Ashvamedhika Parva: Chapter 86

ಅಶ್ವಮೇಧಿಕ ಪರ್ವ

೮೬

ಕುದುರೆಯೊಂದಿಗೆ ಅರ್ಜುನನು ಹಿಂದಿರುಗುತ್ತಿದ್ದಾನೆಂದು ತಿಳಿದ ಯುಧಿಷ್ಠಿರನ ಸೂಚನೆಯಂತೆ ಭೀಮಸೇನನು ಯಜ್ಞವಾಟಿಕೆಯನ್ನು ಸಿದ್ಧಪಡಿಸಿದುದು (೧-೨೧). ಯಜ್ಞಕ್ಕೆ ದ್ವಿಜರ ಆಗಮನ (೨೨-೨೬).

14086001 ವೈಶಂಪಾಯನ ಉವಾಚ

14086001a ಇತ್ಯುಕ್ತ್ವಾನುಯಯೌ ಪಾರ್ಥೋ ಹಯಂ ತಂ ಕಾಮಚಾರಿಣಮ್|

14086001c ನ್ಯವರ್ತತ ತತೋ ವಾಜೀ ಯೇನ ನಾಗಾಹ್ವಯಂ ಪುರಮ್||

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಪಾರ್ಥನು ಕಾಮಚಾರೀ ಕುದುರೆಯನ್ನು ಅನುಸರಿಸಿ ಹೊರಟನು. ಆಗ ಆ ಕುದುರೆಯು ಹಸ್ತಿನಾಪುರಕ್ಕೆ ಹಿಂದಿರುಗಿತು.

14086002a ತಂ ನಿವೃತ್ತಂ ತು ಶುಶ್ರಾವ ಚಾರೇಣೈವ ಯುಧಿಷ್ಠಿರಃ|

14086002c ಶ್ರುತ್ವಾರ್ಜುನಂ ಕುಶಲಿನಂ ಸ ಚ ಹೃಷ್ಟಮನಾಭವತ್||

ಚಾರರ ಮೂಲಕ ಕುದುರೆಯು ಹಿಂದಿರುಗಿದುದನ್ನೂ ಅರ್ಜುನನು ಕುಶಲಿಯಾಗಿರುವನು ಎನ್ನುವುದನ್ನೂ ತಿಳಿದ ಯುಧಿಷ್ಠಿರನು ಹರ್ಷಿತನಾದನು.

14086003a ವಿಜಯಸ್ಯ ಚ ತತ್ಕರ್ಮ ಗಾಂಧಾರವಿಷಯೇ ತದಾ|

14086003c ಶ್ರುತ್ವಾನ್ಯೇಷು ಚ ದೇಶೇಷು ಸ ಸುಪ್ರೀತೋಽಭವನ್ನೃಪಃ||

ಗಾಂಧಾರದೇಶದಲ್ಲಿ ಮತ್ತು ಹಾಗೆಯೇ ಅನ್ಯ ದೇಶಗಳಲ್ಲಿ ವಿಜಯನ ಆ ಕರ್ಮವನ್ನು ಕೇಳಿ ನೃಪನು ಸುಪ್ರೀತನಾದನು.

14086004a ಏತಸ್ಮಿನ್ನೇವ ಕಾಲೇ ತು ದ್ವಾದಶೀಂ ಮಾಘಪಾಕ್ಷಿಕೀಮ್|

14086004c ಇಷ್ಟಂ ಗೃಹೀತ್ವಾ ನಕ್ಷತ್ರಂ ಧರ್ಮರಾಜೋ ಯುಧಿಷ್ಠಿರಃ||

14086005a ಸಮಾನಾಯ್ಯ ಮಹಾತೇಜಾಃ ಸರ್ವಾನ್ಭ್ರಾತೄನ್ಮಹಾಮನಾಃ|

14086005c ಭೀಮಂ ಚ ನಕುಲಂ ಚೈವ ಸಹದೇವಂ ಚ ಕೌರವಃ||

ಆಗ ಅದು ಪುಷ್ಯ ನಕ್ಷತ್ರದಿಂದ ಕೂಡಿದ ಮಾಘ ಶುಕ್ಲ ದ್ವಾದಶಿಯಾಗಿತ್ತು. ಆಗ ಕೌರವ ಧರ್ಮರಾಜ ಯುಧಿಷ್ಠಿರನು ಮಹಾತೇಜಸ್ವಿಗಳೂ ಮಹಾಮನಸ್ವಿಗಳೂ ಆದ ಎಲ್ಲ ಸಹೋದರರನ್ನೂ – ಭೀಮ, ನಕುಲ, ಸಹದೇವರನ್ನು – ಕರೆಯಿಸಿದನು.

14086006a ಪ್ರೋವಾಚೇದಂ ವಚಃ ಕಾಲೇ ತದಾ ಧರ್ಮಭೃತಾಂ ವರಃ|

14086006c ಆಮಂತ್ರ್ಯ ವದತಾಂ ಶ್ರೇಷ್ಠೋ ಭೀಮಂ ಭೀಮಪರಾಕ್ರಮಮ್||

ಆ ಸಮಯದಲ್ಲಿ ಧರ್ಮಭೃತರಲ್ಲಿ ಶ್ರೇಷ್ಠ ಮತ್ತು ಮಾತನಾಡುವವರಲ್ಲಿ ಶ್ರೇಷ್ಠ ಯುಧಿಷ್ಠಿರನು ಭೀಮಪರಾಕ್ರಮಿ ಭೀಮನನ್ನು ಉದ್ದೇಶಿಸಿ ಈ ಮಾತನ್ನಾಡಿದನು:

14086007a ಆಯಾತಿ ಭೀಮಸೇನಾಸೌ ಸಹಾಶ್ವೇನ ತವಾನುಜಃ|

14086007c ಯಥಾ ಮೇ ಪುರುಷಾಃ ಪ್ರಾಹುರ್ಯೇ ಧನಂಜಯಸಾರಿಣಃ||

“ಭೀಮಸೇನ! ಇಗೋ ನಿನ್ನ ತಮ್ಮನು ಕುದುರೆಯೊಂದಿಗೆ ಬರುತ್ತಿದ್ದಾನೆ. ಇದನ್ನು ಧನಂಜಯನನ್ನು ಅನುಸರಿಸಿ ಹೋಗಿದ್ದ ಪುರುಷರು ಮೊದಲಾಗಿ ಬಂದು ಹೇಳಿದ್ದಾರೆ.

14086008a ಉಪಸ್ಥಿತಶ್ಚ ಕಾಲೋಽಯಮಭಿತೋ ವರ್ತತೇ ಹಯಃ|

14086008c ಮಾಘೀ ಚ ಪೌರ್ಣಮಾಸೀಯಂ ಮಾಸಃ ಶೇಷೋ ವೃಕೋದರ||

ಕುದುರೆಯೂ ಕೂಡ ಕಾಲಕ್ಕೆ ಸರಿಯಾಗಿ ಹಿಂದಿರುಗಿ ಬಂದಿದೆ. ವೃಕೋದರ! ಇದು ಮಾಘದ ಹುಣ್ಣಿಮೆ. ಒಂದು ತಿಂಗಳು ಮಾತ್ರ ಉಳಿದಿದೆ.

14086009aತ್ಪ್ರಸ್ಥಾಪ್ಯಂತು ವಿದ್ವಾಂಸೋ ಬ್ರಾಹ್ಮಣಾ ವೇದಪಾರಗಾಃ|

14086009c ವಾಜಿಮೇಧಾರ್ಥಸಿದ್ಧ್ಯರ್ಥಂ ದೇಶಂ ಪಶ್ಯಂತು ಯಜ್ಞಿಯಮ್||

ಆದುದರಿಂದ ವೇದಪಾರಗ ವಿದ್ವಾಂಸ ಬ್ರಾಹ್ಮಣರನ್ನು ಕರೆಯಿಸಬೇಕು. ಅಶ್ವಮೇಧ ಯಜ್ಞಕ್ಕೆ ಪ್ರಶಸ್ತ ಸ್ಥಳವನ್ನು ನೋಡಬೇಕು.”

14086010a ಇತ್ಯುಕ್ತಃ ಸ ತು ತಚ್ಚಕ್ರೇ ಭೀಮೋ ನೃಪತಿಶಾಸನಮ್|

14086010c ಹೃಷ್ಟಃ ಶ್ರುತ್ವಾ ನರಪತೇರಾಯಾಂತಂ ಸವ್ಯಸಾಚಿನಮ್||

ಸವ್ಯಸಾಚಿಯು ಬರುತ್ತಿದ್ದಾನೆಂದು ನರಪತಿಯಿಂದ ಕೇಳಿದ ಭೀಮನು ಹೃಷ್ಟನಾಗಿ ನೃಪತಿಶಾಸನದಂತೆ ಮಾಡಬೇಕಾದ ಕಾರ್ಯಗಳಲ್ಲಿ ತೊಡಗಿದನು.

14086011a ತತೋ ಯಯೌ ಭೀಮಸೇನಃ ಪ್ರಾಜ್ಞೈಃ ಸ್ಥಪತಿಭಿಃ ಸಹ|

14086011c ಬ್ರಾಹ್ಮಣಾನಗ್ರತಃ ಕೃತ್ವಾ ಕುಶಲಾನ್ಯಜ್ಞಕರ್ಮಸು||

ಆಗ ಭೀಮಸೇನನು ಪ್ರಾಜ್ಞ ಸ್ಥಪತಿಗಳು ಮತ್ತು ಯಜ್ಞಕರ್ಮಗಳಲ್ಲಿ ಕುಶಲರಾಗಿದ್ದ ಬ್ರಾಹ್ಮಣರನ್ನು ಮುಂದುಮಾಡಿಕೊಂಡು ಹೊರಟನು.

14086012a ತಂ ಸಶಾಲಚಯಗ್ರಾಮಂ ಸಂಪ್ರತೋಲೀವಿಟಂಕಿನಮ್|

14086012c ಮಾಪಯಾಮಾಸ ಕೌರವ್ಯೋ ಯಜ್ಞವಾಟಂ ಯಥಾವಿಧಿ||

ಕೌರವ್ಯನು ಶಾಲವೃಕ್ಷ ಸಮೂಹಗಳಿಂದ ಕೂಡಿದ್ದ ಭೂಪ್ರದೇಶವನ್ನು ಯಥಾವಿಧಿಯಾಗಿ ಯಜ್ಞವಾಟಿಕೆಗೆ ಅಳತೆಮಾಡಿಸಿದನು.

14086013a ಸದಃ ಸಪತ್ನೀಸದನಂ ಸಾಗ್ನೀಧ್ರಮಪಿ ಚೋತ್ತರಮ್|

14086013c ಕಾರಯಾಮಾಸ ವಿಧಿವನ್ಮಣಿಹೇಮವಿಭೂಷಿತಮ್||

ರಾಜಮಾರ್ಗಗಳಿಂದಲೂ ಸೌದಗಳಿಂದಲೂ ಕೂಡಿದ ಮಣಿಹೇಮವಿಭೂಷಿತವಾದ ಯಜ್ಞಶಾಲೆಯನ್ನು ಕಟ್ಟಿಸಿದನು.

14086014a ಸ್ತಂಭಾನ್ಕನಕಚಿತ್ರಾಂಶ್ಚ ತೋರಣಾನಿ ಬೃಹಂತಿ ಚ|

14086014c ಯಜ್ಞಾಯತನದೇಶೇಷು ದತ್ತ್ವಾ ಶುದ್ಧಂ ಚ ಕಾಂಚನಮ್||

ಸ್ತಂಭಗಳಲ್ಲಿ ಚಿನ್ನದ ಚಿತ್ರಗಳಿದ್ದವು. ದೊಡ್ಡ ತೋರಣಗಳಿದ್ದವು. ಯಜ್ಞಾಯತನ ಪ್ರದೇಶದಲ್ಲಿ ಶುದ್ಧ ಕಾಂಚನವನ್ನೇ ಬಳಸಲಾಗಿತ್ತು.

14086015a ಅಂತಃಪುರಾಣಿ ರಾಜ್ಞಾಂ ಚ ನಾನಾದೇಶನಿವಾಸಿನಾಮ್|

14086015c ಕಾರಯಾಮಾಸ ಧರ್ಮಾತ್ಮಾ ತತ್ರ ತತ್ರ ಯಥಾವಿಧಿ||

ಆ ಧರ್ಮಾತ್ಮನು ಅಲ್ಲಲ್ಲಿ ಯಥಾವಿಧಿಯಾಗಿ ನಾನಾದೇಶನಿವಾಸೀ ರಾಜರಿಗಾಗಿ ಅಂತಃಪುರಗಳನ್ನು ಕಟ್ಟಿಸಿದನು.

14086016a ಬ್ರಾಹ್ಮಣಾನಾಂ ಚ ವೇಶ್ಮಾನಿ ನಾನಾದೇಶಸಮೇಯುಷಾಮ್|

14086016c ಕಾರಯಾಮಾಸ ಭೀಮಃ ಸ ವಿವಿಧಾನಿ ಹ್ಯನೇಕಶಃ||

ನಾನಾ ದೇಶಗಳಿಂದ ಬಂದು ಸೇರಿದ ಬ್ರಾಹ್ಮಣರಿಗಾಗಿ ಅನೇಕ ವಿವಿಧ ಭವನಗಳನ್ನು ಭೀಮನು ಕಟ್ಟಿಸಿದನು.

14086017a ತಥಾ ಸಂಪ್ರೇಷಯಾಮಾಸ ದೂತಾನ್ನೃಪತಿಶಾಸನಾತ್|

14086017c ಭೀಮಸೇನೋ ಮಹಾರಾಜ ರಾಜ್ಞಾಮಕ್ಲಿಷ್ಟಕರ್ಮಣಾಮ್||

ಮಹಾರಾಜ! ಹಾಗೆಯೇ ನೃಪತಿಯ ಶಾಸನದಂತೆ ಭೀಮಸೇನನು ಅಕ್ಲಿಷ್ಟಕರ್ಮಿ ರಾಜರಿಗೆ ದೂತರನ್ನು ಕಳುಹಿಸಿದನು.

14086018a ತೇ ಪ್ರಿಯಾರ್ಥಂ ಕುರುಪತೇರಾಯಯುರ್ನೃಪಸತ್ತಮಾಃ|

14086018c ರತ್ನಾನ್ಯನೇಕಾನ್ಯಾದಾಯ ಸ್ತ್ರಿಯೋಽಶ್ವಾನಾಯುಧಾನಿ ಚ||

ಕುರುಪತಿಗೆ ಪ್ರಿಯವಾಗಲೆಂದು ನೃಪಸತ್ತಮರು ಅನೇಕ ರತ್ನಗಳನ್ನೂ, ಸ್ತ್ರೀಯರನ್ನೂ, ಅಶ್ವ-ಆಯುಧಗಳನ್ನು ತೆಗೆದುಕೊಂಡು ಆಗಮಿಸಿದರು.

14086019a ತೇಷಾಂ ನಿವಿಶತಾಂ ತೇಷು ಶಿಬಿರೇಷು ಸಹಸ್ರಶಃ|

14086019c ನರ್ದತಃ ಸಾಗರಸ್ಯೇವ ಶಬ್ದೋ ದಿವಮಿವಾಸ್ಪೃಶತ್||

ಅವರು ವಾಸಿಸುತ್ತಿದ್ದ ಆ ಸಹಸ್ರಾರು ಶಿಬಿರಗಳಿಂದ ಬಂದ ಸಮುದ್ರದ ಭೋರ್ಗರೆತದಂತಿದ್ದ ಶಬ್ಧವು ಆಕಾಶವನ್ನೇ ಮುಟ್ಟುತ್ತಿತ್ತು.

14086020a ತೇಷಾಮಭ್ಯಾಗತಾನಾಂ ಸ ರಾಜಾ ರಾಜೀವಲೋಚನಃ|

14086020c ವ್ಯಾದಿದೇಶಾನ್ನಪಾನಾನಿ ಶಯ್ಯಾಶ್ಚಾಪ್ಯತಿಮಾನುಷಾಃ||

ಆಗಮಿಸಿದ್ದ ಅವರಿಗೆ ರಾಜೀವಲೋಚನ ರಾಜನು ಅತಿಮಾನುಷ ಅನ್ನ-ಪಾನಾದಿಗಳ ಮತ್ತು ಶಯನಗಳ ವ್ಯವಸ್ಥೆಯನ್ನು ಮಾಡಿಸಿದ್ದನು.

14086021a ವಾಹನಾನಾಂ ಚ ವಿವಿಧಾಃ ಶಾಲಾಃ ಶಾಲೀಕ್ಷುಗೋರಸೈಃ|

14086021c ಉಪೇತಾಃ ಪುರುಷವ್ಯಾಘ್ರ ವ್ಯಾದಿದೇಶ ಸ ಧರ್ಮರಾಟ್||

ಪುರುಷವ್ಯಾಘ್ರ ಧರ್ಮರಾಜನು ವಾಹನಗಳಿಗಾಗಿ ಧಾನ್ಯ, ಕಬ್ಬು ಮತ್ತು ಹಸುವಿನ ಹಾಲಿನಿಂದ ಸಮೃದ್ಧವಾದ ವಿವಿಧ ಭವನಗಳನ್ನು ಬಿಟ್ಟುಕೊಡುವಂತೆ ಆದೇಶವಿತ್ತಿದ್ದನು.

14086022a ತಥಾ ತಸ್ಮಿನ್ಮಹಾಯಜ್ಞೇ ಧರ್ಮರಾಜಸ್ಯ ಧೀಮತಃ|

14086022c ಸಮಾಜಗ್ಮುರ್ಮುನಿಗಣಾ ಬಹವೋ ಬ್ರಹ್ಮವಾದಿನಃ||

ಧೀಮಂತ ಧರ್ಮರಾಜನ ಆ ಮಹಾಯಜ್ಞಕ್ಕೆ ಅನೇಕ ಬ್ರಹ್ಮವಾದೀ ಮುನಿಗಣಗಳು ಬಂದು ಸೇರಿದವು.

14086023a ಯೇ ಚ ದ್ವಿಜಾತಿಪ್ರವರಾಸ್ತತ್ರಾಸನ್ಪೃಥಿವೀಪತೇ|

14086023c ಸಮಾಜಗ್ಮುಃ ಸಶಿಷ್ಯಾಂಸ್ತಾನ್ ಪ್ರತಿಜಗ್ರಾಹ ಕೌರವಃ||

ಪೃಥಿವೀಪತೇ! ಶಿಷ್ಯರೊಂದಿಗೆ ಬಂದು ಸೇರಿದ್ದ ಆ ದ್ವಿಜಾತಿಪ್ರವರರನ್ನು ಕೌರವನು ಸ್ವಾಗತಿಸಿ ಸತ್ಕರಿಸಿದನು.

14086024a ಸರ್ವಾಂಶ್ಚ ತಾನನುಯಯೌ ಯಾವದಾವಸಥಾದಿತಿ|

14086024c ಸ್ವಯಮೇವ ಮಹಾತೇಜಾ ದಂಭಂ ತ್ಯಕ್ತ್ವಾ ಯುಧಿಷ್ಠಿರಃ||

ಮಹಾತೇಜಸ್ವಿ ಯುಧಿಷ್ಠಿರನು ದಂಭವನ್ನು ತ್ಯಜಿಸಿ ಅವರೆಲ್ಲರನ್ನೂ ಅವರವರ ವಾಸಸ್ಥಳಗಳಿಗೆ ತಲುಪುವವರೆಗೂ ಹಿಂಬಾಲಿಸಿ ಹೋಗುತ್ತಿದ್ದನು.

14086025a ತತಃ ಕೃತ್ವಾ ಸ್ಥಪತಯಃ ಶಿಲ್ಪಿನೋಽನ್ಯೇ ಚ ಯೇ ತದಾ|

14086025c ಕೃತ್ಸ್ನಂ ಯಜ್ಞವಿಧಿಂ ರಾಜನ್ಧರ್ಮರಾಜ್ಞೇ ನ್ಯವೇದಯನ್||

ರಾಜನ್! ಯಜ್ಞವಿಧಿಯೆಲ್ಲವನ್ನೂ ನಿರ್ಮಿಸಿದ ಸ್ಥಪತಿಗಳು ಮತ್ತು ಅನ್ಯ ಶಿಲ್ಪಿಗಳು ಧರ್ಮರಾಜನಿಗೆ ಬಂದು ನಿವೇದಿಸಿದರು.

14086026a ತಚ್ಚ್ರುತ್ವಾ ಧರ್ಮರಾಜಃ ಸ ಕೃತಂ ಸರ್ವಮನಿಂದಿತಮ್|

14086026c ಹೃಷ್ಟರೂಪೋಽಭವದ್ರಾಜಾ ಸಹ ಭ್ರಾತೃಭಿರಚ್ಯುತಃ||

ಅದನ್ನು ಕೇಳಿ ರಾಜಾ ಅಚ್ಯುತ ಧರ್ಮರಾಜನು ಸಹೋದರರೊಂದಿಗೆ ಎಲ್ಲವೂ ಕುಂದುಗಳಿಲ್ಲದೇ ನೆರವೇರಿತೆಂದು ಹೃಷ್ಟರೂಪನಾದನು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅಶ್ವಮೇಧಾರಂಭೇ ಷಡಶೀತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅಶ್ವಮೇಧಾರಂಭ ಎನ್ನುವ ಎಂಭತ್ತಾರನೇ ಅಧ್ಯಾಯವು.

Comments are closed.