Ashvamedhika Parva: Chapter 23

ಅಶ್ವಮೇಧಿಕ ಪರ್ವ

೨೩

ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಮುಂದುವರೆಸಿ ಹೇಳಿದುದು (೧-೨೪).

14023001 ಬ್ರಾಹ್ಮಣ ಉವಾಚ

14023001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

14023001c ಸುಭಗೇ ಪಂಚಹೋತೄಣಾಂ ವಿಧಾನಮಿಹ ಯಾದೃಶಮ್||

ಬ್ರಾಹ್ಮಣನು ಹೇಳಿದನು: “ಸುಭಗೇ! ಪಂಚಹೋತೃಗಳ ವಿಧಾನವು ಹೇಗೆನ್ನುವುದಕ್ಕೆ ಈ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ.

14023002a ಪ್ರಾಣಾಪಾನಾವುದಾನಶ್ಚ ಸಮಾನೋ ವ್ಯಾನ ಏವ ಚ|

14023002c ಪಂಚಹೋತೄನಥೈತಾನ್ವೈ ಪರಂ ಭಾವಂ ವಿದುರ್ಬುಧಾಃ||

ಪ್ರಾಣ, ಅಪಾನ, ಉದಾನ, ಸಮಾನ ಮತ್ತು ವ್ಯಾನ ಈ ಪಂಚಹೋತೃಗಳೇ ಪರಮ ಭಾವಗಳೆಂದು ವಿದ್ವಾಂಸರು ತಿಳಿದಿರುತ್ತಾರೆ.”

14023003 ಬ್ರಾಹ್ಮಣ್ಯುವಾಚ

14023003a ಸ್ವಭಾವಾತ್ಸಪ್ತ ಹೋತಾರ ಇತಿ ತೇ ಪೂರ್ವಿಕಾ ಮತಿಃ|

14023003c ಯಥಾ ವೈ ಪಂಚ ಹೋತಾರಃ ಪರೋ ಭಾವಸ್ತಥೋಚ್ಯತಾಮ್||

ಬ್ರಾಹ್ಮಣಿಯು ಹೇಳಿದಳು: “ಸ್ವಭಾವತಃ ಏಳು ಹೋತಾರರು ಇರುವರೆಂದು ನೀನು ನನಗೆ ಮೊದಲು ತಿಳಿಸಿದ್ದೆ. ಈಗ ಹೇಗೆ ಈ ಪಂಚಹೋತಾರರು ಪರಮಭಾವಗಳು ಎನ್ನುವುದನ್ನು ಹೇಳಬೇಕು.”

14023004 ಬ್ರಾಹ್ಮಣ ಉವಾಚ

14023004a ಪ್ರಾಣೇನ ಸಂಭೃತೋ ವಾಯುರಪಾನೋ ಜಾಯತೇ ತತಃ|

14023004c ಅಪಾನೇ ಸಂಭೃತೋ ವಾಯುಸ್ತತೋ ವ್ಯಾನಃ ಪ್ರವರ್ತತೇ||

ಬ್ರಾಹ್ಮಣನು ಹೇಳಿದನು: “ಪ್ರಾಣದಿಂದ ಪುಷ್ಟಿಗೊಂಡ ವಾಯುವು ಅಪಾನವಾಗುತ್ತದೆ. ಅಪಾನದಿಂದ ಪುಷ್ಟಿಗೊಂಡ ವಾಯುವು ವ್ಯಾನವಾಗುತ್ತದೆ.

14023005a ವ್ಯಾನೇನ ಸಂಭೃತೋ ವಾಯುಸ್ತತೋದಾನಃ ಪ್ರವರ್ತತೇ|

14023005c ಉದಾನೇ ಸಂಭೃತೋ ವಾಯುಃ ಸಮಾನಃ ಸಂಪ್ರವರ್ತತೇ||

ವ್ಯಾನದಿಂದ ಪುಷ್ಟಿಗೊಂಡ ವಾಯುವು ಉದಾನವಾಗುತ್ತದೆ. ಉದಾನದಿಂದ ಪುಷ್ಟಿಗೊಂಡ ವಾಯುವು ಸಮಾನವಾಗುತ್ತದೆ.

14023006a ತೇಽಪೃಚ್ಚಂತ ಪುರಾ ಗತ್ವಾ ಪೂರ್ವಜಾತಂ ಪ್ರಜಾಪತಿಮ್|

14023006c ಯೋ ನೋ ಜ್ಯೇಷ್ಠಸ್ತಮಾಚಕ್ಷ್ವ ಸ ನಃ ಶ್ರೇಷ್ಠೋ ಭವಿಷ್ಯತಿ||

ಹಿಂದೆ ಈ ಐವರು ಎಲ್ಲರಿಗಿಂತಲೂ ಮೊದಲು ಹುಟ್ಟಿದ ಪ್ರಜಾಪತಿಯ ಬಳಿ ಹೋಗಿ “ನಮ್ಮಲ್ಲಿ ಜ್ಯೇಷ್ಠನು ಯಾರೆಂದು ಹೇಳು. ಅವನೇ ನಮ್ಮಲ್ಲಿ ಶ್ರೇಷ್ಠನೆಂದೆನಿಸಿಕೊಳ್ಳುತ್ತಾನೆ!” ಎಂದು ಕೇಳಿದವು.

14023007 ಬ್ರಹ್ಮೋವಾಚ

14023007a ಯಸ್ಮಿನ್ಪ್ರಲೀನೇ ಪ್ರಲಯಂ ವ್ರಜಂತಿ

ಸರ್ವೇ ಪ್ರಾಣಾಃ ಪ್ರಾಣಭೃತಾಂ ಶರೀರೇ|

14023007c ಯಸ್ಮಿನ್ಪ್ರಚೀರ್ಣೇ ಚ ಪುನಶ್ಚರಂತಿ

ಸ ವೈ ಶ್ರೇಷ್ಠೋ ಗಚ್ಚತ ಯತ್ರ ಕಾಮಃ||

ಬ್ರಹ್ಮನು ಹೇಳಿದನು: “ಪ್ರಾಣವಿರುವ ಶರೀರದಲ್ಲಿ ಯಾವುದು ಲಯವಾದನಂತರ ಉಳಿದೆಲ್ಲವೂ ಲಯವಾಗುತ್ತವೆಯೋ ಮತ್ತು ಯಾವುದು ಚಲಿಸುವುದರಿಂದ ಆ ಶರೀರವು ಚಲಿಸುತ್ತದೆಯೋ ಅದೇ ಶ್ರೇಷ್ಠವಾದುದು. ನಿಮಗಿಷ್ಟವಾದಲ್ಲಿಗೆ ಹೋಗಬಹುದು!”

14023008 ಪ್ರಾಣ ಉವಾಚ

14023008a ಮಯಿ ಪ್ರಲೀನೇ ಪ್ರಲಯಂ ವ್ರಜಂತಿ

ಸರ್ವೇ ಪ್ರಾಣಾಃ ಪ್ರಾಣಭೃತಾಂ ಶರೀರೇ|

14023008c ಮಯಿ ಪ್ರಚೀರ್ಣೇ ಚ ಪುನಶ್ಚರಂತಿ

ಶ್ರೇಷ್ಠೋ ಹ್ಯಹಂ ಪಶ್ಯತ ಮಾಂ ಪ್ರಲೀನಮ್||

ಪ್ರಾಣವು ಹೇಳಿತು: “ನಾನು ಲಯವಾದರೆ ಪ್ರಾಣವಿರುವ ಶರೀರದಲ್ಲಿನ ಎಲ್ಲ ಪ್ರಾಣಗಳೂ ಲಯವಾಗುತ್ತವೆ. ನಾನು ಚಲಿಸಿದರೆ ಪುನಃ ಶರೀರವು ಚಲಿಸುತ್ತದೆ. ಆದುದರಿಂದ ನಿಮ್ಮೆಲ್ಲರಿಗೂ ನಾನೇ ಶ್ರೇಷ್ಠನು. ನೋಡಿ! ನಾನೀಗ ಲಯವಾಗುತ್ತೇನೆ!””

14023009 ಬ್ರಾಹ್ಮಣ ಉವಾಚ

14023009a ಪ್ರಾಣಃ ಪ್ರಲೀಯತ ತತಃ ಪುನಶ್ಚ ಪ್ರಚಚಾರ ಹ|

14023009c ಸಮಾನಶ್ಚಾಪ್ಯುದಾನಶ್ಚ ವಚೋಽಬ್ರೂತಾಂ ತತಃ ಶುಭೇ||

ಬ್ರಾಹ್ಮಣನು ಹೇಳಿದನು: “ಶುಭೇ! ಪ್ರಾಣವು ಲಯವಾಗಿ ಪುನಃ ಚಲಿಸತೊಡಗಿತು. ಆಗ ಸಮಾನ-ಉದಾನಗಳು ಹೀಗೆ ಹೇಳಿದವು:

14023010a ನ ತ್ವಂ ಸರ್ವಮಿದಂ ವ್ಯಾಪ್ಯ ತಿಷ್ಠಸೀಹ ಯಥಾ ವಯಮ್|

14023010c ನ ತ್ವಂ ಶ್ರೇಷ್ಠೋಽಸಿ ನಃ ಪ್ರಾಣ ಅಪಾನೋ ಹಿ ವಶೇ ತವ|

14023010e ಪ್ರಚಚಾರ ಪುನಃ ಪ್ರಾಣಸ್ತಮಪಾನೋಽಭ್ಯಭಾಷತ||

“ನಮ್ಮಂತೆ ನೀನು ಶರೀರದಲ್ಲೆಲ್ಲಾ ವ್ಯಾಪ್ತನಾಗಿಲ್ಲ. ಆದುದರಿಂದ ನೀನು ನಮಗಿಂತಲೂ ಶ್ರೇಷ್ಠನಲ್ಲ. ಆದರೆ ಅಪಾನವು ಮಾತ್ರ ನಿನ್ನ ವಶದಲ್ಲಿದೆ ಎನ್ನುವುದು ನಿಜ.” ಪುನಃ ಪ್ರಾಣವು ಚಲಿಸತೊಡಗಲು ಅಪಾನವು ಹೇಳಿತು:

14023011a ಮಯಿ ಪ್ರಲೀನೇ ಪ್ರಲಯಂ ವ್ರಜಂತಿ

ಸರ್ವೇ ಪ್ರಾಣಾಃ ಪ್ರಾಣಭೃತಾಂ ಶರೀರೇ|

14023011c ಮಯಿ ಪ್ರಚೀರ್ಣೇ ಚ ಪುನಶ್ಚರಂತಿ

ಶ್ರೇಷ್ಠೋ ಹ್ಯಹಂ ಪಶ್ಯತ ಮಾಂ ಪ್ರಲೀನಮ್||

“ನಾನು ಲಯವಾದರೆ ಪ್ರಾಣವಿರುವ ಶರೀರದಲ್ಲಿನ ಎಲ್ಲ ಪ್ರಾಣಗಳೂ ಲಯವಾಗುತ್ತವೆ. ನಾನು ಚಲಿಸಿದರೆ ಪುನಃ ಶರೀರವು ಚಲಿಸುತ್ತದೆ. ಆದುದರಿಂದ ನಿಮ್ಮೆಲ್ಲರಿಗೂ ನಾನೇ ಶ್ರೇಷ್ಠನು. ನೋಡಿ! ನಾನೀಗ ಲಯವಾಗುತ್ತೇನೆ!”

14023012a ವ್ಯಾನಶ್ಚ ತಮುದಾನಶ್ಚ ಭಾಷಮಾಣಮಥೋಚತುಃ|

14023012c ಅಪಾನ ನ ತ್ವಂ ಶ್ರೇಷ್ಠೋಽಸಿ ಪ್ರಾಣೋ ಹಿ ವಶಗಸ್ತವ||

ಆಗ ವ್ಯಾನ-ಉದಾನಗಳು ಹೇಳಿದವು: “ಅಪಾನವೇ! ನೀನು ಶ್ರೇಷ್ಠನಲ್ಲ! ಆದರೆ ಪ್ರಾಣವು ನಿನ್ನ ವಶದಲ್ಲಿರುವುದು ಸತ್ಯ!”

14023013a ಅಪಾನಃ ಪ್ರಚಚಾರಾಥ ವ್ಯಾನಸ್ತಂ ಪುನರಬ್ರವೀತ್|

14023013c ಶ್ರೇಷ್ಠೋಽಹಮಸ್ಮಿ ಸರ್ವೇಷಾಂ ಶ್ರೂಯತಾಂ ಯೇನ ಹೇತುನಾ||

ಅಪಾನವು ಚಲಿಸತೊಡಗಿತು. ವ್ಯಾನವು ಅವನಿಗೆ ಪುನಃ ಹೇಳಿತು: “ಎಲ್ಲರಿಗಿಂತಲೂ ನಾನೇ ಶ್ರೇಷ್ಠನಾಗಿದ್ದೇನೆ. ಏಕೆಂದು ಕೇಳಿ.

14023014a ಮಯಿ ಪ್ರಲೀನೇ ಪ್ರಲಯಂ ವ್ರಜಂತಿ

ಸರ್ವೇ ಪ್ರಾಣಾಃ ಪ್ರಾಣಭೃತಾಂ ಶರೀರೇ|

14023014c ಮಯಿ ಪ್ರಚೀರ್ಣೇ ಚ ಪುನಶ್ಚರಂತಿ

ಶ್ರೇಷ್ಠೋ ಹ್ಯಹಂ ಪಶ್ಯತ ಮಾಂ ಪ್ರಲೀನಮ್||

ನಾನು ಲಯವಾದರೆ ಪ್ರಾಣವಿರುವ ಶರೀರದಲ್ಲಿನ ಎಲ್ಲ ಪ್ರಾಣಗಳೂ ಲಯವಾಗುತ್ತವೆ. ನಾನು ಚಲಿಸಿದರೆ ಪುನಃ ಶರೀರವು ಚಲಿಸುತ್ತದೆ. ಆದುದರಿಂದ ನಿಮ್ಮೆಲ್ಲರಿಗೂ ನಾನೇ ಶ್ರೇಷ್ಠನು. ನೋಡಿ! ನಾನೀಗ ಲಯವಾಗುತ್ತೇನೆ!”

14023015a ಪ್ರಾಲೀಯತ ತತೋ ವ್ಯಾನಃ ಪುನಶ್ಚ ಪ್ರಚಚಾರ ಹ|

14023015c ಪ್ರಾಣಾಪಾನಾವುದಾನಶ್ಚ ಸಮಾನಶ್ಚ ತಮಬ್ರುವನ್|

14023015e ನ ತ್ವಂ ಶ್ರೇಷ್ಠೋಽಸಿ ನೋ ವ್ಯಾನ ಸಮಾನೋ ಹಿ ವಶೇ ತವ||

ಆಗ ವ್ಯಾನವು ಲಯಹೊಂದಿ ಪುನಃ ಚಲಿಸತೊಡಗಿತು. ಪ್ರಾಣ, ಅಪಾನ, ಉದಾನ ಮತ್ತು ಸಮಾನಗಳು ಅದಕ್ಕೆ ಹೇಳಿದವು: “ವ್ಯಾನ! ನೀನು ಶ್ರೇಷ್ಠನಲ್ಲ! ಆದರೆ ಸಮಾನವು ನಿನ್ನ ವಶದಲ್ಲಿರುವುದು ಸತ್ಯ!”

14023016a ಪ್ರಚಚಾರ ಪುನರ್ವ್ಯಾನಃ ಸಮಾನಃ ಪುನರಬ್ರವೀತ್|

14023016c ಶ್ರೇಷ್ಠೋಽಹಮಸ್ಮಿ ಸರ್ವೇಷಾಂ ಶ್ರೂಯತಾಂ ಯೇನ ಹೇತುನಾ||

ಪುನಃ ವ್ಯಾನವು ಸಂಚರಿಸತೊಡಗಿತು. ಸಮಾನವು ಪುನಃ ಹೇಳಿತು: “ಎಲ್ಲರಿಗಿಂತಲೂ ನಾನು ಶೇಷ್ಠನು. ಏಕೆಂದು ಕೇಳಿ.

14023017a ಮಯಿ ಪ್ರಲೀನೇ ಪ್ರಲಯಂ ವ್ರಜಂತಿ

ಸರ್ವೇ ಪ್ರಾಣಾಃ ಪ್ರಾಣಭೃತಾಂ ಶರೀರೇ|

14023017c ಮಯಿ ಪ್ರಚೀರ್ಣೇ ಚ ಪುನಶ್ಚರಂತಿ

ಶ್ರೇಷ್ಠೋ ಹ್ಯಹಂ ಪಶ್ಯತ ಮಾಂ ಪ್ರಲೀನಮ್||

ನಾನು ಲಯವಾದರೆ ಪ್ರಾಣವಿರುವ ಶರೀರದಲ್ಲಿನ ಎಲ್ಲ ಪ್ರಾಣಗಳೂ ಲಯವಾಗುತ್ತವೆ. ನಾನು ಚಲಿಸಿದರೆ ಪುನಃ ಶರೀರವು ಚಲಿಸುತ್ತದೆ. ಆದುದರಿಂದ ನಿಮ್ಮೆಲ್ಲರಿಗೂ ನಾನೇ ಶ್ರೇಷ್ಠನು. ನೋಡಿ! ನಾನೀಗ ಲಯವಾಗುತ್ತೇನೆ!”

14023018a ತತಃ ಸಮಾನಃ ಪ್ರಾಲಿಲ್ಯೇ ಪುನಶ್ಚ ಪ್ರಚಚಾರ ಹ|

14023018c ಪ್ರಾಣಾಪಾನಾವುದಾನಶ್ಚ ವ್ಯಾನಶ್ಚೈವ ತಮಬ್ರುವನ್|

14023018e ಸಮಾನ ನ ತ್ವಂ ಶ್ರೇಷ್ಠೋಽಸಿ ವ್ಯಾನ ಏವ ವಶೇ ತವ||

ಆಗ ಸಮಾನವು ಲಯಹೊಂದಿ ಪುನಃ ಚಲಿಸತೊಡಗಿತು. ಪ್ರಾಣ, ಅಪಾನ, ಉದಾನ ಮತ್ತು ವ್ಯಾನಗಳು ಅದಕ್ಕೆ “ಸಮಾನ! ನೀನು ಶ್ರೇಷ್ಠನಲ್ಲ. ಆದರೆ ವ್ಯಾನನು ಮಾತ್ರ ನಿನ್ನ ವಶದಲ್ಲಿರುವುದು ಸತ್ಯ” ಎಂದು ಹೇಳಿದವು.

14023019a ಸಮಾನಃ ಪ್ರಚಚಾರಾಥ ಉದಾನಸ್ತಮುವಾಚ ಹ|

14023019c ಶ್ರೇಷ್ಠೋಽಹಮಸ್ಮಿ ಸರ್ವೇಷಾಂ ಶ್ರೂಯತಾಂ ಯೇನ ಹೇತುನಾ||

ಆಗ ಸಮಾನವು ಚಲಿಸತೊಡಗಿತು. ಉದಾನವು ಅದಕ್ಕೆ ಹೇಳಿತು: “ಎಲ್ಲರಿಗಿಂತಲೂ ನಾನು ಶ್ರೇಷ್ಠ! ಏಕೆಂದು ಕೇಳಿ!

14023020a ಮಯಿ ಪ್ರಲೀನೇ ಪ್ರಲಯಂ ವ್ರಜಂತಿ

ಸರ್ವೇ ಪ್ರಾಣಾಃ ಪ್ರಾಣಭೃತಾಂ ಶರೀರೇ|

14023020c ಮಯಿ ಪ್ರಚೀರ್ಣೇ ಚ ಪುನಶ್ಚರಂತಿ

ಶ್ರೇಷ್ಠೋ ಹ್ಯಹಂ ಪಶ್ಯತ ಮಾಂ ಪ್ರಲೀನಮ್||

ನಾನು ಲಯವಾದರೆ ಪ್ರಾಣವಿರುವ ಶರೀರದಲ್ಲಿನ ಎಲ್ಲ ಪ್ರಾಣಗಳೂ ಲಯವಾಗುತ್ತವೆ. ನಾನು ಚಲಿಸಿದರೆ ಪುನಃ ಶರೀರವು ಚಲಿಸುತ್ತದೆ. ಆದುದರಿಂದ ನಿಮ್ಮೆಲ್ಲರಿಗೂ ನಾನೇ ಶ್ರೇಷ್ಠನು. ನೋಡಿ! ನಾನೀಗ ಲಯವಾಗುತ್ತೇನೆ!”

14023021a ತತಃ ಪ್ರಾಲೀಯತೋದಾನಃ ಪುನಶ್ಚ ಪ್ರಚಚಾರ ಹ|

14023021c ಪ್ರಾಣಾಪಾನೌ ಸಮಾನಶ್ಚ ವ್ಯಾನಶ್ಚೈವ ತಮಬ್ರುವನ್|

14023021e ಉದಾನ ನ ತ್ವಂ ಶ್ರೇಷ್ಠೋಽಸಿ ವ್ಯಾನ ಏವ ವಶೇ ತವ||

ಆಗ ಉದಾನವು ಲಯಹೊಂದಿ ಪುನಃ ಚಲಿಸತೊಡಗಿತು. ಪ್ರಾಣ, ಅಪಾನ, ಸಮಾನ, ವ್ಯಾನಗಳು ಅದಕ್ಕೆ “ಉದಾನ! ನೀನು ಶ್ರೇಷ್ಠನಲ್ಲ. ಆದರೆ ವ್ಯಾನವು ಮಾತ್ರ ನಿನ್ನ ವಶದಲ್ಲಿದೆ ಎನ್ನುವುದು ಸತ್ಯ!” ಎಂದವು.

14023022a ತತಸ್ತಾನಬ್ರವೀದ್ಬ್ರಹ್ಮಾ ಸಮವೇತಾನ್ಪ್ರಜಾಪತಿಃ|

14023022c ಸರ್ವೇ ಶ್ರೇಷ್ಠಾ ನ ವಾ ಶ್ರೇಷ್ಠಾಃ ಸರ್ವೇ ಚಾನ್ಯೋನ್ಯಧರ್ಮಿಣಃ|

14023022e ಸರ್ವೇ ಸ್ವವಿಷಯೇ ಶ್ರೇಷ್ಠಾಃ ಸರ್ವೇ ಚಾನ್ಯೋನ್ಯರಕ್ಷಿಣಃ||

ಅನಂತರ ಸೇರಿದ್ದ ವಾಯುಗಳಿಗೆ ಪ್ರಜಾಪತಿ ಬ್ರಹ್ಮನು ಹೇಳಿದನು: “ನಿಮ್ಮಲ್ಲಿ ಯಾರೂ ಶ್ರೇಷ್ಠರಲ್ಲ. ಎಲ್ಲರೂ ಅನ್ಯೋನ್ಯರನ್ನು ಅವಲಂಬಿಸಿಕೊಂಡಿರುವಿರಿ. ನಿಮ್ಮ ನಿಮ್ಮ ಸ್ಥಾನಗಳಲ್ಲಿ ನೀವೆಲ್ಲರೂ ಶ್ರೇಷ್ಠರೇ. ನೀವೆಲ್ಲರೂ ಅನ್ಯೋನ್ಯರ ರಕ್ಷಕರಾಗಿದ್ದೀರಿ.

14023023a ಏಕಃ ಸ್ಥಿರಶ್ಚಾಸ್ಥಿರಶ್ಚ ವಿಶೇಷಾತ್ಪಂಚ ವಾಯವಃ|

14023023c ಏಕ ಏವ ಮಮೈವಾತ್ಮಾ ಬಹುಧಾಪ್ಯುಪಚೀಯತೇ||

ಒಂದೇ ಆತ್ಮವಾಗಿರುವ ನಾನು ಹೇಗೆ ಅನೇಕವಾಗಿ ವೃದ್ಧಿಹೊಂದುತ್ತೇನೋ ಹಾಗೆ ಒಂದೇ ಆಗಿರುವ ನೀವು ಸ್ಥಿರ-ಅಸ್ಥಿರಗಳ ವಿಶೇಷತೆಯಿಂದ ಐದು ವಾಯುಗಳಾಗಿ ಪರಿಣಮಿಸುತ್ತೀರಿ.

14023024a ಪರಸ್ಪರಸ್ಯ ಸುಹೃದೋ ಭಾವಯಂತಃ ಪರಸ್ಪರಮ್|

14023024c ಸ್ವಸ್ತಿ ವ್ರಜತ ಭದ್ರಂ ವೋ ಧಾರಯಧ್ವಂ ಪರಸ್ಪರಮ್||

ಪರಸ್ಪರರ ಸುಹೃದಯರಾಗಿ ಪರಸ್ಪರರನ್ನು ನೋಡಿಕೊಂಡಿರಿ. ಪರಸ್ಪರರನ್ನು ಧಾರಣೆಮಾಡಿಕೊಂಡಿರಿ. ನಿಮಗೆ ಮಂಗಳವಾಗಲಿ! ನೀವಿನ್ನು ಹೋಗಬಹುದು!””

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಾಹ್ಮಣಗೀತಾಸು ತ್ರಯೋವಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಾಹ್ಮಣಗೀತಾ ಎನ್ನುವ ಇಪ್ಪತ್ಮೂರನೇ ಅಧ್ಯಾಯವು.

Comments are closed.