Adi Parva: Chapter 181

ಆದಿ ಪರ್ವ: ಸ್ವಯಂವರ ಪರ್ವ

೧೮೧

ಅರ್ಜುನನು ಕರ್ಣನನ್ನೂ ಭೀಮಸೇನನು ಶಲ್ಯನನ್ನೂ ಎದುರಿಸಿ ಹೋರಾಡಿದುದು (೧-೧೪). ಕರ್ಣ-ಅರ್ಜುನರ ಸಂವಾದ (೧೫-೨೧). ಕರ್ಣ-ಶಲ್ಯರು ಹಿಂಜರಿದಾಗ, ಕೃಷ್ಣನು ಕ್ಷತ್ರಿಯರನ್ನು ತಡೆಹಿಡಿದುದು (೨೨-೩೧). ಭೀಮಾರ್ಜುನರು ದ್ರೌಪದಿಯೊಡನೆ ಮನೆಗೆ ತೆರಳಿದುದು (೩೨-೪೦).

01181001 ವೈಶಂಪಾಯನ ಉವಾಚ|

01181001a ಅಜಿನಾನಿ ವಿಧುನ್ವಂತಃ ಕರಕಾಂಶ್ಚ ದ್ವಿಜರ್ಷಭಾಃ|

01181001c ಊಚುಸ್ತಂ ಭೀರ್ನ ಕರ್ತವ್ಯಾ ವಯಂ ಯೋತ್ಸ್ಯಾಮಹೇ ಪರಾನ್||

ವೈಶಂಪಾಯನನು ಹೇಳಿದನು: “ಆ ಈರ್ವರು ದ್ವಿಜರ್ಷಭರು ತಮ್ಮ ಜಿನ-ಕರಕಗಳನ್ನು ಬಿಸುಟು “ಭಯಪಡುವುದು ಬೇಡ! ನಾವು ಈ ಶತ್ರುಗಳನ್ನು ಎದುರಿಸುತ್ತೇವೆ!” ಎಂದು ದ್ರುಪದನಿಗೆ ಹೇಳಿದರು.

01181002a ತಾನೇವಂ ವದತೋ ವಿಪ್ರಾನರ್ಜುನಃ ಪ್ರಹಸನ್ನಿವ|

01181002c ಉವಾಚ ಪ್ರೇಕ್ಷಕಾ ಭೂತ್ವಾ ಯೂಯಂ ತಿಷ್ಠತ ಪಾರ್ಶ್ವತಃ||

ಅರ್ಜುನನು ನಸುನಗುತ್ತಾ “ನೀವು ಪಕ್ಕದಲ್ಲಿ ನಿಂತು ನೋಡಿ!” ಎಂದು ಬ್ರಾಹ್ಮಣರಿಗೆ ಹೇಳಿದನು.

01181003a ಅಹಮೇನಾನಜಿಹ್ಮಾಗ್ರೈಃ ಶತಶೋ ವಿಕಿರಂಶರೈಃ|

01181003c ವಾರಯಿಷ್ಯಾಮಿ ಸಂಕ್ರುದ್ಧಾನ್ಮಂತ್ರೈರಾಶೀವಿಷಾನಿವ||

“ಮಂತ್ರೋಚ್ಛಾರಣೆಯಿಂದ ವಿಷಸರ್ಪಗಳನ್ನು ತಡೆಗಟ್ಟುವಂತೆ ನಾನು ಈ ನೂರಾರು ನೇರ ಮೊನಚಾದ ಬಾಣಗಳನ್ನು ಸುರಿಸಿ ಈ ಕುಪಿತ ಕ್ಷತ್ರಿಯರನ್ನು ತಡೆಯುತ್ತೇನೆ.”

01181004a ಇತಿ ತದ್ಧನುರಾದಾಯ ಶುಲ್ಕಾವಾಪ್ತಂ ಮಹಾರಥಃ|

01181004c ಭ್ರಾತ್ರಾ ಭೀಮೇನ ಸಹಿತಸ್ತಸ್ಥೌ ಗಿರಿರಿವಾಚಲಃ||

ಹೀಗೆನ್ನುತ್ತಾ ಆ ಮಹಾರಥಿಯು ಅಲ್ಲೇ ಬಿದ್ದಿದ್ದ ಧನುಸ್ಸನ್ನು ಎತ್ತಿ ಹಿಡಿದು ಅಚಲ ಪರ್ವತದಂತೆ ಭ್ರಾತಾ ಭೀಮನ ಹತ್ತಿರ ಭಿರುಸಾಗಿ ನಿಂತುಕೊಂಡನು.

01181005a ತತಃ ಕರ್ಣಮುಖಾನ್ಕ್ರುದ್ಧಾನ್ ಕ್ಷತ್ರಿಯಾಂಸ್ತಾನ್ರುಷೋತ್ಥಿತಾನ್|

01181005c ಸಂಪೇತತುರಭೀತೌ ತೌ ಗಜೌ ಪ್ರತಿಗಜಾನಿವ||

ನಂತರ ಇಬ್ಬರೂ ಕುಪಿತರಾಗಿ ಕರ್ಣನ ನಾಯಕತ್ವದಲ್ಲಿ ದಂಗೆಯೆದ್ದ ಕ್ಷತ್ರಿಯರ ಮೇಲೆ ತಮ್ಮ ಪ್ರತಿಕಾಮಿಗಳ ಮೇಲೆ ಎರಗುವ ಎರಡು ಆನೆಗಳಂತೆ ಎರಗಿದರು.

01181006a ಊಚುಶ್ಚ ವಾಚಃ ಪರುಷಾಸ್ತೇ ರಾಜಾನೋ ಜಿಘಾಂಸವಃ|

01181006c ಆಹವೇ ಹಿ ದ್ವಿಜಸ್ಯಾಪಿ ವಧೋ ದೃಷ್ಟೋ ಯುಯುತ್ಸತಃ||

ಕಟುಕರಂತಿದ್ದ ರಾಜರು ರೋಷದಿಂದ “ಯುದ್ಧದಲ್ಲಿ ಹೋರಾಡಲು ಬಯಸುತ್ತಿದ್ದ ಬ್ರಾಹ್ಮಣನನ್ನೂ ಕೊಲ್ಲಬಹುದು” ಎಂದು ಅಂದುಕೊಂಡರು.

01181007a ತತೋ ವೈಕರ್ತನಃ ಕರ್ಣೋ ಜಗಾಮಾರ್ಜುನಮೋಜಸಾ|

01181007c ಯುದ್ಧಾರ್ಥೀ ವಾಶಿತಾಹೇತೋರ್ಗಜಃ ಪ್ರತಿಗಜಂ ಯಥಾ||

ಒಂದು ಆನೆಯು ಇನ್ನೊಂದು ಪ್ರತಿಸ್ಪರ್ದಿ ಆನೆಯ ಮೇಲೆರಗುವಂತೆ ವೈಕರ್ತನ ಕರ್ಣನು ಯುದ್ಧದ ಉತ್ಸುಕತೆಯಿಂದ ಅರ್ಜುನನ ಮೇಲೆ ಧಾಳಿ ಮಾಡಿದನು.

01181008a ಭೀಮಸೇನಂ ಯಯೌ ಶಲ್ಯೋ ಮದ್ರಾಣಾಮೀಶ್ವರೋ ಬಲೀ|

01181008c ದುರ್ಯೋಧನಾದಯಸ್ತ್ವನ್ಯೇ ಬ್ರಾಹ್ಮಣೈಃ ಸಹ ಸಂಗತಾಃ|

01181008e ಮೃದುಪೂರ್ವಮಯತ್ನೇನ ಪ್ರತ್ಯಯುಧ್ಯಂಸ್ತದಾಹವೇ||

ಮದ್ರಾಧೀಶ್ವರ ಮಹಾಬಲಿ ಶಲ್ಯನು ಭೀಮಸೇನನನ್ನು ಎದುರಿಸಿದನು. ದುರ್ಯೋಧನ ಮತ್ತಿತರರು ಬ್ರಾಹ್ಮಣರ ಮೇಲೆ ಮೃದುವಾಗಿ ಹೆಚ್ಚು ಕಷ್ಟಗಳನ್ನು ತೆಗೆದುಕೊಳ್ಳದೆ ಧಾಳಿ ಮಾಡಿದರು.

01181009a ತತೋಽರ್ಜುನಃ ಪ್ರತ್ಯವಿಧ್ಯದಾಪತಂತಂ ತ್ರಿಭಿಃ ಶರೈಃ|

01181009c ಕರ್ಣಂ ವೈಕರ್ತನಂ ಧೀಮಾನ್ವಿಕೃಷ್ಯ ಬಲವದ್ಧನುಃ||

ವೈಕರ್ತನ ಕರ್ಣನು ತನ್ನ ಮೇಲೆ ಬೀಸಿ ಬರುತ್ತಿದ್ದಂತೆ ಧೀಮಂತ ಅರ್ಜುನನು ತನ್ನ ಬಲವಾದ ಧನಸ್ಸನ್ನು ಎಳೆದು ಅವನ ಮೇಲೆ ಮೂರು ಬಾಣಗಳನ್ನು ಬಿಟ್ಟನು.

01181010a ತೇಷಾಂ ಶರಾಣಾಂ ವೇಗೇನ ಶಿತಾನಾಂ ತಿಗ್ಮತೇಜಸಾಂ|

01181010c ವಿಮುಹ್ಯಮಾನೋ ರಾಧೇಯೋ ಯತ್ನಾತ್ತಮನುಧಾವತಿ||

ವೇಗವಾಗಿ ಬಂದ ಮೊನಚಾದ ಆ ಬಾಣಗಳು ರಾಧೇಯನನ್ನು ತತ್ತರಿಸಿದವು. ಅವನು ಜಾಗ್ರತೆಯಿಂದ ಮುಂದುವರೆದನು.

01181011a ತಾವುಭಾವಪ್ಯನಿರ್ದೇಶ್ಯೌ ಲಾಘವಾಜ್ಜಯತಾಂ ವರೌ|

01181011c ಅಯುಧ್ಯೇತಾಂ ಸುಸಂರಬ್ಧಾವನ್ಯೋನ್ಯವಿಜಯೈಷಿಣೌ||

ಇಬ್ಬರ ಚಲನೆಯ ವೇಗದಿಂದಾಗಿ ಒಬ್ಬರಿಗೊಬ್ಬರು ಸರಿಯಾಗಿ ಕಾಣುತ್ತಿರಲಿಲ್ಲ ಮತ್ತು ಶ್ರೇಷ್ಠರಾದ ಆ ಇಬ್ಬರೂ ವಿಜಯೋದ್ಧರು ಪರಸ್ಪರರನ್ನು ಸೋಲಿಸಲು ಭೀಷಣ ಯುದ್ಧದಲ್ಲಿ ತೊಡಗಿದರು.

01181012a ಕೃತೇ ಪ್ರತಿಕೃತಂ ಪಶ್ಯ ಪಶ್ಯ ಬಾಹುಬಲಂ ಚ ಮೇ|

01181012c ಇತಿ ಶೂರಾರ್ಥವಚನೈರಾಭಾಷೇತಾಂ ಪರಸ್ಪರಂ||

“ನಾನು ಅದನ್ನು ಹೇಗೆ ತಡೆಹಿಡಿದೆ ನೋಡು! ಈಗ ನನ್ನ ಬಾಹುಬಲವನ್ನು ನೋಡು!” ಹೀಗೆ ವೀರರ ಭಾಷೆಯಲ್ಲಿ ಪರಸ್ಪರ ಛೇಡಿಸಿದರು.

01181013a ತತೋಽರ್ಜುನಸ್ಯ ಭುಜಯೋರ್ವೀರ್ಯಮಪ್ರತಿಮಂ ಭುವಿ|

01181013c ಜ್ಞಾತ್ವಾ ವೈಕರ್ತನಃ ಕರ್ಣಃ ಸಂರಬ್ಧಃ ಸಮಯೋಧಯತ್||

ಭುವಿಯಲ್ಲಿಯೇ ಅಪ್ರತಿಮ ಅರ್ಜುನನ ಭುಜಬಲವನ್ನು ಕಂಡ ವೈಕರ್ತನ ಕರ್ಣನು ಇನ್ನೂ ರೋಷದಿಂದ ಹೋರಾಡಿದನು.

01181014a ಅರ್ಜುನೇನ ಪ್ರಯುಕ್ತಾಂಸ್ತಾನ್ಬಾಣಾನ್ವೇಗವತಸ್ತದಾ|

01181014c ಪ್ರತಿಹತ್ಯ ನನಾದೋಚ್ಚೈಃ ಸೈನ್ಯಾಸ್ತಮಭಿಪೂಜಯನ್||

ಅರ್ಜುನನಿಂದ ವೇಗವಾಗಿ ಬರುತ್ತಿದ್ದ ಬಾಣಗಳನ್ನು ತಡೆಹಿಡಿದು ಜೋರಾಗಿ ನಿನಾದಿಸುತ್ತಿರುವ ಅವನನ್ನು ಅಲ್ಲಿರುವ ಸೈನಿಕರೆಲ್ಲ ಮೆಚ್ಚಿಕೊಂಡರು.

01181015 ಕರ್ಣ ಉವಾಚ|

01181015a ತುಷ್ಯಾಮಿ ತೇ ವಿಪ್ರಮುಖ್ಯ ಭುಜವೀರ್ಯಸ್ಯ ಸಂಯುಗೇ|

01181015c ಅವಿಷಾದಸ್ಯ ಚೈವಾಸ್ಯ ಶಸ್ತ್ರಾಸ್ತ್ರವಿನಯಸ್ಯ ಚ||

ಕರ್ಣನು ಹೇಳಿದನು: “ವಿಪ್ರಮುಖ್ಯ! ನಿನ್ನ ಭುಜವೀರ್ಯ, ಎಡೆಬಿಡದ ಯುದ್ಧ ಮತ್ತು ಶಸ್ತ್ರಾಸ್ತ್ರ ವಿನಯವು ನನ್ನನ್ನು ಸಂತುಷ್ಟಗೊಳಿಸಿದವು.

01181016a ಕಿಂ ತ್ವಂ ಸಾಕ್ಷಾದ್ಧನುರ್ವೇದೋ ರಾಮೋ ವಾ ವಿಪ್ರಸತ್ತಮ|

01181016c ಅಥ ಸಾಕ್ಷಾದ್ಧರಿಹಯಃ ಸಾಕ್ಷಾದ್ವಾ ವಿಷ್ಣುರಚ್ಯುತಃ||

01181017a ಆತ್ಮಪ್ರಚ್ಛಾದನಾರ್ಥಂ ವೈ ಬಾಹುವೀರ್ಯಮುಪಾಶ್ರಿತಃ|

01181017c ವಿಪ್ರರೂಪಂ ವಿಧಾಯೇದಂ ತತೋ ಮಾಂ ಪ್ರತಿಯುಧ್ಯಸೇ||

ಆತ್ಮರಕ್ಷಣೆಗೆಂದು ವಿಪ್ರರೂಪವನ್ನು ತಳೆದು ಬಾಹುವೀರ್ಯದಿಂದ ನನ್ನೊಡನೆ ಘೋರವಾಗಿ ಹೋರಾಡುತ್ತಿರುವ ವಿಪ್ರಸತ್ತಮ! ನೀನು ಸಾಕ್ಷಾತ್ ದೇವದೇವನೋ ಅಥವಾ ರಾಮನೋ ಅಥವಾ ಸಾಕ್ಷಾತ್ ಹರಿಹಯನೋ ಅಥವಾ ಸಾಕ್ಷಾತ್ ಅಚ್ಯುತ ವಿಷ್ಣುವೋ?

01181018a ನ ಹಿ ಮಾಮಾಹವೇ ಕ್ರುದ್ಧಮನ್ಯಃ ಸಾಕ್ಷಾಚ್ಶಚೀಪತೇಃ|

01181018c ಪುಮಾನ್ಯೋಧಯಿತುಂ ಶಕ್ತಃ ಪಾಂಡವಾದ್ವಾ ಕಿರೀಟಿನಃ||

ಯಾಕೆಂದರೆ ಸಾಕ್ಷಾತ್ ಶಚೀಪತಿ ಮತ್ತು ಪಾಂಡವ ಕಿರೀಟಿಯ ಹೊರತು ಇನ್ನ್ಯಾರೂ ಕೃದ್ಧನಾದ ನನ್ನೊಡನೆ ಯುದ್ಧಮಾಡಲು ಶಕ್ತರಲ್ಲ.””

01181019 ವೈಶಂಪಾಯನ ಉವಾಚ|

01181019a ತಮೇವಂವಾದಿನಂ ತತ್ರ ಫಲ್ಗುನಃ ಪ್ರತ್ಯಭಾಷತ|

01181019c ನಾಸ್ಮಿ ಕರ್ಣ ಧನುರ್ವೇದೋ ನಾಸ್ಮಿ ರಾಮಃ ಪ್ರತಾಪವಾನ್|

01181019e ಬ್ರಾಹ್ಮಣೋಽಸ್ಮಿ ಯುಧಾಂ ಶ್ರೇಷ್ಠಃ ಸರ್ವಶಸ್ತ್ರಭೃತಾಂ ವರಃ||

ವೈಶಂಪಾಯನನು ಹೇಳಿದನು: “ಅವನ ಈ ಮಾತುಗಳಿಗೆ ಫಲ್ಗುಣನು ಉತ್ತರಿಸಿದನು: “ಇಲ್ಲ ಕರ್ಣ! ಧನುರ್ದೇವನಲ್ಲ, ಪ್ರತಾಪಿ ರಾಮನೂ ಅಲ್ಲ. ಯುದ್ಧಶ್ರೇಷ್ಠ! ಸರ್ವ ಶಸ್ತ್ರಗಳನ್ನು ಹಿಡಿಯುವವರಲ್ಲಿ ಶ್ರೇಷ್ಠನಾದ ನಾನು ಓರ್ವ ಬ್ರಾಹ್ಮಣ.

01181020a ಬ್ರಾಹ್ಮೇ ಪೌರಂದರೇ ಚಾಸ್ತ್ರೇ ನಿಷ್ಠಿತೋ ಗುರುಶಾಸನಾತ್|

01181020c ಸ್ಥಿತೋಽಸ್ಮ್ಯದ್ಯ ರಣೇ ಜೇತುಂ ತ್ವಾಂ ವೀರಾವಿಚಲೋ ಭವ||

ಗುರುಶಾಸನದಂತೆ ನಾನು ಬ್ರಹ್ಮ ಮತ್ತು ಪೌರಂದರ ಅಸ್ತ್ರಗಳಲ್ಲಿ ನಿಪುಣನಾಗಿದ್ದೇನೆ. ಇಂದು ರಣದಲ್ಲಿ ನಿನನ್ನು ಗೆಲ್ಲಲು ಸಿದ್ಧನಾಗಿದ್ದೇನೆ. ವೀರ! ವಿಚಲನಾಗು!”

01181021a ಏವಮುಕ್ತಸ್ತು ರಾಧೇಯೋ ಯುದ್ಧಾತ್ಕರ್ಣೋ ನ್ಯವರ್ತತ|

01181021c ಬ್ರಹ್ಮಂ ತೇಜಸ್ತದಾಜಯ್ಯಂ ಮನ್ಯಮಾನೋ ಮಹಾರಥಃ||

ಈ ಮಾತುಗಳನ್ನು ಕೇಳಿದ ರಾಧೇಯ ಕರ್ಣನು ಯುದ್ಧದಿಂದ ಹಿಂದೆ ಸರಿದನು. ಆ ಮಹಾರಥಿಯು ಬ್ರಹ್ಮ ತೇಜಸ್ಸು ಅಜೇಯವಾದದ್ದು ಎಂದು ತಿಳಿದಿದ್ದನು.

01181022a ಯುದ್ಧಂ ತೂಪೇಯತುಸ್ತತ್ರ ರಾಜಂಶಲ್ಯವೃಕೋದರೌ|

01181022c ಬಲಿನೌ ಯುಗಪನ್ಮತ್ತೌ ಸ್ಪರ್ಧಯಾ ಚ ಬಲೇನ ಚ||

ರಾಜನ್! ಅದೇ ಸ್ಥಳದಲ್ಲಿ ಶಲ್ಯ ಮತ್ತು ವೃಕೋದರರ ನಡುವೆ ಯುದ್ಧವು ನಡೆಯಿತು, ಇಬ್ಬರೂ ಬಲಶಾಲಿಗಳಾಗಿದ್ದು ಒಂದೇ ರೀತಿಯ ಮದ, ಸ್ಪರ್ಧಾಭಾವ ಮತ್ತು ಬಲಗಳನ್ನು ಹೊಂದಿದ್ದರು.

01181023a ಅನ್ಯೋನ್ಯಮಾಹ್ವಯಂತೌ ತೌ ಮತ್ತಾವಿವ ಮಹಾಗಜೌ|

01181023c ಮುಷ್ಟಿಭಿರ್ಜಾನುಭಿಶ್ಚೈವ ನಿಘ್ನಂತಾವಿತರೇತರಂ|

01181023e ಮುಹೂರ್ತಂ ತೌ ತಥಾನ್ಯೋನ್ಯಂ ಸಮರೇ ಪರ್ಯಕರ್ಷತಾಂ||

01181024a ತತೋ ಭೀಮಃ ಸಮುತ್ಕ್ಷಿಪ್ಯ ಬಾಹುಭ್ಯಾಂ ಶಲ್ಯಮಾಹವೇ|

01181024c ನ್ಯವಧೀದ್ಬಲಿನಾಂ ಶ್ರೇಷ್ಠೋ ಜಹಸುರ್ಬ್ರಾಹ್ಮಣಾಸ್ತತಃ||

ಮದಿಸಿದ ಮಹಾಗಜಗಳಂತೆ ಅನ್ಯೋನ್ಯರನ್ನು ಕೂಗಿ ಕರೆಯುತ್ತಿದ್ದರು, ಮತ್ತು ಪರಸ್ಪರರನ್ನು ಮುಷ್ಠಿ ಮತ್ತು ತೊಡೆಗಳಿಂದ ಹೊಡೆಯುತ್ತಿದ್ದರು. ಸ್ವಲ್ಪ ಸಮಯ ಅವರೀರ್ವರೂ ಪರಸ್ಪರರನ್ನು ಹಿಡಿದು ರಣರಂಗದ ಸುತ್ತ ಹಿಡಿದು ಎಳೆದಾಡಿದರು. ಆಗ ಬಲಶಾಲಿಗಳಲ್ಲಿ ಶ್ರೇಷ್ಠ ಭೀಮನು ತನ್ನ ಬಾಹುಗಳಿಂದ ಶಲ್ಯನನ್ನು ಮೇಲಕ್ಕೆ ಎತ್ತಿ ನೆಲದ ಮೇಲೆ ಹೊತ್ತು ಹಾಕಿದನು. ಬ್ರಾಹ್ಮಣರು ನಕ್ಕರು.

01181025a ತತ್ರಾಶ್ಚರ್ಯಂ ಭೀಮಸೇನಶ್ಚಕಾರ ಪುರುಷರ್ಷಭಃ|

01181025c ಯಚ್ಶಲ್ಯಂ ಪತಿತಂ ಭೂಮೌ ನಾಹನದ್ಬಲಿನಂ ಬಲೀ||

ಆಗ ಪುರುಷರ್ಷಭ ಬಲಶಾಲಿಗಳಲ್ಲಿಯೇ ಬಲಶಾಲಿ ಭೀಮಸೇನನು ನೆಲದ ಮೇಲೆ ಬಿದ್ದಿದ್ದ ಶಲ್ಯನನ್ನು ಕೊಲ್ಲದೇ ಒಂದು ಪವಾಡವನ್ನೇ ಮಾಡಿದನು.

01181026a ಪಾತಿತೇ ಭೀಮಸೇನೇನ ಶಲ್ಯೇ ಕರ್ಣೇ ಚ ಶಂಕಿತೇ|

01181026c ಶಂಕಿತಾಃ ಸರ್ವರಾಜಾನಃ ಪರಿವವ್ರುರ್ವೃಕೋದರಂ||

ಭೀಮಸೇನನು ಶಲ್ಯನನ್ನು ಕೆಳಗುರುಳಿಸಿದಾಗ ಮತ್ತು ಕರ್ಣನು ಹಿಂಜರಿದಾಗ, ಅಲ್ಲಿದ್ದ ಎಲ್ಲ ರಾಜರುಗಳೂ ಹಿಂಜರಿಯುತ್ತಾ ವೃಕೋದರನನ್ನು ಸುತ್ತುವರೆದರು.

01181027a ಊಚುಶ್ಚ ಸಹಿತಾಸ್ತತ್ರ ಸಾಧ್ವಿಮೇ ಬ್ರಾಹ್ಮಣರ್ಷಭಾಃ|

01181027c ವಿಜ್ಞಾಯಂತಾಂ ಕ್ವಜನ್ಮಾನಃ ಕ್ವನಿವಾಸಾಸ್ತಥೈವ ಚ||

“ಸಾಧು ಬ್ರಾಹ್ಮಣರ್ಷಭರೇ! ಅವರು ಎಲ್ಲಿ ಹುಟ್ಟಿದ್ದರು ಮತ್ತು ಎಲ್ಲಿ ವಾಸಿಸುತ್ತಿದ್ದಾರೆ ಎನ್ನುವುದನ್ನು ಕೇಳಿ ತಿಳಿಯೋಣ!” ಎಂದು ಅವರೆಲ್ಲರೂ ಹೇಳುತ್ತಿದ್ದರು.

01181028a ಕೋ ಹಿ ರಾಧಾಸುತಂ ಕರ್ಮಂ ಶಕ್ತೋ ಯೋಧಯಿತುಂ ರಣೇ|

01181028c ಅನ್ಯತ್ರ ರಾಮಾದ್ದ್ರೋಣಾದ್ವಾ ಕೃಪಾದ್ವಾಪಿ ಶರದ್ವತಃ||

01181029a ಕೃಷ್ಣಾದ್ವಾ ದೇವಕೀಪುತ್ರಾತ್ಫಲ್ಗುನಾದ್ವಾ ಪರಂತಪಾತ್|

01181029c ಕೋ ವಾ ದುರ್ಯೋಧನಂ ಶಕ್ತಃ ಪ್ರತಿಯೋಧಯಿತುಂ ರಣೇ||

01181030a ತಥೈವ ಮದ್ರರಾಜಾನಂ ಶಲ್ಯಂ ಬಲವತಾಂ ವರಂ|

01181030c ಬಲದೇವಾದೃತೇ ವೀರಾತ್ಪಾಂಡವಾದ್ವಾ ವೃಕೋದರಾತ್||

“ರಾಮ ಅಥವಾ ದ್ರೊಣ ಅಥವಾ ಶಾರದ್ವತ ಕೃಪ ಅಥವಾ ದೇವಕೀಪುತ್ರ ಕೃಷ್ಣ ಅಥವಾ ಪರಂತಪ ಫಲ್ಗುಣನನ್ನು ಬಿಟ್ಟು ಬೇರೆ ಯಾರುತಾನೆ ರಣರಂಗದಲ್ಲಿ ರಾಧಾಸುತ ಕರ್ಣನೊಂದಿಗೆ ಯುದ್ಧಮಾಡಲು ಶಕ್ತರು? ಅದೇರೀತಿ ದುರ್ಯೋಧನ ಅಥವಾ ವೀರ ಬಲದೇವ ಅಥವಾ ಪಾಂಡವ ವೃಕೋದರನ ಹೊರತಾಗಿ ಬೇರೆ ಯಾರು ರಣರಂಗದಲ್ಲಿ ಬಲವಂತರಲ್ಲಿಯೇ ಶ್ರೇಷ್ಠ ಮದ್ರರಾಜ ಶಲ್ಯನನ್ನು ಎದುರಿಸಲು ಶಕ್ತರು?

01181031a ಕ್ರಿಯತಾಮವಹಾರೋಽಸ್ಮಾದ್ಯುಯುದ್ಧಾದ್ಬ್ರಾಹ್ಮಣಸಂಯುತಾತ್|

01181031c ಅಥೈನಾನುಪಲಭ್ಯೇಹ ಪುನರ್ಯೋತ್ಸ್ಯಾಮಹೇ ವಯಂ||

“ಬ್ರಾಹ್ಮಣರೂ ಸೇರಿರುವ ಈ ಯುದ್ಧವನ್ನು ನಾವು ನಿಲ್ಲಿಸೋಣ ಮತ್ತು ಅವರು ಯಾರೆಂದು ತಿಳಿದು ಕೊಂಡ ನಂತರ ಪುನಃ ಯುದ್ಧ ಮಾಡೋಣ.”

01181032a ತತ್ಕರ್ಮ ಭೀಮಸ್ಯ ಸಮೀಕ್ಷ್ಯ ಕೃಷ್ಣಃ

        ಕುಂತೀಸುತೌ ತೌ ಪರಿಶಂಕಮಾನಃ|

01181032c ನಿವಾರಯಾಮಾಸ ಮಹೀಪತೀಂಸ್ತಾನ್

        ಧರ್ಮೇಣ ಲಬ್ಧೇತ್ಯನುನೀಯ ಸರ್ವಾನ್||

ಭೀಮನ ಆ ಕೃತ್ಯವನ್ನು ನೋಡಿದ ಕೃಷ್ಣನು ಅವರು ಕುಂತೀಪುತ್ರರೇ ಇರಬೇಕೆಂದು ಶಂಕಿಸಿ ಅವಳನ್ನು ಧರ್ಮಪೂರ್ವಕ ಪಡೆದಿದ್ದಾರೆ ಎಂದು ಸೂಕ್ಷ್ಮವಾಗಿ ಎಲ್ಲ ಮಹೀಪತಿಗಳನ್ನು ತಡೆಹಿಡಿದನು.

01181033a ತ ಏವಂ ಸಂನಿವೃತ್ತಾಸ್ತು ಯುದ್ಧಾದ್ಯುದ್ಧವಿಶಾರದಾಃ|

01181033c ಯಥಾವಾಸಂ ಯಯುಃ ಸರ್ವೇ ವಿಸ್ಮಿತಾ ರಾಜಸತ್ತಮಾಃ||

ಆಗ ಯುದ್ಧವಿಶಾರದ ರಾಜಸತ್ತಮರು ಯುದ್ಧದಿಂದ ಹಿಂಜರಿದು ಎಲ್ಲರೂ ವಿಸ್ಮಿತರಾಗಿ ತಮ್ಮ ತಮ್ಮ ಪ್ರದೇಶಗಳಿಗೆ ಹಿಂದಿರುಗಿದರು.

01181034a ವೃತ್ತೋ ಬ್ರಹ್ಮೋತ್ತರೋ ರಂಗಃ ಪಾಂಚಾಲೀ ಬ್ರಾಹ್ಮಣೈರ್ವೃತಾ|

01181034c ಇತಿ ಬ್ರುವಂತಃ ಪ್ರಯಯುರ್ಯೇ ತತ್ರಾಸನ್ಸಮಾಗತಾಃ||

ಈ ರಂಗವು ಬ್ರಾಹ್ಮಣರಿಂದ ಸುತ್ತುವರೆಯಲ್ಪಟ್ಟಿದೆ, ಪಾಂಚಾಲಿಯು ಬ್ರಾಹ್ಮಣರಿಂದ ಆವೃತಳಾಗಿದ್ದಾಳೆ ಎಂದು ಹೇಳುತ್ತಾ ಅಲ್ಲಿ ಸೇರಿದವರೆಲ್ಲರೂ ಹಿಂದಿರುಗಿದರು.

01181035a ಬ್ರಾಹ್ಮಣೈಸ್ತು ಪ್ರತಿಚ್ಛನ್ನೌ ರೌರವಾಜಿನವಾಸಿಭಿಃ|

01181035c ಕೃಚ್ಛ್ರೇಣ ಜಗ್ಮತುಸ್ತತ್ರ ಭೀಮಸೇನಧನಂಜಯೌ||

ರುರು ಮತ್ತು ಜಿನವಸ್ತ್ರಗಳನ್ನು ಧರಿಸಿದ್ದ ಬ್ರಾಹ್ಮಣರಿಂದ ಸುತ್ತುವರೆಯಲ್ಪಟ್ಟ ಭೀಮಸೇನ-ಧನಂಜಯರಿಗೆ ಅಲ್ಲಿಂದ ಹೊರಬರುವುದು ಕಷ್ಟವೇ ಆಯಿತು.

01181036a ವಿಮುಕ್ತೌ ಜನಸಂಬಾಧಾಚ್ಶತ್ರುಭಿಃ ಪರಿವಿಕ್ಷತೌ|

01181036c ಕೃಷ್ಣಯಾನುಗತೌ ತತ್ರ ನೃವೀರೌ ತೌ ವಿರೇಜತುಃ||

ಜನರ ಮತ್ತು ಶತ್ರುಗಳ ಭೀಡಿನಿಂದ ತಪ್ಪಿಸಿಕೊಂಡ ಆ ವೀರರು ಹಿಂಬಾಲಿಸುತ್ತಿರುವ ಕೃಷ್ಣೆಯೊಡಗೂಡಿ ವಿರಾಜಿಸಿದರು.

01181037a ತೇಷಾಂ ಮಾತಾ ಬಹುವಿಧಂ ವಿನಾಶಂ ಪರ್ಯಚಿಂತಯತ್|

01181037c ಅನಾಗಚ್ಛತ್ಸು ಪುತ್ರೇಷು ಭೈಕ್ಷಕಾಲೇಽತಿಗಚ್ಛತಿ||

ಭಿಕ್ಷಾಸಮಯವು ಮುಗಿದು ಹೋಗಿ ತುಂಬಾ ಹೊತ್ತಾಗಿದ್ದರೂ ತನ್ನ ಪುತ್ರರು ಬಾರದೇ ಇದ್ದುದನ್ನು ನೋಡಿ ಅವರ ತಾಯಿಯು ಬಹುವಿಧ ಆಪತ್ತುಗಳ ಕುರಿತು ಚಿಂತಿಸುತ್ತಿದ್ದಳು.

01181038a ಧಾರ್ತರಾಷ್ಟ್ರೈರ್ಹತಾ ನ ಸ್ಯುರ್ವಿಜ್ಞಾಯ ಕುರುಪುಂಗವಾಃ|

01181038c ಮಾಯಾನ್ವಿತೈರ್ವಾ ರಕ್ಷೋಭಿಃ ಸುಘೋರೈರ್ದೃಢವೈರಿಭಿಃ||

“ಆ ಕುರುಪುಂಗವರನ್ನು ಗುರಿತಿಸಿದ ಧಾರ್ತರಾಷ್ಟ್ರರು ಅವರನ್ನು ಸಂಹರಿಸಿರಬಹುದೇ? ಅಥವಾ ದೃಢವೈರಿ ಘೋರ ಮಾಯಾವಿ ರಾಕ್ಷಸರಿಂದ ಕೊಲ್ಲಲ್ಪಟ್ಟರೇ?

01181039a ವಿಪರೀತಂ ಮತಂ ಜಾತಂ ವ್ಯಾಸಸ್ಯಾಪಿ ಮಹಾತ್ಮನಃ|

01181039c ಇತ್ಯೇವಂ ಚಿಂತಯಾಮಾಸ ಸುತಸ್ನೇಹಾನ್ವಿತಾ ಪೃಥಾ||

ಆದರೂ ಮಹಾತ್ಮ ವ್ಯಾಸನ ಅಭಿಪ್ರಾಯಕ್ಕಿಂತ ವಿಪರೀತವಾಗಲು ಸಾಧ್ಯವಿದೆಯೇ?” ಈ ರೀತಿಯಾಗಿ ಪುತ್ರರ ಮೇಲಿನ ಪ್ರೀತಿಯಿಂದ ಪೃಥೆಯು ಚಿಂತಿಸತೊಡಗಿದಳು.

01181040a ಮಹತ್ಯಥಾಪರಾಃಣೇ ತು ಘನೈಃ ಸೂರ್ಯ ಇವಾವೃತಃ|

01181040c ಬ್ರಾಹ್ಮಣೈಃ ಪ್ರಾವಿಶತ್ತತ್ರ ಜಿಷ್ಣುರ್ಬ್ರಹ್ಮಪುರಸ್ಕೃತಃ||

ಆಗ ಅಪರಾಹ್ಣಕ್ಕಿಂತ ತುಂಬಾ ಸಮಯದ ನಂತರ ಮೋಡಗಳಿಂದ ಆವೃತ ಸೂರ್ಯನು ಹೇಗೋ ಹಾಗೆ ಬ್ರಾಹ್ಮಣರಿಂದ ಸುತ್ತುವರೆಯಲ್ಪಟ್ಟ ಜಿಷ್ಣುವು ಬ್ರಹ್ಮಪುರಸ್ಕೃತನಾಗಿ ಹೊರಬಂದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸ್ವಯಂವರಪರ್ವಣಿ ಪಾಂಡವಪ್ರತ್ಯಾಗಮನೇ ಏಕಶೀತ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸ್ವಯಂವರಪರ್ವದಲ್ಲಿ ಪಾಂಡವಪ್ರತ್ಯಾಗಮನದಲ್ಲಿ ನೂರಾಎಂಭತ್ತೊಂದನೆಯ ಅಧ್ಯಾಯವು.

Image result for indian birds images

Comments are closed.