ಹರಿವಂಶ: ಹರಿವಂಶ ಪರ್ವ
೪
ಪೃಥೂಪಾಖ್ಯಾನಮ್
19004001 ವೈಶಂಪಾಯನ ಉವಾಚ|
19004001a ಅಭಿಷಿಚ್ಯಾಧಿರಾಜ್ಯೇ ತು ಪೃಥುಂ ವೈನ್ಯಂ ಪಿತಾಮಹಃ |
19004001c ತತಃ ಕ್ರಮೇಣ ರಾಜ್ಯಾನಿ ವ್ಯಾದೇಷ್ಟುಮುಪಚಕ್ರಮೇ ||
ವೈಶಂಪಾಯನನು ಹೇಳಿದನು: “ಪಿತಾಮಹನು ವೈನನ ಮಗ ಪೃಥುವನ್ನು ಅಧಿರಾಜನಾಗಿ ಅಭಿಷೇಕಿಸಿ ಕ್ರಮೇಣ ರಾಜ್ಯಗಳನ್ನು ಹಂಚಲು ಉಪಕ್ರಮಿಸಿದನು.
19004002a ದ್ವಿಜಾನಾಂ ವೀರುಧಾಂ ಚೈವ ನಕ್ಷತ್ರಗ್ರಹಯೋಸ್ತಥಾ |
19004002c ಯಜ್ಞಾನಾಂ ತಪಸಾಂ ಚೈವ ಸೋಮಂ ರಾಜ್ಯೇಽಭ್ಯಷೇಚಯತ್ ||
ಸೋಮನನ್ನು ದ್ವಿಜರು, ಸಸ್ಯಗಳು, ನಕ್ಷತ್ರಗಳು, ಗ್ರಹಗಳು, ಯಜ್ಞಗಳು ಮತ್ತು ತಪಸ್ಸಿನ ರಾಜ್ಯಾಧಿಕಾರಿಯನ್ನಾಗಿ ಅಭಿಷೇಕಿಸಿದನು.
19004003a ಅಪಾಂ ತು ವರುಣಂ ರಾಜ್ಯೇ ರಾಜ್ಞಾಂ ವೈಶ್ರವಣಂ ಪ್ರಭುಮ್ |
19004003c ಬೃಹಸ್ಪತಿಂ ತು ವಿಶ್ವೇಷಾಂ ದದಾವಾಂಗಿರಸಂ ಪತಿಮ್ ||
ಜಲದ ರಾಜನನ್ನಾಗಿ ವರುಣನನ್ನೂ, ಯಕ್ಷರ ರಾಜನನ್ನಾಗಿ ಪ್ರಭು ವೈಶ್ರವಣ ಕುಬೇರನನ್ನೂ, ಮತ್ತು ವಿಶ್ವೇದೇವರ ರಾಜನನ್ನಾಗಿ ಆಂಗಿರಸ ಕುಲದಲ್ಲಿ ಹುಟ್ಟಿದ ಬೃಹಸ್ಪತಿಯನ್ನು ಮಾಡಿದನು.
19004004a ಭೃಗೂಣಾಮಧಿಪಂ ಚೈವ ಕಾವ್ಯಂ ರಾಜ್ಯೇಽಭ್ಯಷೇಹಯತ್ |
19004004c ಆದಿತ್ಯಾನಾಂ ತಥಾ ವಿಷ್ಣುಂ ವಸೂನಾಮಥ ಪಾವಕಮ್ ||
ಭೃಗುಗಳ ಅಧಿಪತಿಯಾಗಿ ಕಾವ್ಯನನ್ನೂ, ಆದಿತ್ಯರ ಅಧಿಪತಿಯಾಗಿ ವಿಷ್ಣುವನ್ನೂ, ಮತ್ತು ವಸುಗಳ ಅಧಿಪತಿಯಾಗಿ ಪಾವಕನನ್ನೂ ಅಭಿಷೇಕಿಸಿದನು.
19004005a ಪ್ರಜಾಪತೀನಾಂ ದಕ್ಷಂ ತು ಮರುತಾಮಥ ವಾಸವಮ್ |
19004005c ದೈತ್ಯಾನಾಂ ದಾನವಾನಾಂ ಚ ಪ್ರಹ್ಲಾದಮಮಿತೌಜಸಮ್ ||
19004006a ವೈವಸ್ವತಂ ಚ ಪಿತೄಣಾಂ ಯಮಂ ರಾಜ್ಯೇಽಭ್ಯಷೇಚಯತ್ |
ದಕ್ಷನನ್ನು ಪ್ರಜಾಪತಿಗಳ, ವಾಸವನನ್ನು ಮರುತ್ತರ, ಅಮಿತೌಜಸ ಪ್ರಹ್ಲಾದನನ್ನು ದೈತ್ಯರ, ಮತ್ತು ವಿವಸ್ವತನ ಮಗ ಯಮನನ್ನು ಪಿತೃಗಳ ರಾಜನನ್ನಾಗಿ ಅಭಿಷೇಕಿಸಿದನು.
19004006c ಮಾತೄಣಾಂ ಚ ವ್ರತಾನಾಂ ಚ ಮಂತ್ರಾಣಾಂ ಚ ತಥಾ ಗವಾಮ್||
19004007a ಯಕ್ಷಾಣಾಂ ರಾಕ್ಷಸಾನಾಂ ಚ ಪಾರ್ಥಿವಾನಾಂ ತಥೈವ ಚ |
19004007c ನಾರಾಯಣಂ ತು ಸಾಧ್ಯಾನಾಂ ರುದ್ರಾಣಾಂ ವೃಷಭಧ್ವಜಮ್||
ಮಾತೃಗಳ, ವ್ರತಗಳ, ಮಂತ್ರಗಳ, ಗೋವುಗಳ, ಯಕ್ಷ-ರಾಕ್ಷಸರ ಪಾರ್ಥಿವರ, ಮತ್ತು ಸಾಧ್ಯರ ರಾಜನನ್ನಾಗಿ ನಾರಾಯಣನನ್ನೂ ವೃಷಭಧ್ವಜನನ್ನು ರುದ್ರರ ರಾಜನನ್ನಾಗಿಯೂ ಅಭಿಷೇಕಿಸಿದನು.
19004008a ವಿಪ್ರಚಿತ್ತಿಂ ತು ರಾಜಾನಂ ದಾನವಾನಾಮಥಾದಿಶತ್ |
19004008c ಸರ್ವಭೂತಪಿಶಾಚಾನಾಂ ಗಿರಿಶಂ ಶೂಲಪಾಣಿನಮ್ ||
ವಿಪ್ರಚಿತ್ತಿಗೆ ದಾನವರ ರಾಜನಾಗಲು ಆದೇಶವಿತ್ತನು ಮತ್ತು ಸರ್ವ ಭೂತ-ಪಿಶಾಚಿಗಳ ರಾಜನಾಗಿ ಗಿರಿಶ ಶೂಲಪಾಣಿಯನ್ನು ನಿಯೋಜಿಸಿದನು.
19004009a ಶೈಲಾನಾಂ ಹಿಮವಂತಂ ಚ ನದೀನಾಮಥ ಸಾಗರಮ್ |
19004009c ಗಂಧಾನಾಂ ಮರುತಾಂ ಚೈವ ಭೂತಾನಾಮಶರೀರಿಣಾಮ್ |
19004009e ಶಬ್ದಾಕಾಶವತಾಂ ಚೈವ ವಾಯುಂ ಚ ಬಲಿನಾಂ ವರಮ್ ||
ಹಿಮವಂತನನ್ನು ಶೈಲಗಳ ರಾಜನಾಗಿಯೂ, ಸಾಗರನನ್ನು ನದಿಗಳ ರಾಜನನ್ನಾಗಿಯೂ, ಮರುತ್ತರನ್ನು ಗಂಧಗಳ ರಾಜರಾಗಿಯೂ, ಅಶರೀರ ಭೂತಗಳಾದ ಶಬ್ಧ-ಆಕಾಶಗಳಿಗೆ ಬಲಿಗಳಲ್ಲಿ ಶ್ರೇಷ್ಠ ವಾಯುವನ್ನು ರಾಜನನ್ನಾಗಿಯೂ ಅಭಿಷೇಕಿಸಿದನು.
19004010a ಗಂಧರ್ವಾಣಾಮಧಿಪತಿಂ ಚಕ್ರೇ ಚಿತ್ರರಥಂ ಪ್ರಭುಮ್ |
19004010c ನಾಗಾನಾಂ ವಾಸುಕಿಂ ಚಕ್ರೇ ಸರ್ಪಾಣಾಮಥ ತಕ್ಷಕಮ್ ||
ಗಂಧರ್ವರ ಅಧಿಪತಿಯನ್ನಾಗಿ ಪ್ರಭು ಚಿತ್ರರಥನನ್ನು ಮಾಡಲಾಯಿತು. ವಾಸುಕಿಯನ್ನು ನಾಗಗಳ ಮತ್ತು ತಕ್ಷಕನನ್ನು ಸರ್ಪಗಳ ಅಧಿಪತಿಗಳನ್ನಾಗಿ ಮಾಡಲಾಯಿತು.
19004011a ವಾರಣಾನಾಂ ಚ ರಾಜಾನಮೈರಾವತಮಥಾದಿಶತ್ |
19004011c ಉಚ್ಚೈಃಶ್ರವಸಮಶ್ವಾನಾಂ ಗರುಡಂ ಚೈವ ಪಕ್ಷಿಣಾಮ್ ||
ಆನೆಗಳ ರಾಜನಾಗಿ ಐರಾವತಕ್ಕೆ ಆದೇಶವನ್ನು ನೀಡಲಾಯಿತು. ಅಶ್ವಗಳಿಗೆ ಉಚ್ಛೈಃಶ್ರವನನ್ನೂ ಪಕ್ಷಿಗಳಿಗೆ ಗರುಡನನ್ನೂ ರಾಜರನ್ನಾಗಿ ಅಭಿಷೇಕಿಸಿದನು.
19004012a ಮೃಗಾಣಾಮಥ ಶಾರ್ದೂಲಂ ಗೋವೃಷಂ ತು ಗವಾಂ ಪತಿಮ್ |
19004012c ವನಸ್ಪತೀನಾಂ ರಾಜಾನಂ ಪ್ಲಕ್ಷಮೇವಾದಿಶತ್ ಪ್ರಭುಮ್ ||
ವನ್ಯಮೃಗಗಳಿಗೆ ರಾಜನಾಗಿ ಸಿಂಹವನ್ನೂ, ಗೋವುಗಳಿಗೆ ಒಡೆಯನಾಗಿ ವೃಷಭನನ್ನೂ, ವನಸ್ಪತಿಗಳ ರಾಜನಾಗಿ ಪ್ಲಕ್ಷ ವೃಕ್ಷವನ್ನೂ ನಿಯೋಜಿಸಿದನು.
19004013a ಸಾಗರಾಣಾಂ ನದೀನಾಂ ಚ ಮೇಘಾನಾಂ ವರ್ಷಣಸ್ಯ ಚ |
19004013c ಆದಿತ್ಯಾನಾಮಧಿಪತಿಂ ಪರ್ಜನ್ಯಮಭಿಷಿಕ್ತವಾನ್ ||
ಸಾಗರಗಳು, ನದಿಗಳು, ಮೇಘಗಳು, ಮಳೆಗಳು, ಮತ್ತು ಸೂರ್ಯನ ಕಿರಣಗಳ ಅಧಿಪತಿಯನ್ನಾಗಿ ಪರ್ಜನ್ಯನನ್ನು ಅಭಿಷೇಕಿಸಲಾಯಿತು.
19004014a ಸರ್ವೇಷಾಂ ದಂಷ್ಟ್ರಿಣಾಂ ಶೇಷಂ ರಾಜಾನಮಭ್ಯಷೇಚಯತ್|
19004014c ಸರೀಸೄಪಾನಾಂ ಸರ್ಪಾಣಾಂ ರಾಜಾನಂ ಚೈವ ತಕ್ಷಕಮ್ ||
ಹಲ್ಲಿರುವ ಎಲ್ಲ ಸರ್ಪಗಳಿಗೂ ಶೇಷನನ್ನು ರಾಜನನ್ನಾಗಿ ಅಭಿಷೇಕಿಸಿದನು. ಸರೀಸೃಪ ಮತ್ತು ಸರ್ಪಗಳ ರಾಜನನ್ನಾಗಿ ತಕ್ಷಕನನ್ನು ಮಾಡಲಾಯಿತು.
19004015a ಗಂಧರ್ವಾಪ್ಸರಸಾಂ ಚೈವ ಕಾಮದೇವಂ ತಥಾ ಪ್ರಭುಮ್ |
19004015c ಋತೂನಾಮಥ ಮಾಸಾನಾಂ ದಿವಸಾನಾಂ ತಥೈವ ಚ ||
19004016a ಪಕ್ಷಾಣಾಂ ಚ ಕ್ಷಪಾಣಾಂ ಚ ಮುಹೂರ್ತತಿಥಿಪರ್ವಣಾಮ್ |
19004016c ಕಲಾಕಾಷ್ಠಾಪ್ರಮಾಣಾನಾಂ ಗತೇರಯನಯೋಸ್ತಥಾ ||
19004017a ಗಣಿತಸ್ಯಾಥ ಯೋಗಸ್ಯ ಚಕ್ರೇ ಸಂವತ್ಸರಂ ಪ್ರಭುಮ್ |
ಗಂಧರ್ವ-ಅಪ್ಸರೆಯರಿಗೆ ಪ್ರಭು ಕಾಮದೇವನನ್ನು ರಾಜನನ್ನಾಗಿ ಅಭಿಷೇಕಿಸಲಾಯಿತು. ಋತುಗಳು, ಮಾಸಗಳು, ದಿವಸಗಳು, ಪಕ್ಷಗಳು, ರಾತ್ರಿ, ಮುಹೂರ್ತ, ತಿಥಿ, ಪರ್ವ, ಕಲಾ-ಕಾಷ್ಠ ಪ್ರಮಾಣಗಳು, ಉತ್ತರಾಯಣ-ದಕ್ಷಿಣಾಯಣಗಳ ಗತಿ, ಯೋಗ ಗಣಿತ ಇವೆಲ್ಲವಕ್ಕೂ ಪ್ರಭು ಸಂವತ್ಸರನನ್ನು ರಾಜನನ್ನಾಗಿ ಅಭಿಷೇಕಿಸಿದನು.
19004017c ಏವಂ ವಿಭಜ್ಯ ರಾಜ್ಯಾನಿ ಕ್ರಮೇಣ ಸ ಪಿತಾಮಹಃ ||
19004018a ದಿಶಾಪಾಲಾನಥ ತತಃ ಸ್ಥಾಪಯಾಮಾಸ ಭಾರತ |
ಭಾರತ! ಹೀಗೆ ರಾಜ್ಯಗಳನ್ನು ವಿಭಜಿಸಿ ಪಿತಾಮಹನು ಕ್ರಮೇಣವಾಗಿ ದಿಕ್ಪಾಲಕರನ್ನು ಸ್ಥಾಪಿಸಿದನು.
19004018c ಪೂರ್ವಸ್ಯಾಂ ದಿಶಿ ಪುತ್ರಂ ತು ವೈರಾಜಸ್ಯ ಪ್ರಜಾಪತೇಃ ||
19004019a ದಿಶಾಪಾಲಂ ಸುಧನ್ವಾನಂ ರಾಜಾನಂ ಚಾಭ್ಯಷೇಚಯತ್ |
ಪ್ರಜಾಪತಿ ವೈರಾಜನ ಪುತ್ರ ರಾಜಾ ಸುಧನ್ವನನ್ನು ಪೂರ್ವದಿಕ್ಕಿನ ರಾಜನನ್ನಾಗಿ ಅಭಿಷೇಕಿಸಿದನು.
19004019c ದಕ್ಷಿಣಸ್ಯಾಂ ಮಹಾತ್ಮಾನಂ ಕರ್ದಮಸ್ಯ ಪ್ರಜಾಪತೇಃ ||
19004020a ಪುತ್ರಂ ಶಂಖಪದಂ ನಾಮ ರಾಜಾನಂ ಸೋಽಭ್ಯಷೇಚಯತ್|
ಪ್ರಜಾಪತಿ ಕರ್ದಮನ ಪುತ್ರ ಶಂಖಪದನೆಂಬ ಹೆಸರಿನವನನ್ನು ದಕ್ಷಿಣ ದಿಕ್ಕಿನ ರಾಜನನ್ನಾಗಿ ಅಭಿಷೇಕಿಸಿದನು.
19004020c ಪಶ್ಚಿಮಾಯಾಂ ದಿಶಿ ತಥಾ ರಜಸಃ ಪುತ್ರಮಚ್ಯುತಮ್ ||
19004021a ಕೇತುಮಂತಂ ಮಹಾತ್ಮಾನಂ ರಾಜಾನಂ ಸೋಽಭ್ಯಷೇಚಯತ್|
ರಜಸನ ಪುತ್ರ ಅಚ್ಯುತ ಮಹಾತ್ಮ ಕೇತುಮಂತನನ್ನು ಪಶ್ಚಿಮ ದಿಕ್ಕಿನ ರಾಜನನ್ನಾಗಿ ಅಭಿಷೇಕಿಸಿದನು.
19004021c ತಥಾ ಹಿರಣ್ಯರೋಮಾಣಂ ಪರ್ಜನ್ಯಸ್ಯ ಪ್ರಜಾಪತೇಃ ||
19004022a ಉದೀಚ್ಯಾಂ ದಿಶಿ ದುರ್ಧರ್ಷಂ ರಾಜಾನಂ ಸೋಽಭ್ಯಷೇಚಯತ್ |
ಹಾಗೆಯೇ ಪ್ರಜಾಪತಿ ಪರ್ಜನ್ಯನ ಪುತ್ರ ದುರ್ಧರ್ಷ ಹಿರಣ್ಯರೋಮನನ್ನು ಪೂರ್ವದಿಕ್ಕಿನ ರಾಜನನ್ನಾಗಿ ಅಭಿಷೇಕಿಸಿದನು.
19004022c ತೈರಿಯಂ ಪೃಥಿವೀ ಸರ್ವಾ ಸಪ್ತದ್ವೀಪಾ ಸಪರ್ವತಾ ||
19004023a ಯಥಾಪ್ರದೇಶಮದ್ಯಾಪಿ ಧರ್ಮೇಣ ಪ್ರತಿಪಾಲ್ಯತೇ |
ಅವರು ಸಪ್ತದ್ವೀಪಾ ಸಪರ್ವತಾ ಇಡೀ ಪೃಥ್ವಿಯ ಯಥಾಪ್ರದೇಶಗಳನ್ನು ಇಂದಿಗೂ ಕೂಡ ಧರ್ಮದಿಂದ ಪರಿಪಾಲಿಸುತ್ತಾರೆ.
19004023c ರಾಜಸೂಯಾಭಿಷಿಕ್ತಸ್ತು ಪೃಥುರೇಭಿರ್ನರಾಧಿಪೈಃ |
19004023e ವೇದದೃಷ್ಟೇನ ವಿಧಿನಾ ರಾಜಾರಾಜ್ಯೇ ನರಾಧಿಪ ||
ನರಾಧಿಪ! ಈ ನರಾಧಿಪರು ವೇದದಲ್ಲಿ ಕಾಣಿಸಿರುವ ವಿಧಿಗಳಿಂದ ರಾಜಸೂಯದಲ್ಲಿ ಪೃಥುವನ್ನು ರಾಜರಾಜನೆಂದು ಅಭಿಷೇಕಿಸಿದರು.
19004024a ತತೋ ಮನ್ವಂತರೇಽತೀತೇ ಚಾಕ್ಷುಷೇಽಮಿತತೇಜಸಿ |
19004024c ವೈವಸ್ವತಾಯ ಮನವೇ ಬ್ರಹ್ಮಾ ರಾಜ್ಯಮಥಾದಿಶತ್ |
19004024e ತಸ್ಯ ವಿಸ್ತರಮಾಖ್ಯಾಸ್ಯೇ ಮನೋರ್ವೈವಸ್ವತಸ್ಯ ಹ ||
ಅಮಿತತೇಜಸ್ಸಿದ್ದ ಚಾಕ್ಷುಷೀ ಮನ್ವಂತರವು ಮುಗಿದಾಗ ಬ್ರಹ್ಮನು ವೈವಸ್ವತ ಮನುವಿಗೆ ರಾಜ್ಯವನ್ನು ನೀಡಿದ್ದನು. ವೈವಸ್ವತ ಮನುವಿನ ಕುರಿತು ವಿಸ್ತಾರವಾಗಿ ಹೇಳಿದ್ದೇನೆ.
19004025a ತವಾನುಕೂಲ್ಯಾದ್ರಾಜೇಂದ್ರ ಯದಿ ಶುಶ್ರೂಷಸೇಽನಘ |
19004025c ಮಹದ್ಧ್ಯೇತದಧಿಷ್ಠಾನಂ ಪುರಾಣಂ ಪರಿಕೀರ್ತಿತಮ್ |
19004025e ಧನ್ಯಂ ಯಶಸ್ಯಮಾಯುಷ್ಯಂ ಸ್ವರ್ಗವಾಸಕರಂ ಶುಭಮ್||
ರಾಜೇಂದ್ರ! ಅನಘ! ನಿನಗೆ ಕೇಳಬೇಕೆಂದಂತೆ ಮತ್ತು ಅನುಕೂಲವಿದ್ದಂತೆ ನಾನು ಆ ಧನ್ಯತೆ-ಯಶಸ್ಸು-ಆಯುಸ್ಸುಗಳನ್ನು ಮತ್ತು ಶುಭ ಸ್ವರ್ಗವಾಸವನ್ನು ನೀಡುವ ಅತಿ ದೊಡ್ಡ ಪುರಾಣವನ್ನು ಹೇಳಿದ್ದೇನೆ.”
19004026 ಜನಮೇಜಯ ಉವಾಚ|
19004026a ವಿಸ್ತರೇಣ ಪೃಥೋರ್ಜನ್ಮ ವೈಶಂಪಾಯನ ಕೀರ್ತಯ |
19004026c ಯಥಾ ಮಹಾತ್ಮನಾ ತೇನ ದುಗ್ಧಾ ಚೇಯಂ ವಸುಂಧರಾ ||
ಜನಮೇಜಯನು ಹೇಳಿದನು: “ವೈಶಂಪಾಯನ! ಪೃಥುವಿನ ಜನ್ಮದ ಕುರಿತು ವಿಸ್ತಾರವಾಗಿ ಹೇಳು. ಹೇಗೆ ಆ ಮಹಾತ್ಮನು ವಸುಂಧರೆಯ ಹಾಲುಕರೆದನು?
19004027a ಯಥಾ ಚ ಪಿತೃಭಿರ್ದುಗ್ಧಾ ಯಥಾ ದೇವೈರ್ಯಥರ್ಷಿಭಿಃ |
19004027c ಯಥಾ ದೈತ್ಯೈಶ್ಚ ನಾಗೈಶ್ಚ ಯಥಾ ಯಕ್ಷೈರ್ಯಥಾ ದ್ರುಮೈಃ||
19004028a ಯಥಾ ಶೈಲೈಃ ಪಿಶಾಚೈಶ್ಚ ಗಂಧರ್ವೈಶ್ಚ ದ್ವಿಜೋತ್ತಮೈಃ |
19004028c ರಾಕ್ಷಸೈಶ್ಚ ಮಹಾಸತ್ತ್ವೈರ್ಯಥಾ ದುಗ್ಧಾ ವಸುಂಧರಾ ||
ಹೇಗೆ ಪಿತೃಗಳು, ಹೇಗೆ ದೇವತೆಗಳು, ಋಷಿಗಳು, ಹೇಗೆ ದೈತ್ಯ-ನಾಗ-ಯಕ್ಷ-ದ್ರುಮಗಳು, ಹೇಗೆ ಶೈಲ-ಪಿಶಾಚ, ಗಂಧರ್ವ-ದ್ವಿಜೋತ್ತಮರು ಮತ್ತು ಹೇಗೆ ಮಹಾಸತ್ತ್ವಯುತ ರಾಕ್ಷಸರು ವಸುಂಧರೆಯ ಹಾಲು ಕರೆದರು?
19004029a ತೇಷಾಂ ಪಾತ್ರವಿಶೇಷಾಂಶ್ಚ ವೈಶಂಪಾಯನ ಕೀರ್ತಯ |
19004029c ವತ್ಸಾನ್ಕ್ಷೀರವಿಶೇಷಾಂಶ್ಚ ದೋಗ್ಧಾರಂ ಚಾನುಪೂರ್ವಶಃ ||
ವೈಶಂಪಾಯನ! ಈ ಹಾಲುಕರೆದವರು ಉಪಯೋಗಿಸಿದ ಹಾಲುಕರೆಯುವ ಪಾತ್ರೆಗಳು ಹೇಗಿದ್ದವು? ಕರುಗಳ ಮತ್ತು ಹಾಲಿನ ವಿಶೇಷತೆಗಳು ಏನಿದ್ದವು? ಇವುಗಳ ಕುರಿತು ಹೇಳು.
19004030a ಯಸ್ಮಾಚ್ಚ ಕಾರಣಾತ್ಪಾಣಿರ್ವೇನಸ್ಯ ಮಥಿತಃ ಪುರಾ |
19004030c ಕ್ರುದ್ಧೈರ್ಮಹರ್ಷಿಭಿಸ್ತಾತ ಕಾರಣಂ ತಚ್ಚ ಕೀರ್ತಯ ||
ತಾತ! ಯಾವ ಕಾರಣದಿಂದ ಹಿಂದೆ ಕ್ರುದ್ಧ ಮಹರ್ಷಿಗಳು ವೇನನ ಕೈಗಳನ್ನು ಮಥಿಸಿದ್ದರು? ಅದರ ಕಾರಣವನ್ನೂ ಹೇಳು.”
19004031 ವೈಶಂಪಾಯನ ಉವಾಚ|
19004031a ಹಂತ ತೇ ಕಥಯಿಷ್ಯಾಮಿ ಪೃಥೋರ್ವೈನ್ಯಸ್ಯ ವಿಸ್ತರಮ್ |
19004031c ಏಕಾಗ್ರಃ ಪ್ರಯತಶ್ಚೈವ ಶೃಣುಷ್ವ ಜನಮೇಜಯ ||
ವೈಶಂಪಾಯನನು ಹೇಳಿದನು: “ಜನಮೇಜಯ! ವೈನನ ಮಗ ಪೃಥುವಿನ ಕುರಿತು ವಿಸ್ತಾರವಾಗಿ ಹೇಳುತ್ತೇನೆ. ಏಕಾಗ್ರನಾಗಿ ಮತ್ತು ಸಮಯವಿಟ್ಟುಕೊಂಡು ಕೇಳು.
19004032a ನಾಶುಚೇಃ ಕ್ಷುದ್ರಮನಸಃ ಕುಶಿಷ್ಯಾಯಾವ್ರತಾಯ ಚ |
19004032c ಕೀರ್ತನೀಯಮಿಮಂ ರಾಜನ್ಕೃತಘ್ನಾಯಾಹಿತಾಯ ಚ ||
ರಾಜನ್! ಶುಚಿಯಾಗಿಲ್ಲದವನಿಗೆ, ಕ್ಷುದ್ರಮನಸ್ಸುಳ್ಳವನಿಗೆ, ಕುಶಿಷ್ಯನಿಗೆ, ವ್ರತಾದಿಗಳನ್ನು ಮಾಡದವನಿಗೆ, ಕೃತಘ್ನನಿಗೆ ಮತ್ತು ಅಹಿತ ಕರ್ಮಗಳನ್ನು ಮಾಡುವವನಿಗೆ ಈ ಕಥೆಯನ್ನು ಹೇಳಬಾರದು.
19004033a ಸ್ವರ್ಗ್ಯಂ ಯಶಸ್ಯಮಾಯುಷ್ಯಂ ಧರ್ಮ್ಯಂ ವೇದೇನ ಸಂಮಿತಮ್ |
19004033c ರಹಸ್ಯಮೃಷಿಭಿಃ ಪ್ರೋಕ್ತಂ ಶೃಣು ರಾಜನ್ಯಥಾತಥಮ್ ||
ರಾಜನ್! ಸ್ವರ್ಗ-ಯಶಸ್ಸು-ಆಯುಷ್ಯ-ಧರ್ಮಗಳನ್ನು ನೀಡುತ್ತದೆಯೆಂದು ವೇದಸಂಹಿತದಲ್ಲಿ ಋಷಿಗಳು ಹೇಳಿರುವ ಆ ರಹಸ್ಯವನ್ನು ಯಥಾತಥವಾಗಿ ಕೇಳು.
19004034a ಯಶ್ಚೈನಂ ಕೀರ್ತಯೇನ್ನಿತ್ಯಂ ಪೃಥೋರ್ವೈನ್ಯಸ್ಯ ವಿಸ್ತರಮ್ |
19004034c ಬ್ರಾಹ್ಮಣೇಭ್ಯೋ ನಮಸ್ಕೃತ್ಯ ನ ಸ ಶೋಚೇತ್ಕೃತಾಕೃತೈಃ ||
ಬ್ರಾಹ್ಮಣರಿಗೆ ನಮಸ್ಕರಿಸಿ ಪೃಥುವಿನ ಈ ವಿಸ್ತಾರ ಕಥೆಯನ್ನು ಯಾರು ಹೇಳುತ್ತಾರೋ ಅವರು ಮಾಡಿದ ಪಾಪಗಳ ಕುರಿತು ಶೋಕಿಸಬೇಕಾಗುವುದಿಲ್ಲ.”
ಇತಿ ಶ್ರೀಮಹಾಭಾರತೇ ಖಿಲ್ಲೇಷು ಹರಿವಂಶಪರ್ವಣೀ ಪೃಥೂಪಾಖ್ಯಾನೇ ಚತುರ್ಥೋಽಧ್ಯಾಯಃ|
ಇದು ಶ್ರೀಮಹಾಭಾರತದ ಖಿಲಭಾಗ ಹರಿವಂಶದಲ್ಲಿ ಹರಿವಂಶಪರ್ವದಲ್ಲಿ ಪೃಥೂಪಾಖ್ಯಾನ ಎನ್ನುವ ನಾಲ್ಕನೆಯ ಅಧ್ಯಾಯವು.