Aranyaka Parva: Chapter 96

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೯೬

ಧನವನ್ನು ಕೇಳಿಕೊಂಡು ಅಗಸ್ತ್ಯನು ರಾಜ ಶ್ರುತರ್ವಾಣನಲ್ಲಿಗೆ ಹೋದುದು (೧-೬). ಅವನಲ್ಲಿ ಸಾಕಷ್ಟು ಧನವಿಲ್ಲವೆಂದು ಅವನನ್ನೂ ಕರೆದುಕೊಂಡು ಧನವನ್ನರಸಿ ರಾಜ ವರ್ಧ್ರಶ್ವನಲ್ಲಿಗೆ ಹೋದುದು (೭-೧೧). ಅವನಲ್ಲಿಯೂ ಸಾಕಷ್ಟು ಧನವಿಲ್ಲವೆಂದು, ಶ್ರುತರ್ವಾಣ ಮತ್ತು ವರ್ಧ್ರಶ್ವನನ್ನು ಕರೆದುಕೊಂಡು ಅಗಸ್ತ್ಯನು ರಾಜ ತ್ರಸದಸ್ಯನಲ್ಲಿಗೆ ಹೋದುದು (೧೨-೧೭). ಅವನಲ್ಲಿಯೂ ಸಾಕಷ್ಟು ಧನವಿಲ್ಲವೆಂದು ತಿಳಿದು, ನಾಲ್ವರೂ ಇಲ್ವಲನಲ್ಲಿಗೆ ಹೋದುದು (೧೮-೨೦).

03096001 ಲೋಮಶ ಉವಾಚ|

03096001a ತತೋ ಜಗಾಮ ಕೌರವ್ಯ ಸೋಽಗಸ್ತ್ಯೋ ಭಿಕ್ಷಿತುಂ ವಸು|

03096001c ಶ್ರುತರ್ವಾಣಂ ಮಹೀಪಾಲಂ ಯಂ ವೇದಾಭ್ಯಧಿಕಂ ನೃಪೈಃ||

ಲೋಮಶನು ಹೇಳಿದನು: “ಕೌರವ್ಯ! ಅನಂತರ ಅಗಸ್ತ್ಯನು ಸಂಪತ್ತನ್ನು ಕೇಳಿಕೊಂಡು ಇವನಲ್ಲಿ ಇತರ ರಾಜರುಗಳಿಗಿಂತ ಹೆಚ್ಚು ಧನವಿದೆ ಎಂದು ತಿಳಿದು, ಮಹೀಪಾಲ ಶ್ರುತರ್ವಾಣನಲ್ಲಿಗೆ ಹೋದನು.

03096002a ಸ ವಿದಿತ್ವಾ ತು ನೃಪತಿಃ ಕುಂಭಯೋನಿಮುಪಾಗಮತ್|

03096002c ವಿಷಯಾಂತೇ ಸಹಾಮಾತ್ಯಃ ಪ್ರತ್ಯಗೃಹ್ಣಾತ್ಸುಸತ್ಕೃತಂ||

ಕುಂಭಯೋನಿಯಲ್ಲಿ ಹುಟ್ಟಿದ್ದ ಅವನು ಬಂದಿದ್ದಾನೆಂದು ತಿಳಿದ ನೃಪತಿಯು ತನ್ನ ದೇಶದ ಗಡಿಗೆ ಅಮಾತ್ಯರೊಂದಿಗೆ ಬಂದು ಅವನನ್ನು ಚೆನ್ನಾಗಿ ಸತ್ಕರಿಸಿ ಬರಮಾಡಿಕೊಂಡನು.

03096003a ತಸ್ಮೈ ಚಾರ್ಘ್ಯಂ ಯಥಾನ್ಯಾಯಮಾನೀಯ ಪೃಥಿವೀಪತಿಃ|

03096003c ಪ್ರಾಂಜಲಿಃ ಪ್ರಯತೋ ಭೂತ್ವಾ ಪಪ್ರಚ್ಚಾಗಮನೇಽರ್ಥಿತಾಂ||

ಅವನಿಗೆ ಯಥಾವಿಧಿಯಾಗಿ ಅರ್ಘ್ಯವನ್ನಿತ್ತ ನಂತರ ಪೃಥಿವೀಪತಿಯು ಅಂಜಲೀ ಬದ್ಧನಾಗಿ, ತಲೆಬಾಗಿ, ಅವನ ಆಗಮನದ ಕಾರಣವನ್ನು ಕೇಳಿದನು.

03096004 ಅಗಸ್ತ್ಯ ಉವಾಚ|

03096004a ವಿತ್ತಾರ್ಥಿನಮನುಪ್ರಾಪ್ತಂ ವಿದ್ಧಿ ಮಾಂ ಪೃಥಿವೀಪತೇ|

03096004c ಯಥಾಶಕ್ತ್ಯವಿಹಿಂಸ್ಯಾನ್ಯಾನ್ಸಂವಿಭಾಗಂ ಪ್ರಯಚ್ಚ ಮೇ||

ಅಗಸ್ತ್ಯನು ಹೇಳಿದನು: “ಪೃಥಿವೀಪತೇ! ವಿತ್ತವನ್ನು ಪಡೆಯಲೋಸುಗ ನಾನು ಬಂದಿದ್ದೇನೆ ಎಂದು ತಿಳಿ. ಇನ್ನೊಬ್ಬರಿಗೆ ಕಡಿಮೆಯಾಗದಂತೆ, ಅದರಲ್ಲಿಯ ಭಾಗವನ್ನು ನನಗೆ ಕೊಡು.””

03096005 ಲೋಮಶ ಉವಾಚ|

03096005a ತತ ಆಯವ್ಯಯೌ ಪೂರ್ಣೌ ತಸ್ಮೈ ರಾಜಾ ನ್ಯವೇದಯತ್|

03096005c ಅತೋ ವಿದ್ವನ್ನುಪಾದತ್ಸ್ವ ಯದತ್ರ ವಸು ಮನ್ಯಸೇ||

ಲೋಮಶನು ಹೇಳಿದನು: “ಆಗ ರಾಜನು ಅವನಿಗೆ ತನ್ನ ಆದಾಯ ವೆಚ್ಚಗಳ ಕುರಿತು ಸಂಪೂರ್ಣವಾಗಿ ವಿವರಿಸಿ, ನಿವೇದಿಸಿದನು: “ಈಗ ನಿನಗೆ ತಿಳಿದಿದೆ. ಇದರಲ್ಲಿ ನಿನಗೆ ಎಷ್ಟು ಬೇಕೋ ಅಷ್ಟನ್ನು ತೆಗೆದುಕೋ!”

03096006a ತತ ಆಯವ್ಯಯೌ ದೃಷ್ಟ್ವಾ ಸಮೌ ಸಮಮತಿರ್ದ್ವಿಜಃ|

03096006c ಸರ್ವಥಾ ಪ್ರಾಣಿನಾಂ ಪೀಡಾಮುಪಾದಾನಾದಮನ್ಯತ||

ಅವನ ಆದಾಯ ವೆಚ್ಛಗಳು ಸರಿಸಮನಾಗಿವೆ ಎಂದು ನೋಡಿದ ಸಮಮತಿ ದ್ವಿಜನು ಏನನ್ನೂ ತೆಗೆದೊಕೊಂಡರೂ ಅದು ಪ್ರಜೆಗಳಿಗೆ ಕಷ್ಟವನ್ನೊಡ್ಡಿದ ಹಾಗೆ ಎಂದು ಯೋಚಿಸಿದನು.

03096007a ಸ ಶ್ರುತರ್ವಾಣಮಾದಾಯ ವಧ್ರ್ಯಶ್ವಮಗಮತ್ತತಃ|

03096007c ಸ ಚ ತೌ ವಿಷಯಸ್ಯಾಂತೇ ಪ್ರತ್ಯಗೃಹ್ಣಾದ್ಯಥಾವಿಧಿ||

ಅವನು ಶ್ರುತರ್ವಾಣನನ್ನೂ ಕರೆದುಕೊಂಡು ವಧ್ರ್ಯಶ್ವನಲ್ಲಿಗೆ ಹೋದನು. ಅವರೀರ್ವರನ್ನೂ ಅವನು ತನ್ನ ದೇಶದ ಗಡಿಯಲ್ಲಿ ಯಥಾವಿಧಿಯಾಗಿ ಸ್ವಾಗತಿಸಿದನು.

03096008a ತಯೋರರ್ಘ್ಯಂ ಚ ಪಾದ್ಯಂ ಚ ವಧ್ರ್ಯಶ್ವಃ ಪ್ರತ್ಯವೇದಯತ್|

03096008c ಅನುಜ್ಞಾಪ್ಯ ಚ ಪಪ್ರಚ್ಚ ಪ್ರಯೋಜನಮುಪಕ್ರಮೇ||

ವದ್ರ್ಯಶ್ವನು ಅವನಿಗೆ ಅರ್ಘ್ಯ ಪಾದ್ಯಗಳನ್ನು ನೀಡಿದ ನಂತರ ಅವನು “ಬಂದ ಕಾರಣದ ಕುರಿತು ಅಪ್ಪಣೆಯಾಗಬೇಕು!” ಎಂದು ಕೇಳಿಕೊಂಡನು.

03096009 ಅಗಸ್ತ್ಯ ಉವಾಚ|

03096009a ವಿತ್ತಕಾಮಾವಿಹ ಪ್ರಾಪ್ತೌ ವಿದ್ಧ್ಯಾವಾಂ ಪೃಥಿವೀಪತೇ|

03096009c ಯಥಾಶಕ್ತ್ಯವಿಹಿಂಸ್ಯಾನ್ಯಾನ್ಸಂವಿಭಾಗಂ ಪ್ರಯಚ್ಚ ನೌ||

ಅಗಸ್ತ್ಯನು ಹೇಳಿದನು: “ಪೃಥಿವೀಪತೇ! ವಿತ್ತವನ್ನು ಬಯಸಿ ನಾವಿಬ್ಬರೂ ಇಲ್ಲಿಗೆ ಬಂದಿದ್ದೇವೆ ಎಂದು ತಿಳಿ. ಇನ್ನೊಬ್ಬರಿಗೆ ಕಷ್ಟವಾಗದ ರೀತಿಯಲ್ಲಿ ನಿನ್ನ ಸಂಪತ್ತಿನ ಭಾಗವನ್ನು ನಮಗೆ ನೀಡು.””

03096010 ಲೋಮಶ ಉವಾಚ|

03096010a ತತ ಆಯವ್ಯಯೌ ಪೂರ್ಣೌ ತಾಭ್ಯಾಂ ರಾಜಾ ನ್ಯವೇದಯತ್|

03096010c ತತೋ ಜ್ಞಾತ್ವಾ ಸಮಾದತ್ತಾಂ ಯದತ್ರ ವ್ಯತಿರಿಚ್ಯತೇ||

ಲೋಮಶನು ಹೇಳಿದನು: “ಆಗ ರಾಜನು ಇಬ್ಬರಿಗೂ ತನ್ನ ಆದಾಯ ವೆಚ್ಚಗಳ ಕುರಿತು ಹೇಳಿ, “ಇದನ್ನು ತಿಳಿದ ನೀವು ಉಳಿದಿದ್ದನ್ನು ತೆಗೆದುಕೊಂಡು ಹೋಗಿ” ಎಂದನು.

03096011a ತತ ಆಯವ್ಯಯೌ ದೃಷ್ಟ್ವಾ ಸಮೌ ಸಮಮತಿರ್ದ್ವಿಜಃ|

03096011c ಸರ್ವಥಾ ಪ್ರಾಣಿನಾಂ ಪೀಡಾಮುಪಾದಾನಾದಮನ್ಯತ||

ಆಯವ್ಯಯಗಳು ಸಮನಾಗಿವೆ ಎಂದು ನೋಡಿದ ಆ ಸಮಮತಿ ದ್ವಿಜನು ಏನನ್ನು ತೆಗೆದುಕೊಂಡರೂ ಅದು ಪ್ರಜೆಗಳಿಗೆ ಕಷ್ಟವನ್ನು ಕೊಟ್ಟಹಾಗೆ ಎಂದು ಯೋಚಿಸಿದನು.

03096012a ಪೌರುಕುತ್ಸಂ ತತೋ ಜಗ್ಮುಸ್ತ್ರಸದಸ್ಯುಂ ಮಹಾಧನಂ|

03096012c ಅಗಸ್ತ್ಯಶ್ಚ ಶ್ರುತರ್ವಾ ಚ ವಧ್ರ್ಯಶ್ವಶ್ಚ ಮಹೀಪತಿಃ||

ಅನಂತರ ಅಗಸ್ತ್ಯ, ಶ್ರುತರ್ವ ಮತ್ತು ವಧ್ರ್ಯಶ್ವ ಮೂವರೂ ಮಹಾಧನಿ ಮಹೀಪತಿ ಪೌರುಕುತ್ಸ ತ್ರಸದಸ್ಯನಲ್ಲಿಗೆ ಹೋದರು.

03096013a ತ್ರಸದಸ್ಯುಶ್ಚ ತಾನ್ಸರ್ವಾನ್ಪ್ರತ್ಯಗೃಹ್ಣಾದ್ಯಥಾವಿಧಿ|

03096013c ಅಭಿಗಮ್ಯ ಮಹಾರಾಜ ವಿಷಯಾಂತೇ ಸವಾಹನಃ||

ಮಹಾರಾಜ ತ್ರಸದಸ್ಯುವು ವಾಹನವನ್ನೇರಿ ತನ್ನ ರಾಜ್ಯದ ಗಡಿಯವರೆಗೂ ಬಂದು ಅವರೆಲ್ಲರನ್ನೂ ಯಥಾವಿಧಿಯಾಗಿ ಬರಮಾಡಿಕೊಂಡನು.

03096014a ಅರ್ಚಯಿತ್ವಾ ಯಥಾನ್ಯಾಯಮಿಕ್ಷ್ವಾಕೂ ರಾಜಸತ್ತಮಃ|

03096014c ಸಮಾಶ್ವಸ್ತಾಂಸ್ತತೋಽಪೃಚ್ಚತ್ಪ್ರಯೋಜನಮುಪಕ್ರಮೇ||

ಆ ಇಕ್ಷ್ವಾಕು ರಾಜಸತ್ತಮನು ಯಥಾನ್ಯಾಯವಾಗಿ ಪೂಜಿಸಿದನು. ಅವರೆಲ್ಲರೂ ವಿಶ್ರಾಂತಿಯನ್ನು ತೆಗೆದುಕೊಂಡ ಬಳಿಕ ಅವರ ಬರವಿನ ಕಾರಣವನ್ನು ಕೇಳಿದನು.

03096015 ಅಗಸ್ತ್ಯ ಉವಾಚ|

03096015a ವಿತ್ತಕಾಮಾನಿಹ ಪ್ರಾಪ್ತಾನ್ವಿದ್ಧಿ ನಃ ಪೃಥಿವೀಪತೇ|

03096015c ಯಥಾಶಕ್ತ್ಯವಿಹಿಂಸ್ಯಾನ್ಯಾನ್ಸಂವಿಭಾಗಂ ಪ್ರಯಚ್ಚ ನಃ||

ಅಗಸ್ತ್ಯನು ಹೇಳಿದನು: “ಪೃಥಿವೀಪತೇ! ನಾವು ಇಲ್ಲಿಗೆ ಸಂಪತ್ತನ್ನು ಅರಸಿ ಬಂದಿದ್ದೇವೆ ಎಂದು ತಿಳಿ. ಇತರರಿಗೆ ಹಿಂಸೆಯಾಗದ ರೀತಿಯಲ್ಲಿ ನಮಗೆ ನಿನ್ನ ಸಂಪತ್ತಿನ ಭಾಗವನ್ನು ನೀಡು.””

03096016 ಲೋಮಶ ಉವಾಚ|

03096016a ತತ ಆಯವ್ಯಯೌ ಪೂರ್ಣೌ ತೇಷಾಂ ರಾಜಾ ನ್ಯವೇದಯತ್|

03096016c ಅತೋ ಜ್ಞಾತ್ವಾ ಸಮಾದದ್ಧ್ವಂ ಯದತ್ರ ವ್ಯತಿರಿಚ್ಯತೇ||

ಲೋಮಶನು ಹೇಳಿದನು: “ಅನಂತರ ರಾಜನು ಅವರಿಗೆ ತನ್ನ ಆದಾಯ ವೆಚ್ಚಗಳ ಕುರಿತು ಸಂಪೂರ್ಣವಾಗಿ ವಿವರಿಸಿ, “ಇದನ್ನು ತಿಳಿದ ನೀವು ಉಳಿದಿದ್ದುದನ್ನು ತೆಗೆದುಕೊಂಡು ಹೋಗಿ” ಎಂದು ನಿವೇದಿಸಿದನು.

03096017a ತತ ಆಯವ್ಯಯೌ ದೃಷ್ಟ್ವಾ ಸಮೌ ಸಮಮತಿರ್ದ್ವಿಜಃ|

03096017c ಸರ್ವಥಾ ಪ್ರಾಣಿನಾಂ ಪೀಡಾಮುಪಾದಾನಾದಮನ್ಯತ||

ಆದಾಯ-ವೆಚ್ಚಗಳು ಸರಿಸಮವಾಗಿರುವುದನ್ನು ನೋಡಿದ ಆ ಸಮಮತಿ ದ್ವಿಜನು ಏನನ್ನೂ ತೆಗೆದುಕೊಂಡರೂ ಅದು ಇತರರಿಗೆ ಕಷ್ವವನ್ನು ತರುತ್ತದೆ ಎಂದು ತಿಳಿದನು.

03096018a ತತಃ ಸರ್ವೇ ಸಮೇತ್ಯಾಥ ತೇ ನೃಪಾಸ್ತಂ ಮಹಾಮುನಿಂ|

03096018c ಇದಮೂಚುರ್ಮಹಾರಾಜ ಸಮವೇಕ್ಷ್ಯ ಪರಸ್ಪರಂ||

ಮಹಾರಾಜ! ಆಗ ಎಲ್ಲ ರಾಜರೂ ಪರಸ್ಪರರನ್ನು ನೋಡಿ, ಆ ಮಹಾಮುನಿಗೆ ಹೇಳಿದರು:

03096019a ಅಯಂ ವೈ ದಾನವೋ ಬ್ರಹ್ಮನ್ನಿಲ್ವಲೋ ವಸುಮಾನ್ಭುವಿ|

03096019c ತಮಭಿಕ್ರಮ್ಯ ಸರ್ವೇಽದ್ಯ ವಯಂ ಯಾಚಾಮಹೇ ವಸು||

“ಬ್ರಹ್ಮನ್! ಈ ಭುವಿಯಲ್ಲಿ ಮಹಾ ಧನವನ್ನು ಹೊಂದಿದ ಇಲ್ವಲ ಎನ್ನುವ ದಾನವನಿದ್ದಾನೆ. ನಾವೆಲ್ಲರೂ ಅವನಲ್ಲಿಗೆ ಹೋಗಿ ಹಣವನ್ನು ಕೇಳೋಣ!”

03096020a ತೇಷಾಂ ತದಾಸೀದ್ರುಚಿತಮಿಲ್ವಲಸ್ಯೋಪಭಿಕ್ಷಣಂ|

03096020c ತತಸ್ತೇ ಸಹಿತಾ ರಾಜನ್ನಿಲ್ವಲಂ ಸಮುಪಾದ್ರವನ್||

ರಾಜನ್! ಅವರೆಲ್ಲರೂ ಇಲ್ವಲನಲ್ಲಿಗೆ ಹೋಗಿ ಧನವನ್ನು ಕೇಳುವುದು ಸರಿಯೆಂದು ಯೋಚಿಸಿ, ಒಟ್ಟಿಗೇ ಇಲ್ವಲನಲ್ಲಿಗೆ ಪ್ರಯಾಣ ಬೆಳೆಸಿದರು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ಷಣ್ಣಾತಿತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ತೊಂಭತ್ತಾರನೆಯ ಅಧ್ಯಾಯವು.

Related image

Kannada translation of Tirthayatra Parva, by Chapter:
  1. ಪಾರ್ಥನಾರದಸಂವಾದ
  2. ಪುಲಸ್ತ್ಯತೀರ್ಥಯಾತ್ರಾ-೧
  3. ಪುಲಸ್ತ್ಯತೀರ್ಥಯಾತ್ರಾ-೨
  4. ಪುಲಸ್ತ್ಯತೀರ್ಥಯಾತ್ರಾ-೩
  5. ಧೌಮ್ಯತೀರ್ಥಯಾತ್ರಾ-೧
  6. ಧೌಮ್ಯತೀರ್ಥಯಾತ್ರಾ-೨
  7. ಧೌಮ್ಯತೀರ್ಥಯಾತ್ರಾ-೩
  8. ಧೌಮ್ಯತೀರ್ಥಯಾತ್ರಾ-೪
  9. ಧೌಮ್ಯತೀರ್ಥಯಾತ್ರಾ-೫
  10. ಲೋಮಶಸಂವಾದ-೧
  11. ಲೋಮಶಸಂವಾದ-೨
  12. ಲೋಮಶತೀರ್ಥಯಾತ್ರಾ
  13. ಲೋಮಶತೀರ್ಥಯಾತ್ರಾ
  14. ಲೋಮಶತೀರ್ಥಯಾತ್ರಾ
  15. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೧
  16. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೨
  17. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೩
  18. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೪
  19. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೫
  20. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೬
  21. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೭
  22. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೮
  23. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೯
  24. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೧೦
  25. ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೧
  26. ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೨
  27. ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೩
  28. ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೪
  29. ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೫
  30. ಲೋಮಶತೀರ್ಥಯಾತ್ರಾ
  31. ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೧
  32. ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೨
  33. ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೩
  34. ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೪
  35. ಲೋಮಶತೀರ್ಥಯಾತ್ರಾ - ಮಹೇಂದ್ರಾಚಲಗಮನ
  36. ಲೋಮಶತೀರ್ಥಯಾತ್ರಾ – ಕಾರ್ತವೀರ್ಯೋಪಾಖ್ಯಾನ-೧
  37. ಲೋಮಶತೀರ್ಥಯಾತ್ರಾ – ಕಾರ್ತವೀರ್ಯೋಪಾಖ್ಯಾನ-೨
  38. ಲೋಮಶತೀರ್ಥಯಾತ್ರಾ – ಕಾರ್ತವೀರ್ಯೋಪಾಖ್ಯಾನ-೩
  39. ಲೋಮಶತೀರ್ಥಯಾತ್ರಾ – ಪ್ರಭಾಸೇಯಾದವಪಾಂಡವಸಮಾಗಮ-೧
  40. ಲೋಮಶತೀರ್ಥಯಾತ್ರಾ – ಪ್ರಭಾಸೇಯಾದವಪಾಂಡವಸಮಾಗಮ-೨
  41. ಲೋಮಶತೀರ್ಥಯಾತ್ರಾ – ಪ್ರಭಾಸೇಯಾದವಪಾಂಡವಸಮಾಗಮ-೩
  42. ಲೋಮಶತೀರ್ಥಯಾತ್ರಾ – ಸುಕನ್ಯಾ-೧
  43. ಲೋಮಶತೀರ್ಥಯಾತ್ರಾ – ಸುಕನ್ಯಾ-೨
  44. ಲೋಮಶತೀರ್ಥಯಾತ್ರಾ – ಸುಕನ್ಯಾ-೩
  45. ಲೋಮಶತೀರ್ಥಯಾತ್ರಾ – ಸುಕನ್ಯಾ-೪
  46. ಲೋಮಶತೀರ್ಥಯಾತ್ರಾ – ಸುಕನ್ಯಾ-೫
  47. ಲೋಮಶತೀರ್ಥಯಾತ್ರಾ – ಮಾಂಧಾತೋಪಾಖ್ಯಾನ
  48. ಲೋಮಶತೀರ್ಥಯಾತ್ರಾ – ಜಂತೂಪಾಖ್ಯಾನ-೧
  49. ಲೋಮಶತೀರ್ಥಯಾತ್ರಾ – ಜಂತೂಪಾಖ್ಯಾನ-೨
  50. ಲೋಮಶತೀರ್ಥಯಾತ್ರಾ
  51. ಲೋಮಶತೀರ್ಥಯಾತ್ರಾ-ಶ್ಯೇನಕಪೋತೀಯ-೧
  52. ಲೋಮಶತೀರ್ಥಯಾತ್ರಾ-ಶ್ಯೇನಕಪೋತೀಯ-೨
  53. ಲೋಮಶತೀರ್ಥಯಾತ್ರಾ-ಅಷ್ಟಾವಕ್ರೀಯ-೧
  54. ಲೋಮಶತೀರ್ಥಯಾತ್ರಾ-ಅಷ್ಟಾವಕ್ರೀಯ-೨
  55. ಲೋಮಶತೀರ್ಥಯಾತ್ರಾ-ಅಷ್ಟಾವಕ್ರೀಯ-೩
  56. ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೧
  57. ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೨
  58. ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೩
  59. ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೪
  60. ಲೋಮಶತೀರ್ಥಯಾತ್ರಾ-ಕೈಲಾಸಾದಿಗಿರಿಪ್ರವೇಶ
  61. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೧
  62. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೨
  63. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೩
  64. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೪
  65. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೫
  66. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೬
  67. ಲೋಮಶತೀರ್ಥಯಾತ್ರಾ-ಭೀಮಕದಲೀಶಂಡಪ್ರವೇಶ
  68. ಲೋಮಶತೀರ್ಥಯಾತ್ರಾ-ಹನುಮದ್ಭೀಮಸಂವಾದ-೧
  69. ಲೋಮಶತೀರ್ಥಯಾತ್ರಾ-ಹನುಮದ್ಭೀಮಸಂವಾದ-೨
  70. ಲೋಮಶತೀರ್ಥಯಾತ್ರಾ-ಹನುಮದ್ಭೀಮಸಂವಾದ-೩
  71. ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೧
  72. ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೨
  73. ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೩
  74. ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೪

Comments are closed.