Aranyaka Parva: Chapter 98

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೯೮

ವೃತ್ರನ ಆಶ್ರಯದಲ್ಲಿ ಕಾಲೇಯರೆಂಬ ಅಸುರರ ಬಾಧೆಗೊಳಗಾಗಿ ಸುರರು ಮೊರೆಬರಲು ಬ್ರಹ್ಮನು ಋಷಿ ದಧೀಚಿಯ ಅಸ್ತಿಗಳಿಂದ ತಯಾರಿಸಿದ ವಜ್ರಾಯುಧದಿಂದ ವೃತ್ರನ ವಧೆಯಾಗುವುದೆಂದು ಹೇಳುವುದು (೧-೧೧). ವಜ್ರಾಯುಧವನ್ನು ತಯಾರಿಸಿದುದು (೧೨-೨೪).

03098001 ಯುಧಿಷ್ಠಿರ ಉವಾಚ|

03098001a ಭೂಯ ಏವಾಹಮಿಚ್ಚಾಮಿ ಮಹರ್ಷೇಸ್ತಸ್ಯ ಧೀಮತಃ|

03098001c ಕರ್ಮಣಾಂ ವಿಸ್ತರಂ ಶ್ರೋತುಮಗಸ್ತ್ಯಸ್ಯ ದ್ವಿಜೋತ್ತಮ||

ಯುಧಿಷ್ಠಿರನು ಹೇಳಿದನು: “ದ್ವಿಜೋತ್ತಮ! ಆ ಧೀಮಂತ ಮಹರ್ಷಿ ಅಗಸ್ತ್ಯನ ಇನ್ನೂ ಇತರ ಕರ್ಮಗಳನ್ನು ವಿಸ್ತಾರವಾಗಿ ಕೇಳಬಯಸುತ್ತೇನೆ.”

03098002 ಲೋಮಶ ಉವಾಚ|

03098002a ಶೃಣು ರಾಜನ್ಕಥಾಂ ದಿವ್ಯಾಮದ್ಭುತಾಮತಿಮಾನುಷೀಂ|

03098002c ಅಗಸ್ತ್ಯಸ್ಯ ಮಹಾರಾಜ ಪ್ರಭಾವಮಮಿತಾತ್ಮನಃ||

ಲೋಮಶನು ಹೇಳಿದನು: “ರಾಜನ್! ಮಹಾರಾಜ! ದಿವ್ಯ, ಅದ್ಭುತ, ಅಮಾನುಷ ಬುದ್ಧಿಯುಳ್ಳ ಅಮಿತಾತ್ಮ ಅಗಸ್ತ್ಯನ ಪ್ರಭಾವದ ಕುರಿತು ಕೇಳು.

03098003a ಆಸನ್ಕೃತಯುಗೇ ಘೋರಾ ದಾನವಾ ಯುದ್ಧದುರ್ಮದಾಃ|

03098003c ಕಾಲೇಯಾ ಇತಿ ವಿಖ್ಯಾತಾ ಗಣಾಃ ಪರಮದಾರುಣಾಃ||

ಕೃತಯುಗದಲ್ಲಿ ಕಾಲೇಯರೆಂದು ವಿಖ್ಯಾತ ಯುದ್ಧ ದುರ್ಮದ ಘೋರ, ಪರಮ ದಾರುಣ ದಾನವರ ಗಣವಿತ್ತು.

03098004a ತೇ ತು ವೃತ್ರಂ ಸಮಾಶ್ರಿತ್ಯ ನಾನಾಪ್ರಹರಣೋದ್ಯತಾಃ|

03098004c ಸಮಂತಾತ್ಪರ್ಯಧಾವಂತ ಮಹೇಂದ್ರಪ್ರಮುಖಾನ್ಸುರಾನ್||

ಅವರೆಲ್ಲರೂ ಒಂದಾಗಿ ವೃತ್ರನ ಆಶ್ರಯದಲ್ಲಿ ನಾನಾ ಆಯುಧಗಳೊಂದಿಗೆ ದಂಗೆಯೆದ್ದು ಮಹೇಂದ್ರನ ನೇತೃತ್ವದಲ್ಲಿದ್ದ ಸುರರ ಮೇಲೆ ಧಾಳಿಮಾಡಿದರು.

03098005a ತತೋ ವೃತ್ರವಧೇ ಯತ್ನಮಕುರ್ವಂಸ್ತ್ರಿದಶಾಃ ಪುರಾ|

03098005c ಪುರಂದರಂ ಪುರಸ್ಕೃತ್ಯ ಬ್ರಹ್ಮಾಣಮುಪತಸ್ಥಿರೇ||

ಆಗ ವೃತ್ರನನ್ನು ಕೊಲ್ಲಲು ಮೊದಲೇ ಪ್ರಯತ್ನಮಾಡಿದ್ದ ಮೂವತ್ತು ದೇವತೆಗಳು ಪುರಂದರನನ್ನು ಮುಂದಿಟ್ಟುಕೊಂಡು ಬ್ರಹ್ಮನ ಉಪಸ್ಥಿತಿಗೆ ಬಂದರು.

03098006a ಕೃತಾಂಜಲೀಂಸ್ತು ತಾನ್ಸರ್ವಾನ್ಪರಮೇಷ್ಠೀ ಉವಾಚ ಹ|

03098006c ವಿದಿತಂ ಮೇ ಸುರಾಃ ಸರ್ವಂ ಯದ್ವಃ ಕಾರ್ಯಂ ಚಿಕೀರ್ಷಿತಂ||

ಕೈಜೋಡಿಸಿದ ಅವರೆಲ್ಲರಿಗೆ ಪರಮೇಷ್ಠಿಯು ಹೇಳಿದನು: “ಸುರರೇ! ನೀವು ಏನು ಮಾಡಬೇಕೆಂದಿರುವಿರೆಂದು ನನಗೆ ತಿಳಿದಿದೆ.

03098007a ತಮುಪಾಯಂ ಪ್ರವಕ್ಷ್ಯಾಮಿ ಯಥಾ ವೃತ್ರಂ ವಧಿಷ್ಯಥ|

03098007c ದಧೀಚ ಇತಿ ವಿಖ್ಯಾತೋ ಮಹಾನೃಷಿರುದಾರಧೀಃ||

ವೃತ್ರನನ್ನು ಕೊಲ್ಲುವ ಉಪಾಯವನ್ನು ಹೇಳುತ್ತೇನೆ. ದಧೀಚ ಎಂದು ವಿಖ್ಯಾತನಾದ ಉದಾರಬುದ್ಧಿಯ ಮಹಾ ಋಷಿಯಿದ್ದಾನೆ.

03098008a ತಂ ಗತ್ವಾ ಸಹಿತಾಃ ಸರ್ವೇ ವರಂ ವೈ ಸಂಪ್ರಯಾಚತ|

03098008c ಸ ವೋ ದಾಸ್ಯತಿ ಧರ್ಮಾತ್ಮಾ ಸುಪ್ರೀತೇನಾಂತರಾತ್ಮನಾ||

ನೀವೆಲ್ಲರೂ ಅವನಲ್ಲಿಗೆ ಹೋಗಿ ವರವೊಂದನ್ನು ಕೇಳಿಕೊಳ್ಳಿ. ಆ ಧರ್ಮಾತ್ಮನು ಅಂತರಾತ್ಮದಲ್ಲಿಯ ಸಂತೋಷದಿಂದ ನಿಮಗೆ ಅದನ್ನು ನೀಡುತ್ತಾನೆ.

03098009a ಸ ವಾಚ್ಯಃ ಸಹಿತೈಃ ಸರ್ವೈರ್ಭವದ್ಭಿರ್ಜಯಕಾಂಕ್ಷಿಭಿಃ|

03098009c ಸ್ವಾನ್ಯಸ್ಥೀನಿ ಪ್ರಯಚ್ಚೇತಿ ತ್ರೈಲೋಕ್ಯಸ್ಯ ಹಿತಾಯ ವೈ|

03098009e ಸ ಶರೀರಂ ಸಮುತ್ಸೃಜ್ಯ ಸ್ವಾನ್ಯಸ್ಥೀನಿ ಪ್ರದಾಸ್ಯತಿ||

ನೀವು ಎಲ್ಲರೂ ಒಟ್ಟಿಗೇ ವಿಜಯಾಕಾಂಕ್ಷಿಗಳಾಗಿ ತ್ರಿಲೋಕಗಳ ಹಿತಕ್ಕಾಗಿ ನಿನ್ನ ಅಸ್ಥಿಯನ್ನು ಕೊಡು ಎಂದು ಕೇಳಿಕೊಂಡರೆ ಅವನು ತನ್ನ ಶರೀರವನ್ನು ತೊರೆದು ನಿಮಗೆ ಅವನ ಅಸ್ತಿಯನ್ನು ನೀಡುತ್ತಾನೆ.

03098010a ತಸ್ಯಾಸ್ಥಿಭಿರ್ಮಹಾಘೋರಂ ವಜ್ರಂ ಸಂಭ್ರಿಯತಾಂ ದೃಢಂ|

03098010c ಮಹಚ್ಛತ್ರುಹಣಂ ತೀಕ್ಷ್ಣಂ ಷಡಶ್ರಂ ಭೀಮನಿಸ್ವನಂ||

ಅವನ ಅಸ್ತಿಯಿಂದ ಮಹಾಘೋರ, ಧೃಢವಾದ, ತೀಕ್ಷ್ಣವಾದ, ಆರು ಅರಗಳುಳ್ಳ, ಭಯಂಕರ ಶಬ್ಧವನ್ನುಳ್ಳ ಮಹಾಶತ್ರುವನ್ನು ಸಂಹರಿಸಬಲ್ಲ ವಜ್ರಾಯುಧವನ್ನು ತಯಾರಿಸಿರಿ.

03098011a ತೇನ ವಜ್ರೇಣ ವೈ ವೃತ್ರಂ ವಧಿಷ್ಯತಿ ಶತಕ್ರತುಃ|

03098011c ಏತದ್ವಃ ಸರ್ವಮಾಖ್ಯಾತಂ ತಸ್ಮಾಚ್ಶೀಘ್ರಂ ವಿಧೀಯತಾಂ||

ಈ ವಜ್ರದಿಂದ ಶತಕ್ರತುವು ಆ ವೃತ್ರನನ್ನು ವಧಿಸುತ್ತಾನೆ. ನಿಮಗೆ ಎಲ್ಲವನ್ನೂ ಹೇಳಿ ತಿಳಿಸಿದ್ದೇನೆ. ಶೀಘ್ರದಲ್ಲಿಯೇ ಇದನ್ನು ಕಾರ್ಯಗತಗೊಳಿಸಿ.”

03098012a ಏವಮುಕ್ತಾಸ್ತತೋ ದೇವಾ ಅನುಜ್ಞಾಪ್ಯ ಪಿತಾಮಹಂ|

03098012c ನಾರಾಯಣಂ ಪುರಸ್ಕೃತ್ಯ ದಧೀಚಸ್ಯಾಶ್ರಮಂ ಯಯುಃ||

03098013a ಸರಸ್ವತ್ಯಾಃ ಪರೇ ಪಾರೇ ನಾನಾದ್ರುಮಲತಾವೃತಂ|

ಈ ರೀತಿ ಹೇಳಲು ದೇವತೆಗಳು ಪಿತಾಮಹನಿಂದ ಬೀಳ್ಕೊಂಡು ನಾರಾಯಣನನ್ನು ಮುಂದಿಟ್ಟುಕೊಂಡು ಸರಸ್ವತೀ ನದಿಯ ಆಚೆಯ ದಡದಲ್ಲಿರುವ ನಾನಾ ಮರ ಬಳ್ಳಿಗಳಿಂದ ಆವೃತವಾದ ದಧೀಚಿಯ ಆಶ್ರಮಕ್ಕೆ ಬಂದರು.

03098013c ಷಟ್ಪದೋದ್ಗೀತನಿನದೈರ್ವಿಘುಷ್ಟಂ ಸಾಮಗೈರಿವ||

03098013e ಪುಂಸ್ಕೋಕಿಲರವೋನ್ಮಿಶ್ರಂ ಜೀವಂಜೀವಕನಾದಿತಂ||

ಆ ಆಶ್ರಮವು ಸಾಮಗಾನದಂತಿರುವ ದುಂಬಿಗಳ ಗೀತನಾದದಿಂದ ತುಂಬಿತ್ತು. ಗಂಡು ಕೋಕಿಲಗಳ ಕಲರವದಿಂದ ಮಿಶ್ರಿತವಾಗಿತ್ತು ಮತ್ತು ಕೀಟಗಳ ಝೀಂಕಾರದಿಂದ ತುಂಬಿತ್ತು.

03098014a ಮಹಿಷೈಶ್ಚ ವರಾಹೈಶ್ಚ ಸೃಮರೈಶ್ಚಮರೈರಪಿ|

03098014c ತತ್ರ ತತ್ರಾನುಚರಿತಂ ಶಾರ್ದೂಲಭಯವರ್ಜಿತೈಃ||

ಅಲ್ಲಿ ಎಮ್ಮೆ, ಹಂದಿ, ಜಿಂಕೆಗಳು ಶಾರ್ದೂಲಗಳ ಭಯವನ್ನು ತೊರೆದು ಅಲ್ಲಲ್ಲಿ ಸಂಚರಿಸುತ್ತಿದ್ದವು.

03098015a ಕರೇಣುಭಿರ್ವಾರಣೈಶ್ಚ ಪ್ರಭಿನ್ನಕರಟಾಮುಖೈಃ|

03098015c ಸರೋಽವಗಾಢೈಃ ಕ್ರೀಡದ್ಭಿಃ ಸಮಂತಾದನುನಾದಿತಂ||

ಕೆನ್ನೆಗಳು ಒಡೆದು ಮದವನ್ನು ಸುರಿಸುತ್ತಿರುವ ಗಂಡು ಆನೆಗಳು ಹೆಣ್ಣು ಆನೆಗಳೊಂದಿಗೆ ಕೆರೆಗಳಲ್ಲಿ ಧುಮುಕಿ ಆಡುತ್ತಾ ಒಟ್ಟಿಗೇ ನಿನಾದಿಸುತ್ತಿದ್ದವು.

03098016a ಸಿಂಹವ್ಯಾಘ್ರೈರ್ಮಹಾನಾದಾನ್ನದದ್ಭಿರನುನಾದಿತಂ|

03098016c ಅಪರೈಶ್ಚಾಪಿ ಸಂಲೀನೈರ್ಗುಹಾಕಂದರವಾಸಿಭಿಃ||

ಸಿಂಹ, ಹುಲಿ ಮತ್ತು ಗುಹೆಗಳಲ್ಲಿ ವಾಸಿಸುವ ಇತರ ಪ್ರಾಣಿಗಳ ಮಹಾನಾದದಿಂದ ಆ ಆಶ್ರಮವು ಭೋರ್ಗರೆಯುತ್ತಿತ್ತು.

03098017a ತೇಷು ತೇಷ್ವವಕಾಶೇಷು ಶೋಭಿತಂ ಸುಮನೋರಮಂ|

03098017c ತ್ರಿವಿಷ್ಟಪಸಮಪ್ರಖ್ಯಂ ದಧೀಚಾಶ್ರಮಮಾಗಮನ್||

ಈ ರೀತಿ ಸುಮನೋಹರವಾಗಿ ಶೋಭಿಸುತ್ತಿದ್ದ ದಧೀಚಿಯ ಆಶ್ರಮಕ್ಕೆ ತ್ರಿವಿಷ್ಟಪರು ಆಗಮಿಸಿದರು.

03098018a ತತ್ರಾಪಶ್ಯನ್ದಧೀಚಂ ತೇ ದಿವಾಕರಸಮದ್ಯುತಿಂ|

03098018c ಜಾಜ್ವಲ್ಯಮಾನಂ ವಪುಷಾ ಯಥಾ ಲಕ್ಷ್ಮ್ಯಾ ಪಿತಾಮಹಂ||

ಅಲ್ಲಿ ದಿವಾಕರನಂತೆ ಬೆಳಗುತ್ತಿದ್ದ, ಲಕ್ಷ್ಮಿಯೊಂದಿಗೆ ಪಿತಾಮಹನಂತೆ ಜಾಜ್ವಲ್ಯಮಾನನಾದ ದಧೀಚಿಯನ್ನು ನೋಡಿದರು.

03098019a ತಸ್ಯ ಪಾದೌ ಸುರಾ ರಾಜನ್ನಭಿವಾದ್ಯ ಪ್ರಣಮ್ಯ ಚ|

03098019c ಅಯಾಚಂತ ವರಂ ಸರ್ವೇ ಯಥೋಕ್ತಂ ಪರಮೇಷ್ಠಿನಾ||

ರಾಜನ್! ಸುರರು ಅವನ ಪಾದಗಳಿಂದ ತಲೆಬಾಗಿ ವಂದಿಸಿದರು ಮತ್ತು ಅವರೆಲ್ಲರೂ ಪರಮೇಷ್ಠಿಯು ಹೇಳಿದಂತೆ ಅವನಲ್ಲಿ ವರವನ್ನು ಬೇಡಿದರು.

03098020a ತತೋ ದಧೀಚಃ ಪರಮಪ್ರತೀತಃ|

        ಸುರೋತ್ತಮಾಂಸ್ತಾನಿದಮಭ್ಯುವಾಚ|

03098020c ಕರೋಮಿ ಯದ್ವೋ ಹಿತಮದ್ಯ ದೇವಾಃ|

        ಸ್ವಂ ಚಾಪಿ ದೇಹಂ ತ್ವಹಮುತ್ಸೃಜಾಮಿ||

ಆಗ ಪರಮಪ್ರೀತನಾದ ದಧೀಚಿಯು ಆ ಸುರೋತ್ತಮರಿಗೆ ಹೇಳಿದನು: “ನಿಮಗೆ ಹಿತವಾದುದನ್ನು ನಾನು ಇಂದು ಮಾಡುತ್ತೇನೆ. ನಿಮಗೋಸ್ಕರ ನನ್ನ ದೇಹವನ್ನೂ ತ್ಯಜಿಸುತ್ತೇನೆ.”

03098021a ಸ ಏವಮುಕ್ತ್ವಾ ದ್ವಿಪದಾಂ ವರಿಷ್ಠಃ|

        ಪ್ರಾಣಾನ್ವಶೀ ಸ್ವಾನ್ಸಹಸೋತ್ಸಸರ್ಜ|

03098021c ತತಃ ಸುರಾಸ್ತೇ ಜಗೃಹುಃ ಪರಾಸೋರ್|

        ಅಸ್ಥೀನಿ ತಸ್ಯಾಥ ಯಥೋಪದೇಶಂ||

ಹೀಗೆ ಹೇಳಿದ ಆ ಮನುಷ್ಯರಲ್ಲಿಯೇ ಶ್ರೇಷ್ಠ ನಿಯಂತ್ರಕನು ತನ್ನ ಪ್ರಾಣವನ್ನು ತಕ್ಷಣವೇ ತ್ಯಜಿಸಿದನು. ಅನಂತರ ಸುರರು ಸಂತೋಷ ಮತ್ತು ಭರವಸೆಗಳೊಂದಿಗೆ ಅವನ ಅಸ್ತಿಯನ್ನು ಬ್ರಹ್ಮನ ಉಪದೇಶದಂತೆ ತೆಗೆದರು.

03098022a ಪ್ರಹೃಷ್ಟರೂಪಾಶ್ಚ ಜಯಾಯ ದೇವಾಸ್|

        ತ್ವಷ್ಟಾರಮಾಗಮ್ಯ ತಮರ್ಥಮೂಚುಃ|

03098022c ತ್ವಷ್ಟಾ ತು ತೇಷಾಂ ವಚನಂ ನಿಶಮ್ಯ|

        ಪ್ರಹೃಷ್ಟರೂಪಃ ಪ್ರಯತಃ ಪ್ರಯತ್ನಾತ್||

ಜಯವು ದೊರೆಯುವುದೆಂಬ ಸಂತೋಷದಿಂದ ದೇವತೆಗಳು ತ್ವಷ್ಟಾರನಲ್ಲಿಗೆ ಹೋಗಿ ಅವನಿಗೆ ವಿವರಿಸಿ ಹೇಳಿದರು. ಅವರ ವಚನವನ್ನು ಕೇಳಿದ ತ್ವಷ್ಟನು ಸಂತೋಷದಿಂದ, ಪ್ರಯತ್ನದಿಂದ ಕೆಲಸದಲ್ಲಿ ತೊಡಗಿದನು.

03098023a ಚಕಾರ ವಜ್ರಂ ಭೃಶಮುಗ್ರರೂಪಂ|

        ಕೃತ್ವಾ ಚ ಶಕ್ರಂ ಸ ಉವಾಚ ಹೃಷ್ಟಃ|

03098023c ಅನೇನ ವಜ್ರಪ್ರವರೇಣ ದೇವ|

        ಭಸ್ಮೀಕುರುಷ್ವಾದ್ಯ ಸುರಾರಿಮುಗ್ರಂ||

ಹರಿತವಾದ ಉಗ್ರರೂಪದ ಹರಿತ ವಜ್ರವನ್ನು ತಯಾರಿಸಿ ಸಂತೋಷದಿಂದ ಇಂದ್ರನಿಗೆ ಹೇಳಿದನು: “ದೇವ! ಈ ಶ್ರೇಷ್ಠ ವಜ್ರದಿಂದ ಉಗ್ರ ಸುರಾರಿಗಳನ್ನು ಇಂದು ಭಸ್ಮಮಾಡು!

03098024a ತತೋ ಹತಾರಿಃ ಸಗಣಃ ಸುಖಂ ವೈ|

        ಪ್ರಶಾಧಿ ಕೃತ್ಸ್ನಂ ತ್ರಿದಿವಂ ದಿವಿಷ್ಠಃ|

03098024c ತ್ವಷ್ಟ್ರಾ ತಥೋಕ್ತಃ ಸ ಪುರಂದರಸ್ತು|

        ವಜ್ರಂ ಪ್ರಹೃಷ್ಟಃ ಪ್ರಯತೋಽಭ್ಯಗೃಹ್ಣಾತ್||

ಅವರನ್ನು ಸಂಹರಿಸಿ ನೀನು ನಿನ್ನ ಗಣಗಳೊಂದಿಗೆ ತ್ರಿದಿವದಲ್ಲಿ ಸುಖವಾಗಿ ವಿರಾಜಿಸು.” ತ್ವಷ್ಟನು ಹೀಗೆ ಹೇಳಲು ಪುರಂದರನು ಸಂತೋಷದಿಂದ ವಿನೀತನಾಗಿ ವಜ್ರವನ್ನು ಹಿಡಿದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ಅಷ್ಟನವತಿತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ತೊಂಭತ್ತೆಂಟನೆಯ ಅಧ್ಯಾಯವು.

Related image

Kannada translation of Tirthayatra Parva, by Chapter:
  1. ಪಾರ್ಥನಾರದಸಂವಾದ
  2. ಪುಲಸ್ತ್ಯತೀರ್ಥಯಾತ್ರಾ-೧
  3. ಪುಲಸ್ತ್ಯತೀರ್ಥಯಾತ್ರಾ-೨
  4. ಪುಲಸ್ತ್ಯತೀರ್ಥಯಾತ್ರಾ-೩
  5. ಧೌಮ್ಯತೀರ್ಥಯಾತ್ರಾ-೧
  6. ಧೌಮ್ಯತೀರ್ಥಯಾತ್ರಾ-೨
  7. ಧೌಮ್ಯತೀರ್ಥಯಾತ್ರಾ-೩
  8. ಧೌಮ್ಯತೀರ್ಥಯಾತ್ರಾ-೪
  9. ಧೌಮ್ಯತೀರ್ಥಯಾತ್ರಾ-೫
  10. ಲೋಮಶಸಂವಾದ-೧
  11. ಲೋಮಶಸಂವಾದ-೨
  12. ಲೋಮಶತೀರ್ಥಯಾತ್ರಾ
  13. ಲೋಮಶತೀರ್ಥಯಾತ್ರಾ
  14. ಲೋಮಶತೀರ್ಥಯಾತ್ರಾ
  15. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೧
  16. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೨
  17. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೩
  18. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೪
  19. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೫
  20. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೬
  21. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೭
  22. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೮
  23. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೯
  24. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೧೦
  25. ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೧
  26. ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೨
  27. ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೩
  28. ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೪
  29. ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೫
  30. ಲೋಮಶತೀರ್ಥಯಾತ್ರಾ
  31. ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೧
  32. ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೨
  33. ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೩
  34. ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೪
  35. ಲೋಮಶತೀರ್ಥಯಾತ್ರಾ - ಮಹೇಂದ್ರಾಚಲಗಮನ
  36. ಲೋಮಶತೀರ್ಥಯಾತ್ರಾ – ಕಾರ್ತವೀರ್ಯೋಪಾಖ್ಯಾನ-೧
  37. ಲೋಮಶತೀರ್ಥಯಾತ್ರಾ – ಕಾರ್ತವೀರ್ಯೋಪಾಖ್ಯಾನ-೨
  38. ಲೋಮಶತೀರ್ಥಯಾತ್ರಾ – ಕಾರ್ತವೀರ್ಯೋಪಾಖ್ಯಾನ-೩
  39. ಲೋಮಶತೀರ್ಥಯಾತ್ರಾ – ಪ್ರಭಾಸೇಯಾದವಪಾಂಡವಸಮಾಗಮ-೧
  40. ಲೋಮಶತೀರ್ಥಯಾತ್ರಾ – ಪ್ರಭಾಸೇಯಾದವಪಾಂಡವಸಮಾಗಮ-೨
  41. ಲೋಮಶತೀರ್ಥಯಾತ್ರಾ – ಪ್ರಭಾಸೇಯಾದವಪಾಂಡವಸಮಾಗಮ-೩
  42. ಲೋಮಶತೀರ್ಥಯಾತ್ರಾ – ಸುಕನ್ಯಾ-೧
  43. ಲೋಮಶತೀರ್ಥಯಾತ್ರಾ – ಸುಕನ್ಯಾ-೨
  44. ಲೋಮಶತೀರ್ಥಯಾತ್ರಾ – ಸುಕನ್ಯಾ-೩
  45. ಲೋಮಶತೀರ್ಥಯಾತ್ರಾ – ಸುಕನ್ಯಾ-೪
  46. ಲೋಮಶತೀರ್ಥಯಾತ್ರಾ – ಸುಕನ್ಯಾ-೫
  47. ಲೋಮಶತೀರ್ಥಯಾತ್ರಾ – ಮಾಂಧಾತೋಪಾಖ್ಯಾನ
  48. ಲೋಮಶತೀರ್ಥಯಾತ್ರಾ – ಜಂತೂಪಾಖ್ಯಾನ-೧
  49. ಲೋಮಶತೀರ್ಥಯಾತ್ರಾ – ಜಂತೂಪಾಖ್ಯಾನ-೨
  50. ಲೋಮಶತೀರ್ಥಯಾತ್ರಾ
  51. ಲೋಮಶತೀರ್ಥಯಾತ್ರಾ-ಶ್ಯೇನಕಪೋತೀಯ-೧
  52. ಲೋಮಶತೀರ್ಥಯಾತ್ರಾ-ಶ್ಯೇನಕಪೋತೀಯ-೨
  53. ಲೋಮಶತೀರ್ಥಯಾತ್ರಾ-ಅಷ್ಟಾವಕ್ರೀಯ-೧
  54. ಲೋಮಶತೀರ್ಥಯಾತ್ರಾ-ಅಷ್ಟಾವಕ್ರೀಯ-೨
  55. ಲೋಮಶತೀರ್ಥಯಾತ್ರಾ-ಅಷ್ಟಾವಕ್ರೀಯ-೩
  56. ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೧
  57. ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೨
  58. ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೩
  59. ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೪
  60. ಲೋಮಶತೀರ್ಥಯಾತ್ರಾ-ಕೈಲಾಸಾದಿಗಿರಿಪ್ರವೇಶ
  61. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೧
  62. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೨
  63. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೩
  64. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೪
  65. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೫
  66. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೬
  67. ಲೋಮಶತೀರ್ಥಯಾತ್ರಾ-ಭೀಮಕದಲೀಶಂಡಪ್ರವೇಶ
  68. ಲೋಮಶತೀರ್ಥಯಾತ್ರಾ-ಹನುಮದ್ಭೀಮಸಂವಾದ-೧
  69. ಲೋಮಶತೀರ್ಥಯಾತ್ರಾ-ಹನುಮದ್ಭೀಮಸಂವಾದ-೨
  70. ಲೋಮಶತೀರ್ಥಯಾತ್ರಾ-ಹನುಮದ್ಭೀಮಸಂವಾದ-೩
  71. ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೧
  72. ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೨
  73. ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೩
  74. ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೪

Comments are closed.