Aranyaka Parva: Chapter 84

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೮೪

ಅರ್ಜುನನಿಲ್ಲದೇ ದುಃಖಿತನಾಗಿ ಕಾಮ್ಯಕವನದಲ್ಲಿ ಇರಲು ಕಷ್ಟವಾಗುತ್ತಿದೆ; ಬೇರೆ ಯಾವುದಾದರೂ ವನವಿದ್ದರೆ ಹೇಳೆಂದು ಯುಧಿಷ್ಠಿರನು ಧೌಮ್ಯನನ್ನು ಕೇಳುವುದು (೧-೨೦).

03084001 ವೈಶಂಪಾಯನ ಉವಾಚ|

03084001a ಭ್ರಾತೄಣಾಂ ಮತಮಾಜ್ಞಾಯ ನಾರದಸ್ಯ ಚ ಧೀಮತಃ|

03084001c ಪಿತಾಮಹಸಮಂ ಧೌಮ್ಯಂ ಪ್ರಾಹ ರಾಜಾ ಯುಧಿಷ್ಠಿರಃ||

ವೈಶಂಪಾಯನನು ಹೇಳಿದನು: “ಧೀಮಂತ ನಾರದನ ಮತ್ತು ಸಹೋದರರ ಮನಸ್ಸನ್ನು ತಿಳಿದ ರಾಜಾ ಯುಧಿಷ್ಠಿರನು ಪಿತಾಮಹಸಮನಾದ ಧೌಮ್ಯನಿಗೆ ಹೇಳಿದನು:

03084002a ಮಯಾ ಸ ಪುರುಷವ್ಯಾಘ್ರೋ ಜಿಷ್ಣುಃ ಸತ್ಯಪರಾಕ್ರಮಃ|

03084002c ಅಸ್ತ್ರಹೇತೋರ್ಮಹಾಬಾಹುರಮಿತಾತ್ಮಾ ವಿವಾಸಿತಃ||

“ಅಸ್ತ್ರಗಳಿಗೋಸ್ಕರ ನಾನು ಅಮಿತಾತ್ಮ, ಪುರುಷವ್ಯಾಘ್ರ, ಸತ್ಯಪರಾಕ್ರಮಿ ಜಿಷ್ಣುವನ್ನು ಕಳುಹಿಸಿದ್ದೇನೆ.

03084003a ಸ ಹಿ ವೀರೋಽನುರಕ್ತಶ್ಚ ಸಮರ್ಥಶ್ಚ ತಪೋಧನ|

03084003c ಕೃತೀ ಚ ಭೃಶಮಪ್ಯಸ್ತ್ರೇ ವಾಸುದೇವ ಇವ ಪ್ರಭುಃ||

ತಪೋಧನ! ಆ ವೀರನು ಅನುರಕ್ತನೂ ಸಮರ್ಥನೂ ಹೌದು ಮತ್ತು ಅಸ್ತ್ರಗಳಲ್ಲಿ ಪರಿಣತಿಯನ್ನು ಹೊಂದಿದವನು. ಪ್ರಭು ವಾಸುದೇವನ ಸಮ.

03084004a ಅಹಂ ಹ್ಯೇತಾವುಭೌ ಬ್ರಹ್ಮನ್ಕೃಷ್ಣಾವರಿನಿಘಾತಿನೌ|

03084004c ಅಭಿಜಾನಾಮಿ ವಿಕ್ರಾಂತೌ ತಥಾ ವ್ಯಾಸಃ ಪ್ರತಾಪವಾನ್||

03084004e ತ್ರಿಯುಗೌ ಪುಂಡರೀಕಾಕ್ಷೌ ವಾಸುದೇವಧನಂಜಯೌ||

ಬ್ರಹ್ಮನ್! ಪ್ರತಾಪಿ ವ್ಯಾಸನು ವಿಕ್ರಾಂತರಾದ ಅರಿನಿಘಾತಿಗಳಾದ ಈ ಪುಂಡರೀಕಾಕ್ಷ ಕೃಷ್ಣರೀರ್ವರು ಮೂರು ಯುಗಗಳಲ್ಲಿದ್ದ ವಾಸುದೇವ-ಧನಂಜಯರು ಎನ್ನುವುದನ್ನು ಅರಿತುಕೊಂಡಿದ್ದಂತೆ ನಾನೂ ಕೂಡ ತಿಳಿದುಕೊಂಡಿದ್ದೇನೆ.

03084005a ನಾರದೋಽಪಿ ತಥಾ ವೇದ ಸೋಽಪ್ಯಶಂಸತ್ಸದಾ ಮಮ|

03084005c ತಥಾಹಮಪಿ ಜಾನಾಮಿ ನರನಾರಾಯಣಾವೃಷೀ||

ನಾರದನಿಗೂ ಕೂಡ ಇದೇ ವಿಷಯವು ತಿಳಿದಿದೆ ಮತ್ತು ಅವನು ಸದಾ ನನ್ನಲ್ಲಿ ಇದನ್ನು ಹೇಳುತ್ತಿರುತ್ತಾನೆ. ಇವರೀರ್ವರು ಋಷಿಗಳಾದ ನರ ಮತ್ತು ನಾರಾಯಣರು ಎಂದು ನಾನೂ ಕೂಡ ತಿಳಿದಿದ್ದೇನೆ.

03084006a ಕ್ತೋಽಯಮಿತ್ಯತೋ ಮತ್ವಾ ಮಯಾ ಸಂಪ್ರೇಷಿತೋಽರ್ಜುನಃ|

03084006c ಇಂದ್ರಾದನವರಃ ಶಕ್ತಃ ಸುರಸೂನುಃ ಸುರಾಧಿಪಂ||

03084006e ದ್ರಷ್ಟುಮಸ್ತ್ರಾಣಿ ಚಾದಾತುಮಿಂದ್ರಾದಿತಿ ವಿವಾಸಿತಃ||

ಅವನು ಈ ವಿಷಯದಲ್ಲಿ ಶಕ್ತ ಎಂದು ತಿಳಿದೇ ನಾನು ಇಂದ್ರನ ಸರಿಸಮಾನ ನರನಾದ, ಸುರರ ಮಗ ಅರ್ಜುನನನ್ನು, ಸುರಾಧಿಪ ಇಂದ್ರನನ್ನು ಕಂಡು ಅವನಿಂದ ಅಸ್ತ್ರಗಳನ್ನು ತರಲು ಕಳುಹಿಸಿದ್ದೇನೆ.

03084007a ಭೀಷ್ಮದ್ರೋಣಾವತಿರಥೌ ಕೃಪೋ ದ್ರೌಣಿಶ್ಚ ದುರ್ಜಯಃ|

03084007c ಧೃತರಾಷ್ಟ್ರಸ್ಯ ಪುತ್ರೇಣ ವೃತಾ ಯುಧಿ ಮಹಾಬಲಾಃ||

03084007e ಸರ್ವೇ ವೇದವಿದಃ ಶೂರಾಃ ಸರ್ವೇಽಸ್ತ್ರಕುಶಲಾಸ್ತಥಾ||

ಭೀಷ್ಮ-ದ್ರೋಣರು ಅತಿರಥರು. ಮಹಾಬಲಶಾಲಿಗಳಾದ ಕೃಪ, ದ್ರೌಣಿ, ದುರ್ಜಯರು ಯುದ್ಧದಲ್ಲಿ ಧೃತರಾಷ್ಟ್ರನ ಮಗನೊಂದಿಗೆ ಭಾಗವಹಿಸುವರು. ಅವರೆಲ್ಲರೂ ವೇದವಿದರೂ ಶೂರರೂ ಆಗಿದ್ದು ಎಲ್ಲರೂ ಅಸ್ತ್ರಗಳಲ್ಲಿ ಕುಶಲರಾಗಿದ್ದಾರೆ.

03084008a ಯೋದ್ಧುಕಾಮಶ್ಚ ಪಾರ್ಥೇನ ಸತತಂ ಯೋ ಮಹಾಬಲಃ|

03084008c ಸ ಚ ದಿವ್ಯಾಸ್ತ್ರವಿತ್ಕರ್ಣಃ ಸೂತಪುತ್ರೋ ಮಹಾರಥಃ||

ಸತತವೂ ಪಾರ್ಥನೊಂದಿಗೆ ಯುದ್ಧಮಾಡಲು ಇಚ್ಛಿಸುವ ಮಹಾಬಲಿ ಮಹಾರಥಿ ಸೂತಪುತ್ರ ಕರ್ಣನು ದಿವ್ಯಾಸ್ತ್ರಗಳಲ್ಲಿ ಪರಿಣಿತಿ ಹೊಂದಿದ್ದಾನೆ.

03084009a ಸೋಽಶ್ವವೇಗಾನಿಲಬಲಃ ಶರಾರ್ಚಿಸ್ತಲನಿಸ್ವನಃ|

03084009c ರಜೋಧೂಮೋಽಸ್ತ್ರಸಂತಾಪೋ ಧಾರ್ತರಾಷ್ಟ್ರಾನಿಲೋದ್ಧತಃ||

ಅವನಲ್ಲಿ ಅಶ್ವಗಳಿಗಿಂತ ವೇಗವಿದೆ. ಭಿರುಗಾಳಿಯ ಬಲವಿದೆ. ಅವನು ಭುಗಿಲೆದ್ದ ಬೆಂಕಿಯಂತೆ ಭೋರ್ಗರೆಯುತ್ತಾನೆ ಮತ್ತು ಬೆಂಕಿಯ ಕಿಡಿಗಳಂತೆ ಬಾಣಗಳನ್ನು ಹಾರಿಸುತ್ತಾನೆ. ಆ ಅಸ್ತ್ರಸಂತಾಪನು ಧಾರ್ತರಾಷ್ಟ್ರರು ಎಬ್ಬಿಸಿದ ಭಿರುಗಾಳಿಯ ಧೂಳಿನ ಮೋಡದಂತೆ.

03084010a ನಿಸೃಷ್ಟ ಇವ ಕಾಲೇನ ಯುಗಾಂತಜ್ವಲನೋ ಯಥಾ|

03084010c ಮಮ ಸೈನ್ಯಮಯಂ ಕಕ್ಷಂ ಪ್ರಧಕ್ಷ್ಯತಿ ನ ಸಂಶಯಃ||

ಯುಗಾಂತದ ಬೆಂಕಿಯಂತೆ ಕಾಲನೇ ಅವನನ್ನು ನನ್ನ ಸೈನ್ಯ ಕಕ್ಷಗಳನ್ನು ಭಸ್ಮಗೊಳಿಸಲಿಕ್ಕೆಂದು ಹುಟ್ಟಿಸಿ ಬಿಟ್ಟಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ.

03084011a ತಂ ಸ ಕೃಷ್ಣಾನಿಲೋದ್ಧೂತೋ ದಿವ್ಯಾಸ್ತ್ರಜಲದೋ ಮಹಾನ್|

03084011c ಶ್ವೇತವಾಜಿಬಲಾಕಾಭೃದ್ಗಾಂಡೀವೇಂದ್ರಾಯುಧೋಜ್ಜ್ವಲಃ||

03084012a ಸತತಂ ಶರಧಾರಾಭಿಃ ಪ್ರದೀಪ್ತಂ ಕರ್ಣಪಾವಕಂ|

03084012c ಉದೀರ್ಣೋಽರ್ಜುನಮೇಘೋಽಯಂ ಶಮಯಿಷ್ಯತಿ ಸಂಯುಗೇ||

ಕೃಷ್ಣನೆಂಬ ಗಾಳಿಯಿಂದ ಮೇಲೆಬ್ಬಿಸಿದ, ದಿವ್ಯಾಸ್ತ್ರಗಳೆಂಬ ಮಹಾ ಮೋಡಗಳನ್ನು ಇಂದ್ರಾಯುಧದಂತಿರುವ ಅರ್ಜುನನ ಗಾಂಡೀವದ ಮಿಂಚಿನಿಂದ ಹೊಡೆಯಲ್ಪಟ್ಟ ಸತತವಾಗಿ ಶರಗಳ ಮಳೆಯಿಂದ ಕರ್ಣನೆಂಬುವ ಈ ಬೆಂಕಿಯನ್ನು ಯುದ್ಧದಲ್ಲಿ ಆರಿಸಬಲ್ಲದು.

03084013a ಸ ಸಾಕ್ಷಾದೇವ ಸರ್ವಾಣಿ ಶಕ್ರಾತ್ಪರಪುರಂಜಯಃ|

03084013c ದಿವ್ಯಾನ್ಯಸ್ತ್ರಾಣಿ ಬೀಭತ್ಸುಸ್ತತ್ತ್ವತಃ ಪ್ರತಿಪತ್ಸ್ಯತೇ||

ಆ ಬೀಭತ್ಸುವು ಪರಪುರಂಜಯ ಶಕ್ರನಿಂದ ಎಲ್ಲ ದಿವ್ಯಸ್ತ್ರಗಳನ್ನೂ ತಾನಾಗಿಯೇ ಪಡೆದುಕೊಂಡು ಬರುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

03084014a ಅಲಂ ಸ ತೇಷಾಂ ಸರ್ವೇಷಾಮಿತಿ ಮೇ ಧೀಯತೇ ಮತಿಃ|

03084014c ನಾಸ್ತಿ ತ್ವತಿಕ್ರಿಯಾ ತಸ್ಯ ರಣೇಽರೀಣಾಂ ಪ್ರತಿಕ್ರಿಯಾ||

ಅವರೆಲ್ಲರಿಗೆ ಸರಿಸಾಟಿಯಾದವನು ಅವನೇ ಎಂದು ನಾನು ಯಾವಾಗಲೂ ಯೋಚಿಸುತ್ತೇನೆ. ಅವನನ್ನು ಮೀರಿಸುವವರು ಯಾರೂ ಇಲ್ಲ ಮತ್ತು ರಣರಂಗದಲ್ಲಿ ಅವನ ಹಾಗೆ ಹೋರಾಡುವವರು ಯಾರೂ ಇರುವುದಿಲ್ಲ.

03084015a ತಂ ವಯಂ ಪಾಂಡವಂ ಸರ್ವೇ ಗೃಹೀತಾಸ್ತ್ರಂ ಧನಂಜಯಂ|

03084015c ದ್ರಷ್ಟಾರೋ ನ ಹಿ ಬೀಭತ್ಸುರ್ಭಾರಮುದ್ಯಮ್ಯ ಸೀದತಿ||

ಧನಂಜಯ ಪಾಂಡವನು ತಂದಿರುವ ಎಲ್ಲ ಅಸ್ತ್ರಗಳನ್ನೂ ನಾವು ನೋಡುತ್ತೇವೆ. ಬೀಭತ್ಸುವು ತಾನು ಎತ್ತಿಕೊಂಡ ಭಾರದ ಕೆಳಗೆ ಎಂದೂ ಕುಸಿದು ಬಿದ್ದಿಲ್ಲ.

03084016a ವಯಂ ತು ತಮೃತೇ ವೀರಂ ವನೇಽಸ್ಮಿನ್ದ್ವಿಪದಾಂ ವರ|

03084016c ಅವಧಾನಂ ನ ಗಚ್ಚಾಮಃ ಕಾಮ್ಯಕೇ ಸಹ ಕೃಷ್ಣಯಾ||

ದ್ವಿಜರಲ್ಲಿ ಶ್ರೇಷ್ಠನೇ! ಆದರೂ ಆ ವೀರನಿಲ್ಲದೇ ಇದೇ ಕಾಮ್ಯಕ ವನದಲ್ಲಿ ವಾಸಿಸಲು ಕೃಷ್ಣೆಯೂ ಸೇರಿ ನಮಗ್ಯಾರಿಗೂ  ಮನಸ್ಸಾಗುತ್ತಿಲ್ಲ.

03084017a ಭವಾನನ್ಯದ್ವನಂ ಸಾಧು ಬಹ್ವನ್ನಂ ಫಲವಚ್ಶುಚಿ|

03084017c ಆಖ್ಯಾತು ರಮಣೀಯಂ ಚ ಸೇವಿತಂ ಪುಣ್ಯಕರ್ಮಭಿಃ||

03084018a ಯತ್ರ ಕಂ ಚಿದ್ವಯಂ ಕಾಲಂ ವಸಂತಃ ಸತ್ಯವಿಕ್ರಮಂ|

03084018c ಪ್ರತೀಕ್ಷಾಮೋಽರ್ಜುನಂ ವೀರಂ ವರ್ಷಕಾಮಾ ಇವಾಂಬುದಂ||

ಭಗವನ್! ಆದುದರಿಂದ ಬೇರೆ ಯಾವುದಾದರೂ ಒಳ್ಳೆಯ, ಸಾಕಷ್ಟು ಆಹಾರ ಮತ್ತು ಫಲವು ದೊರಕಬಲ್ಲ, ಶುಚಿಯಾದ, ರಮಣೀಯವಾದ, ಪುಣ್ಯಕರ್ಮಿಗಳು ಸೇವಿಸುವ ವನದ ಕುರಿತು ತಿಳಿಸು. ಅಲ್ಲಿ ನಾವು ಮಳೆಬೇಕಾದವರು ಮೋಡಗಳ ನಿರೀಕ್ಷೆಯನ್ನು ಹೇಗೆ ಮಾಡುತ್ತಾರೋ ಹಾಗೆ ಆ ಸತ್ಯವಿಕ್ರಮ ವೀರ ಅರ್ಜುನನ ಬರವನ್ನು ಕಾಯುತ್ತಾ ಸ್ವಲ್ಪ ಕಾಲ ಅಲ್ಲಿ ವಾಸಿಸಬಹುದು.

03084019a ವಿವಿಧಾನಾಶ್ರಮಾನ್ಕಾಂಶ್ಚಿದ್ದ್ವಿಜಾತಿಭ್ಯಃ ಪರಿಶ್ರುತಾನ್|

03084019c ಸರಾಂಸಿ ಸರಿತಶ್ಚೈವ ರಮಣೀಯಾಂಶ್ಚ ಪರ್ವತಾನ್||

03084020a ಆಚಕ್ಷ್ವ ನ ಹಿ ನೋ ಬ್ರಹ್ಮನ್ರೋಚತೇ ತಮೃತೇಽರ್ಜುನಂ|

03084020c ವನೇಽಸ್ಮಿನ್ಕಾಮ್ಯಕೇ ವಾಸೋ ಗಚ್ಚಾಮೋಽನ್ಯಾಂ ದಿಶಂ ಪ್ರತಿ||

ದ್ವಿಜರು ಹೇಳಿರುವ ವಿವಿಧ ಆಶ್ರಮಗಳ, ಸರೋವರಗಳ, ನದಿಗಳ, ರಮಣೀಯ ಪರ್ವತಗಳ ಕುರಿತು ಹೇಳು. ಬ್ರಹ್ಮನ್! ಅರ್ಜುನನಿಲ್ಲದೇ ಇಲ್ಲಿ ಕಾಮ್ಯಕವನದಲ್ಲಿ ವಾಸಿಸಲು ಮನಸ್ಸಾಗುತ್ತಿಲ್ಲ. ಬೇರೆ ಕಡೆ ಹೋಗೋಣ!””

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಧೌಮ್ಯತೀರ್ಥಯಾತ್ರಾಯಾಂ ಚತುರಶೀತಿತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಧೌಮ್ಯತೀರ್ಥಯಾತ್ರಾ ಎನ್ನುವ ಎಂಭತ್ನಾಲ್ಕನೆಯ ಅಧ್ಯಾಯವು.

Related image

Comments are closed.