Adi Parva: Chapter 223

ಆದಿ ಪರ್ವ: ಖಾಂಡವದಾಹ ಪರ್ವ

೨೨೩

ವಿಹ್ವಲರಾದ ಜರಿತೆಯ ಮಕ್ಕಳು ಅಗ್ನಿಯನ್ನು ಸ್ತುತಿಸಿದುದು, ಅಗ್ನಿಯು ಅವರನ್ನು ರಕ್ಷಿಸಿದುದು (೧-೨೫).

01223001 ಜರಿತಾರಿರ್ವುವಾಚ|

01223001a ಪುರತಃ ಕೃಚ್ಛ್ರಕಾಲಸ್ಯ ಧೀಮಾಂಜಾಗರ್ತಿ ಪೂರುಷಃ|

01223001c ಸ ಕೃಚ್ಛ್ರಕಾಲಂ ಸಂಪ್ರಾಪ್ಯ ವ್ಯಥಾಂ ನೈವೈತಿ ಕರ್ಹಿ ಚಿತ್||

ಜರಿತಾರಿಯು ಹೇಳಿದನು: “ಕಷ್ಟಕಾಲವು ಬರುವ ಮೊದಲೇ ಧೀಮಂತ ಪುರುಷನು ಎಚ್ಚೆತ್ತಿರುತ್ತಾನೆ. ಅವನು ಎಂದೂ ಕಷ್ಟಕಾಲ ಬಂದೊದಗಿದಾಗ ವ್ಯಥಿಸುವುದಿಲ್ಲ.

01223002a ಯಸ್ತು ಕೃಚ್ಛ್ರಮಸಂಪ್ರಾಪ್ತಂ ವಿಚೇತಾ ನಾವಬುಧ್ಯತೇ|

01223002c ಸ ಕೃಚ್ಛ್ರಕಾಲೇ ವ್ಯಥಿತೋ ನ ಪ್ರಜಾನಾತಿ ಕಿಂ ಚನ||

ಕಷ್ಟಕಾಲ ಬಂದಾಗ ಎಚ್ಚೆತ್ತಿರದ ದಡ್ಡನು ಕಷ್ಟಕಾಲವು ಬಂದಾಗ ವ್ಯಥಿತನಾಗುತ್ತಾನೆ ಮತ್ತು ಅವನಿಗೆ ಏನೂ ತಿಳಿಯುವುದಿಲ್ಲ.”

01223003 ಸಾರಿಸೃಕ್ವ ಉವಾಚ|

01223003a ಧೀರಸ್ತ್ವಮಸಿ ಮೇಧಾವೀ ಪ್ರಾಣಕೃಚ್ಛ್ರಮಿದಂ ಚ ನಃ|

01223003c ಶೂರಃ ಪ್ರಾಜ್ಞೋ ಬಹೂನಾಂ ಹಿ ಭವತ್ಯೇಕೋ ನ ಸಂಶಯಃ||

ಸಾರಿಸೃಕ್ವನು ಹೇಳಿದನು: “ನೀನು ಧೀರನೂ ಮೇಧಾವಿಯೂ ಆಗಿರುವೆ. ಈಗ ನಮ್ಮ ಪ್ರಾಣವೇ ಕಷ್ಟದಲ್ಲಿದೆ. ಬಹುಜನರಲ್ಲಿ ಒಬ್ಬನೇ ಶೂರ ಮತ್ತು ಪ್ರಾಜ್ಞ ಎನ್ನುವುದರಲ್ಲಿ ಸಂಶಯವಿಲ್ಲ.”

01223004 ಸ್ತಂಬಮಿತ್ರ ಉವಾಚ|

01223004a ಜ್ಯೇಷ್ಠಸ್ತ್ರಾತಾ ಭವತಿ ವೈ ಜ್ಯೇಷ್ಠೋ ಮುಂಚತಿ ಕೃಚ್ಛ್ರತಃ|

01223004c ಜ್ಯೇಷ್ಠಶ್ಚೇನ್ನ ಪ್ರಜಾನಾತಿ ಕನೀಯಾನ್ಕಿಂ ಕರಿಷ್ಯತಿ||

ಸ್ತಂಬಮಿತ್ರನು ಹೇಳಿದನು: “ಹಿರಿಯವನು ಉಳಿಸುವವನಾಗುತ್ತಾನೆ. ಹಿರಿಯವನೇ ಕಷ್ಟದಿಂದ ಬಿಡುಗಡೆ ನೀಡುತ್ತಾನೆ. ಹಿರಿಯವನಿಗೆ ಏನುಮಾಡಬೇಕೆಂದು ತಿಳಿಯದಿದ್ದರೆ ಕಿರಿಯವಾದರೂ ಏನು ಮಾಡಿಯಾರು?”

01223005 ದ್ರೋಣ ಉವಾಚ|

01223005a ಹಿರಣ್ಯರೇತಾಸ್ತ್ವರಿತೋ ಜ್ವಲನ್ನಾಯಾತಿ ನಃ ಕ್ಷಯಂ|

01223005c ಸಪ್ತಜಿಹ್ವೋಽನಲಃ ಕ್ಷಾಮೋ ಲೇಲಿಹಾನೋಪಸರ್ಪತಿ||

ದ್ರೋಣನು ಹೇಳಿದನು: “ಜ್ವಲಿಸುತ್ತಿರುವ ಹಿರಣ್ಯರೇತನು ನಮ್ಮ ಮನೆಯ ಹತ್ತಿರ ಬರುತ್ತಿದ್ದಾನೆ. ಅನಲನು ತನ್ನ ಏಳು ನಾಲಿಗೆಗಳಿಂದ ನೆಕ್ಕುತ್ತಾ ನಮ್ಮಲ್ಲಿಗೆ ಹರಿದು ಬರುತ್ತಿದ್ದಾನೆ.””

01223006 ವೈಶಂಪಾಯನ ಉವಾಚ|

01223006a ಏವಮುಕ್ತೋ ಭ್ರಾತೃಭಿಸ್ತು ಜರಿತಾರಿರ್ವಿಭಾವಸುಂ|

01223006c ತುಷ್ಟಾವ ಪ್ರಾಂಜಲಿರ್ಭೂತ್ವಾ ಯಥಾ ತಚ್ಛೃಣು ಪಾರ್ಥಿವ||

ವೈಶಂಪಾಯನನು ಹೇಳಿದನು: “ಪಾರ್ಥಿವ! ಭ್ರಾತನ ಈ ಮಾತುಗಳನ್ನು ಕೇಳಿದ ಜರಿತಾರಿಯು ತನ್ನ ನೆತ್ತಿಯ ಮೇಲೆ ಕೈಗಳನ್ನು ಮುಗಿದು ವಿಭಾವಸುವನ್ನು ಸ್ತುತಿಸಿದ್ದುದನ್ನು ಕೇಳು.

01223007 ಜರಿತಾರಿರುವಾಚ|

01223007a ಆತ್ಮಾಸಿ ವಾಯೋಃ ಪವನಃ ಶರೀರಮುತ ವೀರುಧಾಂ|

01223007c ಯೋನಿರಾಪಶ್ಚ ತೇ ಶುಕ್ರ ಯೋನಿಸ್ತ್ವಮಸಿ ಚಾಂಭಸಃ||

ಜರಿತಾರಿಯು ಹೇಳಿದನು: “ನೀನು ವಾಯುವಿನ ಆತ್ಮ! ಪವನ! ನೀನು ಔಷಧ ಮೂಲಿಕೆಗಳ ಶರೀರ. ನೀರು ನಿನ್ನ ಮೂಲ. ನೀನು ಶುಕ್ರನ ಮೂಲ. ಮತ್ತು ನೀನು ನೀರಿನ ಮೂಲವೂ ಹೌದು.

01223008a ಊರ್ಧ್ವಂ ಚಾಧಶ್ಚ ಗಚ್ಛಂತಿ ವಿಸರ್ಪಂತಿ ಚ ಪಾರ್ಶ್ವತಃ|

01223008c ಅರ್ಚಿಷಸ್ತೇ ಮಹಾವೀರ್ಯ ರಶ್ಮಯಃ ಸವಿತುರ್ಯಥಾ||

ಮಹಾವೀರ! ಸೂರ್ಯನ ರಷ್ಮಿಗಳಂತೆ ನಿನ್ನ ಜ್ವಾಲೆಗಳು ಮೇಲೆ, ಕೆಳಗೆ, ಪಕ್ಕದಲ್ಲಿ ಹರಡುತ್ತವೆ.”

01223009 ಸಾರಿಸೃಕ್ವ ಉವಾಚ|

01223009a ಮಾತಾ ಪ್ರಪನ್ನಾ ಪಿತರಂ ನ ವಿದ್ಮಃ

         ಪಕ್ಷಾಶ್ಚ ನೋ ನ ಪ್ರಜಾತಾಬ್ಜಕೇತೋ|

01223009c ನ ನಸ್ತ್ರಾತಾ ವಿದ್ಯತೇಽಗ್ನೇ ತ್ವದನ್ಯಸ್

                        ತಸ್ಮಾದ್ಧಿ ನಃ ಪರಿರಕ್ಷೈಕವೀರ||

ಸಾರಿಸೃಕ್ವನು ಹೇಳಿದನು: “ಮಾತೆಯು ತೊರೆದಿದ್ದಾಳೆ. ತಂದೆಯನ್ನು ತಿಳಿದಿಲ್ಲ. ಮೋಡಗಳಂತ ಹೊಗೆಯುಳ್ಳವನೇ! ನಮ್ಮ ರೆಕ್ಕೆಗಳು ಇನ್ನೂ ಬೆಳೆದಿಲ್ಲ. ಅಗ್ನಿ! ನಿನ್ನನ್ನು ಬಿಟ್ಟು ಬೇರೆ ಯಾವ ತ್ರಾತರನ್ನೂ ನಾವು ಬಲ್ಲೆವು. ಆದುದರಿಂದ ಏಕೈಕವೀರ! ನಮ್ಮನ್ನು ಪರಿರಕ್ಷಿಸು.

01223010a ಯದಗ್ನೇ ತೇ ಶಿವಂ ರೂಪಂ ಯೇ ಚ ತೇ ಸಪ್ತ ಹೇತಯಃ|

01223010c ತೇನ ನಃ ಪರಿರಕ್ಷಾದ್ಯ ಈಡಿತಃ ಶರಣೈಷಿಣಃ|

ಅಗ್ನಿ! ನಿನ್ನ ಶಿವರೂಪದಿಂದ ಮತ್ತು ನಿನ್ನ ಏಳು ಜ್ವಾಲೆಗಳಿಂದ ನಿನ್ನ ಶರಣುಬಂದಿರುವ ನಮ್ಮನ್ನು ಕಷ್ಟದಿಂದ ಪರಿರಕ್ಷಿಸು.

01223011a ತ್ವಮೇವೈಕಸ್ತಪಸೇ ಜಾತವೇದೋ

                        ನಾನ್ಯಸ್ತಪ್ತಾ ವಿದ್ಯತೇ ಗೋಷು ದೇವ|

01223011c ಋಷೀನಸ್ಮಾನ್ಬಾಲಕಾನ್ಪಾಲಯಸ್ವ

                        ಪರೇಣಾಸ್ಮಾನ್ಪ್ರೈಹಿ ವೈ ಹವ್ಯವಾಹ|

ನೀನೇ ಏಕೈಕ ತಪಸ್ವಿ. ಜಾತವೇದ! ದೇವ! ನಿನ್ನಷ್ಟು ಉರಿಯುಳ್ಳವರು ಲೋಕದಲ್ಲಿಯೇ ಬೇರೆ ಇಲ್ಲ. ಬಾಲಕ ಋಷಿಗಳಾದ ನಮ್ಮನ್ನು ಪಾಲಿಸು. ಹವ್ಯವಾಹ! ನಮ್ಮನ್ನು ದಾಟಿ ಹೋಗು.”

01223012 ಸ್ತಂಬಮಿತ್ರ ಉವಾಚ|

01223012a ಸರ್ವಮಗ್ನೇ ತ್ವಮೇವೈಕಸ್ತ್ವಯಿ ಸರ್ವಮಿದಂ ಜಗತ್|

01223012c ತ್ವಂ ಧಾರಯಸಿ ಭೂತಾನಿ ಭುವನಂ ತ್ವಂ ಬಿಭರ್ಷಿ ಚ||

ಸ್ತಂಬಮಿತ್ರನು ಹೇಳಿದನು: “ಅಗ್ನಿ! ಸರ್ವವೂ ನೀನೇ! ಈ ಸರ್ವ ಜಗತ್ತೂ ನಿನ್ನಲ್ಲಿಯೇ ಇದೆ. ನಿನ್ನ ಮೇಲೆ ವಿಶ್ವವೇ ನಿಂತಿದೆ. ನೀನು ಇರುವ ಎಲ್ಲವುಗಳನ್ನೂ ಪೋಷಿಸುತ್ತೀಯೆ.

01223013a ತ್ವಮಗ್ನಿರ್ಹವ್ಯವಾಹಸ್ತ್ವಂ ತ್ವಮೇವ ಪರಮಂ ಹವಿಃ|

01223013c ಮನೀಷಿಣಸ್ತ್ವಾಂ ಯಜಂತೇ ಬಹುಧಾ ಚೈಕಧೈವ ಚ||

ಅಗ್ನಿ! ನೀನು ಹವ್ಯವಾಹನ! ನೀನೇ ಪರಮ ಹವಿಸ್ಸು. ಮನುಷ್ಯರು ನಿನ್ನಲ್ಲಿ ಯಜಿಸುತ್ತಾರೆ.

01223014a ಸೃಷ್ಟ್ವಾ ಲೋಕಾಂಸ್ತ್ರೀನಿಮಾನ್ ಹವ್ಯವಾಹ

                        ಪ್ರಾಪ್ತೇ ಕಾಲೇ ಪಚಸಿ ಪುನಃ ಸಮಿದ್ಧಃ|

01223014c ಸರ್ವಸ್ಯಾಸ್ಯ ಭುವನಸ್ಯ ಪ್ರಸೂತಿಸ್

                        ತ್ವಮೇವಾಗ್ನೇ ಭವಸಿ ಪುನಃ ಪ್ರತಿಷ್ಠಾ||

ಹವ್ಯವಾಹನ! ಈ ಮೂರೂ ಲೋಕಗಳನ್ನು ರಚಿಸಿದವನೂ ನೀನೇ! ಕಾಲ ಬಂದಾಗ ಪುನಃ ಅವುಗಳನ್ನು ಸಮಿದ್ಧಗಳಂತೆ ಸುಡುತ್ತೀಯೆ. ಅಗ್ನಿ! ಈ ಸರ್ವ ಭುವನಗಳ ಪ್ರಸೂತಿಯು ನೀನೇ ಮತ್ತು ಪುನಃ ಅವು ನಿನ್ನಲ್ಲಿಗೇ ಹಿಂದಿರುಗುತ್ತವೆ.

01223015a ತ್ವಮನ್ನಂ ಪ್ರಾಣಿನಾಂ ಭುಕ್ತಮಂತರ್ಭೂತೋ ಜಗತ್ಪತೇ|

01223015c ನಿತ್ಯಂ ಪ್ರವೃದ್ಧಃ ಪಚಸಿ ತ್ವಯಿ ಸರ್ವಂ ಪ್ರತಿಷ್ಠಿತಂ|

ಜಗತ್ಪತೇ! ನೀನು ಪ್ರಾಣಿಗಳು ತಿಂದ ಆಹಾರವನ್ನು ಜೀರ್ಣಿಸುತ್ತೀಯೆ. ನಿತ್ಯವೂ ಪ್ರಬುದ್ಧನಾದ ನಿನ್ನ ಮೇಲೆ ಸರ್ವವೂ ಪ್ರತಿಷ್ಠಿತವಾಗಿದೆ.”

01223016 ದ್ರೋಣ ಉವಾಚ|

01223016a ಸೂರ್ಯೋ ಭೂತ್ವಾ ರಶ್ಮಿಭಿರ್ಜಾತವೇದೋ

                        ಭೂಮೇರಂಭೋ ಭೂಮಿಜಾತಾನ್ರಸಾಂಶ್ಚ|

01223016c ವಿಶ್ವಾನಾದಾಯ ಪುನರುತ್ಸರ್ಗಕಾಲೇ

                        ಸೃಷ್ಟ್ವಾ ವೃಷ್ಟ್ಯಾ ಭಾವಯಸೀಹ ಶುಕ್ರ||

ದ್ರೋಣನು ಹೇಳಿದನು: “ಜಾತವೇದ! ಸೂರ್ಯನಾಗಿ ನೀನು ನಿನ್ನ ರಶ್ಮಿಗಳ ಮೂಲಕ ಭೂಮಿಯ ನೀರು ಮತ್ತು ರಸಗಳನ್ನು ಎಳೆದುಕೊಳ್ಳುತ್ತೀಯೆ. ಶುಕ್ರ! ಅವೆಲ್ಲವನ್ನೂ ಹೀರಿಕೊಂಡು ಪುನಃ ಉತ್ಸರ್ಗಕಾಲದಲ್ಲಿ ಮಳೆಯನ್ನಾಗಿ ಸೃಷ್ಟಿಸಿ ಸುರಿಸುತ್ತೀಯೆ!

01223017a ತ್ವತ್ತ ಏತಾಃ ಪುನಃ ಶುಕ್ರ ವೀರುಧೋ ಹರಿತಚ್ಛದಾಃ|

01223017c ಜಾಯಂತೇ ಪುಷ್ಕರಿಣ್ಯಶ್ಚ ಸಮುದ್ರಶ್ಚ ಮಹೋದಧಿಃ||

ಶುಕ್ರ! ನಿನ್ನಿಂದ ಪುನಃ ಔಷಧ ಹಸಿರುಗಳು, ಪುಷ್ಕರಣಿಗಳು ಮತ್ತು ಮಹೋದಧಿ ಸಮುದ್ರಗಳು ಜೀವತಾಳುತ್ತವೆ

01223018a ಇದಂ ವೈ ಸದ್ಮ ತಿಗ್ಮಾಂಶೋ ವರುಣಸ್ಯ ಪರಾಯಣಂ|

01223018c ಶಿವಸ್ತ್ರಾತಾ ಭವಾಸ್ಮಾಕಂ ಮಾಸ್ಮಾನದ್ಯ ವಿನಾಶಯ||

ತಿಗ್ಮಾಂಶು! ನಿನ್ನ ಈ ಪೀಠವು ವರುಣನ ಪರಾಯಣ! ನೀನು ಶಿವಸ್ರಾತ! ಆದುದರಿಂದ ನಮ್ಮನ್ನು ಇಂದು ವಿನಾಶಮಾಡಬೇಡ!

01223019a ಪಿಂಗಾಕ್ಷ ಲೋಹಿತಗ್ರೀವ ಕೃಷ್ಣವರ್ತ್ಮನ್ ಹುತಾಶನ|

01223019c ಪರೇಣ ಪ್ರೈಹಿ ಮುಂಚಾಸ್ಮಾನ್ಸಾಗರಸ್ಯ ಗೃಹಾನಿವ||

ಪಿಂಗಾಕ್ಷ! ಲೋಹಿತಗ್ರೀವ! ಕೃಷ್ಣವರ್ತ್ಮನ್! ಹುತಾಶನ! ನಮ್ಮನ್ನು ದಾಟಿಹೋಗಿ ಸಾಗರಗೃಹವನ್ನು ಬಿಟ್ಟುಬಿಡುವಂತೆ ನಮ್ಮನ್ನು ಬಿಟ್ಟುಬಿಡು.””

01223020 ವೈಶಂಪಾಯನ ಉವಾಚ|

01223020a ಏವಮುಕ್ತೋ ಜಾತವೇದಾ ದ್ರೋಣೇನಾಕ್ಲಿಷ್ಟಕರ್ಮಣಾ|

01223020c ದ್ರೋಣಮಾಹ ಪ್ರತೀತಾತ್ಮಾ ಮಂದಪಾಲಪ್ರತಿಜ್ಞಯಾ||

ವೈಶಂಪಾಯನನು ಹೇಳಿದನು: “ಅಕ್ಲಿಷ್ಟಕರ್ಮಿ ದ್ರೋಣನು ಈ ರೀತಿ ಜಾತವೇದನನ್ನು ಸ್ತುತಿಸಲಾಗಿ ಪ್ರೀತಾತ್ಮ ಅಗ್ನಿಯು ಮಂದಾಪಾಲನಿಗೆ ತಾನು ಮಾಡಿದ್ದ ಪ್ರತಿಜ್ಞೆಯಂತೆ ದ್ರೋಣನಿಗೆ ಹೇಳಿದನು:

01223021a ಋಷಿರ್ದ್ರೋಣಸ್ತ್ವಮಸಿ ವೈ ಬ್ರಹ್ಮೈತದ್ವ್ಯಾಹೃತಂ ತ್ವಯಾ|

01223021c ಈಪ್ಸಿತಂ ತೇ ಕರಿಷ್ಯಾಮಿ ನ ಚ ತೇ ವಿದ್ಯತೇ ಭಯಂ||

“ದ್ರೋಣ! ನೀನು ಓರ್ವ ಋಷಿ. ನೀನು ಹೇಳಿದ್ದುದೇ ಬ್ರಹ್ಮ. ನಿನ್ನ ಈಪ್ಸಿತವನ್ನು ಪೂರೈಸುತ್ತೇನೆ, ನಿನ್ನಲ್ಲಿ ಯಾವುದೇ ಭಯವೂ ಇಲ್ಲದಿರಲಿ.

01223022a ಮಂದಪಾಲೇನ ಯೂಯಂ ಹಿ ಮಮ ಪೂರ್ವಂ ನಿವೇದಿತಾಃ|

01223022c ವರ್ಜಯೇಃ ಪುತ್ರಕಾನ್ಮಹ್ಯಂ ದಹನ್ದಾವಮಿತಿ ಸ್ಮ ಹ||

ಇದರ ಹಿಂದೆಯೇ ಮಂದಪಾಲನು ನಿಮ್ಮೆಲ್ಲರ ಕುರಿತು ಹೇಳಿದ್ದನು. ವನವನ್ನು ದಹಿಸುವಾಗ ನನ್ನ ಪುತ್ರಕರನ್ನು ಬಿಟ್ಟುಬಿಡು ಎಂದು ಹೇಳಿದ್ದನು.

01223023a ಯಚ್ಚ ತದ್ವಚನಂ ತಸ್ಯ ತ್ವಯಾ ಯಚ್ಚೇಹ ಭಾಷಿತಂ|

01223023c ಉಭಯಂ ಮೇ ಗರೀಯಸ್ತದ್ಬ್ರೂಹಿ ಕಿಂ ಕರವಾಣಿ ತೇ|

01223023e ಭೃಶಂ ಪ್ರೀತೋಽಸ್ಮಿ ಭದ್ರಂ ತೇ ಬ್ರಹ್ಮನ್ಸ್ತೋತ್ರೇಣ ತೇ ವಿಭೋ||

ಅವನ ಮಾತುಗಳು ಮತ್ತು ನೀನು ಈಗತಾನೆ ಹೇಳಿದ್ದುದು ಇವೆರಡೂ ನನಗೆ ಮಹತ್ವದ್ದು. ಆದುದರಿಂದ ಹೇಳು. ನಾನು ನಿನಗೆ ಏನು ಮಾಡಬೇಕು? ಬ್ರಹ್ಮನ್! ವಿಭೋ! ನಿನ್ನ ಈ ಸ್ತುತಿಯಿಂದ ನಾನು ಅತ್ಯಂತ ಪ್ರೀತನಾಗಿದ್ದೇನೆ. ನಿನಗೆ ಮಂಗಳವಾಗಲಿ.”

01223024 ದ್ರೋಣ ಉವಾಚ|

01223024a ಇಮೇ ಮಾರ್ಜಾರಕಾಃ ಶುಕ್ರ ನಿತ್ಯಮುದ್ವೇಜಯಂತಿ ನಃ|

01223024c ಏತಾನ್ಕುರುಷ್ವ ದಂಷ್ಟ್ರಾಸು ಹವ್ಯವಾಹ ಸಬಾಂಧವಾನ್||

ದ್ರೋಣನು ಹೇಳಿದನು: “ಶುಕ್ರ! ಈ ಬೆಕ್ಕು ನಮ್ಮನ್ನು ನಿತ್ಯವೂ ಕಾಡಿಸುತ್ತಿದೆ. ಹವ್ಯವಾಹ! ಬಂಧುಗಳೊಂದಿಗೆ ಇದನ್ನು ಕಬಳಿಸು!””

01223025 ವೈಶಂಪಾಯನ ಉವಾಚ|

01223025a ತಥಾ ತತ್ಕೃತವಾನ್ವಹ್ನಿರಭ್ಯನುಜ್ಞಾಯ ಶಾಙೃಕಾನ್|

01223025c ದದಾಹ ಖಾಂಡವಂ ಚೈವ ಸಮಿದ್ಧೋ ಜನಮೇಜಯ||

ವೈಶಂಪಾಯನನು ಹೇಳಿದನು: “ಜನಮೇಜಯ! ಹಾಗೆಯೇ ಮಾಡಿದ ವಹ್ನಿಯು ಸಾರಂಗಗಳನ್ನು ಕಳುಹಿಸಿಕೊಟ್ಟನು ಮತ್ತು ಖಾಂಡವವನ್ನು ಸಮಿತ್ತದಂತೆ ಸುಟ್ಟುಹಾಕಿದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಖಾಂಡವದಾಹಪರ್ವಣಿ ಶಾಂಗೃಕೋಪಾಖ್ಯಾನೇ ತ್ರಯೋವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಖಾಂಡವದಾಹಪರ್ವದಲ್ಲಿ ಶಾಂಗೃಕೋಪಾಖ್ಯಾನದಲ್ಲಿ ಇನ್ನೂರಾ ಇಪ್ಪತ್ತ್ಮೂರನೆಯ ಅಧ್ಯಾಯವು.

Related image

Comments are closed.