Aranyaka Parva: Chapter 149

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೧೪೯

ಹನುಮಂತನು ಭೀಮನಿಗೆ ತನ್ನ ಹಿಂದಿನ ರೂಪವನ್ನು ತೋರಿಸಿದುದು (೧-೧೦). ಭೀಮನ ಪ್ರಶ್ನೆಗೆ ಉತ್ತರಿಸುತ್ತಾ ಹನುಮಂತನು ರಾವಣನನ್ನು ತಾನೇ ಕೊಂದಿದ್ದರೆ ರಾಮನ ಕೀರ್ತಿಗೆ ಕೊರತೆಯಾಗುತ್ತಿತ್ತು ಎಂದು ಹೇಳುವುದು (೧೧-೧೯). ಭೀಮನಿಗೆ ಹನುಮಂತನಿತ್ತ ಧರ್ಮೋಪದೇಶ (೨೦-೫೨).

Image result for bhim saugandhika03149001 ಭೀಮ ಉವಾಚ|

03149001a ಪೂರ್ವರೂಪಮದೃಷ್ಟ್ವಾ ತೇ ನ ಯಾಸ್ಯಾಮಿ ಕಥಂ ಚನ|

03149001c ಯದಿ ತೇಽಹಮನುಗ್ರಾಹ್ಯೋ ದರ್ಶಯಾತ್ಮಾನಮಾತ್ಮನಾ||

ಭೀಮನು ಹೇಳಿದನು: “ನಿನ್ನ ಹಿಂದಿನ ರೂಪವನ್ನು ನೋಡದೇ ನಾನು ಹೋಗುವುದಿಲ್ಲ. ನನ್ನ ಮೇಲೆ ನಿನಗೆ ಅನುಗ್ರಹವಿದೆ ಎಂದಾದರೆ ನಿನ್ನ ಆತ್ಮ ಸ್ವರೂಪವನ್ನು ನನಗೆ ತೋರಿಸು!””

03149002 ವೈಶಂಪಾಯನ ಉವಾಚ|

03149002a ಏವಮುಕ್ತಸ್ತು ಭೀಮೇನ ಸ್ಮಿತಂ ಕೃತ್ವಾ ಪ್ಲವಂಗಮಃ|

03149002c ತದ್ರೂಪಂ ದರ್ಶಯಾಮಾಸ ಯದ್ವೈ ಸಾಗರಲಂಘನೇ||

ವೈಶಂಪಾಯನನು ಹೇಳಿದನು: “ಭೀಮನು ಹೀಗೆ ಹೇಳಲು ಆ ಕಪಿಯು ಮುಗುಳ್ನಕ್ಕು ಸಾಗರಲಂಘನದ ಸಮಯದ ರೂಪವನ್ನು ತೋರಿಸಿದನು.

03149003a ಭ್ರಾತುಃ ಪ್ರಿಯಮಭೀಪ್ಸನ್ವೈ ಚಕಾರ ಸುಮಹದ್ವಪುಃ|

03149003c ದೇಹಸ್ತಸ್ಯ ತತೋಽತೀವ ವರ್ಧತ್ಯಾಯಾಮವಿಸ್ತರೈಃ||

ತಮ್ಮನನ್ನು ಸಂತೋಷಗೊಳಿಸಲೋಸುಗ ಅವನು ಅತಿ ಮಹಾ ದೇಹವನ್ನು ತಾಳಿದನು ಮತ್ತು ಅವನ ದೇಹವು ಎತ್ತರ ಮತ್ತು ವಿಸ್ತಾರದಲ್ಲಿ ಅತೀವವಾಗಿ ಬೆಳೆಯಿತು.

03149004a ತದ್ರೂಪಂ ಕದಲೀಷಂಡಂ ಚಾದಯನ್ನಮಿತದ್ಯುತಿಃ|

03149004c ಗಿರೇಶ್ಚೋಚ್ಚ್ರಯಮಾಗಮ್ಯ ತಸ್ಥೌ ತತ್ರ ಸ ವಾನರ||

ಆ ಅಮಿತದ್ಯುತಿ ವಾನರನ ರೂಪವು ಬಾಳೆಯ ವನವನ್ನೂ ಮೀರಿ ಒಂದು ಪರ್ವತವೇ ಅಲ್ಲಿ ಬಂದು ನಿಂತುಕೊಂಡಂತೆ ತೋರಿತು.

03149005a ಸಮುಚ್ಚ್ರಿತಮಹಾಕಾಯೋ ದ್ವಿತೀಯ ಇವ ಪರ್ವತಃ|

03149005c ತಾಮ್ರೇಕ್ಷಣಸ್ತೀಕ್ಷ್ಣದಂಷ್ಟ್ರೋ ಭೃಕುಟೀಕೃತಲೋಚನಃ||

03149005e ದೀರ್ಘಲಾಂಗೂಲಮಾವಿಧ್ಯ ದಿಶೋ ವ್ಯಾಪ್ಯ ಸ್ಥಿತಃ ಕಪಿಃ||

ಎರಡನೆಯ ಪರ್ವತವೋ ಎನ್ನುವಂತೆ ಎತ್ತರಕ್ಕೆ ಬೆಳೆದ ಆ ಮಹಾಕಾಯ ಕಪಿಯು ತನ್ನ ತಾಮ್ರದ ಕೆಂಪಿನ ಕಣ್ಣುಗಳಿಂದ, ತೀಕ್ಷ್ಣವಾದ ಹಲ್ಲುಗಳಿಂದ, ಗಂಟುಕಟ್ಟಿದ ಕಣ್ಣುಗಳಿಂದ, ಉದ್ದವಾದ ಬಾಲದಿಂದ ದಿಕ್ಕುಗಳನ್ನೇ ವ್ಯಾಪಿಸಿ ನಿಂತುಕೊಂಡನು.

03149006a ತದ್ರೂಪಂ ಮಹದಾಲಕ್ಷ್ಯ ಭ್ರಾತುಃ ಕೌರವನಂದನಃ|

03149006c ವಿಸಿಸ್ಮಿಯೇ ತದಾ ಭೀಮೋ ಜಹೃಷೇ ಚ ಪುನಃ ಪುನಃ||

ಅಣ್ಣನ ಆ ಮಹಾ ರೂಪವನ್ನು ನೋಡಿದ ಕೌರವನಂದನ ಭೀಮನು ವಿಸ್ಮಿತನಾದನು ಮತ್ತು ಪುನಃ ಪುನಃ ಪುಳಕಿತಗೊಂಡನು.

03149007a ತಮರ್ಕಮಿವ ತೇಜೋಭಿಃ ಸೌವರ್ಣಮಿವ ಪರ್ವತಂ|

03149007c ಪ್ರದೀಪ್ತಮಿವ ಚಾಕಾಶಂ ದೃಷ್ಟ್ವಾ ಭೀಮೋ ನ್ಯಮೀಲಯತ್||

ತೇಜಸ್ಸಿನಲ್ಲಿ ಸೂರ್ಯನಂತಿರುವ, ಬಂಗಾರದ ಪರ್ವತದಂತಿರುವ, ಆಕಾಶವೇ ಬೆಳಗುತ್ತಿದೆಯೋ ಎಂದಿರುವ ಅವನನ್ನು ನೋಡಿ ಭೀಮನು ಕಣ್ಣು ಮುಚ್ಚಿದನು.

03149008a ಆಬಭಾಷೇ ಚ ಹನುಮಾನ್ಭೀಮಸೇನಂ ಸ್ಮಯನ್ನಿವ|

03149008c ಏತಾವದಿಹ ಶಕ್ತಸ್ತ್ವಂ ರೂಪಂ ದ್ರಷ್ಟುಂ ಮಮಾನಘ||

ಮೆಲ್ಲನೆ ಮುಗುಳ್ನಕ್ಕು ಹನುಮಂತನು ಭೀಮಸೇನನಿಗೆ ಹೇಳಿದನು: “ಅನಘ! ನನ್ನ ಇಷ್ಟೇ ದೇಹ ರೂಪವನ್ನು ನೋಡಲು ನೀನು ಶಕ್ಯನಾಗಿದ್ದೀಯೆ.

03149009a ವರ್ಧೇಽಹಂ ಚಾಪ್ಯತೋ ಭೂಯೋ ಯಾವನ್ಮೇ ಮನಸೇಪ್ಸಿತಂ|

03149009c ಭೀಮ ಶತ್ರುಷು ಚಾತ್ಯರ್ಥಂ ವರ್ಧತೇ ಮೂರ್ತಿರೋಜಸಾ||

ಭೀಮ! ನಾನು ಇದಕ್ಕಿಂತಲೂ ದೊಡ್ಡವನಾಗಿ, ಎಷ್ಟು ಬೇಕಾದಷ್ಟು ದೊಡ್ಡದಾಗಿ ಬೆಳೆಯಬಲ್ಲೆ. ಶತ್ರುವಿನೊಂದಿಗೆ ಹೋರಾಡುವಾಗ ನನ್ನ ದೇಹವೂ ತೇಜಸ್ಸೂ ತುಂಬಾ ಬೆಳೆಯುತ್ತವೆ.”

03149010a ತದದ್ಭುತಂ ಮಹಾರೌದ್ರಂ ವಿಂಧ್ಯಮಂದರಸಮ್ನಿಭಂ|

03149010c ದೃಷ್ಟ್ವಾ ಹನೂಮತೋ ವರ್ಷ್ಮ ಸಂಭ್ರಾಂತಃ ಪವನಾತ್ಮಜಃ||

ಆ ಅದ್ಭುತವಾದ ಮಹಾ ರೌದ್ರವಾದ ವಿಂಧ್ಯ ಮತ್ತು ಮಂದರ ಪರ್ವತಗಳಂತೆ ತೋರುತ್ತಿದ್ದ ಹನುಮಂತನ ಆ ರೂಪವನ್ನು ನೋಡಿ ಪವನಾತ್ಮಜನು ಸಂಭ್ರಾಂತನಾದನು.

03149011a ಪ್ರತ್ಯುವಾಚ ತತೋ ಭೀಮಃ ಸಂಪ್ರಹೃಷ್ಟತನೂರುಹಃ|

03149011c ಕೃತಾಂಜಲಿರದೀನಾತ್ಮಾ ಹನೂಮಂತಮವಸ್ಥಿತಂ||

ಸಂತೋಷದಿಂದ ಮೈನಡುಗಿದ ಭೀಮನು ದೀನಾತ್ಮನಾಗಿ, ಅಂಜಲೀಬದ್ಧನಾಗಿ ಹಾಗೆಯೇ ನಿಂತಿರುವ ಹನುಮಂತನಿಗೆ ಹೇಳಿದನು:

03149012a ದೃಷ್ಟಂ ಪ್ರಮಾಣಂ ವಿಪುಲಂ ಶರೀರಸ್ಯಾಸ್ಯ ತೇ ವಿಭೋ|

03149012c ಸಂಹರಸ್ವ ಮಹಾವೀರ್ಯ ಸ್ವಯಮಾತ್ಮಾನಮಾತ್ಮನಾ||

“ವಿಭೋ! ನಿನ್ನ ವಿಪುಲ ಪ್ರಮಾಣದ ಶರೀರವನ್ನು ನೋಡಿದೆ. ಮಹಾವೀರ! ಈಗ ನೀನೇ ನಿನ್ನ ಈ ರೂಪವನ್ನು ಹಿಂತೆಗೆದುಕೋ!

03149013a ನ ಹಿ ಶಕ್ನೋಮಿ ತ್ವಾಂ ದ್ರಷ್ಟುಂ ದಿವಾಕರಮಿವೋದಿತಂ|

03149013c ಅಪ್ರಮೇಯಮನಾಧೃಷ್ಯಂ ಮೈನಾಕಮಿವ ಪರ್ವತಂ||

ಉದಯಿಸುವ ಸೂರ್ಯನಂತಿರುವ ನಿನ್ನನ್ನು ನೋಡಲು ನಾನು ಶಕ್ಯನಾಗಿಲ್ಲ. ಮೈನಾಕ ಪರ್ವತದಂತಿರುವ ನೀನು ಅಪ್ರಮೇಯ ಮತ್ತು ಅನಾಧೃಷ್ಯ.

03149014a ವಿಸ್ಮಯಶ್ಚೈವ ಮೇ ವೀರ ಸುಮಹಾನ್ಮನಸೋಽದ್ಯ ವೈ|

03149014c ಯದ್ರಾಮಸ್ತ್ವಯಿ ಪಾರ್ಶ್ವಸ್ಥೇ ಸ್ವಯಂ ರಾವಣಮಭ್ಯಗಾತ್||

ವೀರ! ಪಕ್ಕದಲ್ಲಿ ನಿನ್ನಂಥವನಿರುವಾಗಲೂ ಸ್ವಯಂ ರಾಮನೇ ರಾವಣನನ್ನು ಎದುರಿಸಿದನು ಎಂದು ಇಂದು ನನ್ನ ಮನಸ್ಸು ಬಹಳಷ್ಟು ವಿಸ್ಮಯಗೊಂಡಿದೆ.

03149015a ತ್ವಮೇವ ಶಕ್ತಸ್ತಾಂ ಲಂಕಾಂ ಸಯೋಧಾಂ ಸಹವಾಹನಾಂ|

03149015c ಸ್ವಬಾಹುಬಲಮಾಶ್ರಿತ್ಯ ವಿನಾಶಯಿತುಮೋಜಸಾ|

ನೀನೊಬ್ಬನೇ ನಿನ್ನ ಬಾಹುಗಳನ್ನು ಮತ್ತು ತೇಜಸ್ಸನ್ನು ಆಶ್ರಯಿಸಿ ಯೋದ್ಧರೊಂದಿಗೆ ಮತ್ತು ವಾಹನಗಳೊಂದಿಗೆ ಲಂಕೆಯನ್ನು ವಿನಾಶಗೊಳಿಸಲು ಸಾಧ್ಯವಾಗುತ್ತಿತ್ತು.

03149016a ನ ಹಿ ತೇ ಕಿಂ ಚಿದಪ್ರಾಪ್ಯಂ ಮಾರುತಾತ್ಮಜ ವಿದ್ಯತೇ|

03149016c ತವ ನೈಕಸ್ಯ ಪರ್ಯಾಪ್ತೋ ರಾವಣಃ ಸಗಣೋ ಯುಧಿ||

ಮಾರುತಾತ್ಮಜ! ನಿನಗೆ ಅಸಾದ್ಯವೆನ್ನುವುದು ಏನೂ ಇರಲಿಕ್ಕಿಲ್ಲ! ಯುದ್ಧದಲ್ಲಿ ತನ್ನ ಸೇನೆಯ ಸಹಿತ ರಾವಣನು ನಿನಗೊಬ್ಬನಿಗೂ ಸರಿಸಮನಾಗಿರಲಿಕ್ಕಿರಲಿಲ್ಲ!”

03149017a ಏವಮುಕ್ತಸ್ತು ಭೀಮೇನ ಹನೂಮಾನ್ಪ್ಲವಗರ್ಷಭಃ|

03149017c ಪ್ರತ್ಯುವಾಚ ತತೋ ವಾಕ್ಯಂ ಸ್ನಿಗ್ಧಗಂಭೀರಯಾ ಗಿರಾ||

ಭೀಮನು ಹೀಗೆ ಹೇಳಲು ಪ್ಲವಗರ್ಷಭ ಹನುಮಂತನು ಕರುಣೆತುಂಬಿದ ಗಂಭೀರ ಧ್ವನಿಯಲ್ಲಿ ಉತ್ತರವನ್ನಿತ್ತನು:

03149018a ಏವಮೇತನ್ಮಹಾಬಾಹೋ ಯಥಾ ವದಸಿ ಭಾರತ|

03149018c ಭೀಮಸೇನ ನ ಪರ್ಯಾಪ್ತೋ ಮಮಾಸೌ ರಾಕ್ಷಸಾಧಮಃ||

“ಭಾರತ! ಮಹಾಬಾಹೋ! ನೀನು ಹೇಳಿದುದು ಸರಿ. ಭೀಮಸೇನ! ಆ ರಾಕ್ಷಸಾಧಮನು ನನಗೆ ಸರಿಸಮನಾಗಿರಲಿಲ್ಲ!

03149019a ಮಯಾ ತು ತಸ್ಮಿನ್ನಿಹತೇ ರಾವಣೇ ಲೋಕಕಣ್ಟಕೇ|

03149019c ಕೀರ್ತಿರ್ನಶ್ಯೇದ್ರಾಘವಸ್ಯ ತತ ಏತದುಪೇಕ್ಷಿತಂ||

ಲೋಕಕಂಟಕ ರಾವಣನನ್ನು ನಾನು ಸಂಹರಿಸಿದ್ದರೆ ರಾಘವನ ಕೀರ್ತಿಗೆ ಕೊರತೆಯಾಗುತ್ತಿತ್ತು. ಆದುದರಿಂದ ನಾನು ಹಾಗೆ ಮಾಡಲಿಲ್ಲ[1]!

03149020a ತೇನ ವೀರೇಣ ಹತ್ವಾ ತು ಸಗಣಂ ರಾಕ್ಷಸಾಧಿಪಂ|

03149020c ಆನೀತಾ ಸ್ವಪುರಂ ಸೀತಾ ಲೋಕೇ ಕೀರ್ತಿಶ್ಚ ಸ್ಥಾಪಿತಾ||

ಆ ವೀರನು ಸೇನೆಗಳೊಂದಿಗೆ ಆ ರಾಕ್ಷಸಾಧಿಪನನ್ನು ಸಂಹರಿಸಿ ಸೀತೆಯನ್ನು ತನ್ನ ನಗರಕ್ಕೆ ಕೊಂಡೊಯ್ದು ಲೋಕದಲ್ಲಿ ಕೀರ್ತಿವಂತನಾದನು.

03149021a ತದ್ಗಚ್ಚ ವಿಪುಲಪ್ರಜ್ಞ ಭ್ರಾತುಃ ಪ್ರಿಯಹಿತೇ ರತಃ|

03149021c ಅರಿಷ್ಟಂ ಕ್ಷೇಮಮಧ್ವಾನಂ ವಾಯುನಾ ಪರಿರಕ್ಷಿತಃ||

ನನ್ನ ಪ್ರಜ್ಞಾವಂತ ತಮ್ಮನೇ! ನನಗೆ ಪ್ರಿಯವಾದುದನ್ನು ಮಾಡುವವನೇ! ಈಗ ನೀನು ವಾಯುವಿನಿಂದ ರಕ್ಷಣೆಯನ್ನು ಪಡೆದು ಕ್ಷೇಮ-ಸುರಕ್ಷಿತವಾಗಿರುವ ದಾರಿಯಲ್ಲಿ ಹೊರಟು ಹೋಗು.

03149022a ಏಷ ಪಂಥಾಃ ಕುರುಶ್ರೇಷ್ಠ ಸೌಗಂಧಿಕವನಾಯ ತೇ|

03149022c ದ್ರಕ್ಷ್ಯಸೇ ಧನದೋದ್ಯಾನಂ ರಕ್ಷಿತಂ ಯಕ್ಷರಾಕ್ಷಸೈಃ||

ಕುರುಶ್ರೇಷ್ಠ! ಈ ದಾರಿಯು ನಿನ್ನನ್ನು ಸೌಗಂಧಿಕಾ ವನಕ್ಕೆ ಕೊಂಡೊಯ್ಯುತ್ತದೆ. ಅಲ್ಲಿ ಯಕ್ಷ-ರಾಕ್ಷಸರ ಕಾವಲಿನಲ್ಲಿರುವ ಧನದ ಕುಬೇರನ ಉದ್ಯಾನವನವಿದೆ.

03149023a ನ ಚ ತೇ ತರಸಾ ಕಾರ್ಯಃ ಕುಸುಮಾವಚಯಃ ಸ್ವಯಂ|

03149023c ದೈವತಾನಿ ಹಿ ಮಾನ್ಯಾನಿ ಪುರುಷೇಣ ವಿಶೇಷತಃ||

ಆದರೆ ನೀನು ಒಂದೇ ಸಮನೆ ಹೂವನ್ನು ಕೀಳಲು ಪ್ರಾರಂಭಿಸಬಾರದು. ವಿಶೇಷವಾಗಿ ಪುರುಷರು ಸ್ವಯಂ ದೇವತೆಗಳನ್ನು ಮನ್ನಿಸಬೇಕಾಗುತ್ತದೆ.

03149024a ಬಲಿಹೋಮನಮಸ್ಕಾರೈರ್ಮಂತ್ರೈಶ್ಚ ಭರತರ್ಷಭ|

03149024c ದೈವತಾನಿ ಪ್ರಸಾದಂ ಹಿ ಭಕ್ತ್ಯಾ ಕುರ್ವಂತಿ ಭಾರತ||

ಭರತರ್ಷಭ! ಭಾರತ! ಭಕ್ತಿಯಿಂದ ಬಲಿ, ಹೋಮ, ನಮಸ್ಕಾರ ಮತ್ತು ಮಂತ್ರಗಳ ಮೂಲಕ ದೇವತೆಗಳು ಪ್ರಸೀದರಾಗುತ್ತಾರೆ.

03149025a ಮಾ ತಾತ ಸಾಹಸಂ ಕಾರ್ಷೀಃ ಸ್ವಧರ್ಮಮನುಪಾಲಯ|

03149025c ಸ್ವಧರ್ಮಸ್ಥಃ ಪರಂ ಧರ್ಮಂ ಬುಧ್ಯಸ್ವಾಗಮಯಸ್ವ ಚ||

03149026a ನ ಹಿ ಧರ್ಮಮವಿಜ್ಞಾಯ ವೃದ್ಧಾನನುಪಸೇವ್ಯ ಚ|

03149026c ಧರ್ಮೋ ವೈ ವೇದಿತುಂ ಶಕ್ಯೋ ಬೃಹಸ್ಪತಿಸಮೈರಪಿ||

ಮಗೂ! ಸಾಹಸಕ್ಕೆ ತೊಡಗಬೇಡ! ನಿನ್ನ ಧರ್ಮವನ್ನು ಅನುಸರಿಸು. ಸ್ವಧರ್ಮದಲ್ಲಿದ್ದುಕೊಂಡೇ ಪರಮ ಧರ್ಮವು ಏನೆಂದು ಆಗಮಗಳಿಂದ ತಿಳಿಯಬಹುದು. ವೃದ್ಧರ ಸೇವೆಯನ್ನು ಮಾಡದೇ ಧರ್ಮವನ್ನು ತಿಳಿಯಲು ಆಗದು. ಧರ್ಮವನ್ನು ಬೃಹಸ್ಪತಿ, ಅಮರರಿಗೂ ಕೂಡ ತಿಳಿದುಕೊಳ್ಳುವುದು ಕಷ್ಟ.

03149027a ಅಧರ್ಮೋ ಯತ್ರ ಧರ್ಮಾಖ್ಯೋ ಧರ್ಮಶ್ಚಾಧರ್ಮಸಂಜ್ಞಿತಃ|

03149027c ವಿಜ್ಞಾತವ್ಯೋ ವಿಭಾಗೇನ ಯತ್ರ ಮುಹ್ಯಂತ್ಯಬುದ್ಧಯಃ||

ಎಲ್ಲಿ ಅಧರ್ಮವನ್ನು ಧರ್ಮವೆಂದು ಹೇಳಲಾಗುತ್ತದೆಯೋ ಧರ್ಮವನ್ನು ಅಧರ್ಮವೆಂದು ತಿಳಿದುಕೊಳ್ಳುತ್ತಾರೋ ಅಲ್ಲಿ ತಿಳಿದವರೂ ತಿಳಿಯದೇ ಇದ್ದವರು ಎಲ್ಲರೂ ಗೊಂದಲಕ್ಕೊಳಗಾಗುತ್ತಾರೆ.

03149028a ಆಚಾರಸಂಭವೋ ಧರ್ಮೋ ಧರ್ಮಾದ್ವೇದಾಃ ಸಮುತ್ಥಿತಾಃ|

03149028c ವೇದೈರ್ಯಜ್ಞಾಃ ಸಮುತ್ಪನ್ನಾ ಯಜ್ಞೈರ್ದೇವಾಃ ಪ್ರತಿಷ್ಠಿತಾಃ||

ಆಚಾರದಿಂದಲೇ ಧರ್ಮವು ಹುಟ್ಟುತ್ತದೆ ಮತ್ತು ಧರ್ಮದಿಂದ ವೇದಗಳು ಹುಟ್ಟುತ್ತವೆ. ವೇದದಿಂದ ಯಜ್ಞವು ಹುಟ್ಟುತ್ತದೆ ಮತ್ತು ಯಜ್ಞಗಳಲ್ಲಿ ದೇವತೆಗಳು ನೆಲೆಸಿರುತ್ತಾರೆ.

03149029a ವೇದಾಚಾರವಿಧಾನೋಕ್ತೈರ್ಯಜ್ಞೈರ್ಧಾರ್ಯಂತಿ ದೇವತಾಃ|

03149029c ಬೃಹಸ್ಪತ್ಯುಶನೋಕ್ತೈಶ್ಚ ನಯೈರ್ಧಾರ್ಯಂತಿ ಮಾನವಾಃ||

03149030a ಪಣ್ಯಾಕರವಣಿಜ್ಯಾಭಿಃ ಕೃಷ್ಯಾಥೋ ಯೋನಿಪೋಷಣೈಃ|

03149030c ವಾರ್ತಯಾ ಧಾರ್ಯತೇ ಸರ್ವಂ ಧರ್ಮೈರೇತೈರ್ದ್ವಿಜಾತಿಭಿಃ||

ವೇದಗಳಲ್ಲಿ ಹೇಳಿರುವಂತೆ ನಡೆದುಕೊಳ್ಳುವುದರಿಂದ ಮತ್ತು ಯಜ್ಞಗಳಿಂದ ದೇವತೆಗಳು ವೃದ್ಧಿಸುತ್ತಾರೆ. ಮಾನವರು ಬೃಹಸ್ಪತಿ ಮತ್ತು ಉಶಾನರು ಹೇಳಿದ ವ್ಯಾಪಾರ, ವಾಣಿಜ್ಯ, ಕೃಷಿ, ಮತ್ತು ಪಶುಸಾಕಣಿಕೆಗಳಿಂದ, ಧರ್ಮದಲ್ಲಿರುವುದರಿಂದ ಮತ್ತು ಬ್ರಾಹ್ಮಣರಿಂದ ವರ್ಧಿಸುತ್ತಾರೆ.

03149031a ತ್ರಯೀ ವಾರ್ತಾ ದಂಡನೀತಿಸ್ತಿಸ್ರೋ ವಿದ್ಯಾ ವಿಜಾನತಾಂ|

03149031c ತಾಭಿಃ ಸಮ್ಯಕ್ಪ್ರಯುಕ್ತಾಭಿರ್ಲೋಕಯಾತ್ರಾ ವಿಧೀಯತೇ||

ತಿಳಿದವರಿಗೆ ಮೂರು ಜ್ಞಾನಕ್ಷೇತ್ರಗಳಿವೆ - ವಿದ್ಯೆ, ಉದ್ಯೋಗ ಮತ್ತು ಶಾಸನ. ಈ ಮೂರನ್ನೂ ಸರಿಯಾಗಿ ಬಳಸಿದಾಗ ಲೋಕಗಳಿಗೆ ಒಳ್ಳೆಯದಾಗುತ್ತದೆ.

03149032a ಸಾ ಚೇದ್ಧರ್ಮಕ್ರಿಯಾ ನ ಸ್ಯಾತ್ತ್ರಯೀಧರ್ಮಮೃತೇ ಭುವಿ|

03149032c ದಂಡನೀತಿಮೃತೇ ಚಾಪಿ ನಿರ್ಮರ್ಯಾದಮಿದಂ ಭವೇತ್||

ಧರ್ಮಕ್ರಿಯೆಗಳು ನಡೆಯದೇ ಇದ್ದರೆ, ಶಾಸನವಿಲ್ಲದಿದ್ದರೆ ಈ ಭೂಮಿಗೆ ಮರ್ಯಾದೆ ಎನ್ನುವುದೇ ಇರುತ್ತಿರಲಿಲ್ಲ.

03149033a ವಾರ್ತಾಧರ್ಮೇ ಹ್ಯವರ್ತಂತ್ಯೋ ವಿನಶ್ಯೇಯುರಿಮಾಃ ಪ್ರಜಾಃ|

03149033c ಸುಪ್ರವೃತ್ತೈಸ್ತ್ರಿಭಿರ್ಹ್ಯೇತೈರ್ಧರ್ಮೈಃ ಸೂಯಂತಿ ವೈ ಪ್ರಜಾಃ||

ವ್ಯಾಪಾರ ಮತ್ತು ಧರ್ಮಗಳು ಇಲ್ಲದೇ ಇದ್ದಿದ್ದರೆ ಪ್ರಜೆಗಳು ವಿನಾಶ ಹೊಂದುತ್ತಿದ್ದರು. ಈ ಮೂರೂ ಧರ್ಮಗಳನ್ನು ಪಾಲಿಸುವುದರಿಂದಲೇ ಪ್ರಜೆಗಳು ಅಭಿವೃದ್ಧಿ ಹೊಂದುತ್ತಾರೆ.

03149034a ದ್ವಿಜಾನಾಮಮೃತಂ ಧರ್ಮೋ ಹ್ಯೇಕಶ್ಚೈವೈಕವರ್ಣಿಕಃ|

03149034c ಯಜ್ಞಾಧ್ಯಯನದಾನಾನಿ ತ್ರಯಃ ಸಾಧಾರಣಾಃ ಸ್ಮೃತಾಃ||

03149035a ಯಾಜನಾಧ್ಯಾಪನೇ ಚೋಭೇ ಬ್ರಾಹ್ಮಣಾನಾಂ ಪ್ರತಿಗ್ರಹಃ|

03149035c ಪಾಲನಂ ಕ್ಷತ್ರಿಯಾಣಾಂ ವೈ ವೈಶ್ಯಧರ್ಮಶ್ಚ ಪೋಷಣಂ||

ಏಕವರ್ಣಿ ದ್ವಿಜರ ಅಮೃತ ಧರ್ಮವು ಒಂದೇ: ಯಜ್ಞ, ಅಧ್ಯಯನ, ಧ್ಯಾನ ಈ ಮೂರು ಸಾಧಾರಣ ಧರ್ಮವೆಂದು ಹೇಳಲ್ಪಟ್ಟಿದೆ. ಯಜ್ಞಮಾಡಿಸುವುದು ಮತ್ತು ಅಧ್ಯಾಪನ ಇವೆರಡೂ ಬ್ರಾಹ್ಮಣರ ಧರ್ಮ. ಕ್ಷತ್ರಿಯರ ಧರ್ಮವು ಪಾಲನೆ ಮತ್ತು ವೈಶ್ಯರ ಧರ್ಮವು ಪೋಷಣೆ.

03149036a ಶುಶ್ರೂಷಾ ತು ದ್ವಿಜಾತೀನಾಂ ಶೂದ್ರಾಣಾಂ ಧರ್ಮ ಉಚ್ಯತೇ|

03149036c ಭೈಕ್ಷಹೋಮವ್ರತೈರ್ಹೀನಾಸ್ತಥೈವ ಗುರುವಾಸಿನಾಂ||

ಗುರುಕುಲದಲ್ಲಿ ವಾಸಿಸುವರಿಗಿರುವಂತೆ ದ್ವಿಜರ ಶುಶ್ರೂಷೆಯೇ ಶೂದ್ರರ ಪರಮ ಧರ್ಮವೆಂದು ಹೇಳಲಾಗಿದೆ. ಆದರೂ ಅವರಿಗೆ ಭಿಕ್ಷೆ, ಹೋಮ ಮತ್ತು ವ್ರತಗಳು ವರ್ಜಿತ.

03149037a ಕ್ಷತ್ರಧರ್ಮೋಽತ್ರ ಕೌಂತೇಯ ತವ ಧರ್ಮಾಭಿರಕ್ಷಣಂ|

03149037c ಸ್ವಧರ್ಮಂ ಪ್ರತಿಪದ್ಯಸ್ವ ವಿನೀತೋ ನಿಯತೇಂದ್ರಿಯಃ||

ಕೌಂತೇಯ! ನಿನ್ನದು ಕ್ಷತ್ರಿಯ ಧರ್ಮ. ಇನ್ನೊಬ್ಬರಿಗೆ ರಕ್ಷಣೆಯನ್ನು ಕೊಡುವುದೇ ನಿನ್ನ ಧರ್ಮ. ವಿನೀತನಾಗಿ, ನಿಯತೇಂದ್ರಿಯನಾಗಿ ಸ್ವಧರ್ಮವನ್ನು ಪರಿಪಾಲಿಸು.

03149038a ವೃದ್ಧೈಃ ಸಮ್ಮಂತ್ರ್ಯ ಸದ್ಭಿಶ್ಚ ಬುದ್ಧಿಮದ್ಭಿಃ ಶ್ರುತಾನ್ವಿತೈಃ|

03149038c ಸುಸ್ಥಿತಃ ಶಾಸ್ತಿ ದಂಡೇನ ವ್ಯಸನೀ ಪರಿಭೂಯತೇ||

ವೃದ್ಧರೊಂದಿಗೆ ಸಮಾಲೋಚಿಸಿ ಒಳ್ಳೆಯವರು ಮತ್ತು ಬುದ್ಧಿವಂತರನ್ನು ಕೇಳಿ ನಡೆಯುವವರು ಸುಸ್ಥಿತವಾಗಿ ಇರುತ್ತಾರೆ. ದಂಡದ ವ್ಯಸನಿಯು ನಾಶಹೊಂದುತ್ತಾನೆ.

03149039a ನಿಗ್ರಹಾನುಗ್ರಹೈಃ ಸಮ್ಯಗ್ಯದಾ ರಾಜಾ ಪ್ರವರ್ತತೇ|

03149039c ತದಾ ಭವತಿ ಲೋಕಸ್ಯ ಮರ್ಯಾದಾ ಸುವ್ಯವಸ್ಥಿತಾ||

ರಾಜನು ನಿಗ್ರಹ ಅನುಗ್ರಹಗಳಲ್ಲಿ ಸರಿಯಾಗಿ ನಡೆದುಕೊಳ್ಳುತ್ತಿದ್ದರೆ ಲೋಕದ ಮರ್ಯಾದೆಯು ಸುವ್ಯವಸ್ಥಿತವಾಗಿರುತ್ತದೆ.

03149040a ತಸ್ಮಾದ್ದೇಶೇ ಚ ದುರ್ಗೇ ಚ ಶತ್ರುಮಿತ್ರಬಲೇಷು ಚ|

03149040c ನಿತ್ಯಂ ಚಾರೇಣ ಬೋದ್ಧವ್ಯಂ ಸ್ಥಾನಂ ವೃದ್ಧಿಃ ಕ್ಷಯಸ್ತಥಾ||

ಆ ಉದ್ದೇಶದಿಂದಲೇ ನಿತ್ಯವೂ ಗೂಢಚಾರರಿಂದ ರಾಜ್ಯದಲ್ಲಿರುವ ಕೋಟೆಗಳು, ಶತ್ರುಗಳು, ಮಿತ್ರರು, ಸೇನೆ ಮತ್ತು ವೃದ್ಧಿ ಕ್ಷಯಗಳ ಕುರಿತು ತಿಳಿದುಕೊಂಡಿರಬೇಕು.

03149041a ರಾಜ್ಞಾಮುಪಾಯಾಶ್ಚತ್ವಾರೋ ಬುದ್ಧಿಮಂತ್ರಃ ಪರಾಕ್ರಮಃ|

03149041c ನಿಗ್ರಹಾನುಗ್ರಹೌ ಚೈವ ದಾಕ್ಷ್ಯಂ ತತ್ಕಾರ್ಯಸಾಧನಂ||

ರಾಜನಿಗೆ ನಾಲ್ಕು ರೀತಿಯ ಉಪಾಯಗಳಿವೆ: ಬುದ್ಧಿವಂತರೊಡನೆ ಸಮಾಲೋಚನೆ, ಪರಾಕ್ರಮ, ನಿಗ್ರಹಾನುಗ್ರ ಮತ್ತು ಕಾರ್ಯವನ್ನು ಸಾಧಿಸುವ ದಕ್ಷತೆ.

03149042a ಸಾಮ್ನಾ ದಾನೇನ ಭೇದೇನ ದಂಡೇನೋಪೇಕ್ಷಣೇನ ಚ|

03149042c ಸಾಧನೀಯಾನಿ ಕಾರ್ಯಾಣಿ ಸಮಾಸವ್ಯಾಸಯೋಗತಃ||

ಸಾಮ, ದಾನ, ಭೇದ, ದಂಡ ಮತ್ತು ಉಪೇಕ್ಷಣ ಇವು ಒಂದೊಂದಾಗಿ ಅಥವಾ ಒಟ್ಟಾಗಿ ಕಾರ್ಯಗಳಲ್ಲಿ ಸಾಧನಗಳನ್ನಾಗಿ ಬಳಸಿಕೊಳ್ಳಬಹುದು.

03149043a ಮಂತ್ರಮೂಲಾ ನಯಾಃ ಸರ್ವೇ ಚಾರಾಶ್ಚ ಭರತರ್ಷಭ|

03149043c ಸುಮಂತ್ರಿತೈರ್ನಯೈಃ ಸಿದ್ಧಿಸ್ತದ್ವಿದೈಃ ಸಹ ಮಂತ್ರಯೇತ್||

ಭರತರ್ಷಭ! ಎಲ್ಲ ಧೋರಣೆಗಳೂ ಸಮಾಲೋಚನೆಯಿಂದ ಮತ್ತು ಗೂಢಚಾರರ ಮೂಲಕ ಹುಟ್ಟಬೇಕು. ಸರಿಯಾದ ಸಮಾಲೋಚನೆಗಳಿಂದ ಹುಟ್ಟಿದ ನೀತಿಗಳು ಸಿದ್ಧಿಯಾಗುತ್ತವೆ. ಮತ್ತು ತಿಳಿದಿರುವವರಲ್ಲಿ ಸಮಾಲೋಚನೆ ಮಾಡಬೇಕು.

03149044a ಸ್ತ್ರಿಯಾ ಮೂಢೇನ ಲುಬ್ಧೇನ ಬಾಲೇನ ಲಘುನಾ ತಥಾ|

03149044c ನ ಮಂತ್ರಯೇತ ಗುಃಯಾನಿ ಯೇಷು ಚೋನ್ಮಾದಲಕ್ಷಣಂ||

ಗೌಪ್ಯವಾಗಿರುವ ವಿಷಯಗಳನ್ನು ಸ್ತ್ರೀಯಲ್ಲಿ, ಮೂಢನಲ್ಲಿ, ಆಸೆಬುರುಕನಲ್ಲಿ, ಬಾಲಕರಲ್ಲಿ, ಹಗುರದವರಲ್ಲಿ, ಮತ್ತು ಹುಚ್ಚಿನ ಲಕ್ಷಣಗಳಿರುವವರಲ್ಲಿ ಸಮಾಲೋಚಿಸಕೂಡದು.

03149045a ಮಂತ್ರಯೇತ್ಸಹ ವಿದ್ವದ್ಭಿಃ ಶಕ್ತೈಃ ಕರ್ಮಾಣಿ ಕಾರಯೇತ್|

03149045c ಸ್ನಿಗ್ಧೈಶ್ಚ ನೀತಿವಿನ್ಯಾಸಾನ್ಮೂರ್ಖಾನ್ಸರ್ವತ್ರ ವರ್ಜಯೇತ್||

ತಿಳಿದವರೊಂದಿಗೆ ಸಮಾಲೋಚನೆಮಾಡಬೇಕು. ಸಮರ್ಥರಿಂದ ಕೆಲಸಗಳನ್ನು ಮಾಡಿಸಿಕೊಳ್ಳಬೇಕು. ಮತ್ತು ನೀತಿಗಳನ್ನು ವಿಶ್ವಾಸವಿರುವವರಿಂದ ರೂಪಿಸಿಕೊಳ್ಳಬೇಕು. ಮೂರ್ಖರನ್ನು ಯಾವಾಗಲೂ ದೂರವಿಡಬೇಕು.

03149046a ಧಾರ್ಮಿಕಾನ್ಧರ್ಮಕಾರ್ಯೇಷು ಅರ್ಥಕಾರ್ಯೇಷು ಪಂಡಿತಾನ್|

03149046c ಸ್ತ್ರೀಷು ಕ್ಲೀಬಾನ್ನಿಯುಂಜೀತ ಕ್ರೂರಾನ್ಕ್ರೂರೇಷು ಕರ್ಮಸು||

ಧಾರ್ಮಿಕರನ್ನು ಧರ್ಮಕಾರ್ಯಗಳಲ್ಲಿ, ಪಂಡಿತರನ್ನು ಹಣಕಾಸಿನ ವಿಷಯಗಳಲ್ಲಿ, ನಪುಂಸಕರನ್ನು ಸ್ತ್ರೀಯರ ವಿಷಯಗಳಲ್ಲಿ ಮತ್ತು ಕ್ರೂರರನ್ನು ಕ್ರೂರಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು.

03149047a ಸ್ವೇಭ್ಯಶ್ಚೈವ ಪರೇಭ್ಯಶ್ಚ ಕಾರ್ಯಾಕಾರ್ಯಸಮುದ್ಭವಾ|

03149047c ಬುದ್ಧಿಃ ಕರ್ಮಸು ವಿಜ್ಞೇಯಾ ರಿಪೂಣಾಂ ಚ ಬಲಾಬಲಂ||

ತನ್ನ ಮತ್ತು ಇತರರ ಕಾರ್ಯದಿಂದ ಮತ್ತು ಅಕಾರ್ಯದಿಂದ ಉಂಟಾದವುಗಳನ್ನು ಹಾಗೂ ಶತ್ರುಗಳ ಬಲಾಬಲಗಳನ್ನೂ ಬುದ್ಧಿ ಮತ್ತು ಕಾರ್ಯಗಳ ಮೂಲಕ ತಿಳಿದುಕೊಳ್ಳಬೇಕು.

03149048a ಬುದ್ಧ್ಯಾ ಸುಪ್ರತಿಪನ್ನೇಷು ಕುರ್ಯಾತ್ಸಾಧುಪರಿಗ್ರಹಂ|

03149048c ನಿಗ್ರಹಂ ಚಾಪ್ಯಶಿಷ್ಟೇಷು ನಿರ್ಮರ್ಯಾದೇಷು ಕಾರಯೇತ್||

ಬುದ್ಧಿಯಿಂದ ತಮ್ಮನ್ನು ತಾವು ಅರಿತುಕೊಂಡವರನ್ನು ಮಾತ್ರ ಒಳ್ಳೆಯವರೆಂದು ಪರಿಗ್ರಹಿಸಬೇಕು. ವಿದ್ಯಾವಂತರಾಗಿಲ್ಲದವರನ್ನು ಮತ್ತು ಮರ್ಯಾದೆಯಿಲ್ಲದೆ ಇರುವವರನ್ನು ನಿಗ್ರಹಿಸಬೇಕು.

03149049a ನಿಗ್ರಹೇ ಪ್ರಗ್ರಹೇ ಸಮ್ಯಗ್ಯದಾ ರಾಜಾ ಪ್ರವರ್ತತೇ|

03149049c ತದಾ ಭವತಿ ಲೋಕಸ್ಯ ಮರ್ಯಾದಾ ಸುವ್ಯವಸ್ಥಿತಾ||

ರಾಜನು ಸರಿಯಾದ ರೀತಿಯಲ್ಲಿ ನಿಗ್ರಹ ಪ್ರಗ್ರಹದಲ್ಲಿ ತೊಡಗಿದ್ದರೆ ಲೋಕದ ಮರ್ಯಾದೆಯು ಸುವ್ಯವಸ್ಥಿತವಾಗಿರುತ್ತದೆ.

03149050a ಏಷ ತೇ ವಿಹಿತಃ ಪಾರ್ಥ ಘೋರೋ ಧರ್ಮೋ ದುರನ್ವಯಃ|

03149050c ತಂ ಸ್ವಧರ್ಮವಿಭಾಗೇನ ವಿನಯಸ್ಥೋಽನುಪಾಲಯ||

ಪಾರ್ಥ! ಇದೇ ನಿನಗೆ ವಿಹಿತವಾಗಿರುವ ಘೋರವಾಗಿರುವ ಮತ್ತು ಕಷ್ಟಕರವಾಗಿರುವ ಧರ್ಮ. ಇದನ್ನು ನೀನು ಸ್ವಧರ್ಮವಿಭಾಗದ ಮೂಲಕ ವಿನಯನಾಗಿ ಅನುಸರಿಸು.

03149051a ತಪೋಧರ್ಮದಮೇಜ್ಯಾಭಿರ್ವಿಪ್ರಾ ಯಾಂತಿ ಯಥಾ ದಿವಂ|

03149051c ದಾನಾತಿಥ್ಯಕ್ರಿಯಾಧರ್ಮೈರ್ಯಾಂತಿ ವೈಶ್ಯಾಶ್ಚ ಸದ್ಗತಿಂ||

03149052a ಕ್ಷತ್ರಂ ಯಾತಿ ತಥಾ ಸ್ವರ್ಗಂ ಭುವಿ ನಿಗ್ರಹಪಾಲನೈಃ|

03149052c ಸಮ್ಯಕ್ಪ್ರಣೀಯ ದಂಡಂ ಹಿ ಕಾಮದ್ವೇಷವಿವರ್ಜಿತಾಃ||

03149052e ಅಲುಬ್ಧಾ ವಿಗತಕ್ರೋಧಾಃ ಸತಾಂ ಯಾಂತಿ ಸಲೋಕತಾಂ||

ಹೇಗೆ ಬ್ರಾಹ್ಮಣರು ತಪಸ್ಸು, ಧರ್ಮ, ಸ್ವನಿಯಂತ್ರಣ ಮತ್ತು ಆಹುತಿಗಳನ್ನು ನೀಡುವುದರ ಮೂಲಕ ಸ್ವರ್ಗಕ್ಕೆ ಹೋಗುತ್ತಾರೋ, ಮತ್ತು ವೈಶ್ಯರು ಹೇಗೆ ದಾನ, ಆತಿಥ್ಯ ಮತ್ತು ಕ್ರಿಯಾಧರ್ಮಗಳಿಂದ ಸದ್ಗತಿಯನ್ನು ಪಡೆಯುತ್ತಾರೋ ಹಾಗೆ ಕ್ಷತ್ರಿಯರು ನಿಗ್ರಹ ಮತ್ತು ಪಾಲನೆಗಳ ಮೂಲಕ ಸ್ವರ್ಗಕ್ಕೆ ಹೋಗುತ್ತಾರೆ. ಕಾಮ ದ್ವೇಷಗಳನ್ನು ತೊರೆದು ಏನೂ ಆಸೆಗಳನ್ನು ಇಟ್ಟುಕೊಳ್ಳದೇ, ಯಾವುದೇ ರೀತಿಯಲ್ಲಿ ಕುಪಿತನಾಗಿರದೇ ಸರಿಯಾದ ದಂಡವನ್ನು (ಶಿಕ್ಷೆಯನ್ನು) ನೀಡುವವರು ಸತ್ಯ ಲೋಕವನ್ನು ಪಡೆಯುತ್ತಾರೆ.””

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಹನುಮದ್ಭೀಮಸಂವಾದೇ ಏಕೋನಪಂಚಶದಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಹನುಮದ್ಭೀಮಸಂವಾದವೆಂಬ ನೂರಾನಲ್ವತ್ತೊಂಭತ್ತನೆಯ ಅಧ್ಯಾಯವು.

Related image

[1]ಇದು ಹನುಮಂತನ ವಿನಯವನ್ನು ತೋರಿಸುವುದಿಲ್ಲ!

Comments are closed.