ಆದಿ ಪರ್ವ: ಸ್ವಯಂವರ ಪರ್ವ
೧೮೪
ಧೃಷ್ಟದ್ಯುಮ್ನನು ಹಿಂಬಾಲಿಸಿ ಕುಂಬಾರನ ಮನೆಗೆ ಬಂದು ಅಡಗಿ ಕುಳಿತು ನಡೆದುದೆಲ್ಲವನ್ನೂ ನೋಡಿದುದು (೧-೨). ಪಾಂಡವರು ಊಟಮಾಡಿದುದನ್ನು, ಮಲಗಿಕೊಂಡಿದುದನ್ನು ನೋಡಿದ ಧೃಷ್ಟದ್ಯುಮ್ನನು ತಂದೆಗೆ ವರದಿಮಾಡಲು ಹೊರಟುಹೋದುದು (೩-೧೩). ದ್ರೌಪದಿಯನ್ನು ಗೆದ್ದವನು ಅರ್ಜುನನೇ ಎಂದು ದ್ರುಪದನು ಮಗನನ್ನು ಪ್ರಶ್ನಿಸುವುದು (೧೪-೧೮).
01184001 ವೈಶಂಪಾಯನ ಉವಾಚ|
01184001a ಧೃಷ್ಟದ್ಯುಮ್ನಸ್ತು ಪಾಂಚಾಲ್ಯಃ ಪೃಷ್ಠತಃ ಕುರುನಂದನೌ|
01184001c ಅನ್ವಗಚ್ಛತ್ತದಾ ಯಾಂತೌ ಭಾರ್ಗವಸ್ಯ ನಿವೇಶನಂ||
ವೈಶಂಪಾಯನನು ಹೇಳಿದನು: “ಕುಂಬಾರನ ಮನೆಗೆ ಹೋಗುವಾಗ ಕುರುನಂದನರನ್ನು ಪಾಂಚಾಲ್ಯ ಧೃಷ್ಟದ್ಯುಮ್ನನು ಹಿಂಬಾಲಿಸಿದ್ದನು.
01184002a ಸೋಽಜ್ಞಾಯಮಾನಃ ಪುರುಷಾನವಧಾಯ ಸಮಂತತಃ|
01184002c ಸ್ವಯಮಾರಾನ್ನಿವಿಷ್ಟೋಽಭೂದ್ಭಾರ್ಗವಸ್ಯ ನಿವೇಶನೇ||
ಅವನು ತನ್ನ ಜನರನ್ನು ಅಡಗಿ ಕುಳಿತುಕೊಳ್ಳುವಂತೆ ಮಾಡಿ ಸ್ವಯಂ ಆ ಕುಂಬಾರನ ಮನೆಯ ಹತ್ತಿರದಲ್ಲಿ ಯಾರಿಗೂ ಕಾಣದಂತೆ ಅಡಗಿ ಕುಳಿತನು.
01184003a ಸಾಯೇಽಥ ಭೀಮಸ್ತು ರಿಪುಪ್ರಮಾಥೀ|
ಜಿಷ್ಣುರ್ಯಮೌ ಚಾಪಿ ಮಹಾನುಭಾವೌ|
01184003c ಭೈಕ್ಷಂ ಚರಿತ್ವಾ ತು ಯುಧಿಷ್ಠಿರಾಯ|
ನಿವೇದಯಾಂ ಚಕ್ರುರದೀನಸತ್ತ್ವಾಃ||
ಸಾಯಂಕಾಲ ರಿಪುಪ್ರಮಥಿ ಭೀಮ, ಜಿಷ್ಣು ಮತ್ತು ಮಹಾನುಭಾವ ಅವಳಿಗಳು ಅವರ ಭಿಕ್ಷವನ್ನು ಮುಗಿಸಿ ಸಂತೋಷದಿಂದ ತಮಗೆ ದೊರೆತಿದ್ದುದೆಲ್ಲವನ್ನೂ ಯುಧಿಷ್ಠಿರನಿಗೆ ಕೊಟ್ಟರು.
01184004a ತತಸ್ತು ಕುಂತೀ ದ್ರುಪದಾತ್ಮಜಾಂ ತಾಂ|
ಉವಾಚ ಕಾಲೇ ವಚನಂ ವದಾನ್ಯಾ|
01184004c ಅತೋಽಗ್ರಮಾದಾಯ ಕುರುಷ್ವ ಭದ್ರೇ|
ಬಲಿಂ ಚ ವಿಪ್ರಾಯ ಚ ದೇಹಿ ಭಿಕ್ಷಾಂ||
ಆಗ ಸಿಹಿಮಾತುಗಳನ್ನಾಡುವ ಕುಂತಿಯು ದೃಪದಾತ್ಮಜೆಯನ್ನು ಉದ್ದೇಶಿಸಿ ಹೇಳಿದಳು: “ಭದ್ರೇ! ಇದನ್ನು ಮೊದಲು ನೀನು ತೆಗೆದುಕೋ; ದೇವರಿಗೆ, ಮತ್ತು ವಿಪ್ರರಿಗೆ ಭಿಕ್ಷವನ್ನು ಕೊಡು.
01184005a ಯೇ ಚಾನ್ನಮಿಚ್ಛಂತಿ ದದಸ್ವ ತೇಭ್ಯಃ|
ಪರಿಶ್ರಿತಾ ಯೇ ಪರಿತೋ ಮನುಷ್ಯಾಃ|
01184005c ತತಶ್ಚ ಶೇಷಂ ಪ್ರವಿಭಜ್ಯ ಶೀಘ್ರಂ|
ಅರ್ಧಂ ಚತುರ್ಣಾಂ ಮಮ ಚಾತ್ಮನಶ್ಚ||
ಇಲ್ಲಿ ಸುತ್ತಮುತ್ತ ಇರುವ ಮನುಷ್ಯರಲ್ಲಿ ಅನ್ನ ಬೇಕೆನ್ನುವವರಿಗೆ ಸ್ವಲ್ಪ ಕೊಡು; ಅದರಲ್ಲಿ ಉಳಿದಿರುವುದನ್ನು ಎರಡು ಭಾಗಗಳಾಗಿ ಮಾಡು - ಅರ್ಧ ಭಾಗ ಆ ನಾಲ್ವರಿಗೆ, ನನಗೆ ಮತ್ತು ನಿನಗೆ.
01184006a ಅರ್ಧಂ ಚ ಭೀಮಾಯ ದದಾಹಿ ಭದ್ರೇ|
ಯ ಏಷ ಮತ್ತರ್ಷಭತುಲ್ಯರೂಪಃ|
01184006c ಶ್ಯಾಮೋ ಯುವಾ ಸಂಹನನೋಪಪನ್ನ|
ಏಷೋ ಹಿ ವೀರೋ ಬಹುಭುಕ್ಸದೈವ||
ಭದ್ರೇ! ಇನ್ನೊಂದು ಅರ್ಧವನ್ನು ಮತ್ತರ್ಷಭತುಲ್ಯರೂಪಿ, ಶ್ಯಾಮ ಯುವಕ ಲೋಹದಂತ ದೇಹವನ್ನು ಹೊಂದಿರುವ ಭೀಮನಿಗೆ ಕೊಡು, ಯಾಕೆಂದರೆ ಈ ವೀರನು ಯಾವಾಗಲೂ ಹೆಚ್ಚು ತಿನ್ನುತ್ತಾನೆ.”
01184007a ಸಾ ಹೃಷ್ಟರೂಪೈವ ತು ರಾಜಪುತ್ರೀ|
ತಸ್ಯಾ ವಚಃ ಸಾಧ್ವವಿಶಂಕಮಾನಾ|
01184007c ಯಥಾವದುಕ್ತಂ ಪ್ರಚಕಾರ ಸಾಧ್ವೀ|
ತೇ ಚಾಪಿ ಸರ್ವೇಽಭ್ಯವಜಹ್ರುರನ್ನಂ||
ಆ ರಾಜಪುತ್ರಿಯು ಸಂತೋಷದಿಂದಲೇ ಸಾಧ್ವಿಯ ಆ ಮಾತುಗಳನ್ನು ಸ್ವಲ್ಪವೂ ಶಂಕಿಸದೇ ಹೇಳಿದ ಹಾಗೆಯೇ ಮಾಡಿದಳು. ಮತ್ತು ಸರ್ವರೂ ಅನ್ನವನ್ನು ಊಟಮಾಡಿದರು.
01184008a ಕುಶೈಸ್ತು ಭೂಮೌ ಶಯನಂ ಚಕಾರ|
ಮಾದ್ರೀಸುತಃ ಸಹದೇವಸ್ತರಸ್ವೀ|
01184008c ಯಥಾತ್ಮೀಯಾನ್ಯಜಿನಾನಿ ಸರ್ವೇ|
ಸಂಸ್ತೀರ್ಯ ವೀರಾಃ ಸುಷುಪುರ್ಧರಣ್ಯಾಂ||
ಅನಂತರ ಮಾದ್ರೀಸುತ ಸಹದೇವನು ಭೂಮಿಯಮೇಲೆ ಕುಶದ ಹಾಸಿಗೆಯನ್ನು ಹಾಸಿದನು. ಪ್ರತಿಯೊಬ್ಬರೂ ತಮ್ಮ ತಮ್ಮ ಜಿನವನ್ನು ಹಾಸಿಕೊಂಡು, ಎಲ್ಲಾ ವೀರರೂ ನೆಲದ ಮೇಲೆ ಮಲಗಿದರು.
01184009a ಅಗಸ್ತ್ಯಶಾಸ್ತಾಮಭಿತೋ ದಿಶಂ ತು|
ಶಿರಾಂಸಿ ತೇಷಾಂ ಕುರುಸತ್ತಮಾನಾಂ|
01184009c ಕುಂತೀ ಪುರಸ್ತಾತ್ತು ಬಭೂವ ತೇಷಾಂ|
ಕೃಷ್ಣಾ ತಿರಶ್ಚೈವ ಬಭೂವ ಪತ್ತಃ||
ಅಗಸ್ತ್ಯಮುನಿಯು ಹರಸಿದ ದಿಕ್ಕಿನಲ್ಲಿ ಆ ಕುರುಸತ್ತಮರು ತಮ್ಮ ಶಿರವನ್ನು ಇಟ್ಟಿದ್ದರು, ಅವರ ತಲೆಗಳ ಪಕ್ಕದಲ್ಲಿ ಕುಂತಿಯು ಮಲಗಿದ್ದಳು, ಮತ್ತು ಕೃಷ್ಣೆಯು ಅವರ ಕಾಲುಗಳ ಪಕ್ಕದಲ್ಲಿ ಮಲಗಿದಳು.
01184010a ಅಶೇತ ಭೂಮೌ ಸಹ ಪಾಂಡುಪುತ್ರೈಃ|
ಪಾದೋಪಧಾನೇವ ಕೃತಾ ಕುಶೇಷು|
01184010c ನ ತತ್ರ ದುಃಖಂ ಚ ಬಭೂವ ತಸ್ಯಾ|
ನ ಚಾವಮೇನೇ ಕುರುಪುಂಗವಾಂಸ್ತಾನ್||
ಈ ರೀತಿ ಕುಶವನ್ನೇ ಕಾಲುದಿಂಬನ್ನಾಗಿ ಮಾಡಿ ಅವಳು ಪಾಂಡುಪುತ್ರರ ಸಹ ಭೂಮಿಯಮೇಲೆ ಮಲಗಿದಳು; ಅವಳಲ್ಲಿ ಸ್ವಲ್ಪವೂ ದುಃಖವಿರಲಿಲ್ಲ ಮತ್ತು ಕುರುಪುಂಗವರ ಕುರಿತು ಯಾವರೀತಿಯೂ ಅಸಹ್ಯವೂ ಅನ್ನಿಸಲಿಲ್ಲ.
01184011a ತೇ ತತ್ರ ಶೂರಾಃ ಕಥಯಾಂ ಬಭೂವುಃ|
ಕಥಾ ವಿಚಿತ್ರಾಃ ಪೃತನಾಧಿಕಾರಾಃ|
01184011c ಅಸ್ತ್ರಾಣಿ ದಿವ್ಯಾನಿ ರಥಾಂಶ್ಚ ನಾಗಾನ್|
ಖಡ್ಗಾನ್ಗದಾಶ್ಚಾಪಿ ಪರಶ್ವಧಾಂಶ್ಚ||
ಆ ಶೂರರು ಯುದ್ದ, ದಿವ್ಯಾಸ್ತ್ರಗಳು, ರಥಗಳು, ಆನೆಗಳು, ಖಡ್ಗಗಳು, ಗದೆಗಳು ಮತ್ತು ಪರಶುಗಳ ಸಂಬಂದಿಸಿದ ವಿಚಿತ್ರ ಕಥೆಗಳನ್ನು ಕಟ್ಟಲು ಪ್ರಾರಂಭಿಸಿದರು.
01184012a ತೇಷಾಂ ಕಥಾಸ್ತಾಃ ಪರಿಕೀರ್ತ್ಯಮಾನಾಃ|
ಪಾಂಚಾಲರಾಜಸ್ಯ ಸುತಸ್ತದಾನೀಂ|
01184012c ಶುಶ್ರಾವ ಕೃಷ್ಣಾಂ ಚ ತಥಾ ನಿಷಣ್ಣಾಂ|
ತೇ ಚಾಪಿ ಸರ್ವೇ ದದೃಶುರ್ಮನುಷ್ಯಾಃ||
ಪಾಂಚಾಲರಾಜ ಸುತನು ಅವರು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಿರುವ ಕಥೆಗಳನ್ನು ಕೇಳಿದನು; ಮತ್ತು ಅವರೆಲ್ಲರೂ ಮತ್ತು ಕೃಷ್ಣೆಯೂ ನಿಷಣ್ಣಳಾಗಿ ಅಲ್ಲಿ ಹೇಗೆ ಮಲಗಿಕೊಂದಿದ್ದಾರೆ ಎನ್ನುವುದನ್ನು ನೋಡಿದನು.
01184013a ಧೃಷ್ಟದ್ಯುಮ್ನೋ ರಾಜಪುತ್ರಸ್ತು ಸರ್ವಂ|
ವೃತ್ತಂ ತೇಷಾಂ ಕಥಿತಂ ಚೈವ ರಾತ್ರೌ|
01184013c ಸರ್ವಂ ರಾಜ್ಞೇ ದ್ರುಪದಾಯಾಖಿಲೇನ|
ನಿವೇದಯಿಷ್ಯಂಸ್ತ್ವರಿತೋ ಜಗಾಮ||
ರಾಜಪುತ್ರ ದೃಷ್ಟದ್ಯುಮ್ನನು ರಾತ್ರಿಯಲ್ಲಿ ನಡೆದುದೆಲ್ಲವನ್ನೂ ರಾಜ ದ್ರುಪದನಿಗೆ ಹೇಳಬೇಕೆಂದು ಅಲ್ಲಿಂದ ತ್ವರಿತವಾಗಿ ಹೊರಟನು.
01184014a ಪಾಂಚಾಲರಾಜಸ್ತು ವಿಷಣ್ಣರೂಪಸ್|
ತಾನ್ಪಾಂಡವಾನಪ್ರತಿವಿಂದಮಾನಃ|
01184014c ಧೃಷ್ಟದ್ಯುಮ್ನಂ ಪರ್ಯಪೃಚ್ಛನ್ ಮಹಾತ್ಮಾ|
ಕ್ವ ಸಾ ಗತಾ ಕೇನ ನೀತಾ ಚ ಕೃಷ್ಣಾ||
ಮಹಾತ್ಮ ಪಾಂಚಾಲರಾಜನು ಪಾಂಡವರನ್ನು ಕಾಣದೇ ವಿಷಣ್ಣನಾಗಿ ದೃಷ್ಟದ್ಯುಮ್ನನನ್ನು ಕೇಳಿದನು: “ಅವಳು ಎಲ್ಲಿಗೆ ಹೋದಳು? ಕೃಷ್ಣೆಯನ್ನು ಯಾರು ತೆಗೆದುಕೊಂಡು ಹೋದರು?
01184015a ಕಚ್ಚಿನ್ನ ಶೂದ್ರೇಣ ನ ಹೀನಜೇನ|
ವೈಶ್ಯೇನ ವಾ ಕರದೇನೋಪಪನ್ನಾ|
01184015c ಕಚ್ಚಿತ್ಪದಂ ಮೂರ್ಧ್ನಿ ನ ಮೇ ನಿದಿಗ್ಧಂ|
ಕಚ್ಚಿನ್ಮಾಲಾ ಪತಿತಾ ನ ಶ್ಮಶಾನೇ||
ಹೀನ ಜನ ಶೂದ್ರರವಳಾಗಿದ್ದಾಳಾ? ಅಥವಾ ನನಗೆ ತೆರಿಗೆಯನ್ನು ಕೊಡುವ ವೈಶ್ಯರವಳಾಗಿದ್ದಾಳಾ? ನನ್ನ ತಲೆಯ ಮೇಲೆ ಯಾರಾದರೂ ಕಾಲಿಟ್ಟಹಾಗಾಯಿತೇ? ಅಥವಾ ಶ್ಮಶಾನದಲ್ಲಿ ಮಾಲೆ ಬಿದ್ದಹಾಗೆ ಆಯಿತೇ?
01184016a ಕಚ್ಚಿತ್ಸವರ್ಣಪ್ರವರೋ ಮನುಷ್ಯ|
ಉದ್ರಿಕ್ತವರ್ಣೋಽಪ್ಯುತ ವೇಹ ಕಚ್ಚಿತ್|
01184016c ಕಚ್ಚಿನ್ನ ವಾಮೋ ಮಮ ಮೂರ್ಧ್ನಿ ಪಾದಃ|
ಕೃಷ್ಣಾಭಿಮರ್ಶೇನ ಕೃತೋಽದ್ಯ ಪುತ್ರ||
ಅಥವಾ ಸವರ್ಣ ಪ್ರವರ ಮನುಷ್ಯನೋ? ಅಥವಾ ಅಕಸ್ಮಾತ್ ಉದ್ರಿಕ್ತವರ್ಣದವರು ಯಾರಾದರೋ? ಅಥವಾ ಯಾರಾದರೂ ಕೃಷ್ಣೆಯನ್ನು ಕೆಡಿಸಿ ನನ್ನ ತಲೆಯ ಮೇಲೆ ತಮ್ಮ ಎಡ ಕಾಲನ್ನು ಇತ್ತಿದ್ದಾರೆಯೋ, ಪುತ್ರ?
01184017a ಕಚ್ಚಿಚ್ಚ ಯಕ್ಷ್ಯೇ ಪರಮಪ್ರತೀತಃ|
ಸಂಯುಜ್ಯ ಪಾರ್ಥೇನ ನರರ್ಷಭೇಣ|
01184017c ಬ್ರವೀಹಿ ತತ್ತ್ವೇನ ಮಹಾನುಭಾವಃ|
ಕೋಽಸೌ ವಿಜೇತಾ ದುಹಿತುರ್ಮಮಾದ್ಯ||
ಅಥವಾ ನರರ್ಷಭ ಪಾರ್ಥನ ಜೊತೆಗೂಡಿದಳು ಎಂದು ನಿಶ್ಚಿಂತೆಯಿಂದ ಇರಬಹುದೇ? ಯಾವ ಮಹಾನುಭಾವನಿಂದ ನನ್ನ ಮಗಳು ಇಂದು ಗೆಲ್ಲಲ್ಪಟ್ಟಿದ್ದಾಳೆ ಎಂಬ ನಿಜವನ್ನು ಹೇಳು.
01184018a ವಿಚಿತ್ರವೀರ್ಯಸ್ಯ ತು ಕಚ್ಚಿದದ್ಯ|
ಕುರುಪ್ರವೀರಸ್ಯ ಧರಂತಿ ಪುತ್ರಾಃ|
01184018c ಕಚ್ಚಿತ್ತು ಪಾರ್ಥೇನ ಯವೀಯಸಾದ್ಯ|
ಧನುರ್ಗೃಹೀತಂ ನಿಹತಂ ಚ ಲಕ್ಷ್ಯಂ||
ವಿಚಿತ್ರವೀರ್ಯ ಕುರುಪ್ರವೀರನ ಪುತ್ರರು ಜೀವಂತವಿದ್ದಾರೆ ಮತ್ತು ಕಿರಿಯ ಪಾರ್ಥನು ಇಂದು ಧನುವನ್ನು ಹಿಡಿದು ಲಕ್ಷ್ಯವನ್ನು ಹೊಡೆಯಲು ಸಾದ್ಯವಿದೆಯೇ?”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸ್ವಯಂವರಪರ್ವಣಿ ಧೃಷ್ಟಧ್ಯುಮ್ನಪ್ರತ್ಯಾಗಮನೇ ಚತುರಶೀತ್ಯಧಿಕಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸ್ವಯಂವರಪರ್ವದಲ್ಲಿ ಧೃಷ್ಟಧ್ಯುಮ್ನಪ್ರತ್ಯಾಗಮನದಲ್ಲಿ ನೂರಾಎಂಭತ್ತ್ನಾಲ್ಕನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸ್ವಯಂವರಪರ್ವ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸ್ವಯಂವರಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-೦/೧೮, ಉಪಪರ್ವಗಳು-೧೨/೧೦೦, ಅಧ್ಯಾಯಗಳು-೧೮೪/೧೯೯೫, ಶ್ಲೋಕಗಳು-೬೦೧೧/೭೩೭೮೪