Aranyaka Parva: Chapter 140

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೧೪೦

ಯುಧಿಷ್ಠಿರಾದಿಗಳು ಶ್ವೇತಗಿರಿಯನ್ನೂ ಮಂದರ ಪರ್ವತವನ್ನೂ ಪ್ರವೇಶಿಸಿದುದು (೧-೪). ಲೋಮಶನು ಯಕ್ಷರ ಕಾವಲಿನಲ್ಲಿರುವ ಆ ಪ್ರದೇಶವನ್ನು ಪ್ರವೇಶಿಸುವಾಗ ಪರಮ ಸಮಾಧಿಯಲ್ಲಿರಬೇಕೆಂದು ಎಚ್ಚರಿಸುವುದು (೫-೧೫). ಭೀಮನಿಗೆ ದ್ರೌಪದಿಯನ್ನು ನೋಡಿಕೊಳ್ಳಲು ಯುಧಿಷ್ಠಿರನು ಹೇಳುವುದು (೧೬-೧೭).

 03140001 ಲೋಮಶ ಉವಾಚ|

03140001a ಉಶೀರಬೀಜಂ ಮೈನಾಕಂ ಗಿರಿಂ ಶ್ವೇತಂ ಚ ಭಾರತ|

03140001c ಸಮತೀತೋಽಸಿ ಕೌಂತೇಯ ಕಾಲಶೈಲಂ ಚ ಪಾರ್ಥಿವ||

ಲೋಮಶನು ಹೇಳಿದನು: “ಭಾರತ! ಪಾರ್ಥಿವ ಕೌಂತೇಯ! ಈಗ ನೀನು ಉಶೀರಬೀಜ, ಮೈನಾಕ ಮತ್ತು ಶ್ವೇತ ಗಿರಿಗಳನ್ನು ಹಾಗೂ ಕಾಲಶೈಲವನ್ನೂ ದಾಟಿದ್ದೀಯೆ.

03140002a ಏಷಾ ಗಂಗಾ ಸಪ್ತವಿಧಾ ರಾಜತೇ ಭರತರ್ಷಭ|

03140002c ಸ್ಥಾನಂ ವಿರಜಸಂ ರಮ್ಯಂ ಯತ್ರಾಗ್ನಿರ್ನಿತ್ಯಮಿಧ್ಯತೇ||

ಭರತರ್ಷಭ! ಇಲ್ಲಿ ಗಂಗೆಯು ಏಳು ಪ್ರವಾಹಗಳಾಗಿ ರಾಜಿಸುತ್ತಾಳೆ. ಇದು ರಮ್ಯ ಮತ್ತು ಶುದ್ಧವಾದ ಸ್ಥಳ. ಇಲ್ಲಿ ಅಗ್ನಿಯು ಸದಾ ಉರಿಯುತ್ತಿರುತ್ತದೆ.

03140003a ಏತದ್ವೈ ಮಾನುಷೇಣಾದ್ಯ ನ ಶಕ್ಯಂ ದ್ರಷ್ಟುಮಪ್ಯುತ|

03140003c ಸಮಾಧಿಂ ಕುರುತಾವ್ಯಗ್ರಾಸ್ತೀರ್ಥಾನ್ಯೇತಾನಿ ದ್ರಕ್ಷ್ಯಥ||

ಈಗ ಇದನ್ನು ಮನುಷ್ಯರು ನೋಡಲು ಶಕ್ಯರಿಲ್ಲ. ಆದರೆ ಸಮಾಧಿಸ್ಥಿತಿಯಲ್ಲಿದ್ದು ಯಾವುದೇ ವಿಚಲತೆಯಿಲ್ಲದೇ ಇದ್ದರೆ ಈ ತೀರ್ಥಪ್ರದೇಶಗಳನ್ನು ನೋಡಬಹುದು.

03140004a ಶ್ವೇತಂ ಗಿರಿಂ ಪ್ರವೇಕ್ಷ್ಯಾಮೋ ಮಂದರಂ ಚೈವ ಪರ್ವತಂ|

03140004c ಯತ್ರ ಮಾಣಿಚರೋ ಯಕ್ಷಃ ಕುಬೇರಶ್ಚಾಪಿ ಯಕ್ಷರಾಟ್||

ಈಗ ನಾವು ಶ್ವೇತಗಿರಿಯನ್ನೂ ಮತ್ತು ಮಂದರ ಪರ್ವತವನ್ನೂ ಪ್ರವೇಶಿಸೋಣ. ಅಲ್ಲಿ ಯಕ್ಷ ಮಣಿಚರನೂ ಯಕ್ಷರಾಜ ಕುಬೇರನೂ ವಾಸಿಸುತ್ತಾರೆ.

03140005a ಅಷ್ಟಾಶೀತಿಸಹಸ್ರಾಣಿ ಗಂಧರ್ವಾಃ ಶೀಘ್ರಚಾರಿಣಃ|

03140005c ತಥಾ ಕಿಂಪುರುಷಾ ರಾಜನ್ಯಕ್ಷಾಶ್ಚೈವ ಚತುರ್ಗುಣಾಃ||

03140006a ಅನೇಕರೂಪಸಂಸ್ಥಾನಾ ನಾನಾಪ್ರಹರಣಾಶ್ಚ ತೇ|

03140006c ಯಕ್ಷೇಂದ್ರಂ ಮನುಜಶ್ರೇಷ್ಠ ಮಾಣಿಭದ್ರಮುಪಾಸತೇ||

ರಾಜನ್! ಮನುಜಶ್ರೇಷ್ಠ! ಅನೇಕ ರೂಪಗಳನ್ನು ಧರಿಸಿದ, ನಾನಾ ಆಯುಧಗಳನ್ನು ಹಿಡಿದ ಎಂಭತ್ತೆಂಟು ಸಾವಿರ ಶೀಘ್ರಚಾರಿ ಗಂಧರ್ವರು, ಅವರಿಗೂ ನಾಲ್ಕು ಪಟ್ಟು ಕಿಂಪುರುಷರು ಮತ್ತು ಯಕ್ಷರು ಯಕ್ಷೇಂದ್ರ ಮಣಿಭದ್ರನನ್ನು ಉಪಾಸಿಸುತ್ತಾರೆ.

03140007a ತೇಷಾಮೃದ್ಧಿರತೀವಾಗ್ರ್ಯಾ ಗತೌ ವಾಯುಸಮಾಶ್ಚ ತೇ|

03140007c ಸ್ಥಾನಾತ್ಪ್ರಚ್ಯಾವಯೇಯುರ್ಯೇ ದೇವರಾಜಮಪಿ ಧ್ರುವಂ||

ಅವರ ಸಂಪತ್ತು ಅಪಾರ ಮತ್ತು ಗತಿಯು ವಾಯು ಸಮ. ಅವರು ದೇವರಾಜನನ್ನೂ ಕೂಡ ಅವನ ಸ್ಥಾನದಿಂದ ನೂಕಬಲ್ಲರು ಎನ್ನುವುದು ಸತ್ಯ.

03140008a ತೈಸ್ತಾತ ಬಲಿಭಿರ್ಗುಪ್ತಾ ಯಾತುಧಾನೈಶ್ಚ ರಕ್ಷಿತಾಃ|

03140008c ದುರ್ಗಮಾಃ ಪರ್ವತಾಃ ಪಾರ್ಥ ಸಮಾಧಿಂ ಪರಮಂ ಕುರು||

ಪಾರ್ಥ! ಈ ಬಲಶಾಲಿಗಳ ಕಣ್ಣುಗಾವಲಿರುವ ಮತ್ತು ಯಾತುಧಾನರಿಂದ ರಕ್ಷಿತವಾದ ಈ ಪರ್ವತಗಳು ದುರ್ಗಮ. ಆದುದರಿಂದ ಪರಮ ಸಮಾಧಿಯಲ್ಲಿರಬೇಕು.

03140009a ಕುಬೇರಸಚಿವಾಶ್ಚಾನ್ಯೇ ರೌದ್ರಾ ಮೈತ್ರಾಶ್ಚ ರಾಕ್ಷಸಾಃ|

03140009c ತೈಃ ಸಮೇಷ್ಯಾಮ ಕೌಂತೇಯ ಯತ್ತೋ ವಿಕ್ರಮಣೇ ಭವ||

ಕುಬೇರನ ಇನ್ನೂ ಇತರ ರೌದ್ರ ಸಚಿವರು ಮತ್ತು ರಾಕ್ಷಸ ಮಿತ್ರರಿದ್ದಾರೆ. ಕೌಂತೇಯ! ಅವರನ್ನೂ ಕೂಡ ನಾವು ಎದುರಿಸಬಹುದು. ಆದುದರಿಂದ ವಿಕ್ರಮದಿಂದ ಪ್ರಯಾಣಿಸಬೇಕಾಗುತ್ತದೆ.

03140010a ಕೈಲಾಸಃ ಪರ್ವತೋ ರಾಜನ್ಷಡ್ಯೋಜನಶತಾನ್ಯುತ|

03140010c ಯತ್ರ ದೇವಾಃ ಸಮಾಯಾಂತಿ ವಿಶಾಲಾ ಯತ್ರ ಭಾರತ||

03140011a ಅಸಂಖ್ಯೇಯಾಸ್ತು ಕೌಂತೇಯ ಯಕ್ಷರಾಕ್ಷಸಕಿನ್ನರಾಃ|

03140011c ನಾಗಾಃ ಸುಪರ್ಣಾ ಗಂಧರ್ವಾಃ ಕುಬೇರಸದನಂ ಪ್ರತಿ||

03140012a ತಾನ್ವಿಗಾಹಸ್ವ ಪಾರ್ಥಾದ್ಯ ತಪಸಾ ಚ ದಮೇನ ಚ|

03140012c ರಕ್ಷ್ಯಮಾಣೋ ಮಯಾ ರಾಜನ್ಭೀಮಸೇನಬಲೇನ ಚ||

ರಾಜನ್! ಕೈಲಾಸ ಪರ್ವತವು ಆರುನೂರು ಯೋಜನೆಗಳ ಆಯತವನ್ನು ಹೊಂದಿದೆ. ಭಾರತ! ಆ ವಿಶಾಲಪ್ರದೇಶದಲ್ಲಿ ದೇವತೆಗಳು ಸಭೆಸೇರುತ್ತಾರೆ. ಕೌಂತೇಯ! ಅಲ್ಲಿ ಅಸಂಖ್ಯೆಯಲ್ಲಿ ಯಕ್ಷ, ರಾಕ್ಷಸ, ಕಿನ್ನರ, ನಾಗ, ಪಕ್ಷಿ, ಗಂಧರ್ವರು ಕುಬೇರನ ಸನ್ನಿಧಿಯಲ್ಲಿದ್ದಾರೆ. ಪಾರ್ಥ! ರಾಜನ್! ಇಂದು ತಪಸ್ಸು, ದಮ, ಭೀಮಸೇನನ ಬಲ ಮತ್ತು ನನ್ನ ರಕ್ಷಣೆಯಿಂದ ಅದನ್ನು ಏರು.

03140013a ಸ್ವಸ್ತಿ ತೇ ವರುಣೋ ರಾಜಾ ಯಮಶ್ಚ ಸಮಿತಿಂಜಯಃ|

03140013c ಗಂಗಾ ಚ ಯಮುನಾ ಚೈವ ಪರ್ವತಶ್ಚ ದಧಾತು ತೇ||

ರಾಜಾ ವರುಣ, ಸಮಿತಿಂಜಯ ಯಮ, ಗಂಗೆ, ಯಮುನೆ ಮತ್ತು ಪರ್ವತವು ನಿನಗೆ ಮಂಗಳವನ್ನು ನೀಡಲಿ.

03140014a ಇಂದ್ರಸ್ಯ ಜಾಂಬೂನದಪರ್ವತಾಗ್ರೇ|

         ಶೃಣೋಮಿ ಘೋಷಂ ತವ ದೇವಿ ಗಂಗೇ|

03140014c ಗೋಪಾಯಯೇಮಂ ಸುಭಗೇ ಗಿರಿಭ್ಯಃ|

         ಸರ್ವಾಜಮೀಢಾಪಚಿತಂ ನರೇಂದ್ರಂ||

03140014e ಭವಸ್ವ ಶರ್ಮ ಪ್ರವಿವಿಕ್ಷತೋಽಸ್ಯ|

         ಶೈಲಾನಿಮಾಂ ಶೈಲಸುತೇ ನೃಪಸ್ಯ||

ದೇವಿ ಗಂಗೇ! ಇಂದ್ರನ ಬಂಗಾರದ ಪರ್ವತದ ತುದಿಯಲ್ಲಿ ನಿನ್ನ ಪ್ರವಾಹಘೋಷದ ಧ್ವನಿಯನ್ನು ಕೇಳುತ್ತೇನೆ. ಸುಭಗೇ! ಎಲ್ಲ ಅಜಮೀಡರೂ ಗೌರವಿಸುವ ಈ ನರೇಂದ್ರನನ್ನು ಈ ಗಿರಿಗಳಿಂದ ರಕ್ಷಿಸು. ಈ ಪರ್ವತಗಳನ್ನು ಪ್ರವೇಶಿಸಲು ಸಿದ್ಧನಾಗಿರುವ ಇವನ ರಕ್ಷಕೆಯಾಗಿರು ಓ ಶೈಲಸುತೆಯೇ!”

03140015 ಯುಧಿಷ್ಠಿರ ಉವಾಚ|

03140015a ಅಪೂರ್ವೋಽಯಂ ಸಂಭ್ರಮೋ ಲೋಮಶಸ್ಯ|

         ಕೃಷ್ಣಾಂ ಸರ್ವೇ ರಕ್ಷತ ಮಾ ಪ್ರಮಾದಂ|

03140015c ದೇಶೋ ಹ್ಯಯಂ ದುರ್ಗತಮೋ ಮತೋಽಸ್ಯ|

         ತಸ್ಮಾತ್ಪರಂ ಶೌಚಮಿಹಾಚರಧ್ವಂ||

ಯುಧಿಷ್ಠಿರನು ಹೇಳಿದನು: “ಲೋಮಶನ ಈ ಉದ್ವೇಗವು ಹೊಸತು! ನೀವೆಲ್ಲರೂ ಕೃಷ್ಣೆಯನ್ನು ರಕ್ಷಿಸಿರಿ ಮತ್ತು ಪ್ರಮಾದಕ್ಕೊಳಗಾಗದಿರಿ! ಈ ಪ್ರದೇಶವು ಬಹಳ ಕಷ್ಟಕರವಾದುದು ಎಂದು ಅವನ ಮತ. ಆದುದರಿಂದ ಪರಮ ಶುಚಿಯನ್ನು ಆಚರಿಸಿ!””

03140016 ವೈಶಂಪಾಯನ ಉವಾಚ|

03140016a ತತೋಽಬ್ರವೀದ್ಭೀಮಮುದಾರವೀರ್ಯಂ|

         ಕೃಷ್ಣಾಂ ಯತ್ತಃ ಪಾಲಯ ಭೀಮಸೇನ|

03140016c ಶೂನ್ಯೇಽರ್ಜುನೇಽಸನ್ನಿಹಿತೇ ಚ ತಾತ|

         ತ್ವಮೇವ ಕೃಷ್ಣಾಂ ಭಜಸೇಽಸುಖೇಷು||

ವೈಶಂಪಾಯನನು ಹೇಳಿದನು: “ಅನಂತರ ಅವನು ಉದಾರವೀರ್ಯ ಭೀಮನಿಗೆ ಹೇಳಿದನು: “ಭೀಮಸೇನ! ಕೃಷ್ಣೆಯನ್ನು ಚೆನ್ನಾಗಿ ನೋಡಿಕೋ! ಮಗೂ! ಅರ್ಜುನನು ಹತ್ತಿರದಲ್ಲಿ ಇಲ್ಲದೇ ಇರುವಾಗ ಕಷ್ಟದಲ್ಲಿರುವ ಕೃಷ್ಣೆಯನ್ನು ನೀನೇ ನೋಡಿಕೊಳ್ಳುತ್ತೀಯೆ.”

03140017a ತತೋ ಮಹಾತ್ಮಾ ಯಮಜೌ ಸಮೇತ್ಯ|

         ಮೂರ್ಧನ್ಯುಪಾಘ್ರಾಯ ವಿಮೃಜ್ಯ ಗಾತ್ರೇ|

03140017c ಉವಾಚ ತೌ ಬಾಷ್ಪಕಲಂ ಸ ರಾಜಾ|

         ಮಾ ಭೈಷ್ಟಮಾಗಚ್ಚತಮಪ್ರಮತ್ತೌ||

ಅನಂತರ ಮಹಾತ್ಮ ನಕುಲ ಸಹದೇವರ ಬಳಿಬಂದು ಅವರ ನೆತ್ತಿಗಳನ್ನು ಮೂಸಿ, ತೋಳುಗಳನ್ನು ಮುಟ್ಟಿ, ಕಣ್ಣೀರು ತುಂಬಿದ ಧ್ವನಿಯಲ್ಲಿ ಆ ರಾಜನು ಹೇಳಿದನು: “ಹೆದರಿಕೆಯಿಲ್ಲದೇ ಅಪ್ರಮತ್ತರಾಗಿ ಮುಂದುವರೆಯಿರಿ.” 

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಕೈಲಾಸಾದಿಗಿರಿಪ್ರವೇಶೇ ಚತ್ವಾರಿಂಶದಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಕೈಲಾಸಾದಿಗಿರಿಪ್ರವೇಶದಲ್ಲಿ ನೂರಾನಲ್ವತ್ತನೆಯ ಅಧ್ಯಾಯವು.

Related image

Comments are closed.