Adi Parva: Chapter 182

ಆದಿ ಪರ್ವ: ಸ್ವಯಂವರ ಪರ್ವ

೧೮೨

ತಾವು ತಂದ ಭಿಕ್ಷೆಯನ್ನು ಬಂದು ನೋಡು ಎಂದು ಮನೆಯ ಬಾಗಿಲಲ್ಲಿಯೇ ನಿಂತು ಭೀಮಾರ್ಜುನರು ಕುಂತಿಗೆ ಹೇಳಲು, ಒಳಗಿನಿಂದಲೇ ಕುಂತಿಯು ಭಿಕ್ಷೆಯನ್ನು ಸಹೋದರರಲ್ಲಿ ಹಂಚಿಕೊಳ್ಳಿ ಎನ್ನುವುದು (೧-೨). ಎಲ್ಲರೂ ಚರ್ಚೆಮಾಡಿದ ನಂತರ ಯುಧಿಷ್ಠಿರನು ದ್ರೌಪದಿಯು ನಮ್ಮೆಲ್ಲರ ಭಾರ್ಯೆಯಾಗುತ್ತಾಳೆ ಎಂದು ನಿರ್ಧರಿಸುವುದು (೩-೧೫).

01182001 ವೈಶಂಪಾಯನ ಉವಾಚ|

01182001a ಗತ್ವಾ ತು ತಾಂ ಭಾರ್ಗವಕರ್ಮಶಾಲಾಂ|

        ಪಾರ್ಥೌ ಪೃಥಾಂ ಪ್ರಾಪ್ಯ ಮಹಾನುಭಾವೌ|

01182001c ತಾಂ ಯಾಜ್ಞಸೇನೀಂ ಪರಮಪ್ರತೀತೌ|

        ಭಿಕ್ಷೇತ್ಯಥಾವೇದಯತಾಂ ನರಾಗ್ರ್ಯೌ||

ವೈಶಂಪಾಯನನು ಹೇಳಿದನು: “ಮಹಾನುಭಾವ ನರವ್ಯಾಘ್ರ ಪಾರ್ಥರೀರ್ವರು ಕುಂಬಾರನ ಮನೆಯನ್ನು ತಲುಪಿ ಅಲ್ಲಿ ಪೃಥೆಯನ್ನು ಕಂಡು ಪರಮಪ್ರತೀತರಾಗಿ ಯಾಜ್ಞಸೇನಿಯ ಕುರಿತು “ನಾವು ತಂದಿರುವ ಭಿಕ್ಷೆಯನ್ನು ನೋಡು!” ಎಂದು ಹೇಳಿದರು.

01182002a ಕುಟೀಗತಾ ಸಾ ತ್ವನವೇಕ್ಷ್ಯ ಪುತ್ರಾನ್|

        ಉವಾಚ ಭುಂಕ್ತೇತಿ ಸಮೇತ್ಯ ಸರ್ವೇ|

01182002c ಪಶ್ಚಾತ್ತು ಕುಂತೀ ಪ್ರಸಮೀಕ್ಷ್ಯ ಕನ್ಯಾಂ|

        ಕಷ್ಟಂ ಮಯಾ ಭಾಷಿತಮಿತ್ಯುವಾಚ||

ಮನೆಯೊಳಗಿದ್ದ ಅವಳು ತನ್ನ ಪುತ್ರರನ್ನು ನೋಡದೇ ಹೇಳಿದಳು: “ನೀವೆಲ್ಲರೂ ಅದನ್ನು ಸಮನಾಗಿ ಹಂಚಿಕೊಳ್ಳಿ!” ಎಂದಳು. ನಂತರ ಕುಂತಿಯು ಆ ಕನ್ಯೆಯನ್ನು ನೋಡಿ “ನಾನು ಎಂಥಹ ಕಷ್ಟಕರ ಮಾತುಗಳನ್ನಾಡಿದೆ!” ಎಂದಳು.

01182003a ಸಾಧರ್ಮಭೀತಾ ಹಿ ವಿಲಜ್ಜಮಾನಾ|

        ತಾಂ ಯಾಜ್ಞಸೇನೀಂ ಪರಮಪ್ರತೀತಾಂ|

01182003c ಪಾಣೌ ಗೃಹೀತ್ವೋಪಜಗಾಮ ಕುಂತೀ|

        ಯುಧಿಷ್ಠಿರಂ ವಾಕ್ಯಮುವಾಚ ಚೇದಂ||

ಅಧರ್ಮಭೀತಳಾಗಿ ವಿಲಜ್ಜಮಾನಳಾದ ಆ ಕುಂತಿಯು ಪರಮಪ್ರತೀತೆ ಯಾಜ್ಞಸೇನಿಯ ಕೈಗಳನ್ನು ಹಿಡಿದು ಒಳ ಹೋಗಿ ಯುಧಿಷ್ಠಿರನಲ್ಲಿ ಈ ಮಾತುಗಳನ್ನಾಡಿದಳು:

01182004a ಇಯಂ ಹಿ ಕನ್ಯಾ ದ್ರುಪದಸ್ಯ ರಾಜ್ಞಸ್|

        ತವಾನುಜಾಭ್ಯಾಂ ಮಯಿ ಸಂನಿಸೃಷ್ಟಾ|

01182004c ಯಥೋಚಿತಂ ಪುತ್ರ ಮಯಾಪಿ ಚೋಕ್ತಂ|

        ಸಮೇತ್ಯ ಭುಂಕ್ತೇತಿ ನೃಪ ಪ್ರಮಾದಾತ್||

“ನಿನ್ನ ತಮ್ಮಂದಿರಿಬ್ಬರು ರಾಜ ದ್ರುಪದನ ಈ ಮಗಳನ್ನು ನನಗೊಪ್ಪಿಸಿದರು. ಪುತ್ರ! ನೃಪ! ಯಾವಾಗಲೂ ನಾನು ಹೇಳುವಂತೆ ಈ ಬಾರಿಯೂ ಪ್ರಮಾದದಿಂದ ಅದನ್ನು ನೀವೆಲ್ಲರೂ ಸಮನಾಗಿ ಹಂಚಿಕೊಳ್ಳಿ ಎಂದುಬಿಟ್ಟೆ!

01182005a ಕಥಂ ಮಯಾ ನಾನೃತಮುಕ್ತಮದ್ಯ|

        ಭವೇತ್ಕುರೂಣಾಮೃಷಭ ಬ್ರವೀಹಿ|

01182005c ಪಾಂಚಾಲರಾಜಸ್ಯ ಸುತಾಮಧರ್ಮೋ|

        ನ ಚೋಪವರ್ತೇತ ನಭೂತಪೂರ್ವಃ||

ನಾನು ಹೇಳಿದ್ದುದು ಸುಳ್ಳಾಗದ ಹಾಗೆ ಮತ್ತು ಪಾಂಚಾಲರಾಜನ ಸುತೆಯೂ ಕೂಡ ಈ ಹಿಂದೆ ಯಾರೂ ಮಾಡಿರದ ಅಧರ್ಮವನ್ನು ಮಾಡದಹಾಗೆ ಏನು ಮಾಡಬಹುದು ಹೇಳು ಕುರುಶ್ರೇಷ್ಠ!”

01182006a ಮುಹೂರ್ತಮಾತ್ರಂ ತ್ವನುಚಿಂತ್ಯ ರಾಜಾ|

        ಯುಧಿಷ್ಠಿರೋ ಮಾತರಮುತ್ತಮೌಜಾಃ|

01182006c ಕುಂತೀಂ ಸಮಾಶ್ವಾಸ್ಯ ಕುರುಪ್ರವೀರೋ|

        ಧನಂಜಯಂ ವಾಕ್ಯಮಿದಂ ಬಭಾಷೇ||

ಮುಹೂರ್ತಮಾತ್ರ ಯೋಚನೆಮಾಡಿ ಉತ್ತಮೌಜಸ ರಾಜ ಯುಧಿಷ್ಠಿರನು ತಾಯಿ ಕುಂತಿಗೆ ಸಮಾಧಾನ ಮಾಡುತ್ತಾ ಕುರುಪ್ರವೀರ ಧನಂಜಯನನ್ನುದ್ದೇಶಿಸಿ ಈ ಮಾತುಗಳನ್ನು ಹೇಳಿದನು:

01182007a ತ್ವಯಾ ಜಿತಾ ಪಾಂಡವ ಯಾಜ್ಞಸೇನೀ|

        ತ್ವಯಾ ಚ ತೋಷಿಷ್ಯತಿ ರಾಜಪುತ್ರೀ|

01182007c ಪ್ರಜ್ವಾಲ್ಯತಾಂ ಹೂಯತಾಂ ಚಾಪಿ ವಹ್ನಿರ್|

        ಗೃಹಾಣ ಪಾಣಿಂ ವಿಧಿವತ್ತ್ವಮಸ್ಯಾಃ||

“ಪಾಂಡವ! ಯಾಜ್ಞಸೇನಿಯು ನಿನ್ನಿಂದ ಗೆದ್ದವಳು ಮತ್ತು ರಾಜಪುತ್ರಿಯನ್ನು ನೀನೇ ತೃಪ್ತಿಗೊಳಿಸಬೇಕು. ಅಗ್ನಿಯನ್ನು ಪ್ರಜ್ವಲಿಸಿ ಹವಿಸ್ಸನ್ನು ನೀಡಿ ವಿಧಿವತ್ತಾಗಿ ಅವಳ ಪಾಣಿಗ್ರಹಣ ಮಾಡಿಕೋ!”

01182008 ಅರ್ಜುನ ಉವಾಚ|

01182008a ಮಾ ಮಾಂ ನರೇಂದ್ರ ತ್ವಮಧರ್ಮಭಾಜಂ|

        ಕೃಥಾ ನ ಧರ್ಮೋ ಹ್ಯಯಮೀಪ್ಸಿತೋಽನ್ಯೈಃ|

01182008c ಭವಾನ್ನಿವೇಶ್ಯಃ ಪ್ರಥಮಂ ತತೋಽಯಂ|

        ಭೀಮೋ ಮಹಾಬಾಹುರಚಿಂತ್ಯಕರ್ಮಾ||

ಅರ್ಜುನನು ಹೇಳಿದನು: “ನರೇಂದ್ರ! ನಾನು ಅಧರ್ಮದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಡ! ಬೇರೆಯವರು ಸ್ವೀಕರಿಸುವ ಧರ್ಮವಿದಲ್ಲ. ನೀನೇ ಮೊದಲು ಮದುವೆಯಾಗಬೇಕು. ನಂತರ ಅಚಿಂತ್ಯಕರ್ಮಿ ಮಹಾಬಾಹು ಬೀಮ.

01182009a ಅಹಂ ತತೋ ನಕುಲೋಽನಂತರಂ ಮೇ|

        ಮಾದ್ರೀಸುತಃ ಸಹದೇವೋ ಜಘನ್ಯಃ|

01182009c ವೃಕೋದರೋಽಹಂ ಚ ಯಮೌ ಚ ರಾಜನ್ನಿ-

        ಯಂ ಚ ಕನ್ಯಾ ಭವತಃ ಸ್ಮ ಸರ್ವೇ||

ನಂತರ ನಾನು, ನನ್ನ ನಂತರ ನಕುಲ ಮತ್ತು ನಮ್ಮೆಲ್ಲರ ನಂತರ ಮಾದ್ರೀಸುತ ಸಹದೇವ. ರಾಜನ್! ವೃಕೋದರ, ನಾನು ಮತ್ತು ಅವಳಿಗಳು ಎಲ್ಲರೂ ಈ ಕನ್ಯೆಯು ನಿನಗೇ ಸೇರಬೇಕು ಎಂದು ಅಂದುಕೊಂಡಿದ್ದೇವೆ.

01182010a ಏವಂಗತೇ ಯತ್ಕರಣೀಯಮತ್ರ|

        ಧರ್ಮ್ಯಂ ಯಶಸ್ಯಂ ಕುರು ತತ್ಪ್ರಚಿಂತ್ಯ|

01182010c ಪಾಂಚಾಲರಾಜಸ್ಯ ಚ ಯತ್ಪ್ರಿಯಂ ಸ್ಯಾತ್|

        ತದ್ಬ್ರೂಹಿ ಸರ್ವೇ ಸ್ಮ ವಶೇ ಸ್ಥಿತಾಸ್ತೇ||

ಈ ಪರಿಸ್ಥಿತಿಯಲ್ಲಿ ಏನನ್ನು ಮಾಡಿದರೆ ಒಳ್ಳೆಯದಾಗುವುದು, ಯಾವುದು ನಮಗೆ ಧರ್ಮ ಮತ್ತು ಯಶಸ್ಸನ್ನು ತರುವುದು ಮತ್ತು ಪಾಂಚಾಲರಾಜನಿಗೆ ಯಾವುದು ಪ್ರಿಯವಾದುದು ಎನ್ನುವುದರ ಬಗ್ಗೆ ಯೋಚಿಸು. ನಮಗೆ ಹೇಳು, ನಾವೆಲ್ಲ ನಿನ್ನ ವಶದಲ್ಲಿದ್ದೇವೆ.””

01182011 ವೈಶಂಪಾಯನ ಉವಾಚ|

01182011a ತೇ ದೃಷ್ಟ್ವಾ ತತ್ರ ತಿಷ್ಠಂತೀಂ ಸರ್ವೇ ಕೃಷ್ಣಾಂ ಯಶಸ್ವಿನೀಂ|

01182011c ಸಂಪ್ರೇಕ್ಷ್ಯಾನ್ಯೋನ್ಯಮಾಸೀನಾ ಹೃದಯೈಸ್ತಾಮಧಾರಯನ್||

ವೈಶಂಪಾಯನನು ಹೇಳಿದನು: “ಎಲ್ಲರೂ ಅಲ್ಲಿ ನಿಂತಿದ್ದ ಯಶಸ್ವಿನೀ ಕೃಷ್ಣೆಯನ್ನು ನೋಡುತ್ತಾ ತಮ್ಮ ತಮ್ಮ ಹೃದಯದಲ್ಲಿ ಅವಳನ್ನು ಆರಾಧಿಸುತ್ತಾ ಅನ್ಯೋನ್ಯರನ್ನು ನೋಡಿದರು.

01182012a ತೇಷಾಂ ಹಿ ದ್ರೌಪದೀಂ ದೃಷ್ಟ್ವಾ ಸರ್ವೇಷಾಮಮಿತೌಜಸಾಂ|

01182012c ಸಂಪ್ರಮಥ್ಯೇಂದ್ರಿಯಗ್ರಾಮಂ ಪ್ರಾದುರಾಸೀನ್ಮನೋಭವಃ||

ಅಮಿತ ತೇಜಸ್ವಿಗಳಾದ ಎಲ್ಲರೂ ಆ ದ್ರೌಪದಿಯನ್ನು ನೋಡುತ್ತಿರಲು ಅವರ ಮನದಲ್ಲಿ ಅವಳ ಮೇಲಿರುವ ಪ್ರೀತಿಯು ಅವರ ಇಂದ್ರಿಯಗಳನ್ನು ಕಡೆಯುತ್ತಿರಲು ಅವರ ಮನೋಭಾವಗಳು ಗೋಚರವಾದವು.

01182013a ಕಾಮ್ಯಂ ರೂಪಂ ಹಿ ಪಾಂಚಾಲ್ಯಾ ವಿಧಾತ್ರಾ ವಿಹಿತಂ ಸ್ವಯಂ|

01182013c ಬಭೂವಾಧಿಕಮನ್ಯಾಭ್ಯಃ ಸರ್ವಭೂತಮನೋಹರಂ||

ಸ್ವಯಂ ವಿಧಾತನಿಂದ ವಿಹಿತೆ ಆ ಪಾಂಚಾಲೆಯ ಕಾಮ್ಯಕ ರೂಪವು ಅನ್ಯರ ರೂಪಕ್ಕಿಂತ ಅಧಿಕವಾಗಿತ್ತು ಮತ್ತು ಸರ್ವಭೂತ ಮನೋಹರವಾಗಿದ್ದಿತು.

01182014a ತೇಷಾಮಾಕಾರಭಾವಜ್ಞಃ ಕುಂತೀಪುತ್ರೋ ಯುಧಿಷ್ಠಿರಃ|

01182014c ದ್ವೈಪಾಯನವಚಃ ಕೃತ್ಸ್ನಂ ಸಂಸ್ಮರನ್ವೈ ನರರ್ಷಭ||

01182015a ಅಬ್ರವೀತ್ಸ ಹಿ ತಾನ್ಭ್ರಾತೄನ್ಮಿಥೋಭೇದಭಯಾನ್ನೃಪಃ|

01182015c ಸರ್ವೇಷಾಂ ದ್ರೌಪದೀ ಭಾರ್ಯಾ ಭವಿಷ್ಯತಿ ಹಿ ನಃ ಶುಭಾ||

ಅವರೆಲ್ಲರ ಭಾವನೆಗಳನ್ನು ತಿಳಿದ, ದ್ವೈಪಾಯನನ ಅದ್ಭುತವಚನಗಳನ್ನು ಸ್ಮರಿಸಿದ ನರರ್ಷಭ ಕುಂತೀಪುತ್ರ ಯುಧಿಷ್ಠಿರ ರಾಜನು ತಮ್ಮಲ್ಲಿಯೇ ಭಿರುಕುಂಟಾಗಬಹುದೆಂಬ ಭಯದಿಂದ ಅವರೆಲ್ಲರಿಗೂ: “ಶುಭೆ ದ್ರೌಪದಿಯು ನಮ್ಮೆಲ್ಲರ ಭಾರ್ಯೆಯಾಗುತ್ತಾಳೆ!” ಎಂದನು.

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸ್ವಯಂವರಪರ್ವಣಿ ದ್ವಶೀತ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸ್ವಯಂವರಪರ್ವದಲ್ಲಿ ನೂರಾಎಂಭತ್ತೆರಡನೆಯ ಅಧ್ಯಾಯವು.

Image result for indian birds images

Comments are closed.