ಅನುಶಾಸನ ಪರ್ವ: ದಾನಧರ್ಮ ಪರ್ವ
೮೭
ಶ್ರಾದ್ಧಕಲ್ಪ
13087001 ಯುಧಿಷ್ಠಿರ ಉವಾಚ|
13087001a ಚಾತುರ್ವರ್ಣ್ಯಸ್ಯ ಧರ್ಮಾತ್ಮನ್ಧರ್ಮಃ ಪ್ರೋಕ್ತಸ್ತ್ವಯಾನಘ|
13087001c ತಥೈವ ಮೇ ಶ್ರಾದ್ಧವಿಧಿಂ ಕೃತ್ಸ್ನಂ ಪ್ರಬ್ರೂಹಿ ಪಾರ್ಥಿವ||
ಯುಧಿಷ್ಠಿರನು ಹೇಳಿದನು: “ಅನಘ! ಧರ್ಮಾತ್ಮನ್! ಚಾತುರ್ವಣಗಳ ಧರ್ಮವನ್ನು ನೀನು ಹೇಳಿದ್ದೀಯೆ. ಹಾಗೆಯೇ ಶ್ರಾದ್ದವಿಧಿಯ ಕುರಿತೂ ಸಂಪೂರ್ಣವಾಗಿ ಹೇಳು.”
13087002 ವೈಶಂಪಾಯನ ಉವಾಚ|
13087002a ಯುಧಿಷ್ಠಿರೇಣೈವಮುಕ್ತೋ ಭೀಷ್ಮಃ ಶಾಂತನವಸ್ತದಾ|
13087002c ಇಮಂ ಶ್ರಾದ್ಧವಿಧಿಂ ಕೃತ್ಸ್ನಂ ಪ್ರವಕ್ತುಮುಪಚಕ್ರಮೇ||
ವೈಶಂಪಾಯನನು ಹೇಳಿದನು: “ಯುಧಿಷ್ಠಿರನು ಹೀಗೆ ಹೇಳಲು ಭೀಷ್ಮ ಶಾಂತನವನು ಈ ಶ್ರಾದ್ಧವಿಧಿಯ ಸಕಲವನ್ನೂ ಹೇಳಲು ಪ್ರಾರಂಭಿಸಿದನು.
13087003 ಭೀಷ್ಮ ಉವಾಚ|
13087003a ಶೃಣುಷ್ವಾವಹಿತೋ ರಾಜನ್ ಶ್ರಾದ್ಧಕಲ್ಪಮಿಮಂ ಶುಭಮ್|
13087003c ಧನ್ಯಂ ಯಶಸ್ಯಂ ಪುತ್ರೀಯಂ ಪಿತೃಯಜ್ಞಂ ಪರಂತಪ||
ಭೀಷ್ಮನು ಹೇಳೀದನು: “ರಾಜನ್! ಪರಂತಪ! ಶುಭವಾದ, ಧನ್ಯಗೊಳಿಸುವ, ಯಶಸ್ಸನ್ನೂ ಪುತ್ರರನ್ನೂ ನೀಡುವ ಶ್ರಾದ್ಧಕಲ್ಪವೆಂಬ ಈ ಪಿತೃಯಜ್ಞದ ಕುರಿತು ಏಕಾಗ್ರಚಿತ್ತನಾಗಿ ಕೇಳು.
13087004a ದೇವಾಸುರಮನುಷ್ಯಾಣಾಂ ಗಂಧರ್ವೋರಗರಕ್ಷಸಾಮ್|
13087004c ಪಿಶಾಚಕಿಂನರಾಣಾಂ ಚ ಪೂಜ್ಯಾ ವೈ ಪಿತರಃ ಸದಾ||
ದೇವಾಸುರಮನುಷರಿಗೆ ಗಂಧರ್ವೋರಗರಾಕ್ಷಸರಿಗೆ ಮತ್ತು ಪಿಶಾಚಕಿನ್ನರರಿಗೆ ಪಿತೃಗಳು ಸದಾ ಪೂಜ್ಯರೇ.
13087005a ಪಿತೄನ್ಪೂಜ್ಯಾದಿತಃ ಪಶ್ಚಾದ್ದೇವಾನ್ಸಂತರ್ಪಯಂತಿ ವೈ|
13087005c ತಸ್ಮಾತ್ಸರ್ವಪ್ರಯತ್ನೇನ ಪುರುಷಃ ಪೂಜಯೇತ್ಸದಾ||
ಮೊದಲು ಪಿತೃಗಳನ್ನು ಪೂಜಿಸಿ ನಂತರ ದೇವತೆಗಳನ್ನು ತೃಪ್ತಿಪಡಿಸುತ್ತ್ತಾರೆ. ಆದುದರಿಂದ ಪುರುಷನು ಇವರನ್ನು ಸರ್ವಪ್ರಯತ್ನದಿಂದ ಸದಾ ಪೂಜಿಸಬೇಕು.
13087006a ಅನ್ವಾಹಾರ್ಯಂ ಮಹಾರಾಜ ಪಿತೄಣಾಂ ಶ್ರಾದ್ಧಮುಚ್ಯತೇ|
13087006c ತಚ್ಚಾಮಿಷೇಣ[1] ವಿಧಿನಾ ವಿಧಿಃ ಪ್ರಥಮಕಲ್ಪಿತಃ||
ಮಹಾರಾಜ! ಪಿತೃಗಳ ಶ್ರಾದ್ಧವನ್ನು ಅನ್ವಾಹಾರ್ಯ[2] ಎಂದು ಹೇಳುತ್ತಾರೆ. ವಿಧಿವತ್ತಾಗಿ ಆಮಿಷ[3]ಗಳಿಂದ ಈ ವಿಧಿಯನ್ನು ಮೊದಲು ಮಾಡುವ ಸಂಪ್ರದಾಯವಿದೆ.
13087007a ಸರ್ವೇಷ್ವಹಃಸು ಪ್ರೀಯಂತೇ ಕೃತೈಃ ಶ್ರಾದ್ಧೈಃ ಪಿತಾಮಹಾಃ|
13087007c ಪ್ರವಕ್ಷ್ಯಾಮಿ ತು ತೇ ಸರ್ವಾಂಸ್ತಿಥ್ಯಾಂ ತಿಥ್ಯಾಂ ಗುಣಾಗುಣಾನ್||
ಪ್ರತಿನಿತ್ಯಮಾಡುವ ಶ್ರಾದ್ಧಗಳಿಂದ ಪಿತಾಮಹರು ತೃಪ್ತರಾಗುತ್ತಾರೆ. ಎಲ್ಲ ತಿಥಿಗಳನ್ನೂ ಮತ್ತು ಆಯಾತಿಥಿಗಳ ಗುಣಾಗುಣಗಳನ್ನು ಹೇಳುತ್ತೇನೆ.
13087008a ಯೇಷ್ವಹಃಸು ಕೃತೈಃ ಶ್ರಾದ್ಧೈರ್ಯತ್ಫಲಂ ಪ್ರಾಪ್ಯತೇಽನಘ|
13087008c ತತ್ಸರ್ವಂ ಕೀರ್ತಯಿಷ್ಯಾಮಿ ಯಥಾವತ್ತನ್ನಿಬೋಧ ಮೇ||
ಅನಘ! ಯಾವ ತಿಥಿಯಲ್ಲಿ ಮಾಡಿದ ಶ್ರಾದ್ಧವು ಯಾವ ಫಲವನ್ನು ಕೊಡುತ್ತದೆ ಎನ್ನುವುದೆಲ್ಲವನ್ನೂ ಯಥಾವತ್ತಾಗಿ ಹೇಳುತ್ತೇನೆ. ಕೇಳು.
13087009a ಪಿತೄನರ್ಚ್ಯ ಪ್ರತಿಪದಿ ಪ್ರಾಪ್ನುಯಾತ್ ಸ್ವಗೃಹೇ ಸ್ತ್ರಿಯಃ|
13087009c ಅಭಿರೂಪಪ್ರಜಾಯಿನ್ಯೋ ದರ್ಶನೀಯಾ ಬಹುಪ್ರಜಾಃ||
ಪಾಡ್ಯ ಪ್ರತಿಪದಿಯಲ್ಲಿ ಸ್ವಗೃಹದಲ್ಲಿ ಶ್ರಾದ್ಧಮಾಡಿದರೆ ತನ್ನಂತೆಯೇ ಇರುವ ಬಹುಸಂತಾನವುಳ್ಳ ಸುಂದರ ಸ್ತ್ರೀಯನ್ನು ಪಡೆದುಕೊಳ್ಳುತ್ತಾನೆ.
13087010a ಸ್ತ್ರಿಯೋ ದ್ವಿತೀಯಾಂ ಜಾಯಂತೇ ತೃತೀಯಾಯಾಂ ತು ವಂದಿನಃ|
13087010c ಚತುರ್ಥ್ಯಾಂ ಕ್ಷುದ್ರಪಶವೋ ಭವಂತಿ ಬಹವೋ ಗೃಹೇ||
ದ್ವಿತೀಯ ಬಿದಿಗೆಯಲ್ಲಿ ಶ್ರಾದ್ಧಮಾಡಿದರೆ ಹೆಣ್ಣುಮಕ್ಕಳು ಹುಟ್ಟುತ್ತಾರೆ. ತದಿಗೆಯ ದಿವಸ ಮಾಡಿದರೆ ಮನೆಯಲ್ಲಿ ಅಶ್ವಸಮೃದ್ಧಿಯಾಗುತ್ತದೆ. ಚತುರ್ಥಿಯ ದಿವಸ ಮಾಡಿದರೆ ಸಣ್ಣ-ಸಣ್ಣ ಪ್ರಾಣಿಗಳ ಸಮೃದ್ಧಿಯಾಗುತ್ತದೆ.
13087011a ಪಂಚಮ್ಯಾಂ ಬಹವಃ ಪುತ್ರಾ ಜಾಯಂತೇ ಕುರ್ವತಾಂ ನೃಪ|
13087011c ಕುರ್ವಾಣಾಸ್ತು ನರಾಃ ಷಷ್ಠ್ಯಾಂ ಭವಂತಿ ದ್ಯುತಿಭಾಗಿನಃ||
ನೃಪ! ಪಂಚಮಿಯಂದು ಮಾಡಿದರೆ ಬಹುಪುತ್ರರು ಜನಿಸುತ್ತಾರೆ. ಷಷ್ಠಿಯಲ್ಲಿ ಮಾಡುವ ನರರು ಕಾಂತಿಯುತರಾಗುತ್ತಾರೆ.
13087012a ಕೃಷಿಭಾಗೀ ಭವೇಚ್ಚ್ರಾದ್ಧಂ ಕುರ್ವಾಣಃ ಸಪ್ತಮೀಂ ನೃಪ|
13087012c ಅಷ್ಟಮ್ಯಾಂ ತು ಪ್ರಕುರ್ವಾಣೋ ವಾಣಿಜ್ಯೇ ಲಾಭಮಾಪ್ನುಯಾತ್||
ನೃಪ! ಸಪ್ತಮಿಯಂದು ಶ್ರಾದ್ಧವನ್ನು ಮಾಡುವವನು ಕೃಷಿಭಾಗಿ[4]ಯಾಗುತ್ತಾನೆ. ಅಷ್ಟಮಿಯಂದು ಮಾಡುವವನು ವಾಣಿಜ್ಯದಲ್ಲಿ ಲಾಭವನ್ನು ಪಡೆದುಕೊಳ್ಳುತ್ತಾನೆ.
13087013a ನವಮ್ಯಾಂ ಕುರ್ವತಃ ಶ್ರಾದ್ಧಂ ಭವತ್ಯೇಕಶಫಂ ಬಹು|
13087013c ವಿವರ್ಧಂತೇ ತು ದಶಮೀಂ ಗಾವಃ ಶ್ರಾದ್ಧಾನಿ ಕುರ್ವತಃ||
ನವಮಿಯಲ್ಲಿ ಶ್ರಾದ್ಧವನ್ನು ಮಾಡುವವನ ಏಕಶಫ[5]ಗಳು ಅನೇಕವಾಗುತ್ತವೆ.
13087014a ಕುಪ್ಯಭಾಗೀ ಭವೇನ್ಮರ್ತ್ಯಃ ಕುರ್ವನ್ನೇಕಾದಶೀಂ ನೃಪ|
13087014c ಬ್ರಹ್ಮವರ್ಚಸ್ವಿನಃ ಪುತ್ರಾ ಜಾಯಂತೇ ತಸ್ಯ ವೇಶ್ಮನಿ||
ನೃಪ! ಏಕಾದಶಿಯಲ್ಲಿ ಶ್ರಾದ್ಧವನ್ನು ಮಾಡುವ ಮನುಷ್ಯನು ಕುಪ್ಯಭಾಗಿ[6]ಯಾಗುತ್ತಾನೆ. ಅವನ ಮನೆಯಲ್ಲಿ ಬ್ರಹ್ಮವರ್ಚಸ್ವೀ ಪುತ್ರರು ಹುಟ್ಟುತ್ತಾರೆ.
13087015a ದ್ವಾದಶ್ಯಾಮೀಹಮಾನಸ್ಯ ನಿತ್ಯಮೇವ ಪ್ರದೃಶ್ಯತೇ|
13087015c ರಜತಂ ಬಹು ಚಿತ್ರಂ ಚ ಸುವರ್ಣಂ ಚ ಮನೋರಮಮ್||
ದ್ವಾದಶಿಯಲ್ಲಿ ಶ್ರಾದ್ಧಮಾಡುವವನಿಗೆ ನಿತ್ಯವೂ ಅನೇಕ ಬೆಳ್ಳಿಯ ಮತ್ತು ಚಿನ್ನಗಳು ಮನೋಹರ ಚಿತ್ರಗಳು ನೋಡದೊರೆಯುತ್ತವೆ.
13087016a ಜ್ಞಾತೀನಾಂ ತು ಭವೇಚ್ಚ್ರೇಷ್ಠಃ ಕುರ್ವನ್ ಶ್ರಾದ್ಧಂ ತ್ರಯೋದಶೀಮ್|
ತ್ರಯೋದಶಿಯಲ್ಲಿ ಶ್ರಾದ್ಧವನ್ನು ಮಾಡಿ ಜ್ಞಾತಿಬಾಂಧವರಲ್ಲಿ ಶ್ರೇಷ್ಠನಾಗಬಹುದು.
13087016c ಅವಶ್ಯಂ ತು ಯುವಾನೋಽಸ್ಯ ಪ್ರಮೀಯಂತೇ ನರಾ ಗೃಹೇ||
13087017a ಯುದ್ಧಭಾಗೀ ಭವೇನ್ಮರ್ತ್ಯಃ ಶ್ರಾದ್ಧಂ ಕುರ್ವಂಶ್ಚತುರ್ದಶೀಮ್|
ಆದರೆ ಚತುರ್ದಶಿಯಲ್ಲಿ ಶ್ರಾದ್ಧವನ್ನು ಮಾಡುವ ಮನುಷ್ಯನು ಯುದ್ಧಭಾಗಿ[7]ಯಾಗುತ್ತಾನೆ ಮತ್ತು ಅವನ ಮನೆಯಲ್ಲಿ ಯುವಕರು ಅವಶ್ಯವಾಗಿ ಸಾಯುತ್ತಾರೆ.
13087017c ಅಮಾವಾಸ್ಯಾಂ ತು ನಿವಪನ್ಸರ್ವಾನ್ಕಾಮಾನವಾಪ್ನುಯಾತ್||
ಅವಾವಾಸ್ಯೆಯಂದು ಮಾಡಿದರಂತೂ ಯಜಮಾನನು ಸರ್ವಕಾಮನೆಗಳನ್ನೂ ಪಡೆದುಕೊಳ್ಳುತ್ತಾನೆ.
13087018a ಕೃಷ್ಣಪಕ್ಷೇ ದಶಮ್ಯಾದೌ ವರ್ಜಯಿತ್ವಾ ಚತುರ್ದಶೀಮ್|
13087018c ಶ್ರಾದ್ಧಕರ್ಮಣಿ ತಿಥ್ಯಃ ಸ್ಯುಃ ಪ್ರಶಸ್ತಾ ನ ತಥೇತರಾಃ||
ಕೃಷ್ಣಪಕ್ಷದಲ್ಲಿ ಚತುರ್ದಶಿಯನ್ನು ಬಿಟ್ಟು ದಶಮಿಯಿಂದ ಅಮವಾಸ್ಯೆಯವರೆಗಿನ ತಿಥಿ ಶ್ರಾದ್ಧಗಳು ಬಹಳ ಪ್ರಶಸ್ತವಾಗಿವೆ. ಇತರ ತಿಥಿಶ್ರಾದ್ಧಗಳು[8] ಅಷ್ಟೊಂದು ಪ್ರಶಸ್ತವಲ್ಲ.
13087019a ಯಥಾ ಚೈವಾಪರಃ ಪಕ್ಷಃ ಪೂರ್ವಪಕ್ಷಾದ್ವಿಶಿಷ್ಯತೇ|
13087019c ತಥಾ ಶ್ರಾದ್ಧಸ್ಯ ಪೂರ್ವಾಹ್ಣಾದಪರಾಹ್ಣೋ ವಿಶಿಷ್ಯತೇ||
ಹೇಗೆ ಶ್ರಾದ್ಧಗಳಿಗೆ ಪೂರ್ವಪಕ್ಷ[9]ಕ್ಕಿಂತ ಅಪರಪಕ್ಷ[10]ವು ಶ್ರೇಷ್ಠವೋ ಹಾಗೆ ಶ್ರಾದ್ಧಕ್ಕೆ ಪೂರ್ವಾಹ್ಣ[11]ಕ್ಕಿಂತಲೂ ಅಪರಾಹ್ಣ[12]ವು ಶ್ರೇಷ್ಠವು.”
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಶ್ರಾದ್ಧಕಲ್ಪೇ ಸಪ್ತಾಶೀತಿತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಶ್ರಾದ್ಧಕಲ್ಪ ಎನ್ನುವ ಎಂಭತ್ತೇಳನೇ ಅಧ್ಯಾಯವು.
[1] ತಸ್ಮಾದ್ವಿಶೇಷವಿಧಿನಾ (ಗೀತಾ ಪ್ರೆಸ್, ಸಂಪುಟ ೬).
[2] ಮಾಸಿಕ ಶ್ರಾದ್ಧ, ಪ್ರತಿತಿಂಗಳೂ ಮಾಡುವ ಶ್ರಾದ್ಧ, ಅಮವಾಸ್ಯೆ ಮಾಡುವ ಶ್ರಾದ್ಧ (ಸಂಸ್ಕೃತ-ಕನ್ನಡ ನಿಘಂಟು: ಜಿ. ಎನ್. ಚಕ್ರವರ್ತಿ, ೨೦೦೯).
[3] ಮಾಂಸ, ಭೋಗ್ಯ ವಸ್ತು, ಸುಖಸಾಮಗ್ರಿ (ಸಂಸ್ಕೃತ-ಕನ್ನಡ ನಿಘಂಟು: ಜಿ. ಎನ್. ಚಕ್ರವರ್ತಿ, ೨೦೦೯).
[4] ಕೃಷಿಯಲ್ಲಿ ಲಾಭ (ಭಾರತ ದರ್ಶನ).
[5] ಒಂದೇ ಗೊರಸಿರುವ ಕುದುರೆ ಮೊದಲಾದ ಪ್ರಾಣಿಗಳು (ಭಾರತ ದರ್ಶನ).
[6] ಬೆಳ್ಳಿ-ಚಿನ್ನಗಳನ್ನು ಬಿಟ್ಟು ಉಳಿದ ಲೋಹಗಳ ಸಮೃದ್ಧಿ (ಭಾರತ ದರ್ಶನ).
[7] ತಾನೂಕೂಡ ಯುದ್ಧದಲ್ಲಿ ಭಾಗವಹಿಸಬೇಕಾಗುತ್ತದೆ (ಭಾರತ ದರ್ಶನ).
[8] ಪಾಡ್ಯದಿಂದ ನವಮಿಯ ವರೆಗಿನ ಶ್ರಾದ್ಧಗಳು (ಭಾರತ ದರ್ಶನ).
[10] ಕೃಷ್ಣಪಕ್ಷದ ಇನ್ನೊಂದು ಹೆಸರು
[11] ಸೂರ್ಯೋದಯದಿಂದ ಮಧ್ಯಾಹ್ನದವರೆಗೆ
[12] ಮಧ್ಯಾಹ್ನದಿಂದ ಸೂರ್ಯಾಸ್ತದವರೆಗೆ