ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೧೧೮
ತೀರ್ಥಯಾತ್ರೆಯನ್ನು ಮುಂದುವರೆಸಿ ಯುಧಿಷ್ಠಿರನು ಪ್ರಭಾಸಕ್ಷೇತ್ರಕ್ಕೆ ಬಂದುದು (೧-೧೫). ರಾಮ-ಜನಾರ್ದನರು ಮತ್ತು ಇತರ ವೃಷ್ಣಿಗಳು ಪಾಂಡವರ ಕಷ್ಟವನ್ನು ನೋಡಿ ದುಃಖಿಸಿದುದು (೧೬-೨೩).
03118001 ವೈಶಂಪಾಯನ ಉವಾಚ|
03118001a ಗಚ್ಚನ್ಸ ತೀರ್ಥಾನಿ ಮಹಾನುಭಾವಃ|
ಪುಣ್ಯಾನಿ ರಮ್ಯಾಣಿ ದದರ್ಶ ರಾಜಾ|
03118001c ಸರ್ವಾಣಿ ವಿಪ್ರೈರುಪಶೋಭಿತಾನಿ|
ಕ್ವ ಚಿತ್ಕ್ವ ಚಿದ್ಭಾರತ ಸಾಗರಸ್ಯ||
ವೈಶಂಪಾಯನನು ಹೇಳಿದನು: “ಭಾರತ! ಆ ಮಹಾನುಭಾವ ರಾಜನು ಮುಂದುವರೆದು ಎಲ್ಲ ವಿಪ್ರರಿಂದೊಡಗೂಡಿ ಒಂದೊಂದಾಗಿ ಸಾಗರತೀರದಲ್ಲಿ ಪುಣ್ಯ ಮತ್ತು ರಮ್ಯ ತೀರ್ಥಗಳನ್ನು ನೋಡಿದನು.
03118002a ಸ ವೃತ್ತವಾಂಸ್ತೇಷು ಕೃತಾಭಿಷೇಕಃ|
ಸಹಾನುಜಃ ಪಾರ್ಥಿವಪುತ್ರಪೌತ್ರಃ|
03118002c ಸಮುದ್ರಗಾಂ ಪುಣ್ಯತಮಾಂ ಪ್ರಶಸ್ತಾಂ|
ಜಗಾಮ ಪಾರಿಕ್ಷಿತ ಪಾಂಡುಪುತ್ರಃ||
ಪಾರಿಕ್ಷಿತ! ಪಾರ್ಥಿವರ ಮಗ-ಮೊಮ್ಮಗನಾದ ಆ ಪಾಂಡುಪುತ್ರನು ಅನುಜರೊಂದಿಗೆ ಅವುಗಳಲ್ಲಿ ವಿನೀತನಾಗಿ ಸ್ನಾನಮಾಡಿ ಪುಣ್ಯತಮ ಪ್ರಶಸ್ತ ಸಮುದ್ರಗೆಗೆ ಹೋದನು.
03118003a ತತ್ರಾಪಿ ಚಾಪ್ಲುತ್ಯ ಮಹಾನುಭಾವಃ|
ಸಂತರ್ಪಯಾಮಾಸ ಪಿತೄನ್ಸುರಾಂಶ್ಚ|
03118003c ದ್ವಿಜಾತಿಮುಖ್ಯೇಷು ಧನಂ ವಿಸೃಜ್ಯ|
ಗೋದಾವರಿಂ ಸಾಗರಗಾಮಗಚ್ಚತ್||
ಅಲ್ಲಿಯೂ ಕೂಡ ಮಹಾನುಭಾವನು ಸ್ನಾನಮಾಡಿ ಪಿತೃಗಳಿಗೆ ದೇವತೆಗಳಿಗೆ ತರ್ಪಣವನ್ನಿತ್ತು, ಬ್ರಾಹ್ಮಣ ಪ್ರಮುಖರಿಗೆ ಧನವನ್ನು ಹಂಚಿ, ಸಾಗರವನ್ನು ಸೇರುವ ಗೋದಾವರಿಗೆ ಹೋದನು.
03118004a ತತೋ ವಿಪಾಪ್ಮಾ ದ್ರವಿಡೇಷು ರಾಜನ್|
ಸಮುದ್ರಮಾಸಾದ್ಯ ಚ ಲೋಕಪುಣ್ಯಂ|
03118004c ಅಗಸ್ತ್ಯತೀರ್ಥಂ ಚ ಪವಿತ್ರಪುಣ್ಯಂ|
ನಾರೀತೀರ್ಥಾನ್ಯಥ ವೀರೋ ದದರ್ಶ||
ಆಗ ರಾಜನ್! ದ್ರವಿಡದಲ್ಲಿ ಪಾಪವಿರಹಿತನಾಗಿ ಸಮುದ್ರವನ್ನು ಸೇರಿ ಲೋಕಪುಣ್ಯಕ ಪವಿತ್ರಪುಣ್ಯ ಅಗಸ್ತ್ಯತೀರ್ಥ, ನಾರೀತೀರ್ಥ ಮತ್ತು ಇತರ ತೀರ್ಥಗಳನ್ನು ವೀರನು ನೋಡಿದನು.
03118005a ತತ್ರಾರ್ಜುನಸ್ಯಾಗ್ರ್ಯಧನುರ್ಧರಸ್ಯ|
ನಿಶಮ್ಯ ತತ್ಕರ್ಮ ಪರೈರಸಹ್ಯಂ|
03118005c ಸಂಪೂಜ್ಯಮಾನಃ ಪರಮರ್ಷಿಸಂಘೈಃ|
ಪರಾಂ ಮುದಂ ಪಾಂಡುಸುತಃ ಸ ಲೇಭೇ||
ಅಲ್ಲಿ ಅಗ್ರಧನುರ್ಧರ ಅರ್ಜುನನನ ಪೌರಸಾಹಸ ಕರ್ಮಗಳ ಕುರಿತು ಕೇಳಿದನು. ಪರಮ ಋಷಿಗಳ ಗುಂಪುಗಳು ಅವನನ್ನು ಗೌರವಿಸಲು ಪಾಂಡುಸುತನು ಪರಮ ಸಂತೋಷವನ್ನು ಹೊಂದಿದನು.
03118006a ಸ ತೇಷು ತೀರ್ಥೇಷ್ವಭಿಷಿಕ್ತಗಾತ್ರಃ|
ಕೃಷ್ಣಾಸಹಾಯಃ ಸಹಿತೋಽನುಜೈಶ್ಚ|
03118006c ಸಂಪೂಜಯನ್ವಿಕ್ರಮಮರ್ಜುನಸ್ಯ|
ರೇಮೇ ಮಹೀಪಾಲಪತಿಃ ಪೃಥಿವ್ಯಾಂ||
ಆ ತೀರ್ಥಗಳಲ್ಲಿ ಕೃಷ್ಣೆಯ ಸಹಿತ ಮತ್ತು ತಮ್ಮಂದಿರೊಡನೆ ಅಂಗಾಂಗಗಳನ್ನು ತೊಳೆದು, ಅರ್ಜುನನ ವಿಕ್ರಮಕ್ಕೆ ಗೌರವಿಸಿ, ಮಹೀಪಾಲ ಪತಿಯು ಪೃಥ್ವಿಯಲ್ಲಿ ರಮಿಸಿದನು.
03118007a ತತಃ ಸಹಸ್ರಾಣಿ ಗವಾಂ ಪ್ರದಾಯ|
ತೀರ್ಥೇಷು ತೇಷ್ವಂಬುಧರೋತ್ತಮಸ್ಯ|
03118007c ಹೃಷ್ಟಃ ಸಹ ಭ್ರಾತೃಭಿರರ್ಜುನಸ್ಯ|
ಸಂಕೀರ್ತಯಾಮಾಸ ಗವಾಂ ಪ್ರದಾನಂ||
ಅರ್ಜುನನನ್ನು ತಮ್ಮಂದಿರೊಡನೆ ಪ್ರಶಂಸಿಸುತ್ತಾ ಆ ಉತ್ತಮ ನದೀ ತೀರ್ಥಗಳಲ್ಲಿ ಸಹಸ್ರಾರು ಗೋವುಗಳನ್ನು ದಾನವನ್ನಾಗಿತ್ತನು.
03118008a ಸ ತಾನಿ ತೀರ್ಥಾನಿ ಚ ಸಾಗರಸ್ಯ|
ಪುಣ್ಯಾನಿ ಚಾನ್ಯಾನಿ ಬಹೂನಿ ರಾಜನ್|
03118008c ಕ್ರಮೇಣ ಗಚ್ಚನ್ಪರಿಪೂರ್ಣಕಾಮಃ|
ಶೂರ್ಪಾರಕಂ ಪುಣ್ಯತಮಂ ದದರ್ಶ||
ರಾಜನ್! ಸಾಗರತೀರದಲ್ಲಿ ಆ ಪುಣ್ಯ ತೀರ್ಥಗಳಿಗೂ ಇನ್ನೂ ಇತರ ಬಹಳ ತೀರ್ಥಗಳಿಗೂ ಹೋಗಿ ಕ್ರಮೇಣವಾಗಿ ಆ ಪರಿಪೂರ್ಣಕಾಮನು ಪುಣ್ಯತಮ ಶೂರ್ಪಾರಕವನ್ನು ನೋಡಿದನು.
03118009a ತತ್ರೋದಧೇಃ ಕಂ ಚಿದತೀತ್ಯ ದೇಶಂ|
ಖ್ಯಾತಂ ಪೃಥಿವ್ಯಾಂ ವನಮಾಸಸಾದ|
03118009c ತಪ್ತಂ ಸುರೈರ್ಯತ್ರ ತಪಃ ಪುರಸ್ತಾದ್|
ಇಷ್ಟಂ ತಥಾ ಪುಣ್ಯತಮೈರ್ನರೇಂದ್ರೈಃ||
ಸಾಗರತೀರದಲ್ಲಿ ಕೆಲವು ಪ್ರದೇಶಗಳನ್ನು ದಾಟಿ ಭೂಮಿಯಲ್ಲಿಯೇ ಖ್ಯಾತ, ಹಿಂದೆ ದೇವತೆಗಳು ತಪಸ್ಸನ್ನು ತಪಿಸಿದ, ನರೇಂದ್ರರರಿಗೆ ಇಷ್ಟವಾದ ಪುಣ್ಯತಮ ವನದ ಬಳಿಬಂದನು.
03118010a ಸ ತತ್ರ ತಾಮಗ್ರ್ಯಧನುರ್ಧರಸ್ಯ|
ವೇದೀಂ ದದರ್ಶಾಯತಪೀನಬಾಹುಃ|
03118010c ಋಚೀಕಪುತ್ರಸ್ಯ ತಪಸ್ವಿಸಂಘೈಃ|
ಸಮಾವೃತಾಂ ಪುಣ್ಯಕೃದರ್ಚನೀಯಾಂ||
03118011a ತತೋ ವಸೂನಾಂ ವಸುಧಾಧಿಪಃ ಸ|
ಮರುದ್ಗಣಾನಾಂ ಚ ತಥಾಶ್ವಿನೋಶ್ಚ|
03118011c ವೈವಸ್ವತಾದಿತ್ಯಧನೇಶ್ವರಾಣಾಂ|
ಇಂದ್ರಸ್ಯ ವಿಷ್ಣೋಃ ಸವಿತುರ್ವಿಭೋಶ್ಚ||
03118012a ಭಗಸ್ಯ ಚಂದ್ರಸ್ಯ ದಿವಾಕರಸ್ಯ|
ಪತೇರಪಾಂ ಸಾಧ್ಯಗಣಸ್ಯ ಚೈವ|
03118012c ಧಾತುಃ ಪಿತೄಣಾಂ ಚ ತಥಾ ಮಹಾತ್ಮಾ|
ರುದ್ರಸ್ಯ ರಾಜನ್ಸಗಣಸ್ಯ ಚೈವ||
03118013a ಸರಸ್ವತ್ಯಾಃ ಸಿದ್ಧಗಣಸ್ಯ ಚೈವ|
ಪೂಷ್ಣಶ್ಚ ಯೇ ಚಾಪ್ಯಮರಾಸ್ತಥಾನ್ಯೇ|
03118013c ಪುಣ್ಯಾನಿ ಚಾಪ್ಯಾಯತನಾನಿ ತೇಷಾಂ|
ದದರ್ಶ ರಾಜಾ ಸುಮನೋಹರಾಣಿ||
ರಾಜನ್! ಅನಂತರ ಆ ವಸುಧಾಧಿಪ ರಾಜನು ವಸುಗಳ, ಮರುದ್ಗಣಗಳ, ಹಾಗೆಯೇ ಅಶ್ವಿನಿಯರ, ವೈವಸ್ವತ, ಆದಿತ್ಯ, ಕುಬೇರನ, ಇಂದ್ರ, ವಿಷ್ಣು, ವಿಭು ಸವಿತುವಿನ, ಭಗ, ಚಂದ್ರ ಮತ್ತು ದಿವಾಕರನ, ಅಪಾಂಪತಿ, ಮತ್ತು ಸಾಧ್ಯಗಣದ, ಧಾತೃ, ಪಿತೃಗಳ, ಮತ್ತು ಗಣಗಳೊಂದಿಗೆ ಮಹಾತ್ಮ ರುದ್ರನ, ಸರಸ್ವತಿಯ, ಸಿದ್ಧಗಣಗಳ, ಪೂಷ್ಣನ, ಮತ್ತು ಇತರ ಅಮರರ ಪುಣ್ಯ, ಅವರಿಗೆ ಪ್ರಿಯವಾದ ಸುಮನೋಹರ ತೀರ್ಥಗಳನ್ನು ನೋಡಿದನು.
03118014a ತೇಷೂಪವಾಸಾನ್ವಿವಿಧಾನುಪೋಷ್ಯ|
ದತ್ತ್ವಾ ಚ ರತ್ನಾನಿ ಮಹಾಧನಾನಿ|
03118014c ತೀರ್ಥೇಷು ಸರ್ವೇಷು ಪರಿಪ್ಲುತಾಂಗಃ|
ಪುನಃ ಸ ಶೂರ್ಪಾರಕಮಾಜಗಾಮ||
ಅಲ್ಲಿ ಉಪವಾಸದಿಂದಿದ್ದು ವಿವಿಧ ರತ್ನಗಳನ್ನು ಮಹಾಧನಗಳನ್ನು ದಾನವನ್ನಾಗಿತ್ತು ಎಲ್ಲ ತೀರ್ಥಗಳಲ್ಲಿ ಸ್ನಾನಮಾಡಿ ಪುನಃ ಶೂರ್ಪಾರಕಕ್ಕೆ ಬಂದನು,
03118015a ಸ ತೇನ ತೀರ್ಥೇನ ತು ಸಾಗರಸ್ಯ|
ಪುನಃ ಪ್ರಯಾತಃ ಸಹ ಸೋದರೀಯೈಃ|
03118015c ದ್ವಿಜೈಃ ಪೃಥಿವ್ಯಾಂ ಪ್ರಥಿತಂ ಮಹದ್ಭಿಸ್|
ತೀರ್ಥಂ ಪ್ರಭಾಸಂ ಸಮುಪಾಜಗಾಮ||
ಸಾಗರ ತೀರದಲ್ಲಿರುವ ಆ ಎಲ್ಲ ತೀರ್ಥಗಳಿಗೂ ಹೋಗಿ, ತನ್ನ ತಮ್ಮಂದಿರೊಡನೆ ಪುನಃ ಪ್ರಯಾಣಮಾಡಿ ಬ್ರಾಹ್ಮಣರು ಸಾಗರದಿಂದ ಪಡೆದ ಭೂಮಿ ಪ್ರಭಾಸ ತೀರ್ಥಕ್ಕೆ ಬಂದನು.
03118016a ತತ್ರಾಭಿಷಿಕ್ತಃ ಪೃಥುಲೋಹಿತಾಕ್ಷಃ|
ಸಹಾನುಜೈರ್ದೇವಗಣಾನ್ಪಿತೄಂಶ್ಚ|
03118016c ಸಂತರ್ಪಯಾಮಾಸ ತಥೈವ ಕೃಷ್ಣಾ|
ತೇ ಚಾಪಿ ವಿಪ್ರಾಃ ಸಹ ಲೋಮಶೇನ||
ಅಗಲವಾದ ಕೆಂಪುಕಣ್ಣುಗಳುಳ್ಳ ಅವನು ಅಲ್ಲಿ ಅನುಜರು ಮತ್ತು ಕೃಷ್ಣೆಯೊಂದಿಗೆ, ಲೋಮಶ ಮತ್ತು ವಿಪ್ರರೊಂದಿಗೆ ಪಿತೃ-ದೇವಗಣಗಳಿಗೆ ತರ್ಪಣವನ್ನಿತ್ತನು.
03118017a ಸ ದ್ವಾದಶಾಹಂ ಜಲವಾಯುಭಕ್ಷಃ|
ಕುರ್ವನ್ ಕ್ಷಪಾಹಃಸು ತದಾಭಿಷೇಕಂ|
03118017c ಸಮಂತತೋಽಗ್ನೀನುಪದೀಪಯಿತ್ವಾ|
ತೇಪೇ ತಪೋ ಧರ್ಮಭೃತಾಂ ವರಿಷ್ಠಃ||
ಧರ್ಮಭೃತರಲ್ಲಿ ಶ್ರೇಷ್ಠನಾದ ಅವನು ಹನ್ನೆರಡು ದಿನಗಳು ಕೇವಲ ನೀರು-ಗಾಳಿಯನ್ನು ಸೇವಿಸಿಕೊಂಡಿದ್ದು ಪ್ರಾತಃ ಮತ್ತು ಸಂಧ್ಯಾಕಾಲಗಳಲ್ಲಿ ಸ್ನಾನಮಾಡಿ, ಸುತ್ತಲೂ ಅಗ್ನಿಯನ್ನು ಉರಿಯಿಸಿಕೊಂಡು ತಪಸ್ಸನ್ನು ತಪಿಸಿದನು.
03118018a ತಮುಗ್ರಮಾಸ್ಥಾಯ ತಪಶ್ಚರಂತಂ|
ಶುಶ್ರಾವ ರಾಮಶ್ಚ ಜನಾರ್ದನಶ್ಚ|
03118018c ತೌ ಸರ್ವವೃಷ್ಣಿಪ್ರವರೌ ಸಸೈನ್ಯೌ|
ಯುಧಿಷ್ಠಿರಂ ಜಗ್ಮತುರಾಜಮೀಢಂ||
ಅವನು ಉಗ್ರತಪಸ್ಸಿನಲ್ಲಿ ನಿರತನಾಗಿದ್ದಾನೆಂದು ರಾಮ-ಜನಾರ್ದರನು ಕೇಳಿದರು. ಅವರಿಬ್ಬರೂ ಎಲ್ಲ ವೃಷ್ಣಿಪ್ರಮುಖರು ಮತ್ತು ಸೈನ್ಯದೊಂದಿಗೆ ಅಜಮೀಢ ಯುಧಿಷ್ಠಿರನಲ್ಲಿಗೆ ಬಂದರು.
03118019a ತೇ ವೃಷ್ಣಯಃ ಪಾಂಡುಸುತಾನ್ಸಮೀಕ್ಷ್ಯ|
ಭೂಮೌ ಶಯಾನಾನ್ಮಲದಿಗ್ಧಗಾತ್ರಾನ್|
03118019c ಅನರ್ಹತೀಂ ದ್ರೌಪದೀಂ ಚಾಪಿ ದೃಷ್ಟ್ವಾ|
ಸುದುಃಖಿತಾಶ್ಚುಕ್ರುಶುರಾರ್ತನಾದಂ||
ಆ ವೃಷ್ಣಿಗಳು ನೆಲದ ಮೇಲೆ ಮಲಗುತ್ತಿದ್ದ, ಅಂಗಾಗಗಳಲ್ಲಿ ಧೂಳು ತುಂಬಿಸಿಕೊಂಡಿದ್ದ ಪಾಂಡುಸುತರನ್ನು ನೋಡಿ ಮತ್ತು ಇವುಗಳಿಗೆ ಅರ್ಹಳಲ್ಲದ ದ್ರೌಪದಿಯನ್ನೂ ನೋಡಿ ಬಹಳ ದುಃಖಿತರಾಗಿ ಆರ್ತನಾದಮಾಡಿದರು.
03118020a ತತಃ ಸ ರಾಮಂ ಚ ಜನಾರ್ದನಂ ಚ|
ಕಾರ್ಷ್ಣಿಂ ಚ ಸಾಂಬಂ ಚ ಶಿನೇಶ್ಚ ಪೌತ್ರಂ|
03118020c ಅನ್ಯಾಂಶ್ಚ ವೃಷ್ಣೀನುಪಗಮ್ಯ ಪೂಜಾಂ|
ಚಕ್ರೇ ಯಥಾಧರ್ಮಮದೀನಸತ್ತ್ವಃ||
ಆಗ ಆ ಅದೀನಸತ್ವರು ರಾಮ, ಜನಾರ್ದನ, ಕೃಷ್ಣನ ಮಗ ಸಾಂಬ, ಶಿನಿಯ ಮೊಮ್ಮಗ ಮತ್ತು ಇತರ ವೃಷ್ಣಿಗಳ ಬಳಿ ಬಂದು ಯಥಾಧರ್ಮವಾಗಿ ಪೂಜಿಸಿದರು.
03118021a ತೇ ಚಾಪಿ ಸರ್ವಾನ್ಪ್ರತಿಪೂಜ್ಯ ಪಾರ್ಥಾಂಸ್|
ತೈಃ ಸತ್ಕೃತಾಃ ಪಾಂಡುಸುತೈಸ್ತಥೈವ|
03118021c ಯುಧಿಷ್ಠಿರಂ ಸಂಪರಿವಾರ್ಯ ರಾಜನ್ನ್|
ಉಪಾವಿಶನ್ದೇವಗಣಾ ಯಥೇಂದ್ರಂ||
ರಾಜನ್! ಅವರೆಲ್ಲರೂ ಕೂಡ ಪಾರ್ಥರನ್ನು ಪ್ರತಿಪೂಜಿಸಿದರು. ಹಾಗೆಯೇ ಪಾಂಡುಸುತರಿಂದ ಸತ್ಕೃತರಾದರು. ಇಂದ್ರನನ್ನು ದೇವಗಣಗಳು ಹೇಗೋ ಹಾಗೆ ಅವರು ಯುಧಿಷ್ಠಿರನನ್ನು ಸುತ್ತುವರೆದು ಕುಳಿತುಕೊಂಡರು.
03118022a ತೇಷಾಂ ಸ ಸರ್ವಂ ಚರಿತಂ ಪರೇಷಾಂ|
ವನೇ ಚ ವಾಸಂ ಪರಮಪ್ರತೀತಃ|
03118022c ಅಸ್ತ್ರಾರ್ಥಮಿಂದ್ರಸ್ಯ ಗತಂ ಚ ಪಾರ್ಥಂ|
ಕೃಷ್ಣೇ ಶಶಂಸಾಮರರಾಜಪುತ್ರಂ||
ಆ ಪರಮಪ್ರತೀತನು ಅವರಿಗೆ ಮತ್ತು ಕೃಷ್ಣನಿಗೆ ತನ್ನ ಶತ್ರುಗಳ ಎಲ್ಲ ನಡತೆಗಳ ಕುರಿತು, ಮತ್ತು ವನದಲ್ಲಿ ವಾಸಿಸುತ್ತಿರುವುದರ ಕುರಿತು, ಇಂದ್ರನ ಮಗ ಪಾರ್ಥನು ಅಸ್ತ್ರಗಳಿಗಾಗಿ ಇಂದ್ರನಲ್ಲಿಗೆ ಹೋಗಿದ್ದುದರ ಕುರಿತು ವರದಿಮಾಡಿದನು.
03118023a ಶ್ರುತ್ವಾ ತು ತೇ ತಸ್ಯ ವಚಃ ಪ್ರತೀತಾಸ್|
ತಾಂಶ್ಚಾಪಿ ದೃಷ್ಟ್ವಾ ಸುಕೃಶಾನತೀವ|
03118023c ನೇತ್ರೋದ್ಭವಂ ಸಮ್ಮುಮುಚುರ್ದಶಾರ್ಹಾ|
ದುಃಖಾರ್ತಿಜಂ ವಾರಿ ಮಹಾನುಭಾವಾಃ||
ಅವನ ಮಾತುಗಳನ್ನು ಪ್ರತೀತರಾಗಿ ಕೇಳಿ, ಅವರು ಕೃಷರಾಗಿದ್ದುದನ್ನು ನೋಡಿ ಆ ಮಹಾನುಭಾವ ದಾಶಾರ್ಹರ ಕಣ್ಣುಗಳಿಂದ ಜನಿಸಿದ ದುಃಖದ ಕಣ್ಣೀರು ಹರಿಯಿತು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಪ್ರಭಾಸೇ ಯಾದವಪಾಂಡವಸಮಾಗಮೇ ಅಷ್ಟಾದಶಾಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಪ್ರಭಾಸದಲ್ಲಿ ಯಾದವಪಾಂಡವಸಮಾಗಮದಲ್ಲಿ ನೂರಾಹದಿನೆಂಟನೆಯ ಅಧ್ಯಾಯವು.