Adi Parva: Chapter 192

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ: ವಿದುರಾಗಮನ ಪರ್ವ

೧೯೨

ಪಾಂಡವರು ಜೀವಿತರಾಗಿದ್ದಾರೆ ಮತ್ತು ದ್ರೌಪದಿಯನ್ನು ಗೆದ್ದಿದ್ದಾರೆ ಎಂದು ತಿಳಿದು ದುಃಖಿತರಾಗಿ “ದೈವವೇ ಪರಮವಾದದ್ದು ಪೌರುಷವು ನಿರರ್ಥಕ” ಎಂದು ಯೋಚಿಸುತ್ತಾ ದುರ್ಯೋಧನಾದಿಗಳು ಹಸ್ತಿನಾಪುರಕ್ಕೆ ಹಿಂದಿರುಗಿದುದು (೧-೧೩). ಪಾಂಡವರ ಯಶಸ್ಸನ್ನು ವಿದುರನಿಂದ ತಿಳಿದ ಧೃತರಾಷ್ಟ್ರನು ಸಂತೋಷವನ್ನು ವ್ಯಕ್ತಪಡಿಸುವುದು (೧೪-೨೨). ಸಂತೋಷಪಟ್ಟ ತಂದೆಯನ್ನು ಮೂದಲಿಸಿ ಅವನು ಏನು ಮಾಡಲಿದ್ದಾನೆಂದು ದುರ್ಯೋಧನನು ಪ್ರಶ್ನಿಸುವುದು (೨೩-೨೯).

01192001 ವೈಶಂಪಾಯನ ಉವಾಚ|

01192001a ತತೋ ರಾಜ್ಞಾಂ ಚರೈರಾಪ್ತೈಶ್ಚಾರಃ ಸಮುಪನೀಯತ|

01192001c ಪಾಂಡವೈರುಪಸಂಪನ್ನಾ ದ್ರೌಪದೀ ಪತಿಭಿಃ ಶುಭಾ||

01192002a ಯೇನ ತದ್ಧನುರಾಯಮ್ಯ ಲಕ್ಷ್ಯಂ ವಿದ್ಧಂ ಮಹಾತ್ಮನಾ|

01192002c ಸೋಽರ್ಜುನೋ ಜಯತಾಂ ಶ್ರೇಷ್ಠೋ ಮಹಾಬಾಣಧನುರ್ಧರಃ||

01192003a ಯಃ ಶಲ್ಯಂ ಮದ್ರರಾಜಾನಮುತ್ಕ್ಷಿಪ್ಯಾಭ್ರಾಮಯದ್ಬಲೀ|

01192003c ತ್ರಾಸಯಂಶ್ಚಾಪಿ ಸಂಕ್ರುದ್ಧೋ ವೃಕ್ಷೇಣ ಪುರುಷಾನ್ರಣೇ||

ವೈಶಂಪಾಯನನು ಹೇಳಿದನು: “ಆಪ್ತ ಚರರು ರಾಜನಿಗೆ ವಿಷಯವನ್ನು ತಂದು ಹೇಳಿದರು: “ಶುಭೆ ದ್ರೌಪದಿಯು ಪಾಂಡವರನ್ನು ಪತಿಯರನ್ನಾಗಿ ಸ್ವೀಕರಿಸಿದಳು. ಆ ಧನುಸ್ಸಿನಿಂದ ಲಕ್ಷ್ಯವನ್ನು ಭೇಧಿಸಿದ ಮಹಾತ್ಮನೇ ಮಹಾಬಾಣಧನುರ್ಧರ ವಿಜಯಿಗಳಲ್ಲಿ ಶ್ರೇಷ್ಠ ಅರ್ಜುನ. ಅಲ್ಲಿದ್ದ ಮದ್ರರಾಜ ಶಲ್ಯನನ್ನು ಮೇಲಕ್ಕೆತ್ತಿ ಗರಗರನೆ ತಿರುಗಿಸಿ ವೃಕ್ಷವನ್ನು ಹಿಡಿದು ರಣದಲ್ಲಿ ಪುರುಷರನ್ನು ಸದೆಬಡಿದ ಮಹಾತ್ಮ ಬಲಿಯು ಭೀಮಸಂಸ್ಪರ್ಷ ಶತ್ರುಸೇನಾಂಗಪಾತನ ಭೀಮ.

01192004a ನ ಚಾಪಿ ಸಂಭ್ರಮಃ ಕಶ್ಚಿದಾಸೀತ್ತತ್ರ ಮಹಾತ್ಮನಃ|

01192004c ಸ ಭೀಮೋ ಭೀಮಸಂಸ್ಪರ್ಶಃ ಶತ್ರುಸೇನಾಂಗಪಾತನಃ||

01192005a ಬ್ರಹ್ಮರೂಪಧರಾಂಶ್ರುತ್ವಾ ಪಾಂಡುರಾಜಸುತಾಂಸ್ತದಾ|

01192005c ಕೌಂತೇಯಾನ್ಮನುಜೇಂದ್ರಾಣಾಂ ವಿಸ್ಮಯಃ ಸಮಜಾಯತ||

01192006a ಸಪುತ್ರಾ ಹಿ ಪುರಾ ಕುಂತೀ ದಗ್ಧಾ ಜತುಗೃಹೇ ಶ್ರುತಾ|

01192006c ಪುನರ್ಜಾತಾನಿತಿ ಸ್ಮೈತಾನ್ಮನ್ಯಂತೇ ಸರ್ವಪಾರ್ಥಿವಾಃ||

01192007a ಧಿಕ್ಕುರ್ವಂತಸ್ತದಾ ಭೀಷ್ಮಧೃತರಾಷ್ಟ್ರಂ ಚ ಕೌರವಂ|

01192007c ಕರ್ಮಣಾ ಸುನೃಶಂಸೇನ ಪುರೋಚನಕೃತೇನ ವೈ||

ಹಿಂದೆ ಪುತ್ರರ ಸಹಿತ ಕುಂತಿಯು ಜತುಗೃಹದಲ್ಲಿ ಸುಟ್ಟುಹೋಗಿದ್ದಳು ಎಂದು ಕೇಳಿದ ಮನುಜೇಂದ್ರರು ಬ್ರಾಹ್ಮಣ ವೇಷದಲ್ಲಿದ್ದವರು ರಾಜ ಪಾಂಡು ಮತ್ತು ಕುಂತಿಯ ಮಕ್ಕಳು ಎಂದು ಕೇಳಿ ವಿಸ್ಮಿತರಾದರು. ಅವರು ಪುನರ್ಜನ್ಮತಾಳಿದ್ದಾರೆ ಎಂದು ಸರ್ವ ಪಾರ್ಥಿವರೂ ಅಂದುಕೊಂಡರು. ಪುರೋಚನನು ಎಸಗಿದ್ದ ಆ ಕ್ರೂರ ಕರ್ಮಕ್ಕಾಗಿ ಭೀಷ್ಮ ಮತ್ತು ಕೌರವ ಧೃತರಾಷ್ಟ್ರನನ್ನು ಹೀಗಳೆದರು.

01192008a ವೃತ್ತೇ ಸ್ವಯಂವರೇ ಚೈವ ರಾಜಾನಃ ಸರ್ವ ಏವ ತೇ|

01192008c ಯಥಾಗತಂ ವಿಪ್ರಜಗ್ಮುರ್ವಿದಿತ್ವಾ ಪಾಂಡವಾನ್ವೃತಾನ್||

ಸ್ವಯಂವರವು ಮುಗಿಯುತ್ತಲೇ ಪಾಂಡವರು ಆಯ್ಕೆಗೊಂಡಿದ್ದಾರೆ ಎಂದು ತಿಳಿದು ಸರ್ವ ರಾಜರೂ ಬಂದ ದಾರಿಯಲ್ಲಿ ಹಿಂದಿರುಗಿದರು.”

01192009a ಅಥ ದುರ್ಯೋಧನೋ ರಾಜಾ ವಿಮನಾ ಭ್ರಾತೃಭಿಃ ಸಹ|

01192009c ಅಶ್ವತ್ಥಾಮ್ನಾ ಮಾತುಲೇನ ಕರ್ಣೇನ ಚ ಕೃಪೇಣ ಚ||

01192010a ವಿನಿವೃತ್ತೋ ವೃತಂ ದೃಷ್ಟ್ವಾ ದ್ರೌಪದ್ಯಾ ಶ್ವೇತವಾಹನಂ|

01192010c ತಂ ತು ದುಃಶಾಸನೋ ವ್ರೀಡನ್ಮಂದಂ ಮಂದಮಿವಾಬ್ರವೀತ್||

ವಿಮನಸ್ಕ ರಾಜ ದುರ್ಯೋಧನನು ಅಶ್ವತ್ಥಾಮ, ಮಾತುಲ, ಕರ್ಣ, ಕೃಪ ಮತ್ತು ತನ್ನ ಭ್ರಾತೃಗಳ ಸಹಿತ ದ್ರೌಪದಿಯು ಶ್ವೇತವಾಹನನ್ನು ವರಿಸಿದ್ದುದನ್ನು ಕಂಡು ವಿನಿವೃತನಾಗಿ ಹಿಂದಿರುಗಿದನು. ನಾಚಿಕೊಂಡ ದುಃಶಾಸನನು ಅವನಲ್ಲಿ ಪಿಸುಮಾತಿನಲ್ಲಿ ಹೇಳಿದನು:

01192011a ಯದ್ಯಸೌ ಬ್ರಾಹ್ಮಣೋ ನ ಸ್ಯಾದ್ವಿಂದೇತ ದ್ರೌಪದೀಂ ನ ಸಃ|

01192011c ನ ಹಿ ತಂ ತತ್ತ್ವತೋ ರಾಜನ್ವೇದ ಕಶ್ಚಿದ್ಧನಂಜಯಂ||

“ಬ್ರಾಹ್ಮಣನಾಗಿಲ್ಲದಿದ್ದರೆ ಎಂದೂ ಅವನು ದ್ರೌಪದಿಯನ್ನು ಪಡೆಯುತ್ತಿರಲಿಲ್ಲ. ರಾಜನ್! ಯಾರಿಗೂ ಅವನು ಧನಂಜಯನೆಂದು ಗೊತ್ತಾಗಲಿಲ್ಲ.

01192012a ದೈವಂ ತು ಪರಮಂ ಮನ್ಯೇ ಪೌರುಷಂ ತು ನಿರರ್ಥಕಂ|

01192012c ಧಿಗಸ್ಮತ್ಪೌರುಷಂ ತಾತ ಯದ್ಧರಂತೀಹ ಪಾಂಡವಾಃ||

ದೈವವೇ ಪರಮವಾದದ್ದು ಪೌರುಷವು ನಿರರ್ಥಕ ಎನ್ನುವುದು ನನ್ನ ಅಭಿಪ್ರಾಯ. ಪಾಂಡವರು ಇನ್ನೂ ಜೀವದಿಂದಿದ್ದಾರೆಂದರೆ ನಮ್ಮ ಪೌರುಷಕ್ಕೆ ಧಿಕ್ಕಾರ!”

01192013a ಏವಂ ಸಂಭಾಷಮಾಣಾಸ್ತೇ ನಿಂದಂತಶ್ಚ ಪುರೋಚನಂ|

01192013c ವಿವಿಶುರ್ಹಾಸ್ತಿನಪುರಂ ದೀನಾ ವಿಗತಚೇತಸಃ||

ಈ ರೀತಿ ಮಾತನಾಡುತ್ತಾ ಪುರೋಚನನನ್ನು ನಿಂದಿಸುತ್ತಾ ಆ ವಿಗತಚೇತಸ ದೀನರು ಹಸ್ತಿನಪುರವನ್ನು ಪ್ರವೇಶಿಸಿದರು.

01192014a ತ್ರಸ್ತಾ ವಿಗತಸಂಕಲ್ಪಾ ದೃಷ್ಟ್ವಾ ಪಾರ್ಥಾನ್ಮಹೌಜಸಃ|

01192014c ಮುಕ್ತಾನ್ ಹವ್ಯವಹಾಚ್ಚೈನಾನ್ಸಮ್ಯುಕ್ತಾನ್ದ್ರುಪದೇನ ಚ||

01192015a ಧೃಷ್ಟದ್ಯುಮ್ನಂ ಚ ಸಂಚಿಂತ್ಯ ತಥೈವ ಚ ಶಿಖಂಡಿನಂ|

01192015c ದ್ರುಪದಸ್ಯಾತ್ಮಜಾಂಶ್ಚಾನ್ಯಾನ್ಸರ್ವಯುದ್ಧವಿಶಾರದಾನ್||

ಬೆಂಕಿಯಿಂದ ತಪ್ಪಿಸಿಕೊಂಡು ದ್ರುಪದನನ್ನು ಸೇರಿದ ಆ ಮಹೌಜಸ ಪಾರ್ಥರನ್ನು ನೋಡಿ ಮತ್ತು ಸರ್ವ ಯುದ್ಧ ವಿಶಾರದ ಧೃಷ್ಟಧ್ಯುಮ್ನ, ಶಿಖಂಡಿ ಮತ್ತು ದ್ರುಪದನ ಇತರ ಮಕ್ಕಳನ್ನು ಯೋಚಿಸಿ ಅವರೆಲ್ಲರೂ ವಿಗತಸಂಕಲ್ಪರಾಗಿ ನಡುಗಿದರು.

01192016a ವಿದುರಸ್ತ್ವಥ ತಾಂಶ್ರುತ್ವಾ ದ್ರೌಪದ್ಯಾ ಪಾಂಡವಾನ್ವೃತಾನ್|

01192016c ವ್ರೀಡಿತಾನ್ಧಾರ್ತರಾಷ್ಟ್ರಾಂಶ್ಚ ಭಗ್ನದರ್ಪಾನುಪಾಗತಾನ್||

01192017a ತತಃ ಪ್ರೀತಮನಾಃ ಕ್ಷತ್ತಾ ಧೃತರಾಷ್ಟ್ರಂ ವಿಶಾಂ ಪತೇ|

01192017c ಉವಾಚ ದಿಷ್ಟ್ಯಾ ಕುರವೋ ವರ್ಧಂತ ಇತಿ ವಿಸ್ಮಿತಃ||

ವಿಶಾಂಪತೇ! ಆದರೆ ದ್ರೌಪದಿಯು ಪಾಂಡವರನ್ನು ವರಿಸಿದಳು ಮತ್ತು ಧಾರ್ತರಾಷ್ಟ್ರರ ದರ್ಪವು ಭಗ್ನವಾಗಿ ನಾಚಿಕೊಂಡು ಹಿಂದಿರುಗಿದರು ಎಂದು ಕೇಳಿ ಸಂತೋಷಗೊಂಡ ಕ್ಷತ್ತ ವಿದುರನು ವಿಸ್ಮಿತನಾಗಿ “ಕುರುಗಳು ವರ್ಧಿಸಿದ್ದಾರೆ!” ಎಂದು ಧೃತರಾಷ್ಟ್ರನಿಗೆ ಕೂಗಿ ಹೇಳಿದನು.

01192018a ವೈಚಿತ್ರವೀರ್ಯಸ್ತು ನೃಪೋ ನಿಶಮ್ಯ ವಿದುರಸ್ಯ ತತ್|

01192018c ಅಬ್ರವೀತ್ಪರಮಪ್ರೀತೋ ದಿಷ್ಟ್ಯಾ ದಿಷ್ಟ್ಯೇತಿ ಭಾರತ||

ಭಾರತ! ವಿದುರನ ಈ ಮಾತುಗಳನ್ನು ಕೇಳಿ ಪರಮಪ್ರೀತ ನೃಪ ವೈಚಿತ್ರವೀರ್ಯನು “ಒಳ್ಳೆಯದೇ ಆಯಿತು! ಒಳ್ಳೆಯದೇ ಆಯಿತು!” ಎಂದನು.

01192019a ಮನ್ಯತೇ ಹಿ ವೃತಂ ಪುತ್ರಂ ಜ್ಯೇಷ್ಠಂ ದ್ರುಪದಕನ್ಯಯಾ|

01192019c ದುರ್ಯೋಧನಮವಿಜ್ಞಾನಾತ್ಪ್ರಜ್ಞಾಚಕ್ಷುರ್ನರೇಶ್ವರಃ||

ಪ್ರಾಜ್ಞಚಕ್ಷು ನರೇಶ್ವರನು ಅವಿಜ್ಞಾನದಿಂದ ದ್ರುಪದ ಕನ್ಯೆಯು ತನ್ನ ಜ್ಯೇಷ್ಠ ಪುತ್ರ ದುರ್ಯೋಧನನನ್ನೇ ವರಿಸಿದ್ದಾಳೆ ಎಂದು ಭಾವಿಸಿದ್ದನು.

01192020a ಅಥ ತ್ವಾಜ್ಞಾಪಯಾಮಾಸ ದ್ರೌಪದ್ಯಾ ಭೂಷಣಂ ಬಹು|

01192020c ಆನೀಯತಾಂ ವೈ ಕೃಷ್ಣೇತಿ ಪುತ್ರಂ ದುರ್ಯೋಧನಂ ತದಾ||

ಅವನು ದ್ರೌಪದಿಗೋಸ್ಕರ ಬಹು ಭೂಷಣಗಳನ್ನು ಮತ್ತು “ಕೃಷ್ಣೆಯನ್ನು ಕರೆದುಕೊಂಡು ಬಾ!” ಎಂದು ಪುತ್ರ ದುರ್ಯೋಧನನಿಗೆ ಆಜ್ಞಾಪಿಸಿದನು.

01192021a ಅಥಾಸ್ಯ ಪಶ್ಚಾದ್ವಿದುರ ಆಚಖ್ಯೌ ಪಾಂಡವಾನ್ವೃತಾನ್|

01192021c ಸರ್ವಾನ್ಕುಶಲಿನೋ ವೀರಾನ್ಪೂಜಿತಾನ್ದ್ರುಪದೇನ ಚ|

01192021e ತೇಷಾಂ ಸಂಬಂಧಿನಶ್ಚಾನ್ಯಾನ್ಬಹೂನ್ಬಲಸಮನ್ವಿತಾನ್||

ನಂತರ ವಿದುರನು “ಪಾಂಡವರು ವರಿಸಲ್ಪಟ್ಟಿದ್ದಾರೆ! ಸರ್ವ ವೀರರೂ ಕುಶಲದಿಂದಿದ್ದಾರೆ! ಬಹು ಬಲಸಮನ್ವಿತರೊಂದಿಗೆ ಸಂಬಂಧವನ್ನು ಮಾಡಿಕೊಂಡ ಅವರು ದ್ರುಪದನಿಂದ ಸತ್ಕರಿಸಲ್ಪಟ್ಟಿದ್ದಾರೆ” ‌ಎಂದು ವರದಿಮಾಡಿದನು.

01192022 ಧೃತರಾಷ್ಟ್ರ ಉವಾಚ|

01192022a ಯಥೈವ ಪಾಂಡೋಃ ಪುತ್ರಾಸ್ತೇ ತಥೈವಾಭ್ಯಧಿಕಾ ಮಮ|

01192022c ಸೇಯಮಭ್ಯಧಿಕಾ ಪ್ರೀತಿರ್ವೃದ್ಧಿರ್ವಿದುರ ಮೇ ಮತಾ|

01192022e ಯತ್ತೇ ಕುಶಲಿನೋ ವೀರಾ ಮಿತ್ರವಂತಶ್ಚ ಪಾಂಡವಾಃ||

ಧೃತರಾಷ್ಟ್ರನು ಹೇಳಿದನು: “ಪಾಂಡುವಿನ ಪುತ್ರರು ಅವನಿಗೆ ಹೇಗೋ ಅದಕ್ಕಿಂತಲೂ ಅಧಿಕವಾಗಿ ನನಗಾಗುತ್ತಾರೆ. ವಿದುರ! ವೀರ ಪಾಂಡವರು ಕುಶಲರಾಗಿದ್ದು ಮಿತ್ರರನ್ನು ಪಡೆದಿದ್ದಾರೆ ಎಂದು ಕೇಳಿ ನನ್ನ ಸಂತೋಷವು ಇನ್ನೂ ಹೆಚ್ಚಾಗಿದೆ ಎಂದು ನನ್ನ ಅನಿಸಿಕೆ.

01192023a ಕೋ ಹಿ ದ್ರುಪದಮಾಸಾದ್ಯ ಮಿತ್ರಂ ಕ್ಷತ್ತಃ ಸಬಾಂಧವಂ|

01192023c ನ ಬುಭೂಷೇದ್ಭವೇನಾರ್ಥೀ ಗತಶ್ರೀರಪಿ ಪಾರ್ಥಿವಃ||

ಕ್ಷತ್ತ! ಸಂಪತ್ತನ್ನು ಕಳೆದುಕೊಂಡ ಮತ್ತು ಬಲಶಾಲಿಯಾಗಬೇಕೆನ್ನುವ ಯಾವ ಪಾರ್ಥಿವನು ದ್ರುಪದ ಮತ್ತು ಅವನ ಬಾಂಧವರ ಮಿತ್ರತ್ವವನ್ನು ಬಯಸುವುದಿಲ್ಲ?””

01192024 ವೈಶಂಪಾಯನ ಉವಾಚ|

01192024a ತಂ ತಥಾ ಭಾಷಮಾಣಂ ತು ವಿದುರಃ ಪ್ರತ್ಯಭಾಷತ|

01192024c ನಿತ್ಯಂ ಭವತು ತೇ ಬುದ್ಧಿರೇಷಾ ರಾಜಂಶತಂ ಸಮಾಃ||

ವೈಶಂಪಾಯನನು ಹೇಳಿದನು: “ಅವನು ಹಾಗೆ ಹೇಳಲು ವಿದುರನು ಉತ್ತರಿಸಿದನು: “ರಾಜನ್! ನಿನ್ನ ಈ ಬುದ್ಧಿಯು ನೂರು ವರ್ಷಗಳು ಸದಾ ಇರಲಿ!”

01192025a ತತೋ ದುರ್ಯೋಧನಶ್ಚೈವ ರಾಧೇಯಶ್ಚ ವಿಶಾಂ ಪತೇ|

01192025c ಧೃತರಾಷ್ಟ್ರಮುಪಾಗಮ್ಯ ವಚೋಽಬ್ರೂತಾಮಿದಂ ತದಾ||

ವಿಶಾಂಪತೇ! ನಂತರ ದುರ್ಯೋಧನ ಮತ್ತು ರಾಧೇಯರು ಧೃತರಾಷ್ಟ್ರನಲ್ಲಿಗೆ ಬಂದು ಈ ಮಾತುಗಳನ್ನಾಡಿದರು:

01192026a ಸನ್ನಿಧೌ ವಿದುರಸ್ಯ ತ್ವಾಂ ವಕ್ತುಂ ನೃಪ ನ ಶಕ್ನುವಃ|

01192026c ವಿವಿಕ್ತಮಿತಿ ವಕ್ಷ್ಯಾವಃ ಕಿಂ ತವೇದಂ ಚಿಕೀರ್ಷಿತಂ||

“ನೃಪ! ವಿದುರನ ಸನ್ನಿಧಿಯಲ್ಲಿ ನಿನ್ನೊಡನೆ ಮಾತನಾಡಲು ಸಾಧ್ಯವಾಗಲಿಲ್ಲ. ಆದುದರಿಂದ ನಾವು ನಿನ್ನಲ್ಲಿ ಏಕಾಂತದಲ್ಲಿ ಕೇಳುತ್ತಿದ್ದೇವೆ. ನೀನು ಈಗ ಏನು ಮಾಡಬೇಕೆಂದು ಯೋಚಿಸಿದ್ದೀಯೆ?

01192027a ಸಪತ್ನವೃದ್ಧಿಂ ಯತ್ತಾತ ಮನ್ಯಸೇ ವೃದ್ಧಿಮಾತ್ಮನಃ|

01192027c ಅಭಿಷ್ಟೌಷಿ ಚ ಯತ್ಕ್ಷತ್ತುಃ ಸಮೀಪೇ ದ್ವಿಪದಾಂ ವರ||

ತಾತ! ದ್ವಿಪದರಲ್ಲಿ ಶ್ರೇಷ್ಠ! ವಿದುರನ ಎದಿರು ಅವರ ಪ್ರಶಂಸೆಯನ್ನು ಮಾಡುತ್ತಿದ್ದೆಯಲ್ಲ! ನಿನ್ನ ಪ್ರತಿಸ್ಪರ್ಧಿಗಳ ಯಶಸ್ಸನ್ನು ನಿನ್ನದೇ ಯಶಸ್ಸೆಂದು ಭಾವಿಸುತ್ತಿದ್ದೀಯಾ?

01192028a ಅನ್ಯಸ್ಮಿನ್ನೃಪ ಕರ್ತವ್ಯೇ ತ್ವಮನ್ಯತ್ಕುರುಷೇಽನಘ|

01192028c ತೇಷಾಂ ಬಲವಿಘಾತೋ ಹಿ ಕರ್ತವ್ಯಸ್ತಾತ ನಿತ್ಯಶಃ||

ನೃಪ! ಅನಘ! ಒಂದು ಕೆಲಸವನ್ನು ಮಾಡಬೇಕೆಂದಿದ್ದರೆ ಇನ್ನೊಂದನ್ನು ಮಾಡಿಬಿಡುತ್ತೀಯೆ. ತಾತ! ಏನಾದರೂ ಮಾಡಿ ನಿತ್ಯವೂ ಅವರ ಬಲವನ್ನು ನಾಶಪಡಿಸಬೇಕು.

01192029a ತೇ ವಯಂ ಪ್ರಾಪ್ತಕಾಲಸ್ಯ ಚಿಕೀರ್ಷಾಂ ಮಂತ್ರಯಾಮಹೇ|

01192029c ಯಥಾ ನೋ ನ ಗ್ರಸೇಯುಸ್ತೇ ಸಪುತ್ರಬಲಬಾಂಧವಾನ್||

ಅವರು ನಮ್ಮನ್ನು ಪುತ್ರ ಬಲ ಬಾಂಧವರ ಸಹಿತ ನುಂಗಲಾರದಂತೆ ನಾವೆಲ್ಲರೂ ಏನಾದರೂ ಉಪಾಯವನ್ನು ಯೋಚಿಸುವ ಕಾಲವು ಪ್ರಾಪ್ತವಾಗಿದೆ.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವಿದುರಾಗಮನಪರ್ವಣಿ ದುರ್ಯೋಧನವಾಕ್ಯೇ ದ್ವಿನವತ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವಿದುರಾಗಮನಪರ್ವದಲ್ಲಿ ದುರ್ಯೋಧನವಾಕ್ಯದಲ್ಲಿ ನೂರಾತೊಂಭತ್ತೆರಡನೆಯ ಅಧ್ಯಾಯವು.Image result for indian flowers drawing

Comments are closed.