Ashramavasika Parva: Chapter 19

ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ

೧೯

ವಿದುರನು ಯುಧಿಷ್ಠಿರನ ಸಂದೇಶವನ್ನು ಧೃತರಾಷ್ಟ್ರನಿಗೆ ತಿಳಿಸಿದುದು (೧-೧೫).

15019001 ವೈಶಂಪಾಯನ ಉವಾಚ|

15019001a ಏವಮುಕ್ತಸ್ತು ರಾಜ್ಞಾ ಸ ವಿದುರೋ ಬುದ್ಧಿಸತ್ತಮಃ|

15019001c ಧೃತರಾಷ್ಟ್ರಮುಪೇತ್ಯೇದಂ ವಾಕ್ಯಮಾಹ ಮಹಾರ್ಥವತ್||

ವೈಶಂಪಾಯನನು ಹೇಳಿದನು: “ರಾಜನು ಹೀಗೆ ಹೇಳಲು ಬುದ್ಧಿಸತ್ತಮ ವಿದುರನು ಧೃತರಾಷ್ಟ್ರನ ಬಳಿಸಾರಿ ಮಹಾ ಅರ್ಥವತ್ತಾದ ಈ ಮಾತನ್ನಾಡಿದನು:

15019002a ಉಕ್ತೋ ಯುಧಿಷ್ಠಿರೋ ರಾಜಾ ಭವದ್ವಚನಮಾದಿತಃ|

15019002c ಸ ಚ ಸಂಶ್ರುತ್ಯ ವಾಕ್ಯಂ ತೇ ಪ್ರಶಶಂಸ ಮಹಾದ್ಯುತಿಃ||

“ನಿನ್ನ ಮಾತನ್ನು ಸಂಪೂರ್ಣವಾಗಿ ರಾಜಾ ಯುಧಿಷ್ಠಿರನಿಗೆ ಹೇಳಿದೆನು. ನಿನ್ನ ಮಾತನ್ನು ಕೇಳಿದ ಆ ಮಹಾದ್ಯುತಿಯು ನಿನ್ನನ್ನು ಬಹಳವಾಗಿ ಪ್ರಶಂಸಿಸಿದನು.

15019003a ಬೀಭತ್ಸುಶ್ಚ ಮಹಾತೇಜಾ ನಿವೇದಯತಿ ತೇ ಗೃಹಾನ್|

15019003c ವಸು ತಸ್ಯ ಗೃಹೇ ಯಚ್ಚ ಪ್ರಾಣಾನಪಿ ಚ ಕೇವಲಾನ್||

ಮಹಾತೇಜಸ್ವಿ ಬೀಭತ್ಸುವು ತನ್ನ ಅರಮನೆ ಮತ್ತು ಅರಮನೆಯಲ್ಲಿರುವ ಎಲ್ಲ ಸಂಪತ್ತನ್ನೂ, ತನ್ನ ಪ್ರಾಣವನ್ನು ಕೂಡ ನಿನ್ನ ಸೇವೆಗಾಗಿ ಸಮರ್ಪಿಸಿದ್ದಾನೆ.

15019004a ಧರ್ಮರಾಜಶ್ಚ ಪುತ್ರಸ್ತೇ ರಾಜ್ಯಂ ಪ್ರಾಣಾನ್ಧನಾನಿ ಚ|

15019004c ಅನುಜಾನಾತಿ ರಾಜರ್ಷೇ ಯಚ್ಚಾನ್ಯದಪಿ ಕಿಂ ಚನ||

ರಾಜರ್ಷೇ! ನಿನ್ನ ಮಗ ಧರ್ಮರಾಜನೂ ಕೂಡ ರಾಜ್ಯ, ಪ್ರಾಣ, ಧನ ಮತ್ತು ಅವನಲ್ಲಿ ಏನೆಲ್ಲ ಇವೆಯೋ ಎಲ್ಲವನ್ನೂ ನಿನಗೆ ಒಪ್ಪಿಸಿದ್ದಾನೆ.

15019005a ಭೀಮಸ್ತು ಸರ್ವದುಃಖಾನಿ ಸಂಸ್ಮೃತ್ಯ ಬಹುಲಾನ್ಯುತ|

15019005c ಕೃಚ್ಛ್ರಾದಿವ ಮಹಾಬಾಹುರನುಮನ್ಯೇ ವಿನಿಃಶ್ವಸನ್||

ಮಹಾಬಾಹು ಭೀಮನಾದರೋ ಅಗಣಿತವಾಗಿದ್ದ ಸರ್ವ ದುಃಖಗಳನ್ನೂ ಸ್ಮರಿಸಿಕೊಂಡು ನಿಟ್ಟುಸಿರು ಬಿಡುತ್ತಾ ಬಹಳ ಕಷ್ಟದಿಂದ ರಾಜನ ಈ ನಿರ್ಧಾರವನ್ನು ಅನುಮೋದಿಸಿದನು.

15019006a ಸ ರಾಜ್ಞಾ ಧರ್ಮಶೀಲೇನ ಭ್ರಾತ್ರಾ ಬೀಭತ್ಸುನಾ ತಥಾ|

15019006c ಅನುನೀತೋ ಮಹಾಬಾಹುಃ ಸೌಹೃದೇ ಸ್ಥಾಪಿತೋಽಪಿ ಚ||

ಧರ್ಮಶೀಲ ರಾಜಾ ಯುಧಿಷ್ಠಿರನೂ ಮತ್ತು ಹಾಗೆಯೇ ತಮ್ಮ ಬೀಭತ್ಸುವೂ ಆ ಮಾಹಾಬಾಹುವನ್ನು ಸಮಾಧಾನಪಡಿಸಿ ಅವನಲ್ಲಿ ನಿನ್ನ ಕುರಿತು ಸೌಹಾರ್ದತೆಯನ್ನು ಸ್ಥಾಪಿಸಿದ್ದಾರೆ.

15019007a ನ ಚ ಮನ್ಯುಸ್ತ್ವಯಾ ಕಾರ್ಯ ಇತಿ ತ್ವಾಂ ಪ್ರಾಹ ಧರ್ಮರಾಟ್|

15019007c ಸಂಸ್ಮೃತ್ಯ ಭೀಮಸ್ತದ್ವೈರಂ ಯದನ್ಯಾಯವದಾಚರೇತ್||

ಆ ವೈರವನ್ನು ಸ್ಮರಿಸಿಕೊಳ್ಳುತ್ತಿರುವ ಭೀಮನು ನಿನ್ನೊಡನೆ ಅನ್ಯಾಯವಾಗಿ ವರ್ತಿಸಿದುದಕ್ಕಾಗಿ ನೀನು ಅವನ ಮೇಲೆ ಸಿಟ್ಟಾಗಬಾರದು ಎಂದೂ ಧರ್ಮರಾಜನು ಹೇಳಿ ಕಳುಹಿಸಿದ್ದಾನೆ.

15019008a ಏವಂಪ್ರಾಯೋ ಹಿ ಧರ್ಮೋಽಯಂ ಕ್ಷತ್ರಿಯಾಣಾಂ ನರಾಧಿಪ|

15019008c ಯುದ್ಧೇ ಕ್ಷತ್ರಿಯಧರ್ಮೇ ಚ ನಿರತೋಽಯಂ ವೃಕೋದರಃ||

“ನರಾಧಿಪ! ಪ್ರಾಯಶಃ ಕ್ಷತ್ರಿಯರ ಧರ್ಮವೇ ಹೀಗಿದ್ದಿರಬಹುದು. ವೃಕೋದರನು ಯುದ್ಧದಲ್ಲಿ ಸದಾ ಕ್ಷತ್ರಿಯ ಧರ್ಮವನ್ನೇ ಆಚರಿಸಿದವನು.

15019009a ವೃಕೋದರಕೃತೇ ಚಾಹಮರ್ಜುನಶ್ಚ ಪುನಃ ಪುನಃ|

15019009c ಪ್ರಸಾದಯಾವ ನೃಪತೇ ಭವಾನ್ಪ್ರಭುರಿಹಾಸ್ತಿ ಯತ್||

ನೃಪತೇ! ನಾನು ಮತ್ತು ಅರ್ಜುನರು ಪುನಃ ಪುನಃ ಕೇಳಿಕೊಳ್ಳುತ್ತಿದ್ದೇವೆ. ವೃಕೋದರನು ಮಾಡಿದುದನ್ನು ಕ್ಷಮಿಸಿಬಿಡು. ನೀನೇ ನಮಗೆ ಪ್ರಭುವು.

15019010a ಪ್ರದದಾತು ಭವಾನ್ವಿತ್ತಂ ಯಾವದಿಚ್ಚಸಿ ಪಾರ್ಥಿವ|

15019010c ತ್ವಮೀಶ್ವರೋ ನೋ ರಾಜ್ಯಸ್ಯ ಪ್ರಾಣಾನಾಂ ಚೇತಿ ಭಾರತ||

ಪಾರ್ಥಿವ! ಭಾರತ! ನಿನಗಿಷ್ಟವಿದ್ದಷ್ಟು ವಿತ್ತವನ್ನು ದಾನಮಾಡು. ನಮ್ಮ ಈ ರಾಜ್ಯ-ಪ್ರಾಣಗಳಿಗೆ ನೀನೇ ಈಶ್ವರನಾಗಿರುವೆ!

15019011a ಬ್ರಹ್ಮದೇಯಾಗ್ರಹಾರಾಂಶ್ಚ ಪುತ್ರಾಣಾಂ ಚೌರ್ಧ್ವದೇಹಿಕಮ್|

15019011c ಇತೋ ರತ್ನಾನಿ ಗಾಶ್ಚೈವ ದಾಸೀದಾಸಮಜಾವಿಕಮ್||

ಮಕ್ಕಳ ಶ್ರಾದ್ಧದ ಸಲುವಾಗಿ ಬ್ರಾಹ್ಮಣರಿಗೆ ಅಗ್ರಹಾರಗಳನ್ನೂ, ರತ್ನಗಳನ್ನೂ, ಗೋವುಗಳನ್ನೂ, ದಾಸಿ-ದಾಸರನ್ನೂ, ಆಡು-ಕುರಿಗಳನ್ನೂ ದಾನಮಾಡು!

15019012a ಆನಯಿತ್ವಾ ಕುರುಶ್ರೇಷ್ಠೋ ಬ್ರಾಹ್ಮಣೇಭ್ಯಃ ಪ್ರಯಚ್ಚತು|

15019012c ದೀನಾಂಧಕೃಪಣೇಭ್ಯಶ್ಚ ತತ್ರ ತತ್ರ ನೃಪಾಜ್ಞಯಾ||

15019013a ಬಹ್ವನ್ನರಸಪಾನಾಢ್ಯಾಃ ಸಭಾ ವಿದುರ ಕಾರಯ|

15019013c ಗವಾಂ ನಿಪಾನಾನ್ಯನ್ಯಚ್ಚ ವಿವಿಧಂ ಪುಣ್ಯಕರ್ಮ ಯತ್||

ಕುರುಶ್ರೇಷ್ಠನು ಬ್ರಾಹ್ಮಣರನ್ನು ಕರೆ-ಕರೆದು ದಾನಮಾಡಲಿ. ವಿದುರ! ನೀನು ನೃಪನ ಆಜ್ಞೆಯಂತೆ ದೀನ-ಅಂಧ-ಕೃಪಣರಿಗೆ ಅಲ್ಲಲ್ಲಿ ಅನೇಕ ಅನ್ನ-ರಸ-ಪಾನೀಯಗಳ ಶಿಬಿರಗಳನ್ನು ನಿರ್ಮಿಸು. ಹಸುಗಳಿಗೆ ನೀರು ಕುಡಿಯಲು ನೀರಿನ ತೊಟ್ಟಿಗಳನ್ನು ನಿರ್ಮಿಸು ಮತ್ತು ವಿವಿಧ ಪುಣ್ಯಕರ್ಮಗಳನ್ನು ನಿಯೋಜಿಸು.”

15019014a ಇತಿ ಮಾಮಬ್ರವೀದ್ರಾಜಾ ಪಾರ್ಥಶ್ಚೈವ ಧನಂಜಯಃ|

15019014c ಯದತ್ರಾನಂತರಂ ಕಾರ್ಯಂ ತದ್ಭವಾನ್ವಕ್ತುಮರ್ಹತಿ||

ಹೀಗೆ ನನಗೆ ರಾಜಾ ಮತ್ತು ಪಾರ್ಥ ಧನಂಜಯರು ಹೇಳಿದರು. ಇದರ ನಂತರದ ಕಾರ್ಯವನ್ನು ನೀನು ಹೇಳಬೇಕು!”

15019015a ಇತ್ಯುಕ್ತೋ ವಿದುರೇಣಾಥ ಧೃತರಾಷ್ಟ್ರೋಽಭಿನಂದ್ಯ ತತ್|

15019015c ಮನಶ್ಚಕ್ರೇ ಮಹಾದಾನೇ ಕಾರ್ತ್ತಿಕ್ಯಾಂ ಜನಮೇಜಯ||

ಜನಮೇಜಯ! ವಿದುರನು ಹೀಗೆ ಹೇಳಲು ಧೃತರಾಷ್ಟ್ರನು ಪಾಂಡವರನ್ನು ಪ್ರಶಂಸಿಸಿದನು. ಕಾರ್ತೀಕ ಮಾಸದಲ್ಲಿ ಮಹಾದಾನವನ್ನು ಮಾಡಲು ನಿಶ್ಚಯಿಸಿದನು.”

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ವಿದುರವಾಕ್ಯೇ ಏಕೋನವಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ವಿದುರವಾಕ್ಯ ಎನ್ನುವ ಹತ್ತೊಂಭತ್ತನೇ ಅಧ್ಯಾಯವು.

Related image

Comments are closed.