ಆದಿ ಪರ್ವ: ಸಂಭವ ಪರ್ವ
೭೪
ಶಕ್ರನು ದೇವಯಾನಿಗೆ ಸಹನೆಯನ್ನು ಸೂಚಿಸಿದರೂ ಅವಳು ಸೇಡನ್ನು ತೀರಿಸಿಕೊಳ್ಳಲು ಒತ್ತಾಯಿಸುವುದು (೧-೧೫).
01074001 ಶುಕ್ರ ಉವಾಚ|
01074001a ಯಃ ಪರೇಷಾಂ ನರೋ ನಿತ್ಯಮತಿವಾದಾಂಸ್ತಿತಿಕ್ಷತಿ|
01074001c ದೇವಯಾನಿ ವಿಜಾನೀಹಿ ತೇನ ಸರ್ವಮಿದಂ ಜಿತಂ||
ಶುಕ್ರನು ಹೇಳಿದನು: “ಇನ್ನೊಬ್ಬರ ನಿಂದನೆಯ ಮಾತುಗಳನ್ನು ಸಹಿಸಿಕೊಳ್ಳುವವನು ಸರ್ವವನ್ನೂ ಜಯಿಸಿದಂತೆ ಎನ್ನುವುದನ್ನು ತಿಳಿದುಕೋ, ದೇವಯಾನಿ!
01074002a ಯಃ ಸಮುತ್ಪತಿತಂ ಕ್ರೋಧಂ ನಿಗೃಹ್ಣಾತಿ ಹಯಂ ಯಥಾ|
01074002c ಸ ಯಂತೇತ್ಯುಚ್ಯತೇ ಸದ್ಭಿರ್ನ ಯೋ ರಶ್ಮಿಷು ಲಂಬತೇ||
ಹಗ್ಗಗಳನ್ನು ಹಿಡೆದೆಳೆದು ಕುದುರೆಗಳನ್ನು ಹೇಗೋ ಹಾಗೆ ಏರುತ್ತಿರುವ ಕೋಪವನ್ನು ಹಿಡಿತದಲ್ಲಿ ತೆಗೆದುಕೊಳ್ಳುವವನೇ ನಿಜವಾದ ಸಾರಥಿ.
01074003a ಯಃ ಸಮುತ್ಪತಿತಂ ಕ್ರೋಧಮಕ್ರೋಧೇನ ನಿರಸ್ಯತಿ|
01074003c ದೇವಯಾನಿ ವಿಜಾನೀಹಿ ತೇನ ಸರ್ವಮಿದಂ ಜಿತಂ||
ದೇವಯಾನಿ! ಕ್ರೋಧವನ್ನು ಅಕ್ರೋಧದಿಂದ ಶಾಂತಗೊಳಿಸವವನು ಸರ್ವವನ್ನೂ ಗೆದ್ದವನು ಎಂದು ತಿಳಿ.
01074004a ಯಃ ಸಮುತ್ಪತಿತಂ ಕ್ರೋಧಂ ಕ್ಷಮಯೇಹ ನಿರಸ್ಯತಿ|
01074004c ಯಥೋರಗಸ್ತ್ವಚಂ ಜೀರ್ಣಾಂ ಸ ವೈ ಪುರುಷ ಉಚ್ಯತೇ||
ಏರುತ್ತಿರುವ ಕ್ರೋಧವನ್ನು ಕ್ಷಮೆಯಿಂದ ಯಾರು ಶಾಂತಗೊಳಿಸುತ್ತಾರೋ ಅಂಥಹ ಪುರುಷರನ್ನು ಪೊರೆಬಿಡುವ ಹಾವಿಗೆ ಹೋಲಿಸುತ್ತಾರೆ.
01074005a ಯಃ ಸಂಧಾರಯತೇ ಮನ್ಯುಂ ಯೋಽತಿವಾದಾಂಸ್ತಿತಿಕ್ಷತಿ|
01074005c ಯಶ್ಚ ತಪ್ತೋ ನ ತಪತಿ ದೃದಂ ಸೋಽರ್ಥಸ್ಯ ಭಾಜನಂ||
ಸಿಟ್ಟನ್ನು ಹಿಡಿತದಲ್ಲಿಟ್ಟುಕೊಂಡು, ನಿಂದನೆಯ ಮಾತುಗಳನ್ನು ಸಹಿಸಿ, ತಾನು ನೊಂದರೂ ಇತರರನ್ನು ನೋಯಿಸದವನು ನಿಶ್ಚಯವಾಗಿಯೂ ಸಂಪತ್ತಿನ ಕೊಪ್ಪರಿಗೆಯೇ ಸರಿ.
01074006a ಯೋ ಯಜೇದಪರಿಶ್ರಾಂತೋ ಮಾಸಿ ಮಾಸಿ ಶತಂ ಸಮಾಃ|
01074006c ನ ಕ್ರುಧ್ಯೇದ್ಯಶ್ಚ ಸರ್ವಸ್ಯ ತಯೋರಕ್ರೋಧನೋಽಧಿಕಃ||
ಒಂದು ನೂರು ವರ್ಷಗಳವರೆಗೆ ಪ್ರತಿ ತಿಂಗಳೂ ಯಜ್ಞಮಾಡುವವನು ಮತ್ತು ಯಾರ ಮೇಲೂ ಸಿಟ್ಟಾಗದೇ ಇರುವವನು ಈ ಈರ್ವರಲ್ಲಿ ಸಿಟ್ಟಾಗದೇ ಇರುವವನೇ ಶ್ರೇಷ್ಠನು.
01074007a ಯತ್ಕುಮಾರಾಃ ಕುಮಾರ್ಯಶ್ಚ ವೈರಂ ಕುರ್ಯುರಚೇತಸಃ|
01074007c ನ ತತ್ಪ್ರಾಜ್ಞೋಽನುಕುರ್ವೀತ ವಿದುಸ್ತೇ ನ ಬಲಾಬಲಂ||
ಬುದ್ಧಿಯಿಲ್ಲದ ಮಕ್ಕಳು ಮಕ್ಕಳಲ್ಲೇ ಜಗಳವಾಗುತ್ತದೆ. ಆದರೆ ಅದನ್ನು ಪ್ರಾಜ್ಞರು ಅನುಸರಿಸುವುದಿಲ್ಲ. ಯಾಕೆಂದರೆ ಅವರಿಗೆ ಬಲ ಮತ್ತು ದುರ್ಬಲಗಳೇನು ಎಂದು ತಿಳಿದಿರುವುದಿಲ್ಲ.”
01074008 ದೇವಯಾನ್ಯುವಾಚ|
01074008a ವೇದಾಹಂ ತಾತ ಬಾಲಾಪಿ ಧರ್ಮಾಣಾಂ ಯದಿಹಾಂತರಂ|
01074008c ಅಕ್ರೋಧೇ ಚಾತಿವಾದೇ ಚ ವೇದ ಚಾಪಿ ಬಲಾಬಲಂ||
ದೇವಯಾನಿಯು ಹೇಳಿದಳು: “ತಂದೇ! ಬಾಲಕಿಯಾದರೂ ನಾನು ಧರ್ಮಗಳ ಕುರಿತು ತಿಳಿದಿದ್ದೇನೆ. ಕ್ರೋಧ-ಅಕ್ರೋಧಗಳ ಅಂತರವನ್ನೂ ತಿಳಿದಿದ್ದೇನೆ. ಬಲಾಬಲಗಳನ್ನು ಅರಿತಿದ್ದೇನೆ.
01074009a ಶಿಷ್ಯಸ್ಯಾಶಿಷ್ಯವೃತ್ತೇರ್ಹಿ ನ ಕ್ಷಂತವ್ಯಂ ಬುಭೂಷತಾ|
01074009c ತಸ್ಮಾತ್ಸಂಕೀರ್ಣವೃತ್ತೇಷು ವಾಸೋ ಮಮ ನ ರೋಚತೇ||
ಆದರೆ ಯಾವ ಗುರುವೂ ಅಶಿಷ್ಯರಾಗಿ ವರ್ತಿಸುವ ತಮ್ಮ ಶಿಷ್ಯರನ್ನು ಕ್ಷಮಿಸಬಾರದು. ಕೆಟ್ಟದಾಗಿ ನಡೆದುಕೊಂಡಿರುವವರ ಮಧ್ಯೆ ವಾಸಿಸಲು ನನಗಿಷ್ಟವಿಲ್ಲ.
01074010a ಪುಮಾಂಸೋ ಯೇ ಹಿ ನಿಂದಂತಿ ವೃತ್ತೇನಾಭಿಜನೇನ ಚ|
01074010c ನ ತೇಷು ನಿವಸೇತ್ಪ್ರಾಜ್ಞಃ ಶ್ರೇಯೋರ್ಥೀ ಪಾಪಬುದ್ಧಿಷು||
ಶ್ರೇಯೋರ್ಥಿಯಾದ ಯಾರೂ ತನ್ನ ಕುಲ ಮತ್ತು ನಡತೆಯನ್ನು ನಿಂದಿಸುವ ಪಾಪಬುದ್ಧಿಗಳೊಡನೆ ವಾಸಿಸಬಾರದು.
01074011a ಯೇ ತ್ವೇನಮಭಿಜಾನಂತಿ ವೃತ್ತೇನಾಭಿಜನೇನ ಚ|
01074011c ತೇಷು ಸಾಧುಷು ವಸ್ತವ್ಯಂ ಸ ವಾಸಃ ಶ್ರೇಷ್ಠ ಉಚ್ಯತೇ||
ಉತ್ತಮ ಕುಲ ಮತ್ತು ನಡತೆಯನ್ನು ತಿಳಿದು ಗೌರವಿಸುವವರ ಜೊತೆ ವಾಸಿಸುವುದು ಶ್ರೇಷ್ಠವೆಂದು ಹೇಳುತ್ತಾರೆ. ಅಂಥವರಲ್ಲಿಯೇ ನಾವು ವಾಸಿಸೋಣ.
01074012a ವಾಗ್ದುರುಕ್ತಂ ಮಹಾಘೋರಂ ದುಹಿತುರ್ವೃಷಪರ್ವಣಃ|
01074012c ನ ಹ್ಯತೋ ದುಷ್ಕರತರಂ ಮನ್ಯೇ ಲೋಕೇಷ್ವಪಿ ತ್ರಿಷು|
01074012e ಯಃ ಸಪತ್ನಶ್ರಿಯಂ ದೀಪ್ತಾಂ ಹೀನಶ್ರೀಃ ಪರ್ಯುಪಾಸತೇ||
ವೃಷಪರ್ವನ ಮಗಳ ಮಹಾ ಘೋರ ಮತ್ತು ಕ್ರೂರ ಮಾತುಗಳಷ್ಟು ದುಷ್ಕರತರವಾದದ್ದು ಈ ಮೂರೂ ಲೋಕಗಳಲ್ಲಿಯೇ ಇಲ್ಲವೆಂದು ನನ್ನ ಅನಿಸಿಕೆ. ತನ್ನ ಪ್ರತಿದ್ವಂಧಿಯ ಉಜ್ವಲ ಕೀರ್ತಿಯನ್ನು ನೋಡಿ ಸಂತೋಷಪಡುವವನು ಸೋತವನೇ ಸರಿ.””
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ಚತುಃಸಪ್ತತಿತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಪ್ಪತ್ತ್ನಾಲ್ಕನೆಯ ಅಧ್ಯಾಯವು.