Aranyaka Parva: Chapter 101

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೧೦೧

ಅಗಸ್ತ್ಯನು ಸಾಗರವನ್ನು ಬತ್ತಿಸಬಲ್ಲನು ಎಂದು ನಾರಾಯಣನು ಸೂಚಿಸಿದ್ದುದು (೧-೧೦). ದೇವತೆಗಳು ಅಗಸ್ತ್ಯನನ್ನು ಬೇಡಿಕೊಂಡಿದುದು (೧೧-೧೭).

03101001 ದೇವಾ ಊಚುಃ|

03101001a ಇತಃ ಪ್ರದಾನಾದ್ವರ್ತಂತೇ ಪ್ರಜಾಃ ಸರ್ವಾಶ್ಚತುರ್ವಿಧಾಃ|

03101001c ತಾ ಭಾವಿತಾ ಭಾವಯಂತಿ ಹವ್ಯಕವ್ಯೈರ್ದಿವೌಕಸಃ||

ದೇವತೆಗಳು ಹೇಳಿದರು: “ಚತುರ್ವಿಧ ಪ್ರಜೆಗಳೆಲ್ಲರೂ ಇಲ್ಲಿಂದ ಬರುವ ಅನುಗ್ರಹದಿಂದಲೇ ಜೀವಿಸುತ್ತವೆ. ಹೀಗೆ ಅಭಿವೃದ್ಧಿಹೊಂದಿದ ಅವರು ಹವ್ಯಕವ್ಯಗಳ ಮೂಲಕ ದೇವತೆಗಳ ಅಭಿವೃದ್ಧಿಗೆ ಕಾರಣರಾಗುತ್ತಾರೆ.

03101002a ಲೋಕಾ ಹ್ಯೇವಂ ವರ್ತಯಂತಿ ಅನ್ಯೋನ್ಯಂ ಸಮುಪಾಶ್ರಿತಾಃ|

03101002c ತ್ವತ್ಪ್ರಸಾದಾನ್ನಿರುದ್ವಿಗ್ನಾಸ್ತ್ವಯೈವ ಪರಿರಕ್ಷಿತಾಃ||

ಹೀಗೆ ಲೋಕಗಳು ಅನ್ಯೋನ್ಯರನ್ನು ಅವಲಂಬಿಸಿ ನಡೆಯುತ್ತವೆ. ನಿನ್ನ ಪ್ರಸಾದದಿಂದ ಪರಿರಕ್ಷಿತರಾಗಿ ಲೋಕಗಳು ವಿಘ್ನಗಳಿಲ್ಲದೇ ಹೀಗೆಯೇ ನಡೆಯುತ್ತಿವೆ.

03101003a ಇದಂ ಚ ಸಮನುಪ್ರಾಪ್ತಂ ಲೋಕಾನಾಂ ಭಯಮುತ್ತಮಂ|

03101003c ನ ಚ ಜಾನೀಮ ಕೇನೇಮೇ ರಾತ್ರೌ ವಧ್ಯಂತಿ ಬ್ರಾಹ್ಮಣಾಃ||

ಈಗ ಈ ಅತೀವ ಭಯವು ಲೋಕಗಳಿಗೆ ಬಂದೊದಗಿದೆ. ರಾತ್ರಿಯಲ್ಲಿ ಬ್ರಾಹ್ಮಣರನ್ನು ಯಾರು ಕೊಲ್ಲುತ್ತಿದ್ದಾರೆ ಎಂದು ತಿಳಿಯಲಾರೆವು.

03101004a ಕ್ಷೀಣೇಷು ಚ ಬ್ರಾಹ್ಮಣೇಷು ಪೃಥಿವೀ ಕ್ಷಯಮೇಷ್ಯತಿ|

03101004c ತತಃ ಪೃಥಿವ್ಯಾಂ ಕ್ಷೀಣಾಯಾಂ ತ್ರಿದಿವಂ ಕ್ಷಯಮೇಷ್ಯತಿ||

ಬ್ರಾಹ್ಮಣರು ನಾಶವಾದರೆ ಭೂಮಿಯೂ ವಿನಾಶ ಹೊಂದುತ್ತದೆ. ಮತ್ತು ಭೂಮಿಯು ಕ್ಷೀಣವಾದರೆ, ದೇವಲೋಕವೂ ನಾಶಗೊಳ್ಳುತ್ತದೆ.

03101005a ತ್ವತ್ಪ್ರಸಾದಾನ್ಮಹಾಬಾಹೋ ಲೋಕಾಃ ಸರ್ವೇ ಜಗತ್ಪತೇ|

03101005c ವಿನಾಶಂ ನಾಧಿಗಚ್ಚೇಯುಸ್ತ್ವಯಾ ವೈ ಪರಿರಕ್ಷಿತಾಃ||

ಮಹಾಬಾಹೋ! ಜಗತ್ಪತೇ! ನಿನ್ನ ಕರುಣೆಯಿಂದ ಲೋಕಗಳೆಲ್ಲವೂ ನಾಶವಾಗದಿರಲಿ. ಅವೆಲ್ಲವನ್ನೂ ಪರಿರಕ್ಷಿಸು.”

03101006 ವಿಷ್ಣುರುವಾಚ|

03101006a ವಿದಿತಂ ಮೇ ಸುರಾಃ ಸರ್ವಂ ಪ್ರಜಾನಾಂ ಕ್ಷಯಕಾರಣಂ|

03101006c ಭವತಾಂ ಚಾಪಿ ವಕ್ಷ್ಯಾಮಿ ಶೃಣುಧ್ವಂ ವಿಗತಜ್ವರಾಃ||

ವಿಷ್ಣುವು ಹೇಳಿದನು: “ಸುರರೇ! ಪ್ರಜೆಗಳೆಲ್ಲರೂ ನಾಶಗೊಳ್ಳುತ್ತಿರುವುದರ ಕಾರಣವನ್ನು ನಾನು ತಿಳಿದಿದ್ದೇನೆ. ನಾನು ಹೇಳುತ್ತೇನೆ - ಭಯವನ್ನು ತೊರೆದು ಕೇಳಿ.

03101007a ಕಾಲೇಯ ಇತಿ ವಿಖ್ಯಾತೋ ಗಣಃ ಪರಮದಾರುಣಃ|

03101007c ತೈಶ್ಚ ವೃತ್ರಂ ಸಮಾಶ್ರಿತ್ಯ ಜಗತ್ಸರ್ವಂ ಪ್ರಬಾಧಿತಂ||

ಕಾಲೇಯರೆಂದು ವಿಖ್ಯಾತರಾದ ಒಂದು ಪರಮದಾರುಣ ಗುಂಪಿದೆ. ಅವರು ವೃತ್ರನನ್ನು ಆಶ್ರಯಿಸಿ ಜಗತ್ತುಗಳನ್ನೆಲ್ಲವನ್ನೂ ಬಾಧಿಸುತ್ತಿದ್ದರು.

03101008a ತೇ ವೃತ್ರಂ ನಿಹತಂ ದೃಷ್ಟ್ವಾ ಸಹಸ್ರಾಕ್ಷೇಣ ಧೀಮತಾ|

03101008c ಜೀವಿತಂ ಪರಿರಕ್ಷಂತಃ ಪ್ರವಿಷ್ಟಾ ವರುಣಾಲಯಂ||

ಧೀಮಂತ ಸಹಸ್ರಾಕ್ಷನು ವೃತ್ರನನ್ನು ಸಂಹರಿಸಿದುದನ್ನು ಕಂಡು ಅವರು ವರುಣಾಲಯವನ್ನು ಹೊಕ್ಕಿ ತಮ್ಮ ಜೀವಗಳನ್ನು ರಕ್ಷಿಸಿಕೊಂಡರು.

03101009a ತೇ ಪ್ರವಿಶ್ಯೋದಧಿಂ ಘೋರಂ ನಕ್ರಗ್ರಾಹಸಮಾಕುಲಂ|

03101009c ಉತ್ಸಾದನಾರ್ಥಂ ಲೋಕಾನಾಂ ರಾತ್ರೌ ಘ್ನಂತಿ ಮುನೀನಿಹ||

ಈಗ ಅವರು ಘೋರ ಮೊಸಳೆ ತಿಮಿಂಗಿಲಗಳು ತುಂಬಿರುವ ಸಮುದ್ರವನ್ನು ಸೇರಿದ್ದಾರೆ. ಲೋಕಗಳ ವಿನಾಶಕ್ಕಾಗಿ ಅವರು ರಾತ್ರಿಯಲ್ಲಿ ಇಲ್ಲಿರುವ ಮುನಿಗಳನ್ನು ಕೊಲ್ಲುತ್ತಿದ್ದಾರೆ.

03101010a ನ ತು ಶಕ್ಯಾಃ ಕ್ಷಯಂ ನೇತುಂ ಸಮುದ್ರಾಶ್ರಯಗಾ ಹಿ ತೇ|

03101010c ಸಮುದ್ರಸ್ಯ ಕ್ಷಯೇ ಬುದ್ಧಿರ್ಭವದ್ಭಿಃ ಸಂಪ್ರಧಾರ್ಯತಾಂ||

03101010e ಅಗಸ್ತ್ಯೇನ ವಿನಾ ಕೋ ಹಿ ಶಕ್ತೋಽನ್ಯೋಽರ್ಣವಶೋಷಣೇ||

ಸಮುದ್ರದಲ್ಲಿ ಆಶ್ರಯ ಪಡೆದಿರುವ ಅವರನ್ನು ಕೊಲ್ಲಲು ಶಕ್ಯವಿಲ್ಲ. ಸಮುದ್ರವನ್ನೇ ನಾಶಗೊಳಿಸುವುದರ ಕುರಿತು ನಿಮ್ಮ ಬುದ್ಧಿಯನ್ನು ಓಡಿಸಬೇಕು. ಅಗಸ್ತ್ಯನನ್ನು ಬಿಟ್ಟು ಬೇರೆ ಯಾರು ತಾನೇ ಸಮುದ್ರವನ್ನು ಬತ್ತಿಸಲು ಶಕ್ಯರಿದ್ದಾರೆ?”

03101011a ಏತಚ್ಛೃತ್ವಾ ವಚೋ ದೇವಾ ವಿಷ್ಣುನಾ ಸಮುದಾಹೃತಂ|

03101011c ಪರಮೇಷ್ಠಿನಮಾಜ್ಞಾಪ್ಯ ಅಗಸ್ತ್ಯಸ್ಯಾಶ್ರಮಂ ಯಯುಃ||

ವಿಷ್ಣುವಿನ ಈ ಮಾತುಗಳನ್ನು ಕೇಳಿ ಸಂತೋಷಗೊಂಡ ದೇವತೆಗಳು ಪರಮೇಷ್ಠಿಯಿಂದ ಬೀಳ್ಕೊಂಡು ಅಗಸ್ತ್ಯನ ಆಶ್ರಮಕ್ಕೆ ಬಂದರು. 

03101012a ತತ್ರಾಪಶ್ಯನ್ಮಹಾತ್ಮಾನಂ ವಾರುಣಿಂ ದೀಪ್ತತೇಜಸಂ|

03101012c ಉಪಾಸ್ಯಮಾನಮೃಷಿಭಿರ್ದೇವೈರಿವ ಪಿತಾಮಹಂ||

ಅಲ್ಲಿ ಅವರು ದೇವತೆಗಳ ಮಧ್ಯೆ ಪಿತಾಮಹನಂತೆ ಋಷಿಗಳ ಮಧ್ಯೆ ಕುಳಿತಿದ್ದ ದೀಪ್ತತೇಜಸ್ವಿ ಮಹಾತ್ಮ ವಾರುಣಿಯನ್ನು ಕಂಡರು.

03101013a ತೇಽಭಿಗಮ್ಯ ಮಹಾತ್ಮಾನಂ ಮೈತ್ರಾವರುಣಿಮಚ್ಯುತಂ|

03101013c ಆಶ್ರಮಸ್ಥಂ ತಪೋರಾಶಿಂ ಕರ್ಮಭಿಃ ಸ್ವೈರಭಿಷ್ಟುವನ್||

ಆಶ್ರಮದಲ್ಲಿದ್ದ ಆ ಮಹಾತ್ಮ, ಮೈತ್ರಾವರುಣಿ, ಅಚ್ಯುತ, ತಪೋರಾಶಿಯನ್ನು ಅವನ ಕರ್ಮಗಳನ್ನು ಪ್ರಶಿಂಸಿಸುತ್ತಾ ಭೇಟಿಯಾದರು.

03101014 ದೇವಾ ಊಚುಃ|

03101014a ನಹುಷೇಣಾಭಿತಪ್ತಾನಾಂ ತ್ವಂ ಲೋಕಾನಾಂ ಗತಿಃ ಪುರಾ|

03101014c ಭ್ರಂಶಿತಶ್ಚ ಸುರೈಶ್ವರ್ಯಾಲ್ಲೋಕಾರ್ಥಂ ಲೋಕಕಂಟಕಃ||

ದೇವತೆಗಳು ಹೇಳಿದರು: “ಹಿಂದೆ ನಹುಷನಡಿಯಲ್ಲಿ ಪರಿತಪ್ತ ಲೋಕಗಳಿಗೆ ನೀನೇ ಗತಿಯಾಗಿದ್ದೆ[1]. ಲೋಕಗಳ ಮೇಲೆ ಸುರರ ಅಧಿಪತ್ಯಕ್ಕಾಗಿ ಆ ಲೋಕಕಂಟಕನನ್ನು ಹೊರಹಾಕಿದ್ದೆ.

03101015a ಕ್ರೋಧಾತ್ಪ್ರವೃದ್ಧಃ ಸಹಸಾ ಭಾಸ್ಕರಸ್ಯ ನಗೋತ್ತಮಃ|

03101015c ವಚಸ್ತವಾನತಿಕ್ರಾಮನ್ವಿಂಧ್ಯಃ ಶೈಲೋ ನ ವರ್ಧತೇ||

ಭಾಸ್ಕರನ ಮೇಲಿನ ಕೋಪದಿಂದ ಪರ್ವತೋತ್ತಮ ವಿಂಧ್ಯವು ಒಂದೇಸಮನ ಬೆಳೆಯತೊಡಗಿದಾಗ ನಿನ್ನ ಮಾತನ್ನು ಮೀರಲಾಗದೇ ಆ ಶೈಲವು ಬೆಳೆಯುವುದನ್ನು ನಿಲ್ಲಿಸಿತು.

03101016a ತಮಸಾ ಚಾವೃತೇ ಲೋಕೇ ಮೃತ್ಯುನಾಭ್ಯರ್ದಿತಾಃ ಪ್ರಜಾಃ|

03101016c ತ್ವಾಮೇವ ನಾಥಮಾಸಾದ್ಯ ನಿರ್ವೃತಿಂ ಪರಮಾಂ ಗತಾಃ||

ಲೋಕವು ಕತ್ತಲೆಯಲ್ಲಿ ಮುಳುಗಿದಾಗ ಮತ್ತು ಪ್ರಜೆಗಳು ಮೃತ್ಯುವಿನ ಹಿಂಸೆಗೊಳಗಾಗಿದ್ದಾಗ ನೀನೇ ನಾಥನಾಗಿ ಅವರಿಗೆ ಬಿಡುಗಡೆ ನೀಡಿ ಪರಮ ಗತಿಯನ್ನು ಒದಗಿಸಿದೆ.

03101017a ಅಸ್ಮಾಕಂ ಭಯಭೀತಾನಾಂ ನಿತ್ಯಶೋ ಭಗವಾನ್ಗತಿಃ|

03101017c ತತಸ್ತ್ವಾರ್ತಾಃ ಪ್ರಯಾಚಾಮಸ್ತ್ವಾಂ ವರಂ ವರದೋ ಹ್ಯಸಿ||

ಭಗವನ್! ಭಯಭೀತರಾದ ನಮಗೆ ನಿತ್ಯವೂ ನೀನು ಗತಿಯಾಗಿದ್ದೀಯೆ. ಆದುದರಿಂದ, ವರದ! ಆರ್ತರಾದ ನಾವು ನಿನ್ನಲ್ಲಿ ವರವೊಂದನ್ನು ಕೇಳುತ್ತಿದ್ದೇವೆ.””

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ಏಕಾಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ನೂರಾಒಂದನೆಯ ಅಧ್ಯಾಯವು.

Related image

[1]ಅಗಸ್ತ್ಯನು ನಹುಷನಿಗೆ ಶಾಪವನ್ನಿತ್ತು ಇಂದ್ರಾಣಿಯನ್ನು ರಕ್ಷಿಸಿದ ಕಥೆಯು ಉದ್ಯೋಗಪರ್ವದಲ್ಲಿ ಬರುತ್ತದೆ.

Kannada translation of Tirthayatra Parva, by Chapter:
  1. ಪಾರ್ಥನಾರದಸಂವಾದ
  2. ಪುಲಸ್ತ್ಯತೀರ್ಥಯಾತ್ರಾ-೧
  3. ಪುಲಸ್ತ್ಯತೀರ್ಥಯಾತ್ರಾ-೨
  4. ಪುಲಸ್ತ್ಯತೀರ್ಥಯಾತ್ರಾ-೩
  5. ಧೌಮ್ಯತೀರ್ಥಯಾತ್ರಾ-೧
  6. ಧೌಮ್ಯತೀರ್ಥಯಾತ್ರಾ-೨
  7. ಧೌಮ್ಯತೀರ್ಥಯಾತ್ರಾ-೩
  8. ಧೌಮ್ಯತೀರ್ಥಯಾತ್ರಾ-೪
  9. ಧೌಮ್ಯತೀರ್ಥಯಾತ್ರಾ-೫
  10. ಲೋಮಶಸಂವಾದ-೧
  11. ಲೋಮಶಸಂವಾದ-೨
  12. ಲೋಮಶತೀರ್ಥಯಾತ್ರಾ
  13. ಲೋಮಶತೀರ್ಥಯಾತ್ರಾ
  14. ಲೋಮಶತೀರ್ಥಯಾತ್ರಾ
  15. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೧
  16. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೨
  17. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೩
  18. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೪
  19. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೫
  20. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೬
  21. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೭
  22. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೮
  23. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೯
  24. ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೧೦
  25. ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೧
  26. ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೨
  27. ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೩
  28. ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೪
  29. ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೫
  30. ಲೋಮಶತೀರ್ಥಯಾತ್ರಾ
  31. ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೧
  32. ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೨
  33. ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೩
  34. ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೪
  35. ಲೋಮಶತೀರ್ಥಯಾತ್ರಾ - ಮಹೇಂದ್ರಾಚಲಗಮನ
  36. ಲೋಮಶತೀರ್ಥಯಾತ್ರಾ – ಕಾರ್ತವೀರ್ಯೋಪಾಖ್ಯಾನ-೧
  37. ಲೋಮಶತೀರ್ಥಯಾತ್ರಾ – ಕಾರ್ತವೀರ್ಯೋಪಾಖ್ಯಾನ-೨
  38. ಲೋಮಶತೀರ್ಥಯಾತ್ರಾ – ಕಾರ್ತವೀರ್ಯೋಪಾಖ್ಯಾನ-೩
  39. ಲೋಮಶತೀರ್ಥಯಾತ್ರಾ – ಪ್ರಭಾಸೇಯಾದವಪಾಂಡವಸಮಾಗಮ-೧
  40. ಲೋಮಶತೀರ್ಥಯಾತ್ರಾ – ಪ್ರಭಾಸೇಯಾದವಪಾಂಡವಸಮಾಗಮ-೨
  41. ಲೋಮಶತೀರ್ಥಯಾತ್ರಾ – ಪ್ರಭಾಸೇಯಾದವಪಾಂಡವಸಮಾಗಮ-೩
  42. ಲೋಮಶತೀರ್ಥಯಾತ್ರಾ – ಸುಕನ್ಯಾ-೧
  43. ಲೋಮಶತೀರ್ಥಯಾತ್ರಾ – ಸುಕನ್ಯಾ-೨
  44. ಲೋಮಶತೀರ್ಥಯಾತ್ರಾ – ಸುಕನ್ಯಾ-೩
  45. ಲೋಮಶತೀರ್ಥಯಾತ್ರಾ – ಸುಕನ್ಯಾ-೪
  46. ಲೋಮಶತೀರ್ಥಯಾತ್ರಾ – ಸುಕನ್ಯಾ-೫
  47. ಲೋಮಶತೀರ್ಥಯಾತ್ರಾ – ಮಾಂಧಾತೋಪಾಖ್ಯಾನ
  48. ಲೋಮಶತೀರ್ಥಯಾತ್ರಾ – ಜಂತೂಪಾಖ್ಯಾನ-೧
  49. ಲೋಮಶತೀರ್ಥಯಾತ್ರಾ – ಜಂತೂಪಾಖ್ಯಾನ-೨
  50. ಲೋಮಶತೀರ್ಥಯಾತ್ರಾ
  51. ಲೋಮಶತೀರ್ಥಯಾತ್ರಾ-ಶ್ಯೇನಕಪೋತೀಯ-೧
  52. ಲೋಮಶತೀರ್ಥಯಾತ್ರಾ-ಶ್ಯೇನಕಪೋತೀಯ-೨
  53. ಲೋಮಶತೀರ್ಥಯಾತ್ರಾ-ಅಷ್ಟಾವಕ್ರೀಯ-೧
  54. ಲೋಮಶತೀರ್ಥಯಾತ್ರಾ-ಅಷ್ಟಾವಕ್ರೀಯ-೨
  55. ಲೋಮಶತೀರ್ಥಯಾತ್ರಾ-ಅಷ್ಟಾವಕ್ರೀಯ-೩
  56. ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೧
  57. ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೨
  58. ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೩
  59. ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೪
  60. ಲೋಮಶತೀರ್ಥಯಾತ್ರಾ-ಕೈಲಾಸಾದಿಗಿರಿಪ್ರವೇಶ
  61. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೧
  62. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೨
  63. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೩
  64. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೪
  65. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೫
  66. ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೬
  67. ಲೋಮಶತೀರ್ಥಯಾತ್ರಾ-ಭೀಮಕದಲೀಶಂಡಪ್ರವೇಶ
  68. ಲೋಮಶತೀರ್ಥಯಾತ್ರಾ-ಹನುಮದ್ಭೀಮಸಂವಾದ-೧
  69. ಲೋಮಶತೀರ್ಥಯಾತ್ರಾ-ಹನುಮದ್ಭೀಮಸಂವಾದ-೨
  70. ಲೋಮಶತೀರ್ಥಯಾತ್ರಾ-ಹನುಮದ್ಭೀಮಸಂವಾದ-೩
  71. ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೧
  72. ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೨
  73. ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೩
  74. ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೪

Comments are closed.