Adi Parva: Chapter 196

ಆದಿ ಪರ್ವ: ವಿದುರಾಗಮನ ಪರ್ವ

೧೯೬

ಪಾಂಡವರನ್ನು ಕರೆತರಿಸಿಕೊಂಡು ಅವರು ತಮ್ಮ ತಂದೆಯ ಸ್ಥಾನವನ್ನು ಸ್ವೀಕರಿಸುವಂತೆ ಮಾಡಬೇಕೆಂದು ದ್ರೋಣನು ಹೇಳುವುದು (೧-೧೨). ಕರ್ಣನು ಭೀಷ್ಮ ಮತ್ತು ದ್ರೋಣರ ಸಲಹೆಯನ್ನು ಟೀಕಿಸಿ ನಿಂದಿಸುವುದು (೧೩-೨೫). ಕರ್ಣನ ಟೀಕೆಗೆ ದ್ರೋಣನ ಪ್ರತಿಕ್ರಿಯೆ (೨೬-೨೮).

01196001 ದ್ರೋಣ ಉವಾಚ|

01196001a ಮಂತ್ರಾಯ ಸಮುಪಾನೀತೈರ್ಧೃತರಾಷ್ಟ್ರಹಿತೈರ್ನೃಪ|

01196001c ಧರ್ಮ್ಯಂ ಪಥ್ಯಂ ಯಶಸ್ಯಂ ಚ ವಾಚ್ಯಮಿತ್ಯನುಶುಶ್ರುಮಃ||

ದ್ರೋಣನು ಹೇಳಿದನು: “ನೃಪ ಧೃತರಾಷ್ಟ್ರನು ಮಂತ್ರಾಲೋಚನೆಗೆಂದು ಧರ್ಮ ಮತ್ತು ಯಶಸ್ಸಿನ ಕುರಿತು ಮಾತನಾಡುವ ತನ್ನ ಹಿತೈಷಿಗಳನ್ನು ಸೇರಿಸಿದ್ದಾನೆಂದು ಕೇಳಿದ್ದೇವೆ.

01196002a ಮಮಾಪ್ಯೇಷಾ ಮತಿಸ್ತಾತ ಯಾ ಭೀಷ್ಮಸ್ಯ ಮಹಾತ್ಮನಃ|

01196002c ಸಂವಿಭಜ್ಯಾಸ್ತು ಕೌಂತೇಯಾ ಧರ್ಮ ಏಷ ಸನಾತನಃ||

ನಾನೂ ಕೂಡ ಮಹಾತ್ಮ ಭೀಷ್ಮನ ಅಭಿಪ್ರಾಯಗಳನ್ನೇ ಹೊಂದಿದ್ದೇನೆ. ಕೌಂತೇಯರಿಗಾಗಿ ರಾಜ್ಯವನ್ನು ಸವಿಭಜನೆ ಮಾಡಬೇಕು. ಅದೇ ಸನಾತನ ಧರ್ಮ.

01196003a ಪ್ರೇಷ್ಯತಾಂ ದ್ರುಪದಾಯಾಶು ನರಃ ಕಶ್ಚಿತ್ಪ್ರಿಯಂವದಃ|

01196003c ಬಹುಲಂ ರತ್ನಮಾದಾಯ ತೇಷಾಮರ್ಥಾಯ ಭಾರತ||

ಭಾರತ! ತಕ್ಷಣವೇ ದ್ರುಪದನಲ್ಲಿಗೆ ಯಾರಾದರೂ ಒಳ್ಳೆಯದನ್ನೇ ಮಾತನಾಡುವವನನ್ನು ಅವರಿಗಾಗಿ ಬಹು ರತ್ನಗಳೊಂದಿಗೆ ಕಳುಹಿಸಿಕೊಡು.

01196004a ಮಿಥಃ ಕೃತ್ಯಂ ಚ ತಸ್ಮೈ ಸ ಆದಾಯ ಬಹು ಗಚ್ಛತು|

01196004c ವೃದ್ಧಿಂ ಚ ಪರಮಾಂ ಬ್ರೂಯಾತ್ತತ್ಸಮ್ಯೋಗೋದ್ಭವಾಂ ತಥಾ||

ಅವನು ಗೌರವಾರ್ಥವಾಗಿ ಬಹಳಷ್ಟು ಉಡುಗೊರೆಗಳನ್ನು ತೆಗೆದುಕೊಂಡು ಹೋಗಲಿ ಮತ್ತು ಅಲ್ಲಿ ಎರಡೂ ಕುಲಗಳ ಸಂಯೋಗದಿಂದ ಉಂಟಾದ ಪರಮ ಅಭಿವೃದ್ಧಿಯ ಕುರಿತು ಮಾತನಾಡಲಿ.

01196005a ಸಂಪ್ರೀಯಮಾಣಂ ತ್ವಾಂ ಬ್ರೂಯಾದ್ರಾಜನ್ದುರ್ಯೋಧನಂ ತಥಾ|

01196005c ಅಸಕೃದ್ದ್ರುಪದೇ ಚೈವ ಧೃಷ್ಟದ್ಯುಮ್ನೇ ಚ ಭಾರತ||

ರಾಜನ್! ಭಾರತ! ನೀನು ಮತ್ತು ದುರ್ಯೋಧನ ಈರ್ವರೂ ಸಂತೋಷಗೊಂಡಿದ್ದೀರಿ ಎಂದು ಪುನಃ ಪುನಃ ಅವನು ದೃಪದ-ದೃಷ್ಟದ್ಯುಮ್ನರ ಎದಿರು ಹೇಳಲಿ. 

01196006a ಉಚಿತತ್ವಂ ಪ್ರಿಯತ್ವಂ ಚ ಯೋಗಸ್ಯಾಪಿ ಚ ವರ್ಣಯೇತ್|

01196006c ಪುನಃ ಪುನಶ್ಚ ಕೌಂತೇಯಾನ್ಮಾದ್ರೀಪುತ್ರೌ ಚ ಸಾಂತ್ವಯನ್||

ಅವನು ಪುನಃ ಪುನಃ ಕೌಂತೇಯರು ಮತ್ತು ಮಾದ್ರೀ ಪುತ್ರರನ್ನು ಸಂತವಿಸುತ್ತಾ ಈ ಸಂಯೋಗದ ಉಚಿತತ್ವ, ಪ್ರಿಯತ್ವ ಮತ್ತು ಯೋಗಗಳನ್ನೂ ವರ್ಣಿಸಲಿ.

01196007a ಹಿರಣ್ಮಯಾನಿ ಶುಭ್ರಾಣಿ ಬಹೂನ್ಯಾಭರಣಾನಿ ಚ|

01196007c ವಚನಾತ್ತವ ರಾಜೇಂದ್ರ ದ್ರೌಪದ್ಯಾಃ ಸಂಪ್ರಯಚ್ಛತು|

01196008a ತಥಾ ದ್ರುಪದಪುತ್ರಾಣಾಂ ಸರ್ವೇಷಾಂ ಭರತರ್ಷಭ|

01196008c ಪಾಂಡವಾನಾಂ ಚ ಸರ್ವೇಷಾಂ ಕುಂತ್ಯಾ ಯುಕ್ತಾನಿ ಯಾನಿ ಚ||

ರಾಜೇಂದ್ರ! ನಿನ್ನ ವಚನದಂತೆ ಅವನು ದ್ರೌಪದಿಗೆ ಹಿರಣ್ಮಯ ಶುಭ್ರ ಬಹು ಆಭರಣಗಳನ್ನು ನೀಡಲಿ. ಭರತರ್ಷಭ! ಹಾಗೆಯೇ ದ್ರುಪದನ ಸರ್ವ ಪುತ್ರರಿಗೂ, ಸರ್ವ ಪಾಂಡವರಿಗೂ, ಮತ್ತು ಕುಂತಿಗೂ ಯುಕ್ತವಾದುದ್ದನ್ನು ನೀಡಲಿ.

01196009a ಏವಂ ಸಾಂತ್ವಸಮಾಯುಕ್ತಂ ದ್ರುಪದಂ ಪಾಂಡವೈಃ ಸಹ|

01196009c ಉಕ್ತ್ವಾಥಾನಂತರಂ ಬ್ರೂಯಾತ್ತೇಷಾಮಾಗಮನಂ ಪ್ರತಿ||

ಈ ರೀತಿ ಪಾಂಡವರೊಡನೆ ದ್ರುಪದನು ಸಂತ್ವಸಮಾಯುಕ್ತನಾದ ನಂತರ ಅವರ ಹಿಂದಿರುಗುವುದರ ಕುರಿತು ಪ್ರಸ್ತಾವಿಸಬೇಕು.

01196010a ಅನುಜ್ಞಾತೇಷು ವೀರೇಷು ಬಲಂ ಗಚ್ಛತು ಶೋಭನಂ|

01196010c ದುಃಶಾಸನೋ ವಿಕರ್ಣಶ್ಚ ಪಾಂಡವಾನಾನಯಂತ್ವಿಹ||

ಆ ವೀರರು ಅಲ್ಲಿಂದ ಹೊರಟ ನಂತರ ದುಃಶಾಸನ ಮತ್ತು ವಿಕರ್ಣರು ಶೋಭನೀಯ ಸೇನೆಯನ್ನು ತೆಗೆದುಕೊಂಡು ಹೋಗಿ ಪಾಂಡವರನ್ನು ಇಲ್ಲಿಗೆ ಕರೆತರಲಿ.

01196011a ತತಸ್ತೇ ಪಾರ್ಥಿವಶ್ರೇಷ್ಠ ಪೂಜ್ಯಮಾನಾಃ ಸದಾ ತ್ವಯಾ|

01196011c ಪ್ರಕೃತೀನಾಮನುಮತೇ ಪದೇ ಸ್ಥಾಸ್ಯಂತಿ ಪೈತೃಕೇ||

ಪಾರ್ಥಿವ ಶ್ರೇಷ್ಠ! ಅದರ ನಂತರ ನಿನ್ನಿಂದ ಮತ್ತು ಪುರಜನರ ಸತ್ಕಾರದೊಂದಿಗೆ ಅವರು ತಮ್ಮ ತಂದೆಯ ಸ್ಥಾನವನ್ನು ಸ್ವೀಕರಿಸಲಿ.

01196012a ಏವಂ ತವ ಮಹಾರಾಜ ತೇಷು ಪುತ್ರೇಷು ಚೈವ ಹ|

01196012c ವೃತ್ತಮೌಪಯಿಕಂ ಮನ್ಯೇ ಭೀಷ್ಮೇಣ ಸಹ ಭಾರತ||

ಮಹಾರಾಜ! ಇದೇ ನೀನು ನಿನ್ನ ಮತ್ತು ಅವನ ಪುತ್ರರೊಡನೆ ನಡೆದುಕೊಳ್ಳಬೇಕಾದ ರೀತಿ. ಭೀಷ್ಮನಿಗೂ ಇದರ ಸಮ್ಮತಿಯಿದೆ.”

01196013 ಕರ್ಣ ಉವಾಚ|

01196013a ಯೋಜಿತಾವರ್ಥಮಾನಾಭ್ಯಾಂ ಸರ್ವಕಾರ್ಯೇಷ್ವನಂತರೌ|

01196013c ನ ಮಂತ್ರಯೇತಾಂ ತ್ವಚ್ಛ್ರೇಯಃ ಕಿಮದ್ಭುತತರಂ ತತಃ||

ಕರ್ಣನು ಹೇಳಿದನು: “ಸರ್ವಕಾರ್ಯಗಳ ನಂತರವೂ ಇವರೀರ್ವರು ಸಂಪತ್ತಿನಿಂದ ಗೌರವಿತರಾಗಿದ್ದಾರೆ. ಆದರೂ ನಿನ್ನ ಶ್ರೇಯಕ್ಕೆ ಸರಿಯಾದ ಸಲಹೆನೀಡುತ್ತಿಲ್ಲ ಎನ್ನುವುದಕ್ಕಿಂತ ಹೆಚ್ಚಿನ ಅದ್ಭುತವೇನಿದೆ?

01196014a ದುಷ್ಟೇನ ಮನಸಾ ಯೋ ವೈ ಪ್ರಚ್ಛನ್ನೇನಾಂತರಾತ್ಮನಾ|

01196014c ಬ್ರೂಯಾನ್ನಿಃಶ್ರೇಯಸಂ ನಾಮ ಕಥಂ ಕುರ್ಯಾತ್ಸತಾಂ ಮತಂ||

ದುಷ್ಟಮನಸ್ಸಿನಿಂದ, ತನ್ನ ನಿಜ ಅಭಿಪ್ರಾಯಗಳನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಹೇಳಿದ್ದುದನ್ನು ಸತ್ಯವಂತರು ಹೇಗೆ ತಾನೆ ಶ್ರೇಯಸ್ಸೆಂದು ಸ್ವೀಕರಿಸಬಹುದು?

01196015a ನ ಮಿತ್ರಾಣ್ಯರ್ಥಕೃಚ್ಛ್ರೇಷು ಶ್ರೇಯಸೇ ವೇತರಾಯ ವಾ|

01196015c ವಿಧಿಪೂರ್ವಂ ಹಿ ಸರ್ವಸ್ಯ ದುಃಖಂ ವಾ ಯದಿ ವಾ ಸುಖಂ||

ಕಷ್ಟಸಮಯದಲ್ಲಿ ಮಿತ್ರರು ಶ್ರೇಯಸ್ಸನ್ನು ತರಬಹುದು ಅಥವಾ ತರದೇ ಇರಬಹುದು. ದುಃಖ ಅಥವಾ ಸುಖ ಸರ್ವವೂ ವಿಧಿಯನ್ನವಲಂಬಿಸಿದೆ.

01196016a ಕೃತಪ್ರಜ್ಞೋಽಕೃತಪ್ರಜ್ಞೋ ಬಾಲೋ ವೃದ್ಧಶ್ಚ ಮಾನವಃ|

01196016c ಸಸಹಾಯೋಽಸಹಾಯಶ್ಚ ಸರ್ವಂ ಸರ್ವತ್ರ ವಿಂದತಿ||

ಕೃತಪ್ರಜ್ಞನಾಗಿರಲಿ, ಅಕೃತಪ್ರಜ್ಞನಾಗಿರಲಿ, ಬಾಲಕನಾಗಿರಲಿ, ವೃದ್ಧನಾಗಿರಲಿ, ಸಸಹಾಯಕನಾಗಿರಲಿ, ಅಸಹಾಯಕನಾಗಿರಲಿ, ಎಲ್ಲ ಮಾನವರೂ ಎಲ್ಲಕಡೆಯೂ ಇದನ್ನು ತಿಳಿದುಕೊಂಡಿದ್ದಾರೆ.

01196017a ಶ್ರೂಯತೇ ಹಿ ಪುರಾ ಕಶ್ಚಿದಂಬುವೀಚ ಇತಿ ಶ್ರುತಃ|

01196017c ಆಸೀದ್ರಾಜಗೃಹೇ ರಾಜಾ ಮಾಗಧಾನಾಂ ಮಹೀಕ್ಷಿತಾಂ||

ಹಿಂದೆ ಅಂಬುವೀಚ ಎಂದು ಖ್ಯಾತ ಮಗಧ ಮಹೀಕ್ಷಿತರ ರಾಜನು ರಾಜಗೃಹದಲ್ಲಿ ಇದ್ದನೆಂದು ಕೇಳಿದ್ದೇವೆ.

01196018a ಸ ಹೀನಃ ಕರಣೈಃ ಸರ್ವೈರುಚ್ಛ್ವಾಸಪರಮೋ ನೃಪಃ|

01196018c ಅಮಾತ್ಯಸಂಸ್ಥಃ ಕಾರ್ಯೇಷು ಸರ್ವೇಷ್ವೇವಾಭವತ್ತದಾ||

ಆ ನೃಪನು ಅತ್ಯಂತ ಬಲಹೀನನಾಗಿದ್ದು ಕೇವಲ ಉಸಿರಾಡುತ್ತಿದ್ದನು. ತನ್ನ ಎಲ್ಲ ಕಾರ್ಯಗಳಲ್ಲಿಯೂ ಅಮಾತ್ಯನಮೇಲೆ ಅವಲಂಬಿಸಿದ್ದನು.

01196019a ತಸ್ಯಾಮಾತ್ಯೋ ಮಹಾಕರ್ಣಿರ್ಬಭೂವೈಕೇಶ್ವರಃ ಪುರಾ|

01196019c ಸ ಲಬ್ಧಬಲಮಾತ್ಮಾನಂ ಮನ್ಯಮಾನೋಽವಮನ್ಯತೇ||

ಆ ಅಮಾತ್ಯ ಮಹಾಕರ್ಣಿಯು ತಾನೇ ಏಕೇಶ್ವರನಾದನು. ಆ ಅಮಾತ್ಯನು ಎಲ್ಲ ಅಧಿಕಾರಗಳನ್ನೂ ತೆಗೆದುಕೊಂಡು ರಾಜನನ್ನು ಕೀಳಾಗಿ ಕಾಣತೊಡಗಿದನು.

01196020a ಸ ರಾಜ್ಞ ಉಪಭೋಗ್ಯಾನಿ ಸ್ತ್ರಿಯೋ ರತ್ನಧನಾನಿ ಚ|

01196020c ಆದದೇ ಸರ್ವಶೋ ಮೂಢ ಐಶ್ವರ್ಯಂ ಚ ಸ್ವಯಂ ತದಾ||

ಆ ಮೂಢನು ರಾಜನ ಸರ್ವವನ್ನೂ, ಸ್ತ್ರೀಯರು, ರತ್ನಧನಗಳನ್ನು, ಸಕಲ ಐಶ್ವರ್ಯವನ್ನು ತನ್ನದಾಗಿಸಿಕೊಂಡು ಸ್ವಯಂ ಭೋಗಿಸತೊಡಗಿದನು.

01196021a ತದಾದಾಯ ಚ ಲುಬ್ಧಸ್ಯ ಲಾಭಾಲ್ಲೋಭೋ ವ್ಯವರ್ಧತ|

01196021c ತಥಾ ಹಿ ಸರ್ವಮಾದಾಯ ರಾಜ್ಯಮಸ್ಯ ಜಿಹೀರ್ಷತಿ||

ತೆಗೆದುಕೊಂಡಷ್ಟೂ ಅವನ ಲೋಭವು ಹೆಚ್ಚಾಯಿತು. ಎಲ್ಲವನ್ನೂ ತೆಗೆದುಕೊಂಡಿದ್ದ ಅವನು ರಾಜ್ಯವನ್ನೂ ತನ್ನದಾಗಿಸಿಕೊಳ್ಳಲು ಬಯಸಿದನು.

01196022a ಹೀನಸ್ಯ ಕರಣೈಃ ಸರ್ವೈರುಚ್ಛ್ವಾಸಪರಮಸ್ಯ ಚ|

01196022c ಯತಮಾನೋಽಪಿ ತದ್ರಾಜ್ಯಂ ನ ಶಶಾಕೇತಿ ನಃ ಶ್ರುತಂ||

ತನ್ನ ಎಲ್ಲ ಶಕ್ತಿಯನ್ನೂ ಕಳೆದುಕೊಂಡು ಕೇವಲ ಉಸಿರಾಡುತ್ತಿದ್ದ ಆ ರಾಜನಿಂದ ಅವನು ರಾಜ್ಯವನ್ನು ಪಡೆಯಲು ಶಕ್ತನಾಗಲಿಲ್ಲ ಎಂದು ಕೇಳಿದ್ದೇವೆ.

01196023a ಕಿಮನ್ಯದ್ವಿಹಿತಾನ್ನೂನಂ ತಸ್ಯ ಸಾ ಪುರುಷೇಂದ್ರತಾ|

01196023c ಯದಿ ತೇ ವಿಹಿತಂ ರಾಜ್ಯಂ ಭವಿಷ್ಯತಿ ವಿಶಾಂ ಪತೇ||

01196024a ಮಿಷತಃ ಸರ್ವಲೋಕಸ್ಯ ಸ್ಥಾಸ್ಯತೇ ತ್ವಯಿ ತದ್ಧ್ರುವಂ|

01196024c ಅತೋಽನ್ಯಥಾ ಚೇದ್ವಿಹಿತಂ ಯತಮಾನೋ ನ ಲಪ್ಸ್ಯಸೇ||

ಅವನ ರಾಜತ್ವವು ವಿಧಿವಿಹಿತವಾದುದಲ್ಲದೇ ಬೇರೆ ಏನಾಗಿತ್ತು? ವಿಶಾಂಪತೇ! ರಾಜ್ಯವು ನಿನ್ನದೆಂದೇ ವಿಧಿವಿಹಿತವಾಗಿದ್ದರೆ ಅದು ಸರ್ವಲೋಕದ ಎದಿರು ನಿನ್ನದಾಗಿಯೇ ಒಳಿಯುತ್ತದೆ ಎನ್ನುವುದು ಖಂಡಿತ. ಹಾಗಿರದಿದ್ದರೆ ನೀನು ಎಷ್ಟು ಪ್ರಯತ್ನಿಸಿದರೂ ಬಯಸಿದರೂ ಅದು ನಿನ್ನದಾಗಿರುವುದಿಲ್ಲ.

01196025a ಏವಂ ವಿದ್ವನ್ನುಪಾದತ್ಸ್ವ ಮಂತ್ರಿಣಾಂ ಸಾಧ್ವಸಾಧುತಾಂ|

01196025c ದುಷ್ಟಾನಾಂ ಚೈವ ಬೋದ್ಧವ್ಯಮದುಷ್ಟಾನಾಂ ಚ ಭಾಷಿತಂ||

ಇದನ್ನು ತಿಳಿದು ನಿನ್ನ ಮಂತ್ರಿಗಳ ಸಲಹೆಯು ಎಷ್ಟರ ಮಟ್ಟಿಗೆ ಒಳ್ಳೆಯದು ಅಥವಾ ಒಳ್ಳೆಯದಲ್ಲ ಎನ್ನುವುದನ್ನು ತಿಳಿ.”

01196026 ದ್ರೋಣ ಉವಾಚ|

01196026a ವಿದ್ಮ ತೇ ಭಾವದೋಷೇಣ ಯದರ್ಥಮಿದಮುಚ್ಯತೇ|

01196026c ದುಷ್ಟಃ ಪಾಂಡವಹೇತೋಸ್ತ್ವಂ ದೋಷಂ ಖ್ಯಾಪಯಸೇ ಹಿ ನಃ||

ದ್ರೋಣನು ಹೇಳಿದನು: “ನೀನು ಯಾವ ಭಾವದೋಷದಿಂದ ಮತ್ತು ಯಾವ ಅರ್ಥದಿಂದ ಮಾತನಾಡುತ್ತಿದ್ದೀಯೆ ಎಂದು ತಿಳಿದಿದೆ. ದುಷ್ಟನಾದ ನೀನು ಪಾಂಡವರ ಕುರಿತು ನಿನ್ನ ದ್ವೇಶವನ್ನು ಪ್ರತಿಪಾದಿಸುತ್ತಿದ್ದೀಯೆ.

01196027a ಹಿತಂ ತು ಪರಮಂ ಕರ್ಣ ಬ್ರವೀಮಿ ಕುರುವರ್ಧನಂ|

01196027c ಅಥ ತ್ವಂ ಮನ್ಯಸೇ ದುಷ್ಟಂ ಬ್ರೂಹಿ ಯತ್ಪರಮಂ ಹಿತಂ||

ಕರ್ಣ! ಆದರೆ ನಾನು ಹೇಳಿದ್ದುದು ಕುರುವರ್ಧನಕ್ಕೇ ಪರಮ ಹಿತವಾಗಿದ್ದುದು. ಇದನ್ನು ನೀನು ದುಷ್ಟವಾದುದೆಂದು ತಿಳಿಯುವುದಾದರೆ ಪರಮ ಹಿತವಾದುದು ಏನೆಂಬುದನ್ನು ನೀನೇ ಹೇಳು.

01196028a ಅತೋಽನ್ಯಥಾ ಚೇತ್ಕ್ರಿಯತೇ ಯದ್ಬ್ರವೀಮಿ ಪರಂ ಹಿತಂ|

01196028c ಕುರವೋ ವಿನಶಿಷ್ಯಂತಿ ನಚಿರೇಣೇತಿ ಮೇ ಮತಿಃ||

ನಾನು ಹೇಳಿದ್ದುದು ಪರಮ ಹಿತವಾದುದಲ್ಲ ಅದು ಬೇರೆಯದನ್ನೇ ಸಾಧಿಸುತ್ತದೆ ಎನ್ನುವುದಿದ್ದರೆ ಅಲ್ಪ ಸಮಯದಲ್ಲಿಯೇ ಕುರುಗಳ ವಿನಾಶವಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವಿದುರಾಗಮನಪರ್ವಣಿ ದ್ರೋಣವಾಕ್ಯೇ ಷಣ್ಣಾವತ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವಿದುರಾಗಮನಪರ್ವದಲ್ಲಿ ದ್ರೋಣವಾಕ್ಯದಲ್ಲಿ ನೂರಾತೊಂಭತ್ತಾರನೆಯ ಅಧ್ಯಾಯವು.

Related image

Comments are closed.