Aranyaka Parva: Chapter 92

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೯೨

ತನ್ನಲ್ಲಿ ಗುಣ ಮತ್ತು ಧರ್ಮಗಳಿದ್ದರೂ ದುಃಖವನ್ನು ಅನುಭವಿಸುತ್ತಿದ್ದೇನೆ ಮತ್ತು ಶತ್ರುಗಳಲ್ಲಿ ಇವು ಇಲ್ಲದಿದ್ದರೂ ಸುಖವಾಗಿದ್ದಾರೆ; ಏಕೆಂದು ಯುಧಿಷ್ಠಿರನು ಲೋಮಶನನ್ನು ಕೇಳಿದುದು (೧-೨). ದೇವ-ದೈತ್ಯರ ಉದಾಹರಣೆಯನ್ನು ನೀಡಿ ಲೋಮಶನು ತೀರ್ಥಯಾತ್ರೆಯ ಪುಣ್ಯದಿಂದ ಪಾಂಡವರು ಶೀಘ್ರದಲ್ಲಿಯೇ ಶ್ರೀಯನ್ನು ಪಡೆಯುತ್ತಾರೆ ಎನ್ನುವುದು (೩-೨೨).

03092001 ಯುಧಿಷ್ಠಿರ ಉವಾಚ|

03092001a ನ ವೈ ನಿರ್ಗುಣಮಾತ್ಮಾನಂ ಮನ್ಯೇ ದೇವರ್ಷಿಸತ್ತಮ|

03092001c ತಥಾಸ್ಮಿ ದುಃಖಸಂತಪ್ತೋ ಯಥಾ ನಾನ್ಯೋ ಮಹೀಪತಿಃ||

ಯುಧಿಷ್ಠಿರನು ಹೇಳಿದನು: “ದೇವರ್ಷಿಸತ್ತಮ! ನನ್ನಲ್ಲಿ ಗುಣಗಳಿಲ್ಲ ಎಂದು ನನಗನಿಸುವುದಿಲ್ಲ. ಆದರೂ ಅನ್ಯ ಮಹೀಪತಿ ಯಾರೂ ಪಡದಂಥಹ ದುಃಖವನ್ನು ಅನುಭವಿಸುತ್ತಿದ್ದೇನೆ.

03092002a ಪರಾಂಶ್ಚ ನಿರ್ಗುಣಾನ್ಮನ್ಯೇ ನ ಚ ಧರ್ಮರತಾನಪಿ|

03092002c ತೇ ಚ ಲೋಮಶ ಲೋಕೇಽಸ್ಮಿನ್ನೃಧ್ಯಂತೇ ಕೇನ ಕೇತುನಾ||

ನನ್ನ ಶತ್ರುಗಳು ನಿರ್ಗುಣರು ಮತ್ತು ದರ್ಮದಲ್ಲಿ ನಡೆಯುತ್ತಿಲ್ಲ ಎಂದು ನನ್ನ ಅಭಿಪ್ರಾಯ. ಲೋಮಶ! ಆದರೂ ಅವರು ಲೋಕದಲ್ಲಿ ಅಭಿವೃದ್ಧಿಯನ್ನು ಹೊಂದಿದ್ದಾರೆ. ಇದಕ್ಕೆ ಕಾರಣವೇನಿರಬಹುದು?”

03092003 ಲೋಮಶ ಉವಾಚ|

03092003a ನಾತ್ರ ದುಃಖಂ ತ್ವಯಾ ರಾಜನ್ಕಾರ್ಯಂ ಪಾರ್ಥ ಕಥಂ ಚನ|

03092003c ಯದಧರ್ಮೇಣ ವರ್ಧೇರನ್ನಧರ್ಮರುಚಯೋ ಜನಾಃ||

ಲೋಮಶನು ಹೇಳಿದನು: “ರಾಜನ್! ಪಾರ್ಥ! ಅಧರ್ಮದಲ್ಲಿರುವವರು ಅಧರ್ಮದಲ್ಲಿದ್ದುಕೊಂಡೇ ವೃದ್ಧಿಯನ್ನು ಹೊಂದುತ್ತಾರೆ ಎಂದು ನೀನು ಯಾವಾಗಲೂ ದುಃಖಪಡಬೇಕಾಗಿಲ್ಲ.

03092004a ವರ್ಧತ್ಯಧರ್ಮೇಣ ನರಸ್ತತೋ ಭದ್ರಾಣಿ ಪಶ್ಯತಿ|

03092004c ತತಃ ಸಪತ್ನಾಂ ಜಯತಿ ಸಮೂಲಸ್ತು ವಿನಶ್ಯತಿ||

ಧರ್ಮದಿಂದ ವೃದ್ಧಿಹೊಂದುವ ಮನುಷ್ಯನು ಸುರಕ್ಷತೆಯನ್ನು ಕಾಣುತ್ತಾನೆ ಮತ್ತು ತನ್ನ ಪ್ರತಿಸ್ಪರ್ಧಿಗಳನ್ನು ಸೋಲಿಸುತ್ತಾನೆ, ಅವರನ್ನು ಸಮೂಲವಾಗಿ ವಿನಾಶಗೊಳಿಸುತ್ತಾನೆ.

03092005a ಮಯಾ ಹಿ ದೃಷ್ಟಾ ದೈತೇಯಾ ದಾನವಾಶ್ಚ ಮಹೀಪತೇ|

03092005c ವರ್ಧಮಾನಾ ಹ್ಯಧರ್ಮೇಣ ಕ್ಷಯಂ ಚೋಪಗತಾಃ ಪುನಃ||

ಮಹೀಪತೇ! ಅಧರ್ಮದಿಂದ ವೃದ್ಧಿಹೊಂದಿಯೇ ಪುನಃ ಕ್ಷಯವನ್ನು ಹೊಂದಿದ ದೈತ್ಯ ದಾನವರನ್ನು ನಾನೇ ನೋಡಿದ್ದೇನೆ.

03092006a ಪುರಾ ದೇವಯುಗೇ ಚೈವ ದೃಷ್ಟಂ ಸರ್ವಂ ಮಯಾ ವಿಭೋ|

03092006c ಅರೋಚಯನ್ಸುರಾ ಧರ್ಮಂ ಧರ್ಮಂ ತತ್ಯಜಿರೇಽಸುರಾಃ||

ವಿಭೋ! ಹಿಂದೆ ದೇವಯುಗದಲ್ಲಿ ಸುರರು ಹೇಗೆ ಧರ್ಮವನ್ನು ತಮ್ಮದಾಗಿಸಿಕೊಂಡರು ಮತ್ತು ಅಸುರರು ಹೇಗೆ ಧರ್ಮವನ್ನು ವರ್ಜಿಸಿದರು ಎನ್ನುವುದನ್ನು ನಾನು ನೋಡಿದ್ದೇನೆ.

03092007a ತೀರ್ಥಾನಿ ದೇವಾ ವಿವಿಶುರ್ನಾವಿಶನ್ಭಾರತಾಸುರಾಃ|

03092007c ತಾನಧರ್ಮಕೃತೋ ದರ್ಪಃ ಪೂರ್ವಮೇವ ಸಮಾವಿಶತ್||

03092008a ದರ್ಪಾನ್ಮಾನಃ ಸಮಭವನ್ಮಾನಾತ್ಕ್ರೋಧೋ ವ್ಯಜಾಯತ|

03092008c ಕ್ರೋಧಾದಹ್ರೀಸ್ತತೋಽಲಜ್ಜಾ ವೃತ್ತಂ ತೇಷಾಂ ತತೋಽನಶತ್||

ಭಾರತ! ದೇವತೆಗಳು ತೀರ್ಥಕ್ಷೇತ್ರಗಳಿಗೆ ಭೇಟಿನೀಡಿದರು. ಅಸುರರು ಹಾಗೆ ಮಾಡಲಿಲ್ಲ. ಅವರು ಮಾಡಿದ ಅಧರ್ಮದಿಂದ ಮೊದಲು ದರ್ಪವು ಅವರನ್ನು ಆವೇಶಿಸಿತು. ದರ್ಪದಿಂದ ಮಾನವು ಹುಟ್ಟಿಕೊಂಡಿತು. ಮಾನದಿಂದ ಕ್ರೋಧವು ಹುಟ್ಟಿತು. ಕ್ರೋಧದಿಂದ ನಾಚಿಕೆ ಮತ್ತು ನಾಚಿಕೆಯು ಅವರ ನಡತೆಯನ್ನೇ ನಾಶಗೊಳಿಸಿತು.

03092009a ತಾನಲಜ್ಜಾನ್ಗತಹ್ರೀಕಾನ್ ಹೀನವೃತ್ತಾನ್ವೃಥಾವ್ರತಾನ್|

03092009c ಕ್ಷಮಾ ಲಕ್ಷ್ಮೀಶ್ಚ ಧರ್ಮಶ್ಚ ನಚಿರಾತ್ಪ್ರಜಹುಸ್ತತಃ||

03092009e ಲಕ್ಷ್ಮೀಸ್ತು ದೇವಾನಗಮದಲಕ್ಷ್ಮೀರಸುರಾನ್ನೃಪ||

ಅವರು ನಾಚಿಕೆಗೊಂಡಾಗ, ಮಾನಕಳೆದುಕೊಂಡಾಗ, ಹೀನನಡತೆಯುಳ್ಳವರಾದಾಗ, ಮತ್ತು ವ್ರತಗಳನ್ನು ತೊರೆದಾಗ ಕ್ಷಮಾ, ಲಕ್ಷ್ಮಿ ಮತ್ತು ಧರ್ಮಗಳು ಸ್ವಲ್ಪಹೊತ್ತೂ ನಿಲ್ಲದೇ ಅವರನ್ನು ತೊರೆದವು. ನೃಪ! ಲಕ್ಷ್ಮಿಯು ದೇವತೆಗಳ ಕಡೆ ಹೋದಳು. ಅಲಕ್ಷ್ಮಿಯು ಅಸುರರ ಕಡೆ ಹೋದಳು.

03092010a ತಾನಲಕ್ಷ್ಮೀಸಮಾವಿಷ್ಟಾನ್ದರ್ಪೋಪಹತಚೇತಸಃ|

03092010c ದೈತೇಯಾನ್ದಾನವಾಂಶ್ಚೈವ ಕಲಿರಪ್ಯಾವಿಶತ್ತತಃ||

ಅಲಕ್ಷ್ಮಿಯು ಸಮಾವೇಶಗೊಳ್ಳಲು ದರ್ಪದಿಂದ ಮನಸ್ಸನ್ನು ಕಳೆದುಕೊಂಡ ದೈತ್ಯ ದಾನವರಲ್ಲಿ ಕಲಹವು ಉಂಟಾಯಿತು.

03092011a ತಾನಲಕ್ಷ್ಮೀಸಮಾವಿಷ್ಟಾನ್ದಾನವಾನ್ಕಲಿನಾ ತಥಾ|

03092011c ದರ್ಪಾಭಿಭೂತಾನ್ಕೌಂತೇಯ ಕ್ರಿಯಾಹೀನಾನಚೇತಸಃ||

03092012a ಮಾನಾಭಿಭೂತಾನಚಿರಾದ್ವಿನಾಶಃ ಪ್ರತ್ಯಪದ್ಯತ|

03092012c ನಿರ್ಯಶಸ್ಯಾಸ್ತತೋ ದೈತ್ಯಾಃ ಕೃತ್ಸ್ನಶೋ ವಿಲಯಂ ಗತಾಃ||

ಕೌಂತೇಯ! ಅಲಕ್ಷ್ಮಿಯು ಸಮಾವಿಷ್ಟಗೊಳ್ಳಲು ದಾನವರು ದರ್ಪದಿಂದೊಡಗೂಡಿ ಕ್ರಿಯಾಹೀನರಾಗಿ, ಅಚೇತಸರಾಗಿ, ಮಾನಾಭಿಮಾನಿಗಳಾಗಿ ಅಲ್ಪ ಸಮಯದಲ್ಲಿಯೇ ವಿನಾಶವನ್ನು ಹೊಂದಿದರು. ನಿರ್ಯಶಸ್ಕರಾಗಿ ದೈತ್ಯರೆಲ್ಲರೂ ಲಯಗೊಂಡರು.

03092013a ದೇವಾಸ್ತು ಸಾಗರಾಂಶ್ಚೈವ ಸರಿತಶ್ಚ ಸರಾಂಸಿ ಚ|

03092013c ಅಭ್ಯಗಚ್ಚನ್ಧರ್ಮಶೀಲಾಃ ಪುಣ್ಯಾನ್ಯಾಯತನಾನಿ ಚ||

ದೇವತೆಗಳಾದರೋ ಸಾಗರ, ನದಿ ಮತ್ತು ಸರೋವರಗಳಿಗೆ, ಇತರ ಪುಣ್ಯಕ್ಷೇತ್ರಗಳಿಗೆ ಧರ್ಮಶೀಲರಾಗಿ ಹೋದರು.

03092014a ತಪೋಭಿಃ ಕ್ರತುಭಿರ್ದಾನೈರಾಶೀರ್ವಾದೈಶ್ಚ ಪಾಂಡವ|

03092014c ಪ್ರಜಹುಃ ಸರ್ವಪಾಪಾನಿ ಶ್ರೇಯಶ್ಚ ಪ್ರತಿಪೇದಿರೇ||

ಪಾಂಡವ! ತಪಸ್ಸು, ಕ್ರತು, ದಾನ, ಮತ್ತು ಆಶೀರ್ವಾದಗಳಿಂದ ಅವರು ಸರ್ವಪಾಪಗಳನ್ನು ಕಳೆದುಕೊಂಡು ಶ್ರೇಯಸ್ಸನ್ನು ಹೊಂದಿದರು.

03092015a ಏವಂ ಹಿ ದಾನವಂತಶ್ಚ ಕ್ರಿಯಾವಂತಶ್ಚ ಸರ್ವಶಃ|

03092015c ತೀರ್ಥಾನ್ಯಗಚ್ಚನ್ವಿಬುಧಾಸ್ತೇನಾಪುರ್ಭೂತಿಮುತ್ತಮಾಂ||

ಹೀಗೆ ದಾನವಾಂತಕರು ಸರ್ವರೂ ಕ್ರಿಯಾವಂತರಾಗಿ ತೀರ್ಥಗಳಿಗೆ ಹೋಗಿ ಉತ್ತಮ ಸ್ಥಾನಗಳನ್ನು ಹೊಂದಿದರು.

03092016a ತಥಾ ತ್ವಮಪಿ ರಾಜೇಂದ್ರ ಸ್ನಾತ್ವಾ ತೀರ್ಥೇಷು ಸಾನುಜಃ|

03092016c ಪುನರ್ವೇತ್ಸ್ಯಸಿ ತಾಂ ಲಕ್ಷ್ಮೀಮೇಷ ಪನ್ಥಾಃ ಸನಾತನಃ||

03092017a ಯಥೈವ ಹಿ ನೃಗೋ ರಾಜಾ ಶಿಬಿರೌಶೀನರೋ ಯಥಾ|

03092017c ಭಗೀರಥೋ ವಸುಮನಾ ಗಯಃ ಪೂರುಃ ಪುರೂರವಾಃ||

03092018a ಚರಮಾಣಾಸ್ತಪೋ ನಿತ್ಯಂ ಸ್ಪರ್ಶನಾದಂಭಸಶ್ಚ ತೇ|

03092018c ತೀರ್ಥಾಭಿಗಮನಾತ್ಪೂತಾ ದರ್ಶನಾಚ್ಚ ಮಹಾತ್ಮನಾಂ||

03092019a ಅಲಭಂತ ಯಶಃ ಪುಣ್ಯಂ ಧನಾನಿ ಚ ವಿಶಾಂ ಪತೇ|

03092019c ತಥಾ ತ್ವಮಪಿ ರಾಜೇಂದ್ರ ಲಬ್ಧಾಸಿ ವಿಪುಲಾಂ ಶ್ರಿಯಂ||

03092020a ಯಥಾ ಚೇಕ್ಷ್ವಾಕುರಚರತ್ಸಪುತ್ರಜನಬಾಂಧವಃ|

03092020c ಮುಚುಕುಂದೋಽಥ ಮಾಂಧಾತಾ ಮರುತ್ತಶ್ಚ ಮಹೀಪತಿಃ||

03092021a ಕೀರ್ತಿಂ ಪುಣ್ಯಾಮವಿಂದಂತ ಯಥಾ ದೇವಾಸ್ತಪೋಬಲಾತ್|

03092021c ದೇವರ್ಷಯಶ್ಚ ಕಾರ್ತ್ಸ್ನ್ಯೆನ ತಥಾ ತ್ವಮಪಿ ವೇತ್ಸ್ಯಸೇ||

ಹಾಗೆಯೇ ರಾಜೇಂದ್ರ! ನೀನೂ ಕೂಡ ನಿನ್ನ ಅನುಜರೊಂದಿಗೆ ತೀರ್ಥಗಳಲ್ಲಿ ಸ್ನಾನಮಾಡಿ ಪುನಃ ನಿನ್ನ ಸಂಪತ್ತನ್ನು ಪಡೆಯುತ್ತೀಯೆ. ಇದೇ ಸನಾತನ ಧರ್ಮ. ವಿಶಾಂಪತೇ! ಇದೇ ರೀತಿ ರಾಜ ನೃಗ, ಶಿಬಿರ, ಉಶೀನರ, ಭಗೀರಥ, ವಸುಮನ, ಗಯ, ಪುರು, ಪುರೂರವ ಇವರು ನಿತ್ಯವೂ ತಪಸ್ಸನ್ನು ಮಾಡಿ, ಪುಣ್ಯ ತೀರ್ಥಗಳಲ್ಲಿ ನೀರನ್ನು ಮುಟ್ಟಿ ಮಹಾತ್ಮರ ದರ್ಶನ ಮಾಡಿ ಯಶಸ್ಸು, ಪುಣ್ಯ ಮತ್ತು ಸಂಪತ್ತನ್ನು ಪಡೆದರು. ರಾಜೇಂದ್ರ! ಹಾಗೆ ನೀನೂ ಕೂಡ ವಿಪುಲ ಸಂಪತ್ತನ್ನು ಹೊಂದುತ್ತೀಯೆ. ಇಕ್ಷ್ವಾಕುವು ತನ್ನ ಪುತ್ರ-ಜನ-ಬಾಂಧವರೊಂದಿಗೆ, ಹಾಗೆಯೇ ಮುಚುಕುಂದ, ಮಹೀಪತಿ ಮಾಂಧಾತ, ಮರುತ್ತರೂ, ದೇವತೆ-ದೇವರ್ಷಿಗಳಂತೆ ತಪೋಬಲವನ್ನು ಹೊಂದಿದರು. ನೀನೂ ಕೂಡ ಅದನ್ನು ಹೊಂದುತ್ತೀಯೆ.

03092022a ಧಾರ್ತರಾಷ್ಟ್ರಾಸ್ತು ದರ್ಪೇಣ ಮೋಹೇನ ಚ ವಶೀಕೃತಾಃ|

03092022c ನಚಿರಾದ್ವಿನಶಿಷ್ಯಂತಿ ದೈತ್ಯಾ ಇವ ನ ಸಂಶಯಃ||

ದರ್ಪ ಮತ್ತು ಮೋಹಗಳಿಂದ ವಶೀಕೃತರಾದ ಧಾರ್ತರಾಷ್ಟ್ರರು ದೈತ್ಯರಂತೆ ಬೇಗನೆ ನಾಶಹೊಂದುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.””

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ದ್ವಿನವತಿತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆ ಎನ್ನುವ ತೊಂಭತ್ತೆರಡನೆಯ ಅಧ್ಯಾಯವು.

Related image

Comments are closed.