Adi Parva: Chapter 83

ಆದಿ ಪರ್ವ: ಸಂಭವ ಪರ್ವ

೮೩

ತಪಸ್ಸಿನಲ್ಲಿ ತನ್ನ ಸರಿಸಮಾನರಾದವರು ಯಾರೂ ಇಲ್ಲವೆಂದು ಹೇಳಿದ ಯಯಾತಿಯನ್ನು ದೇವ-ಗಂಧರ್ವ-ಋಷಿಗಳನ್ನು ಅವಮಾನಿಸಿ, ಕ್ಷೀಣಪುಣ್ಯನಾದನೆಂದು ಇಂದ್ರನು ಅವನನ್ನು ಸ್ವರ್ಗದಿಂದ ಬೀಳಿಸುವಾಗ ಸತ್ಯವಂತರ ಮಧ್ಯೆ ಬೀಳಿಸಬೇಕೆಂದು ಯಯಾತಿಯು ಕೇಳಿಕೊಳ್ಳುವುದು (೧-೬). ಬೀಳುತ್ತಿರುವ ಯಯಾತಿಯನ್ನು ನೋಡಿದ ಅಷ್ಟಕನು ಪ್ರಶ್ನಿಸುವುದು (೬-೧೩).

01083001 ಇಂದ್ರ ಉವಾಚ|

01083001a ಸರ್ವಾಣಿ ಕರ್ಮಾಣಿ ಸಮಾಪ್ಯ ರಾಜನ್

                        ಗೃಹಾನ್ಪರಿತ್ಯಜ್ಯ ವನಂ ಗತೋಽಸಿ|

01083001c ತತ್ತ್ವಾಂ ಪೃಚ್ಛಾಮಿ ನಹುಷಸ್ಯ ಪುತ್ರ

                        ಕೇನಾಸಿ ತುಲ್ಯಸ್ತಪಸಾ ಯಯಾತೇ||

ಇಂದ್ರನು ಹೇಳಿದನು: “ರಾಜನ್! ಸರ್ವಕರ್ಮಗಳನ್ನು ಪೂರೈಸಿ ಮನೆಯನ್ನು ತ್ಯಜಿಸಿ ವನಕ್ಕೆ ಹೋದೆ. ನಹುಷಪುತ್ರ! ಈಗ ನಿನ್ನನ್ನು ಕೇಳುತ್ತಿದ್ದೇನೆ. ತಪಸ್ಸಿನಲ್ಲಿ ಯಯಾತಿಯ ಸಮನಾದವರು ಯಾರಿದ್ದಾರೆ?”

01083002 ಯಯಾತಿರುವಾಚ|

01083002a ನಾಹಂ ದೇವಮನುಷ್ಯೇಷು ನ ಗಂಧರ್ವಮಹರ್ಷಿಷು|

01083002c ಆತ್ಮನಸ್ತಪಸಾ ತುಲ್ಯಂ ಕಂ ಚಿತ್ಪಶ್ಯಾಮಿ ವಾಸವ||

ಯಯಾತಿಯು ಹೇಳಿದನು: “ವಾಸವ! ತಪಸ್ಸಿನಲ್ಲಿ ನನ್ನ ಸರಿಸಮನಾದವರನ್ನು ನಾನು ದೇವ-ಮನುಷ್ಯರಲ್ಲಿ, ಗಂಧರ್ವ-ಮಹರ್ಷಿಗಳಲ್ಲಿ ಯಾರನ್ನೂ ಕಾಣುತ್ತಿಲ್ಲ.”

01083003 ಇಂದ್ರ ಉವಾಚ|

01083003a ಯದಾವಮಂಸ್ಥಾಃ ಸದೃಶಃ ಶ್ರೇಯಸಶ್ಚ

                        ಪಾಪೀಯಸಶ್ಚಾವಿದಿತಪ್ರಭಾವಃ|

01083003c ತಸ್ಮಾಲ್ಲೋಕಾ ಅಂತವಂತಸ್ತವೇಮೇ

                        ಕ್ಷೀಣೇ ಪುಣ್ಯೇ ಪತಿತಾಸ್ಯದ್ಯ ರಾಜನ್||

ಇಂದ್ರನು ಹೇಳಿದನು: “ರಾಜನ್! ನಿನ್ನ ಸದೃಶರಾಗಿರುವವರನ್ನು, ನಿನಗಿಂತಲೂ ಹೆಚ್ಚಿನವರನ್ನು ಮತ್ತು ಕೀಳಾದವರನ್ನು ಅವರ ಪ್ರಭಾವಗಳನ್ನು ತಿಳಿದುಕೊಳ್ಳದೇ ಅಪಮಾನಿಸಿದುದಕ್ಕಾಗಿ ಈ ಲೋಕಗಳು ನಿನಗೆ ಕೊನೆಗೊಳ್ಳುತ್ತವೆ. ಕ್ಷೀಣಪುಣ್ಯನಾಗಿ ಇಂದು ಬೀಳುತ್ತೀಯೆ!”

01083004 ಯಯಾತಿರುವಾಚ|

01083004a ಸುರರ್ಷಿಗಂಧರ್ವನರಾವಮಾನಾತ್

                        ಕ್ಷಯಂ ಗತಾ ಮೇ ಯದಿ ಶಕ್ರ ಲೋಕಾಃ|

01083004c ಇಚ್ಛೇಯಂ ವೈ ಸುರಲೋಕಾದ್ವಿಹೀನಃ

                        ಸತಾಂ ಮಧ್ಯೇ ಪತಿತುಂ ದೇವರಾಜ||

ಯಯಾತಿಯು ಹೇಳಿದನು: “ಶಕ್ರ! ದೇವರಾಜ! ಸುರ-ಋಷಿ-ಗಂಧರ್ವರನ್ನು ಅಪಮಾನಿಸಿದುದಕ್ಕಾಗಿ ನನಗೆ ಲೋಕಗಳು ಕೊನೆಯಾಗುವವೆಂದಾದರೆ ಸುರಲೋಕದಿಂದ ವಿಹೀನಾಗಿ ಸತ್ಯವಂತರ ಮಧ್ಯೆ ಬೀಳಲು ಬಯಸುತ್ತೇನೆ.”

01083005 ಇಂದ್ರ ಉವಾಚ|

01083005a ಸತಾಂ ಸಕಾಶೇ ಪತಿತಾಸಿ ರಾಜನ್

                        ಚ್ಯುತಃ ಪ್ರತಿಷ್ಠಾಂ ಯತ್ರ ಲಬ್ಧಾಸಿ ಭೂಯಃ|

01083005c ಏವಂ ವಿದಿತ್ವಾ ತು ಪುನರ್ಯಯಾತೇ

                        ನ ತೇಽವಮಾನ್ಯಾಃ ಸದೃಶಃ ಶ್ರೇಯಸಶ್ಚ||

ಇಂದ್ರನು ಹೇಳಿದನು: “ರಾಜನ್! ಚ್ಯುತನಾಗಿ ಸತ್ಯವಂತರ ಸಮೀಪದಲ್ಲಿಯೇ ಬೀಳುತ್ತೀಯೆ. ಅಲ್ಲಿ ಪುನಃ ಪ್ರತಿಷ್ಠೆಯನ್ನು ಪಡೆಯುತ್ತೀಯೆ. ಯುಯಾತಿ! ಇದನ್ನು ತಿಳಿದ ನೀನು ಪುನಃ ನಿನ್ನ ಸದೃಶ ಶ್ರೇಯಸ್ಕರರನ್ನು ಅವಮಾಸಿಸುವುದಿಲ್ಲ.”

01083006 ವೈಶಂಪಾಯನ ಉವಾಚ|

01083006a ತತಃ ಪ್ರಹಾಯಾಮರರಾಜಜುಷ್ಟಾನ್

                        ಪುಣ್ಯಾಽಲ್ಲೋಕಾನ್ಪತಮಾನಂ ಯಯಾತಿಂ||

01083006c ಸಂಪ್ರೇಕ್ಷ್ಯ ರಾಜರ್ಷಿವರೋಽಷ್ಟಕಸ್ತಂ

                        ಉವಾಚ ಸದ್ಧರ್ಮವಿಧಾನಗೋಪ್ತಾ|

ವೈಶಂಪಾಯನನು ಹೇಳಿದನು: “ಅಮರರಾಜನು ಆಳುವ ಪುಣ್ಯಲೋಕಗಳನ್ನು ತೊರೆದು ಬೀಳುತ್ತಿರುವ ಯಯಾತಿಯನ್ನು ನೋಡಿ ರಾಜರ್ಷಿಶ್ರೇಷ್ಠ, ಸದ್ಧರ್ಮವಿಧಾನಗೋಪ್ತ ಅಷ್ಟಕನು ಹೇಳಿದನು:

01083007a ಕಸ್ತ್ವಂ ಯುವಾ ವಾಸವತುಲ್ಯರೂಪಃ

                        ಸ್ವತೇಜಸಾ ದೀಪ್ಯಮಾನೋ ಯಥಾಗ್ನಿಃ||

01083007c ಪತಸ್ಯುದೀರ್ಣಾಂಬುಧರಾಂಧಕಾರಾತ್

                        ಖಾತ್ಖೇಚರಾಣಾಂ ಪ್ರವರೋ ಯಥಾರ್ಕಃ|

“ರೂಪದಲ್ಲಿ ವಾಸವನಂತಿರುವ ಯುವಕನೇ! ನೀನು ಯಾರು? ನಿನ್ನದೇ ತೇಜಸ್ಸಿನಿಂದ ಅಗ್ನಿಯಂತೆ ಬೆಳಗುತ್ತಿದ್ದೀಯೆ! ಆಕಾಶದಲ್ಲಿ ಮೋಡಕವಿದ ಕತ್ತಲೆಯಿಂದ ಹೊರಬರುವ ಖೇಚರಗಳ ಪ್ರವರ ಸೂರ್ಯನಂತೆ ಹೊರಬೀಳುತ್ತಿದ್ದೀಯೆ!

01083008a ದೃಷ್ಟ್ವಾ ಚ ತ್ವಾಂ ಸೂರ್ಯಪಥಾತ್ಪತಂತಂ

                        ವೈಶ್ವಾನರಾರ್ಕದ್ಯುತಿಮಪ್ರಮೇಯಂ||

01083008c ಕಿಂ ನು ಸ್ವಿದೇತತ್ಪತತೀತಿ ಸರ್ವೇ

                        ವಿತರ್ಕಯಂತಃ ಪರಿಮೋಹಿತಾಃ ಸ್ಮಃ||

ಅಪ್ರಮೇಯವಾದ ಅಗ್ನಿ-ಸೂರ್ಯರ ಪ್ರಕಾಶದೊಂದಿಗೆ ಸೂರ್ಯಪಥದಿಂದ ಬೀಳುತ್ತಿರುವ ನಿನ್ನನ್ನು ನೋಡಿ ಹೀಗೆ ಬೀಳುತ್ತಿರುವವನು ಯಾರೆಂದು ನಾವೆಲ್ಲರೂ ಪರಿಮೋಹಿತರಾಗಿ ತರ್ಕಿಸುತ್ತಿದ್ದೇವೆ!

01083009a ದೃಷ್ಟ್ವಾ ಚ ತ್ವಾಂ ವಿಷ್ಠಿತಂ ದೇವಮಾರ್ಗೇ

                        ಶಕ್ರಾರ್ಕವಿಷ್ಣುಪ್ರತಿಮಪ್ರಭಾವಂ|

01083009c ಅಭ್ಯುದ್ಗತಾಸ್ತ್ವಾಂ ವಯಮದ್ಯ ಸರ್ವೇ

         ತತ್ತ್ವಂ ಪಾತೇ ತವ ಜಿಜ್ಞಾಸಮಾನಾಃ||

ಶಕ್ರ, ಅರ್ಕ, ವಿಷ್ಣುಗಳ ಅಪ್ರತಿಮ ಪ್ರಭಾವದೊಂದಿಗೆ ದೇವಮಾರ್ಗವನ್ನು ಬಳಸಿದ ನಿನ್ನನ್ನು ಎದಿರುಗೊಂಡು ನಿನ್ನ ಪತನಕ್ಕೆ ಕಾರಣವೇನೆಂದು ಕೇಳಲು ನಾವೆಲ್ಲರೂ ಎದ್ದು ನಿಂತಿದ್ದೇವೆ.

01083010a ನ ಚಾಪಿ ತ್ವಾಂ ಧೃಷ್ಣುಮಃ ಪ್ರಷ್ಟುಮಗ್ರೇ

         ನ ಚ ತ್ವಮಸ್ಮಾನ್ಪೃಚ್ಛಸಿ ಯೇ ವಯಂ ಸ್ಮಃ|

01083010c ತತ್ತ್ವಾಂ ಪೃಚ್ಛಾಮಃ ಸ್ಪೃಹಣೀಯರೂಪಂ

         ಕಸ್ಯ ತ್ವಂ ವಾ ಕಿಂನಿಮಿತ್ತಂ ತ್ವಮಾಗಾಃ||

ನಮ್ಮ ಕುರಿತು ನೀನೇ ಮೊದಲು ಕೇಳಲಿಲ್ಲವಾದುದರಿಂದ ನಾವು ನಿನ್ನನ್ನು ಪ್ರಶ್ನಿಸುವ ಸಾಹಸವನ್ನು ಮಾಡಿದ್ದೇವೆ. ಸ್ಪೃಹಣೀಯರೂಪೀ! ನಿನ್ನನ್ನು ಕೇಳುತ್ತಿದ್ದೇವೆ - ನೀನು ಯಾರವನು? ಯಾವ ಕಾರಣದಿಂದ ನೀನು ಇಲ್ಲಿಗೆ ಆಗಮಿಸಿರುವೆ?

01083011a ಭಯಂ ತು ತೇ ವ್ಯೇತು ವಿಷಾದಮೋಹೌ

         ತ್ಯಜಾಶು ದೇವೇಂದ್ರಸಮಾನರೂಪ|

01083011c ತ್ವಾಂ ವರ್ತಮಾನಂ ಹಿ ಸತಾಂ ಸಕಾಶೇ

         ನಾಲಂ ಪ್ರಸೋದುಂ ಬಲಹಾಪಿ ಶಕ್ರಃ||

ದೇವೇಂದ್ರಸಮಾನ ರೂಪಿಯೇ! ಭಯ, ವಿಷಾದ, ಮೋಹಗಳನ್ನು ನೀನು ತೊರೆಯುಬೇಕು. ಏಕೆಂದರೆ ವರ್ತಮಾನದಲ್ಲಿ ನೀನು ಸತ್ಯವಂತರ ಬಳಿ ಇದ್ದೀಯೆ. ಬಲಹ ಶಕ್ರನೂ ಇಲ್ಲಿ ನಿನ್ನನ್ನು ಪೀಡಿಸಲಾರ.

01083012a ಸಂತಃ ಪ್ರತಿಷ್ಠಾ ಹಿ ಸುಖಚ್ಯುತಾನಾಂ

         ಸತಾಂ ಸದೈವಾಮರರಾಜಕಲ್ಪ|

01083012c ತೇ ಸಂಗತಾಃ ಸ್ಥಾವರಜಂಗಮೇಶಾಃ

         ಪ್ರತಿಷ್ಠಿತಸ್ತ್ವಂ ಸದೃಶೇಷು ಸತ್ಸು||

ಅಮರರಾಜಕಲ್ಪ! ಸುಖದಿಂದ ಚ್ಯುತರಾದ ಸತ್ಯವಂತರಿಗೆ ಸತ್ಯವಂತರೇ ಪ್ರತಿಷ್ಠೆ. ನಿನ್ನ ಜೊತೆಯಿರುವವರು ಸ್ಥಾವರಜಂಗಮಗಳಿಗೆ ಒಡೆಯರು. ನಿನ್ನ ಸದೃಶರಾದ ಸತ್ಯವಂತರಲ್ಲಿ ನೀನು ಪ್ರತಿಷ್ಠೆಯನ್ನು ಕಾಣುತ್ತೀಯೆ.

01083013a ಪ್ರಭುರಗ್ನಿಃ ಪ್ರತಪನೇ ಭೂಮಿರಾವಪನೇ ಪ್ರಭುಃ|

01083013c ಪ್ರಭುಃ ಸೂರ್ಯಃ ಪ್ರಕಾಶಿತ್ವೇ ಸತಾಂ ಚಾಭ್ಯಾಗತಃ ಪ್ರಭುಃ||

ಸುಡುವುದರಲ್ಲಿ ಅಗ್ನಿಯು ಪ್ರಭುವು. ಬಿತ್ತುವುದರಲ್ಲಿ ಭೂಮಿಯು ಪ್ರಭುವು. ಪ್ರಕಾಶಿಸುವುದರಲ್ಲಿ ಸೂರ್ಯನು ಪ್ರಭುವು. ಸತ್ಯವಂತರಲ್ಲಿ ಅಭ್ಯಾಗತನು ಪ್ರಭುವು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ತ್ರ್ಯಶೀತಿತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಂಭತ್ತಮೂರನೆಯ ಅಧ್ಯಾಯವು.

Comments are closed.