Adi Parva: Chapter 204

ಆದಿ ಪರ್ವ: ಅರ್ಜುನವನವಾಸ ಪರ್ವ

೨೦೪

ತಿಲೋತ್ತಮೆಯು ಸುಂದೋಪಸುಂದರಿರುವಲ್ಲಿಗೆ ಬಂದುದು (೧-೧೦). ಅವಳನ್ನು ಪಡೆಯಲೋಸುಗ ಸಹೋದರ ಅಸುರರು ಪರಸ್ಪರರನ್ನು ಹೊಡೆದು ತೀರಿಕೊಂಡಿದುದು (೧೧-೨೦). ತಿಲೋತ್ತಮೆಗೆ ಬ್ರಹ್ಮನಿಂದ ವರ, ಸುಂದೋಪಸುಂದರ ಕಥೆಯ ಸಮಾಪ್ತಿ (೨೧-೨೬). ಪಾಂಡವರು ಅನ್ಯೋನ್ಯರಲ್ಲಿ ದ್ರೌಪದಿಯ ಕುರಿತಾಗಿ ಒಪ್ಪಂದ ಮಾಡಿಕೊಂಡಿದುದು (೨೭-೩೦).

01204001 ನಾರದ ಉವಾಚ|

01204001a ಜಿತ್ವಾ ತು ಪೃಥಿವೀಂ ದೈತ್ಯೌ ನಿಃಸಪತ್ನೌ ಗತವ್ಯಥೌ|

01204001c ಕೃತ್ವಾ ತ್ರೈಲೋಕ್ಯಮವ್ಯಗ್ರಂ ಕೃತಕೃತ್ಯೌ ಬಭೂವತುಃ||

ನಾರದನು ಹೇಳಿದನು: “ಆ ದೈತ್ಯರೀರ್ವರು ಪೃಥ್ವಿಯನ್ನು ಜಯಿಸಿ, ಎದುರಾಳಿಗಳಿಲ್ಲದೇ, ನಿಶ್ಚಿಂತರಾಗಿ, ಮೂರೂ ಲೋಕಗಳನ್ನೂ ತಮ್ಮದಾಗಿಸಿಕೊಂಡು ಕೃತಕೃತ್ಯರಾಗಿದ್ದರು.

01204002a ದೇವಗಂಧರ್ವಯಕ್ಷಾಣಾಂ ನಾಗಪಾರ್ಥಿವರಕ್ಷಸಾಂ|

01204002c ಆದಾಯ ಸರ್ವರತ್ನಾನಿ ಪರಾಂ ತುಷ್ಟಿಮುಪಾಗತೌ|

ದೇವ-ಗಂಧರ್ವ-ಯಕ್ಷ-ನಾಗ-ಪಾರ್ಥಿವ-ರಾಕ್ಷಸರ ಸರ್ವ ರತ್ನಗಳನ್ನೂ ಪಡೆದು ಪರಾತುಷ್ಟರಾಗಿದ್ದರು.

01204003a ಯದಾ ನ ಪ್ರತಿಷೇದ್ಧಾರಸ್ತಯೋಃ ಸಂತೀಹ ಕೇ ಚನ|

01204003c ನಿರುದ್ಯೋಗೌ ತದಾ ಭೂತ್ವಾ ವಿಜಹ್ರಾತೇಽಮರಾವಿವ||

01204004a ಸ್ತ್ರೀಭಿರ್ಮಾಲ್ಯೈಶ್ಚ ಗಂಧೈಶ್ಚ ಭಕ್ಷೈರ್ಭೋಜ್ಯೈಶ್ಚ ಪುಷ್ಕಲೈಃ|

01204004c ಪಾನೈಶ್ಚ ವಿವಿಧೈರ್ಹೃದ್ಯೈಃ ಪರಾಂ ಪ್ರೀತಿಮವಾಪತುಃ||

ಪ್ರತಿಸ್ಪರ್ಧಿಗಳು ಯಾರೂ ಎಲ್ಲಿಯೂ ಉಳಿಯದೇ ಇಲ್ಲವಾದುದರಿಂದ ನಿರುದ್ಯೋಗಿಗಳಾದ ಅಮರರಂತೆ ಅವರು ಪುಷ್ಕಲ ಸ್ತ್ರೀಯರು, ಮಾಲೆಗಳು, ಗಂಧ, ಭಕ್ಷ-ಭೋಜ್ಯಗಳಿಂದ ವಿಹರಿಸತೊಡಗಿದರು.

01204005a ಅಂತಃಪುರೇ ವನೋದ್ಯಾನೇ ಪರ್ವತೋಪವನೇಷು ಚ|

01204005c ಯಥೇಪ್ಸಿತೇಷು ದೇಶೇಷು ವಿಜಹ್ರಾತೇಽಮರಾವಿವ||

ಅಮರರಂತೆ ಅವರು ಅಂತಃಪುರದಲ್ಲಿ, ವನೋದ್ಯಾನಗಳಲ್ಲಿ, ಪರ್ವತ ಉಪವನಗಳಲ್ಲಿ ಮತ್ತು ಮನಬಂದ ಪ್ರದೇಶಗಳಲ್ಲಿ ವಿಹರಿಸಿದರು.

01204006a ತತಃ ಕದಾ ಚಿದ್ವಿಂಧ್ಯಸ್ಯ ಪೃಷ್ಠೇ ಸಮಶಿಲಾತಲೇ|

01204006c ಪುಷ್ಪಿತಾಗ್ರೇಷು ಶಾಲೇಷು ವಿಹಾರಮಭಿಜಗ್ಮತುಃ||

ಒಮ್ಮೆ ಅವರು ವಿಂಧ್ಯದ ಹಿಂಭಾಗದಲ್ಲಿ ಸಮಶಿಲಾತಲದಲ್ಲಿ ಹೂಬಿಟ್ಟ ಎತ್ತರ ಶಾಲವೃಕ್ಷಗಳ ಮಧ್ಯೆ ವಿಹರಿಸುತ್ತಿದ್ದರು.

01204007a ದಿವ್ಯೇಷು ಸರ್ವಕಾಮೇಷು ಸಮಾನೀತೇಷು ತತ್ರ ತೌ|

01204007c ವರಾಸನೇಷು ಸಂಹೃಷ್ಟೌ ಸಹ ಸ್ತ್ರೀಭಿರ್ನಿಷೇದತುಃ||

ಸರ್ವಕಾಮಗಳನ್ನೂ ಪೂರೈಸಬಲ್ಲ ವಸ್ತುಗಳನ್ನು ಅಲ್ಲಿಗೆ ಕೊಂಡೊಯ್ದಿದ್ದರು. ಸ್ತ್ರೀಯರೊಂದಿಗೆ ಅವರೀರ್ವರು ಸಂಹೃಷ್ಟರಾಗಿ ಶ್ರೇಷ್ಠ ಆಸನಗಳಲ್ಲಿ ಒರಗಿ ಕುಳಿತುಕೊಂಡಿದ್ದರು.

01204008a ತತೋ ವಾದಿತ್ರನೃತ್ತಾಭ್ಯಾಮುಪಾತಿಷ್ಠಂತ ತೌ ಸ್ತ್ರಿಯಃ|

01204008c ಗೀತೈಶ್ಚ ಸ್ತುತಿಸಮ್ಯುಕ್ತೈಃ ಪ್ರೀತ್ಯರ್ಥಮುಪಜಗ್ಮಿರೇ||

ಅಲ್ಲಿ ಅವರನ್ನು ಸಂತೋಷಗೊಳಿಸಲು ಸ್ತ್ರೀಯರು ವಾದ್ಯ ನುಡಿಸುತ್ತಾ, ನೃತ್ಯ ಮಾಡುತ್ತಾ, ಸ್ತುತಿಸಂಯುಕ್ತ ಗೀತೆಗಳನ್ನು ಹಾಡುತ್ತಾ ನಿಂತಿದ್ದರು.

01204009a ತತಸ್ತಿಲೋತ್ತಮಾ ತತ್ರ ವನೇ ಪುಷ್ಪಾಣಿ ಚಿನ್ವತೀ|

01204009c ವೇಷಮಾಕ್ಷಿಪ್ತಮಾಧಾಯ ರಕ್ತೇನೈಕೇನ ವಾಸಸಾ||

ಆಗ ಆ ವನದಲ್ಲಿ ತಿಲೋತ್ತಮೆಯು, ಕಾಮವನ್ನು ಹೆಚ್ಚಿಸುವ ಒಂದೇ ಒಂದು ಕೆಂಪು ವಸ್ತ್ರವನ್ನುಟ್ಟು, ಹೂಗಳನ್ನು ಕೊಯ್ಯುತ್ತಾ ಕಾಣಿಸಿಕೊಂಡಳು.

01204010a ನದೀತೀರೇಷು ಜಾತಾನ್ಸಾ ಕರ್ಣಿಕಾರಾನ್ವಿಚಿನ್ವತೀ|

01204010c ಶನೈರ್ಜಗಾಮ ತಂ ದೇಶಂ ಯತ್ರಾಸ್ತಾಂ ತೌ ಮಹಾಸುರೌ||

ನದೀತೀರದಲ್ಲಿ ಹುಟ್ಟಿದ್ದ ಕರ್ಣಿಕಾರಗಳನ್ನು ಕೊಯ್ಯುತ್ತಾ ಅವಳು ನಿಧಾನವಾಗಿ ಆ ಮಹಾಸುರರು ಇದ್ದ ಸ್ಥಳಕ್ಕೆ ಬಂದಳು.

01204011a ತೌ ತು ಪೀತ್ವಾ ವರಂ ಪಾನಂ ಮದರಕ್ತಾಂತಲೋಚನೌ|

01204011c ದೃಷ್ಟ್ವೈವ ತಾಂ ವರಾರೋಹಾಂ ವ್ಯಥಿತೌ ಸಂಬಭೂವತುಃ||

ಶ್ರೇಷ್ಠ ಮದಿರವನ್ನು ಕುಡಿದ ಮದೋನ್ಮತ್ತ ರಕ್ತಾಂತಲೋಚನರು ಆ ವರಾರೋಹೆಯನ್ನು ಕಂಡೊಡನೆಯೇ ವ್ಯಥಿತರಾದರು.

01204012a ತಾವುತ್ಪತ್ಯಾಸನಂ ಹಿತ್ವಾ ಜಗ್ಮತುರ್ಯತ್ರ ಸಾ ಸ್ಥಿತಾ|

01204012c ಉಭೌ ಚ ಕಾಮಸಮ್ಮತ್ತಾವುಭೌ ಪ್ರಾರ್ಥಯತಶ್ಚ ತಾಂ||

ಕಾಮಸಮನ್ವಿತ ಅವರಿಬ್ಬರೂ ತಮ್ಮ ಆಸನಗಳಿಂದ ಜಿಗಿದೆದ್ದು ಅವಳಿದ್ದ ಕಡೆ ಹೋಗಿ ಅವಳನ್ನು ಯಾಚಿಸಿದರು.

01204013a ದಕ್ಷಿಣೇ ತಾಂ ಕರೇ ಸುಭ್ರೂಂ ಸುಂದೋ ಜಗ್ರಾಹ ಪಾಣಿನಾ|

01204013c ಉಪಸುಂದೋಽಪಿ ಜಗ್ರಾಹ ವಾಮೇ ಪಾಣೌ ತಿಲೋತ್ತಮಾಂ||

ಸುಂದನು ಆ ಸುಭ್ರುವಿನ ಎಡಗೈಯನ್ನು ಹಿಡಿದನು ಮತ್ತು ಉಪಸುಂದನು ತಿಲೋತ್ತಮೆಯ ಬಲ ಕೈಯನ್ನು ಹಿಡಿದನು.

01204014a ವರಪ್ರದಾನಮತ್ತೌ ತಾವೌರಸೇನ ಬಲೇನ ಚ|

01204014c ಧನರತ್ನಮದಾಭ್ಯಾಂ ಚ ಸುರಾಪಾನಮದೇನ ಚ||

01204015a ಸರ್ವೈರೇತೈರ್ಮದೈರ್ಮತ್ತಾವನ್ಯೋನ್ಯಂ ಭ್ರುಕುಟೀಕೃತೌ|

01204015  ತೌ ಕಟಾಕ್ಷೇಣ ದೈತ್ಯೇಂದ್ರಾವಾಕರ್ಷತಿ ಮುಹುರ್ಮುಹುಃ||

01204015  ದಕ್ಷಿಣೇನ ಕಟಾಕ್ಷೇಣ ಸುಂದಂ ಜಗ್ರಾಹ ಕಾಮಿನೀ|

01204015  ವಾಮೇನೈವ ಕಟಾಕ್ಷೇಣ ಉಪಸುಂದಂ ಜಿಘೃಕ್ಷತೀ||

01204015  ಗಂದಾಭರಣರೂಪೈಸ್ತೌ ವ್ಯಾಮೋಹಂ ಜಗ್ಮತುಸ್ತದಾ|

01204015c ಮದಕಾಮಸಮಾವಿಷ್ಟೌ ಪರಸ್ಪರಮಥೋಚತುಃ||

ವರಪ್ರದಾನಮತ್ತರಾದ, ದೇಹಬಲದಿಂದ ಹಿಗ್ಗಿದ್ದ, ಕೂಡಿಟ್ಟ ಧನರತ್ನಗಳಿಂದ, ಸುರಾಪಾನಮದದಿಂದ, ಹೀಗೆ ಎಲ್ಲ ರೀತಿಗಳಲ್ಲಿ ಹುಚ್ಚಾದ ಅವರು ಅನ್ಯೋನ್ಯರನ್ನು ದುರುಗುಟ್ಟಿ ನೋಡಿದರು. ಆ ಮದಕಾಮಸಮಾವಿಷ್ಟರು ಪರಸ್ಪರರಲ್ಲಿ ಕೂಗಾಡಿದರು.

01204016a ಮಮ ಭಾರ್ಯಾ ತವ ಗುರುರಿತಿ ಸುಂದೋಽಭ್ಯಭಾಷತ|

01204016c ಮಮ ಭಾರ್ಯಾ ತವ ವಧೂರುಪಸುಂದೋಽಭ್ಯಭಾಷತ||

“ನನ್ನ ಹೆಂಡತಿ ನಿನಗೆ ಹಿರಿಯವಳು!” ಎಂದು ಸುಂದನು ಹೇಳಿದನು. “ನನ್ನ ಹೆಂಡತಿ ನಿನಗೆ ಸೊಸೆ!” ಎಂದು ಉಪಸುಂದನು ಹೇಳಿದನು.

01204017a ನೈಷಾ ತವ ಮಮೈಷೇತಿ ತತ್ರ ತೌ ಮನ್ಯುರಾವಿಶತ್|

01204017  ತಸ್ಯಾ ರೂಪೇಣ ಸಮ್ಮತ್ತೌ ವಿಗತಸ್ನೇಹಸೌಹೃದೌ||

01204017c ತಸ್ಯಾ ಹೇತೋರ್ಗದೇ ಭೀಮೇ ತಾವುಭಾವಪ್ಯಗೃಹ್ಣತಾಂ||

ಸಿಟ್ಟಿನಿಂದ ಆವೇಶಗೊಂಡ ಅವರು “ನಿನ್ನವಳಲ್ಲ! ನನ್ನವಳು!” ಎಂದು ಅವಳ ಸಲುವಾಗಿ ಭಯಂಕರ ಗದೆಗಳನ್ನು ಎತ್ತಿಕೊಂಡರು.

01204018a ತೌ ಪ್ರಗೃಹ್ಯ ಗದೇ ಭೀಮೇ ತಸ್ಯಾಃ ಕಾಮೇನ ಮೋಹಿತೌ|

01204018c ಅಹಂ ಪೂರ್ವಮಹಂ ಪೂರ್ವಮಿತ್ಯನ್ಯೋನ್ಯಂ ನಿಜಘ್ನತುಃ||

ಅವರವರ ಭಯಂಕರ ಗದೆಗಳನ್ನು ಹಿಡಿದು ಕಾಮಮೋಹಿತರಾದ ಅವರು ನಾನು ಮೊದಲು ತಾನು ಮೊದಲು ಎನ್ನುತ್ತಾ ಅನ್ಯೋನ್ಯರನ್ನು ಹೊಡೆದರು.

01204019a ತೌ ಗದಾಭಿಹತೌ ಭೀಮೌ ಪೇತತುರ್ಧರಣೀತಲೇ|

01204019c ರುಧಿರೇಣಾವಲಿಪ್ತಾಂಗೌ ದ್ವಾವಿವಾರ್ಕೌ ನಭಶ್ಚ್ಯುತೌ||

ಗದೆಗಳಿಂದ ಹೊಡೆಯಲ್ಪಟ್ಟ ಆ ಭಯಂಕರರು ರಕ್ತಲಿಪ್ತಾಂಗರಾಗಿ ಎರಡು ಸೂರ್ಯಗಳು ನಭದಿಂದ ಬೀಳುವಂತೆ ಭೂಮಿಯ ಮೇಲೆ ಬಿದ್ದರು.

01204020a ತತಸ್ತಾ ವಿದ್ರುತಾ ನಾರ್ಯಃ ಸ ಚ ದೈತ್ಯಗಣಸ್ತದಾ|

01204020c ಪಾತಾಲಮಗಮತ್ಸರ್ವೋ ವಿಷಾದಭಯಕಂಪಿತಃ||

ಆಗ ಅಲ್ಲಿದ್ದ ನಾರಿಯರು ಮತ್ತು ದೈತ್ಯಗಣ ಎಲ್ಲವೂ ವಿಷಾದಭಯಕಂಪಿತರಾಗಿ ಪಾತಾಲವನ್ನು ಸೇರಿದರು.

01204021a ತತಃ ಪಿತಾಮಹಸ್ತತ್ರ ಸಹ ದೇವೈರ್ಮಹರ್ಷಿಭಿಃ|

01204021c ಆಜಗಾಮ ವಿಶುದ್ಧಾತ್ಮಾ ಪೂಜಯಿಷ್ಯಂಸ್ತಿಲೋತ್ತಮಾಂ||

ಆಗ ದೇವಮಹರ್ಷಿಗಳನ್ನೊಡಗೊಂಡು ವಿಶುದ್ಧಾತ್ಮ ಪಿತಾಮಹನು ಅಲ್ಲಿಗೆ ಬಂದು ತಿಲೋತ್ತಮೆಯನ್ನು ಸತ್ಕರಿಸಿದನು.

01204022a ವರೇಣ ಚಂದಿತಾ ಸಾ ತು ಬ್ರಹ್ಮಣಾ ಪ್ರೀತಿಮೇವ ಹ|

01204022c ವರಯಾಮಾಸ ತತ್ರೈನಾಂ ಪ್ರೀತಃ ಪ್ರಾಹ ಪಿತಾಮಹಃ||

ಬ್ರಹ್ಮನು “ವರವನ್ನು ಕೇಳು!” ಎನ್ನಲು ಅವಳು ಬ್ರಹ್ಮನಿಂದ ಪ್ರೀತಿಯನ್ನೇ ವರವನ್ನಾಗಿ ಕೇಳಿದಳು. ಅವಳಿಂದ ಪ್ರೀತನಾದ ಪಿತಾಮಹನು ಹೇಳಿದನು:

01204023a ಆದಿತ್ಯಚರಿತಾಽಲ್ಲೋಕಾನ್ವಿಚರಿಷ್ಯಸಿ ಭಾಮಿನಿ|

01204023c ತೇಜಸಾ ಚ ಸುದೃಷ್ಟಾಂ ತ್ವಾಂ ನ ಕರಿಷ್ಯತಿ ಕಶ್ಚನ||

“ಭಾಮಿನಿ! ಆದಿತ್ಯರಿಂದೊಡಗೂಡಿ ಲೋಕಗಳನ್ನು ಸಂಚರಿಸುತ್ತೀಯೆ! ನಿನ್ನ ತೇಜಸ್ಸಿನಿಂದಾಗಿ ನಿನ್ನನ್ನು ಯಾರೂ ಎಂದೂ ತುಂಬಾ ಹೊತ್ತು ನೋಡಲು ಶಕ್ಯರಾಗುವುದಿಲ್ಲ!”

01204024a ಏವಂ ತಸ್ಯೈ ವರಂ ದತ್ತ್ವಾ ಸರ್ವಲೋಕಪಿತಾಮಹಃ|

01204024c ಇಂದ್ರೇ ತ್ರೈಲೋಕ್ಯಮಾಧಾಯ ಬ್ರಹ್ಮಲೋಕಂ ಗತಃ ಪ್ರಭುಃ||

ಅವಳಿಗೆ ಈ ರೀತಿ ವರವನ್ನಿತ್ತು ಸರ್ವಲೋಕಪಿತಾಮಹ ಪ್ರಭುವು ಇಂದ್ರನಿಗೆ ತ್ರೈಲೋಕ್ಯವನ್ನಿತ್ತು ಬ್ರಹ್ಮಲೋಕಕ್ಕೆ ಹೋದನು.

01204025a ಏವಂ ತೌ ಸಹಿತೌ ಭೂತ್ವಾ ಸರ್ವಾರ್ಥೇಷ್ವೇಕನಿಶ್ಚಯೌ|

01204025c ತಿಲೋತ್ತಮಾರ್ಥೇ ಸಂಕ್ರುದ್ಧಾವನ್ಯೋನ್ಯಮಭಿಜಘ್ನತುಃ||

ಈ ರೀತಿ ಎಲ್ಲ ವಿಷಯಗಳಲ್ಲಿಯೂ ಒಟ್ಟಿಗೇ ಒಂದೇ ನಿಶ್ಚಯಗಳನ್ನಿಟ್ಟುಕೊಂಡಿದ್ದ ಆ ದಾನವರು ತಿಲೋತ್ತಮೆಗಾಗಿ ಸಂಕೃದ್ಧರಾಗಿ ಅನ್ಯೋನ್ಯರನ್ನು ಸಂಹರಿಸಿದರು.

01204026a ತಸ್ಮಾದ್ಬ್ರವೀಮಿ ವಃ ಸ್ನೇಹಾತ್ಸರ್ವಾನ್ಭರತಸತ್ತಮಾನ್|

01204026c ಯಥಾ ವೋ ನಾತ್ರ ಭೇದಃ ಸ್ಯಾತ್ಸರ್ವೇಷಾಂ ದ್ರೌಪದೀಕೃತೇ|

01204026e ತಥಾ ಕುರುತ ಭದ್ರಂ ವೋ ಮಮ ಚೇತ್ಪ್ರಿಯಮಿಚ್ಛಥ||

ಭರತಸತ್ತಮರೆಲ್ಲರ ಮೇಲಿರುವ ನನ್ನ ಪ್ರೀತಿಯ ಕಾರಣದಿಂದಾಗಿ ನಾನು ನಿಮಗೆ ಹೇಳುತ್ತಿದ್ದೇನೆ. ದ್ರೌಪದಿಯ ಕಾರಣದಿಂದಾಗಿ ನಿಮ್ಮೆಲ್ಲರಲ್ಲಿ ಭೇದವುಂಟಾಗದಿರಲಿ! ನನಗೆ ಪ್ರಿಯವಾದುದನ್ನು ಮಾಡಬೇಕೆಂದರೆ ಹಾಗೆಯೇ ಮಾಡಿರಿ. ನಿಮಗೆ ಮಂಗಲವಾಗಲಿ!””

01204027 ವೈಶಂಪಾಯನ ಉವಾಚ|

01204027a ಏವಮುಕ್ತಾ ಮಹಾತ್ಮಾನೋ ನಾರದೇನ ಮಹರ್ಷಿಣಾ|

01204027c ಸಮಯಂ ಚಕ್ರಿರೇ ರಾಜಂಸ್ತೇಽನ್ಯೋನ್ಯೇನ ಸಮಾಗತಾಃ|

01204027e ಸಮಕ್ಷಂ ತಸ್ಯ ದೇವರ್ಷೇರ್ನಾರದಸ್ಯಾಮಿತೌಜಸಃ||

ವೈಶಂಪಾಯನನು ಹೇಳಿದನು: “ರಾಜನ್! ಮಹಾತ್ಮ ನಾರದ ಮಹರ್ಷಿಯು ಈ ರೀತಿ ಹೇಳಲು ಅವರು ಒಂದಾಗಿ ಆ ದೇವರ್ಷಿ ಅಮಿತತೇಜಸ್ವಿ ನಾರದನ ಸಮಕ್ಷಮದಲ್ಲಿ ಅನ್ಯೋನ್ಯರಲ್ಲಿ ಒಂದು ಒಪ್ಪಂದವನ್ನು ಮಾಡಿಕೊಂಡರು.

01204028a ದ್ರೌಪದ್ಯಾ ನಃ ಸಹಾಸೀನಮನ್ಯೋಽನ್ಯಂ ಯೋಽಭಿದರ್ಶಯೇತ್|

01204028c ಸ ನೋ ದ್ವಾದಶ ವರ್ಷಾಣಿ ಬ್ರಹ್ಮಚಾರೀ ವನೇ ವಸೇತ್||

“ದ್ರೌಪದಿಯೊಡನಿರುವವನನ್ನು ಅನ್ಯ ಯಾರೂ ನೋಡಿದರೆ ಅವನು ಬ್ರಹ್ಮಚಾರಿಯಾಗಿ ಹನ್ನೆರಡು ವರ್ಷಗಳು ವನದಲ್ಲಿ ವಾಸಿಸಬೇಕು![1]

01204029a ಕೃತೇ ತು ಸಮಯೇ ತಸ್ಮಿನ್ಪಾಂಡವೈರ್ಧರ್ಮಚಾರಿಭಿಃ|

01204029c ನಾರದೋಽಪ್ಯಗಮತ್ಪ್ರೀತ ಇಷ್ಟಂ ದೇಶಂ ಮಹಾಮುನಿಃ||

ಧರ್ಮಚಾರಿ ಪಾಂಡವರಲ್ಲಿ ಈ ಒಪ್ಪಂದ ಆಗುವಹಾಗೆ ಮಾಡಿ ಪರಮ ಪ್ರೀತ ಮಹಾಮುನಿ ನಾರದನು ಇಷ್ಟ ದೇಶಕ್ಕೆ ತೆರಳಿದನು.

01204030a ಏವಂ ತೈಃ ಸಮಯಃ ಪೂರ್ವಂ ಕೃತೋ ನಾರದಚೋದಿತೈಃ|

01204030c ನ ಚಾಭಿದ್ಯಂತ ತೇ ಸಾರ್ವೇ ತದಾನ್ಯೋನ್ಯೇನ ಭಾರತ||

ಭಾರತ! ಹೀಗೆ ನಾರದನಿಂದ ಪ್ರಚೋದಿತರಾದ ಅವರು ಮೊದಲೇ ಅನ್ಯೋನ್ಯ ಒಪ್ಪಂದವನ್ನು ಮಾಡಿಕೊಂಡು ಯಾವುದೇ ರೀತಿಯ ಭೇದಗಳಿಲ್ಲದೇ ವಾಸಿಸುತ್ತಿದ್ದರು.”

ಇತಿ ಶ್ರೀಮಹಾಭಾರತೇ ಆದಿಪರ್ವಣಿ ಅರ್ಜುನವನವಾಸಪರ್ವಣಿ ಸುಂದೋಪಸುಂದೋಪಾಖ್ಯಾನೇ ಚತುರಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದ ಆದಿಪರ್ವದಲ್ಲಿ ಅರ್ಜುನವನವಾಸಪರ್ವದಲ್ಲಿ ಸುಂದೋಪಸುಂದೋಪಾಖ್ಯಾನದಲ್ಲಿ ಇನ್ನೂರ ನಾಲ್ಕನೆಯ ಅಧ್ಯಾಯವು.

Image result for indian flowers drawing

[1]ಗೋರಖಪುರ ಸಂಪುಟದಲ್ಲಿ ಈ ಒಪ್ಪಂದದ ಇನ್ನೊಂದು ಭಾಗ ಈ ರೀತಿಯಿದೆ: ಏಕೈಕಸ್ಯ ಗೃಹೇ ಕೃಷ್ಣಾ ವಸೇದ್ವರ್ಷಮಕಲ್ಮಷಾ| ಅರ್ಥಾತ್: ಅಕಲ್ಮಶೆ ಕೃಷ್ಣೆಯು ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ವರ್ಷ ವಾಸಿಸುತ್ತಾಳೆ.

Comments are closed.