ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೮೭
ಧೌಮ್ಯನು ಯುಧಿಷ್ಠಿರನಿಗೆ ಪಶ್ಚಿಮದಿಕ್ಕಿನಲ್ಲಿರುವ ತೀರ್ಥಕ್ಷೇತ್ರಗಳ ಕುರಿತು ಹೇಳಿದುದು (೧-೧೫).
03087001 ಧೌಮ್ಯ ಉವಾಚ|
03087001a ಅವಂತಿಷು ಪ್ರತೀಚ್ಯಾಂ ವೈ ಕೀರ್ತಯಿಷ್ಯಾಮಿ ತೇ ದಿಶಿ|
03087001c ಯಾನಿ ತತ್ರ ಪವಿತ್ರಾಣಿ ಪುಣ್ಯಾನ್ಯಾಯತನಾನಿ ಚ||
ಧೌಮ್ಯನು ಹೇಳಿದನು: “ಈಗ ನಾನು ಪಶ್ಚಿಮದಿಕ್ಕಿನಲ್ಲಿ ಅವಂತಿಯಲ್ಲಿರುವ ಪವಿತ್ರ ಪುಣ್ಯ ಕ್ಷೇತ್ರಗಳ ಕುರಿತು ಹೇಳುತ್ತೇನೆ.
03087002a ಪ್ರಿಯಂಗ್ವಾಮ್ರವನೋಪೇತಾ ವಾನೀರವನಮಾಲಿನೀ|
03087002c ಪ್ರತ್ಯಕ್ಸ್ರೋತಾ ನದೀ ಪುಣ್ಯಾ ನರ್ಮದಾ ತತ್ರ ಭಾರತ||
ಭಾರತ! ಪಶ್ಚಿಮದಿಕ್ಕಿನಲ್ಲಿ ಹರಿಯುವ, ಪ್ರಿಯಂಗು ಬಳ್ಳಿಗಳು ಮತ್ತು ಮಾವಿನ ವನಗಳಿಂದ ಕೂಡಿದ, ಬೆತ್ತದ ವನಗಳ ತೀರದಲ್ಲಿರುವ ನರ್ಮದೆಯು ಪುಣ್ಯ ನದಿ.
03087003a ನಿಕೇತಃ ಖ್ಯಾಯತೇ ಪುಣ್ಯೋ ಯತ್ರ ವಿಶ್ರವಸೋ ಮುನೇಃ|
03087003c ಜಜ್ಞೇ ಧನಪತಿರ್ಯತ್ರ ಕುಬೇರೋ ನರವಾಹನಃ||
ಆ ಪುಣ್ಯ ಕ್ಷೇತ್ರದಲ್ಲಿಯೇ ವಿಶ್ರವಸ ಮುನಿಗೆ ಧನಪತಿ, ನರವಾಹನ ಕುಬೇರನು ಜನಿಸಿದನು.
03087004a ವೈಡೂರ್ಯಶಿಖರೋ ನಾಮ ಪುಣ್ಯೋ ಗಿರಿವರಃ ಶುಭಃ|
03087004c ದಿವ್ಯಪುಷ್ಪಫಲಾಸ್ತತ್ರ ಪಾದಪಾ ಹರಿತಚ್ಚದಾಃ||
ಅಲ್ಲಿ ದಿವ್ಯಪುಷ್ಪಫಲಗಳಿಂದೊಡಗೂಡಿದ ಹಸಿರುಬಣ್ಣದ ಮರಗಳಿರುವ ವೈಡೂರ್ಯಶಿಖರ ಎನ್ನುವ ಪುಣ್ಯ, ಶುಭ ಮತ್ತು ಶ್ರೇಷ್ಠ ಪರ್ವತವಿದೆ.
03087005a ತಸ್ಯ ಶೈಲಸ್ಯ ಶಿಖರೇ ಸರಸ್ತತ್ರ ಚ ಧೀಮತಃ|
03087005c ಪ್ರಫುಲ್ಲನಲಿನಂ ರಾಜನ್ದೇವಗಂಧರ್ವಸೇವಿತಂ||
ರಾಜನ್! ಆ ಶೈಲದ ಶಿಖರದಲ್ಲಿ ದೇವಗಂಧರ್ವಸೇವಿತ, ಅರಳಿದ ತಾವರೆಗಳಿಂದ ಕೂಡಿದ ಧೀಮಂತ ಸರೋವರವಿದೆ.
03087006a ಬಹ್ವಾಶ್ಚರ್ಯಂ ಮಹಾರಾಜ ದೃಶ್ಯತೇ ತತ್ರ ಪರ್ವತೇ|
03087006c ಪುಣ್ಯೇ ಸ್ವರ್ಗೋಪಮೇ ದಿವ್ಯೇ ನಿತ್ಯಂ ದೇವರ್ಷಿಸೇವಿತೇ||
ಮಹಾರಾಜ! ಆ ಪರ್ವತದಲ್ಲಿ ಸ್ವರ್ಗಕ್ಕೆ ಸಮಾನವಾದ ಪುಣ್ಯಕರ, ದಿವ್ಯ, ನಿತ್ಯವೂ ದೇವರ್ಷಿ ಸೇವಿತ ಬಹಳಷ್ಟು ಆಶ್ಚರ್ಯಗಳಿವೆ.
03087007a ಹ್ರದಿನೀ ಪುಣ್ಯತೀರ್ಥಾ ಚ ರಾಜರ್ಷೇಸ್ತತ್ರ ವೈ ಸರಿತ್|
03087007c ವಿಶ್ವಾಮಿತ್ರನದೀ ಪಾರಾ ಪುಣ್ಯಾ ಪರಪುರಂಜಯ||
03087008a ಯಸ್ಯಾಸ್ತೀರೇ ಸತಾಂ ಮಧ್ಯೇ ಯಯಾತಿರ್ನಹುಷಾತ್ಮಜಃ|
03087008c ಪಪಾತ ಸ ಪುನರ್ಲೋಕಾಽಲ್ಲೇಭೇ ಧರ್ಮಾನ್ಸನಾತನಾನ್||
ಪರಪುರಂಜಯ! ಅಲ್ಲಿಯೇ ಸರೋವರಗಳಿಂದ ಕೂಡಿದ ಪುಣ್ಯತೀರ್ಥ ರಾಜರ್ಷಿ ವಿಶ್ವಾಮಿತ್ರನದಿಯು ಹರಿಯುತ್ತದೆ. ಅದರ ದಡದಲ್ಲಿಯೇ ಸತ್ಯವಂತರ ನಡುವೆ ನಹುಷನ ಮಗ ಯಯಾತಿಯು ಕೆಳಗೆ ಬಿದ್ದು ಪುನಃ ಧರ್ಮ ಸನಾತನ ಲೋಕಗಳನ್ನು ಪಡೆದನು.
03087009a ತತ್ರ ಪುಣ್ಯಹ್ರದಸ್ತಾತ ಮೈನಾಕಶ್ಚೈವ ಪರ್ವತಃ|
03087009c ಬಹುಮೂಲಫಲೋ ವೀರ ಅಸಿತೋ ನಾಮ ಪರ್ವತಃ||
ವೀರ! ಮಗೂ! ಅಲ್ಲಿ ಪುಣ್ಯ ಸರೋವರವೂ ಮೈನಾಕ ಪರ್ವತವೂ ಮತ್ತು ಬಹಳಷ್ಟು ಫಲಮೂಲಗಳಿರುವ ಅಸಿತ ಎಂಬ ಹೆಸರಿನ ಪರ್ವತವೂ ಇವೆ.
03087010a ಆಶ್ರಮಃ ಕಕ್ಷಸೇನಸ್ಯ ಪುಣ್ಯಸ್ತತ್ರ ಯುಧಿಷ್ಠಿರ|
03087010c ಚ್ಯವನಸ್ಯಾಶ್ರಮಶ್ಚೈವ ಖ್ಯಾತಃ ಸರ್ವತ್ರ ಪಾಂಡವ||
03087010e ತತ್ರಾಲ್ಪೇನೈವ ಸಿಧ್ಯಂತಿ ಮಾನವಾಸ್ತಪಸಾ ವಿಭೋ|
ಯುಧಿಷ್ಠಿರ! ಪಾಂಡವ! ಅಲ್ಲಿ ಕಕ್ಷಸೇನನ ಪುಣ್ಯಾಶ್ರಮವೂ ಮತ್ತು ಸರ್ವತ್ರ ಖ್ಯಾತ ಚ್ಯವನನ ಆಶ್ರಮವೂ ಇವೆ. ವಿಭೋ! ಅಲ್ಲಿ ಸ್ವಲ್ಪವೇ ತಪಸ್ಸಿನಿಂದ ಮಾನವರು ಸಿದ್ಧಿಯನ್ನು ಹೊಂದುತ್ತಾರೆ.
03087011a ಜಂಬೂಮಾರ್ಗೋ ಮಹಾರಾಜ ಋಷೀಣಾಂ ಭಾವಿತಾತ್ಮನಾಂ||
03087011c ಆಶ್ರಮಃ ಶಾಮ್ಯತಾಂ ಶ್ರೇಷ್ಠ ಮೃಗದ್ವಿಜಗಣಾಯುತಃ|
ಮಹಾರಾಜ! ಅಲ್ಲಿ ಋಷಿಗಳ ಮತ್ತು ಭಾವಿತಾತ್ಮರ ಆಶ್ರಮಗಳಿಂದೊಡಗೂಡಿದ, ಮೃಗ ಪಕ್ಷಿಗಣಗಳಿಂದೊಡಗೂಡಿದ ಜಂಬೂಮಾರ್ಗವಿದೆ.
03087012a ತತಃ ಪುಣ್ಯತಮಾ ರಾಜನ್ಸತತಂ ತಾಪಸಾಯುತಾ||
03087012c ಕೇತುಮಾಲಾ ಚ ಮೇಧ್ಯಾ ಚ ಗಂಗಾರಣ್ಯಂ ಚ ಭೂಮಿಪ|
ರಾಜನ್! ಭೂಮಿಪ! ಅಲ್ಲಿಯೇ ಸತತವೂ ತಾಪಸರಿಂದೊಡಗೂಡಿದ ಕೇತುಮಾಲ, ಮೇಧ್ಯ ಮತ್ತು ಗಂಗಾರಣ್ಯಗಳಿವೆ.
03087012e ಖ್ಯಾತಂ ಚ ಸೈಂಧವಾರಣ್ಯಂ ಪುಣ್ಯಂ ದ್ವಿಜನಿಷೇವಿತಂ||
03087013a ಪಿತಾಮಹಸರಃ ಪುಣ್ಯಂ ಪುಷ್ಕರಂ ನಾಮ ಭಾರತ|
03087013c ವೈಖಾನಸಾನಾಂ ಸಿದ್ಧಾನಾಮೃಷೀಣಾಮಾಶ್ರಮಃ ಪ್ರಿಯಃ||
ಭಾರತ! ಅಲ್ಲಿಯೇ ಪುಣ್ಯವೂ ದ್ವಿಜಸೇವಿತವೂ ಆದ ಖ್ಯಾತ ಸೈಂಧವಾರಣ್ಯ, ಪುಷ್ಕರ ಎಂಬ ಹೆಸರಿನ ವೈಖಾನಸರ, ಸಿದ್ಧರ ಮತ್ತು ಋಷಿಗಳ ಪ್ರಿಯ ಆಶ್ರಮ ಪಿತಾಮಹ ಬ್ರಹ್ಮನ ಪುಣ್ಯ ಸರೋವರವಿದೆ.
03087014a ಅಪ್ಯತ್ರ ಸಂಸ್ತವಾರ್ಥಾಯ ಪ್ರಜಾಪತಿರಥೋ ಜಗೌ|
03087014c ಪುಷ್ಕರೇಷು ಕುರುಶ್ರೇಷ್ಠ ಗಾಥಾಂ ಸುಕೃತಿನಾಂ ವರ||
ಕುರುಶ್ರೇಷ್ಠ! ಸುಕೃತರಲ್ಲಿ ಶ್ರೇಷ್ಠ! ಪುಷ್ಕರವನ್ನು ಹೊಗಳಿ ಪ್ರಜಾಪತಿಯು ಹೇಳಿದ ಶ್ಲೋಕವಿದೆ. ಕೇಳು.
03087015a ಮನಸಾಪ್ಯಭಿಕಾಮಸ್ಯ ಪುಷ್ಕರಾಣಿ ಮನಸ್ವಿನಃ|
03087015c ಪಾಪಾಣಿ ವಿಪ್ರಣಶ್ಯಂತಿ ನಾಕಪೃಷ್ಠೇ ಚ ಮೋದತೇ||
“ಮನಸ್ಸಿನಲ್ಲಿಯಾದರೂ ಪುಷ್ಕರವನ್ನು ಬಯಸುವವನು ಎಲ್ಲ ಪಾಪಗಳನ್ನೂ ಕಳಚಿಕೊಂಡು ಸ್ವರ್ಗದಲ್ಲಿ ಮೆರೆಯುತ್ತಾನೆ.””
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಧೌಮ್ಯತೀರ್ಥಯಾತ್ರಾಯಾಂ ಸಪ್ತಾಶೀತಿತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಧೌಮ್ಯತೀರ್ಥಯಾತ್ರಾ ಎನ್ನುವ ಎಂಭತ್ತೇಳನೆಯ ಅಧ್ಯಾಯವು.