Adi Parva: Chapter 225

ಆದಿ ಪರ್ವ: ಖಾಂಡವದಾಹ ಪರ್ವ

೨೨೫

ಮಂದಪಾಲನು ಮಕ್ಕಳನ್ನು, ಮಕ್ಕಳ ತಾಯಿಯನ್ನೂ ಮತ್ತು ಪತ್ನಿಯನ್ನೂ ಕರೆದುಕೊಂಡು ಬೇರೆ ಪ್ರದೇಶಕ್ಕೆ ಹೋದುದು (೧-೪). ಇಂದ್ರನು ಕೃಷ್ಣಾರ್ಜುನರಿಗೆ ವರವನ್ನಿತ್ತುದುದು (೫-೧೪). ಪಾವಕನು ಕೃಷ್ಣಾರ್ಜುನರಿಂದ ಬೀಳ್ಕೊಂಡಿದುದು (೧೫-೧೯).

Image result for fight between arjuna and indra01225001 ಮಂದಪಾಲ ಉವಾಚ|

01225001a ಯುಷ್ಮಾಕಂ ಪರಿರಕ್ಷಾರ್ಥಂ ವಿಜ್ಞಪ್ತೋ ಜ್ವಲನೋ ಮಯಾ|

01225001c ಅಗ್ನಿನಾ ಚ ತಥೇತ್ಯೇವಂ ಪೂರ್ವಮೇವ ಪ್ರತಿಶ್ರುತಂ||

ಮಂದಪಾಲನು ಹೇಳಿದನು: “ನಿಮ್ಮನ್ನು ಪರಿರಕ್ಷಿಸಲು ನಾನು ಅಗ್ನಿಯಲ್ಲಿ ವಿಜ್ಞಾಪಿಸಿದ್ದೆ. ಹಾಗೆಯೇ ಆಗಲೆಂದು ಈ ಹಿಂದೆಯೇ ಅಗ್ನಿಯು ಉತ್ತರಿಸಿದ್ದನು.

01225002a ಅಗ್ನೇರ್ವಚನಮಾಜ್ಞಾಯ ಮಾತುರ್ಧರ್ಮಜ್ಞತಾಂ ಚ ವಃ|

01225002c ಯುಷ್ಮಾಕಂ ಚ ಪರಂ ವೀರ್ಯಂ ನಾಹಂ ಪೂರ್ವಮಿಹಾಗತಃ||

ಅಗ್ನಿಯ ವಚನವನ್ನು ನೆನಪಿನಲ್ಲಿಟ್ಟುಕೊಂಡು, ನಿಮ್ಮ ತಾಯಿಯ ಧರ್ಮವೃತ್ತಿಯನ್ನು ತಿಳಿದು ಮತ್ತು ನಿಮ್ಮದೇ ಪರಮ ವೀರ್ಯವನ್ನು ತಿಳಿದು ನಾನು ಇಲ್ಲಿಗೆ ಈ ಮೊದಲೇ ಬರಲಿಲ್ಲ.

01225003a ನ ಸಂತಾಪೋ ಹಿ ವಃ ಕಾರ್ಯಃ ಪುತ್ರಕಾ ಮರಣಂ ಪ್ರತಿ|

01225003c ಋಷೀನ್ವೇದ ಹುತಾಶೋಽಪಿ ಬ್ರಹ್ಮ ತದ್ವಿದಿತಂ ಚ ವಃ||

ಪುತ್ರರೇ! ಮರಣದ ಕುರಿತು ನೀವು ಸಂತಾಪ ಪಡಬೇಕಾಗಿಲ್ಲ. ನೀವು ವೇದ ಮತ್ತು ಬ್ರಹ್ಮವನ್ನು ತಿಳಿದಿರುವ ಋಷಿಗಳು ಎಂದು ಅಗ್ನಿಯೂ ತಿಳಿದಿದ್ದಾನೆ.””

01225004 ವೈಶಂಪಾಯನ ಉವಾಚ|

01225004a ಏವಮಾಶ್ವಾಸ್ಯ ಪುತ್ರಾನ್ಸ ಭಾರ್ಯಾಂ ಚಾದಾಯ ಭಾರತ|

01225004c ಮಂದಪಾಲಸ್ತತೋ ದೇಶಾದನ್ಯಂ ದೇಶಂ ಜಗಾಮ ಹ||

ವೈಶಂಪಾಯನನು ಹೇಳಿದನು: “ಭಾರತ! ಈ ರೀತಿ ತನ್ನ ಮಕ್ಕಳಿಗೆ ಆಶ್ವಾಸನೆಯನ್ನಿತ್ತು ಮಂದಪಾಲನು ಅವರು ಮತ್ತು ತನ್ನ ಪತ್ನಿಯೊಡನೆ ಆ ದೇಶವನ್ನು ತೊರೆದು ಇನ್ನೊಂದು ದೇಶಕ್ಕೆ ಹೋದನು.

01225005a ಭಗವಾನಪಿ ತಿಗ್ಮಾಂಶುಃ ಸಮಿದ್ಧಂ ಖಾಂಡವಂ ವನಂ|

01225005c ದದಾಹ ಸಹ ಕೃಷ್ಣಾಭ್ಯಾಂ ಜನಯಂ ಜಗತೋಽಭಯಂ||

ತಿಗ್ಮಾಂಶು ಭಗವಾನನಾದರೂ ಜಗತ್ತಿಗೇ ಭಯವನ್ನುಂಟುಮಾಡುವಂತೆ ಇಡೀ ಖಾಂಡವವನವನ್ನು ಕೃಷ್ಣರಿಬ್ಬರ ಸಹಾಯದಿಂದ ಸುಟ್ಟನು.

01225006a ವಸಾಮೇದೋವಹಾಃ ಕುಲ್ಯಾಸ್ತತ್ರ ಪೀತ್ವಾ ಚ ಪಾವಕಃ|

01225006c ಅಗಚ್ಛತ್ಪರಮಾಂ ತೃಪ್ತಿಂ ದರ್ಶಯಾಮಾಸ ಚಾರ್ಜುನಂ||

ಮಾಂಸ, ಮೇದ ಮತ್ತು ರಕ್ತವನ್ನು ಕುಡಿದ ಪಾವಕನು ಪರಪ ತೃಪ್ತನಾಗಿ ಬಂದು ಅರ್ಜುನನನಿಗೆ ಕಾಣಿಸಿಕೊಂಡನು.

01225007a ತತೋಽಂತರಿಕ್ಷಾದ್ಭಗವಾನವತೀರ್ಯ ಸುರೇಶ್ವರಃ|

01225007c ಮರುದ್ಗಣವೃತಃ ಪಾರ್ಥಂ ಮಾಧವಂ ಚಾಬ್ರವೀದಿದಂ||

ಆಗ ಮರುದ್ಗಣಗಳಿಂದ ಆವೃತ ಭಗವಾನ್ ಸುರೇಶ್ವರನು ಅಂತರಿಕ್ಷದಿಂದ ಕೆಳಗಿಳಿದುಬಂದು ಪಾರ್ಥ-ಮಾಧವರನ್ನುದ್ದೇಶಿಸಿ ಮಾತನಾಡಿದನು:

Image result for dhritarashtra embraces bhima01225008a ಕೃತಂ ಯುವಾಭ್ಯಾಂ ಕರ್ಮೇದಮಮರೈರಪಿ ದುಷ್ಕರಂ|

01225008c ವರಾನ್ವೃಣೀತಂ ತುಷ್ಟೋಽಸ್ಮಿ ದುರ್ಲಭಾನಪ್ಯಮಾನುಷಾನ್||

“ಅಮರರಿಗೂ ದುಷ್ಕರವಾಗಿರುವ ಕೃತ್ಯವನ್ನು ನೀವಿಬ್ಬರೂ ಮಾಡಿದ್ದೀರಿ. ನಾನು ಸಂತುಷ್ಟನಾಗಿದ್ದೇನೆ. ದುರ್ಲಭ ಅಮಾನುಷ ವರಗಳನ್ನು ಕೇಳಿ.”

01225009a ಪಾರ್ಥಸ್ತು ವರಯಾಮಾಸ ಶಕ್ರಾದಸ್ತ್ರಾಣಿ ಸರ್ವಶಃ|

01225009c ಗ್ರಹೀತುಂ ತಚ್ಚ ಶಕ್ರೋಽಸ್ಯ ತದಾ ಕಾಲಂ ಚಕಾರ ಹ||

ಪಾರ್ಥನಾದರೋ ಶಕ್ರನಿಂದ ಸರ್ವ ಶಸ್ತ್ರಗಳನ್ನು ಕೇಳಿದನು. ಆದರೆ ಶಕ್ರನು ಅವುಗಳನ್ನು ಪಡೆಯುವ ಕಾಲದ ಕುರಿತು ಹೇಳಿದನು.

01225010a ಯದಾ ಪ್ರಸನ್ನೋ ಭಗವಾನ್ಮಹಾದೇವೋ ಭವಿಷ್ಯತಿ|

01225010c ತುಭ್ಯಂ ತದಾ ಪ್ರದಾಸ್ಯಾಮಿ ಪಾಂಡವಾಸ್ತ್ರಾಣಿ ಸರ್ವಶಃ||

“ಪಾಂಡವ! ಭಗವಾನ್ ಮಹಾದೇವನು ನಿನ್ನ ಮೇಲೆ ಯಾವಾಗ ಪ್ರಸನ್ನನಾಗುತ್ತಾನೋ ಆಗ ಸರ್ವ ಅಸ್ತ್ರಗಳನ್ನು ನಿನಗೆ ನೀಡುತ್ತೇನೆ.

01225011a ಅಹಮೇವ ಚ ತಂ ಕಾಲಂ ವೇತ್ಸ್ಯಾಮಿ ಕುರುನಂದನ|

01225011c ತಪಸಾ ಮಹತಾ ಚಾಪಿ ದಾಸ್ಯಾಮಿ ತವ ತಾನ್ಯಹಂ||

ಕುರುನಂದನ! ನನಗೇ ಆ ಕಾಲವು ತಿಳಿಯುತ್ತದೆ. ನಿನ್ನ ಮಹಾ ತಪಸ್ಸಿನ ಪರಿಣಾಮವಾಗಿ ನಾನು ನಿನಗೆ ಅವೆಲ್ಲವನ್ನೂ ಕೊಡುತ್ತೇನೆ.

01225012a ಆಗ್ನೇಯಾನಿ ಚ ಸರ್ವಾಣಿ ವಾಯವ್ಯಾನಿ ತಥೈವ ಚ|

01225012c ಮದೀಯಾನಿ ಚ ಸರ್ವಾಣಿ ಗ್ರಹೀಷ್ಯಸಿ ಧನಂಜಯ||

ಧನಂಜಯ! ಆಗ್ನೇಯ, ವಾಯವ್ಯ ಮೊದಲಾದ ಸರ್ವವನ್ನೂ ಮತ್ತು ನನ್ನ ಸರ್ವವನ್ನೂ ಪಡೆಯುವೆ.”

01225013a ವಾಸುದೇವೋಽಪಿ ಜಗ್ರಾಹ ಪ್ರೀತಿಂ ಪಾರ್ಥೇನ ಶಾಶ್ವತೀಂ|

01225013c ದದೌ ಚ ತಸ್ಮೈ ದೇವೇಂದ್ರಸ್ತಂ ವರಂ ಪ್ರೀತಿಮಾಂಸ್ತದಾ||

ವಾಸುದೇವನು ಪಾರ್ಥನಲ್ಲಿದ್ದ ಪ್ರೀತಿಯು ಶಾಶ್ವತವಾಗಿರುವಂತೆ ಕೇಳಿಕೊಂಡನು. ದೇವೇಂದ್ರನು ಪ್ರೀತಿಯಿಂದ ಆ ವರವನ್ನಿತ್ತನು.

01225014a ದತ್ತ್ವಾ ತಾಭ್ಯಾಂ ವರಂ ಪ್ರೀತಃ ಸಹ ದೇವೈರ್ಮರುತ್ಪತಿಃ|

01225014c ಹುತಾಶನಮನುಜ್ಞಾಪ್ಯ ಜಗಾಮ ತ್ರಿದಿವಂ ಪುನಃ||

ಅವರಿಬ್ಬರಿಗೆ ವರವನ್ನಿತ್ತು ಪ್ರೀತನಾದ ಮರುತ್ಪತಿಯು ದೇವತೆಗಳೊಂದಿಗೆ ಹುತಾಶನನನ್ನು ಬೀಳ್ಕೊಂಡು ತ್ರಿದಿವಕ್ಕೆ ಹಿಂದಿರುಗಿದನು.

01225015a ಪಾವಕಶ್ಚಾಪಿ ತಂ ದಾವಂ ದಗ್ಧ್ವಾ ಸಮೃಗಪಕ್ಷಿಣಂ|

01225015c ಅಹಾನಿ ಪಂಚ ಚೈಕಂ ಚ ವಿರರಾಮ ಸುತರ್ಪಿತಃ|

ಪಾವಕನಾದರೂ ಮೃಗಪಕ್ಷಿಗಳ ಸಹಿತ ಆ ವನವನ್ನು ಆರು ದಿನಗಳು ಸುಟ್ಟು ಸುತರ್ಪಿತನಾಗಿ ನಿಂತನು.

01225016a ಜಗ್ಧ್ವಾ ಮಾಂಸಾನಿ ಪೀತ್ವಾ ಚ ಮೇದಾಂಸಿ ರುಧಿರಾಣಿ ಚ|

01225016c ಯುಕ್ತಃ ಪರಮಯಾ ಪ್ರೀತ್ಯಾ ತಾವುವಾಚ ವಿಶಾಂ ಪತೇ||

ವಿಶಾಂಪತೇ! ಮಾಂಸವನ್ನು ತಿಂದು ಮೇದ ರುಧಿರಗಳನ್ನು ಕುಡಿದು ಪರಮಪ್ರೀತನಾದ ಅವನು ಹೇಳಿದನು:

01225017a ಯುವಾಭ್ಯಾಂ ಪುರುಷಾಗ್ರ್ಯಾಭ್ಯಾಂ ತರ್ಪಿತೋಽಸ್ಮಿ ಯಥಾಸುಖಂ|

01225017c ಅನುಜಾನಾಮಿ ವಾಂ ವೀರೌ ಚರತಂ ಯತ್ರ ವಾಂಚಿತಂ||

“ನೀವಿಬ್ಬರೂ ಪುರುಷವ್ಯಾಘ್ರರು ಯಥಾಸುಖವಾಗಿ ನನಗೆ ತೃಪ್ತಿನೀಡಿದ್ದೀರಿ. ವೀರರೇ! ನಿಮ್ಮನ್ನು ಬೀಳ್ಕೊಡುತ್ತೇನೆ. ಇಷ್ಟಬಂದಲ್ಲಿ ಹೋಗಿರಿ.”

01225018a ಏವಂ ತೌ ಸಮನುಜ್ಞಾತೌ ಪಾವಕೇನ ಮಹಾತ್ಮನಾ|

01225018c ಅರ್ಜುನೋ ವಾಸುದೇವಶ್ಚ ದಾನವಶ್ಚ ಮಯಸ್ತಥಾ||

01225019a ಪರಿಕ್ರಮ್ಯ ತತಃ ಸರ್ವೇ ತ್ರಯೋಽಪಿ ಭರತರ್ಷಭ|

01225019c ರಮಣೀಯೇ ನದೀಕೂಲೇ ಸಹಿತಾಃ ಸಮುಪಾವಿಶನ್||

ಭರತರ್ಷಭ! ಅರ್ಜುನ, ವಾಸುದೇವ ಮತ್ತು ದಾನವ ಮಯ ಈ ಮೂವರೂ ಮಹಾತ್ಮ ಪಾವಕನನ್ನು ಬೀಳ್ಕೊಂಡು ಸುತ್ತಾಡಿ ರಮಣೀಯ ನದೀತೀರದಲ್ಲಿ ಒಟ್ಟಿಗೇ ಕುಳಿತುಕೊಂಡರು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಖಾಂಡವದಾಹಪರ್ವಣಿ ಶಾಂಗೃಕೋಪಾಖ್ಯಾನೇ ಪಂಚವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಖಾಂಡವದಾಹಪರ್ವದಲ್ಲಿ ಶಾಂಗೃಕೋಪಾಖ್ಯಾನದಲ್ಲಿ ಇನ್ನೂರಾ ಇಪ್ಪತ್ತೈದನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಖಾಂಡವದಾಹಪರ್ವಃ||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಖಾಂಡವದಾಹಪರ್ವವು.

ಇತಿ ಶ್ರೀ ಮಹಾಭಾರತೇ ಆದಿಪರ್ವಃ||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೧/೧೮, ಉಪಪರ್ವಗಳು-೧೯/೧೦೦, ಅಧ್ಯಾಯಗಳು-೨೨೫/೧೯೯೫, ಶ್ಲೋಕಗಳು-೭೧೯೦/೭೩೭೮೪

ಸ್ವಸ್ತಿಪ್ರಜಾಭ್ಯಃ ಪರಿಪಾಲಯಂತಾಮ್

ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ|

ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ

ಲೋಕಾಃ ಸಮಸ್ತಾಃ ಸುಖಿನೋ ಭವಂತು||

ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ|

ದೇಶೋಽಯಂ ಕ್ಷೋಭರಹಿತೋ ಬ್ರಾಹ್ಮಣಾಃ ಸಂತು ನಿರ್ಭಯಾಃ||

ಅಪುತ್ರಾಃ ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ|

ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಮ್||

ಕಾಯೇನ ವಾಚಾ ಮನಸೇಂದ್ರಿಯೈರ್ವಾ

ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್|

ಕರೋಮಿ ಯದ್ಯತ್ಸಕಲಂ ಪರಸ್ಮೈ

ನಾರಾಯಣಾಯೇತಿ ಸಮರ್ಪಯಾಮಿ||

ಯದಕ್ಷರಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇತ್|

ತತ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋಽಸ್ತು ತೇ||

|| ಹರಿಃ ಓಂ ಕೃಷ್ಣಾರ್ಪಣಮಸ್ತು ||

Related image

Comments are closed.