ಅಶ್ವಮೇಧಿಕ ಪರ್ವ
೩೩
ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಮುಂದುವರೆಸಿ ಹೇಳಿದುದು (೧-೮).
14033001 ಬ್ರಾಹ್ಮಣ ಉವಾಚ
14033001a ನಾಹಂ ತಥಾ ಭೀರು ಚರಾಮಿ ಲೋಕೇ
ತಥಾ ತ್ವಂ ಮಾಂ ತರ್ಕಯಸೇ ಸ್ವಬುದ್ಧ್ಯಾ|
14033001c ವಿಪ್ರೋಽಸ್ಮಿ ಮುಕ್ತೋಽಸ್ಮಿ ವನೇಚರೋಽಸ್ಮಿ
ಗೃಹಸ್ಥಧರ್ಮಾ ಬ್ರಹ್ಮಚಾರೀ ತಥಾಸ್ಮಿ||
ಬ್ರಾಹ್ಮಣನು ಹೇಳಿದನು: “ಭೀರು! ನಾನು ಹೇಗಿರುವೆನೆಂದು ನೀನು ನಿನ್ನ ಬುದ್ಧಿಯಿಂದ ತರ್ಕಿಸುತ್ತಿರುವೆ ತಾನೇ? ಆದರೆ ನಾನು ಹಾಗೆ ಲೋಕದಲ್ಲಿ ವ್ಯವಹರಿಸುತ್ತಿಲ್ಲ. ವಿಪ್ರನಾಗಿದ್ದೇನೆ. ಮುಕ್ತನಾಗಿದ್ದೇನೆ. ವನಚರನಾಗಿದ್ದೇನೆ. ಗೃಹಸ್ಥಧರ್ಮಿಯಾಗಿದ್ದರೂ ಬ್ರಹ್ಮಚಾರಿಯಾಗಿದ್ದೇನೆ.
14033002a ನಾಹಮಸ್ಮಿ ಯಥಾ ಮಾಂ ತ್ವಂ ಪಶ್ಯಸೇ ಚಕ್ಷುಷಾ ಶುಭೇ|
14033002c ಮಯಾ ವ್ಯಾಪ್ತಮಿದಂ ಸರ್ವಂ ಯತ್ಕಿಂ ಚಿಜ್ಜಗತೀಗತಮ್||
ಶುಭೇ! ನಿನ್ನ ಕಣ್ಣುಗಳಿಂದ ನೀನು ನನ್ನನ್ನು ಕಾಣುವಂತೆ ನಾನಿಲ್ಲ. ಜಗತ್ತಿನಲ್ಲಿರುವ ಮತ್ತು ಆಗಿ ಹೋಗಿರುವ ಎಲ್ಲವನ್ನೂ ನಾನು ವ್ಯಾಪಿಸಿರುವೆನು.
14033003a ಯೇ ಕೇ ಚಿಜ್ಜಂತವೋ ಲೋಕೇ ಜಂಗಮಾಃ ಸ್ಥಾವರಾಶ್ಚ ಹ|
14033003c ತೇಷಾಂ ಮಾಮಂತಕಂ ವಿದ್ಧಿ ದಾರೂಣಾಮಿವ ಪಾವಕಮ್||
ಕಟ್ಟಿಗೆಗಳಿಗೆ ಅಗ್ನಿಯು ಹೇಗೋ ಹಾಗೆ ಲೋಕದಲ್ಲಿ ಏನೆಲ್ಲ ಜಂಗಮ-ಸ್ಥಾವರ ಜಂತುಗಳಿವೆಯೋ ಅವೆಲ್ಲವುಗಳ ಅಂತಕನೆಂದು ನನ್ನನ್ನು ತಿಳಿ.
14033004a ರಾಜ್ಯಂ ಪೃಥಿವ್ಯಾಂ ಸರ್ವಸ್ಯಾಮಥ ವಾಪಿ ತ್ರಿವಿಷ್ಟಪೇ|
14033004c ತಥಾ ಬುದ್ಧಿರಿಯಂ ವೇತ್ತಿ ಬುದ್ಧಿರೇವ ಧನಂ ಮಮ||
ಮೂರು ಲೋಕಗಳಲ್ಲಿಯೂ ಪೃಥ್ವಿಯಲ್ಲಿಯೂ ಇರುವ ಸರ್ವ ರಾಜ್ಯವನ್ನೂ ನನ್ನ ಈ ಬುದ್ಧಿಯು ತಿಳಿದುಕೊಂಡಿದೆ. ಹೀಗೆ ಈ ಬುದ್ಧಿಯೇ ನನ್ನ ಧನವು.
14033005a ಏಕಃ ಪಂಥಾ ಬ್ರಾಹ್ಮಣಾನಾಂ ಯೇನ ಗಚ್ಚಂತಿ ತದ್ವಿದಃ|
14033005c ಗೃಹೇಷು ವನವಾಸೇಷು ಗುರುವಾಸೇಷು ಭಿಕ್ಷುಷು|
14033005e ಲಿಂಗೈರ್ಬಹುಭಿರವ್ಯಗ್ರೈರೇಕಾ ಬುದ್ಧಿರುಪಾಸ್ಯತೇ||
ಬ್ರಾಹ್ಮಣರಿಗೆ ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ ಮತ್ತು ಸಂನ್ಯಾಸ ಈ ಆಶ್ರಮಗಳಲ್ಲಿ ಯಾವುದೊಂದನ್ನು ಅನುಸರಿಸಿದರೂ ಪರಮ ಪದವನ್ನು ಪಡೆಯುತ್ತಾರೆ ಎಂದು ತಿಳಿದಿರುತ್ತಾರೆ. ಅನೇಕ ಲಕ್ಷಣಗಳನ್ನು ಹೊಂದಿದ್ದರೂ ಈ ಆಶ್ರಮಗಳು ಅವ್ಯಗ್ರ ಬುದ್ಧಿಯೊಂದನ್ನೇ ಉಪಾಸಿಸುತ್ತವೆ.
14033006a ನಾನಾಲಿಂಗಾಶ್ರಮಸ್ಥಾನಾಂ ಯೇಷಾಂ ಬುದ್ಧಿಃ ಶಮಾತ್ಮಿಕಾ|
14033006c ತೇ ಭಾವಮೇಕಮಾಯಾಂತಿ ಸರಿತಃ ಸಾಗರಂ ಯಥಾ||
ನಾನಾ ಲಕ್ಷಣಗಳನ್ನು ಹೊಂದಿರುವ ಯಾವ ಆಶ್ರಮದಲ್ಲಿದ್ದರೂ ಅವರ ಶಮಾತ್ಮಿಕ ಬುದ್ಧಿಯು, ನದಿಗಳು ಸಾಗರವನ್ನು ಹೇಗೋ ಹಾಗೆ, ಒಂದೇ ಭಾವವನ್ನು ಹೊಂದುತ್ತದೆ.
14033007a ಬುದ್ಧ್ಯಾಯಂ ಗಮ್ಯತೇ ಮಾರ್ಗಃ ಶರೀರೇಣ ನ ಗಮ್ಯತೇ|
14033007c ಆದ್ಯಂತವಂತಿ ಕರ್ಮಾಣಿ ಶರೀರಂ ಕರ್ಮಬಂಧನಮ್||
ಮುಕ್ತಿಮಾರ್ಗವನ್ನು ಬುದ್ಧಿಯಿಂದಲೇ ಪ್ರಯಾಣಿಸುತ್ತಾರೆ. ಶರೀರದಿಂದ ಪ್ರಯಾಣಿಸಲು ಸಾಧ್ಯವಿಲ್ಲ. ಕರ್ಮಗಳಿಗೆ ಆದಿ-ಅಂತ್ಯಗಳಿವೆ. ಆದುದರಿಂದ ಶರೀರವು ಕರ್ಮಬಂಧನವಾದುದು.
14033008a ತಸ್ಮಾತ್ತೇ ಸುಭಗೇ ನಾಸ್ತಿ ಪರಲೋಕಕೃತಂ ಭಯಮ್|
14033008c ಮದ್ಭಾವಭಾವನಿರತಾ ಮಮೈವಾತ್ಮಾನಮೇಷ್ಯಸಿ||
ಸುಭಗೇ! ಆದುದರಿಂದ ನಿನಗೆ ಪರಲೋಕದಲ್ಲಿ ಮಾಡಿದ ಕರ್ಮಗಳ ಭಯವಿರುವುದಿಲ್ಲ. ಆತ್ಮಭಾವನಿರತಳಾಗಿರುವ ನೀನು ನನ್ನಂತೆಯೇ ಆತ್ಮಸ್ವರೂಪವನ್ನು ಹೊಂದುವೆ.”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಾಹ್ಮಣಗೀತಾಸು ತ್ರಯಸ್ತ್ರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಾಹ್ಮಣಗೀತಾ ಎನ್ನುವ ಮೂವತ್ಮೂರನೇ ಅಧ್ಯಾಯವು.