ಅಶ್ವಮೇಧಿಕ ಪರ್ವ
೮
ವ್ಯಾಸನು ಸಂವರ್ತ-ಮರುತ್ತರ ಕಥೆಯನ್ನು ಮುಂದುವರೆಸಿದುದು (೧-೩೫).
14008001 ಸಂವರ್ತ ಉವಾಚ
14008001a ಗಿರೇರ್ಹಿಮವತಃ ಪೃಷ್ಠೇ ಮುಂಜವಾನ್ನಾಮ ಪರ್ವತಃ|
14008001c ತಪ್ಯತೇ ಯತ್ರ ಭಗವಾಂಸ್ತಪೋ ನಿತ್ಯಮುಮಾಪತಿಃ||
ಸಂವರ್ತನು ಹೇಳಿದನು: “ಹಿಮಾಲಯ ಪರ್ವತದ ಹಿಂದೆ ಮುಂಜವಂತ ಎಂಬ ಹೆಸರಿನ ಪರ್ವತವಿದೆ. ಅಲ್ಲಿ ಭಗವಾನ್ ಉಮಾಪತಿಯು ನಿತ್ಯವೂ ತಪೋನಿರತನಾಗಿರುತ್ತಾನೆ.
14008002a ವನಸ್ಪತೀನಾಂ ಮೂಲೇಷು ಟಂಕೇಷು ಶಿಖರೇಷು ಚ|
14008002c ಗುಹಾಸು ಶೈಲರಾಜಸ್ಯ ಯಥಾಕಾಮಂ ಯಥಾಸುಖಮ್||
14008003a ಉಮಾಸಹಾಯೋ ಭಗವಾನ್ಯತ್ರ ನಿತ್ಯಂ ಮಹೇಶ್ವರಃ|
14008003c ಆಸ್ತೇ ಶೂಲೀ ಮಹಾತೇಜಾ ನಾನಾಭೂತಗಣಾವೃತಃ||
ಅಲ್ಲಿ ವನಸ್ಪತಿಗಳ ಬುಡದಲ್ಲಿಯೂ, ಶಿಖರಗಳ ಹಳ್ಳ-ತಿಟ್ಟುಗಳಲ್ಲಿಯೂ, ಪರ್ವತದ ಗುಹೆಗಳಲ್ಲಿಯೂ, ನಾನಾಭೂತಗಣಗಳಿಂದ ಆವೃತನಾಗಿ ಭಗವಾನ್ ಶೂಲೀ ಮಹಾತೇಜಸ್ವಿ ಮಹೇಶ್ವರನು ಉಮೆಯೊಂದಿಗೆ ನಿತ್ಯವೂ ಯಥೇಚ್ಛವಾಗಿ ಯಥಾಸುಖವಾಗಿ ಉಪಸ್ಥಿತನಾಗಿರುವನು.
14008004a ತತ್ರ ರುದ್ರಾಶ್ಚ ಸಾಧ್ಯಾಶ್ಚ ವಿಶ್ವೇಽಥ ವಸವಸ್ತಥಾ|
14008004c ಯಮಶ್ಚ ವರುಣಶ್ಚೈವ ಕುಬೇರಶ್ಚ ಸಹಾನುಗಃ||
14008005a ಭೂತಾನಿ ಚ ಪಿಶಾಚಾಶ್ಚ ನಾಸತ್ಯಾವಶ್ವಿನಾವಪಿ|
14008005c ಗಂಧರ್ವಾಪ್ಸರಸಶ್ಚೈವ ಯಕ್ಷಾ ದೇವರ್ಷಯಸ್ತಥಾ||
14008006a ಆದಿತ್ಯಾ ಮರುತಶ್ಚೈವ ಯಾತುಧಾನಾಶ್ಚ ಸರ್ವಶಃ|
14008006c ಉಪಾಸಂತೇ ಮಹಾತ್ಮಾನಂ ಬಹುರೂಪಮುಮಾಪತಿಮ್||
ಅಲ್ಲಿ ರುದ್ರರು, ಸಾಧ್ಯರು, ವಿಶ್ವೇದೇವರು, ವಸುಗಳೂ, ಅನುಯಾಯಿಗಳೊಂದಿಗೆ ಯಮ-ವರುಣ-ಕುಬೇರರೂ. ಭೂತ, ಪಿಶಾಚರೂ, ನಾಸತ್ಯ ಅಶ್ವಿನಿಯರೂ, ಗಂಧರ್ವ-ಅಪ್ಸರೆಯರೂ, ಯಕ್ಷರೂ, ದೇವರ್ಷಿಗಳೂ, ಆದಿತ್ಯ-ಮರುತರೂ, ಯಾತುಧಾನರೂ ಎಲ್ಲಕಡೆಗಳಿಂದ ಬಹುರೂಪೀ ಮಹಾತ್ಮ ಉಮಾಪತಿಯನ್ನು ಉಪಾಸಿಸುತ್ತಿರುತ್ತಾರೆ.
14008007a ರಮತೇ ಭಗವಾಂಸ್ತತ್ರ ಕುಬೇರಾನುಚರೈಃ ಸಹ|
14008007c ವಿಕೃತೈರ್ವಿಕೃತಾಕಾರೈಃ ಕ್ರೀಡದ್ಭಿಃ ಪೃಥಿವೀಪತೇ|
ಪೃಥಿವೀಪತೇ! ಅಲ್ಲಿ ಭಗವಾನನು ಕುಬೇರನ ವಿಕೃತರಾಗಿರುವ ವಿಕೃತಾಕಾರಗಳನ್ನು ಹೊಂದಿರುವ ಅನುಚರರೊಂದಿಗೆ ಕ್ರೀಡಿಸುತ್ತಾನೆ ಕೂಡ.
14008007e ಶ್ರಿಯಾ ಜ್ವಲನ್ದೃಶ್ಯತೇ ವೈ ಬಾಲಾದಿತ್ಯಸಮದ್ಯುತಿಃ||
14008008a ನ ರೂಪಂ ದೃಶ್ಯತೇ ತಸ್ಯ ಸಂಸ್ಥಾನಂ ವಾ ಕಥಂ ಚನ|
14008008c ನಿರ್ದೇಷ್ಟುಂ ಪ್ರಾಣಿಭಿಃ ಕೈಶ್ಚಿತ್ಪ್ರಾಕೃತೈರ್ಮಾಂಸಲೋಚನೈಃ||
ಅವನ ಶ್ರೀವಿಗ್ರಹವು ಉದಯಿಸುವ ಸೂರ್ಯನ ಕಾಂತಿಯಂತೆ ಬೆಳಗುತ್ತಿರುವುದು ಕಾಣುತ್ತದೆ. ಆದರೆ ಅವನ ರೂಪವಾಗಲೀ, ಇರುವಿಕೆಯಾಗಲೀ ಮಾಂಸದ ಕಣ್ಣುಗಳಿರುವ ಸಾಮಾನ್ಯ ಪ್ರಾಣಿಗಳಿಗೆ ಯಾರಿಗೂ ನೋಡಲು ಕಾಣಿಸುವುದಿಲ್ಲ.
14008009a ನೋಷ್ಣಂ ನ ಶಿಶಿರಂ ತತ್ರ ನ ವಾಯುರ್ನ ಚ ಭಾಸ್ಕರಃ|
14008009c ನ ಜರಾ ಕ್ಷುತ್ಪಿಪಾಸೇ ವಾ ನ ಮೃತ್ಯುರ್ನ ಭಯಂ ನೃಪ||
ನೃಪ! ಅಲ್ಲಿ ಬೇಸಿಗೆಯಾಗಲೀ ಛಳಿಯಾಗಲೀ ಇಲ್ಲ. ಭಿರುಗಾಳಿಯಾಗಲೀ ಸೂರ್ಯನ ತಾಪವಾಗಲೀ ಇಲ್ಲ. ಅಲ್ಲಿ ಮುಪ್ಪಾಗಲೀ, ಹಸಿವು-ಬಾಯಾರಿಕೆಗಳಾಗಲೀ, ಮೃತ್ಯುಭಯವಾಗಲೀ ಇರುವುದಿಲ್ಲ.
14008010a ತಸ್ಯ ಶೈಲಸ್ಯ ಪಾರ್ಶ್ವೇಷು ಸರ್ವೇಷು ಜಯತಾಂ ವರ|
14008010c ಧಾತವೋ ಜಾತರೂಪಸ್ಯ ರಶ್ಮಯಃ ಸವಿತುರ್ಯಥಾ||
ವಿಜಯಿಗಳಲ್ಲಿ ಶ್ರೇಷ್ಠನೇ! ಆ ಪರ್ವತದ ನಾಲ್ಕೂ ಕಡೆಗಳಲ್ಲಿ ಸೂರ್ಯನ ಕಿರಣಗಳಂತೆ ಹೊಳೆಯುವ ಚಿನ್ನದ ಗಣಿಗಳಿವೆ.
14008011a ರಕ್ಷ್ಯಂತೇ ತೇ ಕುಬೇರಸ್ಯ ಸಹಾಯೈರುದ್ಯತಾಯುಧೈಃ|
14008011c ಚಿಕೀರ್ಷದ್ಭಿಃ ಪ್ರಿಯಂ ರಾಜನ್ಕುಬೇರಸ್ಯ ಮಹಾತ್ಮನಃ||
ರಾಜನ್! ಮಹಾತ್ಮ ಕುಬೇರನಿಗೆ ಪ್ರಿಯವಾದುದನ್ನು ಮಾಡಲು ಬಯಸಿರುವ ಆಯುಧಗಳನ್ನು ಎತ್ತಿ ಹಿಡಿದಿರುವ ಕುಬೇರನ ಸಹಾಯಕರು ಅವುಗಳನ್ನು ರಕ್ಷಿಸುತ್ತಿದ್ದಾರೆ.
14008012a ತಸ್ಮೈ ಭಗವತೇ ಕೃತ್ವಾ ನಮಃ ಶರ್ವಾಯ ವೇಧಸೇ|
14008012c ರುದ್ರಾಯ ಶಿತಿಕಂಠಾಯ ಸುರೂಪಾಯ ಸುವರ್ಚಸೇ||
14008013a ಕಪರ್ದಿನೇ ಕರಾಲಾಯ ಹರ್ಯಕ್ಷ್ಣೇ ವರದಾಯ ಚ|
14008013c ತ್ರ್ಯಕ್ಷ್ಣೇ ಪೂಷ್ಣೋ ದಂತಭಿದೇ ವಾಮನಾಯ ಶಿವಾಯ ಚ||
14008014a ಯಾಮ್ಯಾಯಾವ್ಯಕ್ತಕೇಶಾಯ ಸದ್ವೃತ್ತೇ ಶಂಕರಾಯ ಚ|
14008014c ಕ್ಷೇಮ್ಯಾಯ ಹರಿನೇತ್ರಾಯ ಸ್ಥಾಣವೇ ಪುರುಷಾಯ ಚ||
14008015a ಹರಿಕೇಶಾಯ ಮುಂಡಾಯ ಕೃಶಾಯೋತ್ತಾರಣಾಯ ಚ|
14008015c ಭಾಸ್ಕರಾಯ ಸುತೀರ್ಥಾಯ ದೇವದೇವಾಯ ರಂಹಸೇ||
14008016a ಉಷ್ಣೀಷಿಣೇ ಸುವಕ್ತ್ರಾಯ ಸಹಸ್ರಾಕ್ಷಾಯ ಮೀಢುಷೇ|
14008016c ಗಿರಿಶಾಯ ಪ್ರಶಾಂತಾಯ ಯತಯೇ ಚೀರವಾಸಸೇ||
14008017a ಬಿಲ್ವದಂಡಾಯ ಸಿದ್ಧಾಯ ಸರ್ವದಂಡಧರಾಯ ಚ|
14008017c ಮೃಗವ್ಯಾಧಾಯ ಮಹತೇ ಧನ್ವಿನೇಽಥ ಭವಾಯ ಚ||
14008018a ವರಾಯ ಸೌಮ್ಯವಕ್ತ್ರಾಯ ಪಶುಹಸ್ತಾಯ ವರ್ಷಿಣೇ|
14008018c ಹಿರಣ್ಯಬಾಹವೇ ರಾಜನ್ನುಗ್ರಾಯ ಪತಯೇ ದಿಶಾಮ್||
14008019a ಪಶೂನಾಂ ಪತಯೇ ಚೈವ ಭೂತಾನಾಂ ಪತಯೇ ತಥಾ|
14008019c ವೃಷಾಯ ಮಾತೃಭಕ್ತಾಯ ಸೇನಾನ್ಯೇ ಮಧ್ಯಮಾಯ ಚ||
14008020a ಸ್ರುವಹಸ್ತಾಯ ಪತಯೇ ಧನ್ವಿನೇ ಭಾರ್ಗವಾಯ ಚ|
14008020c ಅಜಾಯ ಕೃಷ್ಣನೇತ್ರಾಯ ವಿರೂಪಾಕ್ಷಾಯ ಚೈವ ಹ||
14008021a ತೀಕ್ಷ್ಣದಂಷ್ಟ್ರಾಯ ತೀಕ್ಷ್ಣಾಯ ವೈಶ್ವಾನರಮುಖಾಯ ಚ|
14008021c ಮಹಾದ್ಯುತಯೇಽನಂಗಾಯ ಸರ್ವಾಂಗಾಯ ಪ್ರಜಾವತೇ||
14008022a ತಥಾ ಶುಕ್ರಾಧಿಪತಯೇ ಪೃಥವೇ ಕೃತ್ತಿವಾಸಸೇ|
14008022c ಕಪಾಲಮಾಲಿನೇ ನಿತ್ಯಂ ಸುವರ್ಣಮುಕುಟಾಯ ಚ||
14008023a ಮಹಾದೇವಾಯ ಕೃಷ್ಣಾಯ ತ್ರ್ಯಂಬಕಾಯಾನಘಾಯ ಚ|
14008023c ಕ್ರೋಧನಾಯ ನೃಶಂಸಾಯ ಮೃದವೇ ಬಾಹುಶಾಲಿನೇ||
14008024a ದಂಡಿನೇ ತಪ್ತತಪಸೇ ತಥೈವ ಕ್ರೂರಕರ್ಮಣೇ|
14008024c ಸಹಸ್ರಶಿರಸೇ ಚೈವ ಸಹಸ್ರಚರಣಾಯ ಚ|
14008024e ನಮಃ ಸ್ವಧಾಸ್ವರೂಪಾಯ ಬಹುರೂಪಾಯ ದಂಷ್ಟ್ರಿಣೇ||
ಅಲ್ಲಿ ಜಗತ್ತಿನ ಸೃಷ್ಟಿಗೆ ಕಾರಣನಾದ ಭಗವಂತ ಶರ್ವ, ರುದ್ರ, ಶಿತಿಕಂಠ, ಸುರೂಪ, ಸುವರ್ಚಸ, ಕಪರ್ದಿನಿ, ಕರಾಲ, ಹರ್ಯಕ್ಷ್ಣ, ವರದ, ತ್ರ್ಯಕ್ಷ್ಣ, ಪೂಷ್ಣನ ದಂತವನ್ನು ಮುರಿದ, ವಾಮನ, ಶಿವ, ಯಾಮ್ಯ, ಅವ್ಯಕ್ತಕೇಶ, ಸದ್ವೃತ್ತ, ಶಂಕರ, ಕ್ಷೇಮ್ಯ, ಹರಿನೇತ್ರ, ಸ್ಥಾಣು, ಪುರುಷ, ಹರಿಕೇಶ, ಮುಂಡ, ಸಂನ್ಯಾಸಿಸ್ವರೂಪ, ಭಾಸ್ಕರ, ಸುತೀರ್ಥ, ದೇವದೇವಾಯ, ವೇಗವಂತ, ಕಿರೀಟವನ್ನು ಧರಿಸಿದ, ಸುವಕ್ತ್ರ, ಸಹಸ್ರಾಕ್ಷ, ಕಾಮಪೂರಕ, ಗಿರಿಶ, ಪ್ರಶಾಂತ, ಯತಿ, ನಾರುಮಡಿಯನ್ನುಟ್ಟ, ಬಿಲ್ವದಂಡ, ಸಿದ್ಧ, ಸರ್ವದಂಡಧರ, ಮೃಗವ್ಯಾಧ, ಮಹಾಂತ, ಧನ್ವಿನಿ, ಸಂಸಾರಸ್ವರೂಪ, ಶ್ರೇಷ್ಠ, ಸೌಮ್ಯವಕ್ತ್ರ, ಪಶುಹಸ್ತ, ಮಂತ್ರಸಿದ್ಧಿಯನ್ನು ಹೊಂದಿದ, ಹಿರಣ್ಯಬಾಹು, ಉಗ್ರ, ದಿಕ್ಕುಗಳ ಒಡೆಯ, ಪಶುಗಳ ಒಡೆಯ, ಭೂತಗಳ ಒಡೆಯ, ಧರ್ಮ, ಮಾತೃಭಕ್ತ, ಸೇನಾನಿ, ಮಧ್ಯಮ, ಸ್ರುವಹಸ್ತ, ಎಲ್ಲರಿಗೂ ಒಡೆಯನಾದ, ಧನ್ವಿ, ಭಾರ್ಗವ, ಹುಟ್ಟಿಲ್ಲದ, ಕೃಷ್ಣನೇತ್ರ, ವಿರೂಪಾಕ್ಷ, ತೀಕ್ಷ್ಣದಂಷ್ಟ್ರ, ತೀಕ್ಷ್ಣ, ವೈಶ್ವಾನರಮುಖ, ಮಹಾದ್ಯುತಿ, ಅನಂಗ, ಸರ್ವಾಂಗ, ಪಶುಪತಿ, ಶುಕ್ರಾಧಿಪತಿ, ಬೃಹಂತ, ಕೃತ್ತಿವಾಸಸ, ಕಪಾಲಮಾಲಿನಿ, ನಿತ್ಯ, ಸುವರ್ಣಮುಕುಟ, ಮಹಾದೇವ, ಕೃಷ್ಣ, ತ್ರ್ಯಂಬಕ, ಅನಘ, ಕ್ರೋಧನ, ನೃಶಂಸ, ಮೃದುವಾದವ, ಬಾಹುಶಾಲಿನಿ, ದಂಡಿನಿ, ತಪ್ತತಪಸ್ವಿ, ಕ್ರೂರಕರ್ಮಿ, ಸಹಸ್ರಶಿರಸ, ಸಹಸ್ರಚರಣ, ಸ್ವಧಾಸ್ವರೂಪ, ಬಹುರೂಪ ಮತ್ತು ದಂಷ್ಟ್ರಿಗೆ ನಮಸ್ಕರಿಸು.
14008025a ಪಿನಾಕಿನಂ ಮಹಾದೇವಂ ಮಹಾಯೋಗಿನಮವ್ಯಯಮ್|
14008025c ತ್ರಿಶೂಲಪಾಣಿಂ ವರದಂ ತ್ರ್ಯಂಬಕಂ ಭುವನೇಶ್ವರಮ್||
14008026a ತ್ರಿಪುರಘ್ನಂ ತ್ರಿನಯನಂ ತ್ರಿಲೋಕೇಶಂ ಮಹೌಜಸಮ್|
14008026c ಪ್ರಭವಂ ಸರ್ವಭೂತಾನಾಂ ಧಾರಣಂ ಧರಣೀಧರಮ್||
14008027a ಈಶಾನಂ ಶಂಕರಂ ಸರ್ವಂ ಶಿವಂ ವಿಶ್ವೇಶ್ವರಂ ಭವಮ್|
14008027c ಉಮಾಪತಿಂ ಪಶುಪತಿಂ ವಿಶ್ವರೂಪಂ ಮಹೇಶ್ವರಮ್||
14008028a ವಿರೂಪಾಕ್ಷಂ ದಶಭುಜಂ ತಿಷ್ಯಗೋವೃಷಭಧ್ವಜಮ್|
14008028c ಉಗ್ರಂ ಸ್ಥಾಣುಂ ಶಿವಂ ಘೋರಂ ಶರ್ವಂ ಗೌರೀಶಮೀಶ್ವರಮ್||
14008029a ಶಿತಿಕಂಠಮಜಂ ಶುಕ್ರಂ ಪೃಥುಂ ಪೃಥುಹರಂ ಹರಮ್|
14008029c ವಿಶ್ವರೂಪಂ ವಿರೂಪಾಕ್ಷಂ ಬಹುರೂಪಮುಮಾಪತಿಮ್||
14008030a ಪ್ರಣಮ್ಯ ಶಿರಸಾ ದೇವಮನಂಗಾಂಗಹರಂ ಹರಮ್|
14008030c ಶರಣ್ಯಂ ಶರಣಂ ಯಾಹಿ ಮಹಾದೇವಂ ಚತುರ್ಮುಖಮ್||
ಪಿನಾಕಿನಿ, ಮಹಾದೇವ, ಮಹಾಯೋಗಿ, ಅವ್ಯಯ, ತಿಶೂಲಪಾಣಿ, ವರದ, ತ್ರ್ಯಂಬಕ, ಭುವನೇಶ್ವರ, ತ್ರಿಪುರಸಂಹಾರಕ, ತ್ರಿನಯನ, ತ್ರಿಲೋಕೇಶ, ಮಹೌಜಸ, ಪ್ರಭವ, ಸರ್ವಭೂತಗಳ ಧಾರಣ, ಧರಣೀಧರ, ಈಶಾನ, ಶಂಕರ, ಸರ್ವ, ಶಿವ, ವಿಶ್ವೇಶ್ವರ, ಭವ, ಉಮಾಪತಿ, ಪಶುಪತಿ, ವಿಶ್ವರೂಪ, ಮಹೇಶ್ವರ, ವಿರೂಪಾಕ್ಷ, ದಶಭುಜ, ತಿಷ್ಯಗ, ವೃಷಭಧ್ವಜ, ಉಗ್ರ, ಸ್ಥಾಣು, ಶಿವ, ಘೋರ, ಶರ್ವ, ಗೌರೀಶ, ಈಶ್ವರ, ಶಿತಿಕಂಠ, ಅಜ, ಶುಕ್ರ, ಪೃಥು, ಪೃಥುಹರ, ಹರ, ವಿಶ್ವರೂಪ, ವಿರೂಪಾಕ್ಷ, ಬಹುರೂಪ, ಉಮಾಪತಿ, ದೇವ, ಅನಂಗಾಂಗಹರ, ಹರನನ್ನು ಶಿರಸಾನಮಸ್ಕರಿಸಿ ಚತುರ್ಮುಖ ಮಹಾದೇವ ಶರಣ್ಯನನ್ನು ಶರಣುಹೋಗು.
14008031a ಏವಂ ಕೃತ್ವಾ ನಮಸ್ತಸ್ಮೈ ಮಹಾದೇವಾಯ ರಂಹಸೇ|
14008031c ಮಹಾತ್ಮನೇ ಕ್ಷಿತಿಪತೇ ತತ್ಸುವರ್ಣಮವಾಪ್ಸ್ಯಸಿ|
14008031e ಸುವರ್ಣಮಾಹರಿಷ್ಯಂತಸ್ತತ್ರ ಗಚ್ಚಂತು ತೇ ನರಾಃ||
ಕ್ಷಿತಿಪತೇ! ವೇಗಶಾಲೀ ಮಹಾತ್ಮ ಮಹಾದೇವನಿಗೆ ಹೀಗೆ ನಮಸ್ಕರಿಸಿದಾಗ ನೀನು ಆ ಸುವರ್ಣವನ್ನು ಪಡೆಯುವೆ. ಸುವರ್ಣವನ್ನು ತರಲು ನಿನ್ನ ಜನರು ಅಲ್ಲಿಗೆ ಹೋಗಲಿ!””
14008032 ವ್ಯಾಸ ಉವಾಚ
14008032a ಇತ್ಯುಕ್ತಃ ಸ ವಚಸ್ತಸ್ಯ ಚಕ್ರೇ ಕಾರಂಧಮಾತ್ಮಜಃ|
14008032c ತತೋಽತಿಮಾನುಷಂ ಸರ್ವಂ ಚಕ್ರೇ ಯಜ್ಞಸ್ಯ ಸಂವಿಧಿಮ್|
14008032e ಸೌವರ್ಣಾನಿ ಚ ಭಾಂಡಾನಿ ಸಂಚಕ್ರುಸ್ತತ್ರ ಶಿಲ್ಪಿನಃ||
ಇದನ್ನು ಕೇಳಿ ಕಾರಂಧಮನ ಮಗನು ಅವನ ಮಾತಿನಂತೆಯೇ ಮಾಡಿದನು. ಆಗ ಯಜ್ಞಕ್ಕೆ ಬೇಕಾಗುವ ಅತಿಮಾನುಷ ಸರ್ವ ಸಂಗ್ರಹಗಳನ್ನೂ ಮಾಡಿದನು. ಶಿಲ್ಪಿಗಳು ಚಿನ್ನದ ಪಾತ್ರೆಗಳನ್ನು ಕೂಡ ತಯಾರಿಸಿದರು.
14008033a ಬೃಹಸ್ಪತಿಸ್ತು ತಾಂ ಶ್ರುತ್ವಾ ಮರುತ್ತಸ್ಯ ಮಹೀಪತೇಃ|
14008033c ಸಮೃದ್ಧಿಮತಿ ದೇವೇಭ್ಯಃ ಸಂತಾಪಮಕರೋದ್ಭೃಶಮ್||
ಬೃಹಸ್ಪತಿಯಾದರೋ ಮಹೀಪತಿ ಮರುತ್ತನ ಕುರಿತು ಕೇಳಿ ದೇವತೆಗಳ ಯಜ್ಞಕ್ಕಿಂತಲೂ ಅವನ ಯಜ್ಞವು ಹೆಚ್ಚು ಸಮೃದ್ಧಿಯುತವಾಗುವುದಲ್ಲ ಎಂದು ಅತಿಯಾಗಿ ಸಂತಾಪಗೊಂಡನು.
14008034a ಸ ತಪ್ಯಮಾನೋ ವೈವರ್ಣ್ಯಂ ಕೃಶತ್ವಂ ಚಾಗಮತ್ಪರಮ್|
14008034c ಭವಿಷ್ಯತಿ ಹಿ ಮೇ ಶತ್ರುಃ ಸಂವರ್ತೋ ವಸುಮಾನಿತಿ||
ನನ್ನ ಶತ್ರು ಸಂವರ್ತನು ಐಶ್ವರ್ಯವಂತನಾಗುತ್ತಾನಲ್ಲ ಎಂದು ಅಸೂಯೆಯಿಂದ ಸುಡುತ್ತಾ ಅವನು ವಿವರ್ಣನಾಗಿ ಅತ್ಯಂತ ಕೃಶನಾದನು.
14008035a ತಂ ಶ್ರುತ್ವಾ ಭೃಶಸಂತಪ್ತಂ ದೇವರಾಜೋ ಬೃಹಸ್ಪತಿಮ್|
14008035c ಅಭಿಗಮ್ಯಾಮರವೃತಃ ಪ್ರೋವಾಚೇದಂ ವಚಸ್ತದಾ||
ಬೃಹಸ್ಪತಿಯು ಅತ್ಯಂತ ಸಂತಪ್ತನಾಗಿದ್ದಾನೆಂದು ಕೇಳಿದ ದೇವರಾಜನು ಅಮರರಿಂದ ಸುತ್ತುವರೆಯಲ್ಪಟ್ಟು ಅವನ ಬಳಿಬಂದು ಈ ಮಾತನ್ನಾಡಿದನು.
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಸಂವರ್ತಮರುತ್ತೀಯೇ ಅಷ್ಟಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಸಂವರ್ತಮರುತ್ತೀಯ ಎನ್ನುವ ಎಂಟನೇ ಅಧ್ಯಾಯವು.