷ್ಠಿಸ್ತಸ್ಯೇತಿ ನಃ ಶ್ರುತಮ್ ||
ಸಮುದ್ರನಿಂದ ಆ ಅಶ್ವವನ್ನು ಪಡೆದು ಅವನು ಮಹಾ ಯಶಸ್ಸಿನ ನೂರು ಅಶ್ವಮೇಧ ಯಾಗಗಳನ್ನು ಯಾಜಿಸಿದನು. ಅವನಿಗೆ ಅರವತ್ತು ಸಾವಿರ ಪುತ್ರರಿದ್ದರೆಂದು ಕೇಳಿದ್ದೇವೆ.”
ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ಸಗರೋತ್ಪತ್ತಿರ್ನಾಮ ಚತುರ್ದಶೋಽಧ್ಯಾಯಃ|
ಇದು ಶ್ರೀಮಹಾಭಾರತದ ಖಿಲಭಾಗ ಹರಿವಂಶದಲ್ಲಿ ಹರಿವಂಶಪರ್ವದಲ್ಲಿ ಸಗರೋತ್ಪತ್ತಿ ಎನ್ನುವ ಹದಿನಾಲ್ಕನೆಯ ಅಧ್ಯಾಯವು.