Adi Parva: Chapter 190

ಆದಿ ಪರ್ವ: ವೈವಾಹಿಕ ಪರ್ವ

೧೯೦

ವ್ಯಾಸನಿತ್ತ ವಿವರಗಳನ್ನು ಕೇಳಿ ವಿಧಿವಿಹಿತವಾಗಿರುವುದನ್ನು ತಪ್ಪಿಸಲು ಸಾಧ್ಯವಿಲ್ಲವೆಂದು ಐವರೂ ಪಾಂಡವರೊಂದಿಗೆ ದ್ರೌಪದಿಯ ವಿವಾಹಕ್ಕೆ ದ್ರುಪದನು ಒಪ್ಪಿಕೊಳ್ಳುವುದು (೧-೪). ಒಂದೊಂದು ದಿನದ ಅಂತರದಲ್ಲಿ ಒಬ್ಬೊಬ್ಬರಾಗಿ ಐವರು ಪಾಂಡವರೊಂದಿಗೆ ದ್ರೌಪದಿಯ ವಿವಾಹ, ಪ್ರತಿ ಹಗಲು ಅವಳು ಪುನಃ ಕನ್ಯೆಯಾಗಿಯೇ ಉಳಿಯುವುದು (೫-೧೪). ಅಳಿಯಂದಿರಿಗೆ ದ್ರುಪದನು ಉಡುಗೊರೆಗಳನ್ನಿತ್ತುದು (೧೫-೧೮).

01190001 ದ್ರುಪದ ಉವಾಚ|

01190001a ಅಶ್ರುತ್ವೈವಂ ವಚನಂ ತೇ ಮಹರ್ಷೇ|

         ಮಯಾ ಪೂರ್ವಂ ಯತಿತಂ ಕಾರ್ಯಮೇತತ್|

01190001c ನ ವೈ ಶಕ್ಯಂ ವಿಹಿತಸ್ಯಾಪಯಾತುಂ|

         ತದೇವೇದಮುಪಪನ್ನಂ ವಿಧಾನಂ||

ದ್ರುಪದನು ಹೇಳಿದನು: “ಮಹರ್ಷಿ! ಇದಕ್ಕೆ ಮೊದಲು ನಿನ್ನ ವಚನಗಳನ್ನು ಕೇಳದೇ ಇದ್ದುದರಿಂದ ನಾನು ಆ ರೀತಿ ವರ್ತಿಸಿದೆ. ವಿಹಿತವಾಗಿರುವುದನ್ನು ತಡೆಹಿಡಿಯಲು ಶಕ್ಯವಿಲ್ಲ. ಇದೇ ವಿಧಿಯು ನಿರೂಪಿಸಿದ್ದುದು.

01190002a ದಿಷ್ಟಸ್ಯ ಗ್ರನ್ಥಿರನಿವರ್ತನೀಯಃ|

         ಸ್ವಕರ್ಮಣಾ ವಿಹಿತಂ ನೇಹ ಕಿಂ ಚಿತ್|

01190002c ಕೃತಂ ನಿಮಿತ್ತಂ ಹಿ ವರೈಕಹೇತೋಸ್|

         ತದೇವೇದಮುಪಪನ್ನಂ ಬಹೂನಾಂ|

ವಿಧಿಯು ಕಟ್ಟಿದ ಗಂಟನ್ನು ಬಿಚ್ಚಲು ಅಸಾಧ್ಯ. ತನ್ನದೇ ಕರ್ಮಗಳಿಂದ ವಿಹಿತವಾಗಿದ್ದುದು ಯಾವುದೂ ಇಲ್ಲ. ಒಬ್ಬನೇ ವರನಿಗೋಸ್ಕರ ಏರ್ಪಡಿಸಿದ್ದ ಕಾರ್ಯವನ್ನು ವಿಧಿಯು ಬಹುಮಂದಿಗೆ ವಿಹಿತಗೊಳಿಸಿದಂತಿದೆ.

01190003a ಯಥೈವ ಕೃಷ್ಣೋಕ್ತವತೀ ಪುರಸ್ತಾನ್|

         ನೈಕಾನ್ಪತೀನ್ಮೇ ಭಗವಾನ್ದದಾತು|

01190003c ಸ ಚಾಪ್ಯೇವಂ ವರಮಿತ್ಯಬ್ರವೀತ್ತಾಂ|

         ದೇವೋ ಹಿ ವೇದ ಪರಮಂ ಯದತ್ರ|

ಹಿಂದೆ ಕೃಷ್ಣೆಯು ಭಗವನ್! ನನಗೆ ಅನೇಕ ಪತಿಗಳನ್ನು ಕೊಡು ಎಂದು ಕೇಳಿಕೊಂಡವಳಾದ್ದುದರಿಂದ ಎಲ್ಲವನ್ನು ತಿಳಿದ ದೇವನು ಅವಳು ಕೇಳಿದಂತೆಯೇ ವರವನ್ನು ನೀಡಿದನು.

01190004a ಯದಿ ವಾಯಂ ವಿಹಿತಃ ಶಂಕರೇಣ|

         ಧರ್ಮೋಽಧರ್ಮೋ ವಾ ನಾತ್ರ ಮಮಾಪರಾಧಃ|

01190004c ಗೃಹ್ಣಂತ್ವಿಮೇ ವಿಧಿವತ್ಪಾಣಿಮಸ್ಯಾ|

         ಯಥೋಪಜೋಷಂ ವಿಹಿತೈಷಾಂ ಹಿ ಕೃಷ್ಣಾ||

ಇದನ್ನು ಶಂಕರನೇ ವಿಧಿಸಿದನೆಂದಾದರೆ, ಧಾರ್ಮಿಕವಾಗಿರಲಿ ಅಥವಾ ಅಧಾರ್ಮಿಕವಾಗಿರಲಿ, ಅದರಲ್ಲಿ ನನ್ನ ಅಪರಾಧವೇನೂ ಇಲ್ಲ. ಕೃಷ್ಣೆಯು ಅವರಿಗೇ ವಿಹಿತಳಾಗಿರುವುದರಿಂದ ಅವರೆಲ್ಲರೂ ಬಯಸಿದಂತೆ ವಿಧಿವತ್ತಾಗಿ ಅವಳ ಕೈ ಹಿಡಿಯಲಿ.””

01190005 ವೈಶಂಪಾಯನ ಉವಾಚ|

01190005a ತತೋಽಬ್ರವೀದ್ಭಗವಾನ್ಧರ್ಮರಾಜಂ|

         ಅದ್ಯ ಪುಣ್ಯಾಹಮುತ ಪಾಂಡವೇಯ|

01190005c ಅದ್ಯ ಪೌಷ್ಯಂ ಯೋಗಮುಪೈತಿ ಚಂದ್ರಮಾಃ|

         ಪಾಣಿಂ ಕೃಷ್ಣಾಯಾಸ್ತ್ವಂ ಗೃಹಾಣಾದ್ಯ ಪೂರ್ವಂ||

ವೈಶಂಪಾಯನು ಹೇಳಿದನು: “ಆಗ ಆ ಭಗವಾನನು ದರ್ಮರಾಜನಿಗೆ ಹೇಳಿದನು: “ಪಾಂಡವ! ಇದು ಪುಣ್ಯ ದಿನ. ಇಂದು ಚಂದ್ರಮನು ಪೌಷ್ಯದಲ್ಲಿದ್ದಾನೆ. ಇಂದು ಮೊದಲನೆಯದಾಗಿ ನೀನು ಕೃಷ್ಣೆಯ ಪಾಣಿಗ್ರಹಣ ಮಾಡು.”

01190006a ತತೋ ರಾಜಾ ಯಜ್ಞಸೇನಃ ಸಪುತ್ರೋ|

         ಜನ್ಯಾರ್ಥ ಯುಕ್ತಂ ಬಹು ತತ್ತದಗ್ರ್ಯಂ|

01190006c ಸಮಾನಯಾಮಾಸ ಸುತಾಂ ಚ ಕೃಷ್ಣಾಂ|

         ಆಪ್ಲಾವ್ಯ ರತ್ನೈರ್ಬಹುಭಿರ್ವಿಭೂಷ್ಯ||

ನಂತರ ರಾಜ ಯಜ್ಞಸೇನನು ಪುತ್ರನಿಂದೊಡಗೂಡಿ ಗಂಡಿನ ಕಡೆಯವರಿಗೆ ಬಹಳ ಉಡುಗೊರೆಗಳನ್ನಿತ್ತು, ಬಹಳ ರತ್ನ ವಿಭೂಷಣಗಳಿಂದ ಅಲಂಕೃತಳಾದ ಸುತೆ ಕೃಷ್ಣೆಯನ್ನು ಅವನಿಗೆ ಒಪ್ಪಿಸಿದನು.

01190007a ತತಃ ಸರ್ವೇ ಸುಹೃದಸ್ತತ್ರ ತಸ್ಯ|

         ಸಮಾಜಗ್ಮುಃ ಸಚಿವಾ ಮಂತ್ರಿಣಶ್ಚ|

01190007c ದ್ರಷ್ಟುಂ ವಿವಾಹಂ ಪರಮಪ್ರತೀತಾ|

         ದ್ವಿಜಾಶ್ಚ ಪೌರಾಶ್ಚ ಯಥಾಪ್ರಧಾನಾಃ||

ಅಲ್ಲಿ ಅವನ ಸುಹೃದರಯರೆಲ್ಲರೂ, ಸಚಿವ ಮಂತ್ರಿಗಣಗಳೂ, ದ್ವಿಜರೂ, ಪ್ರಮುಖ ಪೌರರೂ ಆ ಪರಮಪ್ರತೀತ ವಿವಾಹವನ್ನು ನೋಡಲು ಸೇರಿದ್ದರು.

01190008a ತತ್ತಸ್ಯ ವೇಶ್ಮಾರ್ಥಿಜನೋಪಶೋಭಿತಂ|

         ವಿಕೀರ್ಣಪದ್ಮೋತ್ಪಲಭೂಷಿತಾಜಿರಂ|

01190008c ಮಹಾರ್ಹರತ್ನೌಘವಿಚಿತ್ರಮಾಬಭೌ|

         ದಿವಂ ಯಥಾ ನಿರ್ಮಲತಾರಕಾಚಿತಂ||

ವೇಷ್ಮಾರ್ಥಿಜನಗಳಿಂದ ಪರಿಶೋಭಿತ, ಅಲ್ಲಲ್ಲಿ ನಿರ್ಮಿಸಿದ್ದ ಪದ್ಮೋತ್ಪಲಗಳಿಂದ ಭೂಷಿತ, ಬೆಲೆಬಾಳುವ ರತ್ನ ರಾಶಿಗಳಿಂದ ಹೊಳೆಯುತ್ತಿರುವ ಅವನ ಅರಮನೆಯು ನಕ್ಷತ್ರಮಂಡಲುಗಳನ್ನುಳ್ಳ ದೇವಲೋಕವು ಬೆಳಗುವಂತೆ ಬೆಳಗುತ್ತಿತ್ತು.

01190009a ತತಸ್ತು ತೇ ಕೌರವರಾಜಪುತ್ರಾ|

         ವಿಭೂಷಿತಾಃ ಕುಂಡಲಿನೋ ಯುವಾನಃ|

01190009c ಮಹಾರ್ಹವಸ್ತ್ರಾ ವರಚಂದನೋಕ್ಷಿತಾಃ|

         ಕೃತಾಭಿಷೇಕಾಃ ಕೃತಮಂಗಲಕ್ರಿಯಾಃ||

ಯುವ ಕೌರವರಾಜಪುತ್ರರು ಅಭ್ಯಂಜನವನ್ನು ಪಡೆದು, ಶ್ರೇಷ್ಠ ಚಂದನದಿಂದ ಲೇಪಿತರಾಗಿ, ಕುಂಡಲಗಳಿಂದ, ಅಧಿಕ ಬೆಲೆಯ ವಸ್ತ್ರಗಳಿಂದ ವಿಭೂಷಿತರಾಗಿ, ಮಂಗಲಕ್ರಿಯೆಗಳನ್ನು ಕೈಗೊಂಡರು.

01190010a ಪುರೋಹಿತೇನಾಗ್ನಿಸಮಾನವರ್ಚಸಾ|

         ಸಹೈವ ಧೌಮ್ಯೇನ ಯಥಾವಿಧಿ ಪ್ರಭೋ|

01190010c ಕ್ರಮೇಣ ಸರ್ವೇ ವಿವಿಶುಶ್ಚ ತತ್ಸದೋ|

         ಮಹರ್ಷಭಾ ಗೋಷ್ಠಮಿವಾಭಿನಂದಿನಃ||

ಅಗ್ನಿವರ್ಚಸ ಪುರೋಹಿತ ಧೌಮ್ಯನಿಂದೊಡಗೂಡಿ ಯಥಾವಿಧಿಯಲ್ಲಿ ಎಲ್ಲರೂ ಕ್ರಮೇಣವಾಗಿ ಮಹರ್ಷಭಗಳು ಗೋವು ಇದ್ದ ಕಡೆ ಪ್ರವೇಶಿಸುವಂತೆ ಆ ಸದಸ್ಸನ್ನು ಪ್ರವೇಶಿಸಿದರು.

01190011a ತತಃ ಸಮಾಧಾಯ ಸ ವೇದಪಾರಗೋ|

         ಜುಹಾವ ಮಂತ್ರೈರ್ಜ್ವಲಿತಂ ಹುತಾಶನಂ|

01190011c ಯುಧಿಷ್ಠಿರಂ ಚಾಪ್ಯುಪನೀಯ ಮಂತ್ರವಿನ್|

         ನಿಯೋಜಯಾಮಾಸ ಸಹೈವ ಕೃಷ್ಣಯಾ||

ಆ ವೇದಪಾರಂಗತನು ಮಂತ್ರಗಳಿಂದ ಪ್ರಜ್ವಲಿಸುತ್ತಿರುವ ಹುತಾಶನನನ್ನು ರಚಿಸಿದನು ಮತ್ತು ಹಾಗೆಯೇ ಮಂತ್ರಪೂರ್ವಕ ಕೃಷ್ಣೆಯ ಸಹಿತ ಯುಧಿಷ್ಠಿರನ ಉಪನೀಯವನ್ನು ನಿಯೋಜಿಸಿದನು.

01190012a ಪ್ರದಕ್ಷಿಣಂ ತೌ ಪ್ರಗೃಹೀತಪಾಣೀ|

         ಸಮಾನಯಾಮಾಸ ಸ ವೇದಪಾರಗಃ|

01190012c ತತೋಽಭ್ಯನುಜ್ಞಾಯ ತಮಾಜಿಶೋಭಿನಂ|

         ಪುರೋಹಿತೋ ರಾಜಗೃಹಾದ್ವಿನಿರ್ಯಯೌ||

ಆ ವೇದಪಾರಂಗತನು ಅವರಿಬ್ಬರೂ ಕೈಗಳನ್ನು ಹಿಡಿದು ಯಜ್ಞಕುಂಡದ ಪ್ರದಕ್ಷಿಣೆಯನ್ನು ಮಾಡಿಸಿದನು. ನಂತರ ಪುರೋಹಿತನು ಆ ಅಜಿಶೋಭಿಯ ಅನುಜ್ಞೆಯಂತೆ ರಾಜಗೃಹದಿಂದ ಹಿಂದಿರುಗಿದನು.

01190013a ಕ್ರಮೇಣ ಚಾನೇನ ನರಾಧಿಪಾತ್ಮಜಾ|

         ವರಸ್ತ್ರಿಯಾಸ್ತೇ ಜಗೃಹುಸ್ತದಾ ಕರಂ|

01190013c ಅಹನ್ಯಹನ್ಯುತ್ತಮರೂಪಧಾರಿಣೋ|

         ಮಹಾರಥಾಃ ಕೌರವವಂಶವರ್ಧನಾಃ||

ಕ್ರಮಬದ್ಧವಾಗಿ, ಒಂದೊಂದು ದಿನಗಳ ಅಂತರದಲ್ಲಿ, ಆ ಕೌರವವಂಶವರ್ಧನ ಮಹಾರಥಿ ನೃಪತಾತ್ಮಜರು ಉತ್ತಮರೂಪಧಾರಿಣಿಯನ್ನು ವರಿಸಿದರು.

01190014a ಇದಂ ಚ ತತ್ರಾದ್ಭುತರೂಪಮುತ್ತಮಂ|

         ಜಗಾದ ವಿಪ್ರರ್ಷಿರತೀತಮಾನುಷಂ|

01190014c ಮಹಾನುಭಾವಾ ಕಿಲ ಸಾ ಸುಮಧ್ಯಮಾ|

         ಬಭೂವ ಕನ್ಯೈವ ಗತೇ ಗತೇಽಹನಿ||

ಅಲ್ಲಿ ಉತ್ತಮ ಅಮಾನುಷ ಅದ್ಭುತವೊಂದು ನಡೆಯಿತೆಂದು ಹೇಳುತ್ತಾರೆ: ಆ ಮಹಾನುಭಾವೆ, ಸುಮಧ್ಯಮೆಯು ಪ್ರತಿ ಹಗಲೂ ಪುನಃ ಕನ್ಯೆಯಾಗಿಯೇ ಉಳಿಯುತ್ತಿದ್ದಳು.

01190015a ಕೃತೇ ವಿವಾಹೇ ದ್ರುಪದೋ ಧನಂ ದದೌ|

         ಮಹಾರಥೇಭ್ಯೋ ಬಹುರೂಪಮುತ್ತಮಂ|

01190015c ಶತಂ ರಥಾನಾಂ ವರಹೇಮಭೂಷಿಣಾಂ|

         ಚತುರ್ಯುಜಾಂ ಹೇಮಖಲೀನಮಾಲಿನಾಂ||

ವಿವಾಹವನ್ನು ಮಾಡಿಕೊಟ್ಟ ನಂತರ ದ್ರುಪದನು ಆ ಮಹಾರಥಿಗಳಿಗೆ ಉತ್ತಮ ಚಿನ್ನದಿಂದ ಮಾಡಲ್ಪಟ್ಟ ಬಹಳಷ್ಟು ನೂರು ಸುಂದರ ರಥಗಳನ್ನು, ಪ್ರತಿಯೊಂದು ರಥಕ್ಕೂ ಚಿನ್ನದ ಮೋಜುಗಳನ್ನು ಹೊಂದಿದ್ದ ನಾಲ್ಕು ನಾಲ್ಕು ಕುದುರೆಗಳನ್ನು ಉಡುಗೊರೆಯಾಗಿತ್ತನು.

01190016a ಶತಂ ಗಜಾನಾಮಭಿಪದ್ಮಿನಾಂ ತಥಾ|

         ಶತಂ ಗಿರೀಣಾಮಿವ ಹೇಮಶೃಂಗಿಣಾಂ|

01190016c ತಥೈವ ದಾಸೀಶತಮಗ್ರ್ಯಯೌವನಂ|

         ಮಹಾರ್ಹವೇಷಾಭರಣಾಂಬರಸ್ರಜಂ||

ಪದ್ಮದ ಚಿಹ್ನೆಗಳನ್ನು ಹೊಂದಿ ಹೇಮಶೃಂಗಿ ಗಿರಿಗಳಂತಿದ್ದ ನೂರು ಗಜಗಳು, ಬೆಲೆಬಾಳುವ ವೇಷಾಭರಣಗಳಿಂದ ಸಿಂಗರಿಸಿದ್ದ ನೂರು ಯುವ ದಾಸಿಯರನ್ನೂ ನೀಡಿದನು.

01190017a ಪೃಥಕ್ ಪೃಥಕ್ಚೈವ ದಶಾಯುತಾನ್ವಿತಂ|

         ಧನಂ ದದೌ ಸೌಮಕಿರಗ್ನಿಸಾಕ್ಷಿಕಂ|

01190017c ತಥೈವ ವಸ್ತ್ರಾಣಿ ಚ ಭೂಷಣಾನಿ|

         ಪ್ರಭಾವಯುಕ್ತಾನಿ ಮಹಾಧನಾನಿ||

ಸೌಮಿಕನು ಅಗ್ನಿಸಾಕ್ಷಮ ಪ್ರತಿಯೊಬ್ಬರಿಗೂ ಅಬ್ಜಗಳಲ್ಲಿ ಧನ, ವಸ್ತ್ರಗಳು, ಪ್ರಭಾವಯುಕ್ತ ಬೆಲೆಬಾಳುವ ಭೂಷಣಗಳನ್ನು ನೀಡಿದನು.

01190018a ಕೃತೇ ವಿವಾಹೇ ಚ ತತಃ ಸ್ಮ ಪಾಂಡವಾಃ|

         ಪ್ರಭೂತರತ್ನಾಮುಪಲಭ್ಯ ತಾಂ ಶ್ರಿಯಂ|

01190018c ವಿಜಹ್ರುರಿಂದ್ರಪ್ರತಿಮಾ ಮಹಾಬಲಾಃ|

         ಪುರೇ ತು ಪಾಂಚಾಲನೃಪಸ್ಯ ತಸ್ಯ ಹ||

ವಿವಾಹಿತರಾದ ಮಹಾಬಲಿ ಪಾಂಡವರು ರತ್ನಗಳೊಡನೆ ಆ ಶ್ರೀಯನ್ನು ಪಡೆದು ಪಾಂಚಾಲನೃಪನ ಪುರದಲ್ಲಿ ಇಂದ್ರಪ್ರತಿಮರಾಗಿ ಉಳಿದುಕೊಂಡರು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವೈವಾಹಿಕಪರ್ವಣಿ ದ್ರೌಪದೀವಿವಾಹೇ ನವತ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವೈವಾಹಿಕಪರ್ವದಲ್ಲಿ ದ್ರೌಪದೀವಿವಾಹದಲ್ಲಿ ನೂರಾತೊಂಭತ್ತನೆಯ ಅಧ್ಯಾಯವು.

Related image

Comments are closed.