Aranyaka Parva: Chapter 99

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೯೯

ವೃತ್ರಾಸುರವಧೆ (೧-೧೫). ಸೋತ ಕಾಲೇಯರು ಸಮುದ್ರದಲ್ಲಿ ಅಡಗಿಕೊಂಡಿದುದು (೧೬-೨೧).

03099001 ಲೋಮಶ ಉವಾಚ|

03099001a ತತಃ ಸ ವಜ್ರೀ ಬಲಿಭಿರ್ದೈವತೈರಭಿರಕ್ಷಿತಃ|

03099001c ಆಸಸಾದ ತತೋ ವೃತ್ರಂ ಸ್ಥಿತಮಾವೃತ್ಯ ರೋದಸೀ||

03099002a ಕಾಲಕೇಯೈರ್ಮಹಾಕಾಯೈಃ ಸಮಂತಾದಭಿರಕ್ಷಿತಂ|

03099002c ಸಮುದ್ಯತಪ್ರಹರಣೈಃ ಸಶೃಂಗೈರಿವ ಪರ್ವತೈಃ||

ಲೋಮಶನು ಹೇಳಿದನು: “ಅನಂತರ ಆ ವಜ್ರಿಯು ಬಲಶಾಲಿ ದೇವತೆಗಳ ರಕ್ಷಣೆಯಲ್ಲಿ ಪರ್ವತ ಶೃಂಗಗಳಂತೆ ಮಹಾಕಾಯರಾದ, ಆಯುಧಗಳನ್ನು ಎತ್ತಿಹಿಡಿದ ಕಾಲಕೇಯರ ಒಗ್ಗಟ್ಟಿನ ರಕ್ಷಣೆಯಲ್ಲಿ ಭೂಮಿ ಮತ್ತು ಸ್ವರ್ಗಗಳನ್ನು ಆವರಿಸಿ ಬರುತ್ತಿರುವ ವೃತ್ರನನ್ನು ಎದುರಿಸಿದನು.

03099003a ತತೋ ಯುದ್ಧಂ ಸಮಭವದ್ದೇವಾನಾಂ ಸಹ ದಾನವೈಃ|

03099003c ಮುಹೂರ್ತಂ ಭರತಶ್ರೇಷ್ಠ ಲೋಕತ್ರಾಸಕರಂ ಮಹತ್||

ಭರತಶ್ರೇಷ್ಠ! ತಕ್ಷಣವೇ ದೇವತೆಗಳೊಂದಿಗೆ ದಾನವರ ಲೋಕಕ್ಕೇ ಮಹಾ ಸಂಕಟವನ್ನು ತಂದ ಯುದ್ಧವು ಪ್ರಾರಂಭವಾಯಿತು.

03099004a ಉದ್ಯತಪ್ರತಿಪಿಷ್ಟಾನಾಂ ಖಡ್ಗಾನಾಂ ವೀರಬಾಹುಭಿಃ|

03099004c ಆಸೀತ್ಸುತುಮುಲಃ ಶಬ್ಧಃ ಶರೀರೇಷ್ವಭಿಪಾತ್ಯತಾಂ||

ತಮ್ಮ ವೀರಬಾಹುಗಳಿಂದ ಖಡ್ಗಗಳನ್ನು ಮೇಲೆತ್ತಿ, ಗುಂಪಾಗಿ ಯುದ್ಧಕ್ಕೆ ಬಂದು ಎರಗುವಾಗ ಪರಸ್ಪರರ ಶರೀರಗಳು ಒಂದಕ್ಕೊಂದು ತಾಗಿ ಶಬ್ಧದ ತುಮುಲವುಂಟಾಯಿತು.

03099005a ಶಿರೋಭಿಃ ಪ್ರಪತದ್ಭಿಶ್ಚ ಅಂತರಿಕ್ಷಾನ್ಮಹೀತಲಂ|

03099005c ತಾಲೈರಿವ ಮಹೀಪಾಲ ವೃಂತಾದ್ಭ್ರಷ್ಟೈರದೃಶ್ಯತ||

ಅಂತರಿಕ್ಷದಿಂದ ಭೂಮಿಯ ಮೇಲೆ ಉರುಳುತ್ತಿದ್ದ ಶಿರಗಳು ತಾಲವೃಕ್ಷದಿಂದ ಉದುರಿ ಕೆಳಗೆ ಬೀಳುತ್ತಿದ್ದ ತಾಳೆಕಾಯಿಗಳಂತೆ ಕಂಡವು.

03099006a ತೇ ಹೇಮಕವಚಾ ಭೂತ್ವಾ ಕಾಲೇಯಾಃ ಪರಿಘಾಯುಧಾಃ|

03099006c ತ್ರಿದಶಾನಭ್ಯವರ್ತಂತ ದಾವದಗ್ಧಾ ಇವಾದ್ರಯಃ||

ಬಂಗಾರದ ಕವಚಗಳನ್ನು ಧರಿಸಿದ್ದ ಕಾಲಕೇಯರು ಪರಿಘಾಯುಧಗಳನ್ನು ಹಿಡಿದು ಬೆಟ್ಟಕ್ಕೆ ತಗುಲಿದ ಕಾಡ್ಗಿಚ್ಚಿನಂತೆ ದೇವತೆಗಳಮೇಲೆ ಎರಗಿದರು.

03099007a ತೇಷಾಂ ವೇಗವತಾಂ ವೇಗಂ ಸಹಿತಾನಾಂ ಪ್ರಧಾವತಾಂ|

03099007c ನ ಶೇಕುಸ್ತ್ರಿದಶಾಃ ಸೋಢುಂ ತೇ ಭಗ್ನಾಃ ಪ್ರಾದ್ರವನ್ಭಯಾತ್||

ವೇಗದಿಂದ ಓಡಿ ಬರುತ್ತಿರುವ ಅವರ ವೇಗವನ್ನು ಸಹಿಸಲಾರದೇ, ಅವರ ಸೇನೆಯನ್ನು ಒಡೆದು ಮುನ್ನುಗ್ಗಲಾರದೇ ದೇವತೆಗಳ ಸೇನೆಯು ಒಡೆದು ಭಯದಿಂದ ಪಲಾಯನಗೈಯಿತು.

03099008a ತಾನ್ದೃಷ್ಟ್ವಾ ದ್ರವತೋ ಭೀತಾನ್ಸಹಸ್ರಾಕ್ಷಃ ಪುರಂದರಃ|

03099008c ವೃತ್ರೇ ವಿವರ್ಧಮಾನೇ ಚ ಕಶ್ಮಲಂ ಮಹದಾವಿಶತ್||

ಭಯಭೀತರಾಗಿ ಈ ರೀತಿ ಅವರು ಪಲಾಯನಮಾಡುತ್ತಿರುವುದನ್ನು ಮತ್ತು ವೃತ್ರನು ಇನ್ನೂ ಅಧಿಕವಾಗಿ ಬೆಳೆಯುತ್ತಿರುವುದನ್ನು ಕಂಡ ಸಹಸ್ರಾಕ್ಷ ಪುರಂದರನು ಅತೀವ ದುಃಖಪರನಾದನು.

03099009a ತಂ ಶಕ್ರಂ ಕಶ್ಮಲಾವಿಷ್ಟಂ ದೃಷ್ಟ್ವಾ ವಿಷ್ಣುಃ ಸನಾತನಃ|

03099009c ಸ್ವತೇಜೋ ವ್ಯದಧಾಚ್ಛಕ್ರೇ ಬಲಮಸ್ಯ ವಿವರ್ಧಯನ್||

ಕುಗ್ಗುತ್ತಿರುವ ಶಕ್ರನನ್ನು ನೋಡಿದ ಸನಾತನ ವಿಷ್ಣುವು ತನ್ನದೇ ತೇಜಸ್ಸನ್ನಿತ್ತು ಶಕ್ರನ ಬಲವನ್ನು ಹೆಚ್ಚಿಸಿದನು.

03099010a ವಿಷ್ಣುನಾಪ್ಯಾಯಿತಂ ಶಕ್ರಂ ದೃಷ್ಟ್ವಾ ದೇವಗಣಾಸ್ತತಃ|

03099010c ಸ್ವಂ ಸ್ವಂ ತೇಜಃ ಸಮಾದಧ್ಯುಸ್ತಥಾ ಬ್ರಹ್ಮರ್ಷಯೋಽಮಲಾಃ||

ವಿಷ್ಣುವಿನಿಂದ ವೃದ್ಧಿಹೊಂದಿದ ಶಕ್ರನನ್ನು ನೋಡಿ ದೇವಗಣಗಳು ಮತ್ತು ಅಮಲ ಬ್ರಹ್ಮರ್ಷಿಗಳು ತಮ್ಮ ತಮ್ಮ ತೇಜಸ್ಸನ್ನು ಅವನಿಗೆ ನೀಡಿದರು. 

03099011a ಸ ಸಮಾಪ್ಯಾಯಿತಃ ಶಕ್ರೋ ವಿಷ್ಣುನಾ ದೈವತೈಃ ಸಹ|

03099011c ಋಷಿಭಿಶ್ಚ ಮಹಾಭಾಗೈರ್ಬಲವಾನ್ಸಮಪದ್ಯತ||

ವಿಷ್ಣು, ದೇವತೆಗಳು ಮತ್ತು ಮಹಾಭಾಗ ಋಷಿಗಳ ಸಹಾಯದಿಂದ ಶಕ್ರನ ಬಲವು ವೃದ್ಧಿಸಿತು.

03099012a ಜ್ಞಾತ್ವಾ ಬಲಸ್ಥಂ ತ್ರಿದಶಾಧಿಪಂ ತು|

        ನನಾದ ವೃತ್ರೋ ಮಹತೋ ನಿನಾದಾನ್|

03099012c ತಸ್ಯ ಪ್ರಣಾದೇನ ಧರಾ ದಿಶಶ್ಚ|

        ಖಂ ದ್ಯೌರ್ನಗಾಶ್ಚಾಪಿ ಚಚಾಲ ಸರ್ವಂ||

ತ್ರಿದಶಾಧಿಪನು ಬಲಶಾಲಿಯಾದುದನ್ನು ತಿಳಿದ ವೃತ್ರನು ಮಹಾ ಗರ್ಜನೆಯನ್ನು ಗೈದನು. ಅವನ ನಿನಾದದಿಂದ ಭೂಮಿ, ದಿಕ್ಕುಗಳು, ಆಕಾಶ, ಸ್ವರ್ಗ ಮತ್ತು ಪರ್ವತಗಳು ಎಲ್ಲವೂ ತತ್ತರಿಸಿ ನಡುಗಿದವು.

03099013a ತತೋ ಮಹೇಂದ್ರಃ ಪರಮಾಭಿತಪ್ತಃ|

        ಶ್ರುತ್ವಾ ರವಂ ಘೋರರೂಪಂ ಮಹಾಂತಂ|

03099013c ಭಯೇ ನಿಮಗ್ನಸ್ತ್ವರಿತಂ ಮುಮೋಚ|

        ವಜ್ರಂ ಮಹತ್ತಸ್ಯ ವಧಾಯ ರಾಜನ್||

ಆ ಘೋರರೂಪೀ ಮಹಾಕಾಯನ ರವವನ್ನು ಕೇಳಿದ ಪರಮಭೀತಪ್ತ ಮಹೇಂದ್ರನು ಭಯದಿಂದ ಅವಸರದಲ್ಲಿ ಅವನ ವಧೆಗೆಂದು ಮಹಾ ವಜ್ರವನ್ನು ಬಿಟ್ಟನು.

03099014a ಸ ಶಕ್ರವಜ್ರಾಭಿಹತಃ ಪಪಾತ|

        ಮಹಾಸುರಃ ಕಾಂಚನಮಾಲ್ಯಧಾರೀ|

03099014c ಯಥಾ ಮಹಾಂ ಶೈಲವರಃ ಪುರಸ್ತಾತ್|

        ಸ ಮಂದರೋ ವಿಷ್ಣುಕರಾತ್ಪ್ರಮುಕ್ತಃ||

ಆ ಕಾಂಚನಮಾಲಧಾರಿ ಮಹಾಸುರನು ಶಕ್ರನ ವಜ್ರದಿಂದ ಹೊಡೆಯಲ್ಪಟ್ಟು, ಹಿಂದೆ ಪರ್ವತಗಳಲ್ಲಿ ಶ್ರೇಷ್ಠ ಮಹಾ ಪರ್ವತ ಮಂದರವು ವಿಷ್ಣುವಿನ ಕೈಯಿಂದ ಕಳಚಿ ಬಿದ್ದಂತೆ ಕೆಳಗುರುಳಿದನು.

03099015a ತಸ್ಮಿನ್ ಹತೇ ದೈತ್ಯವರೇ ಭಯಾರ್ತಃ|

        ಶಕ್ರಃ ಪ್ರದುದ್ರಾವ ಸರಃ ಪ್ರವೇಷ್ಟುಂ|

03099015c ವಜ್ರಂ ನ ಮೇನೇ ಸ್ವಕರಾತ್ಪ್ರಮುಕ್ತಂ|

        ವೃತ್ರಂ ಹತಂ ಚಾಪಿ ಭಯಾನ್ನ ಮೇನೇ||

ಆ ದೈತ್ರಶ್ರೇಷ್ಠನು ಹತನಾದರೂ ಭಯಾರ್ತನಾದ ಶಕ್ರನು ಸರೋವರಕ್ಕೆ ಧುಮುಕಿ ಮುಳುಗಿದನು. ತನ್ನ ಕೈಯಿಂದಲೇ ಪ್ರಯೋಗಿಸಿದ್ದ ವಜ್ರವು ವೃತ್ರನನ್ನು ಕೊಲ್ಲುತ್ತದೆ ಎನ್ನುವುದರಲ್ಲಿ ನಂಬಿಕೆ ಇಲ್ಲದೆ ಭಯದಲ್ಲಿ ಹಾಗೆ ಮಾಡಿದನು.

03099016a ಸರ್ವೇ ಚ ದೇವಾ ಮುದಿತಾಃ ಪ್ರಹೃಷ್ಟಾ|

        ಮಹರ್ಷಯಶ್ಚೇಂದ್ರಮಭಿಷ್ಟುವಂತಃ|

03099016c ಸರ್ವಾಂಶ್ಚ ದೈತ್ಯಾಂಸ್ತ್ವರಿತಾಃ ಸಮೇತ್ಯ|

        ಜಘ್ನುಃ ಸುರಾ ವೃತ್ರವಧಾಭಿತಪ್ತಾನ್||

ದೇವತೆಗಳೆಲ್ಲರೂ ಸಂತೋಷದಿಂದ ನಲಿದಾಡಿದರು. ಮಹರ್ಷಿಗಳು ಇಂದ್ರನನ್ನು ಕೊಂಡಾಡಿದರು. ಬೇಗನೇ ಎಲ್ಲ ಸುರರೂ ಸೇರಿ ವೃತ್ರನ ವಧೆಯಿಂದ ಪರಿತಪಿಸುತ್ತಿದ್ದ ದೈತ್ಯರನ್ನು ಸಂಹರಿಸಿದರು.

03099017a ತೇ ವಧ್ಯಮಾನಾಸ್ತ್ರಿದಶೈಸ್ತದಾನೀಂ|

        ಸಮುದ್ರಮೇವಾವಿವಿಶುರ್ಭಯಾರ್ತಾಃ|

03099017c ಪ್ರವಿಶ್ಯ ಚೈವೋದಧಿಮಪ್ರಮೇಯಂ|

        ಝಷಾಕುಲಂ ರತ್ನಸಮಾಕುಲಂ ಚ||

ದೇವತೆಗಳಿಂದ ಹತರಾಗುತ್ತಿದ್ದ ಅವರು ಭಯಾರ್ತರಾಗಿ ಸಮುದ್ರವನ್ನು ಪ್ರವೇಶಿಸಿದರು. ರತ್ನದಿಂದೊಡಗೂಡಿದ, ತಿಮಿಂಗಿಲ ಸಂಕುಲಗಳಿಂದೊಡಗೂಡಿದ ಅಳತೆಯೇ ಇಲ್ಲದ ಆಳವನ್ನು ಪ್ರವೇಶಿಸಿದರು. 

03099018a ತದಾ ಸ್ಮ ಮಂತ್ರಂ ಸಹಿತಾಃ ಪ್ರಚಕ್ರುಸ್|

        ತ್ರೈಲೋಕ್ಯನಾಶಾರ್ಥಮಭಿಸ್ಮಯಂತಃ|

03099018c ತತ್ರ ಸ್ಮ ಕೇ ಚಿನ್ಮತಿನಿಶ್ಚಯಜ್ಞಾಸ್|

        ತಾಂಸ್ತಾನುಪಾಯಾನನುವರ್ಣಯಂತಿ||

ಅಲ್ಲಿ ಎಲ್ಲರೂ ಒಟ್ಟಿಗೆ ನಸುನಗುತ್ತಾ ಮೂರೂ ಲೋಕಗಳ ವಿನಾಶಾರ್ಥವಾಗಿ ಮಂತ್ರಾಲೋಚನೆ ಮಾಡಿದರು. ಅಲ್ಲಿ ಕೆಲವರು ಯೋಚಿಸಿ ನಿರ್ಧರಿಸುವವರಿದ್ದರೆ ಇತರರು ಆ ಉಪಾಯಗಳನ್ನು ಅನುಸರಿಸಿ ಕಾರ್ಯಗತಗೊಳಿಸುವವರಿದ್ದರು.

03099019a ತೇಷಾಂ ತು ತತ್ರ ಕ್ರಮಕಾಲಯೋಗಾದ್|

        ಘೋರಾ ಮತಿಶ್ಚಿಂತಯತಾಂ ಬಭೂವ|

03099019c ಯೇ ಸಂತಿ ವಿದ್ಯಾತಪಸೋಪಪನ್ನಾಸ್|

        ತೇಷಾಂ ವಿನಾಶಃ ಪ್ರಥಮಂ ತು ಕಾರ್ಯಃ||

ಅಲ್ಲಿ ಚಿಂತಿಸಿದ ವಿಚಾರಗಳು ಕ್ರಮೇಣ ಕಾಲಯೋಗದಂತೆ ಘೋರವಾಯಿತು. ವಿದ್ಯೆ ತಪಸ್ಸಿನಲ್ಲಿ ನಿರತರಾದರ ವಿನಾಶವು ಮೊಟ್ಟ ಮೊದ  ಕಾರ್ಯವಾಗಬೇಕೆಂದು ನಿಶ್ಚಯಿಸಿದರು.

03099020a ಲೋಕಾ ಹಿ ಸರ್ವೇ ತಪಸಾ ಧ್ರಿಯಂತೇ|

        ತಸ್ಮಾತ್ತ್ವರಧ್ವಂ ತಪಸಃ ಕ್ಷಯಾಯ|

03099020c ಯೇ ಸಂತಿ ಕೇ ಚಿದ್ಧಿ ವಸುಂಧರಾಯಾಂ|

        ತಪಸ್ವಿನೋ ಧರ್ಮವಿದಶ್ಚ ತಜ್ಜ್ಞಾಃ||

03099020e ತೇಷಾಂ ವಧಃ ಕ್ರಿಯತಾಂ ಕ್ಷಿಪ್ರಮೇವ|

        ತೇಷು ಪ್ರನಷ್ಟೇಷು ಜಗತ್ಪ್ರನಷ್ಟಂ|

“ತಪಸ್ಸೇ ಈ ಸರ್ವ ಲೋಕಗಳನ್ನು ನಡೆಸುತ್ತಿದೆ. ಆದುದರಿಂದ ತಪಸ್ಸನ್ನು ನಾಶಪಡಿಸಲು ಅವಸರ ಮಾಡಬೇಕು. ಈ ಭೂಮಿಯಲ್ಲಿ ಎಷ್ಟು ಮಂದಿ ಯಾರ್ಯಾರು ಧರ್ಮವಿದುಗಳು, ತಪಸ್ವಿಗಳು, ತಿಳಿದಿರುವವರು ಇದ್ದಾರೋ ಅವರೆಲ್ಲರನ್ನೂ ಕ್ಷಿಪ್ರವಾಗಿ ವಧಿಸಬೇಕು. ಅವರು ನಾಶವಾದರೆ ಜಗತ್ತೇ ನಾಶವಾಗುತ್ತದೆ.”

03099021a ಏವಂ ಹಿ ಸರ್ವೇ ಗತಬುದ್ಧಿಭಾವಾ|

        ಜಗದ್ವಿನಾಶೇ ಪರಮಪ್ರಹೃಷ್ಟಾಃ||

03099021c ದುರ್ಗಂ ಸಮಾಶ್ರಿತ್ಯ ಮಹೋರ್ಮಿಮಂತಂ|

        ರತ್ನಾಕರಂ ವರುಣಸ್ಯಾಲಯಂ ಸ್ಮ|

ಈ ರೀತಿ ಸಂತೋಷದಿಂದ ಜಗತ್ತಿನ ವಿನಾಶವನ್ನು ನಿರ್ಧರಿಸಿದ ಅವರೆಲ್ಲರೂ ರತ್ನಾಕರ ವರುಣಾಲಯವನ್ನು ತಮ್ಮ ಮಹಾ ಕೋಟೆಯನ್ನಾಗಿಸಿ ಆಶ್ರಯ ಹೊಂದಿದರು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ಏಕೋನಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ತೊಂಭತ್ತೊಂಭತ್ತನೆಯ ಅಧ್ಯಾಯವು.

Related image

Kannada translation of Tirthayatra Parva, by Chapter:
  1. ಪಾರ್ಥನಾರದಸಂವಾದ
  2. ಪುಲಸ್ತ್ಯತೀರ್ಥಯಾತ್ರಾ-೧
  3. ಪುಲಸ್ತ್ಯತೀರ್ಥಯಾತ್ರಾ-೨
  4. ಪುಲಸ್ತ್ಯತೀರ್ಥಯಾತ್ರಾ-೩
  5. ಧೌಮ್ಯತೀರ್ಥಯಾತ್ರಾ-೧
  6. ಧೌಮ್ಯತೀರ್ಥಯಾತ್ರಾ-೨
  7. ಧೌಮ್ಯತೀರ್ಥಯಾತ್ರಾ-೩
  8. ಧೌಮ್ಯತೀರ್ಥಯಾತ್ರಾ-೪
  9. ಧೌಮ್ಯತೀರ್ಥಯಾತ್ರಾ-೫
  10. ಲೋಮಶಸಂವಾದ-೧
  11. ಲೋಮಶಸಂವಾದ-೨
  12. ಲೋಮಶತೀರ್ಥಯಾತ್ರಾ
  13. ಲೋಮಶತೀರ್ಥಯಾತ್ರಾ
  14. ಲೋಮಶತೀರ್ಥಯಾತ್ರಾ
  15. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೧
  16. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೨
  17. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೩
  18. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೪
  19. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೫
  20. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೬
  21. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೭
  22. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೮
  23. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೯
  24. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೧೦
  25. ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೧
  26. ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೨
  27. ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೩
  28. ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೪
  29. ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೫
  30. ಲೋಮಶತೀರ್ಥಯಾತ್ರಾ
  31. ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೧
  32. ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೨
  33. ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೩
  34. ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೪
  35. ಲೋಮಶತೀರ್ಥಯಾತ್ರಾ - ಮಹೇಂದ್ರಾಚಲಗಮನ
  36. ಲೋಮಶತೀರ್ಥಯಾತ್ರಾ – ಕಾರ್ತವೀರ್ಯೋಪಾಖ್ಯಾನ-೧
  37. ಲೋಮಶತೀರ್ಥಯಾತ್ರಾ – ಕಾರ್ತವೀರ್ಯೋಪಾಖ್ಯಾನ-೨
  38. ಲೋಮಶತೀರ್ಥಯಾತ್ರಾ – ಕಾರ್ತವೀರ್ಯೋಪಾಖ್ಯಾನ-೩
  39. ಲೋಮಶತೀರ್ಥಯಾತ್ರಾ – ಪ್ರಭಾಸೇಯಾದವಪಾಂಡವಸಮಾಗಮ-೧
  40. ಲೋಮಶತೀರ್ಥಯಾತ್ರಾ – ಪ್ರಭಾಸೇಯಾದವಪಾಂಡವಸಮಾಗಮ-೨
  41. ಲೋಮಶತೀರ್ಥಯಾತ್ರಾ – ಪ್ರಭಾಸೇಯಾದವಪಾಂಡವಸಮಾಗಮ-೩
  42. ಲೋಮಶತೀರ್ಥಯಾತ್ರಾ – ಸುಕನ್ಯಾ-೧
  43. ಲೋಮಶತೀರ್ಥಯಾತ್ರಾ – ಸುಕನ್ಯಾ-೨
  44. ಲೋಮಶತೀರ್ಥಯಾತ್ರಾ – ಸುಕನ್ಯಾ-೩
  45. ಲೋಮಶತೀರ್ಥಯಾತ್ರಾ – ಸುಕನ್ಯಾ-೪
  46. ಲೋಮಶತೀರ್ಥಯಾತ್ರಾ – ಸುಕನ್ಯಾ-೫
  47. ಲೋಮಶತೀರ್ಥಯಾತ್ರಾ – ಮಾಂಧಾತೋಪಾಖ್ಯಾನ
  48. ಲೋಮಶತೀರ್ಥಯಾತ್ರಾ – ಜಂತೂಪಾಖ್ಯಾನ-೧
  49. ಲೋಮಶತೀರ್ಥಯಾತ್ರಾ – ಜಂತೂಪಾಖ್ಯಾನ-೨
  50. ಲೋಮಶತೀರ್ಥಯಾತ್ರಾ
  51. ಲೋಮಶತೀರ್ಥಯಾತ್ರಾ-ಶ್ಯೇನಕಪೋತೀಯ-೧
  52. ಲೋಮಶತೀರ್ಥಯಾತ್ರಾ-ಶ್ಯೇನಕಪೋತೀಯ-೨
  53. ಲೋಮಶತೀರ್ಥಯಾತ್ರಾ-ಅಷ್ಟಾವಕ್ರೀಯ-೧
  54. ಲೋಮಶತೀರ್ಥಯಾತ್ರಾ-ಅಷ್ಟಾವಕ್ರೀಯ-೨
  55. ಲೋಮಶತೀರ್ಥಯಾತ್ರಾ-ಅಷ್ಟಾವಕ್ರೀಯ-೩
  56. ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೧
  57. ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೨
  58. ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೩
  59. ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೪
  60. ಲೋಮಶತೀರ್ಥಯಾತ್ರಾ-ಕೈಲಾಸಾದಿಗಿರಿಪ್ರವೇಶ
  61. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೧
  62. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೨
  63. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೩
  64. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೪
  65. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೫
  66. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೬
  67. ಲೋಮಶತೀರ್ಥಯಾತ್ರಾ-ಭೀಮಕದಲೀಶಂಡಪ್ರವೇಶ
  68. ಲೋಮಶತೀರ್ಥಯಾತ್ರಾ-ಹನುಮದ್ಭೀಮಸಂವಾದ-೧
  69. ಲೋಮಶತೀರ್ಥಯಾತ್ರಾ-ಹನುಮದ್ಭೀಮಸಂವಾದ-೨
  70. ಲೋಮಶತೀರ್ಥಯಾತ್ರಾ-ಹನುಮದ್ಭೀಮಸಂವಾದ-೩
  71. ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೧
  72. ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೨
  73. ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೩
  74. ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೪

Comments are closed.