Aranyaka Parva: Chapter 138

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೧೩೮

ಮಗನ ಮರಣದ ವಿಷಯವನ್ನು ತಿಳಿದು ದುಃಖಿತನಾದ ಭರದ್ವಾಜನು ಅಗ್ನಿಯನ್ನು ಪ್ರವೇಶಿಸಿದುದು (೧-೧೯).

03138001 ಲೋಮಶ ಉವಾಚ|

03138001a ಭರದ್ವಾಜಸ್ತು ಕೌಂತೇಯ ಕೃತ್ವಾ ಸ್ವಾಧ್ಯಾಯಮಾಹ್ನಿಕಂ|

03138001c ಸಮಿತ್ಕಲಾಪಮಾದಾಯ ಪ್ರವಿವೇಶ ಸ್ವಮಾಶ್ರಮಂ||

ಲೋಮಶನು ಹೇಳಿದನು: “ಕೌಂತೇಯ! ಭರದ್ವಾಜನಾದರೋ ಸ್ವಾಧ್ಯಾಯ ಆಹ್ನೀಕಗಳನ್ನು ಪೂರೈಸಿ ಸಮಿತ್ತಿನ ಕಟ್ಟನ್ನು ಹೊತ್ತು ತನ್ನ ಆಶ್ರಮವನ್ನು ಪ್ರವೇಶಿಸಿದನು.

03138002a ತಂ ಸ್ಮ ದೃಷ್ಟ್ವಾ ಪುರಾ ಸರ್ವೇ ಪ್ರತ್ಯುತ್ತಿಷ್ಠಂತಿ ಪಾವಕಾಃ|

03138002c ನ ತ್ವೇನಮುಪತಿಷ್ಠಂತಿ ಹತಪುತ್ರಂ ತದಾಗ್ನಯಃ||

ಇದಕ್ಕೂ ಹಿಂದೆ ಅವನನ್ನು ನೋಡಿದ ಕೂಡಲೇ ಎದ್ದು ನಿಲ್ಲುವ ಅಗ್ನಿಗಳೆಲ್ಲವೂ ಇಂದು ಅವನ ಮಗನು ಹತನಾದುದರಿಂದ ಅವನನ್ನು ಸ್ವಾಗತಿಸಲು ಎದ್ದು ನಿಲ್ಲಲಿಲ್ಲ.

03138003a ವೈಕೃತಂ ತ್ವಗ್ನಿಹೋತ್ರೇ ಸ ಲಕ್ಷಯಿತ್ವಾ ಮಹಾತಪಾಃ|

03138003c ತಮಂಧಂ ಶೂದ್ರಮಾಸೀನಂ ಗೃಹಪಾಲಮಥಾಬ್ರವೀತ್||

ಅಗ್ನಿಹೋತ್ರದಲ್ಲಿ ಈ ರೀತಿಯ ವ್ಯತ್ಯಾಸವನ್ನು ಗಮನಿಸಿದ ಆ ಮಹಾತಪಸ್ವಿಯು ಆ ಕುರುಡು ಶೂದ್ರ ಮನೆಕಾವಲಿನವನನ್ನು ಕೇಳಿದನು:

03138004a ಕಿಂ ನು ಮೇ ನಾಗ್ನಯಃ ಶೂದ್ರ ಪ್ರತಿನಂದಂತಿ ದರ್ಶನಂ|

03138004c ತ್ವಂ ಚಾಪಿ ನ ಯಥಾಪೂರ್ವಂ ಕಚ್ಚಿತ್ ಕ್ಷೇಮಮಿಹಾಶ್ರಮೇ||

“ಶೂದ್ರ! ನನ್ನನ್ನು ನೋಡಿ ಈ ಅಗ್ನಿಗಳು ಏಕೆ ಸ್ವಾಗತಿಸುತ್ತಿಲ್ಲ? ನೀನೂ ಕೂಡ ಹಿಂದಿನಂತಿಲ್ಲ. ಆಶ್ರಮದಲ್ಲಿ ಎಲ್ಲವೂ ಕ್ಷೇಮ ತಾನೇ?

03138005a ಕಚ್ಚಿನ್ನ ರೈಭ್ಯಂ ಪುತ್ರೋ ಮೇ ಗತವಾನಲ್ಪಚೇತನಃ|

03138005c ಏತದಾಚಕ್ಷ್ವ ಮೇ ಶೀಘ್ರಂ ನ ಹಿ ಮೇ ಶುಧ್ಯತೇ ಮನಃ||

ಅಲ್ಪಬುದ್ಧಿಯ ನನ್ನ ಆ ಮಗನು ರೈಭ್ಯನಲ್ಲಿಗೆ ಹೋಗಲಿಲ್ಲ ತಾನೇ? ನನಗೆ ಬೇಗನೆ ಹೇಳು. ನನ್ನ ಮನಸ್ಸು ಸುಖದಿಂದಿಲ್ಲ!”

03138006 ಶೂದ್ರ ಉವಾಚ|

03138006a ರೈಭ್ಯಂ ಗತೋ ನೂನಮಸೌ ಸುತಸ್ತೇ ಮಂದಚೇತನಃ|

03138006c ತಥಾ ಹಿ ನಿಹತಃ ಶೇತೇ ರಾಕ್ಷಸೇನ ಬಲೀಯಸಾ||

ಶೂದ್ರನು ಹೇಳಿದನು: “ನಿನ್ನ ಮಂದಚೇತಸ ಮಗನು ರೈಭ್ಯನಲ್ಲಿಗೆ ಹೋದ. ಆದುದರಿಂದಲೇ ಅವನು ಬಲವಂತನಾದ ರಾಕ್ಷಸನಿಂದ ಕೊಲ್ಲಲ್ಪಟ್ಟು ಬಿದ್ದಿದ್ದಾನೆ.

03138007a ಪ್ರಕಾಲ್ಯಮಾನಸ್ತೇನಾಯಂ ಶೂಲಹಸ್ತೇನ ರಕ್ಷಸಾ|

03138007c ಅಗ್ನ್ಯಾಗಾರಂ ಪ್ರತಿ ದ್ವಾರಿ ಮಯಾ ದೋರ್ಭ್ಯಾಂ ನಿವಾರಿತಃ||

ಶೂಲವನ್ನು ಹಿಡಿದ ರಾಕ್ಷಸನು ಅವನನ್ನು ಅಗ್ನ್ಯಾಗಾರದ ವರೆಗೆ ಬೆನ್ನಟ್ಟಿ ಬಂದ ಮತ್ತು ನಾನು ನಿನ್ನ ಮಗನನ್ನು ನನ್ನ ತೋಳುಗಳಿಂದ ಬಾಗಿಲಲ್ಲಿಯೇ ತಡೆದೆ.

03138008a ತತಃ ಸ ನಿಹತೋ ಹ್ಯತ್ರ ಜಲಕಾಮೋಽಶುಚಿರ್ಧ್ರುವಂ|

03138008c ಸಂಭಾವಿತೋ ಹಿ ತೂರ್ಣೇನ ಶೂಲಹಸ್ತೇನ ರಕ್ಷಸಾ||

ತುಂಬಾ ಅಶುಚಿಯಾಗಿದ್ದು ನೀರನ್ನು ಹುಡುಕುತ್ತಿದ್ದ ಅವನನ್ನು ಆಗ ಜೋರಾಗಿ ಓಡಿಬಂದ ಆ ರಾಕ್ಷಸನು ಹಿಡಿದಿದ್ದ ಶೂಲದಿಂದ ಅವನನ್ನು ಮುಗಿಸಿದನು.””

03138009 ಲೋಮಶ ಉವಾಚ|

03138009a ಭರದ್ವಾಜಸ್ತು ಶೂದ್ರಸ್ಯ ತಚ್ಛೃತ್ವಾ ವಿಪ್ರಿಯಂ ವಚಃ|

03138009c ಗತಾಸುಂ ಪುತ್ರಮಾದಾಯ ವಿಲಲಾಪ ಸುದುಃಖಿತಃ||

ಲೋಮಶನು ಹೇಳಿದನು: “ಶೂದ್ರನ ಆ ವಿಪ್ರಿಯ ಮಾತುಗಳನ್ನು ಕೇಳಿದ ಭರದ್ವಾಜನು ತೀರಿಹೋಗಿದ್ದ ಮಗನನ್ನು ಹಿಡಿದೆತ್ತಿ ಬಹಳ ದುಃಖಿತನಾಗಿ ರೋದಿಸಿದನು.

03138010a ಬ್ರಾಹ್ಮಣಾನಾಂ ಕಿಲಾರ್ಥಾಯ ನನು ತ್ವಂ ತಪ್ತವಾಂಸ್ತಪಃ|

03138010c ದ್ವಿಜಾನಾಮನಧೀತಾ ವೈ ವೇದಾಃ ಸಂಪ್ರತಿಭಾಂತ್ವಿತಿ||

“ದ್ವಿಜರಿಗೆ ಅಧ್ಯಯನ ಮಾಡದೇ ವೇದಗಳು ಪ್ರಕಟವಾಗಲಿ ಎಂದು ಬ್ರಾಹ್ಮಣರಿಗೋಸ್ಕರವಾಗಿ ನೀನು ತಪಸ್ಸನ್ನು ತಪಿಸಲಿಲ್ಲವೇ?

03138011a ತಥಾ ಕಲ್ಯಾಣಶೀಲಸ್ತ್ವಂ ಬ್ರಾಹ್ಮಣೇಷು ಮಹಾತ್ಮಸು|

03138011c ಅನಾಗಾಃ ಸರ್ವಭೂತೇಷು ಕರ್ಕಶತ್ವಮುಪೇಯಿವಾನ್||

ಹಾಗೆ ನೀನು ಮಹಾತ್ಮ ಬ್ರಾಹ್ಮಣರ ಕಲ್ಯಾಣಕ್ಕಾಗಿಯೇ ನಡೆದುಕೊಂಡೆ. ಸರ್ವ ಭೂತಗಳಿಗೂ ನೀನು ತಪ್ಪಿತಸ್ಥನೆಂದಿರಲಿಲ್ಲ. ಹಾಗಿದ್ದರೂ ಕರ್ಕಶತ್ವವನ್ನು ನಿನ್ನದಾಗಿಸಿಕೊಂಡೆ.

03138012a ಪ್ರತಿಷಿದ್ಧೋ ಮಯಾ ತಾತ ರೈಭ್ಯಾವಸಥದರ್ಶನಾತ್|

03138012c ಗತವಾನೇವ ತಂ ಕ್ಷುದ್ರಂ ಕಾಲಾಂತಕಯಮೋಪಮಂ||

ಮಗನೇ! ರೈಭ್ಯನ ಮನೆಯ ಬಳಿ ಸುಳಿಯಬೇಡೆಂದು ನಾನು ನಿಷೇದಿಸಿದ್ದೆ. ಆದರೂ ನೀನು ಕಾಲಾಂತಕ ಯಮನಂತಿರುವ ಆ ಕ್ಷುದ್ರನಲ್ಲಿಗೆ ಹೋದೆ.

03138013a ಯಃ ಸ ಜಾನನ್ಮಹಾತೇಜಾ ವೃದ್ಧಸ್ಯೈಕಂ ಮಮಾತ್ಮಜಂ|

03138013c ಗತವಾನೇವ ಕೋಪಸ್ಯ ವಶಂ ಪರಮದುರ್ಮತಿಃ||

ಆ ಮಹಾತೇಜಸ್ವಿ ಪರಮದುರ್ಮತಿಯು ವೃದ್ಧನಾದ ನನಗೆ ನೀನೊಬ್ಬನೇ ಮಗನೆಂದು ತಿಳಿದಿದ್ದರೂ ಕೋಪಕ್ಕೆ ವಶನಾದನು.

03138014a ಪುತ್ರಶೋಕಮನುಪ್ರಾಪ್ಯ ಏಷ ರೈಭ್ಯಸ್ಯ ಕರ್ಮಣಾ|

03138014c ತ್ಯಕ್ಷ್ಯಾಮಿ ತ್ವಾಮೃತೇ ಪುತ್ರ ಪ್ರಾಣಾನಿಷ್ಟತಮಾನ್ಭುವಿ||

ರೈಭ್ಯನ ಕೆಲಸದಿಂದಾಗಿ ಈ ಪುತ್ರಶೋಕವು ನನಗೆ ಪ್ರಾಪ್ತವಾಯಿತು. ಪುತ್ರನು ಮೃತನಾದನೆಂದು ನಾನು ಈ ಭೂಮಿಯಲ್ಲಿಯೇ ಬಹಳ ಇಷ್ಟವಾದ ಈ ಪ್ರಾಣವನ್ನೇ ತೊರೆಯುತ್ತೇನೆ.

03138015a ಯಥಾಹಂ ಪುತ್ರಶೋಕೇನ ದೇಹಂ ತ್ಯಕ್ಷ್ಯಾಮಿ ಕಿಲ್ಬಿಷೀ|

03138015c ತಥಾ ಜ್ಯೇಷ್ಠಃ ಸುತೋ ರೈಭ್ಯಂ ಹಿಂಸ್ಯಾಚ್ಛೀಘ್ರಮನಾಗಸಂ|

ಹೇಗೆ ನಾನು ಪುತ್ರಶೋಕದಿಂದ ದುಃಖಿತನಾಗಿ ಈ ದೇಹವನ್ನು ತೊರೆಯುತ್ತೇನೋ ಹಾಗೆ ರೈಭ್ಯನು ತನ್ನ ಹಿರಿಯ ಮಗನ ಹಿಂಸೆಯಿಂದಾಗಿ ಶೀಘ್ರದಲ್ಲಿಯೇ ಸಾವನ್ನು ಹೊಂದುತ್ತಾನೆ.

03138016a ಸುಖಿನೋ ವೈ ನರಾ ಯೇಷಾಂ ಜಾತ್ಯಾ ಪುತ್ರೋ ನ ವಿದ್ಯತೇ|

03138016c ತೇ ಪುತ್ರಶೋಕಮಪ್ರಾಪ್ಯ ವಿಚರಂತಿ ಯಥಾಸುಖಂ||

ಮಕ್ಕಳೇ ಹುಟ್ಟಿಲ್ಲದ ಜನರು ಸುಖಿಗಳು. ಅಂಥವರು ಪುತ್ರಶೋಕವನ್ನು ಹೊಂದದೇ ಯಥಾಸುಖವಾಗಿ ಹೋಗುತ್ತಿರುತ್ತಾರೆ.

03138017a ಯೇ ತು ಪುತ್ರಕೃತಾಚ್ಛೋಕಾದ್ಭೃಶಂ ವ್ಯಾಕುಲಚೇತಸಃ|

03138017c ಶಪಂತೀಷ್ಟಾನ್ಸಖೀನಾರ್ತಾಸ್ತೇಭ್ಯಃ ಪಾಪತರೋ ನು ಕಃ||

ಈ ರೀತಿ ಪುತ್ರನ ಸಾವಿನ ಶೋಕದಿಂದ ತುಂಬಾ ವ್ಯಾಕುಲ ಮನಸ್ಕನಾಗಿ ಯಾರು ತಾನೆ ಪಾಪತರನಾಗಿರುವ ತನ್ನ ಮಿತ್ರನಿಗೆ ಶಪಿಸುತ್ತಾನೆ?

03138018a ಪರಾಸುಶ್ಚ ಸುತೋ ದೃಷ್ಟಃ ಶಪ್ತಶ್ಚೇಷ್ಟಃ ಸಖಾ ಮಯಾ|

03138018c ಈದೃಶೀಮಾಪದಂ ಕೋ ನು ದ್ವಿತೀಯೋಽನುಭವಿಷ್ಯತಿ||

ಸತ್ತಿರುವ ಮಗನನ್ನು ಕಂಡೆನು ಮತ್ತು ನನ್ನ ಶ್ರೇಷ್ಠ ಸಖನನ್ನು ಶಪಿಸಿದೆನು. ಈ ರೀತಿಯ ಆಪತ್ತು ಇನ್ನು ಯಾರಿಗೆ ತಾನೇ ಬರುತ್ತದೆ?

03138019a ವಿಲಪ್ಯೈವಂ ಬಹುವಿಧಂ ಭರದ್ವಾಜೋಽದಹತ್ಸುತಂ|

03138019c ಸುಸಮಿದ್ಧಂ ತತಃ ಪಶ್ಚಾತ್ಪ್ರವಿವೇಶ ಹುತಾಶನಂ||

ಹೀಗೆ ಬಹುವಿಧದಲ್ಲಿ ವಿಲಪಿಸಿ ಭರದ್ವಾಜನು ತನ್ನ ಮಗನನ್ನು ಸುಟ್ಟನು ಮತ್ತು ನಂತರ ಚೆನ್ನಾಗಿ ಉರಿಯುತ್ತಿರುವ ಬೆಂಕಿಯನ್ನು ಪ್ರವೇಶಿಸಿದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಯವಕ್ರೀತೋಪಖ್ಯಾನೇ ಅಷ್ಟಾತ್ರಿಂಶದಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಯವಕ್ರೀತೋಪಖ್ಯಾನದಲ್ಲಿ ನೂರಾಮೂವತ್ತೆಂಟನೆಯ ಅಧ್ಯಾಯವು.

Related image

Comments are closed.