ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೧೦೦
ಕಾಲೇಯರು ಭೂಮಿಯಲ್ಲಿ ಬ್ರಾಹ್ಮಣರನ್ನು ನಾಶಗೊಳಿಸಿದುದು (೧-೧೫). ದೇವತೆಗಳು ನಾರಾಯಣನ ಮೊರೆಹೊಕ್ಕಿದುದು (೧೬-೨೪).
03100001 ಲೋಮಶ ಉವಾಚ|
03100001a ಸಮುದ್ರಂ ತೇ ಸಮಾಶ್ರಿತ್ಯ ವಾರುಣಂ ನಿಧಿಮಂಭಸಾಂ|
03100001c ಕಾಲೇಯಾಃ ಸಂಪ್ರವರ್ತಂತ ತ್ರೈಲೋಕ್ಯಸ್ಯ ವಿನಾಶನೇ||
ಲೋಮಶನು ಹೇಳಿದನು: “ವಾರುಣ ನಿಧಿಮಾಂಬುಸ ಸಮುದ್ರವನ್ನು ಆಶ್ರಯಿಸಿದ ಕಾಲೇಯರು ತ್ರೈಲೋಕ್ಯದ ವಿನಾಶನಕ್ಕೆ ತಯಾರಿ ನಡೆಸಿದರು.
03100002a ತೇ ರಾತ್ರೌ ಸಮಭಿಕ್ರುದ್ಧಾ ಭಕ್ಷಯಂತಿ ಸದಾ ಮುನೀನ್|
03100002c ಆಶ್ರಮೇಷು ಚ ಯೇ ಸಂತಿ ಪುನ್ಯೇಷ್ವಾಯತನೇಷು ಚ||
ಪ್ರತಿ ರಾತ್ರಿಯೂ ಆ ಕೃದ್ಧ ಅಸುರರು ಆಶ್ರಮಗಳಲ್ಲಿ ಮತ್ತು ಪುಣ್ಯಕ್ಷೇತ್ರಗಳಲ್ಲಿದ್ದ ಮುನಿಗಳನ್ನು ಭಕ್ಷಿಸಿದರು.
03100003a ವಸಿಷ್ಠಸ್ಯಾಶ್ರಮೇ ವಿಪ್ರಾ ಭಕ್ಷಿತಾಸ್ತೈರ್ದುರಾತ್ಮಭಿಃ|
03100003c ಅಶೀತಿಶತಮಷ್ಟೌ ಚ ನವ ಚಾನ್ಯೇ ತಪಸ್ವಿನಃ||
ವಸಿಷ್ಠನ ಆಶ್ರಮದಲ್ಲಿ ಆ ದುರಾತ್ಮರು ನೂರಾಎಂಟು ವಿಪ್ರರನ್ನೂ ಮತ್ತು ಇನ್ನೂ ಇತರ ಒಂಭತ್ತು ತಪಸ್ವಿಗಳನ್ನು ಭಕ್ಷಿಸಿದರು.
03100004a ಚ್ಯವನಸ್ಯಾಶ್ರಮಂ ಗತ್ವಾ ಪುಣ್ಯಂ ದ್ವಿಜನಿಷೇವಿತಂ|
03100004c ಫಲಮೂಲಾಶನಾನಾಂ ಹಿ ಮುನೀನಾಂ ಭಕ್ಷಿತಂ ಶತಂ||
ಪುಣ್ಯ ದ್ವಿಜನಿಷೇವಿತ ಚ್ಯವನಾಶ್ರಮಕ್ಕೆ ಹೋಗಿ ಫಲಮೂಲಗಳನ್ನೇ ಆಹಾರವಾಗಿಸಿಕೊಂಡಿದ್ದ ಒಂದು ನೂರು ಮುನಿಗಳನ್ನು ಭಕ್ಷಿಸಿದರು.
03100005a ಏವಂ ರಾತ್ರೌ ಸ್ಮ ಕುರ್ವಂತಿ ವಿವಿಶುಶ್ಚಾರ್ಣವಂ ದಿವಾ|
03100005c ಭರದ್ವಾಜಾಶ್ರಮೇ ಚೈವ ನಿಯತಾ ಬ್ರಹ್ಮಚಾರಿಣಃ||
03100005e ವಾಯ್ವಾಹಾರಾಂಬುಭಕ್ಷಾಶ್ಚ ವಿಂಶತಿಃ ಸಂನಿಪಾತಿತಾಃ||
ರಾತ್ರಿಯಸಮದಲ್ಲಿ ಹೀಗೆ ಮಾಡಿ ಹಗಲಿನಲ್ಲಿ ಸಮುದ್ರದಲ್ಲಿ ಅಡಗಿರುತ್ತಿದ್ದರು. ಭರದ್ವಾಜನ ಆಶ್ರಮದಲ್ಲಿ ನಿಯತರಾಗಿದ್ದ, ಕೇವಲ ಗಾಳಿ ಮತ್ತು ನೀರನ್ನು ಸೇವಿಸುತ್ತಿದ್ದ ಇಪ್ಪತ್ತು ಬ್ರಹ್ಮಚಾರಿಗಳನ್ನು ಕೊಂದು ಉರುಳಿಸಿದರು.
03100006a ಏವಂ ಕ್ರಮೇಣ ಸರ್ವಾಂಸ್ತಾನಾಶ್ರಮಾನ್ದಾನವಾಸ್ತದಾ|
03100006c ನಿಶಾಯಾಂ ಪರಿಧಾವಂತಿ ಮತ್ತಾ ಭುಜಬಲಾಶ್ರಯಾತ್||
03100006e ಕಾಲೋಪಸೃಷ್ಟಾಃ ಕಾಲೇಯಾ ಘ್ನಂತೋ ದ್ವಿಜಗಣಾನ್ಬಹೂನ್||
ಈ ರೀತಿ ಕ್ರಮೇಣವಾಗಿ ಕಾಲವೇ ಅವರನ್ನು ಸುತ್ತುವರೆಯುವವರೆಗೆ ಕಾಲೇಯ ದಾನವರು ತಮ್ಮ ಭುಜಬಲವನ್ನು ಆಶ್ರಯಿಸಿ ಮತ್ತರಾಗಿ ರಾತ್ರಿ ಎಲ್ಲ ಆಶ್ರಮಗಳನ್ನು ಆಕ್ರಮಣಿಸಿ ಬಹಳಷ್ಟು ದ್ವಿಜಗಣಗಳನ್ನು ಸಂಹರಿಸಿದರು.
03100007a ನ ಚೈನಾನನ್ವಬುಧ್ಯಂತ ಮನುಜಾ ಮನುಜೋತ್ತಮ|
03100007c ಏವಂ ಪ್ರವೃತ್ತಾನ್ದೈತ್ಯಾಂಸ್ತಾಂಸ್ತಾಪಸೇಷು ತಪಸ್ವಿಷು||
ಮನುಜೋತ್ತಮ! ಈ ರೀತಿ ತಾಪಸರನ್ನು ಪೀಡಿಸುತ್ತಿರುವವರು ದೈತ್ಯರು ಎಂದು ಮನುಷ್ಯರ್ಯಾರಿಗೂ ತಿಳಿದಿರಲಿಲ್ಲ.
03100008a ಪ್ರಭಾತೇ ಸಮದೃಶ್ಯಂತ ನಿಯತಾಹಾರಕರ್ಶಿತಾಃ|
03100008c ಮಹೀತಲಸ್ಥಾ ಮುನಯಃ ಶರೀರೈರ್ಗತಜೀವಿತೈಃ||
ಬೆಳಿಗ್ಗೆ ಸಮಯದಲ್ಲಿ ನಿಯತಾಹಾರಗಳಿಂದ ಕೃಶರಾಗಿದ್ದ ಮುನಿಗಳ ನಿರ್ಜೀವ ಶರೀರಗಳು ಭೂಮಿಯ ಮೇಲೆ ಬಿದ್ದಿರುವುದನ್ನು ನೋಡುತ್ತಿದ್ದರು.
03100009a ಕ್ಷೀಣಮಾಂಸೈರ್ವಿರುಧಿರೈರ್ವಿಮಜ್ಜಾಂತ್ರೈರ್ವಿಸಂಧಿಭಿಃ|
03100009c ಆಕೀರ್ಣೈರಾಚಿತಾ ಭೂಮಿಃ ಶಂಖಾನಾಮಿವ ರಾಶಿಭಿಃ||
ಕೃಶರಾದ, ಮಾಂಸ-ರಕ್ತ-ಮಜ್ಜಗಳಿಲ್ಲದ, ಕೈಕಾಲುಗಳನ್ನು ತುಂಡರಿಸಿದ, ಅಕೀರ್ಣ ಶಂಖಗಳ ರಾಶಿಯಂತಿದ್ದ ಹೆಣಗಳ ರಾಶಿಗಳಿಂದ ಭೂಮಿಯು ತುಂಬಿ ಕೊಂಡಿತು.
03100010a ಕಲಶೈರ್ವಿಪ್ರವಿದ್ಧೈಶ್ಚ ಸ್ರುವೈರ್ಭಗ್ನೈಸ್ತಥೈವ ಚ|
03100010c ವಿಕೀರ್ಣೈರಗ್ನಿಹೋತ್ರೈಶ್ಚ ಭೂರ್ಬಭೂವ ಸಮಾವೃತಾ||
ವಿಪ್ರವಿದರ ಒಡೆದ ಕಲಶಗಳ ಚೂರುಗಳಿಂದ ಮತ್ತು ಅಗ್ನಿಹೋತ್ರಗಳ ತುಂಡುಗಳಿಂದ ಭೂಮಿಯು ತುಂಬಿಕೊಂಡಿತು.
03100011a ನಿಃಸ್ವಾಧ್ಯಾಯವಷಟ್ಕಾರಂ ನಷ್ಟಯಜ್ಞೋತ್ಸವಕ್ರಿಯಂ|
03100011c ಜಗದಾಸೀನ್ನಿರುತ್ಸಾಹಂ ಕಾಲೇಯಭಯಪೀಡಿತಂ||
ಸ್ವಾಧ್ಯಾಯ, ವಷಟ್ಕಾರಗಳು ನಿಂತು, ಯಜ್ಞವೇ ಮೊದಲಾದ ಉತ್ಸವ ಕ್ರಿಯೆಗಳು ನಿಂತು ಕಾಲೇಯರ ಭಯಪೀಡಿತವಾದ ಜಗತ್ತು ಉತ್ಸಾಹವನ್ನೇ ಕಳೆದುಕೊಂಡಿತು.
03100012a ಏವಂ ಪ್ರಕ್ಷೀಯಮಾಣಾಶ್ಚ ಮಾನವಾ ಮನುಜೇಶ್ವರ|
03100012c ಆತ್ಮತ್ರಾಣಪರಾ ಭೀತಾಃ ಪ್ರಾದ್ರವಂತ ದಿಶೋ ಭಯಾತ್||
ಮನುಜೇಶ್ವರ! ಈ ರೀತಿ ಮಾನವರು ಕುಂದುತ್ತಿರಲು ತಮ್ಮನ್ನು ರಕ್ಷಿಸಿಕೊಳ್ಳಲು ಭಯಭೀತರಾಗಿ ದಿಕ್ಕುದಿಕ್ಕುಗಳಿಗೆ ಓಡಿದರು.
03100013a ಕೇ ಚಿದ್ಗುಹಾಃ ಪ್ರವಿವಿಶುರ್ನಿರ್ಝರಾಂಶ್ಚಾಪರೇ ಶ್ರಿತಾಃ|
03100013c ಅಪರೇ ಮರಣೋದ್ವಿಗ್ನಾ ಭಯಾತ್ಪ್ರಾಣಾನ್ಸಮುತ್ಸೃಜನ್||
ಕೆಲವರು ಗುಹೆಗಳಲ್ಲಿ ಅಡಗಿಕೊಂಡರೆ, ಇತರರು ಜಲಪಾತಗಳ ಹಿಂದೆ ಅಡಗಿಕೊಂಡರು. ಇನ್ನು ಕೆಲವರು ಸಾವಿಗೆ ಎಷ್ಟು ಹೆದರಿದರೆಂದರೆ ಭಯವೇ ಅವರನ್ನು ಸಾಯಿಸಿತು.
03100014a ಕೇ ಚಿದತ್ರ ಮಹೇಷ್ವಾಸಾಃ ಶೂರಾಃ ಪರಮದರ್ಪಿತಾಃ|
03100014c ಮಾರ್ಗಮಾಣಾಃ ಪರಂ ಯತ್ನಂ ದಾನವಾನಾಂ ಪ್ರಚಕ್ರಿರೇ||
03100015a ನ ಚೈತಾನಧಿಜಗ್ಮುಸ್ತೇ ಸಮುದ್ರಂ ಸಮುಪಾಶ್ರಿತಾನ್|
03100015c ಶ್ರಮಂ ಜಗ್ಮುಶ್ಚ ಪರಮಮಾಜಗ್ಮುಃ ಕ್ಷಯಮೇವ ಚ||
ಅಲ್ಲಿದ್ದ ಕೆಲವು ಮಹಾದರ್ಪಿತ ಮಹೇಷ್ವಾಸ ಶೂರರು ದಾನವರನ್ನು ಬೇಟೆಯಾಡಲು ಪರಮ ಯತ್ನವನ್ನು ಮಾಡಿದರು. ಆದರೆ ಆ ದಾನವರು ಸಮದ್ರದಲ್ಲಿ ಅಡಗಿ ಕೊಂಡಿದ್ದುದರಿಂದ ಅವರನ್ನು ಕಾಣದೇ ಅವರ ಪ್ರಯತ್ನದಲ್ಲಿಯೇ ಸೋತು ಮರಣ ಹೊಂದಿದರು.
03100016a ಜಗತ್ಯುಪಶಮಂ ಯಾತೇ ನಷ್ಟಯಜ್ಞೋತ್ಸವಕ್ರಿಯೇ|
03100016c ಆಜಗ್ಮುಃ ಪರಮಾಮಾರ್ತಿಂ ತ್ರಿದಶಾ ಮನುಜೇಶ್ವರ||
ಮನುಜೇಶ್ವರ! ಯಜ್ಞೋತ್ಸವಗಳು ನಿಂತು ಜಗತ್ತೇ ನಾಶದ ಅಂಚಿನಲ್ಲಿರಲು ದೇವತೆಗಳು ಅತೀವ ಚಿಂತೆಗೊಳಗಾದರು.
03100017a ಸಮೇತ್ಯ ಸಮಹೇಂದ್ರಾಶ್ಚ ಭಯಾನ್ಮಂತ್ರಂ ಪ್ರಚಕ್ರಿರೇ|
03100017c ನಾರಾಯಣಂ ಪುರಸ್ಕೃತ್ಯ ವೈಕುಂಠಮಪರಾಜಿತಂ||
ಭಯದಿಂದ ಇಂದ್ರನೊಡನೆ ಸೇರಿ ಮಂತ್ರಾಲೋಚನೆ ಮಾಡಿ, ಅಪರಾಜಿತ ವೈಕುಂಠ ನಾರಾಯಣನಲ್ಲಿಗೆ ಬಂದರು.
03100018a ತತೋ ದೇವಾಃ ಸಮೇತಾಸ್ತೇ ತದೋಚುರ್ಮಧುಸೂದನಂ|
03100018c ತ್ವಂ ನಃ ಸ್ರಷ್ಟಾ ಚ ಪಾತಾ ಚ ಭರ್ತಾ ಚ ಜಗತಃ ಪ್ರಭೋ||
03100018e ತ್ವಯಾ ಸೃಷ್ಟಮಿದಂ ಸರ್ವಂ ಯಚ್ಚೇಂಗಂ ಯಚ್ಚ ನೇಂಗತಿ||
ಅಲ್ಲಿ ಸೇರಿದ್ದ ದೇವತೆಗಳು ಮಧುಸೂದನನಿಗೆ ಹೇಳಿದರು: “ನೀನೇ ನಮ್ಮ ಸೃಷ್ಟ, ನಮ್ಮ ಪಾಲಕ, ನಮ್ಮ ಒಡೆಯ, ಮತ್ತು ಜಗತ್ತಿನ ಪ್ರಭು! ಹಂದಾಡುವ ಮತ್ತು ಹಂದಾಡದೇ ಇರುವ ಎಲ್ಲವನ್ನೂ ನೀನೇ ಸೃಷ್ಟಿಸಿದೆ.
03100019a ತ್ವಯಾ ಭೂಮಿಃ ಪುರಾ ನಷ್ಟಾ ಸಮುದ್ರಾತ್ಪುಷ್ಕರೇಕ್ಷಣ|
03100019c ವಾರಾಹಂ ರೂಪಮಾಸ್ಥಾಯ ಜಗದರ್ಥೇ ಸಮುದ್ಧೃತಾ||
ಪುಷ್ಕರೇಕ್ಷಣ! ಹಿಂದೆ ಭೂಮಿಯು ಸಮುದ್ರದಲ್ಲಿ ನಷ್ಟವಾದಾಗ ಜಗತ್ತಿಗಾಗಿ ನೀನು ವರಾಹದ ರೂಪವನ್ನು ತಾಳಿ ಸಮದ್ರದಿಂದ ಮೇಲ್ತಂದೆ!
03100020a ಆದಿದೈತ್ಯೋ ಮಹಾವೀರ್ಯೋ ಹಿರಣ್ಯಕಶಿಪುಸ್ತ್ವಯಾ|
03100020c ನಾರಸಿಂಹಂ ವಪುಃ ಕೃತ್ವಾ ಸೂದಿತಃ ಪುರುಷೋತ್ತಮ||
ಪುರುಷೋತ್ತಮ! ಮಹಾವೀರ್ಯ ಆದಿದೈತ್ಯ ಹಿರಣ್ಯಕಶಿಪುವನ್ನು ನಾರಸಿಂಹನ ದೇಹತಾಳಿ ಸಂಹರಿಸಿದೆ.
03100021a ಅವಧ್ಯಃ ಸರ್ವಭೂತಾನಾಂ ಬಲಿಶ್ಚಾಪಿ ಮಹಾಸುರಃ|
03100021c ವಾಮನಂ ವಪುರಾಶ್ರಿತ್ಯ ತ್ರೈಲೋಕ್ಯಾದ್ಭ್ರಂಶಿತಸ್ತ್ವಯಾ||
ಸರ್ವಭೂತಗಳಿಂದಲೂ ಅವಧ್ಯನಾಗಿದ್ದ ಮಹಾಸುರ ಬಲಿಯನ್ನೂ ಕೂಡ ನೀನು ವಾಮನನ ರೂಪಧರಿಸಿ ಮೂರೂ ಲೋಕಗಳಿಂದ ಹೊರಹಾಕಿದೆ.
03100022a ಅಸುರಶ್ಚ ಮಹೇಷ್ವಾಸೋ ಜಂಭ ಇತ್ಯಭಿವಿಶ್ರುತಃ|
03100022c ಯಜ್ಞಕ್ಷೋಭಕರಃ ಕ್ರೂರಸ್ತ್ವಯೈವ ವಿನಿಪಾತಿತಃ||
ಯಜ್ಞಗಳನ್ನು ಧ್ವಂಸಮಾಡುತ್ತಿದ್ದ ಜಂಭ ಎನ್ನುವ ಮಹೇಷ್ವಾಸ ಕ್ರೂರ ಅಸುರನು ನಿನ್ನಿಂದಲೇ ಕೆಳಗುರಿಳಿದನು.
03100023a ಏವಮಾದೀನಿ ಕರ್ಮಾಣಿ ಯೇಷಾಂ ಸಂಖ್ಯಾ ನ ವಿದ್ಯತೇ|
03100023c ಅಸ್ಮಾಕಂ ಭಯಭೀತಾನಾಂ ತ್ವಂ ಗತಿರ್ಮಧುಸೂದನ||
ಮಧುಸೂದನ! ಭಯಭೀತರಾದ ನಮಗೆ ಗತಿಯಾದ ನೀನು ಇವೇ ಮೊದಲಾಗಿ ಸಂಖ್ಯೆಯೇ ಸಿಗದಷ್ಟು ಕಾರ್ಯಗಳನ್ನು ಮಾಡಿದ್ದೀಯೆ!
03100024a ತಸ್ಮಾತ್ತ್ವಾಂ ದೇವ ದೇವೇಶ ಲೋಕಾರ್ಥಂ ಜ್ಞಾಪಯಾಮಹೇ|
03100024c ರಕ್ಷ ಲೋಕಾಂಶ್ಚ ದೇವಾಂಶ್ಚ ಶಕ್ರಂ ಚ ಮಹತೋ ಭಯಾತ್||
ದೇವದೇವೇಶ! ಆದುದರಿಂದಲೇ ಲೋಕಾರ್ಥವಾಗಿ ನಾವು ನಿನ್ನಲ್ಲಿ ಬೇಡಿಕೊಳ್ಳುತ್ತಿದ್ದೇವೆ. ಲೋಕಗಳನ್ನೂ, ದೇವತೆಗಳನ್ನು ಮತ್ತು ಇಂದ್ರನನ್ನು ಈ ಮಹಾಭಯದಿಂದ ರಕ್ಷಿಸು!”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ನೂರನೆಯ ಅಧ್ಯಾಯವು.
Kannada translation of Tirthayatra Parva, by Chapter:
- ಪಾರ್ಥನಾರದಸಂವಾದ
- ಪುಲಸ್ತ್ಯತೀರ್ಥಯಾತ್ರಾ-೧
- ಪುಲಸ್ತ್ಯತೀರ್ಥಯಾತ್ರಾ-೨
- ಪುಲಸ್ತ್ಯತೀರ್ಥಯಾತ್ರಾ-೩
- ಧೌಮ್ಯತೀರ್ಥಯಾತ್ರಾ-೧
- ಧೌಮ್ಯತೀರ್ಥಯಾತ್ರಾ-೨
- ಧೌಮ್ಯತೀರ್ಥಯಾತ್ರಾ-೩
- ಧೌಮ್ಯತೀರ್ಥಯಾತ್ರಾ-೪
- ಧೌಮ್ಯತೀರ್ಥಯಾತ್ರಾ-೫
- ಲೋಮಶಸಂವಾದ-೧
- ಲೋಮಶಸಂವಾದ-೨
- ಲೋಮಶತೀರ್ಥಯಾತ್ರಾ
- ಲೋಮಶತೀರ್ಥಯಾತ್ರಾ
- ಲೋಮಶತೀರ್ಥಯಾತ್ರಾ
- ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೧
- ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೨
- ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೩
- ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೪
- ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೫
- ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೬
- ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೭
- ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೮
- ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೯
- ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೧೦
- ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೧
- ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೨
- ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೩
- ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೪
- ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೫
- ಲೋಮಶತೀರ್ಥಯಾತ್ರಾ
- ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೧
- ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೨
- ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೩
- ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೪
- ಲೋಮಶತೀರ್ಥಯಾತ್ರಾ - ಮಹೇಂದ್ರಾಚಲಗಮನ
- ಲೋಮಶತೀರ್ಥಯಾತ್ರಾ – ಕಾರ್ತವೀರ್ಯೋಪಾಖ್ಯಾನ-೧
- ಲೋಮಶತೀರ್ಥಯಾತ್ರಾ – ಕಾರ್ತವೀರ್ಯೋಪಾಖ್ಯಾನ-೨
- ಲೋಮಶತೀರ್ಥಯಾತ್ರಾ – ಕಾರ್ತವೀರ್ಯೋಪಾಖ್ಯಾನ-೩
- ಲೋಮಶತೀರ್ಥಯಾತ್ರಾ – ಪ್ರಭಾಸೇಯಾದವಪಾಂಡವಸಮಾಗಮ-೧
- ಲೋಮಶತೀರ್ಥಯಾತ್ರಾ – ಪ್ರಭಾಸೇಯಾದವಪಾಂಡವಸಮಾಗಮ-೨
- ಲೋಮಶತೀರ್ಥಯಾತ್ರಾ – ಪ್ರಭಾಸೇಯಾದವಪಾಂಡವಸಮಾಗಮ-೩
- ಲೋಮಶತೀರ್ಥಯಾತ್ರಾ – ಸುಕನ್ಯಾ-೧
- ಲೋಮಶತೀರ್ಥಯಾತ್ರಾ – ಸುಕನ್ಯಾ-೨
- ಲೋಮಶತೀರ್ಥಯಾತ್ರಾ – ಸುಕನ್ಯಾ-೩
- ಲೋಮಶತೀರ್ಥಯಾತ್ರಾ – ಸುಕನ್ಯಾ-೪
- ಲೋಮಶತೀರ್ಥಯಾತ್ರಾ – ಸುಕನ್ಯಾ-೫
- ಲೋಮಶತೀರ್ಥಯಾತ್ರಾ – ಮಾಂಧಾತೋಪಾಖ್ಯಾನ
- ಲೋಮಶತೀರ್ಥಯಾತ್ರಾ – ಜಂತೂಪಾಖ್ಯಾನ-೧
- ಲೋಮಶತೀರ್ಥಯಾತ್ರಾ – ಜಂತೂಪಾಖ್ಯಾನ-೨
- ಲೋಮಶತೀರ್ಥಯಾತ್ರಾ
- ಲೋಮಶತೀರ್ಥಯಾತ್ರಾ-ಶ್ಯೇನಕಪೋತೀಯ-೧
- ಲೋಮಶತೀರ್ಥಯಾತ್ರಾ-ಶ್ಯೇನಕಪೋತೀಯ-೨
- ಲೋಮಶತೀರ್ಥಯಾತ್ರಾ-ಅಷ್ಟಾವಕ್ರೀಯ-೧
- ಲೋಮಶತೀರ್ಥಯಾತ್ರಾ-ಅಷ್ಟಾವಕ್ರೀಯ-೨
- ಲೋಮಶತೀರ್ಥಯಾತ್ರಾ-ಅಷ್ಟಾವಕ್ರೀಯ-೩
- ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೧
- ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೨
- ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೩
- ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೪
- ಲೋಮಶತೀರ್ಥಯಾತ್ರಾ-ಕೈಲಾಸಾದಿಗಿರಿಪ್ರವೇಶ
- ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೧
- ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೨
- ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೩
- ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೪
- ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೫
- ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೬
- ಲೋಮಶತೀರ್ಥಯಾತ್ರಾ-ಭೀಮಕದಲೀಶಂಡಪ್ರವೇಶ
- ಲೋಮಶತೀರ್ಥಯಾತ್ರಾ-ಹನುಮದ್ಭೀಮಸಂವಾದ-೧
- ಲೋಮಶತೀರ್ಥಯಾತ್ರಾ-ಹನುಮದ್ಭೀಮಸಂವಾದ-೨
- ಲೋಮಶತೀರ್ಥಯಾತ್ರಾ-ಹನುಮದ್ಭೀಮಸಂವಾದ-೩
- ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೧
- ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೨
- ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೩
- ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೪