Aranyaka Parva: Chapter 85

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೮೫

ಧೌಮ್ಯನಿಂದ ತೀರ್ಥಕ್ಷೇತ್ರಗಳ ಕೀರ್ತನೆ

ಧೌಮ್ಯನು ಯುಧಿಷ್ಠಿರನಿಗೆ ಪೂರ್ವದಿಕ್ಕಿನಲ್ಲಿರುವ ತೀರ್ಥಕ್ಷೇತ್ರಗಳ ಕುರಿತು ಹೇಳಿದುದು (೧-೨೩).

03085001 ವೈಶಂಪಾಯನ ಉವಾಚ|

03085001a ತಾನ್ಸರ್ವಾನುತ್ಸುಕಾನ್ದೃಷ್ಟ್ವಾ ಪಾಂಡವಾನ್ದೀನಚೇತಸಃ|

03085001c ಆಶ್ವಾಸಯಂಸ್ತದಾ ಧೌಮ್ಯೋ ಬೃಹಸ್ಪತಿಸಮೋಽಬ್ರವೀತ್||

ವೈಶಂಪಾಯನನು ಹೇಳಿದನು: “ಬೇಸರದಿಂದಿದ್ದ ಪಾಂಡವರು ಎಲ್ಲರೂ ಹೊರಡಲು ಉತ್ಸುಕರಾಗಿದ್ದುದನ್ನು ಕಂಡು ಬೃಹಸ್ಪತಿಯ ಸಮನಾಗಿದ್ದ ಧೌಮ್ಯನು ಅವರಿಗೆ ಆಶ್ವಾಸನೆಯನ್ನು ನೀಡುತ್ತಾ ಹೇಳಿದನು:

03085002a ಬ್ರಾಹ್ಮಣಾನುಮತಾನ್ಪುಣ್ಯಾನಾಶ್ರಮಾನ್ಭರತರ್ಷಭ|

03085002c ದಿಶಸ್ತೀರ್ಥಾನಿ ಶೈಲಾಂಶ್ಚ ಶೃಣು ಮೇ ಗದತೋ ನೃಪ||

“ಭರತರ್ಷಭ! ನೃಪ! ಬ್ರಾಹ್ಮಣರು ಅನುಮತಿ ನೀಡುವ, ಬೇರೆ ಬೇರೆ ದಿಕ್ಕುಗಳಲ್ಲಿರುವ ಪುಣ್ಯಾಶ್ರಮ, ತೀರ್ಥ, ಮತ್ತು ಪರ್ವತಗಳ ಕುರಿತು ಹೇಳುತ್ತೇನೆ. ಕೇಳು.

03085003a ಪೂರ್ವಂ ಪ್ರಾಚೀಂ ದಿಶಂ ರಾಜನ್ರಾಜರ್ಷಿಗಣಸೇವಿತಾಂ|

03085003c ರಮ್ಯಾಂ ತೇ ಕೀರ್ತಯಿಷ್ಯಾಮಿ ಯುಧಿಷ್ಠಿರ ಯಥಾಸ್ಮೃತಿ||

ಯುಧಿಷ್ಠಿರ! ರಾಜನ್! ಮೊದಲು ಪಶ್ಚಿಮ ದಿಕ್ಕಿನಲ್ಲಿರುವ ರಾಜರ್ಷಿಗಣ ಸೇವಿತ ರಮ್ಯ ತೀರ್ಥಗಳ ಕುರಿತು ಸ್ಮೃತಿಗಳಲ್ಲಿ ಹೇಳಿರುವ ಹಾಗೆ ಹೇಳುತ್ತೇನೆ.

03085004a ತಸ್ಯಾಂ ದೇವರ್ಷಿಜುಷ್ಟಾಯಾಂ ನೈಮಿಷಂ ನಾಮ ಭಾರತ|

03085004c ಯತ್ರ ತೀರ್ಥಾನಿ ದೇವಾನಾಂ ಸುಪುಣ್ಯಾನಿ ಪೃಥಕ್ ಪೃಥಕ್||

ಭಾರತ ! ಅಲ್ಲಿ ದೇವರ್ಷಿಗಳು ಬಯಸುವ ನೈಮಿಷ ಎಂಬ ಹೆಸರಿನ ಅರಣ್ಯವಿದೆ. ಅಲ್ಲಿ ಬೇರೆ ಬೇರೆ ದೇವತೆಗಳಿಗೆ ಪುಣ್ಯಕರವಾದ ಅನೇಕ ತೀರ್ಥಗಳಿವೆ.

03085005a ಯತ್ರ ಸಾ ಗೋಮತೀ ಪುಣ್ಯಾ ರಮ್ಯಾ ದೇವರ್ಷಿಸೇವಿತಾ|

03085005c ಯಜ್ಞಭೂಮಿಶ್ಚ ದೇವಾನಾಂ ಶಾಮಿತ್ರಂ ಚ ವಿವಸ್ವತಃ||

ಅಲ್ಲಿ ದೇವರ್ಷಿಸೇವಿತ ರಮ್ಯ ಪುಣ್ಯ ಗೋಮತಿಯು ಹರಿಯುತ್ತದೆ, ದೇವತೆಗಳ ಯಜ್ಞ ಭೂಮಿಯಿದೆ ಮತ್ತು ವಿವಸ್ವತನ ಕಟುಕಸ್ಥಾನವಿದೆ.

03085006a ತಸ್ಯಾಂ ಗಿರಿವರಃ ಪುಣ್ಯೋ ಗಯೋ ರಾಜರ್ಷಿಸತ್ಕೃತಃ|

03085006c ಶಿವಂ ಬ್ರಹ್ಮಸರೋ ಯತ್ರ ಸೇವಿತಂ ತ್ರಿದಶರ್ಷಿಭಿಃ||

ಅಲ್ಲಿ ರಾಜರ್ಷಿಗಳಿಂದ ಸತ್ಕೃತ ಗಯ ಎನ್ನುವ ಪುಣ್ಯ ಪರ್ವತವಿದೆ ಮತ್ತು ಮೂವತ್ತು ದೇವತೆಗಳು ಸೇವಿಸುವ ಮಂಗಳಕರ ಬ್ರಹ್ಮಸರೋವರವಿದೆ.

03085007a ಯದರ್ಥಂ ಪುರುಷವ್ಯಾಘ್ರ ಕೀರ್ತಯಂತಿ ಪುರಾತನಾಃ|

03085007c ಏಷ್ಟವ್ಯಾ ಬಹವಃ ಪುತ್ರಾ ಯದ್ಯೇಕೋಽಪಿ ಗಯಾಂ ವ್ರಜೇತ್||

ಪುರುಷವ್ಯಾಘ್ರ! ಅದಕ್ಕಾಗಿಯೇ ಪುರಾತನ ಕೀರ್ತನೆಯಿದೆ - ಒಬ್ಬನಾದರೂ ಗಯಕ್ಕೆ ಹೋಗಲಿಕ್ಕೆಂದು ಬಹಳ ಪುತ್ರರನ್ನು ಬಯಸಬೇಕು.

03085008a ಮಹಾನದೀ ಚ ತತ್ರೈವ ತಥಾ ಗಯಶಿರೋಽನಘ|

03085008c ಯತ್ರಾಸೌ ಕೀರ್ತ್ಯತೇ ವಿಪ್ರೈರಕ್ಷಯ್ಯಕರಣೋ ವಟಃ||

03085008e ಯತ್ರ ದತ್ತಂ ಪಿತೃಭ್ಯೋಽನ್ನಮಕ್ಷಯ್ಯಂ ಭವತಿ ಪ್ರಭೋ||

ಅನಘ ! ಅಲ್ಲಿಯೇ ಮಹಾನದೀ ಮತ್ತು ಗಯಶಿರ ನದಿಗಳಿವೆ. ಅಲ್ಲಿಯೇ ಇರುವ ಅಕ್ಷಯಕರಣ ವಟವೃಕ್ಷವನ್ನು ವಿಪ್ರರು ಪ್ರಶಂಸಿಸುತ್ತಾರೆ. ಪ್ರಭೋ! ಅಲ್ಲಿ ಪಿತೃಗಳಿಗೆ ನೀಡಿದ ಅನ್ನವು ಅಕ್ಷಯವಾಗುತ್ತದೆ.

03085009a ಸಾ ಚ ಪುಣ್ಯಜಲಾ ಯತ್ರ ಫಲ್ಗುನಾಮಾ ಮಹಾನದೀ|

03085009c ಬಹುಮೂಲಫಲಾ ಚಾಪಿ ಕೌಶಿಕೀ ಭರತರ್ಷಭ||

03085009e ವಿಶ್ವಾಮಿತ್ರೋಽಭ್ಯಗಾದ್ಯತ್ರ ಬ್ರಾಹ್ಮಣತ್ವಂ ತಪೋಧನಃ||

ಭರತರ್ಷಭ! ಅಲ್ಲಿ ಫಲ್ಗು ಎಂಬ ಹೆಸರಿನ ಪುಣ್ಯನದಿಯು ಹರಿಯುತ್ತದೆ. ಅಲ್ಲಿಯೇ ತಪೋಧನ ವಿಶ್ವಾಮಿತ್ರನು ಬ್ರಾಹ್ಮಣತ್ವವನ್ನು ಪಡೆದ ಬಹಳಷ್ಟು ಫಲಮೂಲಗಳಿರುವ ಕೌಶಿಕೀ ನದಿಯೂ ಹರಿಯುತ್ತದೆ.

03085010a ಗಂಗಾ ಯತ್ರ ನದೀ ಪುಣ್ಯಾ ಯಸ್ಯಾಸ್ತೀರೇ ಭಗೀರಥಃ|

03085010c ಅಯಜತ್ತಾತ ಬಹುಭಿಃ ಕ್ರತುಭಿರ್ಭೂರಿದಕ್ಷಿಣೈಃ||

ಮಗೂ! ಅಲ್ಲಿ ಭಗೀರಥನು ಬಹಳಷ್ಟು ದಕ್ಷಿಣೆಗಳಿಂದೊಡಗೂಡಿದ ಹಲವಾರು ಕ್ರತುಗಳನ್ನು ನೆರವೇರಿಸಿದ ಪುಣ್ಯ ಗಂಗಾನದಿಯ ತೀರವೂ ಇದೆ.

03085011a ಪಾಂಚಾಲೇಷು ಚ ಕೌರವ್ಯ ಕಥಯಂತ್ಯುತ್ಪಲಾವತಂ|

03085011c ವಿಶ್ವಾಮಿತ್ರೋಽಯಜದ್ಯತ್ರ ಶಕ್ರೇಣ ಸಹ ಕೌಶಿಕಃ||

ಕೌರವ್ಯ! ಪಾಂಚಾಲದೇಶದಲ್ಲಿ ಉತ್ಪಲಾವತದಲ್ಲಿ ಶಕ್ರನೊಂದಿಗೆ ಕೌಶಿಕ ವಿಶ್ವಾಮಿತ್ರನು ಯಾಗಮಾಡಿದನು.

03085011e ಯತ್ರಾನುವಂಶಂ ಭಗವಾನ್ಜಾಮದಗ್ನ್ಯಸ್ತಥಾ ಜಗೌ||

03085012a ವಿಶ್ವಾಮಿತ್ರಸ್ಯ ತಾಂ ದೃಷ್ಟ್ವಾ ವಿಭೂತಿಮತಿಮಾನುಷೀಂ|

03085012c ಕನ್ಯಕುಬ್ಜೇಽಪಿಬತ್ಸೋಮಮಿಂದ್ರೇಣ ಸಹ ಕೌಶಿಕಃ||

03085012e ತತಃ ಕ್ಷತ್ರಾದಪಾಕ್ರಾಮದ್ಬ್ರಾಹ್ಮಣೋಽಸ್ಮೀತಿ ಚಾಬ್ರವೀತ್||

ಅಲ್ಲಿಗೆ ಹೋಗಿದ್ದ ಭಗವಾನ್ ಜಾಮದಗ್ನಿಯು ವಿಶಾಮಿತ್ರನ ಅಮಾನುಷ ಅತಿ ವಿಭೂತಿಯನ್ನು ನೋಡಿ ಈ ರೀತಿ ಹೇಳಿದ್ದನು: “ಕನ್ಯಕುಬ್ಜದಲ್ಲಿ ಕೌಶಿಕನು ಇಂದ್ರನೊಂದಿಗೆ ಸೋಮವನ್ನು ಕುಡಿದ ನಂತರ ಅವನು “ಕ್ಷಾತ್ರಪದದಿಂದ ಹೊರಬಂದ ನಾನು ಬ್ರಾಹ್ಮಣನಾಗಿದ್ದೇನೆ!” ಎಂದು ಘೋಷಿಸಿದನು.”

03085013a ಪವಿತ್ರಂ ಋಷಿಭಿರ್ಜುಷ್ಟಂ ಪುಣ್ಯಂ ಪಾವನಮುತ್ತಮಂ|

03085013c ಗಂಗಾಯಮುನಯೋರ್ವೀರ ಸಂಗಮಂ ಲೋಕವಿಶ್ರುತಂ||

03085014a ಯತ್ರಾಯಜತ ಭೂತಾತ್ಮಾ ಪೂರ್ವಮೇವ ಪಿತಾಮಹಃ|

03085014c ಪ್ರಯಾಗಮಿತಿ ವಿಖ್ಯಾತಂ ತಸ್ಮಾದ್ಭರತಸತ್ತಮ||

ಋಷಿಗಳು ಭೇಟಿನೀಡುವ, ಪವಿತ್ರ, ಪುಣ್ಯ, ಪಾವನ, ಉತ್ತಮ, ಲೋಕವಿಶ್ರುತ ಗಂಗೆ ಮತ್ತು ಯಮುನೆಯರ ಸಂಗಮವಿದೆ. ಅಲ್ಲಿ ಹಿಂದೆ ಭೂತಾತ್ಮ ಪಿತಾಮಹನು ಯಜ್ಞ ಮಾಡಿದ್ದನು. ಭರತಸತ್ತಮ! ಅದು ಪ್ರಯಾಗವೆಂದು ವಿಖ್ಯಾತವಾಗಿದೆ.

03085015a ಅಗಸ್ತ್ಯಸ್ಯ ಚ ರಾಜೇಂದ್ರ ತತ್ರಾಶ್ರಮವರೋ ಮಹಾನ್|

03085015c ಹಿರಣ್ಯಬಿಂದುಃ ಕಥಿತೋ ಗಿರೌ ಕಾಲಂಜರೇ ನೃಪ||

ರಾಜೇಂದ್ರ! ನೃಪ! ಅಲ್ಲಿ ಮಹಾ ಶ್ರೇಷ್ಠವಾದ ಹಿರಣ್ಯ ಬಿಂದು ಮತ್ತು ಕಾಲಂಜರ ಗಿರಿಗಳೆಂದು ಎಂದು ಕರೆಯಲ್ಪಟ್ಟ ಅಗಸ್ತ್ಯನ ಆಶ್ರಮವಿದೆ.

03085016a ಅತ್ಯನ್ಯಾನ್ಪರ್ವತಾನ್ರಾಜನ್ಪುಣ್ಯೋ ಗಿರಿವರಃ ಶಿವಃ|

03085016c ಮಹೇಂದ್ರೋ ನಾಮ ಕೌರವ್ಯ ಭಾರ್ಗವಸ್ಯ ಮಹಾತ್ಮನಃ||

03085017a ಅಯಜದ್ಯತ್ರ ಕೌಂತೇಯ ಪೂರ್ವಮೇವ ಪಿತಾಮಹಃ|

03085017c ಯತ್ರ ಭಾಗೀರಥೀ ಪುಣ್ಯಾ ಸದಸ್ಯಾಸೀದ್ಯುಧಿಷ್ಠಿರ||

ರಾಜನ್! ಕೌರವ್ಯ! ಬೇರೆ ಯಾವ ಪರ್ವತಗಳಿಂಗಿಂತಲೂ ಪುಣ್ಯಕರವಾದ, ಮಂಗಳಕರವಾದ ಮಹೇಂದ್ರ ಎಂಬ ಹೆಸರಿನ ಮಹಾತ್ಮ ಭಾರ್ಗವನ ಶ್ರೇಷ್ಠ ಗಿರಿಯಿದೆ. ಕೌಂತೇಯ! ಹಿಂದೆ ಅಲ್ಲಿ ಪಿತಾಮಹನು ಯಾಗಮಾಡಿದ್ದನು. ಯುಧಿಷ್ಠಿರ! ಆ ಯಾಗದಲ್ಲಿ ಪುಣ್ಯ ಗಂಗೆಯು ಸದಸ್ಯಳಾಗಿದ್ದಳು.

03085018a ಯತ್ರಾಸೌ ಬ್ರಹ್ಮಶಾಲೇತಿ ಪುಣ್ಯಾ ಖ್ಯಾತಾ ವಿಶಾಂ ಪತೇ|

03085018c ಧೂತಪಾಪ್ಮಭಿರಾಕೀರ್ಣಾ ಪುಣ್ಯಂ ತಸ್ಯಾಶ್ಚ ದರ್ಶನಂ|

ವಿಶಾಂಪತೇ! ಅಲ್ಲಿಯೇ ಬ್ರಹ್ಮಶಾಲ ಎಂದು ಖ್ಯಾತ ಪುಣ್ಯಕರ ಪ್ರದೇಶವಿದೆ. ಅಲ್ಲಿ ಪಾಪಗಳನ್ನು ತೊಳೆದುಕೊಂಡವರ ಗುಂಪೇ ಇದೆ. ಅದರ ದರ್ಶನವೇ ಪುಣ್ಯಕರವಾದುದು.

03085019a ಪವಿತ್ರೋ ಮಂಗಲೀಯಶ್ಚ ಖ್ಯಾತೋ ಲೋಕೇ ಸನಾತನಃ|

03085019c ಕೇದಾರಶ್ಚ ಮತಂಗಸ್ಯ ಮಹಾನಾಶ್ರಮ ಉತ್ತಮಃ||

03085020a ಕುಂಡೋದಃ ಪರ್ವತೋ ರಮ್ಯೋ ಬಹುಮೂಲಫಲೋದಕಃ|

03085020c ನೈಷಧಸ್ತೃಷಿತೋ ಯತ್ರ ಜಲಂ ಶರ್ಮ ಚ ಲಬ್ಧವಾನ್||

ಪವಿತ್ರವೂ, ಮಂಗಳಕರವೂ, ಲೋಕದಲ್ಲಿ ಖ್ಯಾತವೂ, ಸನಾತನವೂ ಆದ ಮತಂಗನ ಬಯಲುಪ್ರದೇಶದ ಮಹಾ ಆಶ್ರಮವಿದೆ. ಹಾಗೆಯೇ ಅಲ್ಲಿ ರಮ್ಯವೂ, ಬಹಳ ಫಲ ಮೂಲ ನೀರಿನಿಂದ ಕೂಡಿದ ಕುಂಡೋದ ಪರ್ವತವಿದೆ. ಬಾಯಾರಿದ ನಿಷಾಧರು ಇದನ್ನು ನೀರಿನ ಮೂಲ ಮತ್ತು ನಿವಾಸಸ್ಥಾನವನ್ನಾಗಿ ಕಂಡರು.

03085021a ಯತ್ರ ದೇವವನಂ ರಮ್ಯಂ ತಾಪಸೈರುಪಶೋಭಿತಂ|

03085021c ಬಾಹುದಾ ಚ ನದೀ ಯತ್ರ ನಂದಾ ಚ ಗಿರಿಮೂರ್ಧನಿ||

ಅಲ್ಲಿಯೇ ತಾಪಸರಿಂದ ಶೋಭಿತಗೊಂಡ ರಮ್ಯ ದೇವವನವಿದೆ. ಆ ಗಿರಿಯ ನೆತ್ತಿಯ ಮೇಲೆ ಬಾಹುದಾ ಮತ್ತು ನಂದಾ ನದಿಗಳು ಹರಿಯುತ್ತವೆ.

03085022a ತೀರ್ಥಾನಿ ಸರಿತಃ ಶೈಲಾಃ ಪುಣ್ಯಾನ್ಯಾಯತನಾನಿ ಚ|

03085022c ಪ್ರಾಚ್ಯಾಂ ದಿಶಿ ಮಹಾರಾಜ ಕೀರ್ತಿತಾನಿ ಮಯಾ ತವ||

ಮಹಾರಾಜ! ನಾನು ಈಗ ಪೂರ್ವದಿಕ್ಕಿನಲ್ಲಿರುವ ತೀರ್ಥಗಳು, ನದಿಗಳು, ಗಿರಿಪರ್ವತಗಳು ಮತ್ತು ಪುಣ್ಯ ಸ್ಥಳಗಳ ಕುರಿತು ನಿನಗೆ ಹೇಳಿದ್ದೇನೆ.

03085023a ತಿಸೃಷ್ವನ್ಯಾಸು ಪುಣ್ಯಾನಿ ದಿಕ್ಷು ತೀರ್ಥಾನಿ ಮೇ ಶೃಣು|

03085023c ಸರಿತಃ ಪರ್ವತಾಂಶ್ಚೈವ ಪುಣ್ಯಾನ್ಯಾಯತನಾನಿ ಚ||

ಈಗ ಉಳಿದ ಮೂರು ದಿಕ್ಕುಗಳಲ್ಲಿರುವ ಪುಣ್ಯ ತೀರ್ಥಗಳು, ನದಿಗಳು, ಪರ್ವತಗಳು ಮತ್ತು ಪುಣ್ಯಕ್ಷೇತ್ರಗಳ ಕುರಿತು ನನ್ನಿಂದ ಕೇಳು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಧೌಮ್ಯತೀರ್ಥಯಾತ್ರಾಯಾಂ ಪಂಚಾಶೀತಿತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಧೌಮ್ಯತೀರ್ಥಯಾತ್ರಾ ಎನ್ನುವ ಎಂಭತ್ತೈದನೆಯ ಅಧ್ಯಾಯವು.

Related image

Comments are closed.