ದ್ರೋಣ ಪರ್ವ: ದ್ರೋಣಾಭಿಷೇಕ ಪರ್ವ
೩
ಕರ್ಣನು ಭೀಷ್ಮನಿಗೆ ತಾನು ಯುದ್ಧಕ್ಕೆ ಹೊರಡಲು ಅನುಮತಿಯನ್ನು ಕೇಳಿದುದು (೧-೨೩).
07003001 ಸಂಜಯ ಉವಾಚ|
07003001a ಶರತಲ್ಪೇ ಮಹಾತ್ಮಾನಂ ಶಯಾನಮಮಿತೌಜಸಂ|
07003001c ಮಹಾವಾತಸಮೂಹೇನ ಸಮುದ್ರಮಿವ ಶೋಷಿತಂ||
07003002a ದಿವ್ಯೈರಸ್ತ್ರೈರ್ಮಹೇಷ್ವಾಸಂ ಪಾತಿತಂ ಸವ್ಯಸಾಚಿನಾ|
07003002c ಜಯಾಶಾಂ ತವ ಪುತ್ರಾಣಾಂ ಸಂಭಗ್ನಾಂ ಶರ್ಮ ವರ್ಮ ಚ||
07003003a ಅಪಾರಾಣಾಮಿವ ದ್ವೀಪಮಗಾಧೇ ಗಾಧಮಿಚ್ಚತಾಂ|
07003003c ಸ್ರೋತಸಾ ಯಾಮುನೇನೇವ ಶರೌಘೇಣ ಪರಿಪ್ಲುತಂ||
07003004a ಮಹಾಂತಮಿವ ಮೈನಾಕಮಸಹ್ಯಂ ಭುವಿ ಪಾತಿತಂ|
07003004c ನಭಶ್ಚ್ಯುತಮಿವಾದಿತ್ಯಂ ಪತಿತಂ ಧರಣೀತಲೇ||
07003005a ಶತಕ್ರತೋರಿವಾಚಿಂತ್ಯಂ ಪುರಾ ವೃತ್ರೇಣ ನಿರ್ಜಯಂ|
07003005c ಮೋಹನಂ ಸರ್ವಸೈನ್ಯಸ್ಯ ಯುಧಿ ಭೀಷ್ಮಸ್ಯ ಪಾತನಂ||
07003006a ಕಕುದಂ ಸರ್ವಸೈನ್ಯಾನಾಂ ಲಕ್ಷ್ಮ ಸರ್ವಧನುಷ್ಮತಾಂ|
07003006c ಧನಂಜಯಶರವ್ಯಾಪ್ತಂ ಪಿತರಂ ತೇ ಮಹಾವ್ರತಂ||
07003007a ತಂ ವೀರಶಯನೇ ವೀರಂ ಶಯಾನಂ ಪುರುಷರ್ಷಭಂ|
07003007c ಭೀಷ್ಮಮಾಧಿರಥಿರ್ದೃಷ್ಟ್ವಾ ಭರತಾನಾಮಮಧ್ಯಮಂ||
07003008a ಅವತೀರ್ಯ ರಥಾದಾರ್ತೋ ಬಾಷ್ಪವ್ಯಾಕುಲಿತಾಕ್ಷರಂ|
07003008c ಅಭಿವಾದ್ಯಾಂಜಲಿಂ ಬದ್ಧ್ವಾ ವಂದಮಾನೋಽಭ್ಯಭಾಷತ||
ಸಂಜಯನು ಹೇಳಿದನು: “ಮಹಾ ಚಂಡಮಾರುತದಿಂದ ಶೋಷಿತವಾದ ಸಮುದ್ರದಂತಿದ್ದ ಶರತಲ್ಪದಲ್ಲಿ ಮಲಗಿದ್ದ, ಸವ್ಯಸಾಚಿಯ ದಿವ್ಯಾಸ್ತ್ರಗಳಿಂದ ಬೀಳಿಸಲ್ಪಟ್ಟ ಮಹೇಷ್ವಾಸನನ್ನು, ಜಯವನ್ನು ಬಯಸಿದ್ದ ನಿನ್ನ ಪುತ್ರರ ಒಡೆದುಹೋಗಿರುವ ಆಶ್ರಯವೂ ರಕ್ಷೆಯೂ ಆಗಿದ್ದ, ಅಪಾರವಾದ ಅಗಾಧವಾದ ಆಳಕ್ಕೆ ಹೋಗಬಯಸಿದವರಿಗೆ ದ್ವೀಪದಂತಿದ್ದ, ಯಮುನೆಯ ಪ್ರವಾಹದಂತಿದ್ದ ಶರಸಮೂಹಗಳಿಂದ ಮುಳುಗಿಹೋಗಿದ್ದ, ಮಹಾ ಮೈನಾಕದಂತೆ ಭೂಮಿಯ ಮೇಲೆ ಬಿದ್ದಿರುವ, ಆಕಾಶದಿಂದ ಕಳಚಿದ ಆದಿತ್ಯನಂತೆ ಭೂಮಿಯ ಮೇಲೆ ಬಿದ್ದಿದ್ದ, ಹಿಂದೆ ವೃತ್ರನಿಂದ ಸೋತುಹೋಗಿದ್ದ ಅಚಿಂತ್ಯ ಶತಕ್ರತುವಿನಂತಿದ್ದ, ಯುದ್ಧದಲ್ಲಿ ಸರ್ವಸೇನೆಗಳ ಪ್ರೀತಿಪಾತ್ರನಾಗಿದ್ದ, ಭೀಷ್ಮನ ಪತನದಿಂದ ಸರ್ವಸೇನೆಗಳು ಭ್ರಾಂತವಾಗಿದ್ದ, ಎಲ್ಲ ಧನುಷ್ಮತರ ಶಿರೋಮಣಿಯಾಗಿದ್ದ, ಧನಂಜಯನ ಬಾಣಗಳಿಂದ ವ್ಯಾಪ್ತನಾಗಿದ್ದ ನಿನ್ನ ತಂದೆ ಮಹಾವ್ರತನನ್ನು, ವೀರಶಯನದಲ್ಲಿದ್ದ ಆ ವೀರನನ್ನು, ಮಲಗಿದ್ದ ಆ ಪುರುಷರ್ಷಭ, ಭರತರ ಅಮಧ್ಯಮನಾಗಿರುವ ಭೀಷ್ಮನನ್ನು ನೋಡಿ ಅದಿರಥನು ರಥದಿಂದ ಇಳಿದು ಆರ್ತನಾಗಿ, ಕಣ್ಣೀರಿನಿಂದ ವ್ಯಾಕುಲಗೊಂಡ ಮಾತಿನಲ್ಲಿ ಕೈಮುಗಿದು ಅಭಿವಾದಿಸಿ ನಮಸ್ಕರಿಸುತ್ತಾ ಹೇಳಿದನು:
07003009a ಕರ್ಣೋಽಹಮಸ್ಮಿ ಭದ್ರಂ ತೇ ಅದ್ಯ ಮಾ ವದ ಭಾರತ|
07003009c ಪುಣ್ಯಯಾ ಕ್ಷೇಮಯಾ ವಾಚಾ ಚಕ್ಷುಷಾ ಚಾವಲೋಕಯ||
“ಭಾರತ! ನಾನು ಕರ್ಣ. ನಿನಗೆ ಮಂಗಳವಾಗಲಿ. ಇಂದು ನನ್ನೊಡನೆ ಮಾತನಾಡು! ಪುಣ್ಯ ಕ್ಷೇಮಕರ ಮಾತು-ದೃಷ್ಟಿಗಳಿಂದ ನನ್ನನ್ನು ನೋಡು!
07003010a ನ ನೂನಂ ಸುಕೃತಸ್ಯೇಹ ಫಲಂ ಕಶ್ಚಿತ್ಸಮಶ್ನುತೇ|
07003010c ಯತ್ರ ಧರ್ಮಪರೋ ವೃದ್ಧಃ ಶೇತೇ ಭುವಿ ಭವಾನಿಹ||
ಧರ್ಮಪರ ವೃದ್ಧನಾದ ನೀನೇ ಭೂಮಿಯ ಮೇಲೆ ಹೀಗೆ ಮಲಗಿದ್ದೀಯೇ ಎಂದರೆ ಪುಣ್ಯಕರ್ಮಗಳ ಫಲವು ಇಲ್ಲಿ ಯಾರಿಗೂ ದೊರೆಯುವುದಿಲ್ಲವೆಂದಲ್ಲವೇ?
07003011a ಕೋಶಸಂಜನನೇ ಮಂತ್ರೇ ವ್ಯೂಹಪ್ರಹರಣೇಷು ಚ|
07003011c ನಾಥಮನ್ಯಂ ನ ಪಶ್ಯಾಮಿ ಕುರೂಣಾಂ ಕುರುಸತ್ತಮ||
ಕುರುಸತ್ತಮ! ಕೋಶ ಸಂಗ್ರಹದಲ್ಲಿ, ಮಂತ್ರಾಲೋಚನೆಯಲ್ಲಿ, ವ್ಯೂಹರಚನೆಯಲ್ಲಿ, ಪ್ರಹರಿಸುವುದರಲ್ಲಿ ಕುರುಗಳ ನಾಥನಾಗಿ ಬೇರೆ ಯಾರನ್ನೂ ನಾನು ಕಾಣುತ್ತಿಲ್ಲ.
07003012a ಬುದ್ಧ್ಯಾ ವಿಶುದ್ಧಯಾ ಯುಕ್ತೋ ಯಃ ಕುರೂಂಸ್ತಾರಯೇದ್ಭಯಾತ್|
07003012c ಯೋಧಾಂಸ್ತ್ವಮಪ್ಲವೇ ಹಿತ್ವಾ ಪಿತೃಲೋಕಂ ಗಮಿಷ್ಯಸಿ||
ವಿಶುದ್ಧ ಬುದ್ಧಿಯಿಂದ ಯುಕ್ತನಾಗಿ ಕುರುಗಳನ್ನು ಭಯದಿಂದ ಪಾರುಗೊಳಿಸಿ, ಯುದ್ಧದಲ್ಲಿ ಅನೇಕ ಯೋಧರನ್ನು ಸಂಹರಿಸಿ ಪಿತೃಲೋಕಕ್ಕೆ ಹೋಗುತ್ತಿರುವೆ?
07003013a ಅದ್ಯ ಪ್ರಭೃತಿ ಸಂಕ್ರುದ್ಧಾ ವ್ಯಾಘ್ರಾ ಇವ ಮೃಗಕ್ಷಯಂ|
07003013c ಪಾಂಡವಾ ಭರತಶ್ರೇಷ್ಠ ಕರಿಷ್ಯಂತಿ ಕುರುಕ್ಷಯಂ||
ಭರತಶ್ರೇಷ್ಠ! ಇಂದಿನಿಂದ ಪಾಂಡವರು ಕ್ರುದ್ಧರಾಗಿ ವ್ಯಾಘ್ರವು ಮೃಗಗಳನ್ನು ಕೊಲ್ಲುವಂತೆ ಕುರುಗಳ ಕ್ಷಯವನ್ನು ಮಾಡುತ್ತಾರೆ.
07003014a ಅದ್ಯ ಗಾಂಡೀವಘೋಷಸ್ಯ ವೀರ್ಯಜ್ಞಾಃ ಸವ್ಯಸಾಚಿನಃ|
07003014c ಕುರವಃ ಸಂತ್ರಸಿಷ್ಯಂತಿ ವಜ್ರಪಾಣೇರಿವಾಸುರಾಃ||
ಇಂದು ಸವ್ಯಸಾಚಿಯ ವೀರ್ಯವನ್ನು ತಿಳಿದ ಕುರುಗಳು ಗಾಂಡೀವಘೋಷದಿಂದಾಗಿ ವಜ್ರಪಾಣಿಯನ್ನು ಅಸುರರು ಹೇಗೋ ಹಾಗೆ ತಡೆದುಕೊಳ್ಳಲಾರರು.
07003015a ಅದ್ಯ ಗಾಂಡೀವಮುಕ್ತಾನಾಮಶನೀನಾಮಿವ ಸ್ವನಃ|
07003015c ತ್ರಾಸಯಿಷ್ಯತಿ ಸಂಗ್ರಾಮೇ ಕುರೂನನ್ಯಾಂಶ್ಚ ಪಾರ್ಥಿವಾನ್||
ಇಂದು ಸಿಡಿಲಿನಂತೆ ಗುಡುಗುವ ಗಾಂಡೀವದಿಂದ ಹೊರಟ ಬಾಣಗಳು ಸಂಗ್ರಾಮದಲ್ಲಿ ಕುರುಗಳನ್ನೂ ಅನ್ಯ ಪಾರ್ಥಿವರನ್ನೂ ತ್ರಾಸಗೊಳಿಸಲಿವೆ.
07003016a ಸಮಿದ್ಧೋಽಗ್ನಿರ್ಯಥಾ ವೀರ ಮಹಾಜ್ವಾಲೋ ದ್ರುಮಾನ್ದಹೇತ್|
07003016c ಧಾರ್ತರಾಷ್ಟ್ರಾನ್ಪ್ರಧಕ್ಷ್ಯಂತಿ ತಥಾ ಬಾಣಾಃ ಕಿರೀಟಿನಃ||
ವೀರ! ಮಹಾಜ್ವಾಲೆಯ ಅಗ್ನಿಯಲ್ಲಿ ವೃಕ್ಷಗಳು ಹೇಗೆ ಸುಟ್ಟುಹೋಗುತ್ತವೆಯೋ ಹಾಗೆ ಕಿರೀಟಿಯ ಬಾಣಗಳಿಂದ ಧಾರ್ತರಾಷ್ಟ್ರರು ಭಸ್ಮವಾಗಲಿದ್ದಾರೆ.
07003017a ಯೇನ ಯೇನ ಪ್ರಸರತೋ ವಾಯ್ವಗ್ನೀ ಸಹಿತೌ ವನೇ|
07003017c ತೇನ ತೇನ ಪ್ರದಹತೋ ಭಗವಂತೌ ಯದಿಚ್ಚತಃ||
ವಾಯು ಮತ್ತು ಅಗ್ನಿಯರು ಒಟ್ಟಿಗೇ ವನದಲ್ಲಿ ಎಲ್ಲೆಲ್ಲಿ ಪ್ರಸರಿಸುತ್ತಾರೆಯೋ ಅಲ್ಲಲ್ಲಿ ಸುಡುವಂತೆ ಭಗವಂತರಿಬ್ಬರೂ ಇಚ್ಛಿಸಿದವರನ್ನು ಸುಡುತ್ತಾರೆ.
07003018a ಯಾದೃಶೋಽಗ್ನಿಃ ಸಮಿದ್ಧೋ ಹಿ ತಾದೃಕ್ಪಾರ್ಥೋ ನ ಸಂಶಯಃ|
07003018c ಯಥಾ ವಾಯುರ್ನರವ್ಯಾಘ್ರ ತಥಾ ಕೃಷ್ಣೋ ನ ಸಂಶಯಃ||
ಅಗ್ನಿಯು ಹೇಗೆ ಸುಡುತ್ತಾನೋ ಹಾಗೆ ಪಾರ್ಥ ಎನ್ನುವುದರಲ್ಲಿ ಸಂಶಯವಿಲ್ಲ. ಹಾಗೆಯೇ ನರವ್ಯಾಘ್ರ! ಕೃಷ್ಣನು ವಾಯು ಎನ್ನುವುದರಲ್ಲಿಯೂ ಸಂಶಯವಿಲ್ಲ.
07003019a ನದತಃ ಪಾಂಚಜನ್ಯಸ್ಯ ರಸತೋ ಗಾಂಡಿವಸ್ಯ ಚ|
07003019c ಶ್ರುತ್ವಾ ಸರ್ವಾಣಿ ಸೈನ್ಯಾನಿ ತ್ರಾಸಂ ಯಾಸ್ಯಂತಿ ಭಾರತ||
ಭಾರತ! ಪಾಂಚಜನ್ಯದ ಧ್ವನಿ ಮತ್ತು ಗಾಂಡೀವದ ಟೇಂಕಾರಗಳನ್ನು ಕೇಳಿ ಸರ್ವ ಸೈನ್ಯಗಳೂ ಭಯೋದ್ವಿಗ್ನರಾಗುತ್ತಾರೆ.
07003020a ಕಪಿಧ್ವಜಸ್ಯ ಚೋತ್ಪಾತೇ ರಥಸ್ಯಾಮಿತ್ರಕರ್ಶಿನಃ|
07003020c ಶಬ್ದಂ ಸೋಢುಂ ನ ಶಕ್ಷ್ಯಂತಿ ತ್ವಾಂ ಋತೇ ವೀರ ಪಾರ್ಥಿವಾಃ||
ವೀರ! ನಿನ್ನನ್ನು ಬಿಟ್ಟು ಬೇರೆ ಯಾವ ಪಾರ್ಥಿವರಿಗೂ ಕಪಿಧ್ವಜ ಅಮಿತ್ರಕರ್ಶನನ ನುಗ್ಗಿ ಬರುತ್ತಿರುವ ರಥವನ್ನು ತಡೆಯಲು ಸಾಧ್ಯವಿಲ್ಲ.
07003021a ಕೋ ಹ್ಯರ್ಜುನಂ ರಣೇ ಯೋದ್ಧುಂ ತ್ವದನ್ಯಃ ಪಾರ್ಥಿವೋಽರ್ಹತಿ|
07003021c ಯಸ್ಯ ದಿವ್ಯಾನಿ ಕರ್ಮಾಣಿ ಪ್ರವದಂತಿ ಮನೀಷಿಣಃ||
07003022a ಅಮಾನುಷಶ್ಚ ಸಂಗ್ರಾಮಸ್ತ್ರ್ಯಂಬಕೇನ ಚ ಧೀಮತಃ|
07003022c ತಸ್ಮಾಚ್ಚೈವ ವರಃ ಪ್ರಾಪ್ತೋ ದುಷ್ಪ್ರಾಪಶ್ಚಾಕೃತಾತ್ಮಭಿಃ||
ಯಾರ ದಿವ್ಯ ಕರ್ಮಗಳನ್ನು ಮನೀಷಿಣರು ಮಾತನಾಡಿಕೊಳ್ಳುತ್ತಿರುತ್ತಾರೋ, ಯಾವ ಧೀಮಂತನು ತ್ರ್ಯಂಬಕನೊಂದಿಗೆ ಅಮಾನುಷ ಸಂಗ್ರಾಮವನ್ನು ನಡೆಸಿ ಅವನಿಂದ ವರವನ್ನು ಪಡೆದನೋ ಅಂತಹ ದುಷ್ಪ್ರಾಪ ಕೃತಾತ್ಮ ಅರ್ಜುನನೊಂದಿಗೆ ರಣದಲ್ಲಿ ಹೋರಾಡಲು ಬೇರೆ ಯಾವ ಪಾರ್ಥಿವರೂ ಅರ್ಹರಲ್ಲ.
07003023a ತಮದ್ಯಾಹಂ ಪಾಂಡವಂ ಯುದ್ಧಶೌಂಡಂ
ಅಮೃಷ್ಯಮಾಣೋ ಭವತಾನುಶಿಷ್ಟಃ|
07003023c ಆಶೀವಿಷಂ ದೃಷ್ಟಿಹರಂ ಸುಘೋರಂ
ಇಯಾಂ ಪುರಸ್ಕೃತ್ಯ ವಧಂ ಜಯಂ ವಾ||
ಇಂದು ಆ ಪಾಂಡವ ಯುದ್ಧಶೌಂಡನನ್ನು ಸಹಿಸಲಾಗದ ನಾನು ನಿನ್ನ ಅನುಜ್ಞೆಯನ್ನು ಪಡೆದು ಸರ್ಪದ ವಿಷದಂತಿರುವ, ಘೋರ ದೃಷ್ಟಿಯಿಂದಲೇ ಸಂಹರಿಸಬಲ್ಲ ಅವನನ್ನು ಗರವಿಸಿ ವಧಿಸುತ್ತೇನೆ ಅಥವಾ ಜಯವನ್ನು ಗಳಿಸುತ್ತೇನೆ.””
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣಾಭಿಷೇಕ ಪರ್ವಣಿ ಕರ್ಣವಾಕ್ಯೇ ತೃತೀಯೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣಾಭಿಷೇಕ ಪರ್ವದಲ್ಲಿ ಕರ್ಣವಾಕ್ಯ ಎನ್ನುವ ಮೂರನೇ ಅಧ್ಯಾಯವು.