Adi Parva: Chapter 195

ಆದಿ ಪರ್ವ: ವಿದುರಾಗಮನ ಪರ್ವ

೧೯೫

ಪಾಂಡವರಿಗೆ ಅವರ ಪಿತ್ರಾರ್ಜಿತ ಭೂಮಿಯನ್ನು ಕೊಡಬೇಕೆಂದು ಭೀಷ್ಮನು ಹೇಳುವುದು (೧-೧೯).

01195001 ಭೀಷ್ಮ ಉವಾಚ|

01195001a ನ ರೋಚತೇ ವಿಗ್ರಹೋ ಮೇ ಪಾಂಡುಪುತ್ರೈಃ ಕಥಂ ಚನ|

01195001c ಯಥೈವ ಧೃತರಾಷ್ಟ್ರೋ ಮೇ ತಥಾ ಪಾಂಡುರಸಂಶಯಂ||

ಭೀಷ್ಮನು ಹೇಳಿದನು: “ಪಾಂಡುಪುತ್ರರೊಂದಿಗೆ ಯುದ್ಧವು ನನಗೆ ಎಂದೂ ಇಷ್ಟವಾಗುವುದಿಲ್ಲ. ನನಗೆ ಧೃತರಾಷ್ಟ್ರನು ಹೇಗೋ ಹಾಗೆ ಪಾಂಡುವೂ ಅಗಿದ್ದನು ಎನ್ನುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲದಿರಲಿ.

01195002a ಗಾಂಧಾರ್ಯಾಶ್ಚ ಯಥಾ ಪುತ್ರಾಸ್ತಥಾ ಕುಂತೀಸುತಾ ಮತಾಃ|

01195002c ಯಥಾ ಚ ಮಮ ತೇ ರಕ್ಷ್ಯಾ ಧೃತರಾಷ್ಟ್ರ ತಥಾ ತವ||

ಗಾಂಧಾರಿಯ ಪುತ್ರರ ಹಾಗೆ ನನಗೆ ಕುಂತೀಸುತರೂ ಹೌದು. ಅವರು ಹೇಗೆ ಧೃತರಾಷ್ಟ್ರನ ರಕ್ಷಣೆಯಲ್ಲಿದ್ದಾರೋ ಹಾಗೆ ನನ್ನ ರಕ್ಷಣೆಯಲ್ಲಿಯೂ ಇದ್ದಾರೆ.

01195003a ಯಥಾ ಚ ಮಮ ರಾಜ್ಞಶ್ಚ ತಥಾ ದುರ್ಯೋಧನಸ್ಯ ತೇ|

01195003c ತಥಾ ಕುರೂಣಾಂ ಸರ್ವೇಷಾಮನ್ಯೇಷಾಮಪಿ ಭಾರತ||

ಭಾರತ! ಅವರು ನನಗೆ ಮತ್ತು ರಾಜನಿಗೆ ಹೇಗೋ ಹಾಗೆ ದುರ್ಯೋಧನನಿಗೂ ಮತ್ತು ಅನ್ಯ ಕುರುಗಳೆಲ್ಲರಿಗೂ ಹೌದು.

01195004a ಏವಂ ಗತೇ ವಿಗ್ರಹಂ ತೈರ್ನ ರೋಚಯೇ|

                        ಸಂಧಾಯ ವೀರೈರ್ದೀಯತಾಮದ್ಯ ಭೂಮಿಃ|

01195004c ತೇಷಾಮಪೀದಂ ಪ್ರಪಿತಾಮಹಾನಾಂ|

                        ರಾಜ್ಯಂ ಪಿತುಶ್ಚೈವ ಕುರೂತ್ತಮಾನಾಂ||

ಹೀಗಿರುವಾಗ ನಾನು ಯುದ್ಧವನ್ನು ಬಯಸುವುದಿಲ್ಲ. ಆ ವೀರರೊಂದಿಗೆ ಸಂಧಿಮಾಡಿಕೊಂಡು ಅವರಿಗೆ ಭೂಮಿಯನ್ನು ಕೊಡಬೇಕು. ಪಿತ ಪ್ರಪಿತಾಮಹರ ಈ ರಾಜ್ಯವು ಆ ಕುರೂತ್ತಮರದ್ದೂ ಹೌದು.

01195005a ದುರ್ಯೋಧನ ಯಥಾ ರಾಜ್ಯಂ ತ್ವಮಿದಂ ತಾತ ಪಶ್ಯಸಿ|

01195005c ಮಮ ಪೈತೃಕಮಿತ್ಯೇವಂ ತೇಽಪಿ ಪಶ್ಯಂತಿ ಪಾಂಡವಾಃ||

ತಾತ! ದುರ್ಯೋಧನ! ನೀನು ಹೇಗೆ ಈ ರಾಜ್ಯವನ್ನು ನಿನ್ನ ಪಿತ್ರಾರ್ಜಿತವೆಂದು ಕಾಣುತ್ತೀಯೋ ಹಾಗೆ ಪಾಂಡವರೂ ಕಾಣುತ್ತಾರೆ.

01195006a ಯದಿ ರಾಜ್ಯಂ ನ ತೇ ಪ್ರಾಪ್ತಾಃ ಪಾಂಡವೇಯಾಸ್ತಪಸ್ವಿನಃ|

01195006c ಕುತ ಏವ ತವಾಪೀದಂ ಭಾರತಸ್ಯ ಚ ಕಸ್ಯ ಚಿತ್||

ತಪಸ್ವಿ ಪಾಂಡವರಿಗೆ ರಾಜ್ಯ ದೊರೆಯದಿದ್ದರೆ ಇದು ನಿಮಗಾಗಲೀ ಅಥವಾ ಬೇರೆ ಯಾವ ಭಾರತನಿಗಾಗಲೀ ಏಕೆ ದೊರೆಯಬೇಕು?

01195007a ಅಥ ಧರ್ಮೇಣ ರಾಜ್ಯಂ ತ್ವಂ ಪ್ರಾಪ್ತವಾನ್ಭರತರ್ಷಭ|

01195007c ತೇಽಪಿ ರಾಜ್ಯಮನುಪ್ರಾಪ್ತಾಃ ಪೂರ್ವಮೇವೇತಿ ಮೇ ಮತಿಃ||

ಭರತರ್ಷಭ! ನೀನು ಈ ರಾಜ್ಯವನ್ನು ಧರ್ಮಪೂರ್ವಕ ಪಡೆದಿದ್ದರೆ ನಿನಗಿಂಥಲೂ ಮೊದಲೇ ಅವರು ರಾಜ್ಯವನ್ನು ಪಡೆದಿದ್ದರು ಎಂದು ನನ್ನ ಅಭಿಪ್ರಾಯ.

01195008a ಮಧುರೇಣೈವ ರಾಜ್ಯಸ್ಯ ತೇಷಾಮರ್ಧಂ ಪ್ರದೀಯತಾಂ|

01195008c ಏತದ್ಧಿ ಪುರುಷವ್ಯಾಘ್ರ ಹಿತಂ ಸರ್ವಜನಸ್ಯ ಚ||

ಪುರುಷವ್ಯಾಘ್ರ! ಅರ್ಧ ರಾಜ್ಯವನ್ನು ಅವರಿಗೆ ಒಳ್ಳೆಯರೀತಿಯಲ್ಲಿ ನೀಡೋಣ. ಅದೇ ನಮ್ಮೆಲ್ಲರ ಹಿತದಲ್ಲಿದೆ.

01195009a ಅತೋಽನ್ಯಥಾ ಚೇತ್ಕ್ರಿಯತೇ ನ ಹಿತಂ ನೋ ಭವಿಷ್ಯತಿ|

01195009c ತವಾಪ್ಯಕೀರ್ತಿಃ ಸಕಲಾ ಭವಿಷ್ಯತಿ ನ ಸಂಶಯಃ||

ಬೇರೆ ಏನು ಮಾಡಿದರೂ ಅದು ನಮಗೆ ಹಿತವಾಗುವುದಿಲ್ಲ. ಮತ್ತು ನಿನ್ನ ಮೇಲೆಯೇ ಸಕಲ ಅಪಕೀರ್ತಿಯೂ ಬರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

01195010a ಕೀರ್ತಿರಕ್ಷಣಮಾತಿಷ್ಠ ಕೀರ್ತಿರ್ಹಿ ಪರಮಂ ಬಲಂ|

01195010c ನಷ್ಟಕೀರ್ತೇರ್ಮನುಷ್ಯಸ್ಯ ಜೀವಿತಂ ಹ್ಯಫಲಂ ಸ್ಮೃತಂ||

ಕೀರ್ತಿಯೇ ಪರಮ ಬಲವು. ಕೀರ್ತಿಯನ್ನು ರಕ್ಷಣೆಮಾಡಿಕೋ. ಕೀರ್ತಿಯನ್ನು ಕಳೆದುಕೊಂಡ ಮನುಷ್ಯನ ಜೀವನವೇ ನಿಷ್ಫಲವೆಂದು ಹೇಳುತ್ತಾರೆ.

01195011a ಯಾವತ್ಕೀರ್ತಿರ್ಮನುಷ್ಯಸ್ಯ ನ ಪ್ರಣಶ್ಯತಿ ಕೌರವ|

01195011c ತಾವಜ್ಜೀವತಿ ಗಾಂಧಾರೇ ನಷ್ಟಕೀರ್ತಿಸ್ತು ನಶ್ಯತಿ||

ಕೌರವ ಗಾಂಧಾರೇ! ಮನುಷ್ಯನ ಕೀರ್ತಿಯು ಅವನ ಜೀವವಿರುವರೆಗೂ ನಶಿಸುವುದಿಲ್ಲ. ಆದರೆ ಕೀರ್ತಿಯನ್ನೇ ಕಳೆದುಕೊಂಡವನ ಜೀವನವೇ ನಶಿಸಿಹೋದಂತೆ. 

01195012a ತಮಿಮಂ ಸಮುಪಾತಿಷ್ಠ ಧರ್ಮಂ ಕುರುಕುಲೋಚಿತಂ|

01195012c ಅನುರೂಪಂ ಮಹಾಬಾಹೋ ಪೂರ್ವೇಷಾಮಾತ್ಮನಃ ಕುರು||

ಮಹಾಬಾಹೋ! ಈ ನಿನ್ನ ಕುರು ಪೂರ್ವಜರಿಗೆ ಅನುರೂಪ ಕುರುಕುಲೋಚಿತ ಧರ್ಮವನ್ನು ಪರಿಪಾಲಿಸು.

01195013a ದಿಷ್ಟ್ಯಾ ಧರಂತಿ ತೇ ವೀರಾ ದಿಷ್ಟ್ಯಾ ಜೀವತಿ ಸಾ ಪೃಥಾ|

01195013c ದಿಷ್ಟ್ಯಾ ಪುರೋಚನಃ ಪಾಪೋ ನಸಕಾಮೋಽತ್ಯಯಂ ಗತಃ|

ಆ ವೀರರೆಲ್ಲರೂ ಬದುಕಿದ್ದಾರೆ ಎನ್ನುವುದೇ ನಮ್ಮ ಅದೃಷ್ಟ. ಆ ಪೃಥೆಯು ಜೀವಂತವಿದ್ದಾಳೆ ಎನ್ನುವುದೇ ನಮ್ಮ ಅದೃಷ್ಟ. ಮತ್ತು ಅವನ ಉಪಾಯದಲ್ಲಿ ಸಫಲನಾಗದೇ ಪಾಪಿ ಪುರೋಚನನು ಸತ್ತುಹೋದ ಎನ್ನುವುದೇ ನಮ್ಮ ಅದೃಷ್ಟ.

01195014a ತದಾ ಪ್ರಭೃತಿ ಗಾಂಧಾರೇ ನ ಶಕ್ನೋಮ್ಯಭಿವೀಕ್ಷಿತುಂ|

01195014c ಲೋಕೇ ಪ್ರಾಣಭೃತಾಂ ಕಂ ಚಿಚ್ಛೃತ್ವಾ ಕುಂತೀಂ ತಥಾಗತಾಂ|

ಗಾಂಧಾರೇ! ಕುಂತಿಗೆ ನಡೆದುಹೋದದ್ದನ್ನು ಕೇಳಿದಂದಿನಿಂದ ನಾನು ಈ ಲೋಕದಲ್ಲಿ ಜೀವಿಸಿರುವ ಯಾರೊಬ್ಬರ ಮುಖವನ್ನು ನೋಡಲೂ ಶಕ್ಯನಾಗಿರಲಿಲ್ಲ.

01195015a ನ ಚಾಪಿ ದೋಷೇಣ ತಥಾ ಲೋಕೋ ವೈತಿ ಪುರೋಚನಂ|

01195015c ಯಥಾ ತ್ವಾಂ ಪುರುಷವ್ಯಾಘ್ರ ಲೋಕೋ ದೋಷೇಣ ಗಚ್ಛತಿ||

01195016a ತದಿದಂ ಜೀವಿತಂ ತೇಷಾಂ ತವ ಕಲ್ಮಷನಾಶನಂ|

01195016c ಸಮ್ಮಂತವ್ಯಂ ಮಹಾರಾಜ ಪಾಂಡವಾನಾಂ ಚ ದರ್ಶನಂ||

ಪುರುಷವ್ಯಾಘ್ರ! ಜನರು ನಿನ್ನನ್ನು ದೂಷಿಸುವಷ್ಟು ಪುರೋಚನನನ್ನು ದೂಷಿಸುವುದಿಲ್ಲ. ಅವರು ಜೀವಂತವಾಗಿದ್ದಾರೆ ಎನ್ನುವುದು ನಿನ್ನ ಮೇಲಿರುವ ಅಪವಾದವನ್ನು ತೆಗೆದುಹಾಕಿದೆ. ಮಹಾರಾಜ! ಪಾಂಡವರ ದರ್ಶನವು ಬಯಸುವಂಥಹುದೇ ಆಗಿದೆ.

01195017a ನ ಚಾಪಿ ತೇಷಾಂ ವೀರಾಣಾಂ ಜೀವತಾಂ ಕುರುನಂದನ|

01195017c ಪಿತ್ರ್ಯೋಽಂಶಃ ಶಕ್ಯ ಆದಾತುಮಪಿ ವಜ್ರಭೃತಾ ಸ್ವಯಂ||

ಕುರುನಂದನ! ಈ ವೀರರು ಜೀವಂತವಿರುವಹಾಗೆ ಸ್ವಯಂ ವಜ್ರಭೃತನೂ ಕೂಡ ಅವರ ಪಿತ್ರ್ಯೋಂಶವನ್ನು ತೆಗೆದುಕೊಳ್ಳಲು ಶಕ್ಯನಿಲ್ಲ.

01195018a ತೇ ಹಿ ಸರ್ವೇ ಸ್ಥಿತಾ ಧರ್ಮೇ ಸರ್ವೇ ಚೈವೈಕಚೇತಸಃ|

01195018c ಅಧರ್ಮೇಣ ನಿರಸ್ತಾಶ್ಚ ತುಲ್ಯೇ ರಾಜ್ಯೇ ವಿಶೇಷತಃ||

ಅವರೆಲ್ಲರೂ ಧರ್ಮದಲ್ಲಿ ನಿರತರಾಗಿದ್ದಾರೆ. ಎಲ್ಲರೂ ಒಂದೇ ಮನಸ್ಸುಳ್ಳವರಾಗಿದ್ದಾರೆ ಮತ್ತು ಅವರೂ ಕೂಡ ರಾಜ್ಯದ ಮೇಲೆ ಸಮನಾದ ಹಕ್ಕುಳ್ಳವರಾದರೂ ಅಧರ್ಮಪೂರ್ವಕ ಅವರು ಅದರಿಂದ ವಂಚಿತರಾಗಿದ್ದಾರೆ. 

01195019a ಯದಿ ಧರ್ಮಸ್ತ್ವಯಾ ಕಾರ್ಯೋ ಯದಿ ಕಾರ್ಯಂ ಪ್ರಿಯಂ ಚ ಮೇ|

01195019c ಕ್ಷೇಮಂ ಚ ಯದಿ ಕರ್ತವ್ಯಂ ತೇಷಾಮರ್ಧಂ ಪ್ರದೀಯತಾಂ||

ನನಗೆ ಪ್ರೀತಿಯುಕ್ತವಾದುದನ್ನು ಮಾಡಲು ಅಥವಾ ಧರ್ಮಯುಕ್ತ ಕ್ಷೇಮ ಕಾರ್ಯವನ್ನು ಮಾಡಲು ಬಯಸಿದರೆ, ಅವರಿಗೆ ಅರ್ಧರಾಜ್ಯವನ್ನು ಕೊಡಬೇಕು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವಿದುರಾಗಮನಪರ್ವಣಿ ಭೀಷ್ಮವಾಕ್ಯೇ ಪಂಚನವತ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವಿದುರಾಗಮನಪರ್ವದಲ್ಲಿ ಭೀಷ್ಮವಾಕ್ಯದಲ್ಲಿ ನೂರಾತೊಂಭತ್ತೈದನೆಯ ಅಧ್ಯಾಯವು.

Related image

Comments are closed.