Ashramavasika Parva: Chapter 28

ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ

೨೮

ಪಾಂಡವರ ಶೋಕ (೧-೧೬).

15028001 ವೈಶಂಪಾಯನ ಉವಾಚ|

15028001a ವನಂ ಗತೇ ಕೌರವೇಂದ್ರೇ ದುಃಖಶೋಕಸಮಾಹತಾಃ|

15028001c ಬಭೂವುಃ ಪಾಂಡವಾ ರಾಜನ್ಮಾತೃಶೋಕೇನ ಚಾರ್ದಿತಾಃ||

ವೈಶಂಪಾಯನನು ಹೇಳಿದನು: “ರಾಜನ್! ಕೌರವೇಂದ್ರನು ವನಕ್ಕೆ ತೆರಳಿದ ನಂತರ ಪಾಂಡವರು ಮಾತೃಶೋಕದಿಂದ ಪೀಡಿತರಾಗಿ ದುಃಖಶೋಕಗಳಿಂದ ಪರಿತಪಿಸಿದರು.

15028002a ತಥಾ ಪೌರಜನಃ ಸರ್ವಃ ಶೋಚನ್ನಾಸ್ತೇ ಜನಾಧಿಪಮ್|

15028002c ಕುರ್ವಾಣಾಶ್ಚ ಕಥಾಸ್ತತ್ರ ಬ್ರಾಹ್ಮಣಾ ನೃಪತಿಂ ಪ್ರತಿ||

ಹಾಗೆಯೇ ಪೌರಜನರೆಲ್ಲರೂ ಜನಾಧಿಪನ ಕುರಿತು ಶೋಕಿಸುತ್ತಿದ್ದರು. ರಾಜನ ಕುರಿತು ಬ್ರಾಹ್ಮಣರು ಅಲ್ಲಲ್ಲಿ ಈ ರೀತಿ ಮಾತನಾಡಿಕೊಳ್ಳುತ್ತಿದ್ದರು:

15028003a ಕಥಂ ನು ರಾಜಾ ವೃದ್ಧಃ ಸ ವನೇ ವಸತಿ ನಿರ್ಜನೇ|

15028003c ಗಾಂಧಾರೀ ಚ ಮಹಾಭಾಗಾ ಸಾ ಚ ಕುಂತೀ ಪೃಥಾ ಕಥಮ್||

“ವೃದ್ಧ ರಾಜನು ನಿರ್ಜನ ವನದಲ್ಲಿ ಹೇಗೆ ತಾನೇ ವಾಸಿಸುತ್ತಾನೆ? ಮಹಾಭಾಗೆ ಗಾಂಧಾರಿಯೂ ಪೃಥೆ ಕುಂತಿಯೂ ಹೇಗೆ ಜೀವಿಸುತ್ತಿದ್ದಾರೆ?

15028004a ಸುಖಾರ್ಹಃ ಸ ಹಿ ರಾಜರ್ಷಿರ್ನ ಸುಖಂ ತನ್ಮಹಾವನಮ್|

15028004c ಕಿಮವಸ್ಥಃ ಸಮಾಸಾದ್ಯ ಪ್ರಜ್ಞಾಚಕ್ಷುರ್ಹತಾತ್ಮಜಃ||

ಸುಖಾರ್ಹನೂ ಮಕ್ಕಳನ್ನು ಕಳೆದುಕೊಂಡವನೂ ಆದ ಆ ಪ್ರಜ್ಞಾಚಕ್ಷು ರಾಜರ್ಷಿಯು ಆ ಮಹಾವನದಲ್ಲಿ ಸುಖವಿಲ್ಲದೇ ಯಾವ ಅವಸ್ಥೆಯಲ್ಲಿರಬಹುದು?

15028005a ಸುದುಷ್ಕರಂ ಕೃತವತೀ ಕುಂತೀ ಪುತ್ರಾನಪಶ್ಯತೀ|

15028005c ರಾಜ್ಯಶ್ರಿಯಂ ಪರಿತ್ಯಜ್ಯ ವನವಾಸಮರೋಚಯತ್||

ರಾಜ್ಯಶ್ರಿಯನ್ನು ಪರಿತ್ಯಜಿಸಿ ಕುಂತಿಯು ಪುತ್ರರನ್ನು ನೋಡಲಿಕ್ಕಾಗದ ವನವಾಸವನ್ನು ಬಯಸಿ ದುಷ್ಕರ ಕಾರ್ಯವನ್ನೇ ಎಸಗಿದ್ದಾಳೆ!

15028006a ವಿದುರಃ ಕಿಮವಸ್ಥಶ್ಚ ಭ್ರಾತುಃ ಶುಶ್ರೂಷುರಾತ್ಮವಾನ್|

15028006c ಸ ಚ ಗಾವಲ್ಗಣಿರ್ಧೀಮಾನ್ಭರ್ತೃಪಿಂಡಾನುಪಾಲಕಃ||

ಅಣ್ಣನ ಶುಶ್ರೂಷೆ ಮಾಡುತ್ತಿರುವ ಆತ್ಮವಾನ್ ವಿದುರ ಮತ್ತು ಅನ್ನವನ್ನಿತ್ತ ಒಡೆಯನನ್ನೇ ಅನುಸರಿಸುತ್ತಿರುವ ಧೀಮಾನ್ ಗಾವಲ್ಗಣಿ ಸಂಜಯರು ಯಾವ ಅವಸ್ಥೆಯಲ್ಲಿರಬಹುದು?”

15028007a ಆಕುಮಾರಂ ಚ ಪೌರಾಸ್ತೇ ಚಿಂತಾಶೋಕಸಮಾಹತಾಃ|

15028007c ತತ್ರ ತತ್ರ ಕಥಾಶ್ಚಕ್ರುಃ ಸಮಾಸಾದ್ಯ ಪರಸ್ಪರಮ್||

ಹೀಗೆ ಬಾಲಕರಿಂದ ಹಿಡಿದು ಮುದುಕರವರೆಗಿನ ಪೌರರು ಚಿಂತೆ ಶೋಕಗಳಿಂದ ಪೀಡಿತರಾಗಿ ಅಲ್ಲಲ್ಲಿ ಪರಸ್ಪರರೊಡನೆ ಮಾತನಾಡಿಕೊಳ್ಳುತ್ತಿದ್ದರು.

15028008a ಪಾಂಡವಾಶ್ಚೈವ ತೇ ಸರ್ವೇ ಭೃಶಂ ಶೋಕಪರಾಯಣಾಃ|

15028008c ಶೋಚಂತೋ ಮಾತರಂ ವೃದ್ಧಾಮೂಷುರ್ನಾತಿಚಿರಂ ಪುರೇ||

15028009a ತಥೈವ ಪಿತರಂ ವೃದ್ಧಂ ಹತಪುತ್ರಂ ಜನೇಶ್ವರಮ್|

15028009c ಗಾಂಧಾರೀಂ ಚ ಮಹಾಭಾಗಾಂ ವಿದುರಂ ಚ ಮಹಾಮತಿಮ್||

ಪಾಂಡವರೆಲ್ಲರು ಕೂಡ ಅತ್ಯಂತ ಶೋಕಪರಾಯಣರಾಗಿದ್ದರು. ವೃದ್ಧ ತಾಯಿಯ ಕುರಿತು ಶೋಕಿಸುತ್ತಿದ್ದ ಅವರಿಗೆ ತಾಯಿಯನ್ನು, ಹಾಗೆಯೇ ಪುತ್ರರನ್ನು ಕಳೆದುಕೊಂಡ ವೃದ್ಧ ದೊಡ್ಡಪ್ಪನನ್ನು, ಮಹಾಭಾಗೆ ಗಾಂಧಾರಿಯನ್ನು ಮತ್ತು ಮಹಾಮತಿ ವಿದುರನನ್ನು ಕಾಣದೇ ಹಸ್ತಿನಾಪುರದಲ್ಲಿ ಬಹಳ ಸಮಯ ಇರಲು ಸಾಧ್ಯವಾಗಲಿಲ್ಲ.

15028010a ನೈಷಾಂ ಬಭೂವ ಸಂಪ್ರೀತಿಸ್ತಾನ್ವಿಚಿಂತಯತಾಂ ತದಾ|

15028010c ನ ರಾಜ್ಯೇ ನ ಚ ನಾರೀಷು ನ ವೇದಾಧ್ಯಯನೇ ತಥಾ||

ಬಹಳ ಚಿಂತೆಗೊಳಗಾಗಿದ್ದ ಅವರು ರಾಜ್ಯದಲ್ಲಿಯಾಗಲೀ, ಸ್ತ್ರೀಯರಲ್ಲಾಗಲೀ ಮತ್ತು ವೇದಾಧ್ಯಯನದಲ್ಲಾಗಲೀ ಸಂತೋಷಪಡುತ್ತಿರಲಿಲ್ಲ.

15028011a ಪರಂ ನಿರ್ವೇದಮಗಮಂಶ್ಚಿಂತಯಂತೋ ನರಾಧಿಪಮ್|

15028011c ತಚ್ಚ ಜ್ಞಾತಿವಧಂ ಘೋರಂ ಸಂಸ್ಮರಂತಃ ಪುನಃ ಪುನಃ||

ಘೋರ ಜ್ಞಾತಿವಧೆಯಿಂದಾಗಿ ಪರಮ ವೇದನೆಯನ್ನು ಅನುಭವಿಸುತ್ತಿರುವ ನರಾಧಿಪನನ್ನು ಪುನಃ ಪುನಃ ಸ್ಮರಿಸಿಕೊಳ್ಳುತ್ತಿದ್ದರು.

15028012a ಅಭಿಮನ್ಯೋಶ್ಚ ಬಾಲಸ್ಯ ವಿನಾಶಂ ರಣಮೂರ್ಧನಿ|

15028012c ಕರ್ಣಸ್ಯ ಚ ಮಹಾಬಾಹೋಃ ಸಂಗ್ರಾಮೇಷ್ವಪಲಾಯಿನಃ||

15028013a ತಥೈವ ದ್ರೌಪದೇಯಾನಾಮನ್ಯೇಷಾಂ ಸುಹೃದಾಮಪಿ|

15028013c ವಧಂ ಸಂಸ್ಮೃತ್ಯ ತೇ ವೀರಾ ನಾತಿಪ್ರಮನಸೋಽಭವನ್||

ಹಾಗೆಯೇ ರಣಮಧ್ಯದಲ್ಲಿ ಬಾಲಕ ಅಭಿಮನ್ಯುವಿನ ವಿನಾಶ, ಸಂಗ್ರಾಮದಿಂದ ಪಲಾಯನ ಮಾಡದಿದ್ದ ಮಹಾಬಾಹು ಕರ್ಣನ ವಿನಾಶ, ದ್ರೌಪದೇಯರು ಮತ್ತು ಅನ್ಯ ಸುಹೃದಯರ ವಧೆ ಇವುಗಳನ್ನು ಸ್ಮರಿಸಿಕೊಳ್ಳುತ್ತಿದ್ದ ಆ ವೀರರ ಮನಸ್ಸು ಸಂತೋಷದಿಂದಿರಲಿಲ್ಲ.

15028014a ಹತಪ್ರವೀರಾಂ ಪೃಥಿವೀಂ ಹತರತ್ನಾಂ ಚ ಭಾರತ|

15028014c ಸದೈವ ಚಿಂತಯಂತಸ್ತೇ ನ ನಿದ್ರಾಮುಪಲೇಭಿರೇ||

ಭಾರತ! ಭೂಮಿಯ ಪ್ರವೀರರು ಹತರಾದುದುದರ ಮತ್ತು ಸಂಪತ್ತು ನಾಶವಾದುದರ ಕುರಿತು ಸದೈವ ಚಿಂತಿಸುತ್ತಿದ್ದ ಅವರಿಗೆ ನಿದ್ರೆಯೂ ಬರುತ್ತಿರಲಿಲ್ಲ.

15028015a ದ್ರೌಪದೀ ಹತಪುತ್ರಾ ಚ ಸುಭದ್ರಾ ಚೈವ ಭಾಮಿನೀ|

15028015c ನಾತಿಪ್ರೀತಿಯುತೇ ದೇವ್ಯೌ ತದಾಸ್ತಾಮಪ್ರಹೃಷ್ಟವತ್||

ಪುತ್ರರನ್ನು ಕಳೆದುಕೊಂಡಿದ್ದ ದ್ರೌಪದೀ ಮತ್ತು ಭಾಮಿನಿ ಸುಭದ್ರಾ ದೇವಿಯರು ಕೂಡ ಅಪ್ರಸನ್ನರಾಗಿ ಹರ್ಷಶೂನ್ಯರಾಗಿದ್ದರು.

15028016a ವೈರಾಟ್ಯಾಸ್ತು ಸುತಂ ದೃಷ್ಟ್ವಾ ಪಿತರಂ ತೇ ಪರಿಕ್ಷಿತಮ್|

15028016c ಧಾರಯಂತಿ ಸ್ಮ ತೇ ಪ್ರಾಣಾಂಸ್ತವ ಪೂರ್ವಪಿತಾಮಹಾಃ||

ಆಗ ನಿನ್ನ ಪೂರ್ವಪಿತಾಮಹರು ವೈರಾಟಿ ಉತ್ತರೆಯನ್ನೂ ಮತ್ತು ನಿನ್ನ ತಂದೆ ಪರಿಕ್ಷಿತನನ್ನೂ ನೋಡಿಕೊಂಡು ತಮ್ಮ ಪ್ರಾಣಗಳನ್ನು ಧಾರಣೆಮಾಡಿಕೊಂಡಿದ್ದರು.

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಅಷ್ಟವಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಇಪ್ಪತ್ತೆಂಟನೇ ಅಧ್ಯಾಯವು.

Image result for indian motifs

Comments are closed.