|| ಓಂ ಓಂ ನಮೋ ನಾರಾಯಣಾಯ || ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ ಖಿಲಭಾಗ

ಹರಿವಂಶ

ಹರಿವಂಶ ಪರ್ವ

ಆದಿಸರ್ಗಕಥನಮ್

19001001a ಆದ್ಯಂ ಪುರುಷಮೀಶಾನಂ ಪುರುಹೂತಂ ಪುರುಷ್ಟುತಮ್ |

19001001c ಋತಮೇಕಾಕ್ಷರಂ ಬ್ರಹ್ಮ ವ್ಯಕ್ತಾವ್ಯಕ್ತಂ ಸನಾತನಮ್ ||

19001002a ಅಸಚ್ಚ ಸದಸಚ್ಚೈವ ಯದ್ವಿಶ್ವಂ ಸದಸತ್ಪರಮ್ |

19001002c ಪರಾವರಾಣಾಂ ಸ್ರಷ್ಟಾರಂ ಪುರಾಣಂ ಪರಮವ್ಯಯಮ್ ||

19001003a ಮಂಗಲ್ಯಂ ಮಂಗಲಂ ವಿಷ್ಣುಂ ವರೇಣ್ಯಮನಘಂ ಶುಚಿಮ್ |

19001003c ನಮಸ್ಕೃತ್ಯ ಹೃಷೀಕೇಶಂ ಚರಾಚರಗುರುಂ ಹರಿಮ್ ||

19001004a ನೈಮಿಷಾರಣ್ಯೇ ಕುಲಪತಿಃ ಶೌನಕಸ್ತು ಮಹಾಮುನಿಃ |

19001004c ಸೌತಿಂ ಪಪ್ರಚ್ಛ ಧರ್ಮಾತ್ಮಾ ಸರ್ವಶಾಸ್ತ್ರವಿಶಾರದಃ ||

ಆದ್ಯ, ಪುರುಷ, ಈಶಾನ, ಪುರುಹೂತ, ಪುರುಷ್ಟುತ, ಋತ, ಏಕಾಕ್ಷರ, ಬ್ರಹ್ಮ, ವ್ಯಕ್ತ, ಅವ್ಯಕ್ತ, ಸನಾತನ, ಅಸಚ್ಚ, ಸದಸಚ್ಚ, ವಿಶ್ವದ ಪರಮ ಸತ್ತ್ವವಾಗಿರುವ, ಪರಾವರಗಳ ಸೃಷ್ಟಿಕರ್ತ, ಪುರಾಣ, ಪರಮ ಅವ್ಯಯ, ಮಂಗಲ್ಯ, ಮಂಗಲ, ವರೇಣ್ಯ, ಅನಘ, ಶುಚಿ, ಚರಾಚರಗಳ ಗುರು ಹರಿ ವಿಷ್ಣು ಹೃಷೀಕೇಶನನ್ನು ಸಮಸ್ಕರಿಸಿ ನೈಮಿಷಾರಣ್ಯದಲ್ಲಿ ಕುಲಪತಿ ಮಹಾಮುನಿ ಧರ್ಮಾತ್ಮಾ ಸರ್ವಶಾಸ್ತ್ರವಿಶಾರದ ಶೌನಕನು ಸೌತಿಯನ್ನು ಪ್ರಶ್ನಿಸಿದನು.

19001005  ಶೌನಕ ಉವಾಚ|

19001005a ಸೌತೇ ಸುಮಹದಾಖ್ಯಾನಂ ಭವತಾ ಪರಿಕೀರ್ತಿತಮ್ |

19001005c ಭಾರತಾನಾಂ ಚ ಸರ್ವೇಷಾಂ ಪಾರ್ಥಿವಾನಾಂ ತಥೈವ ಚ ||

19001006a ದೇವಾನಾಂ ದಾನವಾನಾಂ ಚ ಗಂಧರ್ವೋರಗರಕ್ಷಸಾಮ್ |

19001006c ದೈತ್ಯಾನಾಮಥ ಸಿದ್ಧಾನಾಂ ಗುಹ್ಯಕಾನಾಂ ತಥೈವ ಚ ||

19001007a ಅತ್ಯದ್ಭುತಾನಿ ಕರ್ಮಾಣಿ ವಿಕ್ರಮಾ ಧರ್ಮನಿಶ್ಚಯಾಃ |

19001007c ವಿಚಿತ್ರಾಶ್ಚ ಕಥಾಯೋಗಾ ಜನ್ಮ ಚಾಗ್ರ್ಯಮನುತ್ತಮಮ್ ||

ಶೌನಕನು ಹೇಳಿದನು: “ಸೌತೇ! ಭಾರತರ, ಸರ್ವ ಪಾರ್ಥಿವರ ಹಾಗೂ ದೇವತೆಗಳ, ದಾನವರ, ಗಂಧರ್ವ-ಉರಗ-ರಾಕ್ಷಸರ, ದೈತ್ಯರ, ಸಿದ್ಧರ, ಮತ್ತು ಗುಹ್ಯಕರ ಅತ್ಯದ್ಭುತ ಕರ್ಮಗಳನ್ನೂ, ವಿಕ್ರಮಗಳನ್ನೂ, ಧರ್ಮನಿಶ್ಚಯಗಳನ್ನೂ, ಅವರ ವಿಚಿತ್ರ ಅನುತ್ತಮ ಜನ್ಮಗಳನ್ನೂ ಕೂಡಿದ ಮಹಾ ಆಖ್ಯಾನವನ್ನು ಹೇಳಿರುವೆ!

19001008a ಕಥಿತಂ ಭವತಾ ಪುಣ್ಯಂ ಪುರಾಣಂ ಶ್ಲಕ್ಷ್ಣಯಾ ಗಿರಾ |

19001008c ಮನಃಕರ್ಣಸುಖಂ ಸೌತೇ ಪ್ರೀಣಾತ್ಯಮೃತಸಂಮಿತಮ್ ||

ನಿನ್ನ ಮಧುರ ಸ್ವರದಲ್ಲಿ ಈ ಪುಣ್ಯ ಪುರಾತನ ಕಥೆಯನ್ನು ಹೇಳಿರುವೆ. ಸೌತೇ! ನಮ್ಮ ಮನಸ್ಸು-ಕಿವಿಗಳು ಅಮೃತದಿಂದ ತುಂಬಿಕೊಂಡಂತೆ ಪರಮ ಸಂತೋಷಗೊಂಡಿವೆ.

19001009a ತತ್ರ ಜನ್ಮ ಕುರೂಣಾಂ ವೈ ತ್ವಯೋಕ್ತಂ ಲೌಮಹರ್ಷಣೇ |

19001009c ನ ತು ವೃಷ್ಣ್ಯಂಧಕಾನಾಂ ಚ ತದ್ಭವಾನ್ ವಕ್ತುಮರ್ಹತಿ ||

ಲೌಮಹರ್ಷಣೇ! ನೀನು ಆಗ ಕುರುಗಳ ಜನ್ಮದ ಕುರಿತೂ ಹೇಳಿರುವೆ. ಆದರೆ ನೀನು ವೃಷ್ಣಿ-ಅಂಧಕರ ಜನ್ಮಗಳ ಕುರಿತು ಹೇಳಿಲ್ಲ. ಅದನ್ನು ನೀನು ಹೇಳಬೇಕು!”

19001010 ಸೌತಿರುವಾಚ|

19001010a ಜನಮೇಜಯೇನ ಯತ್ಪೃಷ್ಟಃ ಶಿಷ್ಯೋ ವ್ಯಾಸಸ್ಯ ಧರ್ಮವಿತ್ |

19001010c ತತ್ತೇಽಹಂ ಸಂಪ್ರವಕ್ಷ್ಯಾಮಿ ವೃಷ್ಣೀನಾಂ ವಂಶಮಾದಿತಃ ||

ಸೌತಿಯು ಹೇಳಿದನು: “ಜನಮೇಜನೂ ಇದನ್ನು ವ್ಯಾಸನ ಧರ್ಮವಿದು ಶಿಷ್ಯನಲ್ಲಿ ಕೇಳಿದ್ದನು. ಅದರಂತೆಯೇ ನಾನು ಆದಿಯಿಂದ ವೃಷ್ಣಿಗಳ ವಂಶವನ್ನು ವರ್ಣಿಸುತ್ತೇನೆ.

19001011a ಶ್ರುತ್ವೇತಿಹಾಸಂ ಕಾರ್ತ್ಸ್ನ್ಯೇನ ಭಾರತಾನಾಂ ಸ ಭಾರತಃ |

19001011c ಜನಮೇಜಯೋ ಮಹಾಪ್ರಾಜ್ಞೋ ವೈಶಂಪಾಯನಮಬ್ರವೀತ್ ||

ಭಾರತರ ಇತಿಹಾಸವಾದ ಭಾರತವನ್ನು ಸಂಪೂರ್ಣವಾಗಿ ಕೇಳಿದ ಮಹಾಪ್ರಾಜ್ಞ ಜನಮೇಜಯನು ವೈಶಂಪಾಯನನಿಗೆ ಹೇಳಿದನು:

19001012  ಜನಮೇಜಯ ಉವಾಚ

19001012a ಮಹಾಭಾರತಮಾಖ್ಯಾನಂ ಬಹ್ವರ್ಥಂ ಶ್ರುತಿವಿಸ್ತರಮ್ |

19001012c ಕಥಿತಂ ಭವತಾ ಪೂರ್ವಂ ವಿಸ್ತರೇಣ ಮಯಾ ಶ್ರುತಮ್ ||

ಜನಮೇಜಯನು ಹೇಳಿದನು: “ಅನೇಕ ಅರ್ಥಗಳುಳ್ಳ, ಕೇಳಲು ವಿಸ್ತಾರವಾಗುಳ್ಳ ಮಹಾಭಾರಥ ಆಖ್ಯಾನವನ್ನು ನೀನು ಹೇಳಿರುವೆ. ವಿಸ್ತಾರವಾಗಿ ಅದನ್ನು ನಾನು ಕೇಳಿದೆ.

19001013a ತತ್ರ ಶೂರಾಃ ಸಮಾಖ್ಯಾತಾ ಬಹವಃ ಪುರುಷರ್ಷಭಾಃ |

19001013c ನಾಮಭಿಃ ಕರ್ಮಭಿಶ್ಚೈವ ವೃಷ್ಣ್ಯಂಧಕಮಹಾರಥಾಃ ||

ಅಲ್ಲಿ ನೀನು ಅನೇಕ ವೃಷ್ಣಿ-ಅಂಧಕ ಪುರುಷರ್ಷಭ ಶೂರ ಮಹಾರಥರ ಹೆಸರುಗಳನ್ನೂ, ಕರ್ಮಗಳನ್ನೂ ಹೇಳಿದ್ದೀಯೆ.

19001014a ತೇಷಾಂ ಕರ್ಮಾವದಾತಾನಿ ತ್ವಯೋಕ್ತಾನಿ ದ್ವಿಜೋತ್ತಮ |

19001014c ತತ್ರ ತತ್ರ ಸಮಾಸೇನ ವಿಸ್ತರೇಣೈವ ಮೇ ಪ್ರಭೋ ||

ದ್ವಿಜೋತ್ತಮ! ನೀನು ಅವರ ಕರ್ಮಗಳ ಕುರಿತೂ ಹೇಳಿದ್ದೀಯೆ. ಆದರೆ ಪ್ರಭೋ! ನೀನು ಅಲ್ಲಲ್ಲಿ ಸಂಕ್ಷಿಪ್ತವಾಗಿ ಹೇಳಿದ್ದೀಯೆ. ವಿಸ್ತಾರದಲ್ಲಿ ಹೇಳಿಲ್ಲ.

19001015a ನ ಚ ಮೇ ತೃಪ್ತಿರಸ್ತೀಹ ಕಥ್ಯಮಾನೇ ಪುರಾತನೇ |

19001015c ಏಕಶ್ಚೈವ ಮತೋ ರಾಶಿರ್ವೃಷ್ಣಯಃ ಪಾಂಡವಾಸ್ತಥಾ ||

ನೀನು ಇದೂವರೆಗೆ ಹೇಳಿದುದರಲ್ಲಿ ನನಗೆ ತೃಪ್ತಿಯಾಗಿಲ್ಲ. ವೃಷ್ಣಿಗಳು ಮತ್ತು ಪಾಂಡವರು ಒಂದೇ ರಾಶಿಯವರು ಎಂದು ನನಗನ್ನಿಸುತ್ತಿದೆ.

19001016a ಭವಾಂಶ್ಚ ವಂಶಕುಶಲಸ್ತೇಷಾಂ ಪ್ರತ್ಯಕ್ಷದರ್ಶಿವಾನ್ |

19001016c ಕಥಯಸ್ವ ಕುಲಂ ತೇಷಾಂ ವಿಸ್ತರೇಣ ತಪೋಧನ ||

ತಪೋಧನ! ನೀನಾದರೋ ಅವರ ವಂಶಕುಶಲವನ್ನು ಪ್ರತ್ಯಕ್ಷವಾಗಿ ಕಂಡಿರುವೆ. ಅವರ ಕುಲದ ಕುರಿತು ವಿಸ್ತಾರವಾಗಿ ಹೇಳು.

19001017a ಯಸ್ಯ ಯಸ್ಯಾನ್ವಯೇ ಯೇ ಯೇ ತಾಂಸ್ತಾನಿಚ್ಛಾಮಿ ವೇದಿತುಮ್ |

19001017c ಸ ತ್ವಂ ಸರ್ವಮಶೇಷೇಣ ಕಥಯಸ್ವ ಮಹಾಮುನೇ |

19001017e ತೇಷಾಂ ಪೂರ್ವವಿಸೃಷ್ಟಿಂ ಚ ವಿಚಿಂತ್ಯೇಮಾಂ ಪ್ರಜಾಪತೇಃ ||

ಮಹಾಮುನೇ! ಅವರು ಯಾವ ಯಾವ ಅನ್ವಯಗಳಲ್ಲಿ ಹುಟ್ಟಿದರು ಎನ್ನುವುದನ್ನು ಕೇಳ ಬಯಸುತ್ತೇನೆ. ಪ್ರಜಾಪತಿಯಿಂದ ಅವರ ಪೂರ್ವ ಸೃಷ್ಟಿ ಹೇಗಿದ್ದಿತು ಎನ್ನುವುದೆಲ್ಲವನ್ನೂ ಸಂಪೂರ್ಣವಾಗಿ ಹೇಳು.””

19001018 ಸೌತಿರುವಾಚ|

19001018a ಸತ್ಕೃತ್ಯ ಪರಿಪೃಷ್ಟಸ್ತು ಸ ಮಹಾತ್ಮಾ ಮಹಾತಪಾಃ |

19001018c ವಿಸ್ತರೇಣಾನುಪೂರ್ವ್ಯಾಂ ಚ ಕಥಯಾಮಾಸ ತಾಂ ಕಥಾಮ್||

ಸೌತಿಯು ಹೇಳಿದನು: “ಹೀಗೆ ಕೇಳಿದ ಆ ಮಹಾತ್ಮನನ್ನು ಸತ್ಕರಿಸಿ ಮಹಾತಪಸ್ವಿಯು ವಿಸ್ತಾರವಾಗಿ ಮೊದಲಿನಿಂದ ಹೇಳತೊಡಗಿದನು.

19001019 ವೈಶಂಪಾಯನ ಉವಾಚ|

19001019a ಶೃಣು ರಾಜನ್ಕಥಾಂ ದಿವ್ಯಾಂ ಪುಣ್ಯಾಂ ಪಾಪಪ್ರಮೋಚನೀಮ್|

19001019c ಕಥ್ಯಮಾನಾಂ ಮಯಾ ಚಿತ್ರಾಂ ಬಹ್ವರ್ಥಾಂ ಶ್ರುತಿಸಂಮಿತಾಮ್ ||

ವೈಶಂಪಾಯನನು ಹೇಳಿದನು: “ರಾಜನ್! ನಾನು ಈಗ ಹೇಳುವ ಬಹಳ ವಿಚಿತ್ರ ಅರ್ಥಗಳುಳ್ಳ ಶೃತಿಸಂಮಿತವಾದ ಪಾಪವನ್ನು ಕಳೆಯುವ ಆ ದಿವ್ಯ ಪುಣ್ಯ ಕಥೆಯನ್ನು ಕೇಳು.

19001020a ಯಶ್ಚೇಮಾಂ ಧಾರಯೇದ್ವಾಪಿ ಶೃಣುಯಾದ್ವಾಪ್ಯಭೀಕ್ಷ್ಣಶಃ |

19001020c ಸ್ವವಂಶಧಾರಣಂ ಕೃತ್ವಾ ಸ್ವರ್ಗಲೋಕೇ ಮಹೀಯತೇ ||

ಇದನ್ನು ಯಾರು ಧಾರಣೆಮಾಡಿಕೊಂಡು ಒಂದೇ ಸಮನೆ ಕೇಳುತ್ತಾನೋ ಅವನು ತನ್ನ ವಂಶೋದ್ಧಾರವನ್ನು ಮಾಡಿ ಸ್ವರ್ಗಲೋಕದಲ್ಲಿ ಮೆರೆಯುತ್ತಾನೆ.

19001021a ಅವ್ಯಕ್ತಂ ಕಾರಣಂ ಯತ್ತನ್ನಿತ್ಯಂ ಸದಸದಾತ್ಮಕಮ್ |

19001021c ಪ್ರಧಾನಂ ಪುರುಷಂ ತಸ್ಮಾನ್ನಿರ್ಮಮೇ ವಿಶ್ವಮೀಶ್ವರಮ್ ||

ನಿತ್ಯವೂ ಅವ್ಯಕ್ತವೂ ಆಗಿರುವ ಕಾರಣದ ಇರುವಿಕೆ ಮತ್ತು ಇಲ್ಲದಿರುವಿಕೆಗಳು ಆತ್ಮನಲ್ಲಿವೆ. ಅವನೇ ಪ್ರಧಾನ ಅಥವಾ ಪುರುಷ. ನನ್ನದು ಎಂಬ ಭಾವವಿಲ್ಲದಿದ್ದರೂ ಅವನು ವಿಶ್ವದ ಈಶ್ವರನು.

19001022a ತಂ ವೈ ವಿದ್ಧಿ ಮಹಾರಾಜ ಬ್ರಹ್ಮಾಣಮಮಿತೌಜಸಮ್ |

19001022c ಸ್ರಷ್ಟಾರಂ ಸರ್ವಭೂತಾನಾಂ ನಾರಾಯಣಪರಾಯಣಮ್ ||

ಮಹಾರಾಜ! ಅವನನ್ನೇ ಅಮಿತೌಜಸ ಬ್ರಹ್ಮನೆಂದೂ, ಸರ್ವಭೂತಗಳ ಸೃಷ್ಟಾರನೆಂದೂ, ಪರಾಯಣ ನಾರಾಯಣನೆಂದೂ ತಿಳಿ.

19001023a ಅಹಂಕಾರಸ್ತು ಮಹತಸ್ತಸ್ಮಾದ್ಭೂತಾನಿ ಜಜ್ಞಿರೇ |

19001023c ಭೂತಭೇದಾಶ್ಚ ಭೂತೇಭ್ಯ ಇತಿ ಸರ್ಗಃ ಸನಾತನಃ ||

ಅವನಿಂದ ಮಹತ್ತು ಉಂಟಾಯಿತು ಮತ್ತು ಮಹತ್ತಿನಿಂದ ಅಹಂಕಾರವುಂಟಾಯಿತು. ಇದರಿಂದ ಎಲ್ಲ ಭೂತಗಳೂ ಸೃಷ್ಟಿಸಲ್ಪಟ್ಟವು. ಸ್ಥೂಲವಾಗುಳ್ಳ ಭೂತಭೇದಗಳು ಸೂಕ್ಷ್ಮ ಅಂಶಗಳಿಂದ ಹುಟ್ಟಿದವು. ಇದೇ ನಿರಂತರವಾಗಿ ನಡೆಯುವ ಸೃಷ್ಟಿ.

19001024a ವಿಸ್ತಾರಾವಯವಂ ಚೈವ ಯಥಾಪ್ರಜ್ಞಂ ಯಥಾಶ್ರುತಿಃ |

19001024c ಕೀರ್ತ್ಯಮಾನಂ ಶೃಣು ಮಯಾ ಪೂರ್ವೇಷಾಂ ಕೀರ್ತಿವರ್ಧನಮ್||

ನನಗೆ ತಿಳಿದಿರುವಷ್ಟು ಮಟ್ಟಿಗೆ ಮತ್ತು ನಾನು ಕೇಳಿಕೊಂಡಂತೆ ಇದರ ಕುರಿತು ವಿಸ್ತಾರವಾಗಿ ಹೇಳುತ್ತೇನೆ. ನಾನು ಹೇಳುವ ಇದನ್ನು ಕೇಳಿದರೆ ಪೂರ್ವಜರ ಕೀರ್ತಿಯು ವರ್ಧಿಸುತ್ತದೆ.

19001025a ಧನ್ಯಂ ಯಶಸ್ಯಂ ಶತ್ರುಘ್ನಂ ಸ್ವರ್ಗ್ಯಮಾಯುಃಪ್ರವರ್ಧನಮ್ |

19001025c ಕೀರ್ತನಂ ಸ್ಥಿರಕೀರ್ತೀನಾಂ ಸರ್ವೇಷಾಂ ಪುಣ್ಯಕರ್ಮಣಾಮ್ ||

ಇದರ ಕೀರ್ತನೆಯಿಂದ ಆ ಎಲ್ಲ ಪುಣ್ಯಕರ್ಮಿಗಳ ಕೀರ್ತಿಯು ಸ್ಥಿರವಾಗುವುದು. ಇದರಿಂದ ಧನ-ಯಶಸ್ಸು-ಆಯುಸ್ಸು ವರ್ಧಿಸುತ್ತವೆ. ಶತ್ರುಗಳು ನಾಶವಾಗುತ್ತಾರೆ. ಸ್ವರ್ಗವು ದೊರೆಯುತ್ತದೆ.

19001026a ತಸ್ಮಾತ್ಕಲ್ಪಾಯ ತೇ ಕಲ್ಪಃ ಸಮಗ್ರಂ ಶುಚಯೇ ಶುಚಿಃ |

19001026c ಆ ವೃಷ್ಣಿವಂಶಾದ್ವಕ್ಷ್ಯಾಮಿ ಭೂತಸರ್ಗಮನುತ್ತಮಮ್ ||

ಶುಚಿಯಾಗಿರುವವರಲ್ಲಿ ನೀನು ಅತ್ಯಂತ ಶುಚಿಯಾಗಿರುವೆ. ಆದುದರಿಂದ ನಾನು ಇದನ್ನು ನಿನಗೆ ಹೇಳಬಲ್ಲೆ ಮತ್ತು ನೀನು ಇದನ್ನು ಅರ್ಥಮಾಡಿಕೊಳ್ಳಬಲ್ಲೆ. ಭೂತಗಳ ಈ ಅನುತ್ತಮ ಸೃಷ್ಟಿಯ ಮತ್ತು ವೃಷ್ಣಿವಂಶದ ಕುರಿತು ನಾನು ನಿನಗೆ ಹೇಳುತ್ತೇನೆ.

19001027a ತತಃ ಸ್ವಯಂಭೂರ್ಭಗವಾನ್ಸಿಸೃಕ್ಷುರ್ವಿವಿಧಾಃ ಪ್ರಜಾಃ |

19001027c ಅಪ ಏವ ಸಸರ್ಜಾದೌ ತಾಸು ವೀರ್ಯಮವಾಸೃಜತ್ ||

ಆಗ ಸ್ವಯಂಭೂ ಭಗವಾನನು ವಿವಿಧ ಪ್ರಜೆಗಳನ್ನು ಸೃಷ್ಟಿಸಲು ಬಯಸಿದನು. ಮೊದಲು ನೀರನ್ನು ಸೃಷ್ಟಿಸಿ ಅದರಲ್ಲಿ ವೀರ್ಯವನ್ನು ಬಿಟ್ಟನು.

19001028a ಆಪೋ ನಾರಾ ಇತಿ ಪ್ರೋಕ್ತಾ ಆಪೋ ವೈ ನರಸೂನವಃ |

19001028c ಅಯನಂ ತಸ್ಯ ತಾಃ ಪೂರ್ವಂ ತೇನ ನಾರಾಯಣಃ ಸ್ಮೃತಃ ||

ನೀರಿಗೆ ನಾರಾ ಎಂದು ಹೇಳುತ್ತಿದ್ದರು. ಹಿಂದೆ ನೀರಿನ ಮೇಲೆ ಮಲಗಿಕೊಂಡಿದ್ದುದರಿಂದ ಅವನು ನಾರಾಯಣನೆಂದಾದನು.

19001029a ಹಿರಣ್ಯವರ್ಣಮಭವತ್ತದಂಡಮುದಕೇಶಯಮ್ |

19001029c ತತ್ರ ಜಜ್ಞೇ ಸ್ವಯಂ ಬ್ರಹ್ಮಾ ಸ್ವಯಂಭೂರಿತಿ ನಃ ಶ್ರುತಮ್ ||

ಹಾಗೆ ಅವನು ನೀರಿನಲ್ಲಿ ಮಲಗಿಕೊಂಡಿರುವಾಗ ಅಲ್ಲಿ ಒಂದು ಹಿರಣ್ಯವರ್ಣದ ಅಂಡವು ಉದ್ಭವವಾಯಿತು. ಅದರಲ್ಲಿ ಬ್ರಹ್ಮನು ಸ್ವಯಂ ಜನಿಸಿದನು. ಆದುದರಿಂದ ಅವನು ಸ್ವಯಂಭು ಎನಿಸಿದನು ಎಂದು ನಾವು ಕೇಳಿದ್ದೇವೆ.

19001030a ಹಿರಣ್ಯಗರ್ಭೋ ಭಗವಾನುಷಿತ್ವಾ ಪರಿವತ್ಸರಮ್ |

19001030c ತದಂಡಮಕರೋದ್ದ್ವೈಧಂ ದಿವಂ ಭುವಮಥಾಪಿ ಚ ||

ಭಗವಾನ್ ಹಿರಣ್ಯಗರ್ಭನು ಆ ಅಂಡದಲ್ಲಿ ಒಂದು ವರ್ಷ ಪರ್ಯಂತ ಇದ್ದುಕೊಂಡು ನಂತರ ಅದನ್ನು ಎರಡಾಗಿ ಒಡೆದು ಭೂಮಿ-ಸ್ವರ್ಗಗಳನ್ನು ಸೃಷ್ಟಿಸಿದನು.

19001031a ತಯೋಃ ಶಕಲಯೋರ್ಮಧ್ಯೇ ಆಕಾಶಮಸೃಜತ್ಪ್ರಭುಃ |

19001031c ಅಪ್ಸು ಪಾರಿಪ್ಲವಾಂ ಪೃಥ್ವೀಂ ದಿಶಶ್ಚ ದಶಧಾ ದಧೇ ||

ಆ ಎರಡು ಭಾಗಗಳ ಮಧ್ಯೆ ಪ್ರಭುವು ಆಕಾಶವನ್ನು ಸೃಷ್ಟಿಸಿದನು. ಪೃಥ್ವಿಯು ನೀರಿನಿಂದ ಸುತ್ತುವರೆಯಲ್ಪಟ್ಟಿರಲು ಅವನು ಹತ್ತು ದಿಕ್ಕುಗಳನ್ನು[1] ಸೃಷ್ಟಿಸಿದನು.

19001032a ತತ್ರ ಕಾಲಂ ಮನೋ ವಾಚಂ ಕಾಮಂ ಕ್ರೋಧಮಥೋ ರತಿಮ್|

19001032c ಸಸರ್ಜ ಸೃಷ್ಟಿಂ ತದ್ರೂಪಾಂ ಸ್ರಷ್ಟುಮಿಚ್ಛನ್ಪ್ರಜಾಪತೀನ್ ||

ಸೃಷ್ಟಿಸಲು ಇಚ್ಛಿಸಿ ಅವನು ಕಾಲ, ಮನಸ್ಸು, ಮಾತು, ಕಾಮ, ಕ್ರೋಧ, ರತಿ ಮತ್ತು ಅವುಗಳಿಗೆ ತಕ್ಕ ರೂಪವುಳ್ಳ ಪ್ರಜಾಪತಿಗಳನ್ನು ಸೃಷ್ಟಿಸಿದನು.

19001033a ಮರೀಚಿಮತ್ರ್ಯಂಗಿರಸಂ ಪುಲಸ್ತ್ಯಂ ಪುಲಹಂ ಕ್ರತುಮ್ |

19001033c ವಸಿಷ್ಠಂ ಚ ಮಹಾತೇಜಾಃ ಸೋಽಸೃಜತ್ಸಪ್ತ ಮಾನಸಾನ್ ||

ತನ್ನ ಮನಸ್ಸಿನಿಂದ ಏಳು ಮಹಾತೇಜಸ್ಸುಗಳನ್ನು ಸೃಷ್ಟಿಸಿದನು: ಮರೀಚಿ, ಅತ್ರಿ, ಅಂಗಿರಸ, ಪುಲಸ್ತ್ಯ, ಪುಲಹ, ಕ್ರತು, ಮತ್ತು ವಸಿಷ್ಠ.

19001034a ಸಪ್ತ ಬ್ರಹ್ಮಾಣ ಇತ್ಯೇತೇ ಪುರಾಣೇ ನಿಶ್ಚಯಂ ಗತಾಃ |

19001034c ನಾರಾಯಣಾತ್ಮಕಾನಾಂ ವೈ ಸಪ್ತಾನಾಂ ಬ್ರಹ್ಮಜನ್ಮನಾಮ್ ||

ಇವರು ಏಳು ಪುರಾಣ ಬ್ರಾಹ್ಮಣರೆಂದು ನಿಶ್ಚಿತರಾದರು. ಈ ಏಳ್ವರು ಬ್ರಹ್ಮಜನ್ಮಿಗಳು ಮತ್ತು ನಾರಾಯಣಾತ್ಮಕರು.

19001035a ತತೋಽಸೃಜತ್ಪುನರ್ಬ್ರಹ್ಮಾ ರುದ್ರಂ ರೋಷಾತ್ಮಸಂಭವಮ್|

19001035c ಸನತ್ಕುಮಾರಂ ಚ ವಿಭುಂ ಪೂರ್ವೇಷಾಮಪಿ ಪೂರ್ವಜಮ್||

ಅನಂತರ ಬ್ರಹ್ಮನು ರೋಷದಿಂದ ಹುಟ್ಟಿದ ರುದ್ರನನ್ನು ಸೃಷ್ಟಿಸಿದನು. ನಂತರ ವಿಭುವು ಪೂರ್ವಜರಿಗೂ ಮೊದಲಿಗರಾದ ಸನತ್ಕುಮಾರನೇ ಮೊದಲಾದ ಋಷಿ[2]ಗಳನ್ನು ಸೃಷ್ಟಿಸಿದನು.

19001036a ಸಪ್ತೈತೇ ಜನಯಂತಿ ಸ್ಮ ಪ್ರಜಾ ರುದ್ರಶ್ಚ ಭಾರತ |

19001036c ಸ್ಕಂದಃ ಸನತ್ಕುಮಾರಶ್ಚ ತೇಜಃ ಸಂಕ್ಷಿಪ್ಯ ತಿಷ್ಠತಃ ||

ಭಾರತ! ಆ ಸಪ್ತರ್ಷಿಗಳು ಪ್ರಜೆಗಳನ್ನು ಹುಟ್ಟಿಸಿದರು. ಆದರೆ ರುದ್ರ, ಸ್ಕಂದ ಮತ್ತು ಸನತ್ಕುಮಾರರು ತಮ್ಮ ವೀರ್ಯಗಳನ್ನು ಹಿಡಿದಿಟ್ಟುಕೊಂಡರು.

19001037a ತೇಷಾಂ ಸಪ್ತ ಮಹಾವಂಶಾ ದಿವ್ಯಾ ದೇವಗಣಾನ್ವಿತಾಃ |

19001037c ಕ್ರಿಯಾವಂತಃ ಪ್ರಜಾವಂತೋ ಮಹರ್ಷಿಭಿರಲಂಕೃತಾಃ ||

ಅವರ ಏಳು ದಿವ್ಯ ಮಹಾವಂಶಗಳು ಕ್ರಿಯಾವಂತ ಪ್ರಜಾವಂತ ದೇವಗಣಗಳು ಮತ್ತು ಮಹರ್ಷಿಗಳಿಂದ ಅಲಂಕರಿಸಲ್ಪಟ್ಟಿವೆ.

19001038a ವಿದ್ಯುತೋಽಶನಿಮೇಘಾಂಶ್ಚ ರೋಹಿತೇಂದ್ರಧನೂಂಷಿ ಚ |

19001038c ವಯಾಂಸಿ ಚ ಸಸರ್ಜಾದೌ ಪರ್ಜನ್ಯಂ ಚ ಸಸರ್ಜ ಹ ||

ನಂತರ ಅವನು ವಿದ್ಯುತ್, ಗುಡುಗು, ಮೋಡಗಳು, ನೇರ ಕಾಮನ ಬಿಲ್ಲು, ಮಳೆ ಮತ್ತು ಜಲವಾಸಿ ಪ್ರಾಣಿಗಳನ್ನು ಸೃಷ್ಟಿಸಿದನು.

19001039a ಋಚೋ ಯಜೂಂಷಿ ಸಾಮಾನಿ ನಿರ್ಮಮೇ ಯಜ್ಞಸಿದ್ಧಯೇ |

19001039c ಮುಖಾದ್ದೇವಾನಜನಯತ್ಪಿತೄಶ್ಚೇಶೋಽಪಿ ವಕ್ಷಸಃ ||

ಯಜ್ಞಸಿದ್ಧಿಗಾಗಿ ಅವನು ತನ್ನ ಮುಖದಿಂದ ಋಕ್, ಯಜು ಮತ್ತು ಸಾಮಗಳನ್ನು ಸೃಷ್ಟಿಸಿದನು. ನಂತರ ಮುಖದಿಂದ ಅವನು ದೇವತೆಗಳನ್ನೂ, ಮತ್ತು ವಕ್ಷಸ್ಥಲದಿಂದ ಪಿತೃಗಳನ್ನೂ ಪ್ರಕಟಗೊಳಿಸಿದನು.

19001040a ಪ್ರಜನಾಚ್ಚ ಮನುಷ್ಯಾನ್ವೈ ಜಘನಾನ್ನಿರ್ಮಮೇಽಸುರಾನ್ |

19001040c ಸಾಧ್ಯಾನಜನಯದ್ದೇವಾನಿತ್ಯೇವಮನುಶುಶ್ರುಮ ||

ತನ್ನ ಪ್ರಜನನದಿಂದ ಮನುಷ್ಯರನ್ನೂ, ತೊಡೆಗಳಿಂದ ಅಸುರರನ್ನೂ ಸೃಷ್ಟಿಸಿದನು. ನಂತರ ಅವನು ಪ್ರಾಚೀನ ದೇವತೆಗಳೆನಿಸಿಕೊಂಡ ಸಾಧ್ಯರನ್ನು ಹುಟ್ಟಿಸಿದನು ಎಂದು ಕೇಳಿದ್ದೇವೆ.

19001041a ಉಚ್ಚಾವಚಾನಿ ಭೂತಾನಿ ಗಾತ್ರೇಭ್ಯಸ್ತಸ್ಯ ಜಜ್ಞಿರೇ |

19001041c ಆಪವಸ್ಯ ಪ್ರಜಾಸರ್ಗಂ ಸೃಜತೋ ಹಿ ಪ್ರಜಾಪತೇಃ ||

ನೀರಿನ ಮೇಲಿದ್ದುಕೊಂಡು ಹೀಗೆ ಪ್ರಜೆಗಳನ್ನು ಸೃಷ್ಟಿಸುತ್ತಿದ್ದ ಆ ಪ್ರಜಾಪತಿಯ ವಿವಿಧ ಶರೀರಗಳಿಂದ ಉಚ್ಚ-ನೀಚ ಭೂತಗಳು ಹುಟ್ಟಿಬಂದವು.

19001042a ಸೃಜ್ಯಮಾನಾಃ ಪ್ರಜಾ ನೈವ ವಿವರ್ಧಂತೇ ಯದಾ ತದಾ |

19001042c ದ್ವಿಧಾ ಕೃತ್ವಾಽಆತ್ಮನೋ ದೇಹಮರ್ಧೇನ ಪುರುಷೋಽಭವತ್ ||

ಹೀಗೆ ಸೃಷ್ಟಿಸಿದ ಪ್ರಜೆಗಳು ವರ್ಧಿಸುತ್ತಿರುವಾಗ ಅವನು ತನ್ನನ್ನು ತಾನೇ ಎರಡನ್ನಾಗಿಸಿ ಅರ್ಧದೇಹದಲ್ಲಿ ಪುರುಷನಾದನು.

19001043a ಅರ್ಧೇನ ನಾರೀ ತಸ್ಯಾಂ ಸ ಸಸೃಜೇ ವಿವಿಧಾಃ ಪ್ರಜಾಃ |

19001043c ದಿವಂ ಚ ಪೃಥಿವೀಂ ಚೈವ ಮಹಿಮ್ನಾ ವ್ಯಾಪ್ಯ ತಿಷ್ಠತಃ ||

ಇನ್ನೊಂದು ಅರ್ಧದೇಹದಿಂದ ನಾರಿಯಾಗಿ ಅವನು ವಿವಿಧ ಪ್ರಜೆಗಳನ್ನು ಸೃಷ್ಟಿಸಿದನು. ಸ್ವರ್ಗ-ಪೃಥ್ವಿಗಳನ್ನು ತನ್ನ ಮಹಿಮೆಯಿಂದ ವ್ಯಾಪಿಸಿಕೊಂಡನು.

19001044a ವಿರಾಜಮಸೃಜದ್ವಿಷ್ಣುಃ ಸೋಽಸೃಜತ್ಪುರುಷಂ ವಿರಾಟ್ |

19001044c ಪುರುಷಂ ತಂ ಮನುಂ ವಿದ್ಧಿ ತದ್ವೈ ಮನ್ವಂತರಂ ಸ್ಮೃತಮ್ ||

ವಿಷ್ಣುವು ವಿರಾಜಿಸುವ ವಿರಾಟ್ ಪುರುಷನನ್ನು ಸೃಷ್ಟಿಸಿದನು. ಆ ಪುರುಷನನ್ನೇ ಮನುವೆಂದು ತಿಳಿ. ಅವನಿಂದಲೇ ಮನ್ವಂತರವೆನಿಸಿಕೊಂಡಿತು.

19001045a ದ್ವಿತೀಯಮಾಪವಸ್ಯೈತನ್ಮನೋರಂತರಮುಚ್ಯತೇ |

19001045c ಸ ವೈರಾಜಃ ಪ್ರಜಾಸರ್ಗಂ ಸಸರ್ಜ ಪುರುಷಃ ಪ್ರಭುಃ |

19001045e ನಾರಾಯಣವಿಸರ್ಗಃ ಸ ಪ್ರಜಾಸ್ತಸ್ಯಾಪ್ಯಯೋನಿಜಾಃ ||

ನೀರಿನಲ್ಲಿ ಎರಡನೆಯವನಾದ ಇವನಿಂದಲೇ ಮನ್ವಂತರವು ಪ್ರಾರಂಭವಾಯಿತೆಂದು ಹೇಳುತ್ತಾರೆ. ನೀರಿನಿಂದ ಹುಟ್ಟಿದ ಈ ಪ್ರಜೆಗಳ ಸೃಷ್ಟಿಯನ್ನು ನಾರಾಯಣಸರ್ಗವೆಂದು ಕರೆಯುತ್ತಾರೆ.

19001046a ಆಯುಷ್ಮಾನ್ಕೀರ್ತಿಮಾಂಧನ್ಯಃ ಪ್ರಜಾವಾಂಶ್ರುತವಾಂಸ್ತಥಾ |

19001046c ಆದಿಸರ್ಗಂ ವಿದಿತ್ವೇಮಂ ಯಥೇಷ್ಟಾಂ ಗತಿಮಾಪ್ನುಯಾತ್ ||

ಈ ಆದಿಸರ್ಗವನ್ನು  ತಿಳಿದುಕೊಂಡವನು ಆಯುಷ್ಮಂತನೂ, ಕೀರ್ತಿವಂತನೂ, ಧನ್ಯನೂ, ಪ್ರಜಾವಂತನೂ, ವಿದ್ವಾಂಸನೂ ಎನಿಸಿಕೊಂಡು ಯಥೇಷ್ಟ ಗತಿಯನ್ನು ಹೊಂದುತ್ತಾನೆ.”

ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ಆದಿಸರ್ಗಕಥನೇ ಪ್ರಥಮೋಽಧ್ಯಾಯಃ|

ಇದು ಶ್ರೀಮಹಾಭಾರತದ ಖಿಲಭಾಗ ಹರಿವಂಶದಲ್ಲಿ ಹರಿವಂಶಪರ್ವದಲ್ಲಿ ಆದಿಸರ್ಗಕಥನ ಎನ್ನುವ ಮೊದಲನೆಯ ಅಧ್ಯಾಯವು.

[1] ಉತ್ತರ, ಆಗ್ನೇಯ, ಪೂರ್ವ, ನೈರುತ್ಯ, ದಕ್ಷಿಣ, ವಾಯುವ್ಯ, ಪಶ್ಚಿಮ, ಈಶಾನ್ಯ, ಮೇಲೆ ಮತ್ತು ಕೆಳಗೆ.

[2] ಸನಕ, ಸನಂದ, ಸನಾತನ ಮತ್ತು ಸನತ್ಕುಮಾರ.

Comments are closed.